Tag: Sreeleela

  • ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಪೂಜಾ ಹೆಗ್ಡೆ ಎಂಟ್ರಿ?

    ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಪೂಜಾ ಹೆಗ್ಡೆ ಎಂಟ್ರಿ?

    ನ್ನಡದ ಬ್ಯೂಟಿ ಶ್ರೀಲೀಲಾಗೆ (Sreeleela) ಪರಭಾಷೆಯಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗದೆ ಇದ್ರೂ ಅವಕಾಶಗಳಿಗೆ ಕೊರತೆಯೇನು ಇಲ್ಲ. ಆದರೆ ಇದೀಗ ನಟಿ ಬಂಪರ್ ಅವಕಾಶವೊಂದನ್ನು ಕಳೆದುಕೊಂಡಿದ್ದಾರೆ. ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಕರಾವಳಿ ಬೆಡಗಿ ಪೂಜಾ ಹೆಗ್ಗೆ (Pooja Hegde) ಎಂಟ್ರಿ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಾಲಿವುಡ್ ನಟ ವರುಣ್ ಧವನ್ (Varun Dhawan) ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ಶ್ರೀಲೀಲಾ ಆಯ್ಕೆಯಾಗಿದ್ದರು. ಎರಡು ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇತ್ತು. ಆದರೆ ಶ್ರೀಲೀಲಾ ಆಯ್ಕೆಯಾಗಿದ್ದ ಪಾತ್ರಕ್ಕೆ ಈಗ ಪೂಜಾರನ್ನು ಫೈನಲ್ ಮಾಡಲಾಗಿದೆ. ಶ್ರೀಲೀಲಾರನ್ನು ಆ ಪಾತ್ರದಿಂದ ಹೊರಗಿಡಲಾಗಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.

    ಇನ್ನೂ ಈ ಹಿಂದೆ ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಖಾರಂ’ ಚಿತ್ರಕ್ಕೆ ಮೊದಲು ಪೂಜಾ ಹೆಗ್ಡೆ ಆಯ್ಕೆಯಾಗಿದ್ದರು. ಆ ನಂತರ ಪೂಜಾ ಬದಲು ಶ್ರೀಲೀಲಾಗೆ ಚಿತ್ರತಂಡ ಮಣೆ ಹಾಕಿತ್ತು. ಆ ಚಿತ್ರ ರಿಲೀಸ್ ಆಗಿ ಶ್ರೀಲೀಲಾ ನಟನೆ ಮತ್ತು ಡ್ಯಾನ್ಸ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದನ್ನೂ ಓದಿ:ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಇನ್ನೂ ರಾಬಿನ್‌ಹುಡ್, ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಹಲವು ಚಿತ್ರಗಳು ಶ್ರೀಲೀಲಾ ಕೈಯಲ್ಲಿವೆ. ಈ ಎರಡು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

  • ದಂತದ ಗೊಂಬೆಯಂತೆ ಮಿಂಚಿದ ಶ್ರೀಲೀಲಾ

    ದಂತದ ಗೊಂಬೆಯಂತೆ ಮಿಂಚಿದ ಶ್ರೀಲೀಲಾ

    ನ್ನಡದ ಬೆಡಗಿ ಶ್ರೀಲೀಲಾ (Sreeleela) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಹೊಸ ಫೋಟೋಶೂಟ್‌ನಲ್ಲಿ ದಂತದ ಗೊಂಬೆಯಂತೆ ನಟಿ ಮಿಂಚಿದ್ದಾರೆ. ಶ್ರೀಲೀಲಾರ ನಯಾ ಲುಕ್ ಕಂಡು ಪಡ್ಡೆಹುಡುಗರು ಫಿದಾ ಆಗಿದ್ದಾರೆ.

    ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಶ್ರೀಲೀಲಾ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕನ್ನಡದ ‘ಕಿಸ್’ ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ್ದ ಶ್ರೀಲೀಲಾ ಈಗ ತೆಲುಗಿನ (Tollywood) ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ತೆಲುಗು ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದ್ದರೂ ಕೂಡ ನಟಿಗೆ ಬೇಡಿಕೆ ಕಮ್ಮಿಯಾಗಿಲ್ಲ.

