Tag: Sreeleela

  • ತೆಲುಗಿನಲ್ಲಿ ಮತ್ತೆ ಶ್ರೀಲೀಲಾ ಧಮಾಕ- ಸ್ಟಾರ್ ನಟನಿಗೆ ‘ಕಿಸ್’ ಬೆಡಗಿ ಜೋಡಿ

    ತೆಲುಗಿನಲ್ಲಿ ಮತ್ತೆ ಶ್ರೀಲೀಲಾ ಧಮಾಕ- ಸ್ಟಾರ್ ನಟನಿಗೆ ‘ಕಿಸ್’ ಬೆಡಗಿ ಜೋಡಿ

    ಬೆಂಗಳೂರಿನ ಬೆಡಗಿ ಶ್ರೀಲೀಲಾ (Sreeleela) ಈಗ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿದ ಬೆನ್ನಲ್ಲೇ ನಟಿ ಸೈಲೆಂಟ್ ಆಗಿದ್ದರು. ಈಗ ಮತ್ತೆ ನಟಿ ಸ್ಟಾರ್ ನಟನಿಗೆ ನಾಯಕಿಯಾಗುವ ಮೂಲಕ ಫ್ಯಾನ್ಸ್‌ಗೆ ಶ್ರೀಲೀಲಾ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ‘ಪೆಳ್ಳಿ ಸಂದಡಿ’ ಚಿತ್ರದಿಂದ ತೆಲುಗಿನಲ್ಲಿ ಸಿನಿಮಾ ಕೆರಿಯರ್ ಶುರು ಮಾಡಿದ ಶ್ರೀಲೀಲಾ. ‘ಧಮಾಕ’ (Dhamaka) ಚಿತ್ರದ ಮೂಲಕ ಸಕ್ಸಸ್ ಕಂಡರು. ರವಿತೇಜ (Raviteja) ಮತ್ತು ಕಿಸ್ ನಟಿಯ ಜೋಡಿ ಅಭಿಮಾನಿಗಳಿಗೆ ಹಿಡಿಸಿತ್ತು. ಈಗ ಇದೇ ಜೋಡಿ 2ನೇ ಬಾರಿ ಒಂದಾಗುತ್ತಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಿರ್ದೇಶಕನ ವಿರುದ್ಧ ಅತ್ಯಾಚಾರ ದೂರು ದಾಖಲು

    ಹೊಸ ಸಿನಿಮಾಗಾಗಿ ರವಿತೇಜ ಜೊತೆ ನಟಿ ಕೈಜೋಡಿಸಿದ್ದಾರೆ. ಗೋಪಿಚಂದ್ ಮಲಿನೇನಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶ್ರೀಲೀಲಾ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.

    ‘ಗುಂಟೂರು ಖಾರಂ’ ಸಿನಿಮಾ ಬಳಿಕ ನಟಿ ಓದಿನತ್ತ ಗಮನ ನೀಡಿದ್ದರು. ಈಗ ಗ್ಯಾಪ್‌ ನ ನಂತರ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಮತ್ತೆ ಯಶಸ್ಸು ನಟಿ ಪಾಲಾಗುತ್ತಾ ಕಾದುನೋಡಬೇಕಿದೆ.

  • ತಮಿಳಿನ ನಟ ಕಾರ್ತಿ ಜೊತೆ ಶ್ರೀಲೀಲಾ ಡ್ಯುಯೇಟ್

    ತಮಿಳಿನ ನಟ ಕಾರ್ತಿ ಜೊತೆ ಶ್ರೀಲೀಲಾ ಡ್ಯುಯೇಟ್

    ನ್ನಡತಿ ಶ್ರೀಲೀಲಾ (Sreeleela) ‘ಗುಂಟೂರು ಖಾರಂ’ ಸಿನಿಮಾದ ನಂತರ ಸೈಲೆಂಟ್ ಆಗಿದ್ದಾರೆ. ಸಾಲು ಸಾಲು ತೆಲುಗಿನ ಎರಡ್ಮೂರು ಸಿನಿಮಾಗಳು ಮಕಾಡೆ ಮಲಗಿದ ಬೆನ್ನಲ್ಲೇ ನಟಿ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ. ತಮಿಳು ನಟ ಕಾರ್ತಿ ಮುಂದಿನ ಚಿತ್ರಕ್ಕೆ ಶ್ರೀಲೀಲಾ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಅಭಿಮಾನಿಗಳಿಗೆ ಹೊಸ ಸಿನಿಮಾದ ಗುಡ್ ನ್ಯೂಸ್ ಕೊಟ್ಟ ಶಾರುಖ್

    ಸೂರ್ಯ ಸಹೋದರ ಕಾರ್ತಿ (Actor Karthi) ಕೂಡ ಕಾಲಿವುಡ್ ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಅವರ ಮುಂಬರುವ ಸಿನಿಮಾಗಾಗಿ ಶ್ರೀಲೀಲಾರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ನಾಯಕಿಯಾಗಲು ಶ್ರೀಲೀಲಾ ಸೂಕ್ತ ಎಂದು ಚಿತ್ರತಂಡ ನಿರ್ಧರಿಸಿದೆ. ನಟಿ ಕಥೆ ಕೇಳಿ ಗ್ರೀನ್ ಸಿಗ್ನಲ್ ಕೊಟ್ರಾ ಎಂಬುದು ಇನ್ನೂ ಖಾತ್ರಿ ಆಗಿಲ್ಲ. ಇಬ್ಬರ ಕಾಂಬಿನೇಷನ್‌ನಲ್ಲಿ ರೊಮ್ಯಾಂಟಿಕ್‌ ಸಿನಿಮಾ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ.

    ತಮಿಳಿನ ನಟ ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’, ದಳಪತಿ ವಿಜಯ್ ನಟನೆಯ ‘ಗೋಟ್’ ಚಿತ್ರದಲ್ಲಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಪ್ರಾಜೆಕ್ಟ್‌ಗಳ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.

    ಬೆಂಗಳೂರಿನ ಬೆಡಗಿ ಶ್ರೀಲೀಲಾ ಕಿಸ್, ಭರಾಟೆ ಸಿನಿಮಾಗಳ ನಂತರ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಪೆಳ್ಳಿ ಸಂದಡಿ, ಧಮಾಕ, ಭಗವಂತ ಕೇಸರಿ, ಸ್ಕಂದ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಶ್ರೀಲೀಲಾ ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  • ಅಜಿತ್ ಕುಮಾರ್ ಸಿನಿಮಾದಲ್ಲಿ ನಟಿಮಣಿಯರ ದರ್ಬಾರ್

    ಅಜಿತ್ ಕುಮಾರ್ ಸಿನಿಮಾದಲ್ಲಿ ನಟಿಮಣಿಯರ ದರ್ಬಾರ್

    ಮಿಳಿನ ಸೂಪರ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಇಂದು (ಮೇ.1) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾವನ್ನು ಅಜಿತ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಹೊಸ ವಿಚಾರವೊಂದು ಚರ್ಚೆಗೆ ಗ್ರಾಸವಾಗುತ್ತಿದೆ.

    ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಚಿತ್ರಕ್ಕೆ ಸೇರ್ಪಡೆಯಾಗುವ ಕಲಾವಿದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಶ್ರೀಲೀಲಾ (Sreeleela) ಈ ಚಿತ್ರಕ್ಕೆ ನಾಯಕಿ ಎಂಬ ಸುದ್ದಿ ಬೆನ್ನಲ್ಲೇ ಸಿಮ್ರಾನ್, ಪುಟ್ನಂಜ ನಟಿ ಮೀನಾ (Meena) ಅವರ ಹೆಸರು ಕೇಳಿ ಬರುತ್ತಿದೆ. ಇದನ್ನೂ ಓದಿ:‘ರುದ್ರ ಗರುಡ ಪುರಾಣ’ ಫಸ್ಟ್ ಲುಕ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

    ಸಿಮ್ರಾನ್, ಮೀನಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಅಜಿತ್‌ಗೆ ನಾಯಕಿಯರಾಗಿ ನಟಿಸಿದ್ದರು. ಈಗ ಮತ್ತೆ ಈ ಚಿತ್ರದ ಮೂಲಕ ಸಾಥ್ ನೀಡುತ್ತಿದ್ದಾರೆ. ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾಯಬೇಕಿದೆ.

    ಮೇ 10ರಿಂದ ಹೈದರಾಬಾದ್‌ನಲ್ಲಿ ಮೊದಲ ಹಂತದ ಶೂಟಿಂಗ್ ಶುರುವಾಗಲಿದೆ. ಅಜಿತ್ ಕುಮಾರ್ ಎಂಟ್ರಿ ಮತ್ತು ಆ್ಯಕ್ಷನ್ ಭಾಗದ ಶೂಟಿಂಗ್ ನಡೆಯಲಿದೆ. ಈ ಚಿತ್ರದ ಮೂಲಕ ಶ್ರೀಲೀಲಾ ತಮಿಳಿಗೆ ಎಂಟ್ರಿ ಕೊಡಲಿದ್ದಾರೆ. ಶ್ರೀಲೀಲಾ ನಾಯಕಿ ಎಂಬ ಸುದ್ದಿಗೆ ಅಧಿಕೃತ ಘೋಷಣೆ ಆಗಬೇಕಿದೆ.

  • ವಿಜಯ್ ದಳಪತಿ ಸಿನಿಮಾದಲ್ಲಿ ಶ್ರೀಲೀಲಾ

    ವಿಜಯ್ ದಳಪತಿ ಸಿನಿಮಾದಲ್ಲಿ ಶ್ರೀಲೀಲಾ

    ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಆದರೆ ಇತ್ತೀಚೆಗೆ ಸತತ ತೆಲುಗು ಸಿನಿಮಾಗಳ ಸೋಲಿನ ಬೆನ್ನಲ್ಲೇ ಕಾಲಿವುಡ್‌ನತ್ತ ‘ಕಿಸ್’ (Kiss Film) ನಟಿ ಮುಖ ಮಾಡಿದ್ದಾರೆ. ಮತ್ತೊಂದು ತಮಿಳು ಸಿನಿಮಾದಲ್ಲಿ ಸ್ಟಾರ್ ನಟ ವಿಜಯ್ ದಳಪತಿ ಜೊತೆ ತೆರೆಹಂಚಿಕೊಳ್ಳುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

    ವಿಜಯ್ ಸದ್ಯ ‘ಗೋಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟನೆಯ ಬದಲು ಸ್ಪೆಷಲ್ ಹಾಡಿಗೆ ಕುಣಿಯಲು ಚಾನ್ಸ್ ಸಿಕ್ಕಿದೆ. ಮೊದಲೇ ಶ್ರೀಲೀಲಾ ಡ್ಯಾನ್ಸ್‌ನಲ್ಲಿ ಎತ್ತಿದ ಕೈ. ಹಾಗಾಗಿ ವಿಜಯ್ (Vijay Thalapathy) ಜೊತೆ ಸೊಂಟ ಬಳುಕಿಸಲು ಶ್ರೀಲೀಲಾ ಚಿತ್ರತಂಡ ಆಫರ್ ಕೊಟ್ಟಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬೀಳಲಿದೆ. ಅಲ್ಲಿಯವರೆಗೂ ಕಾಯಬೇಕಿದೆ. ಇದನ್ನೂ ಓದಿ:ಆಗಸ್ಟ್ 2ರಂದು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ರಿಲೀಸ್

    ವಿಜಯ್ ಜೊತೆಗಿನ ಸಿನಿಮಾ ಮಾತ್ರವಲ್ಲ. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್‌ಗೆ ನಾಯಕಿಯಾಗಿ ಶ್ರೀಲೀಲಾಗೆ ನಟಿಸುವ ಚಾನ್ಸ್ ಸಿಕ್ಕಿದೆ. ತೆಲುಗಿನ ಸಿನಿಮಾಗಳಿಂದ ಔಟ್ ಆದ್ಮೇಲೆ ಸದ್ಯ ತಮಿಳಿನ 2 ಪ್ರಾಜೆಕ್ಟ್‌ಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

    ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾರನ್ನು ಸಂಪರ್ಕಿಸಿದೆ ಚಿತ್ರತಂಡ. ನಟಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ. ಮೇ 1ರಂದು ಅಜಿತ್ ಹುಟ್ಟುಹಬ್ಬದಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ‘ವಿದಾ ಮುಯಾರ್ಚಿ’ ಚಿತ್ರೀಕರಣದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.


    ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮಿಳು ಸಿನಿಮಾದಲ್ಲಿ ನಟಿಸುವ ಇಂಗಿತವನ್ನು ಶ್ರೀಲೀಲಾ ವ್ಯಕ್ತಪಡಿಸಿದ್ದರು. ಇದೀಗ ವಿಜಯ್ ಮತ್ತು ಅಜಿತ್ ಕುಮಾರ್ ಜೊತೆಗಿನ ಸಿನಿಮಾ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

    ತೆಲುಗು ಚಿತ್ರಗಳಿಂದ ಶ್ರೀಲೀಲಾ ಔಟ್- ಕಾಲಿವುಡ್‌ನತ್ತ ‘ಕಿಸ್’ ನಟಿ

    ನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ (Tollywood) ಮೋಡಿ ಮಾಡ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಗಮನ ಸೆಳೆದಿದ್ದ ಶ್ರೀಲೀಲಾಗೆ ಇದೀಗ ಲಕ್ ಕೈ ಕೊಟ್ಟಂತಿದೆ. ವಿಜಯ್ ದೇವರಕೊಂಡ, ನಿತಿನ್ ಸಿನಿಮಾಗಳು ‘ಕಿಸ್’ ನಟಿಯ ಕೈ ತಪ್ಪಿ ಹೋದ್ಮೇಲೆ ತಮಿಳಿನತ್ತ ನಟಿ ಮುಖ ಮಾಡಿದ್ದಾರೆ.

    ತೆಲುಗಿನಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ಶ್ರೀಲೀಲಾ ಮಿಂಚುತ್ತಿದ್ದರು. ಈಗ ಅದೃಷ್ಟ ಕೂಡ ಶ್ರೀಲೀಲಾ ಕಡೆ ತಿರುಗಿ ನೋಡ್ತಿಲ್ಲ. ಈ ಬೆನ್ನಲ್ಲೇ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್‌ಗೆ (Ajith Kumar) ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದ ವಿಶೇಷ ಪಾತ್ರದಲ್ಲಿ ಉಮಾಶ್ರೀ

    ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾರನ್ನು ಸಂಪರ್ಕಿಸಿದೆ ಚಿತ್ರತಂಡ. ನಟಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ. ಮೇ 1ರಂದು ಅಜಿತ್ ಹುಟ್ಟುಹಬ್ಬದಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ಅಜಿತ್ ಕುಮಾರ್ ‘ವಿದಾ ಮುಯಾರ್ಚಿ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

    ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ತಮಿಳು ಸಿನಿಮಾದಲ್ಲಿ ನಟಿಸುವ ಇಂಗಿತವನ್ನು ಶ್ರೀಲೀಲಾ ವ್ಯಕ್ತಪಡಿಸಿದ್ದರು. ಇದೀಗ ಅಜಿತ್ ಜೊತೆಗಿನ ಸಿನಿಮಾ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

    ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

    ನ್ನಡತಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಾಯಕಿಯಾಗಿದ್ದರು. ಇದೀಗ ಅದ್ಯಾಕೋ ಅದೃಷ್ಟ ಕೈ ಕೊಟ್ಟಂತಿದೆ. ನಿತಿನ್ ಸಿನಿಮಾದಿಂದ ಕಿಕ್ ಔಟ್ ಆಗಿದ್ದ ಪ್ರಾಜೆಕ್ಟ್‌ಗೆ ಹಾಟ್ ಬ್ಯೂಟಿ ರಾಶಿ ಖನ್ನಾ (Raashii Khanna) ಎಂಟ್ರಿ ಕೊಟ್ಟಿದ್ದಾರೆ. ನಿತಿನ್‌ ಜೊತೆ ರಾಶಿ ರೊಮ್ಯಾನ್ಸ್‌ ಮಾಡಲಿದ್ದಾರೆ.

    ‘ರಾಬಿನ್ ಹುಡ್’ (Robinhood) ಸಿನಿಮಾದಿಂದ ಶ್ರೀಲೀಲಾರನ್ನು ಕೈಬಿಟ್ಟಿರುವ ವಿಚಾರ ಕೆಲದಿನಗಳಿಂದ ಭಾರೀ ಸುದ್ದಿಯಾಗುತ್ತಿದೆ. ಈ ಚಿತ್ರದಿಂದ ಮೊದಲು ಹೊರಬಂದಿದ್ದು, ರಶ್ಮಿಕಾ ಮಂದಣ್ಣ. ಹಿಂದಿ ಸಿನಿಮಾದಲ್ಲಿ ಬ್ಯುಸಿಯಾದ ಕಾರಣ ನಿತಿನ್ (Actor Nithin) ಚಿತ್ರಕ್ಕೆ ಗುಡ್‌ಬೈ ಹೇಳಿದ್ದರು. ಬಳಿಕ ನಾಯಕಿ ಪಟ್ಟ ಶ್ರೀಲೀಲಾ ಪಾಲಿಗೆ ದಕ್ಕಿದ್ದು. ಕೆಲ ಮನಸ್ತಾಪಗಳಿಂದ ಶ್ರೀಲೀಲಾರನ್ನು ಕೂಡ ಚಿತ್ರತಂಡ ಹೊರಗಿಟ್ಟಿದೆ ಎನ್ನಲಾಗಿದೆ.

    ತೆಲುಗು ಮತ್ತು ತಮಿಳಿನಲ್ಲಿ ಮೋಡಿ ಮಾಡಿರುವ ನಟಿ ರಾಶಿ ಖನ್ನಾ ಇತ್ತೀಚೆಗೆ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ನಟಿಸಿದ್ದರು. ಬಾಲಿವುಡ್‌ನಲ್ಲಿಯೂ ನಟಿಗೆ ಬೇಡಿಕೆಯಿದೆ. ಹಾಗಾಗಿ ನಿತಿನ್‌ಗೆ ಸೂಕ್ತ ನಾಯಕಿ ಎಂದೆನಿಸಿ ರಾಶಿಗೆ ಚಿತ್ರತಂಡ ಮಣೆ ಹಾಕಿದೆ. ಇದನ್ನೂ ಓದಿ:ಮಗನ ಹೆಸರು ರಿವೀಲ್ ಮಾಡಿದ ‘ಕಾರ್ತಿಕೇಯ’ ನಟ ನಿಖಿಲ್

    ಡೈರೆಕ್ಟರ್ ವೆಂಕಿ ಕುಡುಮುಲ ಹೆಣೆದಿರುವ ಕಥೆ ಕೇಳಿ ರಾಶಿ ಖನ್ನಾ ಕೂಡ ಥ್ರಿಲ್ ಆಗಿ ಸಿನಿಮಾ ಓಕೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾತಂಡವನ್ನು ನಟಿ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಮಾಲಿವುಡ್ ನಟ ಮೋಹನ್‌ಲಾಲ್‌ರನ್ನು ಭೇಟಿಯಾದ ರಿಷಬ್ ಶೆಟ್ಟಿ

    ಒಂದು ಟೈಮ್‌ನಲ್ಲಿ ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟ ನಟಿ ಶ್ರೀಲೀಲಾ ಈಗ ಸಖತ್ ಸೈಲೆಂಟ್ ಆಗಿದ್ದಾರೆ. ಮತ್ತೆ ಶ್ರೀಲೀಲಾ ಧಮಾಕ ಯಾವಾಗ ಶುರುವಾಗುತ್ತೆ ಎಂದು ಕಾದುನೋಡಬೇಕಿದೆ.

  • ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟ ಮೃಣಾಲ್‌ಗೆ ಭಾರೀ ಬೇಡಿಕೆ

    ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟ ಮೃಣಾಲ್‌ಗೆ ಭಾರೀ ಬೇಡಿಕೆ

    ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್‌ಗೆ (Mrunal Thakur) ಸದ್ಯ ಸೌತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಸೀತಾರಾಮಂ ಸುಂದರಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ರೇಸ್‌ನಲ್ಲಿದ್ದ ಪೂಜಾ ಹೆಗ್ಡೆ, ಶ್ರೀಲೀಲಾ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟು ಮೃಣಾಲ್ ಗೆದ್ದು ಬೀಗಿದ್ದಾರೆ.

    ಟಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದ ಪೂಜಾ ಹೆಗ್ಡೆ (Pooja Hegde), ಶ್ರೀಲೀಲಾ(Sreeleela), ಕೃತಿ ಶೆಟ್ಟಿಗೆ (Krithi Shetty) ಸೆಡ್ಡು ಹೊಡೆದು ಮೃಣಾಲ್ ಠಾಕೂರ್ ಭಾರೀ ಅವಕಾಶಗಳನ್ನು ಬಾಚಿಕೊಳ್ತಿದ್ದಾರೆ. ತೆಲುಗು ಭಾಷೆ ಬರಲ್ಲ. ಸಿನಿಮಾ ಮಾಡಲ್ಲ ಅಂತಿದ್ದ ಮುಂಬೈ ಬೆಡಗಿ ಮೃಣಾಲ್ ಕಥೆ ಆಯ್ಕೆಯಲ್ಲಿಯೇ ಗೆದ್ದಿದ್ದಾರೆ.

    ‘ಸೀತಾರಾಮಂ’, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಮೂರು ಚಿತ್ರಗಳು ಕಥೆ ವಿಚಾರದಲ್ಲಿ ಗೆದ್ದಿದೆ. ಮೃಣಾಲ್ ನಟನೆ ಮತ್ತು ಪಾತ್ರ ಜನರಿಗೆ ಮನಮುಟ್ಟಿದೆ. ಬ್ಯಾಕ್ ಟು ಬ್ಯಾಕ್ 3 ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಕಾರಣ ಹಿಂದಿ ಮತ್ತು ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ರತಿಷ್ಠಿತ ಸಂಸ್ಥೆಗಳಿಂದ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ.

    ಬೇಡಿಕೆ ಹೆಚ್ಚಾಗುತ್ತಿದ್ದಂತೆ ಎರಡೂವರೆಯಿಂದ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ 5 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ. ಇದನ್ನೂ ಓದಿ:ಗುರುವಾರ ಶ್ರೀರಂಗಪಟ್ಟಣದಲ್ಲಿ ದ್ವಾರಕೀಶ್ ಅಸ್ಥಿ ವಿಸರ್ಜನೆ

    ‘ಪೂಜಾ ಮೇರಿ ಜಾನ್’ ಸೇರಿದಂತೆ ಹಲವು ಸಿನಿಮಾಗಳು ಮೃಣಾಲ್ ಕೈಯಲ್ಲಿವೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗೂ ನಟಿ ಸೆಲೆಕ್ಟ್ ಆಗಿದ್ದಾರೆ ಎನ್ನಲಾಗಿದೆ. ತೆಲುಗಿನ ಸ್ಟಾರ್ ನಟರಿಗೆ ನಾಯಕಿಯಾಗಲು ನಟಿಗೆ ಬುಲಾವ್ ಬಂದಿದೆ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡ್ತಿದ್ದಾರೆ ನಟಿ.

  • ವಿಜಯ್ ದೇವರಕೊಂಡ ಬಳಿಕ ನಿತಿನ್ ಸಿನಿಮಾದಿಂದಲೂ ಶ್ರೀಲೀಲಾ ಔಟ್

    ವಿಜಯ್ ದೇವರಕೊಂಡ ಬಳಿಕ ನಿತಿನ್ ಸಿನಿಮಾದಿಂದಲೂ ಶ್ರೀಲೀಲಾ ಔಟ್

    ನ್ನಡತಿ ಶ್ರೀಲೀಲಾ (Sreeleela) ಇದೀಗ ತೆಲುಗಿನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆದರೆ ಇದೀಗ ನಟಿಗೆ ಲಕ್ ಕೈಕೊಟ್ಟಂತಿದೆ. ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದ್ದ ಶ್ರೀಲೀಲಾ ಇತ್ತೀಚೆಗೆ ಸಿಕ್ಕ ಸಿನಿಮಾಗಳು ಅವರ ಕೈತಪ್ಪಿ ಹೋಗುತ್ತಿವೆ. ವಿಜಯ್ ದೇವರಕೊಂಡ ನಂತರ ನಿತಿನ್ (Nithin) ಚಿತ್ರದಿಂದ ಕೂಡ ಔಟ್ ಆಗಿದ್ದಾರೆ.

    ವಿಜಯ್ ದೇವರಕೊಂಡ (Vijay Devarakonda) ನಟಿಸಲಿರುವ 12ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಎಂದು ಚಿತ್ರತಂಡ ಘೋಷಿಸಿತ್ತು. ಆ ನಂತರ ‘ಕಿಸ್’ (Kiss Film) ನಟಿಯ ಬದಲು ಮಾಲಿವುಡ್ ನಟಿ ಮಮತಾಗೆ ಮಣೆ ಹಾಕಿತ್ತು ಚಿತ್ರತಂಡ. ಇದೀಗ ಸಡನ್ ಆಗಿ ನಿತಿನ್ ಸಿನಿಮಾದಿಂದ ಕೂಡ ಕಿಸ್ ಬ್ಯೂಟಿ ಕಿಕ್ ಔಟ್ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ.

    ನಿತಿನ್ ನಟನೆಯ ‘ರಾಬಿನ್‌ಹುಡ್’ ಚಿತ್ರಕ್ಕೆ ಶ್ರೀಲೀಲಾ ಫೈನಲ್ ಆಗಿದ್ದರು. ಈ ಹಿಂದೆ ಕೂಡ ನಿತಿನ್ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸಿರುವ ಕಾರಣ. ಮತ್ತೆ ಇದೇ ಜೋಡಿಯನ್ನು ಜೊತೆಯಾಗಿ ತೋರಿಸಲು ಪ್ಲ್ಯಾನ್ ಮಾಡಿದ್ದರು. ಆದರೆ ಈಗ ಈ ಚಿತ್ರದಿಂದ ಕೂಡ ನಟಿಯನ್ನು ಕೈಬಿಡಲಾಗಿದೆ ಎನ್ನಲಾಗಿದೆ. ತೆಲುಗಿಗೆ ಲಕ್ಕಿ ನಟಿಯಾಗಿದ್ದ ಶ್ರೀಲೀಲಾ ಈಗ ಅವಕಾಶದ ವಿಚಾರದಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ಇದನ್ನೂ ಓದಿ:ಡಾಲಿ ನಟನೆಯ ‘ಉತ್ತರಕಾಂಡ’ ಟೀಮ್ ಸೇರಿಕೊಂಡ ಚೈತ್ರಾ ಆಚಾರ್

    ಶ್ರೀಲೀಲಾ ಬದಲು ಬೇರೆ ನಾಯಕಿಯ ಹುಡುಕಾಟದಲ್ಲಿದೆಯಂತೆ ಚಿತ್ರತಂಡ. ಅಷ್ಟಕ್ಕೂ ಈ ವಿಚಾರ ನಿಜಾನಾ? ಎಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.

  • ವಿಜಯ್ ಮುಂದಿನ ಚಿತ್ರಕ್ಕೆ ಶ್ರೀಲೀಲಾ ಬದಲು ‘ಪ್ರೇಮಲು’ ನಟಿಗೆ ಮಣೆ ಹಾಕಿದ ಚಿತ್ರತಂಡ

    ವಿಜಯ್ ಮುಂದಿನ ಚಿತ್ರಕ್ಕೆ ಶ್ರೀಲೀಲಾ ಬದಲು ‘ಪ್ರೇಮಲು’ ನಟಿಗೆ ಮಣೆ ಹಾಕಿದ ಚಿತ್ರತಂಡ

    ಟಾಲಿವುಡ್ ನಟ ವಿಜಯ್ ದೇವರಕೊಂಡ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾದ ಮೂಲಕ ಯಶಸ್ಸು ಸಿಕ್ಕಿದೆ. ಫ್ಯಾಮಿಲಿ ಹೀರೋ ಆಗಿ ಗೆದ್ದ ಮೇಲೆ ವಿಜಯ್ ನಟನೆಯ ಮುಂದಿನ ಚಿತ್ರದ ಕೆಲಸ ಚಾಲ್ತಿಯಲ್ಲಿದೆ. VD 12 ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ (Sreeleela) ಜೊತೆ ರೊಮ್ಯಾನ್ಸ್ ಮಾಡಲು ನಿಗದಿಯಾಗಿತ್ತು. ಈಗ ಚಿತ್ರತಂಡದಿಂದ ‘ಕಿಸ್’ ನಟಿ ಔಟ್ ಆಗಿದ್ದಾರೆ. ಶ್ರೀಲೀಲಾ ಬದಲು ‘ಪ್ರೇಮಲು’ (Premalu) ಹೀರೋಯಿನ್‌ಗೆ ಮಣೆ ಹಾಕಿದ್ದಾರೆ ಚಿತ್ರತಂಡ.

    ‘ಗೀತಾ ಗೋವಿಂದಂ’ ಸಿನಿಮಾದ ನಂತರ ವಿಜಯ್ ದೇವರಕೊಂಡಗೆ ದೊಡ್ಡ ಮಟ್ಟದ ಯಶಸ್ಸು ಅಂತ ಸಿಕ್ಕಿಲ್ಲ. ಇದಾದ ಬಳಿಕ ಈಗ ಫ್ಯಾಮಿಲಿ ಸ್ಟಾರ್ ಚಿತ್ರ ಪ್ರೇಕ್ಷಕರಿಗೆ ಕನೆಕ್ಟ್ ಆಗಿದೆ. ವಿಜಯ್ ಮುಂದಿನ ಚಿತ್ರ ಕೂಡ ಅವರ ಕೆರಿಯರ್‌ಗೆ ದೊಡ್ಡ ಬ್ರೇಕ್ ಕೊಡಲೇಬೇಕು ಅಂತ ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿದೆ.

    ಶ್ರೀಲೀಲಾ (Sreeleela) ಜೊತೆ ವಿಜಯ್ ದೇವರಕೊಂಡ (Vijay Devarakonda) ಹೊಸ ಸಿನಿಮಾ ಎಂದು ಕೆಲ ತಿಂಗಳುಗಳ ಹಿಂದೆಯೇ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಇದೀಗ ವಿಜಯ್ ಸಿನಿಮಾದಿಂದ ಶ್ರೀಲೀಲಾ ಹೊರಬಂದಿದ್ದಾರೆ ಎನ್ನಲಾಗಿದೆ. ಹಾಗಾಗಿ ಮಲಯಾಳಂ ನಟಿಗೆ ಮಣೆ ಚಿತ್ರತಂಡ ಹಾಕಿದ್ದಾರೆ. ಇದನ್ನೂ ಓದಿ:ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಲ್ಮಾನ್

    ಮಾಲಿವುಡ್‌ನ ‘ಪ್ರೇಮಲು’ ಸಿನಿಮಾ ಗೆದ್ದು ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ನಾಯಕಿ ಮಮಿತಾ ಬೈಜು (Mamitha Baiju)  ಚಿತ್ರದಲ್ಲಿ ಮಿಂಚಿದ್ದಾರೆ. ಸದ್ಯ ಪಡ್ಡೆಹುಡುಗರ ಕ್ರಶ್ ಕ್ವೀನ್ ಆಗಿದ್ದಾರೆ. ‘ಪ್ರೇಮಲು’ ನಾಯಕಿಯನ್ನೇ ವಿಜಯ್ ದೇವರಕೊಂಡ ಚಿತ್ರಕ್ಕೆ ಫೈನಲ್ ಮಾಡುವ ಸಾಧ್ಯತೆಯಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾದುನೋಡಬೇಕಿದೆ.

  • ಹಿಟ್ ಚಿತ್ರ ರಿಜೆಕ್ಟ್ ಮಾಡಿ ಟ್ರೋಲ್‌ನಿಂದ ಬಚಾವ್ ಆದ ಶ್ರೀಲೀಲಾ

    ಹಿಟ್ ಚಿತ್ರ ರಿಜೆಕ್ಟ್ ಮಾಡಿ ಟ್ರೋಲ್‌ನಿಂದ ಬಚಾವ್ ಆದ ಶ್ರೀಲೀಲಾ

    ನ್ನಡದ ನಟಿ ಶ್ರೀಲಿಲಾ (Sreeleela) ಸದ್ಯ ಟಾಲಿವುಡ್ ಅಂಗಳದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಸದ್ಯ ಸೂಪರ್ ಡೂಪರ್ ಹಿಟ್ ಸಿನಿಮಾವನ್ನು ಶ್ರೀಲೀಲಾ ರಿಜೆಕ್ಟ್ ಮಾಡಿರೋದಕ್ಕೆ ಫ್ಯಾನ್ಸ್‌ ಖುಷಿಪಡುತ್ತಿದ್ದಾರೆ. ಇದರಿಂದ ಕಿಸ್ ಬೆಡಗಿ ಟ್ರೋಲ್‌ನಿಂದ ಬಚಾವ್ ಆಗಿದ್ದಾರೆ.

    ‘ಡಿಜೆ ಟಿಲ್ಲು’ (Dj Tillu) ಚಿತ್ರದ ನಂತರ ‘ಟಿಲ್ಲು ಸ್ಕ್ವೇರ್‌’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ ನಾಲ್ಕೇ ದಿನಕ್ಕೆ 60 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದ ಆಫರ್ ಅನ್ನು ಕನ್ನಡತಿ ಶ್ರೀಲೀಲಾ ಕೈಬಿಟ್ಟಿದ್ದರು. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

    ‘ಟಿಲ್ಲು ಸ್ಕ್ವೇರ್‌’ (Tillu Square) ಸಿನಿಮಾ ಸಖತ್ ಬೋಲ್ಡ್ ಸೀನ್‌ಗಳಿತ್ತು. ಹಸಿಬಿಸಿ ದೃಶ್ಯಗಳಲ್ಲಿ ನಟಿಸಬೇಕಿತ್ತು. ಹಾಗಾಗಿ ನಾಯಕಿ ಪಾತ್ರಕ್ಕೆ ಚಿತ್ರತಂಡ ಮೊದಲು ಸಂಪರ್ಕಿಸಿದ್ದು ಶ್ರೀಲೀಲಾರನ್ನು, ಅವರು ಈ ಚಿತ್ರದಲ್ಲಿ ನಟಿಸಲ್ಲ ಎಂದು ರಿಜೆಕ್ಟ್ ಮಾಡಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಇಷ್ಟವಿಲ್ಲದ ಕಾರಣ ನೋ ಎಂದಿದ್ದರು. ಇದನ್ನೂ ಓದಿ:10 ವರ್ಷಗಳ ನಂತರ ಮತ್ತೆ ಒಂದಾದ ‘ಒಕಾ ಲೈಲಾ ಕೋಸಂ’ ಜೋಡಿ

    ಬಳಿಕ ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಅನುಪಮಾ ಪರಮೇಶ್ವರನ್ (Anupama Parameshwaran) ಎಂಟ್ರಿ ಕೊಟ್ಟರು. ಬೋಲ್ಡ್ ಸೀನ್‌ಗಳಲ್ಲಿ ನಟಿಸಿರುವ ಕಾರಣ ಅವರನ್ನು ಭಾರೀ ಟ್ರೋಲ್ ಮಾಡಲಾಗುತ್ತಿದೆ. ಇದನ್ನು ನೋಡಿ ಶ್ರೀಲೀಲಾ ಈ ಚಿತ್ರ ರಿಜೆಕ್ಟ್ ಮಾಡಿದ್ದು ಸರಿ ಹೋಯಿತು. ಅವರು ಟ್ರೋಲ್‌ನಿಂದ ಬಚಾವ್ ಆದರು ಎಂದು ಫ್ಯಾನ್ಸ್ ಖುಷಿ ಪಡ್ತಿದ್ದಾರೆ.

    ಟಾಲಿವುಡ್‌ನಲ್ಲಿ ಶ್ರೀಲೀಲಾಗೆ ಭಾರೀ ಬೇಡಿಕೆ ಇದೆ. ಇತ್ತೀಚೆಗೆ ಅವರು ನಟಿಸಿದ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿದೆ. ಸಕ್ಸಸ್‌ಗಾಗಿ ನಟಿ ಎದುರು ನೋಡ್ತಿದ್ದಾರೆ. ಆದರೆ ಎಂಬಿಬಿಎಸ್ (MBBS) ಕೊನೆಯ ಪರೀಕ್ಷೆ ಇರುವ ಕಾರಣ ಸಿನಿಮಾದಿಂದ ನಟಿ ಬ್ರೇಕ್ ತೆಗೆದುಕೊಂಡಿದ್ದಾರೆ.