ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್ ಜೊತೆ ಪೈಪೋಟಿ ಕೂಡ ಜೋರಾಗಿದೆ. ಶ್ರೀಲೀಲಾ(Sreeleela) ನಟಿಸಿಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ (Rashmika Mandanna) ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಜೊತೆ ಶ್ರೀಲೀಲಾ ನಾಯಕಿಯಾಗಿ ನಟಿಸಬೇಕಿದ್ದ ಚಿತ್ರದಿಂದ ಔಟ್ ಆಗಿದ್ದಾರೆ. ಮತ್ತೆ 3ನೇ ಬಾರಿ ವಿಜಯ್- ರಶ್ಮಿಕಾ ಒಂದಾಗ್ತಿದ್ದಾರೆ.

‘ಜೆರ್ಸಿ’ ಡೈರೆಕ್ಟರ್ ಗೌತಮ್ ನಾಯ್ಡು ತಿಣ್ಣನುರಿ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಮೇನಲ್ಲಿ ಅನೌನ್ಸ್ ಆಗಿತ್ತು. ವಿಜಯ್ ದೇವರಕೊಂಡಗೆ ಶ್ರೀಲೀಲಾ ನಾಯಕಿ ಎಂದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನೆರವೇರಿತ್ತು. ಆದರೆ ಈಗ ಕೊಂಚ ಬದಲಾವಣೆ ಆಗಿದೆ. ವಿಜಯ್ ಚಿತ್ರವನ್ನು ಶ್ರೀಲೀಲಾ ಕೈಬಿಟ್ಟಿದ್ದಾರೆ.

9ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿರುವ ಕಿಸ್ ಬೆಡಗಿ ಶ್ರೀಲೀಲಾ, ಡೇಟ್ ಸಮಸ್ಯೆಯಿಂದ ಗೌತಮ್- ವಿಜಯ್ ಕಾಂಬೋ ಸಿನಿಮಾವನ್ನು ಕೈಬಿಟ್ಟಿದ್ದಾರೆ. ಹಾಗಾಗಿ ನಾಯಕಿ ಪಾತ್ರಕ್ಕೆ ರಶ್ಮಿಕಾನೇ ಸೂಕ್ತ ಎಂದೇನಿಸಿ ಚಿತ್ರತಂಡ ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ವಿಜಯ್- ರಶ್ಮಿಕಾ ಜೋಡಿ ಮೋಡಿ ಮಾಡಿತ್ತು. ಈಗ ಮತ್ತೆ 3ನೇ ಬಾರಿ ಈ ಜೋಡಿ ಒಂದಾಗುತ್ತಿದೆ. ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ ಶಾರುಖ್ ನಟನೆಯ ‘ಜವಾನ್’ ಸಿನಿಮಾ
ವಿಜಯ್- ರಶ್ಮಿಕಾ ಫ್ಯಾನ್ಸ್ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ. ಸಿನಿಮಾತಂಡದಿಂದ ಅಧಿಕೃತ ಘೋಷಣೆ ಆಗಲಿ ಅಂತಾ ಕಾಯುತ್ತಿದ್ದಾರೆ. ರವಿತೇಜ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದರು. ಆ ಚಿತ್ರತಂಡದಿಂದ ಕೂಡ ನಟಿ ಹೊರಬಂದರು. ಆ ಪ್ರಾಜೆಕ್ಟ್ ಕೂಡ ರಶ್ಮಿಕಾ ಪಾಲಾಯ್ತು. ಇದೀಗ ವಿಜಯ್ ಸಿನಿಮಾ ಕೂಡ ಶ್ರೀವಲ್ಲಿ ಕೈ ಸೇರಿದೆ. ಒಟ್ನಲ್ಲಿ ಗೀತಾ ಗೋವಿಂದಂ ಸಿನಿಮಾ ಜೋಡಿ ಮತ್ತೆ ಮೋಡಿ ಮಾಡೋದನ್ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

















ರಾಮ್ ಪೋತಿನೇನಿ (Ram Pothineni)- ಶ್ರೀಲೀಲಾ ನಟನೆಯ ‘ಸ್ಕಂದ’ ಸಿನಿಮಾ ಸೆಪ್ಟೆಂಬರ್ 15ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ, ಈಗ ತಂಡ ಸಿನಿಮಾ ರಿಲೀಸ್ ದಿನಾಂಕವನ್ನು ಎರಡು ವಾರ ಮುಂದಕ್ಕೆ ಹಾಕಿದೆ. ಸೆ.28ರಂದು ಚಿತ್ರ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಿಕೊಂಡಿದೆ.
ಬೋಯಪಾಟಿ ಶ್ರೀನು ಆಕ್ಷನ್ ಕಟ್ ಹೇಳಿರುವ ‘ಸ್ಕಂದ’ ಸಿನಿಮಾದ ಟ್ರೈಲರ್, ಹಾಡುಗಳು ಭಾರೀ ಸದ್ದು ಮಾಡಿವೆ. ಪ್ರೀ ರಿಲೀಸ್ ವ್ಯವಹಾರದಲ್ಲಿಯೂ ದಾಖಲೆ ಬರೆದಿರುವ ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ.



ಹೌದು.. ನಿತಿನ್ (Nithin) ನಾಯಕಿಯಾಗಿ ಸಪ್ತಮಿ ಗೌಡ (Saptami Gowda) ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವೇಣು ಶ್ರೀರಾಮ್ ನಿರ್ದೇಶನದಲ್ಲಿ ತಮ್ಮುಡು ಸಿನಿಮಾ ಮೂಡಿ ಬರುತ್ತಿದ್ದು, ದಿಲ್ ರಾಜು (Dilraju) ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ಹಿಂದೆ ತಮ್ಮುಡು ಚಿತ್ರದ ಟೈಟಲ್‌ನಲ್ಲಿ ಪವನ್ ಕಲ್ಯಾಣ್ ನಟಿಸಿ ಗಮನ ಸೆಳೆದಿದ್ದರು. ಈಗ ಅದೇ ಟೈಟಲ್‌ನಲ್ಲಿ ಭಿನ್ನವಾಗಿರೋ ಕಥೆ ಮಾಡಲು ಚಿತ್ರತಂಡ ಹೊರಟಿದೆ.