    ಕಿಸ್, ಭರಾಟೆ, ಬೈಟು ಲವ್ ಚಿತ್ರದಲ್ಲಿ ನಟಿಸಿದ ನಂತರ ಅವರು ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟರು. ಇಂದು ಸ್ಟಾರ್ ನಟರಿಗೆ ಇವರೇ ನಾಯಕಿಯಾಗಬೇಕು ಎಂಬುವಷ್ಟರ ಮಟ್ಟಿಗೆ ಶ್ರೀಲೀಲಾ ಬೆಳೆದಿದ್ದಾರೆ. ಇದನ್ನೂ ಓದಿ:‘ಪ್ರೇಮಲು’ ಬ್ಯೂಟಿಗೆ ಜಾಕ್‌ಪಾಟ್- ‘ದಳಪತಿ 69’ ಸಿನಿಮಾದಲ್ಲಿ ಮಮಿತಾ ಬೈಜು

    ಸದ್ಯ ರಾಬಿನ್‌ಹುಡ್, ಉಸ್ತಾದ್ ಭಗತ್ ಸಿಂಗ್ ಸಿನಿಮಾಗಳಿವೆ. ಬಾಲಿವುಡ್‌ನಲ್ಲಿ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ.

  • ಹೊಸ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀಲೀಲಾ

    ಹೊಸ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀಲೀಲಾ

    ‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಸದ್ದು ಮಾಡುತ್ತಿರುವ ಶ್ರೀಲೀಲಾ ಹೊಸ ಫೋಟೋಶೂಟ್‌ನಿಂದ ಸದ್ದು ಮಾಡುತ್ತಿದ್ದಾರೆ.

    ಲೈಟ್ ಬಣ್ಣದ ಡ್ರೆಸ್‌ನಲ್ಲಿ ನಟಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಪ್ಸರೆಯಂತೆ ಮಿಂಚಿರುವ ಶ್ರೀಲೀಲಾರನ್ನು ನೆಟ್ಟಿಗರು ಹಾಡಿಹೊಗಳುತ್ತಿದ್ದಾರೆ.

    ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ ಸಿನಿಮಾದ ಮೂಲಕ ನಟಿ ಎಂಟ್ರಿ ಕೊಟ್ಟರು. ಬಳಿಕ ‘ಧಮಾಕ’ (Dhamaka) ಚಿತ್ರದಿಂದ ಅವರಿಗೆ ಯಶಸ್ಸು ಸಿಕ್ಕಿತ್ತು. ಅಲ್ಲಿಂದ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿದ್ರು ಹೇಳಿಕೊಳ್ಳುವಂತ ಬ್ರೇಕ್ ಸಿಗಲಿಲ್ಲ. ಹಾಗಂತ ಅವರಿಗೆ ಬೇಡಿಕೆಯೇನು ಕಮ್ಮಿಯಾಗಲಿಲ್ಲ.

    ಕಳೆದ ವರ್ಷ ತೆರೆಕಂಡ ‘ಭಗವಂತ ಕೇಸರಿ’, ಗುಂಟೂರು ಖಾರಂ ಚಿತ್ರದ ಅಭಿನಯ ಮತ್ತು ಶ್ರೀಲೀಲಾ ಡ್ಯಾನ್ಸ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದನ್ನೂ ಓದಿ:ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ FIR ದಾಖಲು

    ಇನ್ನೂ ಪವನ್ ಕಲ್ಯಾಣ್ ಜೊತೆಗಿನ ಸಿನಿಮಾ, ನಿತಿನ್ ಜೊತೆ ರಾಬಿನ್‌ಹುಡ್, ಮಾಸ್ ಮಹಾರಾಜ್ ರವಿತೇಜ ಜೊತೆಗೆ ಹೊಸ ಚಿತ್ರ ಸೇರಿದಂತೆ ಹಲವು ಸಿನಿಮಾಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

    ತೆಲುಗು ಮಾತ್ರವಲ್ಲ, ಇದೀಗ ಬಾಲಿವುಡ್‌ಗೂ ಕೂಡ ಪಾದಾರ್ಪಣೆ ಮಾಡೋಕೆ ರೆಡಿಯಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ನಟಿಸಲು ಶ್ರೀಲೀಲಾಗೆ ಅವಕಾಶ ಸಿಕ್ಕಿದೆ.

