Tag: Sreeleela

  • ಸ್ಟಾರ್ ನಟಿಯರ ತೆರೆ ಹಿಂದಿನ ಕಹಾನಿ : ಡ್ರಗ್ಸು, ಸೆಕ್ಸ್, ಪ್ರೀತಿ, ಗೀತಿ ಇತ್ಯಾದಿ

    ಸ್ಟಾರ್ ನಟಿಯರ ತೆರೆ ಹಿಂದಿನ ಕಹಾನಿ : ಡ್ರಗ್ಸು, ಸೆಕ್ಸ್, ಪ್ರೀತಿ, ಗೀತಿ ಇತ್ಯಾದಿ

    ಬ್ಬೊಬ್ಬರದ್ದು ಒಂದೊಂದು ಕತೆ. ಈ ಹೀರೋಯಿನ್ ಗಳಿಗೆ ಯಾರಾದರೊಬ್ಬರು ಕಿರಿಕ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಇವರೆಲ್ಲ ಕಣ್ಣೀರು ಸುರಿಸುತ್ತಿರುತ್ತಾರೆ. ಪುರುಷ ಪ್ರಧಾನ ಬಣ್ಣದ ಲೋಕದಲ್ಲಿ ಇದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಹೆಣ್ಣನ್ನು ಒಂದು ರೀತಿ ನೋಡುವುದೇ ಪುರುಷರ ಸಂಪ್ರದಾಯ. ಆದರೂ ಹೀರೋಯಿನ್ಸ್ ಹೋರಾಟ ಮಾಡುತ್ತಿದ್ದಾರೆ. ಏನಾಯಿತೀಗ ಚಾಲ್ತಿಯಲ್ಲಿರುವ ನಾಯಕಿಯರಿಗೆ? ಅದ್ಯಾವ ಕಂಟಕ ಎದುರಾಗಿದೆ? ಇಲ್ಲಿದೆ ಸ್ಟೋರಿ.

    ಶ್ರೀಲೀಲಾ 

    ಶ್ರೀಲೀಲಾ (Sreeleela) ಕೆಲವು ವರ್ಷಗಳ ಹಿಂದೆ ಅವಕಾಶಕ್ಕಾಗಿ ಒದ್ದಾಡುತ್ತಿದ್ದ ಈ ಕನ್ನಡತಿ ಈಗ ಟಾಲಿವುಡ್‌ನಲ್ಲಿ ಎದ್ವಾತದ್ವಾ ಬ್ಯುಸಿ. ಕೈಯಲ್ಲಿ ಎಂಟು ಹತ್ತು ಸಿನಿಮಾಗಳಿವೆ. ಸ್ಟಾರ್ ಹೀರೋಸ್ ಈಕೆಯ ಕಾಲ್‌ಶೀಟ್‌ಗೆ ಕಾಯುತ್ತಿದ್ದಾರೆ. ಇಷ್ಟಿದ್ದರೂ ಗೊಳೋ ಎನ್ನುವಂತಾಗಿದೆ ಶ್ರೀಲೀಲಾ ಬದುಕು. ಕಾರಣ ಪ್ರಿನ್ಸ್ ಮಹೇಶ್ ಬಾಬು ನಾಯಕನಾಗಿರುವ ಗುಂಟೂರು ಖಾರಂ ಸಿನಿಮಾಕ್ಕೆ ಸೆಕೆಂಡ್ ಹೀರೋಯಿನ್ ಆಗಿದ್ದ ಇವರು, ಅದೇ ಸ್ಥಾನದಲ್ಲಿ ಮುಂದುವರೆಯಬೇಕಾಗಿದೆ. ಫಸ್ಟ್ ಹೀರೋಯಿನ್ ಜಾಗದಲ್ಲಿ ಮೀನಾಕ್ಷಿ ಚೌಧರಿ ಕುಲುಕುಲು.

    ಪೂಜಾ ಹೆಗಡೆ ಫಸ್ಟ್ ಹೀರೋಯಿನ್ ಆಗಿದ್ದರು.  ಖಬರಿದಲ್ಲದ ಕಾರಣಗಳಿಂದ ಎದ್ದು ಹೋದರು. ಎರಡನೇ ನಾಯಕಿಯಾಗಿದ್ದ ಶ್ರೀಲೀಲಾಗೆ ಮೊದಲ ನಾಯಕಿ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಪ್ರಿನ್ಸ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ಇಬ್ಬರೂ ಸೇರಿ ಲೀಲಾ ನೀನು ಬಾಲಂಗೋಚಿಯಾಗಿರು, ಮೀನಾಕ್ಷಿ ಪಟವಾಗಲಿ ಎಂದರು. ಫಿನಿಶ್, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಶ್ರೀಲೀಲಾಗೆ. ಪಾಲಿಗೆ ಬಂದದ್ದು ಪಂಚಾಮೃತ. ಅದೇ ಕಿಸ್ ಬೆಡಗಿ ಹಾಲಿ ವ್ರತ.

    ತಮನ್ನಾ

    ತಮನ್ನಾ (Tamannaah) ನಟಿಸಿರುವ ಲಸ್ಟ್ ಸ್ಟೋರೀಸ್ ವೆಬ್ ಸೀರೀಸ್ ಓಟಿಟಿ ಬಿಡುಗಡೆಗೆ ಒಂದು ದಿನ ಬಾಕಿ. ಪ್ರಚಾರ ಭರ್ಜರಿಯಾಗಿದೆ. ಆದರೆ ಈಗಾಗಲೇ ಹೊರ ಬಿದ್ದಿರುವ ಇದರ ಟ್ರೈಲರ್ ನೋಡಿದವರು ಮಿಲ್ಕಿಬ್ಯೂಟಿಗೆ ಎಲೆ ಅಡಿಕೆ ಹಾಕಿಕೊಂಡು ಕ್ಯಾಕರಿಸುತ್ತಿದ್ದಾರೆ. ವರ್ಷದ ಹಿಂದೆ ಲಿಪ್‌ಲಾಕ್ ಮಾಡೋಕೆ ನಾಚಿ ನೀರಾಗುತ್ತಿದ್ದ ಈ ಚೆಲುವೆ ಈಗ ಕೆಂಗೇರಿ ನೀರಿನಲ್ಲೂ ಜಳಕ ಮಾಡಲು ಹಿಂಜರಿಯುತ್ತಿಲ್ಲ. ಸಬ್ ಪೈಸಾ ಕಾ ಮಾಮ್ಲಾ ಹೈ ಎನ್ನುತ್ತಿದ್ದಾರೆ ಆಕೆಯ ಫ್ಯಾನ್ಸು.

    ಈ ವೆಬ್ ಸೀರೀಸ್‌ನಲ್ಲಿ ತಮನ್ನಾ ಬರೀ ಲಿಪ್‌ಲಾಕ್ ಮಾತ್ರ ಮಾಡಿಲ್ಲ. ಬೆಡ್‌ರೂಮ್ ದೃಶ್ಯಗಳಲ್ಲಿ ಬೆದರಿಲ್ಲ, ಬೆಂಡಾಗಿಲ್ಲ. ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜತೆ ಕೆನೆದು ಕುಣಿದಿದ್ದಾಳೆ. `ನಮ್ಮ ಸಂಸ್ಕೃತಿಗೆ ನೀನೊಂದು ಕಪ್ಪು ಚುಕ್ಕೆ. ದುಡ್ಡಿಗಾಗಿ ಸೀ ಗ್ರೇಡ್ ನಟಿಯಾದೆಯಾ?’ ಹೀಗಂತ ಜನರು ಎಣ್ಣೆ ಇಲ್ಲದೆ ಒಗ್ಗರಣೆ ಹಾಕುತ್ತಿದ್ದಾರೆ. ಯಾರು ಏನೆಂದರೆ ನಂಗೇನು ? ಜಮಾನಾ ಬದಲ್ ಗಯಾ ಹೈ. ನಾನೂ ಬದಲಾಗಿದ್ಧೇನೆ ಎನ್ನುವುದು ತಮನ್ನಾ ಸಿಂಗಲ್ ಸ್ಲೋಗನ್ನು.

