Tag: Sreeleela

  • ‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ವಾರಣಾಸಿಗೆ ಶ್ರೀಲೀಲಾ ಭೇಟಿ

    ‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ವಾರಣಾಸಿಗೆ ಶ್ರೀಲೀಲಾ ಭೇಟಿ

    ನ್ನಡದ ನಟಿ ಶ್ರೀಲೀಲಾ (Sreeleela) ಅವರು ಅಲ್ಲು ಅರ್ಜುನ್‌ (Allu Arjun) ಜೊತೆ ಹೆಜ್ಜೆ ಹಾಕಿರುವ ‘ಕಿಸ್ಸಿಕ್’ ಸಾಂಗ್ ನ.24ರಂದು ರಿಲೀಸ್ ಆಗಲಿದೆ. ‘ಪುಷ್ಪ 2’ (Pushpa 2) ಸಾಂಗ್ ರಿಲೀಸ್‌ಗೂ ಮುನ್ನ ಅಮ್ಮನ ಜೊತೆ ಶ್ರೀಲೀಲಾ ವಾರಣಾಸಿಗೆ (Varanasi) ಭೇಟಿ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ & ಗ್ಯಾಂಗ್ ವಿರುದ್ಧ 1200 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ

    ಅಮ್ಮ ಸ್ವರ್ಣಲತಾ ಜೊತೆ ವಾರಣಾಸಿಗೆ ಶ್ರೀಲೀಲಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ಕೆಲ ಕಾಲ ಸಮಯ ಕಳೆದಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್ ಆದ ಸಂಜನಾ ಬುರ್ಲಿ ಲುಕ್‌ಗೆ ಪಡ್ಡೆಹುಡುಗರು ಫಿದಾ

    ಇನ್ನೂ ಶ್ರೀಲೀಲಾ ಎಂತಹ ಡ್ಯಾನ್ಸರ್ ಎಂಬುದನ್ನು ಈಗಾಗಲೇ ಪ್ರೂವ್ ಮಾಡಿದ್ದಾರೆ. ಹಾಗಾಗಿ ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಐಟಂ ಸಾಂಗ್ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

    ಅಂದಹಾಗೆ, ‘ಪುಷ್ಪ 2’ ಸಿನಿಮಾ ಇದೇ ಡಿ.5ಕ್ಕೆ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ.

  • ‌Pushpa 2: ಶ್ರೀಲೀಲಾ ಫ್ಯಾನ್ಸ್‌ಗೆ ಸಿಹಿಸುದ್ದಿ- ಅಲ್ಲು ಅರ್ಜುನ್‌ ಜೊತೆಗಿನ ಐಟಂ ಸಾಂಗ್‌ ನ.24ಕ್ಕೆ ರಿಲೀಸ್

    ‌Pushpa 2: ಶ್ರೀಲೀಲಾ ಫ್ಯಾನ್ಸ್‌ಗೆ ಸಿಹಿಸುದ್ದಿ- ಅಲ್ಲು ಅರ್ಜುನ್‌ ಜೊತೆಗಿನ ಐಟಂ ಸಾಂಗ್‌ ನ.24ಕ್ಕೆ ರಿಲೀಸ್

    ನ್ನಡದ ಭರಾಟೆ ಬ್ಯೂಟಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಸೊಂಟ ಬಳುಕಿಸಿರುವ ವಿಚಾರ ಈಗಾಗಲೇ ರಿವೀಲ್ ಆಗಿದೆ. ಆದರೆ ಈ ಸಾಂಗ್ ರಿಲೀಸ್ ಆಗೋದು ಯಾವಾಗ? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಅಲ್ಲು ಅರ್ಜುನ್ (Allu Arjun) ಜೊತೆಗಿನ ಶ್ರೀಲೀಲಾ (Sreeleela) ಐಟಂ ಸಾಂಗ್ ರಿಲೀಸ್ ಆಗಲಿರುವ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಇದನ್ನೂ ಓದಿ:ರಿಲೇಷನ್‌ಶಿಪ್‌ನಲ್ಲಿರೋದಾಗಿ ಒಪ್ಪಿಕೊಂಡ ವಿಜಯ್ ದೇವರಕೊಂಡ

    ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಜೋಡಿ ‘ಕಿಸ್ಸಿಕ್’ ಎಂಬ ಹಾಡಿಗೆ ಈಗಾಗಲೇ ಹೆಜ್ಜೆ ಹಾಕಿದ್ದಾರೆ. ನ.24ರಂದು ಸಂಜೆ 7: 02ಕ್ಕೆ ಈ ಸಾಂಗ್ ರಿಲೀಸ್ ಆಗಲಿದೆ ಎಂದು ನಿರ್ಮಾಣ ಸಂಸ್ಥೆ ಗುಡ್ ನ್ಯೂಸ್ ಕೊಟ್ಟಿದೆ. ಈಗಾಗಲೇ ಚಿತ್ರತಂಡ ರಿವೀಲ್ ಮಾಡಿರುವ ಶ್ರೀಲೀಲಾ ಪೋಸ್ಟರ್‌ನಿಂದ ಹಾಡಿನ ಕುರಿತು ನಿರೀಕ್ಷೆ ಹೆಚ್ಚಿಸಿದೆ. ‘ಕಿಸ್ಸಿಕ್’ ಹಾಡಿಗಾಗಿ ಪಡ್ಡೆಹುಡುಗರು ಎದುರು ನೋಡುತ್ತಿದ್ದಾರೆ.

     

    View this post on Instagram

     

    A post shared by Sreeleela (@sreeleela14)

    ಅಂದಹಾಗೆ, ಡಿ.5ಕ್ಕೆ ‘ಪುಷ್ಪ 2’ ಸಿನಿಮಾ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಅಲ್ಲು ಅರ್ಜುನ್‌ಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶ್ರೀಲೀಲಾ

    ಅಲ್ಲು ಅರ್ಜುನ್‌ಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶ್ರೀಲೀಲಾ

    ಶ್ರೀಲೀಲಾ (Sreeleela) ಅವರು ‘ಪುಷ್ಪ 2’ (Pushpa 2)  ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ ಬೆನ್ನಲ್ಲೇ ಅಲ್ಲು ಅರ್ಜುನ್‌ಗೆ (Allu Arjun) ನಟಿ ವಿಶೇಷವಾಗಿರುವ ಗಿಫ್ಟ್‌ವೊಂದನ್ನು ಕಳುಹಿಸಿದ್ದಾರೆ. ಅದಕ್ಕೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿ, ನಟಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಇದು ವೈಯಕ್ತಿಕ ದ್ವೇಷ: ಧನುಷ್ ವಿರುದ್ಧ ನಯನತಾರಾ ಗರಂ

    ‘ಪುಷ್ಪ 2’ ಸ್ಪೆಷಲ್ ಹಾಡಿಗೆ ಕನ್ನಡದ ಬ್ಯೂಟಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಈ ಬೆನ್ನಲ್ಲೇ, ಸ್ನೇಹಾ ಅಲ್ಲು ಅರ್ಜುನ್ ಮತ್ತು ಮಕ್ಕಳಿಗೆ ನಟಿ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿದರು. ನಟಿ ಕಳುಹಿಸಿದ ಲವ್ಲಿ ಗಿಫ್ಟ್‌ಗೆ ನಟ ರಿಯಾಕ್ಟ್ ಮಾಡಿ, ನೀವು ಕಳುಹಿಸಿದ ಉಡುಗೊರೆಯನ್ನು ನಾನು ನೋಡಿದೆ. ನೀವು ಬರೆದ ಪತ್ರದಲ್ಲಿನ ಮಾತುಗಳು ನನ್ನ ಹೃದಯ ಮುಟ್ಟಿದೆ. ನಿಮ್ಮ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾ ತುಂಬೆಲ್ಲಾ ವೈರಲ್ ಆಗುತ್ತಿದೆ.