    ಅಂದಹಾಗೆ, ಬೆಂಗಳೂರಿನ ಬೆಡಗಿ ಶ್ರೀಲೀಲಾ ಕನ್ನಡದ ‘ಕಿಸ್’ (Kiss Kannada) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಭರಾಟೆ, ಬೈಟು ಲವ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.

  • ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಾಲಯ್ಯ ಪುತ್ರ ಮೋಕ್ಷಜ್ಞ

    ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಾಲಯ್ಯ ಪುತ್ರ ಮೋಕ್ಷಜ್ಞ

    ತೆಲುಗಿನ ನಟ ಬಾಲಯ್ಯ (Nandamuri Balakrishna) ಪುತ್ರ ಮೋಕ್ಷಜ್ಞ (Mokshagna) ಆಗಾಗ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಇದೀಗ ಮೋಕ್ಷಜ್ಞ ಇಂದು (ಸೆ.6) ಹುಟ್ಟುಹಬ್ಬ ಹಿನ್ನೆಲೆ ಅವರ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ.

    ಸಿನಿಮಾಗೆ ಬೇಕಾದ ಹಾಗೆ ಫಿಟ್ ಆಗಿ ಮೋಕ್ಷಜ್ಞ ಎಂಟ್ರಿ ಕೊಟ್ಟಿದ್ದಾರೆ. ಸಖತ್ ಸ್ಲಿಮ್ & ಸ್ಮಾರ್ಟ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಿಂಬಾ ಎಂದು ಟೈಟಲ್ ಇಡಲಾಗಿದೆ. ಮೋಕ್ಷಜ್ಞಗೆ ‘ಹನುಮಾನ್’ ಡೈರೆಕ್ಟರ್ ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದನ್ನೂ ಓದಿ:ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ‘ಜಿಗ್ರಾ’ ನಟಿ ಆಲಿಯಾ ಭಟ್

    ಇನ್ನೂ ಸಿನಿಮಾಗಾಗಿ ಮೋಕ್ಷಜ್ಞ ಡ್ಯಾನ್ಸ್, ಆ್ಯಕ್ಷನ್ ದೃಶ್ಯಗಳಿಗಾಗಿ ಸಾಕಷ್ಟು ತರಬೇತಿ ಪಡೆದುಕೊಂಡೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಂಡೆ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅಕ್ಟೋಬರ್‌ನಲ್ಲಿ ಬಾಲಯ್ಯ ಪುತ್ರನ ಚೊಚ್ಚಲ ಸಿನಿಮಾ ಶುರುವಾಗಲಿದೆ. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ.

  • ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ

    ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ

    ನ್ನಡತಿ ಶ್ರೀಲೀಲಾಗೆ (Sreeleela) ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಸ್ಟಾರ್ ನಟನಿಗೆ ನಾಯಕಿಯಾದ ಬೆನ್ನಲ್ಲೇ ಕಾಲಿವುಡ್‌ಗೂ (Kollywood) ಪಾದಾರ್ಪಣೆ ಮಾಡೋಕೆ ನಟಿ ಸಜ್ಜಾಗಿದ್ದಾರೆ. ಶಿವಕಾರ್ತಿಕೇಯನ್‌ಗೆ (Sivakarthikeyan) ನಾಯಕಿಯಾಗಿ ‘ಕಿಸ್’ ನಟಿ ತಮಿಳಿಗೆ ಎಂಟ್ರಿ ಕೊಡ್ತಿದ್ದಾರೆ.

