Tag: Sreeleela

  • ಅನಾಥಾಶ್ರಮದ ಇಬ್ಬರು ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

    ಅನಾಥಾಶ್ರಮದ ಇಬ್ಬರು ಮಕ್ಕಳನ್ನು ದತ್ತು ಪಡೆದ ನಟಿ ಶ್ರೀಲೀಲಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರೀಲೀಲಾ ತಮ್ಮ ಉತ್ತಮ ನಟನೆಯ ಮೂಲಕವಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಅನಾಥಾಶ್ರಮ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕವಾಗಿ ಮಾನವೀಯತೆ ಮೆರೆದಿದ್ದಾರೆ.

    ಶ್ರೀಲೀಲಾ ಬೈ ಟು ಲವ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಈ ವೇಳೆ ಅವರು ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿದ್ದಾರೆ. ಆ ವೇಳೆ ಅವರಿಗೆ ಬೈ ಟು ಲವ್ ಚಿತ್ರದ ನಿರ್ದೇಶಕ ಹರಿ ಸಂತೋಷ್ ಕೂಡ ಸಾಥ್ ನೀಡಿದ್ದರು. ಅಲ್ಲಿನ ಮಕ್ಕಳ ಸ್ಥಿತಿಯನ್ನು ನೋಡಿ, ಕೇಳಿ ಇನ್ನಷ್ಟು ತಿಳಿದುಕೊಂಡು ಅವರು ಇಬ್ಬರು ಪುಟ್ಟ ಮಕ್ಕಳನ್ನು ದತ್ತು ಪಡೆದಿದ್ದಾರೆ. ಇದನ್ನೂ ಓದಿ: ತಮಿಳುನಾಡು ಸಿಎಂ ಮನೆಗೆ ಶಿವರಾಜ್‍ಕುಮಾರ್ ದಂಪತಿ ಭೇಟಿ

    10 ತಿಂಗಳ ಗುರು ಹಾಗೂ ಶೋಭಿತಾ ಎನ್ನುವ ಪುಟ್ಟ ಕಂದಮ್ಮನನ್ನು ದತ್ತು ಪಡೆದಿದ್ದಾರೆ. ಈ ವೇಳೆ ಅನಾಥಾಶ್ರಮದ ಮಕ್ಕಳಿಗೆ ತಿಂಡಿ ಕೂಡ ಹಂಚಿ, ಒಂದಷ್ಟು ಸಮಯ ಅವರ ಜೊತೆ ಕಳೆದಿದ್ದಾರೆ. ಮಕ್ಕಳ ಜೊತೆ ಡ್ಯಾನ್ಸ್ ಮಾಡಿ, ಮಾತನಾಡುತ್ತಾ ಕೆಲವು ಸಮಯವನ್ನು ಕಳೆದಿದ್ದಾರೆ. ಶಿಕ್ಷಣ, ನಟನೆ ಜೊತೆಗೆ ಶ್ರೀಲೀಲಾ ಸಾಮಾಜಿಕ ಕೆಲಸ ಮಾಡಲು ಮುಂದಾಗಿದ್ದಾರೆ. ಅರ್ಥಾತ್ ಅವರು ವಿಕಲಚೇತನ ಎರಡು ಪುಟ್ಟ ಮಕ್ಕಳನ್ನು ದತ್ತು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಫೇಮಸ್ ಸಾಂಗ್ ಹಾಡಿ ಗೌರವ ಸಲ್ಲಿಸಿದ ಸಲ್ಮಾನ್ – ವೀಡಿಯೋ ವೈರಲ್

