Tag: Sreeleela

  • ಸಕ್ಸಸ್‌ ಸಿಕ್ಕ ಬೆನ್ನಲ್ಲೇ ಬದಲಾದ್ರಾ ನಟಿ- ಶ್ರೀಲೀಲಾ ಬಗ್ಗೆ ತಾಜಾ ಸಮಾಚಾರ

    ಸಕ್ಸಸ್‌ ಸಿಕ್ಕ ಬೆನ್ನಲ್ಲೇ ಬದಲಾದ್ರಾ ನಟಿ- ಶ್ರೀಲೀಲಾ ಬಗ್ಗೆ ತಾಜಾ ಸಮಾಚಾರ

    ಶ್ರೀಲೀಲಾ (Sreeleela) ಮತ್ತೆ ಮತ್ತೆ ಸುದ್ದಿಗೆ ಬರುತ್ತಿದ್ದಾರೆ. ವೈಷ್ಣವ್ ತೇಜ್ (Vaishnav Tej) ಜೊತೆ ಇವರು ಅಭಿನುಯಿಸಿದ ಆದಿಕೇಶವ ಸಿನಿಮಾ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಶ್ರೀಲೀಲಾ ಮಾತ್ರ ನಾ ಬರಲ್ಲ ಎಂದು ಹಠ ಹಿಡಿದಿದ್ದಾರೆ. ಇಷ್ಟಾದರೂ ಸಿನಿಮಾ ಗೆಲ್ಲುತ್ತೆ ಎನ್ನುತ್ತಿದ್ದಾರೆ ವೈಷ್ಣವ್. ಇದೇನಿದು ಹೀರೋ- ಹೀರೋಯಿನ್ ಜಗಳ ? ಇಲ್ಲಿದೆ ಅಪ್‌ಡೇಟ್.

    ಶ್ರೀಲೀಲಾ ಯಾರ ಕೈಗೂ ಸಿಗುತ್ತಿಲ್ಲ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಟಾಪ್ ಹೀರೋಗಳು ಈಕೆ ಕಾಲ್‌ಶೀಟ್‌ಗೆ ಕಾಯುವಂತಾಗಿದೆ. ಪ್ರಿನ್ಸ್ ಮಹೇಶ್ ಬಾಬುವಿನಿಂದ ಹಿಡಿದು ಪವನ್ ಕಲ್ಯಾನ್ ಕೂಡ ಶ್ರೀಲೀಲಾ ಎಲ್ಲಿ ನಿನ್ನಯ ಪಾದ ಕಮಲ ಎನ್ನುತ್ತಿದ್ದಾರೆ. ಈ ಹೊತ್ತಲ್ಲೇ ಶ್ರೀ ನಟಿಸಿದ ಇನ್ನೊಂದು ಸಿನಿಮಾ ಆದಿಕೇಶವ ಬಿಡುಗಡೆಯಾಗುತ್ತಿದೆ. ಆದರೆ ಶ್ರೀಲೀಲಾ ಮಾತ್ರ ಪ್ರಚಾರಕ್ಕೆ ಬರಲ್ಲ ಎಂದು ಹಠ ಹಿಡಿದಿದ್ದಾರೆ. ಕಾರಣ ಕೊಬ್ಬಲ್ಲ, ಟೈಮ್ ಸಿಗುತ್ತಿಲ್ಲ. ಇದನ್ನೂ ಓದಿ:ರಿಲೀಸ್‌ಗೂ ಮುನ್ನ ಅಮೆರಿಕಾದಲ್ಲಿ ‘ಸಲಾರ್‌’ ಆರ್ಭಟ- ಟಿಕೆಟ್‌ ಸೋಲ್ಡ್‌ ಔಟ್

    ಧಮಾಕಾ, ಭಗವಂತ ಕೇಸರಿ ಹಿಟ್ ಆಗಿವೆ. ಇದರ ಬೆನ್ನಿಗೇ ಆದಿಕೇಶವ ಬರುತ್ತಿದೆ. ಆದರೆ ಶ್ರೀಲೀಲಾಗೆ ಮಾತ್ರ ಪ್ರಚಾರಕ್ಕೆ ಬರಲು ಆಗುತ್ತಿಲ್ಲ. ಹೀಗಿದ್ದರೂ ಸಿನಿಮಾ ಹಿಟ್ ಆಗುತ್ತದೆ. ಶ್ರೀಲೀಲಾ ಇದ್ದರೆ ಸಾಕು, ಸಿನಿಮಾ ಗೆಲ್ಲುತ್ತದೆ ಎನ್ನುತ್ತಿದ್ದಾರೆ ಹೀರೋ ವೈಷ್ಣವ್ ತೇಜ್. ಮೆಗಾ ಫ್ಯಾಮಿಲಿಯಿಂದ ಬಂದ ಹುಡುಗನೇ ಹೀಗೆ ಹೇಳಬೇಕಾದರೆ ಶ್ರೀಲೀಲಾ ಕಮಾಲ್ ಹೇಗಿರಬೇಕು ನೀವೇ ಯೋಚಿಸಿ. ಏನಾದರೂ ಆಗಲಿ ಕನ್ನಡದ ಹುಡುಗಿಗೆ ಇಷ್ಟೊಂದು ಕ್ರೇಜ್ ಇದೆಯಲ್ಲ. ಅದನ್ನು ನಾವು ಮೆಚ್ಚಬೇಕು.