    ತೆಲುಗಿನಲ್ಲಿ ಇತ್ತೀಚೆಗೆ ಶ್ರೀಲೀಲಾ ನಟಿಸಿದ ಸಿನಿಮಾಗಳು ಫ್ಲಾಪ್ ಆದರೂ ಅವರಿಗೆ ಡಿಮ್ಯಾಂಡ್ ಏನು ಕಮ್ಮಿಯಾಗಿಲ್ಲ. ನಟಿಯ ಪ್ರತಿಭೆ ಮತ್ತು ಬ್ಯೂಟಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನೂ ದಿನಗಳಿಂದ ನಟಿಯ ತಮಿಳು ಡೆಬ್ಯೂ ಕುರಿತು ಭಾರೀ ಚರ್ಚೆ ಶುರುವಾಗಿತ್ತು. ಈಗ ಸ್ಟಾರ್ ನಿರ್ದೇಶಕಿ ಸುಧಾ ಕೊಂಗರ ಸಿನಿಮಾಗೆ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಶಿವಕಾರ್ತಿಕೇಯನ್ ನಟನೆಯ ‘ಪುರಾಣನೂರು’ ಚಿತ್ರಕ್ಕೆ ‘ಸೂರರೈ ಪೊಟ್ರು’ ಡೈರೆಕ್ಟರ್ ಸುಧಾ ಕೊಂಗರ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡತಿ ಶ್ರೀಲೀಲಾ ಡ್ಯಾನ್ಸ್ ಸ್ಕಿಲ್ ಮತ್ತು ನಟನೆ ಮೆಚ್ಚಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:3 ವರ್ಷಗಳಿಂದ ಸೆಕ್ಸ್ ಮಾಡಿಲ್ಲ- ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್

    ಈಗಾಗಲೇ ಶಿವಕಾರ್ತಿಕೇಯನ್ ಜೊತೆ ಶ್ರೀಲೀಲಾ ಫೋಟೋಶೂಟ್ ಕೂಡ ಆಗಿದೆ ಎಂಬುದು ಸದ್ಯ ಹರಿದಾಡುತ್ತಿರುವ ವಿಚಾರ. ಈ ಸಂಗತಿ ನಿಜನಾ? ಈ ಪ್ರಾಜೆಕ್ಟ್ ಕುರಿತು ಸದ್ಯದಲ್ಲೇ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ಬಾಲಿವುಡ್‌ನಲ್ಲಿ ಕಿಯಾರಾ ಪತಿ ಸಿದ್ಧಾರ್ಥ್ ಮಲ್ಹೋತ್ರಾಗೆ ಹೀರೋಯಿನ್ ಆಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಇದರೊಂದಿಗೆ ನಿತಿನ್ ಜೊತೆ ‘ರಾಬಿನ್‌ಹುಡ್’ ಸಿನಿಮಾ, ಪವನ್ ಕಲ್ಯಾಣ್ ಜೊತೆಗಿನ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಿವೆ.

  • ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್‌ ಮಾಡಿದ ಶ್ರೀಲೀಲಾ

    ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್‌ ಮಾಡಿದ ಶ್ರೀಲೀಲಾ

    ನ್ನಡದ ನಟಿ ಶ್ರೀಲೀಲಾ (Sreeleela) ಸದ್ಯ ತೆಲುಗಿನಲ್ಲಿ ಬೇಡಿಕೆಯ ನಾಯಕಿಯಾಗಿದ್ದಾರೆ. ನಟನೆ ಮತ್ತು ಡ್ಯಾನ್ಸ್‌ನಲ್ಲಿ ಸೈ ಎನಿಸಿಕೊಂಡಿರುವ ನಟಿ ಈಗ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಇದರ ನಡುವೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ನಟನೆಯ ಸಿನಿಮಾವನ್ನು ‘ಕಿಸ್’ ಬೆಡಗಿ ರಿಜೆಕ್ಟ್ ಮಾಡಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