    ಅಂದಹಾಗೆ, ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ, ಡಾಲಿ ಧನಂಜಯ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಡಿ.5ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

  • ಬಿಹಾರದಲ್ಲಿ ನಡೆಯಲಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಟ್ರೈಲರ್ ಲಾಂಚ್

    ಬಿಹಾರದಲ್ಲಿ ನಡೆಯಲಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಟ್ರೈಲರ್ ಲಾಂಚ್

    ಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಟ್ರೈಲರ್ ನವೆಂಬರ್ 17ರಂದು ರಿಲೀಸ್ ಆಗಲಿದೆ. ಆದರೆ ಡಿಜಿಟಲ್ ಲಾಂಚ್ ಮಾಡುವ ಬದಲು ಬಿಹಾರದ ಪಾಟ್ನಾದಲ್ಲಿ ಬೃಹತ್ ವೇದಿಕೆ ನಿರ್ಮಿಸಿ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಟ್ರೈಲರ್ ರಿಲೀಸ್ ಮಾಡಲಿದೆ ಚಿತ್ರತಂಡ.

    ಇದೇ ನವೆಂಬರ್ 17ರಂದು ಬಿಹಾರದ ಗಾಂಧಿ ಮೈದಾನ ಪಾಟ್ನಾದಲ್ಲಿ ‘ಪುಷ್ಪ 2’ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಪುಷ್ಪ 2’ ಟೀಮ್ ಕಲಾವಿದರು ಮತ್ತು ಇಡೀ ತಂಡ ಭಾಗವಹಿಸಲಿದೆ. ಬಹುಭಾಷೆಗಳಲ್ಲಿ ರಿಲೀಸ್ ಈ ಸಿನಿಮಾ ತೆರೆಕಾಣಲಿದೆ. ಹಾಗಾಗಿ ಅಭಿಮಾನಿಗಳ ಎದುರು ಟ್ರೈಲರ್ ರಿಲೀಸ್ ಮಾಡಿದ್ರೆ, ಮತ್ತಷ್ಟು ಜನರಿಗೆ ಕನೆಕ್ಟ್ ಆಗುಬಹುದು ಎಂಬ ಕಾರಣಕ್ಕೆ ತಂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ:‌’ಬಿಗ್‌ ಬಾಸ್’ ಎಲಿಮಿನೇಷನ್‌ ಬಳಿಕ ಮತ್ತೆ ಕಿರುತೆರೆಯಲ್ಲಿ ಯಮುನಾ ಬ್ಯುಸಿ

     

    View this post on Instagram

     

    A post shared by Mythri Movie Makers (@mythriofficial)

    ಇನ್ನೂ ಇದೇ ಡಿ.5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್ (Allu Arjun), ರಶ್ಮಿಕಾ, ಡಾಲಿ, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿನಿಮಾದಲ್ಲಿ ಐಟಂ ಡ್ಯಾನ್ಸ್‌ನಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ.

  • ನಿತಿನ್, ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಟೀಸರ್‌ ಔಟ್-‌ ರಿಲೀಸ್‌ ಡೇಟ್‌ ಅನೌನ್ಸ್

    ನಿತಿನ್, ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಟೀಸರ್‌ ಔಟ್-‌ ರಿಲೀಸ್‌ ಡೇಟ್‌ ಅನೌನ್ಸ್

    ನ್ನಡದ ಭರಾಟೆ ಬ್ಯೂಟಿ ಶ್ರೀಲೀಲಾ (Sreeleela) ಮತ್ತು ನಿತಿನ್ ನಟನೆಯ ‘ರಾಬಿನ್‌ಹುಡ್‌’ (Robinhood) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ‘ರಾಬಿನ್‌ಹುಡ್’ ಸಿನಿಮಾದ ಹೊಸ ಬಿಡುಗಡೆ ಚಿತ್ರತಂಡ ತಿಳಿಸಿದೆ. ಮತ್ತೆ ರಿಲೀಸ್‌ ಡೇಟ್‌ ಅನ್ನು ಚಿತ್ರತಂಡ ಮುಂದಕ್ಕೆ ಹಾಕಿದೆ. ಇದನ್ನೂ ಓದಿ:BBK 11: ಧರ್ಮ ಜೊತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ ಐಶ್ವರ್ಯಾ

    ‘ರಾಬಿನ್‌ಹುಡ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನಿತಿನ್ ನಟನೆ, ಶ್ರೀಲೀಲಾ (Sreeleela) ಗ್ಲ್ಯಾಮರ್ ನೋಡುಗರಿಗೆ ಕಿಕ್ ಕೊಟ್ಟಿದೆ. 1:34 ಸೆಕೆಂಡಿನ ಟೀಸರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವರ್ಷದ ಅಂತ್ಯ ಡಿ.25ಕ್ಕೆ ಶ್ರೀಲೀಲಾ ನಟನೆಯ ಈ ಚಿತ್ರ ರಿಲೀಸ್ ಆಗಲಿದೆ. ಈ ಹಿಂದೆ ಡಿ.20ಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿತ್ತು. ಕಾರಣಾಂತರಗಳಿಂದ ಇನ್ನೂ 5 ದಿನ ಮುಂದಕ್ಕೆ ರಿಲೀಸ್ ದಿನಾಂಕವನ್ನು ಘೋಷಿಸಿದೆ ಚಿತ್ರತಂಡ.

     

    View this post on Instagram

     

    A post shared by Mythri Movie Makers (@mythriofficial)

    ಈ ಹಿಂದೆ ಎಕ್ಸ್ಟಾಆರ್ಡಿನರಿ ಸಿನಿಮಾದಲ್ಲಿ ನಿತಿನ್, ಶ್ರೀಲೀಲಾ ಜೊತೆಯಾಗಿ ನಟಿಸಿದರು. `ರಾಬಿನ್‌ಹುಡ್’ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ‘ಪುಷ್ಪ 2’ ಡಬ್ಬಿಂಗ್‌ನಲ್ಲಿ ಶ್ರೀವಲ್ಲಿ- ಬಿಗ್ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ‘ಪುಷ್ಪ 2’ ಡಬ್ಬಿಂಗ್‌ನಲ್ಲಿ ಶ್ರೀವಲ್ಲಿ- ಬಿಗ್ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ

    ಕೂರ್ಗ್ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಇದೇ ಡಿ.5ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ಇದರ ನಡುವೆ ‘ಪುಷ್ಪ 2’ ಚಿತ್ರದಲ್ಲಿನ ಶ್ರೀವಲ್ಲಿ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ. ಭಾವುಕವಾಗಿ ಸಿನಿಮಾದ ಕುರಿತು ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕೇಸ್‌; ನಟನ ಕುರಿತು ಹಾಡು ಬರೆದಿದ್ದ ರಾಯಚೂರಿನ ಯುವಕ ಬಂಧನ

    ಈ ಸಿನಿಮಾದಲ್ಲಿದ್ದ ತನ್ನ ಪಾತ್ರದ ಡಬ್ಬಿಂಗ್ ಮುಗಿಸಿದ್ದೇನೆ ಸ್ವತಃ ರಶ್ಮಿಕಾ ತಿಳಿಸಿದ್ದಾರೆ. ತಮ್ಮ ಡಬ್ಬಿಂಗ್ ಫೋಟೋಗಳನ್ನು ಶೇರ್ ಮಾಡಿ, ಮೋಜು, ಮಸ್ತಿ ಮುಗಿದಿದೆ. ನಾನು ಡಬ್ಬಿಂಗ್ ಕೆಲಸದಲ್ಲಿ ನಿರತಳಾಗಿದ್ದೇನೆ. ‘ಪುಷ್ಪ ದಿ ರೂಲ್’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಮೊದಲಿನ ಡಬ್ಬಿಂಗ್ ಕೆಲಸವನ್ನೂ ಮುಗಿಸಿದ್ದೇನೆ. ಈಗ ದ್ವಿತೀಯಾರ್ಧಕ್ಕೆ ಡಬ್ಬಿಂಗ್ ಮಾಡುತ್ತಿದ್ದೇನೆ. ಮೊದಲ ಭಾಗ ಅದ್ಭುತವಾಗಿದೆ ಎಂದಿದ್ದಾರೆ.

    ದ್ವಿತೀಯಾರ್ಧವು ಅದಕ್ಕಿಂತ ಹೆಚ್ಚಾಗಿರುತ್ತದೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಮನಸ್ಸಿಗೆ ಮುದ ನೀಡುವ ಅನುಭವ ಇದು, ನಿಮಗೆ ಖಂಡಿತ ಸಿಗುತ್ತದೆ. ಈ ಚಿತ್ರವನ್ನು ನಿಮಗೆ ತೋರಿಸಲು ಕಾಯ್ತಿದ್ದೇನೆ. ‘ಪುಷ್ಪ 2’ ಚಿತ್ರೀಕರಣ ಮುಗಿದಿರುವುದಕ್ಕೆ ಬೇಸರವಾಗಿದೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

    ಇನ್ನೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ (Allu Arjun) ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ. ಇವರ ಜೊತೆ ಡಾಲಿ ಧನಂಜಯ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲಿ ಐಟಂ ಹಾಡಿಗೆ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ (Sreeleela) ಸೊಂಟ ಬಳುಕಿಸಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದ್ದಾರೆ.

  • ‘ಪುಷ್ಪ 2’ನಲ್ಲಿ ಹೆಜ್ಜೆ ಹಾಕಲು 2 ಕೋಟಿ ಸಂಭಾವನೆ ಚಾರ್ಜ್ ಮಾಡಿದ್ರಾ ಶ್ರೀಲೀಲಾ?

    ‘ಪುಷ್ಪ 2’ನಲ್ಲಿ ಹೆಜ್ಜೆ ಹಾಕಲು 2 ಕೋಟಿ ಸಂಭಾವನೆ ಚಾರ್ಜ್ ಮಾಡಿದ್ರಾ ಶ್ರೀಲೀಲಾ?

    ನ್ನಡದ ‘ಭರಾಟೆ’ ಬೆಡಗಿ ಶ್ರೀಲೀಲಾ (Sreeleela) ಅವರು ಅಲ್ಲು ಅರ್ಜುನ್ (Allu Arjun) ಜೊತೆ ಸೊಂಟ ಬಳುಕಿಸಿರುವ ವಿಚಾರ ಈಗಾಗಲೇ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಈ ಬೆನ್ನಲ್ಲೇ ‘ಪುಷ್ಪ 2’ನಲ್ಲಿ (Pushpa 2) ಐಟಂ ಹಾಡಿಗೆ ಹೆಜ್ಜೆ ಹಾಕಲು ನಟಿ, 2 ಕೋಟಿ ರೂ. ಸಂಭಾವನೆಯನ್ನು ಚಾರ್ಜ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಅಮರನ್‌’ ಚಿತ್ರದ ಅಬ್ಬರ- ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾಗೆ ಪ್ರೇಕ್ಷಕ ಜೈಕಾರ

    ಈ ಹಿಂದೆ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ (Samantha) ಸೊಂಟ ಬಳುಕಿಸಿದ್ದಕ್ಕೆ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಪಾರ್ಟ್‌ 2ನಲ್ಲಿ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಿದ್ದಕ್ಕೆ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ 2 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಷ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂದು ಕಾದುನೋಡಬೇಕಿದೆ.