    ಒಟ್ನಲ್ಲಿ ಶ್ರೀಲೀಲಾ ಸದ್ಯ ತೆಲುಗು ಹೀರೋಗಳ ಪಾಲಿಗೆ ಲಕ್ಕಿ ನಟಿಯಾಗಿ ಬೆಳೆಯುತ್ತಿದ್ದಾರೆ. ನಮ್ಮ ಸಿನಿಮಾದಲ್ಲಿ ಶ್ರೀಲೀಲಾ ಇದ್ದರೆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಖುಷಿಯಲ್ಲಿದ್ದಾರೆ.

  • ಕನ್ನಡ ಪ್ರೇಕ್ಷಕರಿಗೆ ಶ್ರೀಲೀಲಾ ಗುಡ್ ನ್ಯೂಸ್

    ಕನ್ನಡ ಪ್ರೇಕ್ಷಕರಿಗೆ ಶ್ರೀಲೀಲಾ ಗುಡ್ ನ್ಯೂಸ್

    ನ್ನಡದ ‘ಕಿಸ್’ ನಟಿ ಶ್ರೀಲೀಲಾ (Sreeleela) ತೆಲುಗು ಅಂಗಳದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚ್ತಿದ್ದಾರೆ. ಸ್ಟಾರ್ ನಟರಿಗೆ ಸಾಲು ಸಾಲು ಸಿನಿಮಾಗಳಿಗೆ ಹೀರೋಯಿನ್ ಆಗುವ ಮೂಲಕ ರಶ್ಮಿಕಾ, ಪೂಜಾ, ಕೃತಿ ಶೆಟ್ಟಿಗೆ ಶ್ರೀಲೀಲಾ ಠಕ್ಕರ್ ಕೊಡ್ತಿದ್ದಾರೆ. ಹೀಗಿರುವಾಗ ಶ್ರೀಲೀಲಾ ಕನ್ನಡ ಸಿನಿಮಾ ಮಾಡಲ್ವಾ ಎಂದು ಎದುರು ನೋಡ್ತಿದ್ದವರಿಗೆ ನಟಿ ಸಿಹಿ ಸುದ್ದಿ ನೀಡಿದ್ದಾರೆ.

    ‘ಭರಾಟೆ’ ಬ್ಯೂಟಿ ಶ್ರೀಲೀಲಾ ಈಗ ಟಾಲಿವುಡ್‌ನ(Tollywood) ಡ್ರೀಮ್‌ ಗರ್ಲ್‌ ಆಗಿ ಮೆರೆಯುತ್ತಿದ್ದಾರೆ. ಒಂದು ಸಿನಿಮಾಗೆ 3ರಿಂದ 4 ಕೋಟಿ ರೂಪಾಯಿ ಸಂಭಾವನೆ ಜಾರ್ಜ್ ಮಾಡುವ ಮೂಲಕ ಸೆನ್ಸೇಷನ್ ಕ್ರಿಯೆಟ್ ಮಾಡ್ತಿದ್ದಾರೆ. ಇದನ್ನೂ ಓದಿ:ಗ್ಲೋಬಲ್ ಸ್ಟಾರ್ ಆಗಲು ಭಾರತ ಬಿಡಬೇಕಾ? ಪ್ರಿಯಾಂಕಾಗೆ ದೀಪಿಕಾ ಟಾಂಗ್

    ತೆಲುಗಿನಲ್ಲೇ ಬ್ಯುಸಿ ನಟಿಯಾಗಿರೋ ಶ್ರೀಲೀಲಾ ಕಡೆಯದಾಗಿ ‘ಬೈಟು ಲವ್’ ಚಿತ್ರದಲ್ಲಿ ಧನ್ವೀರ್‌ಗೆ ಜೋಡಿಯಾಗಿ ನಟಿಸಿದ್ರು. ಸದ್ಯ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಜೊತೆ ‘ಜ್ಯೂನಿಯರ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಕನ್ನಡದ ಜೊತೆ ತೆಲುಗಿನಲ್ಲಿಯೂ ರಿಲೀಸ್ ಆಗಲಿದೆ.

    ಈ ಚಿತ್ರ ಬಿಟ್ಟು ಇದೀಗ ಕನ್ನಡದ ಹೊಸ ಚಿತ್ರಕ್ಕೆ ಶ್ರೀಲೀಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯದಲ್ಲೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾ ಬಗ್ಗೆ ಅನೌನ್ಸ್ ಮಾಡೋದಾಗಿ ನಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಯಾವ ಹೀರೋಗೆ ಶ್ರೀಲೀಲಾ ಹೀರೋಯಿನ್‌ ಆಗಲಿದ್ದಾರೆ. ಸಿನಿಮಾ ಸಂಪೂರ್ಣ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೆ ಶ್ರೀಲೀಲಾ ಬರೋದಿಲ್ಲ ಎಂದವರಿಗೂ ನಟಿ ಉತ್ತರಿಸಿದ್ದಾರೆ.

  • ಮಹೇಶ್ ಬಾಬು ಜೊತೆ ಲುಂಗಿ ಡ್ಯಾನ್ಸ್‌ ಮಾಡಲಿದ್ದಾರೆ ಡ್ಯಾನ್ಸ್‌ ಕ್ವೀನ್‌ ಶ್ರೀಲೀಲಾ

    ಮಹೇಶ್ ಬಾಬು ಜೊತೆ ಲುಂಗಿ ಡ್ಯಾನ್ಸ್‌ ಮಾಡಲಿದ್ದಾರೆ ಡ್ಯಾನ್ಸ್‌ ಕ್ವೀನ್‌ ಶ್ರೀಲೀಲಾ

    ಕನ್ನಡದ ‘ಕಿಸ್’ ಬ್ಯೂಟಿ ಶ್ರೀಲೀಲಾ, ಟಾಲಿವುಡ್ ಅಂಗಳದಲ್ಲಿ ಮ್ಯಾಜಿಕ್ ಮಾಡ್ತಿರೋದು ಗೊತ್ತೇ ಇದೆ. ಸಾಲು ಸಾಲು ಸಿನಿಮಾಗಳಿಗೆ ಹೀರೋಯಿನ್ ಆಗಿ ಮೆರೆಯುತ್ತಿರುವ ಶ್ರೀಲೀಲಾ(Sreeleela)  ‘ಗುಂಟೂರು ಖಾರಂ’ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು (Mahesh Babu) ಜೊತೆ ಲುಂಗಿ ಡ್ಯಾನ್ಸ್ ಮಾಡೋದ್ದಕ್ಕೆ ನಟಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಕಂಟೆಸ್ಟೆಂಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ದೀಪಿಕಾ ದಾಸ್

    ತ್ರಿವಿಕ್ರಮ್- ಮಹೇಶ್ ಬಾಬು ಜೊತೆ ಶ್ರೀಲೀಲಾ (Sreeleela) ಮೊದಲ ಬಾರಿಗೆ ಜೊತೆಯಾಗಿ ಸಿನಿಮಾ ಮಾಡಿದ್ದಾರೆ. ಇಬ್ಬರ ಜುಗಲ್‌ಬಂದಿ ಸವಿಯೋಕೆ ಪ್ರೇಕ್ಷಕರು ಕೂಡ ಕಾಯ್ತಿದ್ದಾರೆ. ಸಿನಿಮಾ ಕೂಡ ಕೊನೆಯ ಹಂತಕ್ಕೆ ಬಂದಿದೆ. ಬಾಕಿ ಉಳಿದಿರೋ ಸಾಂಗ್ ಶೂಟ್‌ಗೆ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಕಂಟೆಸ್ಟೆಂಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ದೀಪಿಕಾ ದಾಸ್

    ಪ್ರಿನ್ಸ್ ಹೀರೋ ಜೊತೆ ಡ್ಯಾನ್ಸ್ ಕ್ವೀನ್ ಶ್ರೀಲೀಲಾ ಲುಂಗಿ ಡ್ಯಾನ್ಸ್ ಮಾಡೋಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮಸ್ತ್ ಆಗಿ ಸಾಂಗ್ ಶೂಟ್ ಮಾಡಲು ಚಿತ್ರತಂಡ ಕೂಡ ಪ್ಲ್ಯಾನ್ ಮಾಡಿದೆ.

    ಹೇಳಿ ಕೇಳಿ ಮೊದಲೇ ಶ್ರೀಲೀಲಾ ಡ್ಯಾನ್ಸ್ ಮಾಡೋದ್ರಲ್ಲಿ ನಂಬರ್ ಒನ್. ಹೀಗಿರುವಾಗ ಮಹೇಶ್ ಬಾಬು (Mahesh Babu) ಜೊತೆ ಶ್ರೀಲೀಲಾ ಲುಂಗಿ ಡ್ಯಾನ್ಸ್ ಅಂತ ಸುದ್ದಿ ಕೇಳಿದ ಮೇಲೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಂಕ್ರಾಂತಿಗೆ ರಿಲೀಸ್ ಆಗಲಿರುವ ಗುಂಟೂರು ಖಾರಂ ಚಿತ್ರ ನೋಡೋಕೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ‘ಭಗವಂತ ಕೇಸರಿ’ ಸಕ್ಸಸ್ ಬಳಿಕ ದುಬಾರಿ ನಟಿಯಾದ ಶ್ರೀಲೀಲಾ

    ‘ಭಗವಂತ ಕೇಸರಿ’ ಸಕ್ಸಸ್ ಬಳಿಕ ದುಬಾರಿ ನಟಿಯಾದ ಶ್ರೀಲೀಲಾ

    ನ್ನಡದ ‘ಕಿಸ್’ (Kiss) ಬೆಡಗಿ ಶ್ರೀಲೀಲಾ (Sreeleela) ಈಗ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಸ್ಕಂದ’ ಮತ್ತು ‘ಭಗವಂತ ಕೇಸರಿ’ ಚಿತ್ರ ಹಿಟ್ ಆದ್ಮೇಲೆ ತಮ್ಮ ಸಂಭಾವನೆಯನ್ನ ಶ್ರೀಲೀಲಾ ಏರಿಸಿಕೊಂಡಿದ್ದಾರೆ.

    ‘ಧಮಾಕ’ (Dhamaka) ಬೆಡಗಿ ಟಾಲಿವುಡ್‌ನಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ. ಸಾಲು ಸಾಲು ಸಿನಿಮಾಗಳು ಆಫರ್‌ಗಳು ಶ್ರೀಲೀಲಾರನ್ನ ಅರಸಿ ಬರುತ್ತಿವೆ. ಹೀಗಿರುವಾಗ ನಟಿಗೆ ಡಿಮ್ಯಾಂಡ್ ಜಾಸ್ತಿ ಆಗುತ್ತಿದ್ದಂತೆ ಸಂಭಾವನೆ ಏರಿಕೆ ಮಾಡಿದ್ದಾರೆ. ಕೆರಿಯರ್ ಆರಂಭದಲ್ಲಿಯೇ ದುಬಾರಿ ನಟಿಯಾಗಿ ಸದ್ದು ಮಾಡ್ತಿದ್ದಾರೆ.

    ಒಂದು ಸಿನಿಮಾಗೆ 3.5 ಕೋಟಿ ಅಥವಾ 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದ ನಟಿ ಈಗ 4 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಸದ್ಯ ಸಿನಿಮಾ ಜೊತೆಗೆ ಶ್ರೀಲೀಲಾ ಸಂಭಾವನೆ ಮ್ಯಾಟರ್ ಸಿನಿಪಂಡಿತರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಬೇಬಿ’ ಬಳಿಕ ಮತ್ತೆ ಡ್ಯುಯೇಟ್ ಹಾಡಲು ಸಜ್ಜಾದ ಆನಂದ್ ದೇವರಕೊಂಡ

    ‘ಆದಿಕೇಶವ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪವನ್ ಕಲ್ಯಾಣ್, ಅಲ್ಲು ಅರ್ಜುನ್, ನಿತಿನ್ ಜೊತೆಗಿನ ಸಿನಿಮಾ ಕೆಲಸಗಳು ನಡೆಯುತ್ತಿದೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಕ್ಟರ್‌ ಆಗಿರೋ ಶ್ರೀಲೀಲಾ ಮೆಡಿಕಲ್‌ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್

    ಆಕ್ಟರ್‌ ಆಗಿರೋ ಶ್ರೀಲೀಲಾ ಮೆಡಿಕಲ್‌ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್

    ಟಾಲಿವುಡ್‌ನಲ್ಲಿ(Tollywood) ಶ್ರೀಲೀಲಾ ಮಾಡುತ್ತಿರುವ ಅಬ್ಬರ ಇದೆಯಲ್ಲ. ಅದು ಸುಮ್ಮನೆ ಎಲ್ಲರಿಗೂ ದಕ್ಕುವುದಿಲ್ಲ. ಇದೀಗ ಕಿಸ್ (Kiss) ಬೆಡಗಿ ಅದೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಕ್ಕ ಮೇಲೂ ಯಾಕೆ ಮೆಡಿಕಲ್ ಕಲಿಯಲು ಒದ್ದಾಡಿದರು? ಅದ್ಯಾವ ಕಾರಣಕ್ಕೆ ಡಾಕ್ಟರ್ ಆಗುವುದಕ್ಕೆ ನಿರ್ಧಾರ ಮಾಡಿದರು? ಇಲ್ಲಿದೆ ಮಾಹಿತಿ.

    ಕನ್ನಡದ ಈ ಹುಡುಗಿ ಶ್ರೀಲೀಲಾ(Sreeleela) ಈಗ ಟಾಲಿವುಡ್‌ನ ಸೆನ್ಸೇಶನಲ್ ಸ್ಟಾರ್. ಅಪ್ ಕಮ್ಮಿಂಗ್ ಹೀರೋಯಿನ್ ಪಟ್ಟ ಕಿತ್ತೋಗೆದು ಸ್ಟಾರ್ ಹೀರೋಯಿನ್ ಸಿಂಹಾಸನದಲ್ಲಿ ಕೂಡಲು ಸಜ್ಜಾಗಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾ ಇವೆ. ಹೀಗಿದ್ದರೂ ಶ್ರೀಲೀಲಾ ಈ ವರ್ಷದ ಕೊನೆಗೆ ಮೆಡಿಕಲ್ ಪರೀಕ್ಷೆ ಬರೆಯಲಿದ್ದಾರೆ. ಅದಕ್ಕಾಗಿ ಶೂಟಿಂಗ್‌ನಿಂದ ಬಿಡುವು ಪಡೆಯಲಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತೆ? ಅದು ಶ್ರೀಲೀಲಾ ಅಮ್ಮ ಸ್ವರ್ಣಲತಾ. ಇದನ್ನೂ ಓದಿ:ನಮ್ರತಾ ಜೊತೆ ‘ರಾಜಾ ಶಿವರಾಜ’ ಹಾಡಿಗೆ ಸ್ಟೆಪ್ ಹಾಕಿದ ತುಕಾಲಿ ಸಂತು

    ಶ್ರೀಲೀಲಾ ಅಮ್ಮನಿಗೆ (Mother) ಅದೊಮ್ಮೆ ಆರೋಗ್ಯ ತೀವ್ರವಾಗಿ ಕೈ ಕೊಟ್ಟಿತ್ತು. ಪಕ್ಕದಲ್ಲಿದ್ದ ಶ್ರೀಲೀಲಾಗೆ ಏನು ಮಾಡಬೇಕೆಂದು ತೋಚಲಿಲ್ಲ. ಡಾಕ್ಟರ್ ಬರೋವರೆಗೂ ತಾನೊಬ್ಬ ಯುಸ್‌ಲೆಸ್ ಹುಡುಗಿ ಎಂದು ಫೀಲ್ ಆಯಿತು. ಅಂದೇ ಮೆಡಿಕಲ್ ಕಲಿಯಲು ನಿರ್ಧರಿಸಿದರು. ಕಿಸ್ ಸಿನಿಮಾ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಆಸ್ಪತ್ರೆಗೆ ಹಾಜರಾದರು. ವಾರಕ್ಕೆ ಇಪ್ಪತ್ತು ಗಂಟೆ ಟ್ರೇನಿಂಗ್ ಪಡೆದರು. ಈಗ ಡಾಕ್ಟರ್ ಶ್ರೀಲೀಲಾ ಆಗುವ ಹಾದಿಯಲ್ಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಯ್ಯ ಮಗನ ಜೊತೆ ಶ್ರೀಲೀಲಾ ಮದುವೆ? ನಟಿ ಸ್ಪಷ್ಟನೆ

    ಬಾಲಯ್ಯ ಮಗನ ಜೊತೆ ಶ್ರೀಲೀಲಾ ಮದುವೆ? ನಟಿ ಸ್ಪಷ್ಟನೆ

    ಶ್ರೀಲೀಲಾ (Sreeleela) ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಹಾಗೆ ಅನ್ನುವುದಕ್ಕಿಂತ ಸುಮ್ಮ ಸುಮ್ಮನೆ ಅವರನ್ನು ಹೀಗೆ ಸಿಲುಕಿಸಿದ್ದಾರೆ. ಈಗ ತಾನೇ ಟಾಲಿವುಡ್ (Tollywood) ಅಂಗಳದಲ್ಲಿ ನೆಲೆ ಊರುತ್ತಿರುವ ಹುಡುಗಿಯನ್ನು ಮದುವೆ ಮಾಡಿಸಲು ಹೊರಟಿದ್ದಾರೆ ಕೆಲವರು. ಇದೇನಿದು? ಯಾರ ಜೊತೆ ಶ್ರೀಲೀಲಾ ಹೆಸರು ಥಳಕು ಹಾಕಿಕೊಂಡಿತು? ಇಲ್ಲಿದೆ ಮಾಹಿತಿ.

    ಕನ್ನಡತಿ ಶ್ರೀಲೀಲಾ ಮುಖ ಸಪ್ಪೆ ಮಾಡಿಕೊಂಡಿದ್ದಾರೆ. ಇನ್ಯಾರದ್ದೋ ತಪ್ಪಿಗೆ ಹೀಗೆ ಅವಮಾನ ಅನುಭವಿಸುತ್ತಿದ್ದಾರೆ. ಈಗ ತಾನೇ ಟಾಲಿವುಡ್ ಅಂಗಳದಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿಯೇ ಇವರ ಹೆಸರು ಅದೊಬ್ಬ ಸೂಪರ್‌ಸ್ಟಾರ್ ನಟನ ಮಗನ ಜೊತೆ ಸೇರಿಕೊಂಡಿದೆ. ಅಷ್ಟೇ ಅಲ್ಲ. ಆ ಹುಡುಗನ ಜೊತೆ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ವೈರಲ್ ಆಗುತ್ತಿದೆ. ಇದನ್ನೂ ಓದಿ:ಬಳಕುವ ಬಳ್ಳಿಯಂತೆ ಹಾಟ್‌ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ

    ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಹೆಸರು ಮಾಡುತ್ತಿದ್ದಾರೆ. ಒಂದಲ್ಲ ಎರಡಲ್ಲ ಭರ್ತಿ ಹನ್ನೊಂದು ಸಿನಿಮಾ ಇವರ ಕೈಯಲ್ಲಿವೆ. ಸ್ಟಾರ್ ನಟರಿಂದ ಹಿಡಿದು ಬಡ್ಡಿಂಗ್ ಆರ್ಟಿಸ್ಟ್ ಅಂತಾರಲ್ಲ. ಅವರ ಜೊತೆ ನಟಿಸುತ್ತಿದ್ದಾರೆ. ಇದೀಗ ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ‘ಭಗವಂತ ಕೇಸರಿ’ (Bhagavantha Kesari) ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ನಟಿಸುತ್ತಿದ್ದಾರೆ. ಇದೇ ಬಾಲಯ್ಯನ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಹೆಸರು ಓಡಾಡುತ್ತಿದೆ. ಬರೀ ಅಷ್ಟೆ ಅಲ್ಲ. ಆ ಹುಡುಗನ ಜೊತೆ ಮದುವೆ (Wedding) ಆಗಲಿದ್ದಾರಂತೆ ಕನ್ನಡದ ನಟಿ ಶ್ರೀಲೀಲಾ.

    ಮೋಕ್ಷಗಣನ ಜೊತೆ ಶ್ರೀಲೀಲಾ (Sreeleela) ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಜೊತೆಗೆ ಓಡಾಡಿದ್ದೂ ಸುಳ್ಳಲ್ಲ. ಅಷ್ಟಕ್ಕೇ ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಅಲ್ಲಿಯ ಕೆಲವು ಮೀಡಿಯಾ ವರದಿ ಮಾಡಿವೆ. ಇದನ್ನು ಕೇಳಿ ಶ್ರೀಲೀಲಾ ಫುಲ್ ಅಪ್‌ಸೆಟ್ ಆಗಿದ್ದಾರೆ. ಈ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದರೂ ಯಾರೂ ಕೇಳುತ್ತಿಲ್ಲ. ಸಿನಿಮಾ ಅಂದ ಮೇಲೆ ಈ ರೀತಿ ಗಾಳಿ ಸುದ್ದಿ ಸಾಮಾನ್ಯ. ಇದನ್ನು ತಲೆಗೆ ಹಚ್ಚಿಕೊಳ್ಳದೇ ಕೆಲಸ ಮಾಡಬೇಕಷ್ಟೇ. ಕನ್ನಡದ ಹುಡುಗಿ ಆದಷ್ಟು ಬೇಗ ಇದರಿಂದ ಹೊರಗೆ ಬರಲಿ ಎಂಬುದೇ ಅಭಿಮಾನಿಗಳ ಆಶಯ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಯ್ಯ ಎದುರು ಶ್ರೀಲೀಲಾ ಭಾವುಕರಾಗಿದ್ದೇಕೆ?

    ಬಾಲಯ್ಯ ಎದುರು ಶ್ರೀಲೀಲಾ ಭಾವುಕರಾಗಿದ್ದೇಕೆ?

    ನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ ಬಹುಬೇಡಿಕೆಯ ಹೀರೋಯಿನ್ ಆಗಿ ಹೈಲೆಟ್ ಆಗಿದ್ದಾರೆ. ಸದ್ಯ ಬಾಲಯ್ಯ (Balayya) ಜೊತೆಗೆ ನಟಿಸಿದ ‘ಭಗವಂತ ಕೇಸರಿ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಶ್ರೀಲೀಲಾ ಭಾವುಕರಾಗಿದ್ದಾರೆ.

    ‘ಭಗವಂತ ಕೇಸರಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರೋ ಶ್ರೀಲೀಲಾ, ಸಿನಿಮಾ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ನಾನು ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ಅನಿಲ್ ರವಿಪುಡಿ ನನಗೆ ಅಂತಹ ಸೋಲ್ ಕನೆಕ್ಟ್ ಆಗುವ ಪಾತ್ರ ಕೊಟ್ಟಿದ್ದಾರೆ. ಈ ಪಾತ್ರ ನೀಡಿದಕ್ಕೆ ತುಂಬಾ ಧನ್ಯವಾದಗಳು. ನಾನು ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ಆದರೆ ಈ ಚಿತ್ರದ ಪಾತ್ರ ನನಗೆ ಹೆಚ್ಚಾಗಿ ಕನೆಕ್ಟ್ ಆಗಿದೆ. ದಿನಗಳು ಕಳೆದಂತೆ ನಾನು ಆ ಪಾತ್ರವೇ ಆಗಿ ಬದಲಾದೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ ಎಂದು ಶ್ರೀಲೀಲಾ ಮಾತನಾಡಿದ್ದಾರೆ.

    ಬಾಲಕೃಷ್ಣ ಅವರೊಟ್ಟಿಗೆ ನನಗೆ ಭಾವನಾತ್ಮಕ ಸನ್ನಿವೇಶಗಳಿವೆ. ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಈ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ನಟಿಸುವಾಗ ಕಟ್ ಹೇಳಿದರೂ ಅದೇ ಮೂಡ್‌ನಲ್ಲಿ ಇರುತ್ತಿದ್ದೆ. ತಕ್ಷಣವೇ ಹೊರಗೆ ಬರಲು ಆಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಅವರು ನನ್ನನ್ನು ನಗುವಂತೆ ಮಾಡಿ ನನ್ನನ್ನು ಸಹಜ ಸ್ಥಿತಿ ತರುತ್ತಿದ್ದರು. ಬಾಲಕೃಷ್ಣ ಅವರ ಬೆಂಬಲ ಮರೆಯುವುದಿಲ್ಲ ಎಂದು ಶ್ರೀಲೀಲಾ ಹೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ : ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ

    ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ದೃಶ್ಯಗಳಿವೆ. ನಿಜ ಜೀವನದಲ್ಲಿ ನಡೆಯುತ್ತಿರುವ ಘಟನೆ ಹಾಗೂ ತಂದೆಯ ಅನುಪಸ್ಥಿತಿಯನ್ನು ನೆನಪಿಸಿಕೊಂಡು ವೇದಿಕೆ ಮೇಲೆ ನಟಿ ಭಾವುಕರಾಗಿದ್ದಾರೆ.

    ಬಾಲಯ್ಯ- ಕಾಜಲ್ (Kajal) ಜೋಡಿಯಾಗಿ ನಟಿಸಿದ್ದರೆ, ಶ್ರೀಲೀಲಾ ಅವರ ಮಗಳಾಗಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಧಮಾಕಾ’ ಬಳಿಕ ಮತ್ತೆ ಗೆದ್ದು ಬೀಗಿದ ಶ್ರೀಲೀಲಾ

    ‘ಧಮಾಕಾ’ ಬಳಿಕ ಮತ್ತೆ ಗೆದ್ದು ಬೀಗಿದ ಶ್ರೀಲೀಲಾ

    ನ್ನಡದ ಕಿಸ್ ಬ್ಯೂಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಧಮಾಕಾ (Dhamaka) ಸಕ್ಸಸ್ ಬಳಿಕ ತೆಲುಗಿನ ತಮ್ಮ 3ನೇ ಚಿತ್ರ ‘ಸ್ಕಂದ’ (Skanda Film) ಮೂಲಕ ನಟಿ ಗಮನ ಸೆಳೆಯುತ್ತಿದ್ದಾರೆ. ಧಮಾಕ ಬಳಿಕ ಮತ್ತೆ ಲಕ್ಕಿ ನಟಿ ಶ್ರೀಲೀಲಾ ಗೆದ್ದಿ ಬೀಗುತ್ತಿದ್ದಾರೆ.

    ರಾಮ್ ಪೋತಿನೇನಿಗೆ ಜೊತೆಯಾಗಿ ‘ಸ್ಕಂದ’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಗೆದ್ದಿದ್ದಾರೆ. ಸೆ.28ರಂದು ಬಹುಭಾಷೆಗಳಲ್ಲಿ ರಿಲೀಸ್ ಆದ ಸ್ಕಂದ ಚಿತ್ರ ಈಗ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

    ‘ಸ್ಕಂದ’ ರಿಲೀಸ್ ಆದ ಮೊದಲ ದಿನ ಒಟ್ಟು 18.2 ಕೋಟಿ ರೂಪಾಯಿ ಗಳಿಸಿದೆ. 2 ದಿನಗಳಲ್ಲಿ 27.6 ಕೋಟಿ ಗಳಿಸುವ ಮೂಲಕ ಚಿತ್ರ ಪೀಕ್‌ನಲ್ಲಿದೆ. ವ್ಯಾಕ್ಸಿನ್ ವಾರ್, ಚಂದ್ರಮುಖಿ 2 ನಡುವೆ ಸ್ಕಂದ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ವಾರಾಂತ್ಯ ಶುರುವಾಗುತ್ತಿರೋ ಕಾರಣ, ಚಿತ್ರ ಮತ್ತಷ್ಟು ಕಲೆಕ್ಷನ್‌ ಆಗುವ ಬಗ್ಗೆ ನೀರೀಕ್ಷೆ ಇದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್‌ ಹಾಕಿದ ರಚಿತಾ- ಸೋಶಿಯಲ್‌ ಮೀಡಿಯಾದಲ್ಲಿ ನಟಿ ಮನವಿ

    ರಾಮ್ ಪೋತಿನೇನಿ-ಶ್ರೀಲೀಲಾ ಜೋಡಿಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ‘ಸ್ಕಂದ’ ಚಿತ್ರದಿಂದ ಶ್ರೀಲೀಲಾಗೆ ಕೆರಿಯರ್‌ಗೆ ಮತ್ತೆ ಪ್ಲಸ್ ಆಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿಗೆ ಮತ್ತಷ್ಟು ಬಂಪರ್ ಆಫರ್ ಅರಸಿ ಬರೋದು ಗ್ಯಾರಂಟಿ ಅಂತಿದ್ದಾರೆ ಸಿನಿಮಾ ಪ್ರೇಮಿಗಳು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟಾರ್ ನಟರ ಸಿನಿಮಾಗೆ ಕೈಕೊಟ್ಟು ಎಡವಿದ್ರಾ ಶ್ರೀಲೀಲಾ

    ಸ್ಟಾರ್ ನಟರ ಸಿನಿಮಾಗೆ ಕೈಕೊಟ್ಟು ಎಡವಿದ್ರಾ ಶ್ರೀಲೀಲಾ

    ಟಾಲಿವುಡ್‌ನಲ್ಲಿ ಶ್ರೀಲೀಲಾಗೆ (Sreeleel) ಭರ್ಜರಿ ಡಿಮ್ಯಾಂಡ್ ಇದೆ. ಕನ್ನಡ ಸಿನಿಮಾಗೆ ಮತ್ತೆ ಬರಲ್ವಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿದೆ. ತೆಲುಗಿನಲ್ಲಿ ಗಟ್ಟಿ ನೆಲೆ ನಿಲ್ಲುವ ಲಕ್ಷಣವಿದೆ. ಹೀಗಿರುವಾಗ ಸ್ಟಾರ್ ನಟರಾದ ರವಿತೇಜ (Raviteja), ವಿಜಯ್ ದೇವರಕೊಂಡ (Vijay Devarakonda) ನಟನೆಯ ಸಿನಿಮಾಗಳಿಗೆ ಶ್ರೀಲೀಲಾ ಕೈಕೊಟ್ಟಿದ್ದಾರೆ.

    ಸೆ.28ರಂದು ರಿಲೀಸ್ ಆಗುತ್ತಿರುವ ‘ಸ್ಕಂದ’ ಸಿನಿಮಾ ಸೇರಿದಂತೆ 7ಕ್ಕೂ ಹೆಚ್ಚು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ನಡುವೆ ರವಿತೇಜ, ವಿಜಯ್ ದೇವರಕೊಂಡ ನಟನೆಯ ಸಿನಿಮಾದಿಂದ ಕಾರಣಾಂತರಗಳಿಂದ ಹೊರಬಂದಿದ್ದಾರೆ. ಈ ಚಿತ್ರಗಳು ಈಗ ರಶ್ಮಿಕಾ ಮಂದಣ್ಣ ಪಾಲಾಗಿದೆ. ಇಬ್ಬರು ಕನ್ನಡತಿಯರ ನಡುವೆ ಸಖತ್ ಪೈಪೋಟಿಯಿದ್ದು, ಸ್ಟಾರ್ ನಟರಿಗೆ ಜೋಡಿಯಾಗ್ತಿದ್ದಾರೆ.

    ಭಗವಂತ ಕೇಸರಿ, ಆದಿಕೇಶವ, ಗುಂಟೂರು ಖಾರಂ, ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಹಲವು ಸಿನಿಮಾಗಳು ಶ್ರೀಲೀಲಾ ಕೈಯಲ್ಲಿವೆ. ಇದನ್ನೂ ಓದಿ:ನಿತ್ಯಾ ಮೆನನ್ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ರಾ? ಮೈನಾ ನಟಿ ಸ್ಪಷ್ಟನೆ

    ಶ್ರೀಲೀಲಾ (Sreeleela) ನಟಿಸಿದ ತೆಲುಗಿನ 3ನೇ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ‘ಧಮಾಕ’ (Dhamaka) ಸಿನಿಮಾ ಮೂಲಕ ಸಕ್ಸಸ್ ಕಂಡ ನಟಿ ಈಗ ಸ್ಕಂದ ಚಿತ್ರದ ಮೂಲಕ ಗೆದ್ದು ಬೀಗುತ್ತಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪಾರ್ಥಿಬನ್ ವಿಲನ್

    ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪಾರ್ಥಿಬನ್ ವಿಲನ್

    ವನ್ ಕಲ್ಯಾಣ್, ಶ್ರೀಲೀಲಾ (Sreeleela) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿದೆ ಚಿತ್ರತಂಡ. ಪವನ್ ಕಲ್ಯಾಣ್ ((Pawan Kalyan) ಮುಂದೆ ತಮಿಳು ನಟ ಪಾರ್ಥಿಬನ್ (Parthiban) ಅಬ್ಬರಿಸಲಿದ್ದಾರೆ.

    ಕನ್ನಡದ ಬ್ಯೂಟಿ ಶ್ರೀಲೀಲಾ ತೆಲುಗಿನಲ್ಲಿ ಸಖತ್ ಡಿಮ್ಯಾಂಡ್‌ ಇದೆ. ಮೊದಲ ಬಾರಿಗೆ ಪವನ್ ಕಲ್ಯಾಣ್ ಜೊತೆ ಕಿಸ್ ನಟಿ ಡ್ಯುಯೇಟ್ ಹಾಡ್ತಿದ್ದಾರೆ. ಹೀಗಿರುವಾಗ ಬಹುನಿರೀಕ್ಷಿತ ಚಿತ್ರಕ್ಕೆ ತಮಿಳು ನಟ, ನಿರ್ದೇಶಕ ಪಾರ್ಥಿಬನ್ ಎಂಟ್ರಿಯಾಗಿದೆ ಎನ್ನಲಾಗುತ್ತಿದೆ.

    ಸದ್ಯ 2ನೇ ಭಾಗದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್‌ಗೆ ತಂಡ ಪ್ಲ್ಯಾನ್ ಮಾಡಿದೆ. ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.‌ ಇದನ್ನೂ ಓದಿ:ಕರ್ನಾಟಕದವರು ಸತ್ತಿಲ್ಲ, ಬದುಕಿದ್ದೇವೆ- ಕಾವೇರಿ ಪರ ಧ್ವನಿಯೆತ್ತಿದ ಸಾ ರಾ ಗೋವಿಂದು

    ಶ್ರೀಲೀಲಾ ಸದ್ಯ ಸೌತ್‌ನ ಬ್ಯುಸಿ ನಟಿ, 9ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಅವರ ಡೇಟ್ಸ್ ಹೊಂದಾಣಿಕೆಯಾಗದೇ ರವಿತೇಜ, ವಿಜಯ್ ದೇವರಕೊಂಡ ನಟನೆಯ ಸಿನಿಮಾಗಳನ್ನ ನಟಿ ಕೈಬಿಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]