    ‘ವಿಶ್ವಾಂಭರ’ ಸಿನಿಮಾದಲ್ಲಿ ಚಿರಂಜೀವಿ ಜೊತೆ ತ್ರಿಷಾ, ಆಶಿಕಾ ರಂಗನಾಥ್ (Ashika Ranganath) ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಶ್ರೀಲೀಲಾರನ್ನು ಕೇಳಿದ್ರಂತೆ ಚಿತ್ರತಂಡ. ಆದರೆ ನಟಿ ನೋ ಎಂದಿದ್ದಾರೆ. ದುಬಾರಿ ಸಂಭಾವನೆ ಕೊಡುತ್ತೇವೆ ಎಂದರು ಶ್ರೀಲೀಲಾ, ಈ ಪಾಜೆಕ್ಟ್ ಅನ್ನು ತಾನು ಮಾಡಲ್ಲ ಅಂತ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಹೀಗೊಂದು ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಶ್ರೀಲೀಲಾರ ನಟನೆ ಮತ್ತು ಡ್ಯಾನ್ಸ್‌ಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಯಾವುದೇ ಪಾತ್ರ ಮತ್ತು ಡ್ಯಾನ್ಸ್ ಸ್ಟೆಪ್ಸ್ ಕೊಟ್ರು ಹೀರೋಗೆ ಠಕ್ಕರ್ ಕೊಟ್ಟು ನಟಿ ಕುಣಿಯುತ್ತಾರೆ. ಹಾಗಾಗಿ ಸಿನಿಮಾಗಳ ಜೊತೆ ಅವರಿಗೆ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲು ಕೂಡ ಅವಕಾಶಗಳು ಅರಸಿ ಬರುತ್ತಿವೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ- ನಿತ್ಯಾ ಮೆನನ್ ಫಸ್ಟ್ ರಿಯಾಕ್ಷನ್

    ಅಂದಹಾಗೆ, ಬಾಲಿವುಡ್‌ನಲ್ಲಿ ಕಿಯಾರಾ ಪತಿ ಸಿದ್ಧಾರ್ಥ್ ಮಲ್ಹೋತ್ರಾಗೆ (Siddarth Malhotra) ಹೀರೋಯಿನ್ ಆಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಇದರೊಂದಿಗೆ ನಿತಿನ್ ಜೊತೆ ‘ರಾಬಿನ್‌ಹುಡ್’ ಸಿನಿಮಾ, ಪವನ್ ಕಲ್ಯಾಣ್ ಜೊತೆಗಿನ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಿವೆ.

  • ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಹೀರೋಯಿನ್

    ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಹೀರೋಯಿನ್

    ನ್ನಡದ ‘ಕಿಸ್’ ನಟಿ ಶ್ರೀಲೀಲಾಗೆ (Sreeleela) ಟಾಲಿವುಡ್‌ನಲ್ಲಿ ಭಾರೀ ಬೇಡಿಕೆಯಿದೆ. ಇದೀಗ ಬಾಲಿವುಡ್‌ನಲ್ಲೂ (Bollywood) ನಟಿಸುವ ಬಂಪರ್ ಚಾನ್ಸ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ಸ್ಟಾರ್ ನಟನಿಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ತೆಲುಗಿನ ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಸ್ಟಾರ್ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ. ಚಿತ್ರತಂಡ ಈಗಾಗಲೇ ನಟಿಯನ್ನು ಭೇಟಿಯಾಗಿದ್ದು, ಸ್ಕ್ರಿಪ್ಟ್ ಬಗ್ಗೆ ಮಾತುಕತೆಯಾಗಿದೆ. ನಟಿ ಕೂಡ ಕಥೆ ಕೇಳಿ ಸಿದ್ಧಾರ್ಥ್ ಜೊತೆ ತೆರೆಹಂಚಿಕೊಳ್ಳಲು ಓಕೆ ಎಂದಿದ್ದಾರೆ.

