Tag: Sreemurali

  • ಜಿಮ್ ಮಾಡುವ ವೇಳೆ ನಟ ಶ್ರೀಮುರಳಿಗೆ ಬೆನ್ನುನೋವು : ಫ್ಯಾನ್ಸ್ ಗಾಬರಿ ಪಡಬೇಡಿ ಎಂದ ರೋರಿಂಗ್ ಸ್ಟಾರ್

    ಜಿಮ್ ಮಾಡುವ ವೇಳೆ ನಟ ಶ್ರೀಮುರಳಿಗೆ ಬೆನ್ನುನೋವು : ಫ್ಯಾನ್ಸ್ ಗಾಬರಿ ಪಡಬೇಡಿ ಎಂದ ರೋರಿಂಗ್ ಸ್ಟಾರ್

    ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲೇಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಫ್ಯಾಮಿಲಿ ಡಾಕ್ಟರ್ ಸಲಹೆ ಮೇರೆಗೆ ಶ್ರೀಮುರಳಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ಪ್ರತಿನಿತ್ಯ ಜೀಮ್ ಮಾಡುವ ಸ್ಯಾಂಡಲ್ ವುಡ್ ಕಲಾವಿದರಲ್ಲಿ ಶ್ರೀಮುರಳಿ  ಕೂಡ ಒಬ್ಬರು. ನಿತ್ಯವೂ ಅವರು ಜಿಮ್ ನಲ್ಲಿ ಕಸರತ್ತು ಮಾಡುತ್ತಾರೆ. ಅದರಲ್ಲೂ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ‘ಬಘೀರ’ ಚಿತ್ರಕ್ಕಾಗಿ ದೇಹ ದಂಡಿಸಲೇಬೇಕಿದೆ. ಈ ಸಿನಿಮಾದ ತಯಾರಿಗಾಗಿ ಜಿಮ್ ನಲ್ಲಿ ಮತ್ತಷ್ಟು ಹೊತ್ತು ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲೇ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ : RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    ನೆನ್ನೆಯಷ್ಟೇ ‘ನಟ ಭಯಂಕರ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶ್ರೀಮುರಳಿ ಬಂದಿದ್ದರೂ, ನಡೆದಾಡೋಕೆ ಕಷ್ಟ ಪಡುತ್ತಿದ್ದರು. ಆಗಲೇ ಅವರಿಗೆ ಬ್ಯಾಕ್ ಪೇನ್ ಆಗಿರುವ ವಿಚಾರ ಬೆಳಕಿಗೆ ಬಂತು. “ಜಿಮ್ ಮಾಡುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿತು. ಅದಾದ ಎರಡು ದಿನಗಳ ಬಳಿಕವೂ ಬ್ಯಾಕ್ ಪೇನ್ ಕಡಿಮೆಯಾಗಿಲ್ಲ. ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಕುಟುಂಬದ ವೈದ್ಯರನ್ನು ಸಂಪರ್ಕಿಸಿದೆ. ಓಡಾಡಲು ಸ್ವಲ್ಪ ತೊಂದರೆ ಆಗುತ್ತಿದೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಫ್ಯಾನ್ಸ್ ಗಾಬರಿ ಪಡುವ ಅಗತ್ಯವಿಲ್ಲ” ಎಂದರು ಶ್ರೀಮುರಳಿ. ಇದನ್ನೂ ಓದಿ : RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು

    ಶ್ರೀಮುರಳಿ ಅವರು, ಸದ್ಯ ಬಘೀರ ಸಿನಿಮಾ ತಯಾರಿಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಬಘೀರ ಸಿನಿಮಾಗೆ ಚಾಲನೆ ಸಿಗಬೇಕಿತ್ತು. ಈಗ ನೋಡಿದರೆ ಶ್ರೀಮುರಳಿ ಅವರು ನೋವು ಮಾಡಿಕೊಂಡಿದ್ದಾರೆ. ಅವರು ವಿಶ್ರಾಂತಿ ಪಡೆದು,ಎಲ್ಲವೂ ಓಕೆ ಅಂದ ಬಳಿಕ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಬಘೀರ ತುಂಬಾ ನಿರೀಕ್ಷೆ ಹುಟ್ಟಿಸಿದೆ. ಕಾರಣ,ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ. ಡಾ.ಸೂರಿ ನಿರ್ದೇಶಿಸುತ್ತಿದ್ದಾರೆ.

  • ಪ್ರಥಮ್ ನಿರ್ದೇಶನದ ಚೊಚ್ಚಲ ಸಿನಿಮಾ ‘ನಟ ಭಯಕಂರ’ ಹಾಡಾಗಿ ಬಂದ

    ಪ್ರಥಮ್ ನಿರ್ದೇಶನದ ಚೊಚ್ಚಲ ಸಿನಿಮಾ ‘ನಟ ಭಯಕಂರ’ ಹಾಡಾಗಿ ಬಂದ

    ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಮೊದಲ ಬಾರಿಗೆ ನಿರ್ದೇಶಿಸಿರುವ ‘ನಟ ಭಯಂಕರ’ ಸಿನಿಮಾದ ಹಾಡುಗಳು ಇಂದು ರಿಲೀಸ್ ಆಗಿವೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ  ಮಾಡಿದರು.‌ ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್, ಗಿರೀಶ್, ಅರ್ಜುನ್ ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಆಡಿಯೋ ರಿಲೀಸ್ ಗೆ ಸಾಕ್ಷಿಯಾದರು. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್

    ಪ್ರಥಮ್ ಕಾನ್ಫಿಡೆನ್ಸ್ ಇರುವ ಹುಡುಗ. ಬಿಗ ಬಾಸ್ ನ ಆರಂಭದಲ್ಲಿ  ಇವರನ್ನು ನೋಡಿ, ಏನಪ್ಪಾ, ಹೀಗೆ ಮಾತಾಡುತ್ತಾರೆ? ಅಂದು ಕೊಂಡೆ. ನಂತರ ನಾನೇ ಅವರ ಅಭಿಮಾನಿಯಾದೆ. ಈಗ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ರಘು ದೀಕ್ಷಿತ್ ಹಾಗೂ ನಾನು ಇಷ್ಟಪಡುವ ಉಪ್ಪಿ ಸರ್ ಹಾಡಿರುವ ಹಾಡುಗಳು ನನಗೆ ಇಷ್ಟವಾಯಿತು. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬ ನಂಬಿಕೆಯಿದೆ ಎಂದ ಶ್ರೀಮುರಳಿ,  ಪ್ರಥಮ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳಿತನ್ನು ಹಾರೈಸಿದರು. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

    ಚೊಚ್ಚಲು ಸಿನಿಮಾ ಕುರಿತು ಮಾತನಾಡಿದ ಪ್ರಥಮ್, ‘ಭಾರೀ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಅನ್ನಬಹುದು. ಇಂದು ಆಡಿಯೋ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಅನಾವರಣಗೊಳಿಸುತ್ತೇವೆ’ ಎಂದರು. ನಾಯಕಿ ಫ್ರಾನ್ಸ್ ನಿವಾಸಿ ನಿಹಾರಿಕ, ಪ್ರಮುಖ ಪಾತ್ರಧಾರಿ ಚಂದನ, ಸಂಗೀತ ನೀಡಿರುವ ಪ್ರದ್ಯೋತನ್ ಚಿತ್ರದ ಕುರಿತು ಮಾತನಾಡಿದರು.