Tag: Sri Krishna Janmashtami

  • ಮಡಕೆ ಒಡೆಯುವ ಜಾನ್ ಸಿನಾ ಫೋಟೋ ಹಂಚಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಶುಭಕೋರಿದ WWE

    ಮಡಕೆ ಒಡೆಯುವ ಜಾನ್ ಸಿನಾ ಫೋಟೋ ಹಂಚಿಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿ ಶುಭಕೋರಿದ WWE

    ಮುಂಬೈ: ದೇಶಾದ್ಯಂತ ಇಂದು ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ನಡೆದಿದೆ. ಭಾರತದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್‌ (WWE) ಡಬ್ಲ್ಯೂ ಡಬ್ಲ್ಯೂ ಇ ಸೂಪರ್ ಸ್ಟಾರ್ ಜಾನ್ ಸಿನಾ ಮಡಕೆ ಒಡೆಯುತ್ತಿರುವ ಫೋಟೋ ಹಂಚಿಕೊಂಡು ಶುಭ ಕೋರಿದೆ.

    ಭಾರತದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹ್ಯಾಪಿ ಜನ್ಮಾಷ್ಟಮಿ ಇಂಡಿಯಾ ಎಂದು ಹ್ಯಾಷ್‌ಟ್ಯಾಗ್ ಬಳಕೆ ಮಾಡಿ ಫೋಟೋ ಹಂಚಿಕೊಂಡು WWE ಟ್ವೀಟ್ ಮಾಡಿದೆ. ಫೋಟೋದಲ್ಲಿ ಜಾನ್ ಸಿನಾ ಏಣಿಯ ಮೇಲೆ ಕೂತು ಎರಡು ಕೈ ಮೇಲೆತ್ತಿ ಮಡಕೆಯನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಬಗ್ಗೆ ಕಾಮೆಂಟ್‌ ಮಾಡಿರುವ ನೆಟ್ಟಿಗರು, ಮನಿ ಇನ್‌ ದಿ ಬ್ಯಾಂಕ್‌ಗಿಂತ ಮೊಸರು ಇನ್‌ ದಿ ಬ್ಯಾಂಕ್‌ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿದ್ದ ಇಶನ್ ಕಿಶನ್‍ಗೆ ಕಚ್ಚಿದ ಜೇನುನೊಣ

    ಈ ಫೋಟೋ ಕಂಡ WWE ಅಭಿಮಾನಿಗಳು ಸಂಭ್ರಮಿಸಿದ್ದು, ತಮ್ಮ ನೆಚ್ಚಿನ WWE ಸೂಪರ್ ಸ್ಟಾರ್ ಈ ರೀತಿ ಕಾಣಿಸಿಕೊಂಡಿರುವುದಕ್ಕೆ ಸಂತಸ ಪಟ್ಟಿದ್ದಾರೆ. ಭಾರತ ಸೇರಿದಂತೆ ವಿಶ್ವದಾದ್ಯಂತ WWEಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?

    Live Tv
    [brid partner=56869869 player=32851 video=960834 autoplay=true]

  • ಮೊಮ್ಮಗನಿಗೆ ಶ್ರೀಕೃಷ್ಣನ ವೇಷ ಹಾಕಿ ಮುಸ್ಲಿಂ ಕುಟುಂಬದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಮೊಮ್ಮಗನಿಗೆ ಶ್ರೀಕೃಷ್ಣನ ವೇಷ ಹಾಕಿ ಮುಸ್ಲಿಂ ಕುಟುಂಬದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

    ಬೆಳಗಾವಿ: ನಾಡಿನಾದ್ಯಂತ ಶ್ರೀಕೃಷ್ಣನ ಜನ್ಮಾಷ್ಟಮಿ ಹಿನ್ನೆಲೆ ಬೆಳಗಾವಿ ಸದಾಶಿವ ನಗರದಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಮಾಡದೇ ತಮ್ಮ ಮುದ್ದಿನ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ಹಾಕಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

    ಸದಾಶಿವ ನಗರದ ದಸ್ತಗೀರ್ ಮೊಕಾಶಿ ಎಂಬುವವರು ತಮ್ಮ ಮುದ್ದಿನ ಮೊಮ್ಮಗ ಅದ್ನಾನ್‍ ಆಸೀಪ್ ಮೊಕಾಶಿಗೆ ಕೃಷ್ಣನ ವೇಷಭೂಷಣ ಹಾಕಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ. ಶ್ರೀಕೃಷ್ಣನಂತೆ ಪೋಷಾಕು ಹಾಕಿ ಮಗುವಿನ ಕೈಗೆ ಕೊಳಲು ನೀಡಿ ಕೃಷ್ಣನ ಜನ್ಮಾಷ್ಟಮಿ ಆಚರಣೆ ಮಾಡಿದ್ದಾರೆ. ಶ್ರೀಕೃಷ್ಣನ ವೇಷಧರಿಸಿದ ಅದ್ವಾನ್ ಆಸೀಪ್ ಮೊಕಾಶಿ ನಗರದ ಲವ್ ಡೇಲ್  ಶಾಲೆಯಲ್ಲಿ ನಡೆದ ಕೃಷ್ಣನ ಪೋಷಾಕು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಮುಸ್ಲಿಂ ಕುಟುಂಬದ ಸಾಮರಸ್ಯದ ಮನಸ್ಥಿತಿಗೆ ನಾಡಿನೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ

    ಹಲವು ಜಾತಿ-ಧರ್ಮಗಳ ವೈವಿಧ್ಯಮಯ ರಾಷ್ಟ್ರ ಭಾರತ. ಐಕ್ಯತೆಯಲ್ಲಿ ವಿಶೇಷತೆ ಕಾಣುವ ದೇಶದಲ್ಲಿ ಬೆಳಗಾವಿಯ ಮುಸ್ಲಿಂ ಕುಟುಂಬ ಭಾವೈಕ್ಯ ಸಂದೇಶ ಸಾರಿದೆ. ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ನಡುವೆ ಒಡಕು ಕಾಣುತ್ತಿದೆ. ಸಾಮರಸ್ಯವನ್ನು ಹದಗೆಡಿಸುತ್ತಿರುವ ಕೆಲಸಗಳೂ ನಡೆಯುತ್ತಿವೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿರುವ ಬೆಳಗಾವಿಯ ಈ ಮುಸ್ಲಿಂ ಕುಟುಂಬ ರಾಮ್ ರಹೀಮ್ ಎಲ್ಲರೂ ಒಂದೇ ಎಂಬ ಸಂದೇಶ ನೀಡಿದೆ. ಇದನ್ನೂ ಓದಿ: ಮಹಾತ್ಮಾ ಗಾಂಧಿ ಕೊಂದವರು, ನನ್ನನ್ನ ಬಿಡ್ತಾರಾ: ಸಿದ್ದರಾಮಯ್ಯ

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ದಸ್ತಗೀರ್ ಸಾಬ್ ಮೊಕಾಶಿ ಅವರು, ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಭಾವೈಕ್ಯತೆಯಿಂದ ಇರುವ ರಾಷ್ಟ್ರವಾಗಿದೆ. ಗೋಕುಲಾಷ್ಟಮಿ ನಿಮಿತ್ತ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ತೊಡಿಸಿದ್ದೇವೆ. ರಾಮನವಮಿ ಸೇರಿದಂತೆ ಎಲ್ಲಾ ಹಬ್ಬಗಳಲ್ಲಿ ನಾವು ಭಾಗಿಯಾಗುತ್ತೇವೆ. ಹಿಂದೂ, ಮುಸ್ಲಿಂ ಎಂಬ ಭೇದಭಾವ ಏನೂ ಇಲ್ಲ. ರಾಮ್ ರಹೀಮ್ ಎಲ್ಲರೂ ಒಂದೇ ಎಂದು ದಸ್ತಗೀರ್ ಸಾಬ್ ಮೊಕಾಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೃಷ್ಣ ಜನಾರ್ದನ ಯದುನಂದನ ಕೃಷ್ಣ.. ಶರಾಯು ಹಾಡು ರಿಲೀಸ್‌

    ಕೃಷ್ಣ ಜನಾರ್ದನ ಯದುನಂದನ ಕೃಷ್ಣ.. ಶರಾಯು ಹಾಡು ರಿಲೀಸ್‌

    ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಹಲವೆಡೆ ಮಕ್ಕಳು ಕೃಷ್ಣನ ವೇಷ ಧರಿಸಿದರೆ ಇನ್ನು ಕೆಲವರು ಹಾಡಿನ ಮೂಲಕ ಕೃಷ್ಣನನ್ನು ಸ್ತುತಿಸುತ್ತಾರೆ. ಅದೇ ರೀತಿಯಾಗಿ ಬೆಂಗಳೂರಿನ ಬಾಲಕಿಯೊಬ್ಬಳು ಕೃಷ್ಣನ ಹಾಡನ್ನು ಹಾಡಿದ್ದಾಳೆ.

    4ನೇ ತರಗತಿ ಓದುತ್ತಿರುವ ಶರಾಯು ಯತೀಶ್‌ “ಕೃಷ್ಣ ಜನಾರ್ದನ ಯದುನಂದನ ಕೃಷ್ಣ ಮಧುಸೂದನ…” ರಿಮಿಕ್ಸ್‌ ಹಾಡನ್ನು ಹಾಡಿದ್ದಾಳೆ. ಒಟ್ಟು 4 ನಿಮಿಷ 37 ಸೆಕೆಂಡ್‌ ಇಡುವ ವಿಡಿಯೋ ಯೂ ಟ್ಯೂಬ್‌ನಲ್ಲಿ ಅಪ್ಲೋಡ್‌ ಆಗಿದೆ.

    ಸಂಗೀತ ಮತ್ತು ಸಾಹಿತ್ಯವನ್ನು ಅನುಪಮಾ ನೀಡಿದ್ದರೆ ಸ್ಯಾಮ್ ಅವರು ಪ್ರೋಗ್ರಾಮಿಂಗ್ ಮಾಡಿದ್ದಾರೆ. ಫಣೀಂದ್ರ ರೆಡ್ಡಿ ಛಾಯಾಗ್ರಹಣ ಮಾಡಿದ್ದು, ಯತೀಶ್ ವೆಂಕಟೇಶ್‌ ಹಾಡಿನ ನಿರ್ಮಾಪಕರಾಗಿದ್ದಾರೆ. ಸಂಭ್ರಮ್ ಸ್ಟುಡಿಯೋದಲ್ಲಿ ರೆಕಾರ್ಡ್‌ ಮಾಡಲಾಗಿದ್ದು, ಹಾಡು ಸುಂದರವಾಗಿ ಮೂಡಿ ಬಂದಿದೆ. ಶರಾಯು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಮೊಮ್ಮಗಳು.

  • ದೇವರೂರಿನಲ್ಲಿ ಅಷ್ಟಮಿಯ ಸಂಭ್ರಮ – ಒಂದೂವರೆ ಲಕ್ಷ ಚಕ್ಕುಲಿ, ಲಡ್ಡು ತಯಾರಿ

    ದೇವರೂರಿನಲ್ಲಿ ಅಷ್ಟಮಿಯ ಸಂಭ್ರಮ – ಒಂದೂವರೆ ಲಕ್ಷ ಚಕ್ಕುಲಿ, ಲಡ್ಡು ತಯಾರಿ

    ಉಡುಪಿ: ದೇವರೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಮುಂಜಾನೆಯಿಂದಲೇ ಕೃಷ್ಣ ಭಕ್ತರು ಮಠಕ್ಕೆ ಬಂದು ದೇವರ ದರ್ಶನದಲ್ಲಿ ತೊಡಗಿದ್ದಾರೆ.

    ಶ್ರೀಕೃಷ್ಣ ಪರಮಾತ್ಮ ಇಂದು ರಾತ್ರಿ 12.12ಕ್ಕೆ ಸರಿಯಾಗಿ ಚಂದ್ರೋದಯದ ಕಾಲದಲ್ಲಿ ಜನ್ಮ ಪಡೆಯುತ್ತಾನೆ ಎಂಬ ನಂಬಿಕೆಯಿದೆ. ಇದೇ ಘಳಿಗೆಯಲ್ಲಿ ಮಠದ ಒಳಗೆ ಅರ್ಘ್ಯ ಪ್ರಧಾನ ನಡೆಯಲಿದೆ. ಅಷ್ಟಮಿಯ ಹಿನ್ನೆಲೆಯಲ್ಲಿ ಭಕ್ತರು ದಿನಪೂರ್ತಿ ಉಪವಾಸ ಇರುತ್ತಾರೆ. ದೇವರ ಜನ್ಮಾ ನಂತರ ಉಪವಾಸ ತೊರೆಯುತ್ತಾರೆ.

    ಶ್ರೀಕೃಷ್ಣನ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಣೆಗೆ ಒಂದೂವರೆ ಲಕ್ಷ ಚಕ್ಕುಲಿ, ಒಂದೂವರೆ ಲಕ್ಷ ಲಡ್ಡು ಸಿದ್ಧವಾಗಿದೆ. ಶನಿವಾರ ವಿಟ್ಲಪಿಂಡಿಯ ದಿನ (ಶ್ರೀಕೃಷ್ಣ ಲೀಲೋತ್ಸವದ ದಿನ) ಸಾವಿರಾರು ಮಂದಿಗೆ ಮಠದಲ್ಲಿ ಸಿಹಿಯೂಟದ ವ್ಯವಸ್ಥೆ, ಉಂಡೆ ಚಕ್ಕುಲಿ ವಿತರಣೆ ನಡೆಯಲಿದೆ. ನೂರಾರು ಬಾಣಸಿಗರು ಉಂಡೆ ಚಕ್ಕುಲಿ ತಯಾರು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಅಷ್ಟಮಠಗಳ ರಥಬೀದಿಯಲ್ಲಿ ಹೂವು ಹಣ್ಣಿನ ವ್ಯಾಪಾರ ಜೋರಾಗಿದೆ.