    ಇದೊಂದು ಪಕ್ಕಾ ಆ್ಯಕ್ಷನ್ ಡ್ರಾಮಾ ಕಥೆಯಾಗಿದ್ದು, ಶ್ರೀಲೀಲಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಬಲ್ವಿಂದರ್ ಸಿಂಗ್ ಜಾಂಜುವಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗಲಿದೆ.

    ಮೊದಲ ಬಾರಿಗೆ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ‘ಮಿಟ್ಟಿ’ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಈ ಜೋಡಿಯ ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ:‘ದಿ ಫ್ಯಾಮಿಲಿ ಮ್ಯಾನ್ 2’ ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್

    ಇನ್ನೂ ತೆಲುಗಿನಲ್ಲಿ ನಿತಿನ್ ಜೊತೆ ‘ರಾಬಿನ್‌ಹುಡ್’, ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’, ‘ಧಮಾಕ’ ಹೀರೋ ರವಿತೇಜಾ ಜೊತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

  • ‘ಪುಷ್ಪ 2’ ಸ್ಪೆಷಲ್ ಸಾಂಗ್‌ನಲ್ಲಿ ಇರಲಿದ್ದಾರೆ ಕನ್ನಡದ ನಟಿ

    ‘ಪುಷ್ಪ 2’ ಸ್ಪೆಷಲ್ ಸಾಂಗ್‌ನಲ್ಲಿ ಇರಲಿದ್ದಾರೆ ಕನ್ನಡದ ನಟಿ

    ತೆಲುಗಿನ ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾ ಇದೇ ಡಿ.6ರಂದು ರಿಲೀಸ್‌ಗೆ ಸಜ್ಜಾಗಿದೆ. ಇದರ ನಡುವೆ ಚಿತ್ರತಂಡದಿಂದ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ‘ಪುಷ್ಪ 2’ನಲ್ಲಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಕನ್ನಡದ ಪ್ರತಿಭಾನ್ವಿತ ನಟಿಗೆ ಚಿತ್ರತಂಡ ಆಫರ್ ನೀಡಿದೆ. ಇದನ್ನೂ ಓದಿ:‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಡಬ್ ಮಾಡಿದ ಡಾಗ್ ಸಿಂಬ

    ‘ಪುಷ್ಪ 1’ರಲ್ಲಿ ಸಮಂತಾ (Samantha) ಅವರ ಡ್ಯಾನ್ಸ್ ಕೂಡ ಚಿತ್ರದ ಯಶಸ್ಸಿಗೆ ಕಾರಣವಾಗಿತ್ತು. ಕಂಟೆಂಟ್ ಗೆಲ್ಲೋದರ ಜೊತೆ ಸಾಂಗ್ ಕೂಡ ಸೂಪರ್ ಸಕ್ಸಸ್ ಕಂಡಿತ್ತು. ಅದೇ ರೀತಿ ಈಗ ‘ಪುಷ್ಪ 2’ನಲ್ಲಿ ಐಟಂ ಸಾಂಗ್ ಮಾಡಲು ಮುಂದಾಗಿದ್ದಾರೆ. ಜಾನ್ವಿ ಕಪೂರ್ (Janhvi Kapoor) ಜೊತೆ ಶ್ರೀಲೀಲಾ (Sreeleela) ಕೂಡ ಹೆಜ್ಜೆ ಹಾಕಲಿದ್ದಾರಂತೆ. ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ.

    ಶ್ರೀಲೀಲಾ ಕೂಡ ಈ ಸಿನಿಮಾದ ಭಾಗವಾಗ್ತಾರಾ? ಎಂಬುದರ ಬಗ್ಗೆ ಚಿತ್ರತಂಡಕ್ಕೆ ಸ್ಪಷ್ಟನೆ ನೀಡಿಲ್ಲ. ಸದ್ಯ ಪುಷ್ಪ 1ಗಿಂತ ‘ಪುಷ್ಪ 2’ ದೊಡ್ಡ ಮಟ್ಟದಲ್ಲಿ ಡಿಫರೆಂಟ್ ಆಗಿ ಸಿನಿಮಾ ತೋರಿಸಲು ಚಿತ್ರತಂಡ ಯೋಜನೆ ರೂಪಿಸಿದ್ದಾರೆ. ಉತ್ತಮ ಸ್ಕ್ರಿಪ್ಟ್ ಜೊತೆ ಡ್ಯಾನ್ಸ್ ನಂಬರ್ ಸೇರಿಸಿದ್ರೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಅನ್ನೋದು ಚಿತ್ರತಂಡದ ಲೆಕ್ಕಾಚಾರ.