    ಶ್ರುತಿ ಹಾಸನ್ 

    ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ (Shruti Haasan) ಮತ್ತೆ ಹೆದ್ದಾರಿಯಲ್ಲಿ ಬಂದು ನಿಂತಿದ್ದಾರೆ. ನಟ ಸಿದ್ಧಾರ್ಥ್ ಜೊತೆ ಸಂಬಂಧ ಮುರಿದುಕೊಂಡ ಮೇಲೆ ಇನ್ನೊಬ್ಬನ ಜೊತೆ ಡಿಂಗ್‌ಡಾಂಗ್ ಮಾಡುತ್ತಿದ್ದರು. ಈಗ ಶಂತನು ಹಜಾರಿಕಾ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ವಿಷಯ ಅದಲ್ಲ, ಈಕೆ ನಿತ್ಯ ಬಾಯ್‌ಫ್ರೆಂಡ್ ಕಮ್ ಅನಧಿಕೃತ ಗಂಡನ ಜೊತೆ ಡ್ರಗ್ಸ್ (Drugs) ಏರಿಸುತ್ತಾಳೆ. ಅದಕ್ಕಾಗಿ ಡಿಪ್ರೆಶನ್‌ಗೆ ಹೋಗಿ ಹೊರಬರಲು ಮಾತ್ರೆ ನುಂಗುತ್ತಿದ್ದಾಳೆ. ಅಷ್ಟೆ ಅಲ್ಲ, ಶ್ರುತಿ ಪಕ್ಕಾ ಸೈಕೋ. ಹೀಗಂದಿದ್ದಾನೆ ದುಬೈ ಬಾಬಾ.

    ಡ್ರಗ್ಸು, ಡಿಪ್ರೆಶನ್ನು, ಮಾತ್ರೆ, ಸೈಕೋ… ಈ ಆರೋಪಗಳನ್ನು ಮಾಡಿದ್ದಾನೆ ದುಬೈನಲ್ಲಿ ಕುಂತಿರುವ ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು. ಈ ಹಿಂದೆ ಪ್ರಭಾಸ್, ಸಮಂತಾ ಬಗ್ಗೆಯೂ ನಾಲಿಗೆ ಅಲ್ಲಾಡಿಸಿದ್ದ. ಈಗ ಶ್ರುತಿ ಹಿಂದೆ ಬಿದ್ದಿದ್ದಾನೆ. ಇದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಗೊತ್ತಿಲ್ಲ. ಒಟ್ಟಿನಲ್ಲಿ ಶ್ರುತಿ ಹಾಸನ್ ಜೀವನ ಇದೇ ಆಗಿದ್ದರೆ, ಕಮಲ್ ಹಾಸನ್ ಜೀವನ ಪಾವನ ಆದಂಗೇಯಾ.

    ಆಸಿನ್

    ಅದೊಂದು ಕಾಲದ ಸ್ಟಾರ್ ನಟಿ ಆಸಿನ್ (Asin) ಬದುಕಲ್ಲಿ ಬಿರುಗಾಳಿ ಎದ್ದಿದೆಯಾ? ಏಳೆಂಟು ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿ ಸಿಇಓ ರಾಹುಲ್ ಶರ್ಮಾ ಜೊತೆ ಹಸೆಮಣೆ ಏರಿದ ಮೇಲೆ ನಾಪತ್ತೆಯಾಗಿದ್ದ ಈಕೆ ನಿಜಕ್ಕೂ ಗಂಡನಿಗೆ ಡಿವೋರ್ಸ್ (Divorce) ಕೊಡಲಿದ್ದಾರಾ? ಇಷ್ಟು ವರ್ಷವಾದರೂ ಮಕ್ಕಳಾದ ಸುದ್ದಿ ಬಂದಿಲ್ಲ. ಬಣ್ಣದ ಲೋಕ ಆಕೆ ಕಡೆ ಕಣ್ಣೆತ್ತಿ ನೋಡುತ್ತಿಲ್ಲ. ಹೀಗಿದ್ದರೂ ಯಾಕೆ ಆಸಿನ್ ಬದುಕನ್ನು ರಾಡಿ ಮಾಡಿಕೊಂಡರು? ಉತ್ತರ ಸಸ್ಪೆನ್ಸ್ ಆಫ್ ಬಾಲಿವುಡ್. ಆಸಿನ್ ಬೇರೆ ಯಾರೂ ಅಲ್ಲ, ಅಮೀರ್ ಗಜನಿ ಬೆಡಗಿ.

    ಮಲಯಾಳಂ ಮೂಲದ ಆಸಿನ್ ನಂತರ ತಮಿಳು, ತೆಲುಗು ಹಾಗೂ ಬಾಲಿವುಡ್‌ನಲ್ಲಿ ಹೆಸರು ಮಾಡಿದರು. ಅಮೀರ್ ಖಾನ್ ಅಭಿನಯದ ಗಜನಿ ಹೆಸರು ತಂದಿತು. ಎಂಟು ವರ್ಷಗಳ ಹಿಂದೆ ಆಲ್ ಈಸ್ ವೆಲ್ ಸಿನಿಮಾ ನಂತರ ಹೊಸಿಲು ದಾಟಲಿಲ್ಲ. ಅಕ್ಕಿ ಸೇರು ಒದ್ದು ಬಾಗಿಲು ಹಾಕಿಕೊಂಡಿದ್ದೇ ಕೊನೆ. ಈಗ ಅದೇ ರಾಹುಲ್‌ಗೆ ಸೋಡಾ ಚೀಟಿ ಕೊಡಲು ತುದಿಗಾಲಲ್ಲಿ ನಿಂತಿದ್ಧಾರಂತೆ. ಬಣ್ಣದ ಮಂದಿ ಜೀವನ ಬೆಲ್ಲ ಇಲ್ಲದ ಹೂರಣ. ಎರಡೂ ಒಂದೇನಾ? ನೀವೇ ಡಿಸೈಡ್ ಮಾಡ್ರಪ್ಪಾ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್‌ನಿಂದ ಬಿಗ್‌ ಆಫರ್‌ ಬಂದಿದ್ದಕ್ಕೆ ಹತ್ತಿದ ಏಣಿಯನ್ನೇ ಮರೆತ್ರಾ ಪೂಜಾ ಹೆಗ್ಡೆ?

    ಬಾಲಿವುಡ್‌ನಿಂದ ಬಿಗ್‌ ಆಫರ್‌ ಬಂದಿದ್ದಕ್ಕೆ ಹತ್ತಿದ ಏಣಿಯನ್ನೇ ಮರೆತ್ರಾ ಪೂಜಾ ಹೆಗ್ಡೆ?

    ಪೂಜಾ ಹೆಗ್ಡೆ (Pooja hegde) ವಾರದಿಂದ ಸುದ್ದಿಯಲ್ಲಿದ್ದಾರೆ. ಒಂದೇ ಸಿನಿಮಾ ಬಿಟ್ಟು ಹೊರ ಬಂದಿದ್ದೇ ಕಾರಣ. ಸತತ ಸೋಲಿನಿಂದ ಒದ್ದಾಡುತ್ತಿರುವ ಪೂಜಾ ‘ಗುಂಟೂರು ಖಾರಂ’ನಿಂದ ದೂರವಾದರು. ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಕಳೆದುಕೊಂಡರು. ಇದಕ್ಕೆಲ್ಲ ಯಾವ್ಯಾವುದೋ ಕಾರಣ ಎನ್ನುವ ಖಬರ್ ಹರಡಿತು. ಆದರೆ ಅಸಲಿಗೆ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಇದಕ್ಕೆ ಮೂಲ ಹೂರಣ ಎನ್ನುವ ಮಾತು ಹೊಗೆಯಾಡುತ್ತಿದೆ. ಯಾಕಾಗಿ ಪೂಜಾ ಖಾರ ತಿನ್ನಲು ಒಲ್ಲೆ ಎಂದರು? ಬಾಲಿವುಡ್ ನಿರ್ದೇಶಕನ ಸ್ಕೆಚ್ ಮತ್ತೇನು?

    ಪೂಜಾ ಹೆಗ್ಡೆ ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ಹಿಟ್ ಕೊಟ್ಟಿಲ್ಲ. ಟಾಪ್ ಸ್ಟಾರ್‌ಗಳ ಜೊತೆ ಕುಣಿದರೂ ಜನರು ಕ್ಯಾರೇ ಎನ್ನಲಿಲ್ಲ. ಒಂದಾದರೂ ಹಿಟ್ ಕೊಡಬೇಕು…ಇದನ್ನೇ ಜಪ ಮಾಡಿದರೂ ದೇವರು ಆಶೀರ್ವಾದ ಮಾಡಲಿಲ್ಲ. ಇದೇ ಹೊತ್ತಲ್ಲಿ ಮಹೇಶ್ ಬಾಬು ಜೊತೆ ಗುಂಟೂರು ಖಾರಂ ಸಿನಿಮಾಕ್ಕೆ ಬುಲಾವ್ ಬಂದಿತು. ಆದರೆ ಅದು ತಡವಾಯಿತು. ಪೂಜಾ ಕೊಟ್ಟ ಡೇಟ್ಸ್ ಮುಗಿಯಿತು. ಪೂಜಾ ಔಟ್ ಆದರು. ಆ ಜಾಗಕ್ಕೆ ಅದೇ ಚಿತ್ರಕ್ಕೆ ಸೆಕೆಂಡ್ ಹೀರೋಯಿನ್ ಆಗಿದ್ದ ಕನ್ನಡದ ಶ್ರೀಲೀಲಾ ಪವಡಿಸಿ ಪಕಪಕ ನಕ್ಕರು. ಆದರೆ ಪೂಜಾ ಆ ಚಿತ್ರದಿಂದ ಹೊರ ಬೀಳಲು ಅಸಲಿ ಕಾರಣ ಇದ್ಯಾವುದೂ ಅಲ್ಲ, ಬಾಲಿವುಡ್ ಡೈರೆಕ್ಟರ್ ಕರಣ್‌ಜೋಹರ್ ಅನ್ನೋದು ಗಿಚ್ಚಿ ಗಿಲಿಗಿಲಿ.

    ಬಾಲಿವುಡ್‌ನಲ್ಲಿ ಪೂಜಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದ್ಯಾವುದೂ ಹೇಳಿಕೊಳ್ಳುವ ಹೆಸರು ತರಲಿಲ್ಲ. ಖುದ್ದು ಸಲ್ಮಾನ್ ಖಾನ್ ಜೊತೆ ಕುಣಿದ ಕಿಸಿ ಕಾ ಭಾಯಿ ಕಿಸಿ ಕೀ ಜಾನ್ ಕೂಡ ಮಕಾಡೆ ಮಲಗಿತು. ಟಾಲಿವುಡ್‌ನಲ್ಲಿ ಗುಂಟೂರು ಖಾರಂ ಮಾತ್ರ ಕೈಯಲ್ಲಿತ್ತು. ನಿರ್ದೇಶಕ ತ್ರಿವಿಕ್ರಮ್ ಸ್ಕ್ರೀಪ್ಟ್ ಚೇಂಜ್ ಮಾಡಿದ್ದು, ಪೂಜಾ ಪಾತ್ರಕ್ಕೆ ಕತ್ತರಿ ಹಾಕಿದ್ದು, ಶ್ರೀಲೀಲಾಗೆ (Sreeleela) ರತ್ನಗಂಬಳಿ ಹಾಸಿದ್ದಾರೆ. ಬಳಿಕ ಪೂಜಾ ಚಿತ್ರದಿಂದ ಹೊರನಡೆದಿದ್ದಾರೆ. ಅದಕ್ಕೆ ‘ನೀನು ಬ್ಯಾಡ ನಿನ್ ಸಿನಿಮಾನೂ ಬ್ಯಾಡʼ ಅಂತ ಸ್ವಾಟೆ ತಿರುವಿ ಎದ್ದು ಬಂದರಂತೆ. ಇದೇ ನಿಜವಾ ಅಥವಾ ಬೇರೆ ಯಾರಾದರೂ ಊದಿನ ಕಡ್ಡಿ ಹಚ್ಚಿದರಾ? ಆಗ ಕರಣ್ ಕುಲುಕುಲು ನಗುತ್ತಾ ಬಂದರಲ್ಲಾ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ಕರಣ್ ಜೋಹರ್ (Karan Johar) ಬಾಲಿವುಡ್‌ನ ದೊಡ್ಡ ಹೆಸರು. ಅವರದೇ ಬ್ಯಾನರ್‌ನ ಎರಡು ಸಿನಿಮಾಗಳಿಗೆ ಪೂಜಾರನ್ನು ಬುಕ್ ಮಾಡಿದ್ದಾರಂತೆ. ಕಾಲಿವುಡ್, ಟಾಲಿವುಡ್‌ಗೆ ಮಾರೋ ಗೋಲಿ…ಬಾಲಿವುಡ್‌ನಲ್ಲಿ ಆಡು ಬಾ ಹೋಳಿ ಹೀಗೆ ಎರಡೂ ಕೈಗಳಿಂದ ಅಪ್ಪಿಕೊಂಡಿದ್ದಾರೆ. ನಾಲ್ಕು ಸಿನಿಮಾ ಗೋತಾ ಹೊಡೆದ ಸುಸ್ತಿನಲ್ಲಿದ್ದ ಪೂಜಾಗೆ ಕರಣ್ ಕಣ್ಣಲ್ಲಿ ಐರನ್ ಕಂಟೆಂಟ್ ಇರುವ ಕರಿಬೇವಿನ ಸೊಪ್ಪು ಕಾಣಿಸಿದೆ. ಫಲಿತಾಂಶ…ಟಾಲಿವುಡ್‌ಗೆ ಟಾಟಾ…ಬಾಲಿವುಡ್‌ನಲ್ಲಿ ಆಟ. ಜಸ್ಟ್ ಆರಂಭ. ಹತ್ತಿದ ಏಣಿ ಒದ್ದಿರುವ ಡಸ್ಕಿ ಬ್ಯೂಟಿಗೆ ಬಾಲಿವುಡ್ ಮಾವಿನ ಹಣ್ಣು ತಿನ್ನಿಸುತ್ತಾ ಅಥವಾ ಹಸಿ ಹಾಗಲಕಾಯಿ ಹಸಿಹಸಿಯಾಗಿಯೇ ಮುಕ್ಕಿಸುತ್ತಾ? ನೋಡೋಣ. ಇದೀಗ ಬಾಲಿವುಡ್‌ನಲ್ಲಿನ ಆಫರ್‌ಗೆ ಅವಕಾಶ ಕೊಟ್ಟ ಟಾಲಿವುಡ್‌ ಅನ್ನೇ ಪೂಜಾ ಮರೆತ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

  • ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

    ಮಹೇಶ್ ಬಾಬು ಚಿತ್ರದಿಂದ ಪೂಜಾ ಹೆಗ್ಡೆ ಕಿಕ್ ಔಟ್- ತ್ರಿಷಾ ಇನ್?

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಅವರ ನಟನೆಯ ಸಾಲು ಸಾಲು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿದೆ. ಹೀಗಿರುವಾಗ ಮಹೇಶ್ ಬಾಬು (Mahesh Babu) ನಟನೆಯ ಮುಂದಿನ ಸಿನಿಮಾ ‘ಗುಂಟೂರು ಖಾರಂ’ ಪ್ರಾಜೆಕ್ಟ್‌ನಿಂದ ಪೂಜಾ ಹೆಗ್ಡೆ ಹೊರಬಂದಿದ್ದಾರೆ.

    ರಶ್ಮಿಕಾ, ಶ್ರೀಲೀಲಾ (Sreeleela) ಬಂದ ಮೇಲೆ ಪೂಜಾ ಹೆಗ್ಡೆಗೆ ಸೋಲು ಶುರುವಾಗಿದೆ. ಒಂದ್ ಕಡೆ ಸಿನಿಮಾ ಆಯ್ಕೆಯ ವಿಚಾರದಲ್ಲಿ ಸೋತರೆ, ಮತ್ತೊಂದೆಡೆ ಮಾಡಿದ ಸಿನಿಮಾವೆಲ್ಲಾ ಸೋಲುತ್ತಿದೆ. ಇತ್ತೀಚಿಗೆ ಸಲ್ಮಾನ್ ಖಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅದ್ದೂರಿ ಎಂಟ್ರಿ ಕೊಟ್ಟಿದ್ದರು. ಆದರೂ ಬಾಲಿವುಡ್‌ನಲ್ಲೂ ಲಕ್ ಇಲ್ಲದೇ ಆಯ್ತು. ಆದ್ರೂ ಅವರಿಗೆ ಅವಕಾಶಗಳೇನು ಕಮ್ಮಿಯಾಗುತ್ತಿಲ್ಲ. ಐರೆನ್ ಲೆಗ್ ಅಂತಾ ಹೆಸರು ಬರುವ ಮುನ್ನವೇ ಅವರಿಗೆ ಗೆಲುವಿನ ಅವಶ್ಯಕತೆಯಿದೆ.

    ‘ಗುಂಟೂರು ಖಾರಂ’ ಸಿನಿಮಾ ಶೂಟಿಂಗ್ ಪದೇ ಪದೇ ತಡವಾಗುತ್ತಿದೆ. ಚಿತ್ರಕಥೆಯಲ್ಲಿ ಬದಲಾವಣೆ ಮಾಡುತ್ತಿದ್ದು ಬರುವ ಸಂಕ್ರಾಂತಿಗೂ ಸಿನಿಮಾ ರಿಲೀಸ್ ಆಗಲ್ಲ ಎನ್ನುವ ವಾದ ಶುರುವಾಗಿದೆ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ಪೂಜಾ ಹೆಗ್ಡೆಗೆ ಈಗ ಡೇಟ್ಸ್ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಈ ಚಿತ್ರಕ್ಕಾಗಿ ಕಾಲ್‌ಶೀಟ್ ಕೊಟ್ಟಿದ್ದರು. ಆದರೆ ಈವರೆಗೆ ಚಿತ್ರೀಕರಣ ಮುಗಿದಿಲ್ಲ. ಈ ವರ್ಷ ಜೂನ್‌ನಿಂದ ಡಿಸೆಂಬರ್‌ವರೆಗೆ ಬೇರೆ ಸಿನಿಮಾಗಳಿಗೆ ಕಾಲ್‌ಶೀಟ್ ಕೊಟ್ಟಿದ್ದಾರಂತೆ. ಆ ಸಿನಿಮಾಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮಹೇಶ್ ಬಾಬು ಚಿತ್ರದಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಶೂಟ್‌ ಮಾಡಿದ ಭಾಗ ಮಹೇಶ್‌ ಬಾಬು ಅವರಿಗೆ ತೃಪ್ತಿ ಸಿಗದ ಕಾರಣ ಮತ್ತೊಮ್ಮೆ ರೀ-ಶೂಟ್‌ ಮಾಡಲಾಗುತ್ತಿದೆ. ಹಾಗಾಗಿ ಡೇಟ್‌ ಸಮಸ್ಯೆಯಿಂದ ಪೂಜಾ ಸಿನಿಮಾಗೆ ಬೈ ಬೈ ಹೇಳಿದ್ದಾರೆ.

    ಸದ್ಯ ಚಿತ್ರದಿಂದ ಪೂಜಾ ಹೆಗ್ಡೆ ಹೊರನಡೆದಿದ್ದಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದರ ನಡುವೆ ತ್ರಿಷಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಯನ್ನು ಕೆಲವರು ತೇಲಿಬಿಟ್ಟಿದ್ದಾರೆ. ಈ ಹಿಂದೆ ಮಹೇಶ್ ಬಾಬು ಹಾಗೂ ತ್ರಿಷಾ ‘ಅತಡು’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರಕ್ಕೂ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದರು. ‘ಪೊನ್ನಿಯಿನ್ ಸೆಲ್ವನ್’ 2 (Ponniyin Selvan 2) ಸರಣಿ ಚಿತ್ರದಿಂದ ತ್ರಿಷಾ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ:ಜಗ್ಗೇಶ್ ಗೆ ಕನ್ನಡ ಪಾಠ ಮಾಡಿದ ನಾಗ್ತಿ ಮೇಷ್ಟ್ರು

    ‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯರಾಗಿ ಪೂಜಾ ಹೆಗ್ಡೆ, ಶ್ರೀಲೀಲಾ ಸ್ಕ್ರೀನ್  ಶೇರ್ ಮಾಡಿದ್ದರು. ಅರ್ಧ ಭಾಗ ಚಿತ್ರೀಕರಣ ಮುಗಿದಿರೋ ಬೆನ್ನಲ್ಲೇ ಪೂಜಾ ಹೆಗ್ಡೆ ಹೊರನಡೆದಿದ್ದಾರೆ. ತ್ರಿಷಾ, ಶ್ರೀಲೀಲಾ ಲೀಡ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

  • ಪ್ಯಾಂಟ್ ಧರಿಸದೇ ನೈಟ್ ಡ್ರೆಸ್‌ನಲ್ಲಿ ಮಿಂಚಿದ ಶ್ರೀಲೀಲಾ- ರಶ್ಮಿಕಾ ದಾರಿ ಹಿಡಿಯಬೇಡಿ ಎಂದ ನೆಟ್ಟಿಗರು

    ಪ್ಯಾಂಟ್ ಧರಿಸದೇ ನೈಟ್ ಡ್ರೆಸ್‌ನಲ್ಲಿ ಮಿಂಚಿದ ಶ್ರೀಲೀಲಾ- ರಶ್ಮಿಕಾ ದಾರಿ ಹಿಡಿಯಬೇಡಿ ಎಂದ ನೆಟ್ಟಿಗರು

    ‘ಭರಾಟೆ’ ಬ್ಯೂಟಿ ಶ್ರೀಲೀಲಾ (Sreeleela) ಅವರು ಟಾಲಿವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿ, ಪೂಜಾ ಹೆಗ್ಡೆ (Pooja Hegde) ಈ ಸೂಪರ್ ಹೀರೋಯಿನ್‌ಗಳಿಗೆ ಸೆಡ್ಡು ಹೊಡೆದು ಶ್ರೀಲೀಲಾ ಮುನ್ನುಗ್ಗುತ್ತಿದ್ದಾರೆ. ಸದ್ಯ ಕಿಸ್ ಬೆಡಗಿ ಶ್ರೀಲೀಲಾ, ತಮ್ಮ ಹೊಸ ಫೋಟೋಶೂಟ್ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಪ್ಯಾಂಟ್ ಇಲ್ಲದೇ ನೈಟ್ ಡ್ರೆಸ್ ಫೋಟೋಸ್ ಶೇರ್ ಮಾಡಿರೋ ಶ್ರೀಲೀಲಾ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕನ್ನಡದ ಕಿಸ್, ಭರಾಟೆ, ಬೈಟು ಲವ್ ಸಿನಿಮಾಗಳ ಗಮನ ಸೆಳೆದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. 8ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿಗೆ ಎಂಟ್ರಿ ಕೊಟ್ಟ ಹೊಸತರಲ್ಲೇ ಅಲ್ಲು ಅರ್ಜುನ್‌ಗೆ(Allu Arjun) ಶ್ರೀಲೀಲಾ ನಾಯಕಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕನ್ನಡದ ನಟಿ ಟಾಲಿವುಡ್‌ನಲ್ಲಿ (Tollywood) ಈ ಪರಿ ಹವಾ ಕ್ರಿಯೇಟ್ ಮಾಡಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಆದರೆ ಈಗ ರಶ್ಮಿಕಾ ಹಾದಿಯನ್ನೇ ಶ್ರೀಲೀಲಾ(Sreeleela) ಹಿಡಿದ್ರಾ ಎಂಬ ಅನುಮಾನ ನೆಟ್ಟಿಗರಿಗೆ ಶುರುವಾಗಿದೆ. ಇದನ್ನೂ ಓದಿ:ಮನುಷ್ಯರಂತೆ ವರ್ತಿಸಿ, ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ- ‘ಪುಷ್ಪ’ ನಟಿ ಅನಸೂಯಾ

    ಟಾಲಿವುಡ್- ಬಾಲಿವುಡ್‌ನಲ್ಲಿ ಡಿಮ್ಯಾಂಡ್ ಕ್ರಿಯೇಟ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಕೊಂಚ ಬೋಲ್ಡ್ ಆದ್ರೂ. ಈಗ ಶ್ರೀಲೀಲಾ ಕೂಡ ಸ್ವಲ್ಪ ಅದೇ ರೀತಿ ಆಡ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಆಗಿರೋದು ಶ್ರೀಲೀಲಾ ನಯಾ ಫೋಟೋಶೂಟ್, ಕರ್ನಾಟಕ ಮರೀಬೇಡಿ ರಶ್ಮಿಕಾ ಥರ ಆಗ್ಬೇಡಿ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.

    ನೈಟ್ ಡ್ರೆಸ್ ಧರಿಸಿ, ಕ್ಯಾಮೆರಾ ಹಿಡಿದು ಪೋಸ್ ಕೊಡುತ್ತಿರುವ ಶ್ರೀಲೀಲಾ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನಟಿ ಪ್ಯಾಂಟ್ ಧರಿಸದೇ ಇರೋದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪ್ಯಾಂಟ್ ಎಲ್ಲಿ ತಾಯಿ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ಶ್ರೀಲೀಲಾ ತಮ್ಮ ಹೊಸ ಫೋಟೋದಲ್ಲಿ ಮುದ್ದಾಗಿ ಕಾಣಿಸಿದ್ರು. ಅವರು ಪ್ಯಾಂಟ್ ಧರಿಸದೇ ಇರೋದು ಅನೇಕರಿಗೆ ಅಸಮಾಧಾನ ತಂದಿದೆ.

  • ರಶ್ಮಿಕಾ ಮಾತ್ರವಲ್ಲ, ಪೂಜಾಗೂ ಠಕ್ಕರ್ ಕೊಡ್ತಿದ್ದಾರೆ ‘ಭರಾಟೆ’ ಬ್ಯೂಟಿ ಶ್ರೀಲೀಲಾ

    ರಶ್ಮಿಕಾ ಮಾತ್ರವಲ್ಲ, ಪೂಜಾಗೂ ಠಕ್ಕರ್ ಕೊಡ್ತಿದ್ದಾರೆ ‘ಭರಾಟೆ’ ಬ್ಯೂಟಿ ಶ್ರೀಲೀಲಾ

    ಹೊಸ ಹೀರೋಯಿನ್ ಕಾಲಿಟ್ಟರೆ ಕೊಂಚ ಹಳೇ ಹೀರೋಯಿನ್‌ಗೆ ಹೊಟ್ಟೆ ಕಿಚ್ಚು ಸಹಜ. ಅದೂ ಇಬ್ಬರು ಕನ್ನಡ ನಟಿಯರ ಮಧ್ಯೆ ಶುರುವಾಗಿದೆ. ಆದರೆ ಇಬ್ಬರೂ ಕನ್ನಡಕ್ಕಿಂತ ಟಾಲಿವುಡ್‌ನಲ್ಲಿ ಹೆಚ್ಚು ಫೇಮಸ್ಸು. ಒಬ್ಬರು ಪೂಜಾ ಹೆಗ್ಡೆ (Pooja Hegde). ಇನ್ನೊಬ್ಬರು ಶ್ರೀಲೀಲಾ. ಇದೀಗ ಇವರು ಇನ್ನಿಬ್ಬರು ಸ್ಟಾರ್ಸ್  ಜೊತೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ (Sreeleela) ಕೂಡ ಕುಣಿಯುತ್ತಿದ್ದಾರೆ. ಅದಕ್ಕೇ ಹಳೆ ಹೀರೋಯಿನ್ ಪೂಜಾ ಮುಖ ಗಂಟು ಗಂಟು. ಏನಿದು ನಯಾ ಜಡೆ ಜಗಳ.?

    ಡಸ್ಕಿ ಬ್ಯೂಟಿ, ಪೂಜಾ ಹೆಗ್ಡೆ ಅವರು ಎಂಟು ವರ್ಷದಿಂದ ಟಾಲಿವುಡ್, ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ಟಾಪ್ ಸ್ಟಾರ್ಸ್ ಜೊತೆ ನಟಿಸಿದ್ದಾರೆ. ಕಳೆದ ಒಂದು ವರ್ಷದಲ್ಲೇ ಐದಾರು ಸಿನಿಮಾ ಸೋತಿದ್ದಕ್ಕೆ ಹೈರಾಣಾಗಿದ್ದಾರೆ. ಆದರೂ ಅವಕಾಶ ಸಿಗುತ್ತಿವೆ. ಐರನ್ ಲೆಗ್ ಈ ಬಿರುದು ಖಾಯಂ ಆಗುವ ಮುನ್ನ ಗೆಲುವು ಬೇಕಾಗಿದೆ. ಈ ಹೊತ್ತಲ್ಲೇ ಕನ್ನಡದ ಕಿಸ್ ಬೆಡಗಿ ಶ್ರೀಲೀಲಾ ಟಾಲಿವುಡ್ (Tollywood) ಅಂಗಳದಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಹೆಚ್ಚು ಕಮ್ಮಿ ಹನ್ನೆರಡು ಸಿನಿಮಾಕ್ಕೆ ಬುಕ್ ಆಗಿದ್ದಾರೆ. ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್’ ಸಿಂಗ್,  ಮಹೇಶ್ ಬಾಬು (Mahesh Babu) ಅಭಿನಯದ ‘ಗುಂಟೂರು ಖಾರಂನಲ್ಲೂ’ ಕುಣಿಯಲಿದ್ದಾರೆ. ಆದರೆ ಈ ಎರಡು ಚಿತ್ರದಲ್ಲಿ ಪೂಜಾ ಕೂಡ ಇದ್ದಾರೆ. ಹೊಗೆ ಏಳದೇ ಇರುತ್ತಾ?‌ ಇದನ್ನೂ ಓದಿ:ನಟ ಸಂಚಾರಿ ವಿಜಯ್‌ ಅವರ 2ನೇ ವರ್ಷದ ಪುಣ್ಯಸ್ಮರಣೆ

    ನಿನ್ನೆ ಮೊನ್ನೆ ಬಂದ ಶ್ರೀಲೀಲಾ ಏಕಾಏಕಿ ಪ್ರಿನ್ಸ್ ಹಾಗೂ ಪವರ್‌ಸ್ಟಾರ್ ಜೊತೆ ನಟಿಸೋದಾ? ನಾನು ನಟಿಸೋ ಸಿನಿಮಾದಲ್ಲಿ ಚೈಲ್ಡ್ ಲೀಲಾನಾ? ಇಬ್ಬರಲ್ಲಿ ಯಾರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆಯೋ? ಇದು ಪೂಜಾ ಅನುಮಾನದ ಹುತ್ತ. ಹೀಗಾಗಿಯೇ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಗುಂಟೂರು ಖಾರಂ ಸಿನಿಮಾದ ಪೋಸ್ಟರ್‌ಗೆ ಲೈಕ್ ಒತ್ತಿಲ್ಲ. ಕಾಮೆಂಟ್ಸ್ ಒಗೆದಿಲ್ಲ ಇನ್ನು ಶೇರ್ ಮಾಡುವ ಅಪರಾಧಕ್ಕೆ ಕೈ ಹಾಕುತ್ತಾರಾ? ಇದನ್ನು ನೋಡಿ ಜನರು ಜಡೆ ಜಗಳ ಸ್ಟಾರ್ಟು ಕಮ್ಮಿ ಅಗುತ್ತಾ ಹೀಟು ಎಂದು ಟ್ರೋಲಿಸುತ್ತಿದ್ದಾರೆ. ಇದೇ ಪೂಜಾ ಈ ಚಿತ್ರದ ಪೋಸ್ಟರ್ ಪ್ರಿನ್ಸ್ ಹಾಕಿದಾಗ ಶೇರ್ ಮಾಡಿದ್ದರು. ಶ್ರೀಲೀಲಾ ಹಾಕಿದಾಗ ಸೈಲೆಂಟ್ ಸನ್ಯಾಸಿನಿ.

    ಇಬ್ಬರು ಹೀರೋಯಿನ್ಸ್ ನಡುವೆ ಜಗಳ, ಮುನಿಸು, ಕಿತ್ತಾಟ ಎಲ್ಲವೂ ಅನಾದಿ ಕಾಲದಿಂದ ಇಲ್ಲಿ ನಡೆದುಕೊಂಡು ಬಂದಿದೆ. ರಕ್ಷಿತಾ ಹಾಗೂ ರಮ್ಯಾ ಹೆಂಗೆ ನಾಲಿಗೆಯಲ್ಲಿ ಹೊಡೆದಾಡಿಕೊಂಡಿದ್ದರೆಂದು ಎಲ್ಲರಿಗೂ ಗೊತ್ತು. ಪೂಜಾ ಅಂಡ್ ಶ್ರೀಲೀಲಾ ಅದನ್ನು ಮುಂದುವರೆಸಿದ್ದಾರೆ. ಪೂಜಾ ನಟಿಸಿದ ಸಿನಿಮಾ ಸೋಲುತ್ತಿವೆ. ಶ್ರೀಲೀಲಾ ಚಿತ್ರ ಜಾಕ್‌ಪಾಟ್ ಹೊಡೆಯುತ್ತಿವೆ. ನನ್ನ ಅನ್ನಕ್ಕೆ ಎಲ್ಲಿ ಕೈ ಹಾಕಿ ತಿಂದು ತೇಗುತ್ತಾಳೋ ಲೀಲಾ ಅನ್ನೋದು ಪೂಜಾ ಸಂಕಟ. ನೀನು ಆಗ್ಲೇ ಬೋರ್ ಆಗಿದ್ದೀಯಾ, ಮದ್ವೆ ಮಕ್ಳು ಮಾಡ್ಕೊಂಡಿರು ಬಹುಶಃ ಇದು ಶ್ರೀಲೀಲಾ ಸವಾಲ್.

    ಒಟ್ನಲ್ಲಿ ಶ್ರೀಲೀಲಾ ಎಂಟ್ರಿಯಿಂದ ರಶ್ಮಿಕಾ (Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Kriti Shetty) ಅವಕಾಶಗಳು ಕಮ್ಮಿಯಾಗಿರೋದಂತೂ ನಿಜ. ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಶ್ರೀಲೀಲಾ ಲಿಸ್ಟ್‌ಗೆ ಜಮಾ ಆಗುತ್ತಿರೋದು ನೋಡಿ ಈ ನಟಿಯರಿಗೆ ತಲೆನೋವಾಗಿದೆ.

  • ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದ ನಟಿ- ಐಕಾನ್ ಸ್ಟಾರ್‌ಗೆ ಶ್ರೀಲೀಲಾ ನಾಯಕಿ

    ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದ ನಟಿ- ಐಕಾನ್ ಸ್ಟಾರ್‌ಗೆ ಶ್ರೀಲೀಲಾ ನಾಯಕಿ

    ನ್ನಡತಿ ಶ್ರೀಲೀಲಾ (Sreeleela) ಅವರಿಗೆ ಇಂದು (ಜೂನ್ 14) ಜನ್ಮದಿನದ ಸಂಭ್ರಮವಾಗಿದ್ದು, ತಮ್ಮ ಅಭಿಮಾನಿಗಳಿಗೆ ಸಿನಿಮಾಗಳ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಪುಷ್ಪರಾಜ್ ಅಂದ್ರೆ ಐಕಾನ್ ಸ್ಟಾರ್‌ಗೆ ನಾಯಕಿಯಾಗುವ ಮೂಲಕ ಸೂಪರ್ ಅಚ್ಚರಿ ನೀಡಿದ್ದಾರೆ. ರಶ್ಮಿಕಾಗಿಂತ (Rashmika Mandanna) ಶ್ರೀಲೀಲಾಗೆ ಇದೀಗ ಡಿಮ್ಯಾಂಡ್ ಜಾಸ್ತಿ ಆಗಿದೆ. 5ಕ್ಕೂ ಹೆಚ್ಚು ಸಿನಿಮಾ ಟೀಂನಿಂದ ಕಿಸ್ ಚಿತ್ರದ ನಟಿಗೆ ವಿಶ್ ಬಂದಿದೆ.

    ‘ಕಿಸ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ, ಭರಾಟೆ, ಬೈಟು ಲವ್, ಚಿತ್ರಗಳಲ್ಲಿ ನಟಿಸಿದ್ರು. ಪೆಳ್ಳಿ ಸಂದಡಿ ಚಿತ್ರದಿಂದ ತೆಲುಗಿಗೆ ಶ್ರೀಲೀಲಾ ಎಂಟ್ರಿ ಕೊಟ್ಟರು. ಬಳಿಕ ರವಿತೇಜಗೆ ನಾಯಕಿಯಾಗಿ ಧಮಾಕ ಚಿತ್ರದಲ್ಲಿ ಮಿಂಚಿದ್ದರು. ಈ ಸಿನಿಮಾ ಸಕ್ಸಸ್ ನಂತರ ತೆಲುಗಿನ 9ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಮೂಲಕ ‘ಪುಷ್ಪ’ ನಟಿ ರಶ್ಮಿಕಾ ಮಂದಣ್ಣಗೆ ಶ್ರೀಲೀಲಾ ಟಫ್ ಕಾಂಪಿಟೇಶನ್‌ ಕೊಡ್ತಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

    ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಇದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ನಿತಿನ್ 32ನೇ ಚಿತ್ರಕ್ಕೆ ಅವರು ನಾಯಕಿ. ಇದರ ಪೋಸ್ಟರ್ ಕೂಡ ರಿಲೀಸ್ ಆಗಿದೆ. ‘ಬೋಯಪತಿ ರ‍್ಯಾಪೋ’ ಸಿನಿಮಾದಲ್ಲೂ ಶ್ರೀಲೀಲಾ ನಟಿಸುತ್ತಿದ್ದು, ಪೋಸ್ಟರ್ ಬಿಡುಗಡೆ ಆಗಿದೆ.

    ಅಲ್ಲು ಅರ್ಜುನ್ (Allu Arjun) ಅವರು ಸ್ಟಾರ್ ಡೈರೆಕ್ಟರ್ ತ್ರಿವಿಕ್ರಂ ಶ್ರೀನಿವಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ಆಹಾ’ ನಿರ್ಮಾಣದ ಮೊದಲ ಸಿನಿಮಾ ಇದು. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ‘ಆಹಾ’ ಕಡೆಯಿಂದ ಒಂದು ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರು ಶ್ರೀಲೀಲಾ ಅವರನ್ನು ಎತ್ತುಕೊಂಡಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಮೊದಲ ಸಿನಿಮಾ ಇದಾಗಿದೆ. ಸದ್ಯ ಸುದ್ದಿ ಕೇಳಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

  • ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ನ್ನಡದ ‘ಕಿಸ್’ (Kiss Film) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಇದೀಗ ಟಾಲಿವುಡ್ ಅಂಗಳದಲ್ಲಿ ಭರ್ಜರಿ ಅವಕಾಶ ಬಾಚಿಕೊಳ್ತಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಬಳಿಕ ಕನ್ನಡದ ನಟಿ ಶ್ರೀಲೀಲಾ (Sreeleela) ಅವರು ತೆಲುಗಿನಲ್ಲಿ ಸದ್ದು ಮಾಡ್ತಿದ್ದಾರೆ.

    ಕನ್ನಡದ ಕಿಸ್, ಭರಾಟೆ, ಬೈ 2 ಲವ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಶ್ರೀಲೀಲಾ ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ಎಂಟ್ರಿ ಕೊಟ್ರು. ನಂತರ ರವಿತೇಜಾಗೆ ‘ಧಮಾಕ’ ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದರು. ಈಗ ಟಾಲಿವುಡ್‌ನ 9 ಸಿನಿಮಾಗಳಲ್ಲಿ ಕಿಸ್ ಬ್ಯೂಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಹೃದಯಾಘಾತದಿಂದ ಫೇಮಸ್ ನಟ ನಿತೇಶ್ ಪಾಂಡೆ ನಿಧನ

    ಎಂಬಿಬಿಎಸ್‌ (MBBS) ಓದುತ್ತಿರೋ ಶ್ರೀಲೀಲಾ, ಏಜುಕೇಷನ್ ಜೊತೆ ನಟನೆ ಕೂಡ ಬ್ಯಾಲೆನ್ಸ್ ಮಾಡ್ತಿದ್ದಾರೆ. ಹಾಗಾದ್ರೆ ಶ್ರೀಲೀಲಾ ಕೈಯಲ್ಲಿ ಯಾವೆಲ್ಲಾ ಸಿನಿಮಾಗಳಿವೆ. ಇಲ್ಲಿದೆ ಮಾಹಿತಿ. ಮಹೇಶ್ ಬಾಬು ಸಿನಿಮಾ, ನಂದಮೂರಿ ಬಾಲಕೃಷ್ಣ, ರಾಮ್ ಪೋತಿನೇನಿ, ವಿಜಯ್ ದೇವರಕೊಂಡ, ಪವನ್ ಕಲ್ಯಾಣ್ ನಟನೆಯ ‘ಉಸ್ತಾತ್ ಭಗತ್ ಸಿಂಗ್’, ನಿತಿನ್ ಹೊಸ ಸಿನಿಮಾ, ನವೀನ್ ಪೊಲಿಸೆಟ್ಟಿ ಸಿನಿಮಾ, ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾ (ಕನ್ನಡ & ತೆಲುಗು), ಪಂಜ ವೈಷ್ಣವ್ ತೇಜ್ ಅವರ ‘ಆದಿಕೇಶವ’ ಸಿನಿಮಾಗಳು ನಟಿಯ ಕೈಯಲ್ಲಿದೆ. ಕನ್ನಡ ಸೇರಿ ಒಟ್ಟು 9 ಸಿನಿಮಾಗಳಲ್ಲಿ ಶ್ರೀಲೀಲಾ ಲಿಸ್ಟ್‌ನಲ್ಲಿದೆ.

    ತನ್ನ ಮುದ್ದು ಮುಖ, ಅದ್ಭುತ ನಟನೆ ಮೂಲಕ ಮೋಡಿ ಮಾಡ್ತಿರುವ ಶ್ರೀಲೀಲಾ ಅವರು ಸ್ಟಾರ್ ನಟಿಯಾಗಿ ನಿಲೋದ್ರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಕನ್ನಡದ ನಟಿಮಣಿಯರು ದಕ್ಷಿಣದ ಸಿನಿಮಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಅನುಷ್ಕಾ ಶೆಟ್ಟಿ, ಪ್ರಣೀತಾ ಸುಭಾಷ್, ರಶ್ಮಿಕಾ ಮಂದಣ್ಣ, ನಿತ್ಯಾ ಮೆನನ್ ಸೇರಿದಂತೆ ಹಲವರು ಸೈ ಎನಿಸಿಕೊಂಡಿದ್ದಾರೆ. ಇದೀಗ ಅದೇ ದಾರಿಯಲ್ಲಿ ಶ್ರೀಲೀಲಾ ಕೂಡ ಹೆಜ್ಜೆ ಇಡ್ತಿದ್ದಾರೆ.

  • ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಶ್ರೀಲೀಲಾ ಹೀರೋಯಿನ್

    ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಶ್ರೀಲೀಲಾ ಹೀರೋಯಿನ್

    ತೆಲುಗು ಚಿತ್ರರಂಗದಲ್ಲಿ (Tollywood) ಮತ್ತೊಬ್ಬ ಕನ್ನಡತಿ ಹವಾ ಶುರುವಾಗಿದೆ. ರಶ್ಮಿಕಾ (Rashmika Mandanna) ಬಳಿಕ ನಟಿ ಶ್ರೀಲೀಲಾಗೆ ಭರ್ಜರಿ ಬೇಡಿಕೆಯಿದೆ. ವಿಜಯ್ ದೇವರಕೊಂಡ (Vijaydevarakonda) ಜೊತೆ ರೊಮ್ಯಾನ್ಸ್ ಮಾಡಲು ಶ್ರೀಲೀಲಾ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ತಂಗಲಾನ್’ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯ- ಶೂಟಿಂಗ್ ಸ್ಥಗಿತ

    ‘ಲೈಗರ್’ ಸೋಲಿನ ನಂತರ ‘ಜೆರ್ಸಿ’ ನಿರ್ದೇಶಕ ಗೌತಮ್ ಡ್ಯಾಶಿಂಗ್ ಹೀರೋ ವಿಜಯ್ ದೇವರಕೊಂಡ ಹೊಸ ಸಿನಿಮಾ ಮಾಡ್ತಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಮನಗೆಲ್ಲು ಸಜ್ಜಾಗಿದ್ದಾರೆ. ವಿಜಯ್- ಶ್ರೀಲೀಲಾ (Sreeleela) ನಟನೆಯ ಹೊಸ ಸಿನಿಮಾದ ಮುಹೂರ್ತ ಪೂಜೆಯನ್ನ ಮೇ ೩ರಂದು ಹೈದರಾಬಾದ್ ಸರಳವಾಗಿ ನಡೆದಿದೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾದ ಪೂಜೆ ಕಾರ್ಯವನ್ನ ಸರಳವಾಗಿ ಮಾಡಲಾಯಿತು. ವಿಜಯ್, ಶ್ರೀಲೀಲಾ, ನಿರ್ದೇಶಕ ಗೌತಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇನ್ನೂ ಪೆಳ್ಳಿ ಸಂದಡಿ, ‘ಧಮಾಕ’ (Dhamaka) ಸಕ್ಸಸ್ ನಂತರ ಶ್ರೀಲೀಲಾ ಕೈಯಲ್ಲಿ 7ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ದೇವರಕೊಂಡ ನಟನೆಯ ಹೊಸ ಸಿನಿಮಾ ಇದೇ ಜೂನ್‌ನಿಂದ ಶೂಟಿಂಗ್‌ ಶುರುವಾಗಲಿದೆ. ರಶ್ಮಿಕಾ ಬಳಿಕ ಸಖತ್ ಬೇಡಿಕೆಯಲ್ಲಿರುವ ಕನ್ನಡತಿ ಶ್ರೀಲೀಲಾ- ವಿಜಯ್ ದೇವರಕೊಂಡ ಜೋಡಿ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಎಂಬುದನ್ನ ಕಾದುನೋಡಬೇಕಿದೆ.

  • ಬಾಲಯ್ಯ ಜೊತೆ ನಟಿಸಲಿದ್ದಾರೆ ನಟಿ ಶ್ರೀಲೀಲಾ

    ಬಾಲಯ್ಯ ಜೊತೆ ನಟಿಸಲಿದ್ದಾರೆ ನಟಿ ಶ್ರೀಲೀಲಾ

    ನ್ನಡತಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್ (Tollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. `ಧಮಾಕ’ (Dhamaka) ಚಿತ್ರದ ಸೂಪರ್ ಸಕ್ಸಸ್ ನಂತರ ಬಾಲಯ್ಯ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಭರ್ಜರಿ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    ಕಿಸ್, ಭರಾಟೆ, ಬೈ ಟು ಲವ್, ಕನ್ನಡದ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ಶ್ರೀಲೀಲಾ ಈಗ ತೆಲುಗು ಸಿನಿಮಾ ರಂಗದಲ್ಲಿ ಬೆಳಗುತ್ತಿದ್ದಾರೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಸೆಡ್ಡು ಹೊಡೆದು ಸಾಲು ಸಾಲು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗುತ್ತಿದ್ದಾರೆ. `ಧಮಾಕ’ (Dhamaka) ಚಿತ್ರದ ಸಕ್ಸಸ್ ನಂತರ ನಟಿಯ ಕೈಯಲ್ಲಿ ಏಳು ಸಿನಿಮಾಗಳಿವೆ.

    ಬಾಲಯ್ಯ (Balayya) ನಟನೆಯ ಚಿತ್ರದಲ್ಲಿ ಶ್ರೀಲೀಲಾ (Sreeleela) ನಟಿಸುತ್ತಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆದರೆ ಅಧಿಕೃತ ಮಾಹಿತಿ ಹೊರ ಬಿದ್ದಿರಲ್ಲಿಲ್ಲ. ಇದೀಗ ನಟಿ ಶ್ರೀಲೀಲಾ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ನಂದಮೂರಿ ಬಾಲಯ್ಯ (Nandamuri Balayya) ಜೊತೆ ನಟಿಸುವ ಬಗ್ಗೆ ಅಧಿಕೃತ ಅಪ್‌ಡೇಟ್ ತಿಳಿಸಿದ್ದಾರೆ.

     

    View this post on Instagram

     

    A post shared by Sreeleela (@sreeleela14)

    ಚಿತ್ರದಲ್ಲಿ ಬಾಲಯ್ಯ ಅವರ ತಂಗಿ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಶ್ರೀಲೀಲಾ ಪಾತ್ರಕ್ಕೂ ಪ್ರಾಮುಖ್ಯತೆಯಿದೆ. ಅನಿಲ್ ರವಿಪುಡಿ ನಿರ್ದೇಶನದ NBK 108 ಚಿತ್ರದಲ್ಲಿ ತ್ರಿಷಾ, ಕಾಜಲ್ ಅಗರ್‌ವಾಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

  • ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್‌ ದೇವರಕೊಂಡ ರೊಮ್ಯಾನ್ಸ್

    ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್‌ ದೇವರಕೊಂಡ ರೊಮ್ಯಾನ್ಸ್

    ಟಾಲಿವುಡ್‌ನಲ್ಲಿ (Tollywood) `ಅರ್ಜುನ್ ರೆಡ್ಡಿ’ (Arjun Reddy) ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ನಟ ವಿಜಯ್ ದೇವರಕೊಂಡ ಇದೀಗ ರಶ್ಮಿಕಾ (Rashmika Mandanna) ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಭರಾಟೆ ಬ್ಯೂಟಿ ಜೊತೆ ಲೈಗರ್ ಜೋಡಿಯಾಗಿ ಬರುತ್ತಿದ್ದಾರೆ.

    `ಗೀತಾ ಗೋವಿಂದಂ’ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ವಿಜಯ್ ದೇವರಕೊಂಡ ಕಮಾಲ್ ಮಾಡಿದ್ದರು. ಈ ಜೋಡಿಯ ತೆರೆಯ ಮೇಲಿನ ರೊಮ್ಯಾನ್ಸ್ ನೋಡಿ ಫಿದಾ ಆಗಿದ್ದರು. ಈಗ `ಲೈಗರ್’ (Liger) ಸೋಲಿನಿಂದ ಬೆಸತ್ತಿರುವ ವಿಜಯ್‌ಗೆ ಕನ್ನಡದ ನಟಿ ಶ್ರೀಲೀಲಾ (Sreeleela) ಸಾಥ್ ನೀಡ್ತಿದ್ದಾರೆ.

    ಚಿತ್ರರಂಗದಲ್ಲಿ ಹೊಸ ಕ್ರಶ್ ಎಂದರೆ ಶ್ರೀಲೀಲಾ ಅವರಾಗಿದ್ದು, ರವಿತೇಜಾ (Raviteja) ಜೊತೆ ಧಮಾಕದಲ್ಲಿ ಕುಣಿದು ಕುಪ್ಪಳಿಸಿದ ಮೇಲೆ `ಕಿಸ್’ ನಟಿಗೆ ಭರ್ಜರಿ ಆಫರ್ಸ್ ಹರಿದು ಬರುತ್ತಿದೆ. ಸೌತ್‌ನ 8 ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ.

    ನಿರ್ದೇಶಕ ಗೌತಮ್ ತಿನ್ನುವಾರಿ- ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಹೊಸ ಸಿನಿಮಾಗೆ ಇದೀಗ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ಪೈ ಥ್ರಿಲರ್ ಕಥೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ವಿಜಯ್ ದೇವರಕೊಂಡ ಬರುತ್ತಿದ್ದಾರೆ. ವಿಜಯ್-ರಶ್ಮಿಕಾ ಜೋಡಿ ನೋಡಿ ಮೆಚ್ಚಿಕೊಂಡಿದ್ದ ಅಭಿಮಾನಿಗಳಿಗೆ ಶ್ರೀಲೀಲಾ-ವಿಜಯ್ ಜೋಡಿಯನ್ನ ತೆರೆಯ ಮೇಲೆ ನೋಡಿ ಮೆಚ್ಚಿಕೊಳ್ಳುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.