    ಇನ್ನೂ ನ.10ರಂದು ನಟಿಯ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಸದ್ಯದಲ್ಲೇ ಶ್ರೀಲೀಲಾ ಐಟಂ ಸಾಂಗ್ ರಿಲೀಸ್ ಬಗ್ಗೆಯೂ ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ:ಜಸ್ ಕರಣ್ ಸಿಂಗ್ ಧ್ವನಿಯಾದ ಹಾಡಿನೊಂದಿಗೆ ಎದೆಗಿಳಿದ ಅಂಶು!

    ಅಂದಹಾಗೆ, ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಟ್ರೈಲರ್ ಇದೇ ನವೆಂಬರ್ 17ರಂದು ಸಂಜೆ 6:03ಕ್ಕೆ ರಿಲೀಸ್ ಆಗಲಿದೆ. ಹಾಗಂತ ಖುದ್ದು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಐಕಾನ್ ಸ್ಟಾರ್ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ. ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  • ‘ಪುಷ್ಪ 2’ ಚಿತ್ರ ಟ್ರೈಲರ್ ರಿಲೀಸ್ ಆಗೋದು ಯಾವಾಗ?- ಗುಡ್ ನ್ಯೂಸ್ ಕೊಟ್ಟ ಅಲ್ಲು ಅರ್ಜುನ್

    ‘ಪುಷ್ಪ 2’ ಚಿತ್ರ ಟ್ರೈಲರ್ ರಿಲೀಸ್ ಆಗೋದು ಯಾವಾಗ?- ಗುಡ್ ನ್ಯೂಸ್ ಕೊಟ್ಟ ಅಲ್ಲು ಅರ್ಜುನ್

    ಲ್ಲು ಅರ್ಜುನ್ (Allu Arjun) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’ (Pushpa 2) ಇದೇ ಡಿಸೆಂಬರ್ 5ಕ್ಕೆ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾ ಕುರಿತು ಏನಾದರೂ ಅಪ್‌ಡೇಟ್‌ ಸಿಗಲಿ ಎಂದು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಅಲ್ಲು ಅರ್ಜುನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಪುಷ್ಪ 2’ ಟ್ರೈಲರ್ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸದ್ಯದಲ್ಲೇ ನನ್ನ ನಿಶ್ಚಿತಾರ್ಥ: ಮದುವೆಯಾಗಲಿರುವ ಹುಡುಗನ ಬಗ್ಗೆ ಸೋನು ಓಪನ್‌ ಟಾಕ್

    ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಟ್ರೈಲರ್ ಇದೇ ನವೆಂಬರ್ 17ರಂದು ಸಂಜೆ 6:03ಕ್ಕೆ ರಿಲೀಸ್ ಆಗಲಿದೆ. ಹಾಗಂತ ಖುದ್ದು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಐಕಾನ್ ಸ್ಟಾರ್ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Allu Arjun (@alluarjunonline)

    ಇನ್ನೂ ‘ಪುಷ್ಪ 2’ ಚಿತ್ರಕ್ಕೆ ಮತ್ತೊರ್ವ ಕನ್ನಡತಿಯ ಎಂಟ್ರಿಯಾಗಿದೆ. ಭರಾಟೆ ಬ್ಯೂಟಿ ಶ್ರೀಲೀಲಾ (Sreeleela) ‘ಪುಷ್ಪ 2’ರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆ (ನ.10) ನಟಿಯ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಸದ್ಯದಲ್ಲೇ ಶ್ರೀಲೀಲಾ ಐಟಂ ಸಾಂಗ್ ರಿಲೀಸ್ ಬಗ್ಗೆಯೂ ಅಪ್‌ಡೇಟ್ ಸಿಗಲಿದೆ.

    ಇನ್ನೂ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ(Rashmika Mandanna), ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  • ‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ

    ‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ

    ನ್ನಡದ ನಟಿ ಶ್ರೀಲೀಲಾಗೆ (Sreeleela) ಟಾಲಿವುಡ್‌ನಲ್ಲಿ ಭಾರೀ ಬೇಡಿಕೆ ಇದೆ. ನಟನೆಗೂ ಸೈ, ಡ್ಯಾನ್ಸ್‌ಗೂ ಜೈ ಎನ್ನುತ್ತಾ ಚಿತ್ರರಂಗದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ಇದೀಗ ‘ಪುಷ್ಪ 2’ (Pushpa 2)  ಸಿನಿಮಾದಲ್ಲಿ ಶ್ರೀಲೀಲಾ ಸೊಂಟ ಬಳುಕಿಸಿದ್ದಾರೆ. ಇದೀಗ ಚಿತ್ರತಂಡದ ಕಡೆಯಿಂದ ನಟಿಯ ಅಫಿಷಿಯಲ್ ಪೋಸ್ಟರ್ ರಿಲೀಸ್ ಆಗಿದೆ. ಇದನ್ನೂ ಓದಿ:ಈ ವಾರ ಎಲಿಮಿನೇಟ್ ಆಗೋದು ಯಾರು?: ದೊಡ್ಮನೆಯಲ್ಲಿ ಬಿಗ್ ಟ್ವಿಸ್ಟ್

    ನಮ್ಮ ತಂಡಕ್ಕೆ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾಗೆ ಸ್ವಾಗತ ಅಂತ ನಟಿಯ ಪೋಸ್ಟರ್ ಶೇರ್ ಮಾಡಿ ‘ಪುಷ್ಪ 2’ ಚಿತ್ರದ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ. ಪೋಸ್ಟರ್‌ನಲ್ಲಿ ಕನ್ನಡತಿ ಶ್ರೀಲೀಲಾ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಕ್ ಎಂಬ ಹಾಡಿಗೆ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಿದ್ದಾರೆ. ಇನ್ನೂ ಈ ಹಾಡು ರಿಲೀಸ್ ಆಗಬೇಕಿದೆ. ಸದ್ಯ ಈ ಪೋಸ್ಟರ್‌ನಿಂದ ಶ್ರೀಲೀಲಾ ಭಾರೀ ಸದ್ದು ಮಾಡುತ್ತಿದ್ದಾರೆ.

    ಇನ್ನೂ ನಿನ್ನೆಯಷ್ಟೇ (ನ.9) ಶ್ರೀಲೀಲಾ ‘ಪುಷ್ಪ 2’ ಸೆಟ್‌ನಲ್ಲಿರುವ ಫೋಟೋ ಲೀಕ್ ಆಗಿತ್ತು. ಈ ಬೆನ್ನಲ್ಲೇ ನಟಿಯ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಸಿನಿಮಾದ ಮೊದಲ ಭಾಗದಲ್ಲಿ ಸಮಂತಾ ಸೊಂಟ ಬಳುಕಿಸಿದ್ದರು. ಇದೀಗ ‘ಪುಷ್ಪ 2’ನಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿರೋದು ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಈ ಹಿಂದೆ ಸಮಂತಾ (Samantha) ಮಾಡಿದ್ದ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ದಾಖಲೆ ಬರೆದಿತ್ತು. ಹಾಗಾಗಿ ಸಮಂತಾಗೆ ಕನ್ನಡದ ನಟಿ ಠಕ್ಕರ್ ಕೊಡುತ್ತಾರಾ? ಕಾಯಬೇಕಿದೆ.

     

    View this post on Instagram

     

    A post shared by Mythri Movie Makers (@mythriofficial)

    ಇನ್ನೂ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಇದೇ ಡಿಸೆಂಬರ್ 5ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಬೇಕಿದೆ.

  • Pushpa 2: ಅಲ್ಲು ಅರ್ಜುನ್‌ ಜೊತೆ ಶ್ರೀಲೀಲಾ ಡ್ಯಾನ್ಸ್?‌

    Pushpa 2: ಅಲ್ಲು ಅರ್ಜುನ್‌ ಜೊತೆ ಶ್ರೀಲೀಲಾ ಡ್ಯಾನ್ಸ್?‌

    ಬೆಂಗಳೂರಿನ ಬೆಡಗಿ ಶ್ರೀಲೀಲಾಗೆ (Sreeleela) ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸಿನಿಮಾಗಳಲ್ಲಿ ಬ್ರೇಕ್ ಸಿಗದೇ ಇದ್ದರೂ ಅವರ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಆ್ಯಕ್ಟಿಂಗ್‌ನಲ್ಲೂ ಸೈ, ಡ್ಯಾನ್ಸ್‌ಗೂ ಜೈ ಅನ್ನೋ ಶ್ರೀಲೀಲಾ ಇದೀಗ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಹೆಜ್ಜೆ ಹಾಕಲು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಅಲ್ಲು ಅರ್ಜುನ್‌ ಜೊತೆ ಶ್ರೀಲೀಲಾ ಡ್ಯಾನ್ಸ್‌ ಮಾಡಲಿದ್ದಾರೆ ಎನ್ನಲಾದ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

    ಇತ್ತೀಚೆಗೆ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ತೃಪ್ತಿ ದಿಮ್ರಿ, ಶ್ರದ್ಧಾ ಕಪೂರ್ (Shraddha Kapoor) ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿತ್ತು. ಆದರೆ ಕನ್ನಡದ ನಟಿ ಶ್ರೀಲೀಲಾಗೆ ‘ಪುಷ್ಪ 2’ ಟೀಮ್ ಮಣೆ ಹಾಕಿದೆಯಂತೆ. ಶ್ರೀಲೀಲಾ ಡ್ಯಾನ್ಸ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್‌ಗೆ ಕ್ರೇಜ್ ಇದೆ. ಹಾಗಾಗಿ ಈ ನಟಿಯನ್ನೇ ಚಿತ್ರತಂಡ ಹೆಜ್ಜೆ ಹಾಕಲು ಕೇಳಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ದರ್ಶನ್ ಕೆಟ್ಟವನಲ್ಲ, ತಪ್ಪು ತಿದ್ದಿಕೊಳ್ಳುತ್ತಿದ್ದಾರೆ: ನಿರ್ದೇಶಕ ಸಾಯಿ ಪ್ರಕಾಶ್

    ಇದೇ ನವೆಂಬರ್ 6 ಮತ್ತು 7ರಂದು ‘ಪುಷ್ಪ 2’ ಸಿನಿಮಾದ ಸ್ಪೆಷಲ್ ಹಾಡಿನ ಶೂಟಿಂಗ್ ಕೂಡ ನಡೆಯಲಿದೆ ಎನ್ನಲಾಗಿದೆ. ಡಿ.5ರಂದು ಅಲ್ಲು ಅರ್ಜುನ್‌, ರಶ್ಮಿಕಾ ನಟನೆಯ ಈ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಹಾಗಾಗಿ ಒಂದು ತಿಂಗಳ ಮುಂಚೆ ಐಟಂ ಸಾಂಗ್ ಶೂಟ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಶ್ರೀಲೀಲಾ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಅದೆಷ್ಟು ನಿಜ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ.

    ಅಂದಹಾಗೆ, ಶ್ರೀಲೀಲಾ ಅವರು ಕನ್ನಡದ ಜ್ಯೂನಿಯರ್, ರಾಬಿನ್‌ಹುಡ್, ಉಸ್ತಾದ್ ಭಗತ್ ಸಿಂಗ್ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿವೆ. ಬಾಲಿವುಡ್‌ಗೆ ಎಂಟ್ರಿ ಕೊಡಲು ನಟಿ ತಯಾರಿ ಮಾಡಿಕೊಳ್ತಿದ್ದಾರೆ.