Tag: Sreeleela

  • ಹೂದೋಟಕ್ಕೆ ದೃಷ್ಟಿ ಆಗದಂತೆ ನಟಿ ಶ್ರೀಲೀಲಾ ಫೋಟೋ ಹಾಕಿದ ರೈತ!

    ಹೂದೋಟಕ್ಕೆ ದೃಷ್ಟಿ ಆಗದಂತೆ ನಟಿ ಶ್ರೀಲೀಲಾ ಫೋಟೋ ಹಾಕಿದ ರೈತ!

    ಚಿಕ್ಕಬಳ್ಳಾಪುರ: ಬೆಳೆಗಳಿಗೆ (Crop) ದೃಷ್ಟಿ ತಾಕದಂತೆ ಮಾಡಲು ಮನೆಯಲ್ಲಿ ಬಳಸಿ ತೂತು ಬಿದ್ದ ಮಣ್ಣಿನ ಮಡಿಕೆಗೆ ಸುಣ್ಣ ಬಳಿದು, ಮೂಗು, ವಿಕಾರ ಕಣ್ಣುಗಳನ್ನು ತಿದ್ದಿ ದೃಷ್ಟಿ ಬೊಂಬೆ ಮಾಡಿ ರೈತರು ತಮ್ಮ ಹೊಲದಲ್ಲಿಯೇ ಸಿಗುವ ಕೋಲುಗಳಿಗೆ ಸಿಕ್ಕಿಸಿ ನಿಲ್ಲಿಸುತ್ತಿದ್ದರು. ಈಗ ಮಣ್ಣಿನ ಕರಿ ಮಡಿಕೆಗಳು ಹೆಚ್ಚಾಗಿ ಸಿಗುತ್ತಿಲ್ಲವಾದ್ದರಿಂದ ದೃಷ್ಟಿ ತಾಕದಂತೆ ತಡೆಯಲು ರೈತರು (Farmers) ಹೈಟೆಕ್ ವಿಧಾನ ಕಂಡುಕೊಂಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಆರೂಢಿ ರಸ್ತೆ ಬದಿಯಲ್ಲಿ ಸುಂಗಧರಾಜ ಹೂವಿನ ಬೆಳೆಯ ನಡುವೆ ರೈತರೊಬ್ಬರು ದೃಷ್ಟಿ ಬೊಂಬೆ ಬದಲಿಗೆ ನಟಿ ಶ್ರೀಲೀಲಾ (Sreeleela) ಫೋಟೋ ಬಳಸಿದ್ದಾರೆ. ಸುಗಂಧರಾಜ ಹೂವಿನ ತೋಟದ ಮಧ್ಯೆ ನಟಿ ಶ್ರೀಲೀಲಾ ಫೋಟೋ ಹಾಕಲಾಗಿದ್ದು ದಾರಿ ಹೋಕರ ಕಣ್ಣು ಕುಕ್ಕುತ್ತಿದೆ. ಇದನ್ನೂ ಓದಿ: ಹುಟ್ಟೂರಲ್ಲಿ ಎಸ್‌.ಎಂ.ಕೃಷ್ಣ ಅಂತ್ಯಕ್ರಿಯೆ; ಸಿಎಂ ಸೇರಿ ಅನೇಕ ಗಣ್ಯರಿಂದ ಅಂತಿಮ ನಮನ

    ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಟಿಯರ ಭಾವಚಿತ್ರಗಳನ್ನ ದೃಷ್ಟಿ ಬೊಂಬೆಯಾಗಿ ಬಳಸುತ್ತಿದ್ದು, ಸಿನಿಮಾ ನಟಿಯರ ಫ್ಲೆಕ್ಸ್‌ಗಳನ್ನ ಬೆಳೆಗಳ ನಡುವೆ ನೇತುಹಾಕುತ್ತಿದ್ದಾರೆ. ರಸ್ತೆಯಲ್ಲಿ ಹೋಗುವವರು ಬೆಳೆ ಹೇಗಿದೆ ಎಂದು ನೋಡುವುದಕ್ಕೂ ಮುನ್ನವೇ ಥಟ್ಟನೆ ಕಣ್ಣಿಗೆ ಬಿಳುತ್ತಿರುವುದೇ ಈ ಸಿನಿಮಾ ತಾರೆಯರ ಫ್ಲೆಕ್ಸ್‌ಗಳು. ಹೀಗಾಗಿ ಬೆಳೆಗೆ ದೃಷ್ಟಿ ಆಗಲ್ಲ ಅನ್ನೋ ನಂಬಿಕೆ ರೈತರದ್ದಾಗಿದೆ. ಇದನ್ನೂ ಓದಿ: ‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್‌ ನೀನಾಸಂ, ರಚಿತಾ ರಾಮ್ 

  • ಪೂಜಾ ಹೆಗ್ಡೆಗೆ ಠಕ್ಕರ್-‌ ನಾಗಚೈತನ್ಯಗೆ ಶ್ರೀಲೀಲಾ ಜೋಡಿ?