  • ಉಡುಪಿಯಲ್ಲಿ ಸರಳ ಕೃಷ್ಣ ಜನ್ಮಾಷ್ಟಮಿ- ಕೊಡಗಿಗೆ ದೇವರ ಪ್ರಸಾದ: ಪಲಿಮಾರು ಶ್ರೀ

    ಉಡುಪಿಯಲ್ಲಿ ಸರಳ ಕೃಷ್ಣ ಜನ್ಮಾಷ್ಟಮಿ- ಕೊಡಗಿಗೆ ದೇವರ ಪ್ರಸಾದ: ಪಲಿಮಾರು ಶ್ರೀ

    ಉಡುಪಿ: ಜಲಪ್ರಳಯವಾಗಿರುವ ಕೊಡಗು ಸಂಕಷ್ಟದಲ್ಲಿ ಇರುವಾಗ ನಾವು ವಿಜ್ರಂಭಣೆಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಸರಿಯಲ್ಲ. ಈ ಬಾರಿ ಸರಳವಾಗಿ, ಭಕ್ತಿಯಿಂದ ಅಷ್ಟಮಿ ಆಚರಿಸೋಣ ಅಂತ ಉಡುಪಿಯ ಕೃಷ್ಣ ಮಠದ ಪರ್ಯಾಯ ಪಲಿಮಾರು ಸ್ವಾಮೀಜಿ ಕರೆ ನೀಡಿದ್ದಾರೆ.

    ನಗರದಲ್ಲಿ ಅಷ್ಟಮಿ ಸಂದೇಶ ನೀಡಿದ ವಿದ್ಯಾಧೀಶ ಸ್ವಾಮೀಜಿ ನಾವು ಕೊಡಗಿಗಾಗಿ ಭಕ್ತಿಯ ಪ್ರಾರ್ಥನೆ ಮಾಡುತ್ತೇವೆ. ನಷ್ಟವನ್ನೆಲ್ಲ ತುಂಬಿಸು ದೇವಾ ಅಂತ ಪೂಜೆ ಸಲ್ಲಿಸುತ್ತೇವೆ. ಧಾರ್ಮಿಕ ವಿಧಿ ವಿಧಾನಗಳು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಬಾರಿ ಸರಳವಾಗಿ ಅಷ್ಟಮಿ ಆಚರಿಸುತ್ತೇವೆ ಎಂದು ಹೇಳಿದರು.

    ನೆರೆ, ಭೂ ಕುಸಿತದಿಂದಾಗಿ ತೊಂದರೆಗೀಡಾದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಮಡಿಕೇರಿಯಲ್ಲಿ ಜನ ಬಹಳ ಸಂಕಷ್ಟದಲ್ಲಿದ್ದಾರೆ. ನಿರಾಶ್ರಿತರಿಗೆ ಕೃಷ್ಣ ಪ್ರಸಾದ ಕಳುಹಿಸಿ ಕೊಡಲಾಗುವುದು. ಕೃಷ್ಣ ಪ್ರಸಾದದ ರೂಪದಲ್ಲಿ ಉಂಡೆ, ಚಕ್ಕುಲಿ, ಹೊಸ ಬಟ್ಟೆ ತಲುಪಿಸುತ್ತೇವೆ ಅಂತ ತಿಳಿಸಿದ್ರು.

    ಕಷ್ಟ ಬಂದಲ್ಲಿ ಶ್ರೀ ಕೃಷ್ಣ ಇರುತ್ತಾನಂತೆ. ಪ್ರಕೃತಿ ವಿಕೋಪ ಆದಾಗಲೂ ಕೃಷ್ಣ ರಕ್ಷಣೆ ನೀಡಿದ್ದಾನೆ. ನಮ್ಮ ಕೊಡಗು ಜಿಲ್ಲೆಗೆ ನೋವಾಗಿದೆ. ಹಾನಿಗೊಳಗಾಗಿದೆ. ಅಲ್ಲಿನ ಜನ ಶೀಘ್ರ ಪುನರ್ ಶಕ್ತಿ ಪಡೆದುಕೊಳ್ಳುತ್ತಾರೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv