Tag: Sri Banashankari Foundation

  • ನಾನು ಕಲಿತ ಶಾಲೆಯನ್ನ ದತ್ತು ಪಡೆದು ಮಾದರಿ ಶಾಲೆ ಮಾಡುತ್ತೇನೆ: ಪ್ರಮೋದ್ ಮುತಾಲಿಕ್

    ನಾನು ಕಲಿತ ಶಾಲೆಯನ್ನ ದತ್ತು ಪಡೆದು ಮಾದರಿ ಶಾಲೆ ಮಾಡುತ್ತೇನೆ: ಪ್ರಮೋದ್ ಮುತಾಲಿಕ್

    ಚಿಕ್ಕೋಡಿ: ಶ್ರೀ ರಾಮಸೇನಾ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕುಟುಂಬದವರ ಶ್ರೀ ಬನಶಂಕರಿ ಫೌಂಡೇಶನ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಸಿರು ಬೋರ್ಡ್ ವಿತರಣಾ ಸಮಾರಂಭ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಜರುಗಿತು.

    ಪಟ್ಟಣದ ಹಳ್ಳದಕೆರಿಯಲ್ಲಿರಯವ ಕೋಟೆ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಟ್ರಸ್ಟ್ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳು ಹಾಗೂ ಕ್ಯಾರಗುಡ್ಡದ ಅಭಿನವ ಮಂಜುನಾಥ್ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಪ್ರತಿ ವರ್ಗ ಕೊಠಡಿಗಳಿಗೆ ಗ್ರೀನ್ ಬೋರ್ಡ್ ಹಾಗೂ ವಿದ್ಯಾರ್ಥಿಗಳಿಗೆ ಪೆಟ್ ವಾಟರ್ ಬಾಟಲ್‍ಗಳನ್ನ ವಿತರಿಸಿದರು. ಇದನ್ನೂ ಓದಿ: ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್ 

    ಈ ಸಂದರ್ಭದಲ್ಲಿ ಮಾತನಾಡಿದ ಮುತಾಲಿಕ್ ಅವರು, ನಮ್ಮ ತಂದೆ ತಾಯಿಗಳ ಸ್ಮರಣಾರ್ಥವಾಗಿ ಕಳೆದ ಎರಡು ವರ್ಷಗಳಿಂದ ನಾನು, ನಮ್ಮ ಸಹೋದರಿ ಹಾಗೂ ಸಹೋದರು ಶ್ರೀ ಬನಶಂಕರಿ ಫೌಂಡೇಶನ್ ಸ್ಥಾಪಿಸಿ ಸಾಮಾಜಿಕ ಕಾರ್ಯ ಮಾಡುತ್ತಿದ್ದೇವೆ. ಈ ವರ್ಷ ನಾವು ಕಲಿತ ಶಾಲೆಯ ಪ್ರತಿ ಕೊಠಡಿಗೆ ಆಧುನಿಕ ಹಸಿರು ಫಲಕ ನೀಡಿದ್ದೇವೆ ಎಂದು ವಿವರಿಸಿದರು.

    ಕೋಟೆ ಭಾಗ ಶಾಲೆಯು ಶತಮಾನೋತ್ಸವ ಗತಿಸಿ ನಮ್ಮೆಲ್ಲರಿಗೆ ವಿದ್ಯಾದಾನ ಮಾಡಿದ ಈ ಶಾಲೆಯನ್ನು ಇಂದಿನಿಂದ ದತ್ತು ಪಡೆದು ತಾಲೂಕಿನಲ್ಲಿ, ಜಿಲ್ಲೆಯಲ್ಲಿಯೇ ಮಾದರಿ ಶಾಲೆ ಮಾಡುವ ಗುರಿ ಹೊಂದಿದ್ದೇವೆ. ಶಾಲೆ ಕಟ್ಟಡ ಸೇರಿದಂತೆ ಶಾಲೆಯ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ವತಿಯಿಂದ ಶ್ರಮಿಸುತ್ತೇವೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ:  ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ವಹಿಸಿಕೊಂಡಿದ್ದರು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ್, ಉಪಾಧ್ಯಕ್ಷ ಆನಂದ್ ಗಂಧ, ಟ್ರಸ್ಟ್‌ನ ಸದಸ್ಯರಾದ ವಿನೋದ್ ಮುತಾಲಿಕ್, ಅನಂತ್ ಮುತಾಲಿಕ್, ತೇಜೆಶ್ವಿನಿ ಜೋಶಿ, ಸಂಜೀವ್ ಮುತಾಲಿಕ್ ಅರವಿಂದ್ ದೇಶಪಾಂಡೆ, ಮುಖ್ಯೋಪಾಧ್ಯಾಯೆ ಎಸ್.ಎಸ್.ನೋಗನಿಹಾಳ, ಮಂಜುಳಾ ಅಡಿಕೆ, ಮಹಾಂತೇಶ್ ಸಂಭಾಳ ಮುಂತಾದವರು ಉಪಸ್ಥಿತರಿದ್ದರು.

    Live Tv