    ಪೂಜಾ ಹೆಗ್ಡೆಗೆ ಠಕ್ಕರ್-‌ ನಾಗಚೈತನ್ಯಗೆ ಶ್ರೀಲೀಲಾ ಜೋಡಿ?

    ನ್ನಡತಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಕರಾವಳಿ ನಟಿ ಪೂಜಾ ಹೆಗ್ಡೆಗೆ (Pooja Hegde) ಠಕ್ಕರ್ ಕೊಟ್ಟು ಶ್ರೀಲೀಲಾ ಬಿಗ್ ಆಫರ್‌ವೊಂದನ್ನು ಬಾಚಿಕೊಂಡಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ಸಿನಿಮಾಗೆ ನಾಯಕಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

    ಟಾಲಿವುಡ್‌ನಲ್ಲಿ ನಟನೆ, ಡ್ಯಾನ್ಸ್, ಬ್ಯೂಟಿ ಮೂಲಕ ಎಲ್ಲರ ಮನಗೆದ್ದಿರುವ ಸುಂದರಿ ಶ್ರೀಲೀಲಾ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ನಾಗಚೈತನ್ಯ (Naga Chaitanya) ನಟನೆಯ 24ನೇ ಸಿನಿಮಾಗೆ ಪೂಜಾ ಹೆಗ್ಡೆರನ್ನು ಆಯ್ಕೆ ಮಾಡಿದೆ ಎಂಬ ಸುದ್ದಿ ಇತ್ತು. ಈಗ ಪೂಜಾರನ್ನು ನಾಯಕಿ ಪಾತ್ರಕ್ಕೆ ಕೈಬಿಡಲಾಗಿದ್ದು, ಶ್ರೀಲೀಲಾರನ್ನು ತಂಡ ಫೈನಲ್ ಮಾಡಿದೆ ಎನ್ನಲಾಗಿದೆ. ಚಿತ್ರತಂಡದಿಂದ ಈ ಕುರಿತು ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

    ಇನ್ನೂ ‘ಪುಷ್ಪ 2’ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಜೊತೆ ಶ್ರೀಲೀಲಾ ಡ್ಯಾನ್ಸ್ ಮಾಡುವ ಮೂಲಕ ಹೈಪ್ ಕ್ರಿಯೆಟ್ ಆಗಿದೆ. ಜೊತೆಗೆ ನಿತಿನ್ ಜೊತೆಗಿನ ‘ರಾಬಿನ್‌ಹುಡ್’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ.

  • ‘ಪುಷ್ಪ 2’ ಭರ್ಜರಿ ಕಲೆಕ್ಷನ್- 922 ಕೋಟಿ ಗಳಿಕೆ ಮಾಡಿದ ರಶ್ಮಿಕಾ ಮಂದಣ್ಣ ಸಿನಿಮಾ

    ‘ಪುಷ್ಪ 2’ ಭರ್ಜರಿ ಕಲೆಕ್ಷನ್- 922 ಕೋಟಿ ಗಳಿಕೆ ಮಾಡಿದ ರಶ್ಮಿಕಾ ಮಂದಣ್ಣ ಸಿನಿಮಾ

    ಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೀಗ 1000 ಕೋಟಿ ರೂ. ಕಲೆಕ್ಷನ್‌ನತ್ತ ಮುನ್ನುಗ್ಗತ್ತಿದೆ. ಪ್ರಸ್ತುತ 5 ದಿನಗಳಲ್ಲಿ 922 ಕೋಟಿ ರೂ. ಗಳಿಕೆ ಮಾಡಿದ ‘ಪುಷ್ಪ 2’ ಮುನ್ನಗ್ಗುತ್ತಿದೆ. ಈ ಕುರಿತು ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ತಿಳಿಸಿದೆ.