    ಅಂದಹಾಗೆ, ಕೆಲ ತಿಂಗಳುಗಳ ಹಿಂದೆ ಶ್ರೀಲೀಲಾ ‘ಪುಷ್ಪ 2’ಗೆ ಸಾಥ್ ನೀಡಲಿದ್ದಾರೆ ಎಂದು ಭಾರೀ ಸುದ್ದಿಯಾಗಿತ್ತು. ಆದರೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಈಗ ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅದೇ ಏನೇ ಆಗಿರಲಿ ಶ್ರೀಲೀಲಾ ಡ್ಯಾನ್ಸ್‌ ಅಪಾರ ಅಭಿಮಾನಿಗಳ ಬಳಗವಿದೆ. ‘ಪುಷ್ಪ 2’ನಲ್ಲಿ ಶ್ರೀಲೀಲಾ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗ್ತಿದ್ದಂತೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾ ರಿಜೆಕ್ಟ್ ಮಾಡಿದ ಶ್ರೀಲೀಲಾ

    ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾ ರಿಜೆಕ್ಟ್ ಮಾಡಿದ ಶ್ರೀಲೀಲಾ

    ನ್ನಡದ ನಟಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್ ಅಂಗಳದ ಸೆನ್ಸೇಷನ್ ಹೀರೋಯಿನ್ ಆಗಿದ್ದಾರೆ. ಹೀಗಿರುವಾಗ ತಮಿಳಿನ ಸಿನಿಮಾವೊಂದರ ವಿಚಾರವಾಗಿ ನಟಿ ಸದ್ದು ಮಾಡುತ್ತಿದ್ದಾರೆ. ಕಾರ್ತಿ ನಟನೆಯ ಚಿತ್ರವೊಂದನ್ನು ನಟಿ ತಿರಸ್ಕರಿಸಿದ್ದಾರೆ.

    ‘ಕಿಸ್’ ನಟಿ ಶ್ರೀಲೀಲಾ ಈಗ ತೆಲುಗಿನಲ್ಲಿ ಸೆಟಲ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ತಮಿಳು ನಟ ಕಾರ್ತಿ (Karthi) ನಟನೆಯ ‘ಸರ್ದಾರ್ 2’ (Sardar 2) ಚಿತ್ರವನ್ನು ಶ್ರೀಲೀಲಾ ರಿಜೆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕಾ ಪ್ರಸಾದದೊಂದಿಗೆ ದರ್ಶನ್ ನೋಡಲು ಜೈಲಿಗೆ ಬಂದ ಪತ್ನಿ

    ‘ಸರ್ದಾರ್ 2’ ಸಿನಿಮಾದಲ್ಲಿ ಇಬ್ಬರೂ ನಾಯಕಿಯರಿದ್ದರು. ಸಿಂಗಲ್ ಹೀರೋಯಿನ್ ಆಗಿ ತೆಲುಗಿನಲ್ಲಿ ಸೈ ಎನಿಸಿಕೊಂಡಿದ್ದಾರೆ. ಆದರೆ ತಮಿಳಿನಲ್ಲಿ ಮತ್ತೊರ್ವ ನಟಿಯ ಜೊತೆ ತೆರೆಹಂಚಿಕೊಳ್ಳಲು ಶ್ರೀಲೀಲಾ ಒಪ್ಪದೇ ಚಿತ್ರವನ್ನು ಕೈಬಿಟ್ಟಿದ್ದಾರೆ.

    ಸಕ್ಸಸ್‌ಫುಲ್ ನಟಿ ಎನಿಸಿಕೊಂಡಿರುವ ಶ್ರೀಲೀಲಾಗೆ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳಬೇಕೆಂದಿದ್ದಾರೆ. ಕಥೆ ಮತ್ತು ಪಾತ್ರಕ್ಕೂ ಕೂಡ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಅಂದಹಾಗೆ, ರಾಬಿನ್‌ಹುಡ್‌, ಪವನ್‌ ಕಲ್ಯಾಣ್‌ ಜೊತೆಗಿನ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ 2 ಚಿತ್ರಗಳನ್ನು ನಟಿ ಒಪ್ಪಿದ್ದಾರೆ.

  • ಶ್ರೀಲೀಲಾ ನಟಿಸಲಿರುವ ಬಾಲಿವುಡ್ ಸಿನಿಮಾ ಏನಾಯ್ತು?

    ಶ್ರೀಲೀಲಾ ನಟಿಸಲಿರುವ ಬಾಲಿವುಡ್ ಸಿನಿಮಾ ಏನಾಯ್ತು?

    ನ್ನಡತಿ ಶ್ರೀಲೀಲಾ(Sreeleela) ಇದೀಗ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದಾರೆ. ತೆಲುಗು ಸಿನಿಮಾಗಳ ಜೊತೆ ಬಾಲಿವುಡ್‌ನಲ್ಲಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ವರುಣ್‌ ಧವನ್‌ (Varun Dhawan) ಜೊತೆ ನಟಿ ಸಿನಿಮಾ ಮಾಡ್ತಾರೆ ಎಂದು ಸುದ್ದಿ ವೈರಲ್‌ ಆಗಿತ್ತು. ಬಳಿಕ ಏನಾಯ್ತು ಎಂದು ಮಾಹಿತಿ ಸಿಕ್ಕಿರಲಿಲ್ಲ. ಇದೀಗ ನಟಿಯ ಚೊಚ್ಚಲ ಹಿಂದಿ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ.

    ಹೊಸ ಸಿನಿಮಾದಲ್ಲಿ ವರುಣ್ ಧವನ್, ಮೃಣಾಲ್ ಠಾಕೂರ್ (Mrunal Thakur) ಜೊತೆ ಶ್ರೀಲೀಲಾ ಕೂಡ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇದೇ ಜುಲೈ ಅಂತ್ಯದಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ.

    ಡೇವಿಡ್ ಧವನ್ ನಿರ್ಮಾಣದಲ್ಲಿನ ಈ ಸಿನಿಮಾಗೆ ಕ್ರೇಜಿ ಆಗಿರುವ ಟೈಟಲ್ ಇಡಲಾಗಿದೆ. `ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಎಂದು ಶೀರ್ಷಿಕೆ ಇಡಲಾಗಿದೆ. ಶ್ರೀಲೀಲಾ ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಅವರಿಗೆ ಈ ಚಿತ್ರ ಸ್ಪೆಷಲ್ ಪ್ರಾಜೆಕ್ಟ್ ಆಗಿದೆ.

    ವರುಣ್ ಧವನ್‌ಗೆ ಜೋಡಿಯಾಗಿ ಶ್ರೀಲೀಲಾ, ಮೃಣಾಲ್ ಠಾಕೂರ್ ನಟಿಸುತ್ತಿರುವ ಕಾರಣ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.ಹಾಟ್‌ ಹುಡುಗಿಯರ ಜೊತೆ ವರುಣ್‌ ರೊಮ್ಯಾನ್ಸ್‌ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:ತಮಿಳು ನಟ ಧನುಷ್‌ಗೆ ಹಾಟ್ ಬೆಡಗಿ ತೃಪ್ತಿ ದಿಮ್ರಿ ನಾಯಕಿ

    ಅಂದಹಾಗೆ, ನಿತಿನ್ ಜೊತೆ ರಾಬಿನ್‌ಹುಡ್, ಪವನ್ ಕಲ್ಯಾಣ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ.