ಶ್ರೀಲೀಲಾ (Sreeleela) ಬಾಲಿವುಡ್‌ಗೆ ಹೆಜ್ಜೆ ಇಟ್ಟಾಗಿದೆ. ಅಲ್ಲಿನ ಎಬಿಸಿಡಿ ಕಲಿತಾಗಿದೆ. ಫುಲ್‌ಫ್ಲೆಜ್ಟ್ ಬಾಲಿವುಡ್ ಮೊದಲ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಆ ಚಿತ್ರವನ್ನ ಆಶಿಕಿ 3 ಎಂದು ಕರೆಯಲಾಗುತ್ತಿದೆ. ಆದರೆ ಶೀರ್ಷಿಕೆ ಬದಲಾಗುವ ಚಾನ್ಸ್ ಇದೆ. ಅಷ್ಟರೊಳಗೆ ಶ್ರೀಲೀಲಾ ಬಾಲಿವುಡ್‌ನ ಮೊದಲ ಚಿತ್ರದ ಹೀರೋ ಕಾರ್ತಿಕ್ ಆರ್ಯನ್(Kartik Aaryan) ಜೊತೆ ಲವ್ವಲ್ಲಿ ಬಿದ್ದಿರುವ ವಿಚಾರ ಗುಲ್ಲಾಗಿದೆ.
ಇಬ್ಬರೂ ಹಲವು ಬಾರಿ ರೆಸ್ಟೋರೆಂಟ್‌ಗಳಲ್ಲಿ ಸುತ್ತಾಡುತ್ತಾ ಸಿಕ್ಕಿಬಿದ್ದಿದ್ದರು. ಇದೆಲ್ಲಾ ರಿವೀಲ್ ಆದಾಗ ಇಬ್ಬರೂ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು, ಆದರೆ ಇದೀಗ ಮತ್ತೆ ಬುಧವಾರ ರಾತ್ರಿ ಮುಂಬೈನ (Mumbai) ರೆಸ್ಟೋರೆಂಟ್‌ನಲ್ಲಿ ಜಂಟಿಯಾಗಿ ಡಿನ್ನರ್ (Dinner) ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಕರ್ಣನಿಗೆ ಗ್ರೀನ್ ಸಿಗ್ನಲ್ – ಭವ್ಯಾ, ನಮ್ರತಾ, ಕಿರಣ್ ರಾಜ್ ತ್ರಿವಳಿ ಆಟ
View this post on Instagram
ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾರ ಇಷ್ಕ್ ಕಥೆ ಗುