Tag: Sreeleela

  • ರಶ್ಮಿಕಾ, ಶ್ರೀಲೀಲಾ ನಡುವೆ ಕಾಣೆಯಾದ್ರಾ ಕುಡ್ಲದ ಬೆಡಗಿ ನೇಹಾ ಶೆಟ್ಟಿ?

    ರಶ್ಮಿಕಾ, ಶ್ರೀಲೀಲಾ ನಡುವೆ ಕಾಣೆಯಾದ್ರಾ ಕುಡ್ಲದ ಬೆಡಗಿ ನೇಹಾ ಶೆಟ್ಟಿ?

    ಟಾಲಿವುಡ್ ಅಂಗಳದಲ್ಲಿ ಸದ್ಯ ಕನ್ನಡತಿಯರ ಹವಾ ಜಾಸ್ತಿ ಆಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾಗೆ (Sreeleela) ತೆಲುಗಿನಲ್ಲಿ ಭಾರೀ ಬೇಡಿಕೆಯಿದೆ. ಇವರ ನಡುವೆ ಕುಡ್ಲದ ಕುವರಿ ನೇಹಾ ಶೆಟ್ಟಿಗೆ ಬೇಡಿಕೆ ಕಮ್ಮಿಯಾಗಿದ್ಯಾ? ಎಂಬ ಗುಸು ಗುಸು ಶುರುವಾಗಿದೆ. ಹಾಗಾದ್ರೆ ಕರಾವಳಿ ನಟಿ ಕೈಯಲ್ಲಿ ಅದೆಷ್ಟು ಸಿನಿಮಾಗಳಿವೆ. ನೇಹಾ ಈಗ ಏನ್ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ.

    ‘ಮುಂಗಾರು ಮಳೆ 2’ (Mungaru Male 2) ಚಿತ್ರದಿಂದ ಸಿನಿಮಾ ಕೆರಿಯರ್ ಶುರು ಮಾಡಿದ ಮಂಗಳೂರಿನ ಬೆಡಗಿ ನೇಹಾ ಶೆಟ್ಟಿ (Neha Shetty) ಸದ್ಯ ಟಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗಿ ನಟಿ ನೇಹಾ ತೆಲುಗು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

    Neha Shetty

    ತೆಲುಗಿನ ಮೆಹಬೂಬಾ, ಗಲ್ಲಿ ಬಾಯ್, ಡಿಜೆ ಟಿಲ್ಲು ಚಿತ್ರಗಳ ಮೂಲಕ ಗಮನ ಸೆಳೆದ ನೇಹಾ ಶೆಟ್ಟಿಗೆ ಈಗ ಅವಕಾಶಗಳು ಕಮ್ಮಿಯಾಗಿದೆ. ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಸಿಗದೇ ನಟಿ ಕಂಗಾಲಾಗಿದ್ದಾರೆ. ಸದ್ಯ ತೆಲುಗಿನಲ್ಲಿ ಸೌಂಡ್ ಮಾಡುತ್ತಿರುವ ಹೆಸರು ಅಂದರೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ. ನೇಹಾ ಶೆಟ್ಟಿ ಠಕ್ಕರ್ ಕೊಟ್ಟಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳಿಗೆ ರಶ್ಮಿಕಾ ಅಥವಾ ಶ್ರೀಲೀಲಾನೇ ಬೇಕು ಅನ್ನುವಷ್ಟರ ಮಟ್ಟಿಗೆ ಅವರಿಗೆ ಬೇಡಿಕೆ ಇದೆ. ರಶ್ಮಿಕಾ ತೆಲುಗಿನ ಜೊತೆ ಬಾಲಿವುಡ್‌ನತ್ತ ಮುಖ ಮಾಡಿದ್ರೆ, ಶ್ರೀಲೀಲಾ ಕಾಲಿವುಡ್‌ನಲ್ಲಿ ಹೊಸ ಹೆಜ್ಜೆ ಇಡಲು ಪ್ಲ್ಯಾನ್‌ ಮಾಡಿದ್ದಾರೆ. ಇದನ್ನೂ ಓದಿ:ಹೊಸ ಹುಡುಗಿ ಜೊತೆ ವರ್ಮಾ ನೈಟ್ ಪಾರ್ಟಿ

    ‘ಡಿಜೆ ಟಿಲ್ಲು’ (Dj Tillu) ಸಿನಿಮಾದಲ್ಲಿ ಸಿದ್ದು ಜೊತೆ ನೇಹಾ ಬೋಲ್ಡ್ ಆಗಿ ನಟಿಸಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಮೋಡಿ ಮಾಡಿದ್ದರು. ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಸದ್ಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಬಿಟ್ಟು ಯಾವುದೇ ಹೊಸ ಚಿತ್ರವನ್ನು ನಟಿ ಒಪ್ಪಿಕೊಂಡಿಲ್ಲ. ಇದೇ ಮೇನಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.

    ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ನಂತರ ನೇಹಾ ಶೆಟ್ಟಿ ಲಕ್ ಬದಲಾಗುತ್ತಾ? ಈ ಚಿತ್ರ ಮುಂಗಾರು ಮಳೆ 2 ನಟಿಯ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.

  • ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ಆಸೆ ವ್ಯಕ್ತಪಡಿಸಿದ ಶ್ರೀಲೀಲಾ

    ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ಆಸೆ ವ್ಯಕ್ತಪಡಿಸಿದ ಶ್ರೀಲೀಲಾ

    ನ್ನಡದ ‘ಕಿಸ್’ (Kiss)  ಬೆಡಗಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್‌ನ (Tollywood) ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿರಂಗದಲ್ಲಿ ಸತತ ಸೋಲಿನ ನಂತರ ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ನಟಿ ಆಸೆ ವ್ಯಕ್ತಪಡಿಸಿದ್ದಾರೆ.

    ಶ್ರೀಲೀಲಾ ಅಂದಕ್ಕೆ, ಆಕೆಯ ಡ್ಯಾನ್ಸ್‌ಗೆ ಅಪಾರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಸ್ ಬೆಡಗಿ ನಟಿಸಿದ ಸಿನಿಮಾಗಳು ಹಿಟ್‌ ಆಗಿರಲಿ ಅಥವಾ ಫ್ಲಾಪ್ ಆಗಿರಲಿ ಅವರ ಮೇಲಿನ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಇದೀಗ ತೆಲುಗಿನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಇತ್ತೀಚೆಗೆ ತಮಿಳುನಾಡಿನಲ್ಲಿ ಮೆಡಿಕಲ್‌ ಕಾಲೇಜು ಕಾರ್ಯಕ್ರಮವೊಂದರಲ್ಲಿ ನಟ ಶಿವಕಾರ್ತಿಕೇಯನ್‌ ಜೊತೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ, ತಮಿಳು ಅಭಿಮಾನಿಗಳ ಕ್ರೇಜ್ ನೋಡಿ ನಟಿ ಶಾಕ್ ಆಗಿದ್ದಾರೆ.

    ನನಗೆ ತುಂಬಾ ಖುಷಿಯಾಗಿದೆ. ನನಗೆ ಇಷ್ಟು ದಿನ ನನಗೊಂದು ಅನುಮಾನವಿತ್ತು. ನನಗೆ ತಮಿಳು ಬರುವುದಿಲ್ಲ, ತಮಿಳಿನಲ್ಲಿ ಸಿನಿಮಾ ಮಾಡಿಲ್ಲ. ಇಲ್ಲಿನವರಿಗೆ ನನ್ನ ಪರಿಚಯ ಇರಲ್ಲ ಎಂದುಕೊಂಡಿದ್ದೆ. ನನ್ನನ್ನು ಅತಿಥಿ ಆಗಿ ಕರೆದಾಗ, ನನ್ನ ಹೇಗೆ ಸ್ವಾಗತಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ನಿಮ್ಮ ಪ್ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮನ್ನು ನೋಡಿದ ಮೇಲೆ ಒಂದು ತಮಿಳು ಚಿತ್ರ (Tamil Films) ಮಾಡಬೇಕು ಅನ್ನಿಸುತ್ತಿದೆ ಎಂದು ನಟಿ ಮಾತನಾಡಿದ್ದಾರೆ.

    ಮೆಡಿಕಲ್ ಕಾಲೇಜಿನಲ್ಲಿ ಇಷ್ಟು ಎನರ್ಜಿ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ನಾನು ಕೂಡ ಮೆಡಿಕಲ್ ವಿದ್ಯಾರ್ಥಿ. ನಿಮ್ಮನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಸದ್ಯ ಶ್ರೀಲೀಲಾ ಮಾತುಗಳು ವೈರಲ್ ಆಗಿವೆ. ಇದನ್ನೂ ಓದಿ:ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

    ಸದ್ಯ ಪವನ್ ಕಲ್ಯಾಣ್‌ಗೆ (Pawan Kalyan) ನಾಯಕಿಯಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಈ ಸಿನಿಮಾ ಶ್ರೀಲೀಲಾ (Sreeleela) ಕೆರಿಯರ್‌ಗೆ ಬ್ರೇಕ್ ಕೊಡುತ್ತಾ ಕಾದುನೋಡಬೇಕಿದೆ.

  • ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

    ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

    ನ್ನಡತಿ, ತೆಲುಗಿನ ಬಹಿಬೇಡಿಕೆಯ ನಟಿ ಶ್ರೀಲೀಲಾ (Sreeleela) ಇದೀಗ ಕೆರಿಯರ್ ಸಕ್ಸಸ್‌ಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕಳೆದ ವರ್ಷ ಶ್ರೀಲೀಲಾ ಭರ್ತಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದ್ದಾರೆ. ಆದರೆ ಯಾವುದೂ ಹಿಟ್ ಆಗಲಿಲ್ಲ ಅನ್ನೋದೇ ದುರಂತ. ಅದಕ್ಕೀಗ ಶ್ರೀಲೀಲಾ ನಯಾ ಸಂಕಲ್ಪ ಮಾಡಿದ್ದಾರೆ.

    ತೆಲುಗು ಇಂಡಸ್ಟ್ರಿಯಲ್ಲಿ ಸಮಕಾಲಿನ ನಟಿಯರಿಗೆ ಠಕ್ಕರ್ ಕೊಟ್ಟು ಜಾಗ ಮಾಡ್ಕೊಂಡಿರುವವರು ಶ್ರೀಲೀಲಾ. ವರ್ಷವೊಂದಕ್ಕೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದರು. ಬಗೆ ಬಗೆಯ ಪಾತ್ರ, ಸ್ಟಾರ್ ನಟರ ಚಿತ್ರ. ಎಲ್ಲಾ ಭಾಗ್ಯ ಶ್ರೀಲೀಲಾಗೆ ಒದಗಿ ಬಂತು. ಆದರೆ ಅದ್ಯಾವ ಚಿತ್ರಗಳೂ ಆರಕ್ಕೇರಲಿಲ್ಲ. ಬ್ಲಾಕ್‌ಬಸ್ಟರ್ ಎಂದು ಕರೆಸಿಕೊಳ್ಳಲಿಲ್ಲ. ಅದಕ್ಕೀಗ ಮುಂದಿನ ದಿನಗಳಲ್ಲಿ ಶ್ರೀಲೀಲಾ ಬಂದಿರುವ ಎಲ್ಲಾ ಪ್ರಾಜೆಕ್ಟ್ ಒಪ್ಪಿಕೊಳ್ಳದಿರುವ ತೀರ್ಮಾನಕ್ಕೆ ಬಂದಿದ್ದಾರೆ.

    ಕಳೆದ ವರ್ಷ 6 ಸಿನಿಮಾಗಳಲ್ಲಿ ನಟಿಸಿದ್ದರು. ಯಾವುದು ಹೇಳಿಕೊಳ್ಳುವಂತೆ ಹಿಟ್ ಆಗ್ಲಿಲ್ಲ. ಆಫರ್‌ಗಳೇನೂ ಬರುತ್ತಿದೆ. ಆದರೆ ಸೂಕ್ತ ಸಿಗುತ್ತಿಲ್ಲ. ಹೀಗಾಗಿ ಕಾದು ನೋಡ್ತಿದ್ದಾರೆ ಶ್ರೀಲೀಲಾ. ಕ್ವಾಂಟಿಟಿ ಬಿಟ್ಟು ಕ್ವಾಲಿಟಿ ಕಡೆ ಗಮನ ಕೊಡ್ತಿದ್ದಾರಂತೆ. ಹೀಗಾಗಿ ಹಿಂದೆ ಒಪ್ಪಿಕೊಂಡ ಪ್ರಾಜೆಕ್ಟ್ ಕಡೆ ಗಮನ ಕೊಡ್ತಿದ್ದಾರೆ. ಪವನ್ ಕಲ್ಯಾಣ್ (Pawan Kalyan) ಜೊತೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಈ ಚಿತ್ರದ ನಂತರ ‘ಕಿಸ್’ ಬೆಡಗಿಯ ಅದೃಷ್ಟ ಬದಲಾಗುತ್ತಾ? ಕಾಯಬೇಕಿದೆ.

    ಈ ಚಿತ್ರದ ರಿಲೀಸ್ ಆದ್ಮೇಲೆಯೇ ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡೋದು ಶ್ರೀಲೀಲಾ ಪ್ಲ್ಯಾನ್ ಅನ್ನೋದು ಟಾಲಿವುಡ್ ಗಲ್ಲಿಯಿಂದ ಬಂದ ಸಮಾಚಾರ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಎಂದ ಸುದೀಪ್

    ಅಂದಹಾಗೆ, ಕನ್ನಡದ ಕಿಸ್, ಭರಾಟೆ, ಬೈಟು ಲವ್ ಚಿತ್ರಗಳಲ್ಲಿ ನಟಿಸಿದ ಮೇಲೆ ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ನಟಿ ಲಗ್ಗೆ ಇಟ್ಟರು.

  • ಶ್ರೀಲೀಲಾ ಡ್ಯಾನ್ಸ್ ನೋಡಿ ಹೊಗಳಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್

    ಶ್ರೀಲೀಲಾ ಡ್ಯಾನ್ಸ್ ನೋಡಿ ಹೊಗಳಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್

    ನ್ನಡತಿ, ತೆಲುಗಿನ ಟಾಪ್ ನಟಿ ಶ್ರೀಲೀಲಾ (Sreeleela) ಹವಾ ಜೋರಾಗಿದೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಪೀಕ್‌ನಲ್ಲಿರುವ ಶ್ರೀಲೀಲಾಗೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಭೇಷ್ ಎಂದಿದ್ದಾರೆ. ‘ಗುಂಟೂರು ಖಾರಂ’ ಚಿತ್ರದಲ್ಲಿ ಶ್ರೀಲೀಲಾ ಡ್ಯಾನ್ಸ್ ನೋಡಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ (Ravichandran Ashwin) ಬೆರಗಾಗಿದ್ದಾರೆ.

    ಸಂದರ್ಶನವೊಂದರಲ್ಲಿ ಶ್ರೀಲೀಲಾ ಬಗ್ಗೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿ, ಇತ್ತೀಚೆಗೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ನೋಡಿದೆ. ಸಿನಿಮಾ ತುಂಬಾ ಚೆನ್ನಾಗಿದೆ. ಅದರಲ್ಲಿ ಶ್ರೀಲೀಲಾ ಡ್ಯಾನ್ಸ್ ಚೆನ್ನಾಗಿ ಮಾಡಿದ್ದಾರೆ. ಅವರ ಡ್ಯಾನ್ಸ್ ನೋಡಿ ಬೆರಗಾದೆ ಎಂದು ಕ್ರಿಕೆಟಿಗ ಮಾತನಾಡಿದ್ದಾರೆ. ಇದನ್ನೂ ಓದಿ:ದುಪ್ಪಟ್ಟು ಸಂಭಾವನೆಗೆ ಬೇಡಿಕೆಯಿಟ್ಟ ಸಮಂತಾ

    ನನಗೆ ಸಿನಿಮಾ ನೋಡಲು ಸಮಯವಿಲ್ಲ. ಆದರೆ ರಜನಿಕಾಂತ್ (Rajanikanth) ಸಿನಿಮಾ ಬಿಟ್ಟು ಬೇರೆ ಸಿನಿಮಾಗಳನ್ನು ನೋಡಲ್ಲ. ಆದರೆ ಮಹೇಶ್ ಬಾಬು, ಶ್ರೀಲೀಲಾ ನಟನೆಯ ಈ ಸಿನಿಮಾ ಇಷ್ಟ ಆಯ್ತು. ಅದರಲ್ಲೂ ಶ್ರೀಲೀಲಾ ಡ್ಯಾನ್ಸ್ ಚೆನ್ನಾಗಿದೆ ಎಂದು ಕ್ರಿಕೆಟಿಗ ಸಂದರ್ಶನದಲ್ಲಿ ಕೊಂಡಾಡಿದ್ದಾರೆ. ಇದನ್ನೂ ಓದಿ:ದುಪ್ಪಟ್ಟು ಸಂಭಾವನೆಗೆ ಬೇಡಿಕೆಯಿಟ್ಟ ಸಮಂತಾ

    ಸದ್ಯ ಶ್ರೀಲೀಲಾ ಅವರು ಪವನ್ ಕಲ್ಯಾಣ್ (Pawan Kalyan) ನಟನೆಯ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.

  • ಸ್ಟಾರ್ ನಟರಿಗೆ ತಲೆನೋವಾದ ಶ್ರೀಲೀಲಾ- ಅಂತಹದ್ದೇನಾಯ್ತು?

    ಸ್ಟಾರ್ ನಟರಿಗೆ ತಲೆನೋವಾದ ಶ್ರೀಲೀಲಾ- ಅಂತಹದ್ದೇನಾಯ್ತು?

    ನ್ನಡತಿ ಶ್ರೀಲೀಲಾ (Sreeleela) ಇದೀಗ ಟಾಲಿವುಡ್‌ನಲ್ಲಿ (Tollywood) ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಕಿಸ್ ಬೆಡಗಿ ಡಿಮ್ಯಾಂಡ್‌ನಲ್ಲಿದ್ದಾರೆ. ಹೀಗಿರುವಾಗ ಶ್ರೀಲೀಲಾ ಪ್ರತಿಭೆ ಇದೀಗ ಸ್ಟಾರ್ ನಟರ ನಿದ್ದೆಗೆಡಿಸಿದೆ. ಶ್ರೀಲೀಲಾ ಜೊತೆ ನಟಿಸಲು ಸ್ಟಾರ್ ನಟರಿಗೆ ಚಿಂತೆ ಶುರುವಾಗಿದೆ. ಇದನ್ನೂ ಓದಿ:ಜಪಾನ್‌ನಲ್ಲಿ ಮಹೇಶ್ ಬಾಬು ಜೊತೆಗಿನ ಚಿತ್ರದ ಬಗ್ಗೆ ರಾಜಮೌಳಿ ಅಪ್‌ಡೇಟ್

    ತೆಲುಗಿನಲ್ಲಿ 2 ಸಿನಿಮಾ ಮಾಡಿದ್ಮೇಲೆ ಸ್ಟಾರ್ ಹೀರೋಗಳಿಗೆ ನಾಯಕಿಯಾಗುವ ಮೂಲಕ ಲೀಲಾ ಹಿಟ್ ಲಿಸ್ಟ್‌ಗೆ ಸೇರಿಕೊಂಡಿದ್ದಾರೆ. ಸ್ಟಾರ್ ನಟಿಮಣಿಯರ ಲಿಸ್ಟ್‌ಗೆ ಸೇರ್ಪಡೆಯಾದರು. ಇದೀಗ ಪ್ರತಿಭೆಯೇ ಬೇರೆ ಸ್ಟಾರ್ ನಟರಿಗೆ ತಲೆ ನೋವಾಗಿದೆ. ಸೌಂದರ್ಯ, ಡ್ಯಾನ್ಸಿಂದಲೇ ಗಮನ ಸೆಳೆದ ಶ್ರೀಲೀಲಾ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ನಾಯಕಿಯಾಗಿ ಸದ್ದು ಮಾಡಿದ್ದರು. ಆದರೆ ಕಥೆ ಹೆಚ್ಚಿನ ಗಮನ ವಹಿಸದ ಕಾರಣ ಶ್ರೀಲೀಲಾ ಸಿನಿಮಾಗಳು ಮಕಾಡೆ ಮಲಗಿತ್ತು. ಇನ್ನೂ ಶ್ರೀಲೀಲಾರ (Sreeleela) ಎನರ್ಜಿಟಿಕ್ ಡ್ಯಾನ್ಸ್ ಬೇರೇ ನಟರಿಗೆ ಮ್ಯಾಚ್ ಮಾಡೋದು ಕಷ್ಟವಾಗಿದೆ.

    ಶ್ರೀಲೀಲಾ ವೇಗ, ಎನರ್ಜಿಗೆ ಮ್ಯಾಚ್ ಮಾಡಲಾಗದೇ ಅವರ ಜೊತೆ ಕೆಲಸ ಮಾಡಲು ಹಿಂದೇಟು ಹಾಕ್ತಿದ್ದಾರೆ. ಯಾವುದೇ ರೀತಿಯ ಸ್ಟೇಪ್ಸ್ ಇರಲಿ, ಅಲ್ಲಿಯೇ ಕಲಿತು ಸೆಟ್‌ನಲ್ಲಿ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಆದರೆ ಹೀರೋಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಇದೇ ಈಗ ನಟರಿಗೆ ತಲೆ ನೋವಾಗಿದೆ.

    ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ (Pawan Kalyan) ಹೀರೋಯಿನ್ ಆಗಿ ಶ್ರೀಲೀಲಾ ನಟಿಸಿದ್ದಾರೆ. ಹೊಸ ಬಗೆಯ ಕಥೆಗಳನ್ನು ನಟಿ ಕೇಳ್ತಿದ್ದಾರೆ.

  • ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡ ಶ್ರೀಲೀಲಾ

    ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡ ಶ್ರೀಲೀಲಾ

    ನ್ನಡತಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್‌ನಲ್ಲಿ (Tollywood) ಕಮಾಲ್ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ ನಂತರ ಕನ್ನಡದ ಮತ್ತೋರ್ವ ನಟಿ ಶ್ರೀಲೀಲಾ ತೆಲುಗು ಮಂದಿ ಮಣೆ ಹಾಕ್ತಿದ್ದಾರೆ. ಹೀಗಿರುವಾಗ ಗೋಲ್ಡನ್ ಚಾನ್ಸ್‌ವೊಂದನ್ನು ನಟಿ ಮಿಸ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನಾಳೆ ಅಪ್ಪು ನಟನೆಯ ‘ಜಾಕಿ’ ಸಿನಿಮಾ ರಿಲೀಸ್

    ‘ಗುಂಟೂರು ಖಾರಂ’ ಸಿನಿಮಾ ಸಕ್ಸಸ್ ಆದ್ರೂ ಶ್ರೀಲೀಲಾಗೆ ಅದ್ಯಾಕೋ ಈ ಬಾರಿ ಲಕ್ ಕೈ ಕೊಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ, ಸ್ಟಾರ್ ನಟ ರಾಮ್ ಚರಣ್ (Ramcharan) ಜೊತೆ ಶ್ರೀಲೀಲಾ ಡ್ಯುಯೇಟ್ ಹಾಡುವ ಅವಕಾಶ ಮಿಸ್ ಮಾಡಿಕೊಂಡಿದ್ದಾರೆ.

    ರಾಮ್ ಚರಣ್ 16ನೇ ಸಿನಿಮಾಗೆ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಲಿದ್ದಾರೆ. ರಾಮ್ ಚರಣ್ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಟಿಸಲಿದ್ದಾರೆ. ರಾಮ್ ಚರಣ್‌ಗೆ ಶ್ರೀಲೀಲಾರನ್ನು ಜೋಡಿಯಾಗಿ ತೋರಿಸಬೇಕು ಎಂದು ಚಿತ್ರತಂಡ ಯೋಚಿಸಿತ್ತು. ನಟಿಯ ಜೊತೆ ಮಾತುಕತೆ ಆಗಿತ್ತು.

    ಆದರೆ ಏಕಾಎಕಿ ಏನಾಯ್ತೋ ಶ್ರೀಲೀಲಾ ಬದಲು ಜಾನ್ವಿ ಕಪೂರ್‌ಗೆ (Janhvi Kapoor) ಮಣೆ ಹಾಕಿದ್ದರು. ಬಾಲಯ್ಯ, ಮಹೇಶ್ ಬಾಬುರಂತಹ ಸ್ಟಾರ್‌ಗಳ ಜೊತೆ ನಟಿಸಿರುವ ಲೀಲಾಗೆ ರಾಮ್ ಚರಣ್ ಜೊತೆ ನಟಿಸಿದ್ರೆ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಗುತ್ತಿತ್ತು. ಆದರೆ ಕಾರಣಾಂತರಗಳಿಂದ ನಟಿ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡಿದ್ದಾರೆ. ಚರಣ್ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶ ಜಾನ್ವಿಗೆ ಸಿಕ್ಕಿದೆ.

    ಕನ್ನಡದ ಕಿಸ್‌, ಭರಾಟೆ, ಬೈ ಟು ಲವ್‌, ತೆಲುಗಿನ ಧಮಾಕಾ, ಸ್ಕಂದ, ಆದಿಕೇಶವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ.

  • ‘ಪುಷ್ಪ 2’ ಆಫರ್ ಕೈಬಿಟ್ಟಿದ್ದೇಕೆ ಶ್ರೀಲೀಲಾ?

    ‘ಪುಷ್ಪ 2’ ಆಫರ್ ಕೈಬಿಟ್ಟಿದ್ದೇಕೆ ಶ್ರೀಲೀಲಾ?

    ನ್ನಡದ ನಟಿ ಶ್ರೀಲೀಲಾ ಇತ್ತೀಚೆಗೆ ನಟಿಸಿದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಹೀಗಿದ್ದರೂ ಶ್ರೀಲೀಲಾಗೆ ಬೇಡಿಕೆ ಕಮ್ಮಿಯಾಗಿಲ್ಲ. ಸದ್ಯ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಚಿತ್ರದಲ್ಲಿ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು, ಬಿಗ್ ಆಫರ್ ಅನ್ನೇ ಕನ್ನಡದ ನಟಿ ನೋ ಎಂದಿದ್ದಾರೆ. ಇದನ್ನೂ ಓದಿ:2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ

    ‘ಪುಷ್ಪ’ ಪಾರ್ಟ್ 1 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್‌ಫುಲ್ ಎಂದೆನಿಸಿಕೊಂಡಿರುವ ಸಿನಿಮಾ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅದ್ಭುತ ಅಭಿನಯಕ್ಕೆ ಅಭಿಮಾನಿಗಳು ವಾವ್ ಎಂದಿದ್ದರು. ‘ಪುಷ್ಪ’ ಪಾರ್ಟ್ 2 ಕೂಡ ಉತ್ತಮ ಕಥೆಯ ಜೊತೆ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳುವ ಅವಕಾಶ ಸಿಗಲಿ ಎಂದು ಪರಿತಪಿಸುವ ನಟಿಯರ ಮಧ್ಯೆ ಶ್ರೀಲೀಲಾ ಸಿಕ್ಕ ಆಫರ್ ಕೈಬಿಟ್ಟಿರೋದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

    ‘ಪುಷ್ಪ’ ಪಾರ್ಟ್ 1ರಲ್ಲಿ ಸಮಂತಾ (Samantha) ಸೊಂಟ ಬಳುಕಿಸಿದ್ದು, ಚಿತ್ರಕ್ಕೆ ಪ್ಲಸ್ ಆಗಿತ್ತು. ಹಾಗಾಗಿ ಭಾಗ 2ರಲ್ಲಿ ಅದೇ ರೀತಿಯ ಐಟಂ ಸಾಂಗ್ ಇಡಲು ಡೈರೆಕ್ಟರ್ ಯೋಚಿಸಿದ್ದು, ಶ್ರೀಲೀಲಾಗೆ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕುವ ಆಫರ್ ನೀಡಿದ್ದರು. ನಾಯಕಿಯಾಗಿ ಬೇಡಿಕೆ ಇರುವ ಶ್ರೀಲೀಲಾ ಐಟಂ ಡ್ಯಾನ್ಸ್ ಮಾಡಿದ್ರೆ ಎಲ್ಲಿ ತನ್ನ ಕೆರಿಯರ್‌ಗೆ ಹೊಡೆತ ಬೀಳಬಹುದು ಎಂಬ ಕಾರಣಕ್ಕೆ ಒಲ್ಲೆ ಎಂದಿದ್ದಾರೆ.

    ಶ್ರೀಲೀಲಾ (Sreeleela) ಅದ್ಭುತ ಡ್ಯಾನ್ಸ್, ನೋಡಲು ಕೂಡ ಸ್ಟೈಲೀಶ್ ಆಗಿದ್ದಾರೆ. ಹಾಗಾಗಿ ಅವರೇ ಸೂಕ್ತ ಎನಿಸಿ ಸುಕುಮಾರ್ ಸಿನಿಮಾ ಆಫರ್ ಕೊಟ್ಟಿದ್ರು. ಶ್ರೀಲೀಲಾ ಅಲ್ಲು ಅರ್ಜುನ್ ಚಿತ್ರಕ್ಕೆ ನೋ ಎಂದಿರೋದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.

  • ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಸಿಕ್ತು ಬಂಪರ್‌ ಆಫರ್‌

    ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಸಿಕ್ತು ಬಂಪರ್‌ ಆಫರ್‌

    ಟಾಲಿವುಡ್‌ನಲ್ಲಿ ಶ್ರೀಲೀಲಾ (Sreeleela) ಹವಾ ಕಮ್ಮಿಯಾದಂತಿದೆ. ರಶ್ಮಿಕಾಗೆ (Rashmika Mandanna) ಠಕ್ಕರ್ ಕೊಟ್ಟಿದ್ದ ಶ್ರೀಲೀಲಾಗೆ ಪೈಪೋಟಿ ಕೊಟ್ಟಿದ್ದಾರೆ ಮೀನಾಕ್ಷಿ ಚೌಧರಿ. ‘ಗುಂಟೂರು ಖಾರಂ’ ಸಿನಿಮಾ ನಂತರ ಮೀನಾಕ್ಷಿಗೆ (Meenakshi Chaudhary) ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ. ಶ್ರೀಲೀಲಾರನ್ನೇ ಮೀರಿ ಬೆಳೆಯುವ ಸೂಚನೆ ಸಿಕ್ತಿದೆ. ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಬಿಗ್‌ ಚಾನ್ಸ್‌ ಸಿಕ್ಕಿದೆ.

    ಇತ್ತೀಚೆಗೆ ಶ್ರೀಲೀಲಾ ನಟಿಸಿದ 4-5 ಸಿನಿಮಾಗಳು ಮಕಾಡೆ ಮಲಗಿದ್ದವು. ಗುಂಟೂರು ಖಾರಂ ಚಿತ್ರದಲ್ಲಿ ಮಹೇಶ್ ಬಾಬುಗೆ (Mahesh Babu) ಶ್ರೀಲೀಲಾ ಫಸ್ಟ್ ಹೀರೋಯಿನ್ ಆಗಿದ್ರೆ, ಮೀನಾಕ್ಷಿ ಸೆಕೆಂಡ್ ಲೀಡ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ನಂತರ ಲೀಲಾ ಲಕ್ ಬದಲಾಗುತ್ತೆ ಎಂದುಕೊಂಡವರ ಲೆಕ್ಕಾಚಾರ ಉಲ್ಟಾ ಆಗಿದೆ. ಶ್ರೀಲೀಲಾ ಬದಲು ಮೀನಾಕ್ಷಿಗೆ ಬೇಡಿಕೆ ಜಾಸ್ತಿಯಾಗಿದೆ.

    2021ರಲ್ಲಿ ತೆಲುಗಿನ ಕಿಲಾಡಿ, ಹಿಟ್ ಸಿನಿಮಾಗಳಲ್ಲಿ ನಟಿಸಿದ ಮೀನಾಕ್ಷಿ ಮಹೇಶ್ ಬಾಬು ಜೊತೆ ನಟಿಸಿದ ಮೇಲೆ ಸ್ಟಾರ್ ನಟರಿಗೆ ನಾಯಕಿಯಗಿದ್ದಾರೆ. ದಳಪತಿ ವಿಜಯ್ (Vijay Thalapathy) ನಟನೆಯ 68ನೇ ಚಿತ್ರಕ್ಕೆ ಮೀನಾಕ್ಷಿ ಹೀರೋಯಿನ್ ಆಗಿದ್ದಾರೆ. ವಿಶ್ವಕ್ ಸೇನ್, ವರುಣ್ ತೇಜ್, ದುಲ್ಕರ್ ಸಲ್ಮಾನ್ ಜೊತೆ ನಟಿಸುವ ಆಫರ್ ಸಿಕ್ಕಿದೆ. ಇದನ್ನೂ ಓದಿ:ಲೂಸ್ ಮಾದ ಯೋಗಿ ನಟನೆಯ ‘ರೋಸಿ’ ಸಿನಿಮಾದಲ್ಲಿ ಒರಟ ಪ್ರಶಾಂತ್

    ಅದಷ್ಟೇ ಅಲ್ಲ, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಮೀನಾಕ್ಷಿಗೆ ಉತ್ತಮ ಪಾತ್ರ ಸಿಕ್ಕಿದೆಯಂತೆ. ತೆಲುಗಿನಲ್ಲಿ ಬೇಡಿಕೆಯಿದ್ದ ಶ್ರೀಲೀಲಾ ಸಾಲು ಸಾಲು ಸಿನಿಮಾದಲ್ಲಿ ನಟಿಸಿದ್ದರು. ಈಗ ಆ ಸ್ಥಾನಕ್ಕೆ ಮೀನಾಕ್ಷಿ ಬಂದಿದ್ದಾರೆ. ನಿರ್ಮಾಪಕರು ಕೂಡ ಮೀನಾಕ್ಷಿಗೆ ಮಣೆ ಹಾಕ್ತಿದ್ದಾರೆ. ಓಡೋ ಕುದುರೆಗೆ ಗಾಳ ಹಾಕೋಕೆ ಟಾಲಿವುಡ್ ರೆಡಿಯಾಗಿದೆ.

  • ಅನಾಥ ಮಕ್ಕಳ ದತ್ತು ಪಡೆದ ನಟಿ ಶ್ರೀಲೀಲಾ

    ಅನಾಥ ಮಕ್ಕಳ ದತ್ತು ಪಡೆದ ನಟಿ ಶ್ರೀಲೀಲಾ

    ಶ್ರೀಲೀಲಾ (Sreeleela) ಮತ್ತೆ ಸುದ್ದಿಗೆ ಬಂದಿದ್ದಾರೆ. ಇದುವರೆಗೆ ಸಿನಿಮಾ ಗೆದ್ದಿದ್ದು, ಸೋತಿದ್ದಕ್ಕೆ ಮಾತ್ರ ಲೈಮ್‌ಲೈಟಿನಲ್ಲಿದ್ದರು. ಮೊದಲ ಬಾರಿ ಪ್ರೀತಿ ತೋರಿಸಿ ಎಲ್ಲರಿಂದ ಭಪ್ಪರೇ ಹುಡುಗಿ ಎಂದು ಹೊಗಳಿಸಿಕೊಂಡಿದ್ದಾರೆ. ಅಂಥ ಕಾಯಕ ಏನು ಮಾಡಿದರು ಶ್ರೀಲೀಲಾ? ಅದ್ಯಾವ ಜೀವಗಳಿಗೆ ಆಸರೆಯಾದರು ? ಮನ ಕಲಕುವ ಕಥನ ಇಲ್ಲಿದೆ.

    ಸಿನಿಮಾ ನಟ ನಟಿಯರು ಸುದ್ದಿಯಲ್ಲಿ ಸದಾ ಇರುತ್ತಾರೆ. ಒಳ್ಳೆಯದು, ಕೆಟ್ಟದ್ದು ಎರಡನ್ನೂ ಮಾಧ್ಯಮ ಬಿಚ್ಚಿಡುತ್ತವೆ. ಕೆಲವರು ಒಳ್ಳೆಯದನ್ನು ಬಾಯಿ ಚಪ್ಪರಿಸಿಕೊಂಡು ನೋಡುತ್ತಾರೆ.. ಉಳಿದವರು ಕೆಟ್ಟದ್ದಕ್ಕೆ ಕಿಡಿ ಕಾರುತ್ತಾರೆ. ಆದರೆ ಶ್ರೀಲೀಲಾ ಮಾತ್ರ ಎರಡನ್ನೂ ಒಪ್ಪಿಕೊಂಡಿದ್ದಾರೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ನೆರವಾಗಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ನಿಭಾಯಿಸುವುದಾಗಿ ಹೇಳಿಕೊಂಡಿದ್ದಾರೆ. ಇದಪ್ಪಾ ರಿಯಲ್ ಹೀರೋಯಿನ್ ಲಕ್ಷಣ ಎಂದಿದ್ದಾರೆ ಜನ.

    ಕನ್ನಡದ ಈ ಹುಡುಗಿ ಏಕಾಏಕಿ ಟಾಲಿವುಡ್‌ನಲ್ಲಿ ಸರ ಪಟಾಕಿ ಹಚ್ಚಿದ್ದು ಸಣ್ಣ ಮಾತಲ್ಲ. ಹತ್ತತ್ತು ಸಿನಿಮಾ ಒಪ್ಪಿ, ಟಾಪ್ ಸ್ಟಾರ್ಸ್ ಜೊತೆ ಹೆಜ್ಜೆ ಹಾಕಿ ಸೆನ್ಸೇಶನಲ್ ಹೀರೋಯಿನ್ ಪಟ್ಟ ಏರಿದರು. ರಶ್ಮಿಕಾ ಬಾಲಿವುಡ್‌ಗೆ ಹೋಗಿದ್ದು ಶ್ರೀಲೀಲಾ ಹಾದಿಗೆ ಹೂವು ಹಾಸಿತು. ಪವನ್‌ಕಲ್ಯಾಣ್ ಸಿನಿಮ ಹಿಟ್ ಆದರೆ ಶ್ರೀ ಆಕಾಶಕ್ಕೆ ಏರುವುದು ಖಚಿತ. ಅದೇ ಹುಡುಗಿ ಈಗ ಇಬ್ಬರು ಮಕ್ಕಳ ಬಾಳಿಗೆ ದೀಪ ಹಚ್ಚಿದ್ದಾರೆ. ಹಣ ಇದ್ದರೆ ಸಾಲದು ಅದನ್ನು ಅಸಹಾಯಕರಿಗೆ ಹಂಚುವ ಮನಸು ಬೇಕು. ಅದು ಶ್ರೀಗೆ ಇದೆ.

  • ಸ್ಟಾರ್ ಕುಟುಂಬಕ್ಕೆ ಸೊಸೆಯಾಗ್ತಾರಂತೆ ಶ್ರೀಲೀಲಾ- ಭವಿಷ್ಯ ನುಡಿದ ಜ್ಯೋತಿಷಿ

    ಸ್ಟಾರ್ ಕುಟುಂಬಕ್ಕೆ ಸೊಸೆಯಾಗ್ತಾರಂತೆ ಶ್ರೀಲೀಲಾ- ಭವಿಷ್ಯ ನುಡಿದ ಜ್ಯೋತಿಷಿ

    ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮಾಡಿರುವ ಸಿನಿಮಾವೆಲ್ಲಾ ಸಕ್ಸಸ್ ಕಾಣದೇ ಇದ್ದರೂ ಶ್ರೀಲೀಲಾಗೆ ಭಾರೀ ಬೇಡಿಕೆ ಇದೆ. ಸದ್ಯ ಶ್ರೀಲೀಲಾ ಮದುವೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಚಿತ್ರರಂಗದ ದೊಡ್ಡ ಮನೆಗೆ ಸೊಸೆಯಾಗಿ ಹೋಗ್ತಾರಂತೆ ಶ್ರೀಲೀಲಾ. ಹೀಗಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಇತ್ತೀಚೆಗಷ್ಟೇ ಶ್ರೀಲೀಲಾ ತಾಯಿ ಖ್ಯಾತ ಜ್ಯೋತಿಷಿಯೊಬ್ಬರಿಗೆ ಜಾತಕ ತೋರಿಸಿದ್ದು, ನಿಮ್ಮ ಮಗಳು ಚಿತ್ರರಂಗದ ದೊಡ್ಡ ಮನೆತನದ ಸೊಸೆಯಾಗಲಿದ್ದಾರೆ ಎಂದು ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ. ಸದ್ಯ ಈ ರೀತಿಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ:ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಶಮಿತಾ ಶೆಟ್ಟಿ ಕ್ಲಾಸ್‌

    ಕನ್ನಡದ ಕಿಸ್, ಭರಾಟೆ, ಬೈಟು ಲವ್ ಚಿತ್ರ ನಂತರ ಪೆಳ್ಳಿ ಸಂದಡಿ, ‘ಧಮಾಕಾ’ (Dhamaka) ಚಿತ್ರದ ಮೂಲಕ ಟಾಲಿವುಡ್‌ಗೆ ನಟಿ ಪರಿಚಿತರಾದರು. ಬಳಿಕ ತೆಲುಗಿನ ಸ್ಟಾರ್ ನಟರಿಗೆ ಶ್ರೀಲೀಲಾ ನಾಯಕಿಯಾದರು. ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟು ಬಿಗ್ ಚಾನ್ಸ್ ಬಾಚಿಕೊಂಡರು.

    ಇತ್ತೀಚೆಗೆ ಮಹೇಶ್ ಬಾಬು (Mahesh Babu) ಜೊತೆ ‘ಗುಂಟೂರು ಖಾರಂ’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಕೆಲವು ದಿನಗಳ ಹಿಂದೆ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ ಚಿತ್ರದಲ್ಲಿ ಶ್ರೀಲೀಲಾ ನಟಿಸಿದ್ದರು.