  • ಒಳ್ಳೆಯ ಅವಕಾಶ ಸಿಗುವ ಟೈಂನಲ್ಲೇ ಬ್ರೇಕ್ ಪಡೆದುಕೊಂಡ ಶ್ರೀಲೀಲಾ

    ಒಳ್ಳೆಯ ಅವಕಾಶ ಸಿಗುವ ಟೈಂನಲ್ಲೇ ಬ್ರೇಕ್ ಪಡೆದುಕೊಂಡ ಶ್ರೀಲೀಲಾ

    ಬೆಂಗಳೂರು: ನಟಿ ಶ್ರೀಲೀಲಾ ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಇವರು ಒಬ್ಬರಾಗಿದ್ದಾರೆ. ಕಾಲ್‍ಶೀಟ್ ಪಡೆಯಲು ನಿರ್ಮಾಪಕರು ಕಾದು ಕುಳಿತುಕೊಳ್ಳುವ ಮಟ್ಟಿಗೆ ಶ್ರೀಲೀಲಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಆದರೆ ಇದೀಗ ಇವರು ಸಿನಿಮಾದಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಸಾಕಷ್ಟು ಸಿನಿಮಾ ಆಫರ್ ಶ್ರೀಲೀಲಾಳನ್ನು ಹುಡುಕಿ ಬರುತ್ತಿದೆ. ಒಳ್ಳೆಯ ಅವಕಾಶಗಳು ಸಿಗುವ ಸಮಯದಲ್ಲಿ ಶ್ರೀಲೀಲಾ ಯಾಕೆ ಬ್ರೇಕ್ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಸಿನಿಮಾ ಅವಕಾಶಗಳ ಮಧ್ಯೆ ತಮ್ಮ ಶಿಕ್ಷಣದ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ಈ ಕಾರಣಕ್ಕೆ ಶ್ರೀಲೀಲಾ ಸಿನಿಮಾ ಕೆಲಸ ತೊರೆದು ಶಿಕ್ಷಣದತ್ತ ಗಮನ ಹರಿಸೋಕೆ ಮುಂದಾಗಿದ್ದಾರೆ. ಶ್ರೀಲೀಲಾ ಎಂಬಿಬಿಎಸ್ ಪರೀಕ್ಷೆ ಬರೆಯೋಕೆ ಸಿದ್ಧರಾಗುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಹಲವು ಆಫರ್‍ಗಳು ಬರುತ್ತಿರುವ ಮಧ್ಯೆಯೂ ಶ್ರೀಲೀಲಾ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಇದಕ್ಕಾಗಿ ಅವರು ಮುಂಬೈಗೆ ತೆರಳಿದ್ದಾರೆ. ಈ ಕಾರಣಕ್ಕೆ ಶೂಟಿಂಗ್ ಕೆಲಸಕ್ಕೆ ಬ್ರೇಕ್ ನೀಡಿದ್ದಾರೆ. ಹೊಸ ಸಿನಿಮಾಗಳನ್ನು ಶಿಕ್ಷಣ ಪೂರ್ಣಗೊಂಡ ನಂತರವೇ ಒಪ್ಪಿಕೊಳ್ಳಬೇಕು ಎನ್ನುವ ನಿರ್ಧಾರ ಅವರದ್ದಾಗಿದೆ. ಇದನ್ನೂ ಓದಿ:  ಕರ್ನಾಟಕ ರತ್ನ ಅಪ್ಪು ಅಗಲಿ ನಾಳೆಗೆ 1 ತಿಂಗಳು- ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

    ಕಿಸ್ ಸಿನಿಮಾದ ಮೂಲಕವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಲೀಲಾ ಇದೀಗ ಟಾಲಿವುಡ್‍ನಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಇದೀಗ ಅವರು ಕೊಂಚ ಬ್ರೇಕ್ ಪಡೆದುಕೊಳ್ಳುತ್ತಿರುವುದು ಅವರ ವಿದ್ಯಾಭ್ಯಾಸಕ್ಕಾಗಿ ಆಗಿದೆ. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ

  • ಮತ್ತು ಬರಿಸುವಂತಿದೆ ಶ್ರೀಲೀಲಾ ಫೋಟೋ ಶೂಟ್

    ಮತ್ತು ಬರಿಸುವಂತಿದೆ ಶ್ರೀಲೀಲಾ ಫೋಟೋ ಶೂಟ್

    ಬೆಂಗಳೂರು: ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ ಮಾದಕ ನೋಟದಲ್ಲಿ ಮತ್ತು ಬರಿಸುತ್ತಿರುವ ಹಾಗೇ ಫೋಸ್ ಕೊಟ್ಟ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

    ಕಿಸ್, ಭರಾಟೆ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶ್ರೀಲೀಲಾ ಧ್ರುವ ಸರ್ಜಾ ಅಭಿನಯದ ದುಬಾರಿ ಚಿತ್ರದಲ್ಲೂ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಸ್ಯಾಂಡಲ್‍ವುಡ್ ಬ್ಯೂಟಿಗೆ ಟಾಲಿವುಡ್‍ನಲ್ಲೂ ನಟಿಸುವ ಅವಕಾಶ ಸಿಕ್ಕಿದ್ದೂ, ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

     

    View this post on Instagram

     

    A post shared by Sreeleela (@sreeleela14)

    ಲಾಕ್‍ಡೌನ್ ಇರುವುದರಿಂದ ಸಿನಿಮಾ ಚಿತ್ರೀಕರಣ ಸ್ಥಗಿತವಾಗಿರುವುದರಿಂದ ನಟಿ ಫೋಟೋ ಶೂಟ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಾ ಪಡ್ಡೆ ಹುಡುಗರ ಮನಸ್ಸನ್ನು ಕದಿಯುತ್ತಿದ್ದಾರೆ. ಶ್ರೀಲೀಲಾ ತನ್ನದೇ ಆಗಿರುವ ಅಭಿಮಾನಿಬಳಗವನ್ನು ಹೊಂದಿದ್ದಾರೆ. ಇದನ್ನೂ ಓದಿ: ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

     

    View this post on Instagram

     

    A post shared by Sreeleela (@sreeleela14)

    ಪೆಳ್ಳಿಸಂದದಿ ಎಂಬ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಈ ಚಿತ್ರ ಲಿರಿಕಲ್ ವಿಡಿಯೋ ಹಾಡು ಇತ್ತೀಚೆಗಷ್ಟೆ ರಲೀಸ್ ಆಗಿದೆ. ಸಿನಿಮಾಗಳ ಜತೆಗೆ ಶ್ರೀಲೀಲಾ ಫೋಟೋಶೂಟ್‍ಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಟಿ ಶ್ರೀಲೀಲಾ ಅವರ ಲೆಟೆಸ್ಟ್ ಫೋಟೋ ಶೂಟ್‍ನ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  • ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಹಾಡಿನ ಕಿಸ್!

    ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಹಾಡಿನ ಕಿಸ್!

    ಬೆಂಗಳೂರು: ಈವರೆಗೆ ಬಿಡುಗಡೆಯಾಗಿರೋ ಎ.ಪಿ ಅರ್ಜುನ್ ನಿದೇಶನದ ಕಿಸ್ ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳೋ ಮೂಲಕ ದಾಖಲೆಯನ್ನೂ ಬರೆದಿವೆ. ಇನ್ನೇನು ಕಿಸ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಅನಾವರಣಗೊಂಡಿದೆ. ಎಲ್ಲ ಥರದ ವಿರಹದ ನೋವಿನ ಆತ್ಮನಿವೇದನೆಯಂತಿರೋ ಈ ಹಾಡೂ ಕೂಡಾ ಇದುವರೆಗೆ ಬಂದಿರೋ ಹಾಡುಗಳಂತೆಯೇ ಹಿಟ್ ಆಗೋ ಹಾದಿಯಲ್ಲಿ ಮುಂದುವರೆಯುತ್ತಿದೆ. ಇದರೊಂದಿಗೇ ಎ.ಪಿ ಅರ್ಜುನ್ ಪ್ರೀತಿಯಲ್ಲಿ ಸೋತ ಹೃದಯಗಳಿಗೆಲ್ಲ ಕಿಸ್ ಕೊಟ್ಟು ಸಮಾಧಾನಿಸಿದ್ದಾರೆ!

    ಅಷ್ಟಕ್ಕೂ ನಿರ್ದೇಶಕ ಎ.ಪಿ ಅರ್ಜುನ್ ಪ್ರೀತಿಯ ನವಿರು ಭಾವಗಳನ್ನು ಸೊಗಸಾದ ಕಥೆಗಳ ಮೂಲಕ ಕಟ್ಟಿಕೊಡುವಲ್ಲಿ ಸಿದ್ಧಹಸ್ತರು. ಅಂಬಾರಿಯಿಂದ ಇಲ್ಲಿಯವರೆಗೂ ಅರ್ಜುನ್ ನಿರ್ದೇಶನ ಮಾಡಿರೋ ಚಿತ್ರಗಳೆಲ್ಲವೂ ಪ್ರೀತಿಯ ಪುಳಕ ಹೊದ್ದ ಕಥೆಗಳ ಮೂಲಕವೇ ಗೆದ್ದಿವೆ. ಇದೀಗ ಅವರು ನಿರ್ದೇಶನ ಮಾಡಿ ಬಿಡುಗಡೆಗೆ ರೆಡಿಯಾಗಿರೋ ಕಿಸ್ ಕೂಡಾ ಪ್ರೇಮದ ಮತ್ತೊಂದು ಮಜಲಿನ ಕಥಾನಕ. ಅದರ ಪ್ಯಾಥೋ ಶೈಲಿಯ ಹಾಡೀಗ ಎಲ್ಲರ ಮನಸಿಗೂ ಕಿಸ್ ಕೊಟ್ಟಿದೆ. ಈ ಹಾಡನ್ನು ಅರ್ಜುನ್ ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಅರ್ಪಿಸಿದ್ದಾರೆ.

    ಎ.ಪಿ. ಅರ್ಜುನ್ ಅವರೇ ಬರೆದಿರೋ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಧ್ವನಿಯಲ್ಲಿ ಮೂಡಿ ಬಂದಿರೋ ಕಣ್ಣ ನೀರಿದು ಜಾರುತಾ ಇದೆ ನೀನು ಇಲ್ಲದೆ ತುಂಬ ನೋವಾಗಿದೆ ಎಂಬ ಲಿರಿಕಲ್ ವೀಡಿಯೋ ಸಾಂಗ್ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಸದರಿ ಪ್ಯಾಥೋ ಮೂಡಿನ ಹಾಡಿಗೆ ಯೂಟ್ಯೂಬ್‍ನಲ್ಲಿ ವ್ಯಾಪಕ ಮೆಚ್ಚುಗೆ, ವೀಕ್ಷಣೆಗಳು ಸಿಗುತ್ತಿವೆ. ವೇಗವಾಗಿ ಹೆಚ್ಚು ಹೆಚ್ಚು ವೀವ್ಸ್ ಪಡೆಯುತ್ತಲೇ ಈ ಹಿಂದಿನ ಹಾಡುಗಳ ದಾಖಲೆಗಳನ್ನು ಬೀಟ್ ಮಾಡೋ ಆವೇಗದೊಂದಿಗೆ ಸಾಗುತ್ತಿದೆ. ಅಂದಹಾಗೆ ಕಿಸ್ ಚಿತ್ರ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.

  • ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

    ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

    ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ರೊಮ್ಯಾಂಟಿಕ್ ಹಾಡುಗಳೊಂದಿಗೆ ಬಹುನಿರೀಕ್ಷಿತ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ತಡವಾದಷ್ಟೂ ಕಾತರವನ್ನು ಹೆಚ್ಚಾಗಿಸುತ್ತಿರೋ ಈ ಸಿನಿಮಾ ಇದೀಗ ಬಿಡುಗಡೆಯ ನಿರ್ಣಾಯಕ ಹಂತ ತಲುಪಿಕೊಂಡಿದೆ. ಅದರ ಭಾಗವಾಗಿ ಚೆಂದದ್ದೊಂದು ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ರೆಡಿಯಾಗಿದೆ. ಈ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಪ್ರೀತಿಯಿಂದ ಬಿಡುಗಡೆ ಮಾಡಲಿದ್ದಾರೆ.

    ಇದೇ ಶುಕ್ರವಾರ, 23ನೇ ತಾರೀಕಿನಂದು ರಾಕಿಂಗ್ ಸ್ಟಾರ್ ಯಶ್ ಕಿಸ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಯಶ್ ಬಹು ಕಾಲದ ಸ್ನೇಹಿತರು. ಈ ಸೆಳೆತದಿಂದಲೇ ತಮ್ಮ ಬ್ಯುಸಿಯಾದ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ಕಿಸ್ ಟ್ರೇಲರ್ ಲಾಂಚ್ ಮಾಡಲು ಅವರೊಪ್ಪಿಕೊಂಡಿದ್ದಾರೆ. ಈ ಮೂಲಕವೇ ಕಿಸ್ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತೆಯೂ ಆಗಿದೆ. ಕಿಸ್ ಈವರೆಗೂ ಸೃಷ್ಟಿಸಿರೋ ಕ್ರೇಜ್ ಕಂಡು ಯಶ್ ಸಂತಸಗೊಂಡಿದ್ದಾರಂತೆ.

    ವಿರಾಟ್ ಮತ್ತು ಶ್ರೀಲೀಲಾ ಕಿಸ್‍ನಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿರೋ ಶೀಲ ಸುಶೀಲ ಯೂ ಡೋಂಟುವರಿ ಎಂಬ ಹಾಡಂತೂ ಈ ಕ್ಷಣಕ್ಕೂ ಟ್ರೆಂಡಿಂಗ್‍ನಲ್ಲಿದೆ. ಆ ನಂತರ ಬಂದಿರೋ ಹಾಡುಗಳೂ ಕೂಡಾ ಮಿಲಿಯನ್ನುಗಟ್ಟಲೆ ವೀವ್ಸ್‍ನೊಂದಿಗೆ ದಾಖಲೆ ಬರೆದಿವೆ. ಆದರೆ ಈ ಸಿನಿಮಾದ ಕಥೆ ಏನಿರಬಹುದೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದು ಕೊಂಡಿದೆ. ಶುಕ್ರವಾರ ಯಶ್ ಬಿಡುಗಡೆಗೊಳಿಸಲಿರೋ ಟ್ರೇಲರ್‍ನಲ್ಲಿ ಅದರ ಸಿಳಿವಿರಬಹುದಾ? ಅಥವಾ ಆ ಮೂಲಕವೇ ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗುವಂತೆ ಈ ಟ್ರೇಲರ್ ಅನ್ನು ರೂಪಿಸಿದ್ದಾರಾ ಅನ್ನೋದೆಲ್ಲ ಜಾಹೀರಾಗಲು ಇನ್ನೊಂದು ದಿನ ಕಾಯಬೇಕಿದೆಯಷ್ಟೆ!