    ಬಹುಭಾಷೆಗಳಲ್ಲಿ ‘ಪುಷ್ಪ 2’ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ. ಇದೀಗ ಈ ಚಿತ್ರ ವಿಶ್ವಾದ್ಯಂತ 922 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಣ ಸಂಸ್ಥೆ ತಿಳಿಸಿದೆ. ಈ ಮೂಲಕ ಚಿತ್ರತಂಡ ಸಕ್ಸಸ್ ಅನ್ನು ಸಂಭ್ರಮಿಸುತ್ತಿದೆ. ಇದನ್ನೂ ಓದಿ:ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು ಎಸ್‌ಎಂಕೆ: ಅಭಿಷೇಕ್ ಅಂಬರೀಶ್

    ಇನ್ನೂ ಅಲ್ಲು ಅರ್ಜುನ್ ನಟನೆ ಮತ್ತು ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ನಟನೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಶ್ರೀಲೀಲಾ ಕಿಸ್ಸಿಕ್ ಸಾಂಗ್, ಫಹಾದ್ ಫಾಸಿಲ್ ನಟನೆ, ಪುಷ್ಪರಾಜ್ ಜೊತೆಗಿನ ತಾರಕ್ ಪೊನ್ನಪ್ಪ ಸಂಘರ್ಷ ಇವೆಲ್ಲವೂ ಸಿನಿಮಾದಲ್ಲಿ ಹೈಲೆಟ್ ಆಗಿದೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ತಾರಕ್ ನಟನೆ ಈ ಸಿನಿಮಾದಲ್ಲಿ ತಿರುವು ನೀಡಲಿದೆ. ಸುಕುಮಾರ್ ನಿರ್ದೇಶನವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

     

    View this post on Instagram

     

    A post shared by Mythri Movie Makers (@mythriofficial)


    ಅಂದಹಾಗೆ, ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ, ತಾರಕ್, ಅನಸೂಯ, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ನನ್ನದು: ಬಾಲಯ್ಯ

    ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ನನ್ನದು: ಬಾಲಯ್ಯ

    ನ್ನಡತಿ ಶ್ರೀಲೀಲಾ (Sreeleela) ಅವರು ಟಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಶ್ರೀಲೀಲಾ ಅವರು ಬಾಲಯ್ಯ ನಿರೂಪಣೆಯ ಶೋಗೆ ಗೆಸ್ಟ್ ಆಗಿ ಹೋಗಿದ್ದರು. ಈ ವೇಳೆ, ಶ್ರೀಲೀಲಾಗೆ ಮದುವೆ ಮಾಡುವ ಹೊಣೆ ನನ್ನದು ಎಂದು ಬಾಲಯ್ಯ ತಿಳಿಸಿದ್ದಾರೆ.

    ಸದ್ಯ ‘ಕಿಸ್ಸಿಕ್’ ಹೀರೋಯಿನ್ ಆಗಿ ಸದ್ದು ಮಾಡುತ್ತಿರುವ ಶ್ರೀಲೀಲಾ ಅವರ ಮದುವೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ನಟಿಯ ಕುರಿತು ಬಾಲಯ್ಯ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ‘ಅನ್‌ಸ್ಟಾಪೆಬಲ್ ವಿತ್ ಬಾಲಯ್ಯ’ ಕಾರ್ಯಕ್ರಮಕ್ಕೆ ನವೀನ್ ಪೋಲಿಶೆಟ್ಟಿ ಜೊತೆ ಶ್ರೀಲೀಲಾ ಅತಿಥಿಯಾಗಿ ಆಗಮಿಸಿದರು. ಈ ವೇಳೆ, ಶ್ರೀಲೀಲಾ ನನ್ನ ಮಗಳಿದ್ದಂತೆ, ಆಕೆಯನ್ನು ನೋಡಿದರೆ ನನ್ನ ಮಗಳು ನೆನಪಾಗುತ್ತಾಳೆ. ತಂದೆಯ ಸ್ಥಾನದಲ್ಲಿದ್ದು, ಆಕೆಗೆ ಮದುವೆ (Wedding) ಮಾಡಿಸುವ ಜವಾಬ್ದಾರಿ ನನ್ನದು ಎಂದು ಬಾಲಯ್ಯ (Balayya) ಮಾತನಾಡಿದ್ದಾರೆ.

    ಕಳೆದ ವರ್ಷ ತೆರೆಕಂಡ ‘ಭಗವಂತ ಕೇಸರಿ’ ಸಿನಿಮಾದಲ್ಲಿ ಬಾಲಯ್ಯ ಮಗಳಾಗಿ ಶ್ರೀಲೀಲಾ ನಟಿಸಿದರು. ಹಾಗಾಗಿ ಇಬ್ಬರ ನಡುವೆ ಉತ್ತಮ ಒಡನಾಟವಿದೆ. ತೆರೆಯ ಹಿಂದೆ ಕೂಡ ತಂದೆ ಮತ್ತು ಮಗಳಂತೆಯೇ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ನಟಿಯ ಮೇಲೆ ನಂದಮೂರಿ ಬಾಲಕೃಷ್ಣಗೆ ವಿಶೇಷ ಪ್ರೀತಿಯಿದೆ.

    ಅಂದಹಾಗೆ, ಡಿ.5ರಂದು ತೆರೆಕಂಡ ‘ಪುಷ್ಪ 2’ ಸಿನಿಮಾದಲ್ಲಿ ನಟಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇನ್ನೂ ನಿತಿನ್ ಜೊತೆಗಿನ ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಸಿನಿಮಾ ಡಿ.25ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

    Pushpa 2: ಅಲ್ಲು ಅರ್ಜುನ್ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು

    ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಡಿ.5ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿದೆ. ಬಿಡುಗಡೆಯ ಬಳಿಕ ಪುಷ್ಪರಾಜ್ ಫೀವರ್ ಶುರುವಾಗಿದೆ. ಕೆಲ ಮಂದಿ ಸಿನಿಮಾವನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದರೆ, ಇನ್ನೂ ಕೆಲವರು ಸಿನಿಮಾ ಒಂದು ರೇಂಜಿಗಿದೆ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದರೆಲ್ಲದರ ನಡುವೆ ‘ಪುಷ್ಪ 2’ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡು ಹೈಲೆಟ್ ಆಗಿದೆ.

    ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ (Rashmika Mandanna) ನ್ಯಾಷನಲ್ ಕ್ರಶ್ ಆಗಿ ಪರಭಾಷೆಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಶ್ರೀವಲ್ಲಿ ಪಾತ್ರಕ್ಕೆ ಕೊಡಗಿನ ಬೆಡಗಿ ಜೀವ ತುಂಬಿದ್ದಾರೆ. ರಶ್ಮಿಕಾ ನಟನೆಯ ಜೊತೆ ಫೀಲಿಂಗ್ಸ್ ಡ್ಯಾನ್ಸ್‌ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಕನ್ನಡಿಗ ತಾರಕ್ ಪೊನ್ನಪ್ಪ (Tarak Ponnappa) ಅವರು ಅಲ್ಲು ಅರ್ಜುನ್ ಮುಂದೆ ತೊಡೆ ತಟ್ಟಿದ್ದಾರೆ. ಅಲ್ಲು ಅರ್ಜುನ್ ಮತ್ತು ತಾರಕ್ ನಡುವಿನ ಆ್ಯಕ್ಷನ್ ಸೀಕ್ವೆನ್ಸ್ ಸಿನಿಮಾದಲ್ಲಿ ರೋಚಕವಾಗಿದೆ. ತಾರಕ್ ನಟನೆ ಮತ್ತು ಅವರ ಲುಕ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪರಭಾಷೆಗಳಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

    ಇನ್ನೂ ಕನ್ನಡದ ‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಅವರು ‘ಕಿಸ್ಸಿಕ್’ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಮಾದಕ ಲುಕ್ ಮತ್ತು ಡ್ಯಾನ್ಸ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಶ್ರೀಲೀಲಾ ಕೂಡ ತೆಲುಗಿನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

    ಡಾಲಿ ಧನಂಜಯ (Daali Dhananjay) ಅವರು ಜಾಲಿ ರೆಡ್ಡಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೂ ಸುಕುಮಾರ್ ಪ್ರಾಮುಖ್ಯತೆ ನೀಡಿದ್ದಾರೆ. ಎರಡನೇ ಭಾಗದಲ್ಲೂ ಡಾಲಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಪಾರ್ಟ್ 3ನಲ್ಲಿ ಅವರ ಪಾತ್ರ ಹೇಗೆಲ್ಲಾ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

    ನಂದ ಗೋಪಾಲ್ (Nanda Gopal) ಕೂಡ ‘ಪುಷ್ಪ 2’ನಲ್ಲಿ ನಟಿಸಿದ್ದಾರೆ. ಅವರ ಪಾತ್ರ ಚಿಕ್ಕದಾಗಿದೆ. ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳದೇ ಇದ್ದರೂ ಕನ್ನಡದ ನಟ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.

  • ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ: ಹೊಗಳಿದ ಅಲ್ಲು ಅರ್ಜುನ್

    ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ: ಹೊಗಳಿದ ಅಲ್ಲು ಅರ್ಜುನ್

    ನ್ನಡತಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ‘ಕಿಸ್ಸಿಕ್’ ಹಾಡಿಗೆ ಸೊಂಟ ಬಳುಕಿಸಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇದೀಗ ಸಿನಿಮಾ ಪ್ರಚಾರದ ವೇಳೆ, ಶ್ರೀಲೀಲಾರನ್ನು (Sreeleela) ಅಲ್ಲು ಅರ್ಜುನ್ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:BBK 11: ಶಿಶಿರ್‌ ಹೆಣ್ಮಕ್ಕಳ ಹಿಂದೆ ಸುತ್ತೋ ಜೊಲ್ಲ ಎಂದ್ರಾ ಚೈತ್ರಾ?- ರಣರಂಗವಾಯ್ತು ದೊಡ್ಮನೆ

    ಅಲ್ಲು ಅರ್ಜುನ್ (Allu Arjun) ಮಾತನಾಡಿ, ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ. ಶ್ರೀಲೀಲಾ ಕ್ಯೂಟ್, ಪ್ರತಿಭಾನ್ವಿತ ನಟಿ. ತೆಲುಗು ಹೆಣ್ಣು ಮಕ್ಕಳಿಗೆ ಆಕೆ ಸ್ಫೂರ್ತಿ ಎಂದು ಕೊಂಡಾಡಿದ್ದಾರೆ.

    ಅಂದಹಾಗೆ, ಡಿ.5ರಂದು ‘ಪುಷ್ಪ 2’ ಸಿನಿಮಾಗೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ‘(Rashmika Mandanna), ಶ್ರೀಲೀಲಾ, ಡಾಲಿ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಬಾಲಿವುಡ್‌ಗೆ ‘ಕಿಸ್ಸಿಕ್’ ಹೀರೋಯಿನ್ ಎಂಟ್ರಿ ಕೊಡ್ತಿರೋದು ನಿಜನಾ?- ಸ್ಪಷ್ಟನೆ ನೀಡಿದ ಶ್ರೀಲೀಲಾ

    ಬಾಲಿವುಡ್‌ಗೆ ‘ಕಿಸ್ಸಿಕ್’ ಹೀರೋಯಿನ್ ಎಂಟ್ರಿ ಕೊಡ್ತಿರೋದು ನಿಜನಾ?- ಸ್ಪಷ್ಟನೆ ನೀಡಿದ ಶ್ರೀಲೀಲಾ

    ನ್ನಡತಿ ಶ್ರೀಲೀಲಾ (Sreeleela) ಅವರು ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೀಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡೋಕೆ ನಟಿ ಸಜ್ಜಾಗಿದ್ದಾರೆ ಎನ್ನಲಾದ ವಿಚಾರಕ್ಕೆ ಶ್ರೀಲೀಲಾ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ಹಿಂದಿ ಸಿನಿಮಾದಲ್ಲಿ ಕೆಲಸ ಮಾಡಲಿರುವ ವಿಚಾರ ನಿಜ ಎಂದು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ‘ಟೋಬಿ’ ಬೆಡಗಿ ಚೈತ್ರಾ

    ತೆಲುಗು ನಟ ರಾಣಾ ದಗ್ಗುಬಾಟಿ ಶೋಗೆ ಶ್ರೀಲೀಲಾ ಗೆಸ್ಟ್ ಆಗಿ ತೆರಳಿದರು. ಈ ಕುರಿತಾದ ಪ್ರೋಮೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲಿವುಡ್ ಡೆಬ್ಯೂ ಬಗ್ಗೆ ನಟಿಯನ್ನು ರಾಣಾ ಪ್ರಶ್ನಿಸಿದ್ದಾರೆ. ಬಾಲಿವುಡ್‌ಗೆ (Bollywood) ಎಂಟ್ರಿ ಕೊಡುತ್ತಿರುವ ವಿಚಾರ ನಿಜ. ಬಾಲಿವುಡ್‌ನಲ್ಲಿ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಹೊಸದಾಗಿದೆ ಮತ್ತು ವಿಭಿನ್ನವಾಗಿದೆ ಎಂದು ನಟಿ ಮಾತನಾಡಿದ್ದಾರೆ.

    ಆದರೆ ಯಾವ ಸಿನಿಮಾ, ಯಾರಿಗೆ ಜೋಡಿಯಾಗಿ ನಟಿಸುತ್ತಾರೆ ಎಂಬ ವಿಚಾರವನ್ನು ಅವರೆಲ್ಲೂ ತಿಳಿಸಿಲ್ಲ. ಇದರ ಎಪಿಸೋಡ್ ಸೆ.30ರಂದು ಒಟಿಟಿಯಲ್ಲಿ ಪ್ರಸಾರವಾಗಿದೆ. ಅಲ್ಲಿ ಇನ್ನಷ್ಟೂ ಮಾಹಿತಿ ಸಿಗುತ್ತಾ? ಎಂದು ಕಾದುನೋಡಬೇಕಿದೆ. ಇನ್ನೂ ಕೆಲ ತಿಂಗಳುಗಳಿಂದ ಶ್ರೀಲೀಲಾ ಬಾಲಿವುಡ್ ಎಂಟ್ರಿ ಬಗ್ಗೆ ಸಖತ್ ಚರ್ಚೆ ಆಗಿತ್ತು. ಆದರೆ ಎಲ್ಲೂ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಈಗ ನಟಿಯ ಕಡೆಯಿಂದ ಉತ್ತರ ಸಿಕ್ಕಿದೆ.

    ಅಂದಹಾಗೆ, ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ‘ಕಿಸ್ಸಿಕ್’ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಡಿ.5ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಜೊತೆಗೆ ಡಿ.20ರಂದು ಶ್ರೀಲೀಲಾ, ನಿತಿನ್ ನಟನೆಯ ‘ರಾಬಿನ್‌ಹುಡ್’ ಸಿನಿಮಾ ರಿಲೀಸ್‌ಗೆ ರೆಡಿಯಿದೆ.

  • Pushpa 2: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸಿನಿಮಾಗೆ ಸಿಕ್ತು U/A ಸರ್ಟಿಫಿಕೇಟ್

    Pushpa 2: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸಿನಿಮಾಗೆ ಸಿಕ್ತು U/A ಸರ್ಟಿಫಿಕೇಟ್

    ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಮಾಣಪತ್ರ ವಿತರಿಸಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದ್ದು, ಇದೀಗ ಚಿತ್ರಕ್ಕೆ U/A ಪ್ರಮಾಣ ಪತ್ರ ನೀಡಲಾಗಿದೆ. ಇದನ್ನೂ ಓದಿ:ಮಗಳೊಂದಿಗಿನ ಮುದ್ದಾದ ಫೋಟೋ ಹಂಚಿಕೊಂಡ ಮಿಲನಾ

    ‘ಪುಷ್ಪ 2’ ಕಳ್ಳಸಾಗಣೆದಾರರ ಸಿನಿಮಾ ಆಗಿರುವ ಕಾರಣ ಕೆಲವು ಸಂಭಾಷಣೆಗಳು ಮತ್ತು ದೃಶ್ಯಗಳನ್ನು ಸಹ ಬದಲಾಯಿಸಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯಾವುದೇ ಹೆಚ್ಚಿನ ಕಟ್‌ಗಳು ಇಲ್ಲದೆ ಯು/ಎ ಪ್ರಮಾಣ ಪತ್ರವನ್ನು ಸಿನಿಮಾಕ್ಕೆ ನೀಡಲಾಗಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಅಭಿಷೇಕ್ ಶೆಟ್ಟಿ

    ಇನ್ನೂ ಸಿನಿಮಾ ರಿಲೀಸ್‌ಗೂ ಮುನ್ನು ಶ್ರೀಲೀಲಾ ಸೊಂಟ ಬಳುಕಿಸಿರುವ ‘ಕಿಸ್ಸಿಕ್’ ಸಾಂಗ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಪುಷ್ಪರಾಜ್, ಶ್ರೀವಲ್ಲಿ ಜೋಡಿ ನೋಡಲು ಮತ್ತು ಶ್ರೀಲೀಲಾ ಐಟಂ ಡ್ಯಾನ್ಸ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನೂ ‘ಪುಷ್ಪ ಪಾರ್ಟ್ 3’ ಬರುವ ಬಗ್ಗೆಯೂ ಹಿಂಟ್ ಸಿಕ್ಕಿದೆ. ಇದನ್ನೂ ಕೇಳಿ ಕೂಡ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾ ಡಿ.5ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ ಧನಂಜಯ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಶ್ರೀಲೀಲಾಗೆ ಸಂಭಾವನೆಯನ್ನೇ ಕೊಟ್ಟಿಲ್ವಾ?- ನಟಿ ಹೇಳೋದೇನು?

    ‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಶ್ರೀಲೀಲಾಗೆ ಸಂಭಾವನೆಯನ್ನೇ ಕೊಟ್ಟಿಲ್ವಾ?- ನಟಿ ಹೇಳೋದೇನು?

    ನ್ನಡದ ನಟಿ ಶ್ರೀಲೀಲಾ (Sreeleela) ತೆಲುಗಿನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ‘ಕಿಸ್ಸಿಕ್’ (Kissik) ಸಾಂಗ್ ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಪ್ರೆಸ್ ಮೀಟ್‌ವೊಂದರಲ್ಲಿ ‘ಪುಷ್ಪ 2’ (Pushpa 2) ಚಿತ್ರದ ಸಾಂಗ್‌ನಲ್ಲಿ ಹೆಜ್ಜೆ ಹಾಕಲು ಸಂಭಾವನೆ ಬಗ್ಗೆ ಚರ್ಚೆನೇ ನಡೆದಿಲ್ಲ ಎಂದು ಶ್ರೀಲೀಲಾ ಹೇಳಿದ್ದಾರೆ. ಹಾಗಾದ್ರೆ ನಟಿಗೆ ಸಂಭಾವನೆಯನ್ನೇ ಕೊಟ್ಟಿಲ್ವಾ? ಎಂದು ನೆಟ್ಟಿಗರಲ್ಲಿ ಚರ್ಚೆ ಶುರುವಾಗಿದೆ.

    ‘ಕಿಸ್ಸಿಕ್’ ಐಟಂ ಸಾಂಗ್ ಒಪ್ಪಿದ್ದೇಕೆ? ಮತ್ತು ಸಂಭಾವನೆ ವಿಚಾರದ ಕುರಿತು ಶ್ರೀಲೀಲಾ ಮಾತನಾಡಿ, ಈ ಹಿಂದೆ ಅನೇಕ ಬಾರಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಆಫರ್ ಬಂದಿತ್ತು. ಆದರೆ ನಾನು ಒಪ್ಪಿರಲಿಲ್ಲ. ಈ ‘ಪುಷ್ಪ 2’ಗೆ ಒಪ್ಪಿಗೆ ನೀಡಲು ಕಾರಣವಿದೆ. ಅದಕ್ಕೆ ಡಿ.5ರಂದು ತಿಳಿಯಲಿದೆ ಎಂದಿದ್ದಾರೆ. ಇದನ್ನೂ ಓದಿ:47ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಾಹುಬಲಿ’ ನಟ ಸುಬ್ಬರಾಜು

    ಐಟಂ ಹಾಡಿಗೆ ಭಾರೀ ಸಂಭಾವನೆ (Remuneration) ಪಡೆದಿದ್ದಾರೆ ಎನ್ನಲಾದ ವಿಚಾರಕ್ಕೆ ನಟಿ ಪ್ರತಿಕ್ರಿಯಿಸಿ, ಈವರೆಗೂ ಸಂಭಾವನೆ ಬಗ್ಗೆ ಚರ್ಚೆ ಮಾಡಿಲ್ಲ. ಅವಕಾಶ ಬಂತು ಹೆಜ್ಜೆ ಹಾಕಿದ್ದೇನೆ. ಹಣದ ವಿಷ್ಯ ಚರ್ಚೆ ಆಗಿಲ್ಲ ಎಂದಿದ್ದಾರೆ. ಈ ಬೆನ್ನಲ್ಲೇ, ನಿರ್ಮಾಪಕರು ನಟಿಗೆ ಸಂಭಾವನೆ ನೀಡಿಲ್ವಾ? ಹಣ ಪಡೆಯದೇ ಡ್ಯಾನ್ಸ್ ಮಾಡಿದ್ರಾ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

    ಸದ್ಯ ಟಾಲಿವುಡ್‌ನಲ್ಲಿ ಶ್ರೀಲೀಲಾ ಕ್ರೇಜ್ ಹೆಚ್ಚಾಗಿದೆ. ಕ್ರೇಜ್ ತಕ್ಕಂತೆ ಸಂಭಾವನೆ ಕೊಟ್ಟಿದ್ದಾರೆ ಎಂಬುದು ಹರಿದಾಡುತ್ತಿರುವ ಸುದ್ದಿ. ಇನ್ನೂ ‘ಪುಷ್ಪ 2’ ಸಿನಿಮಾದಲ್ಲಿ ನಟಿ ಕುಣಿಯಲು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

  • Pushpa 2: ಸ್ಯಾಮ್ ಜಾಗಕ್ಕೆ ಶ್ರೀಲೀಲಾ- ‘ಕಿಸ್ಸಿಕ್’ ಹಾಡಿಗೆ ಸಮಂತಾ ರಿಯಾಕ್ಷನ್

    Pushpa 2: ಸ್ಯಾಮ್ ಜಾಗಕ್ಕೆ ಶ್ರೀಲೀಲಾ- ‘ಕಿಸ್ಸಿಕ್’ ಹಾಡಿಗೆ ಸಮಂತಾ ರಿಯಾಕ್ಷನ್

    ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಜೊತೆ ಶ್ರೀಲೀಲಾ (Sreeleela) ಸೊಂಟ ಬಳುಸಿರುವ ‘ಕಿಸ್ಸಿಕ್’ ಸಾಂಗ್ ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೇ ವಿವ್ಸ್ ಪಡೆಯುತ್ತಿದೆ. ಸಮಂತಾ ಮುಂದೆ ಶ್ರೀಲೀಲಾ ಠುಕ್ ಆದ್ರಾ? ಅಸಲಿಗೆ ‘ಕಿಸ್ಸಿಕ್’ ಸಾಂಗ್ ಹೇಗಿದೆ ಎಂಬುದನ್ನು ಸ್ಯಾಮ್ ರಿಯಾಕ್ಟ್ ಮಾಡಿದ್ದಾರೆ.

    ಕಲರ್‌ಫುಲ್ ಸೆಟ್‌ನಲ್ಲಿ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕೊರಿಯೋಗ್ರಫಿ ಮಾಡಿದ್ದಾರೆ. ಪುಷ್ಪರಾಜ್ ಜೊತೆಗಿನ ಶ್ರೀಲೀಲಾ ಡ್ಯಾನ್ಸ್ ನೋಡುಗರಿಗೆ ಕಿಕ್ ಕೊಟ್ಟಿದೆ. ಈ ಸಾಂಗ್ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಡ್ಯಾನ್ಸ್?

    ಶ್ರೀಲೀಲಾ ಡ್ಯಾನ್ಸ್ ಸ್ಕಿಲ್ ನೋಡಿ ಸಮಂತಾ (Samantha) ರಿಯಾಕ್ಟ್ ಮಾಡಿದ್ದಾರೆ. ‘ಕಿಲ್ಲಿಂಗ್ ಇಟ್’ ಎಂದು ಕನ್ನಡತಿಯ ಡ್ಯಾನ್ಸ್ ಪ್ರತಿಭೆ ಸಮಂತಾ ಮೆಚ್ಚುಗೆ ಸೂಚಿಸಿದ್ದಾರೆ. ಶಾಂತವಾಗಿರಿ ಮತ್ತು ‘ಪುಷ್ಪ 2’ಗಾಗಿ ಕಾಯಿರಿ ಎಂದು ಫ್ಯಾನ್ಸ್‌ಗೆ ನಟಿ ಹೇಳಿದ್ದಾರೆ. ಒಟ್ನಲ್ಲಿ ‘ಕಿಸ್ಸಿಕ್’ ಸಾಂಗ್ ನಟಿಗೆ ಖುಷಿ ಕೊಟ್ಟಿರೋದಂತು ಗ್ಯಾರಂಟಿ.

     

    View this post on Instagram

     

    A post shared by Allu Arjun (@alluarjunonline)

    ಇನ್ನೂ ಅಲ್ಲು ಅರ್ಜುನ್, ರಶ್ಮಿಕಾ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ನಟನೆಯ ಸಿನಿಮಾ ಡಿ.5ಕ್ಕೆ ರಿಲೀಸ್ ಆಗಲಿದೆ. ಶ್ರೀಲೀಲಾ ಸ್ಪೆಷಲ್ ಸಾಂಗ್ ಕೂಡ ಚಿತ್ರಕ್ಕೆ ಪ್ಲಸ್ ಆದಂತಿದೆ. ಡಾಲಿ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.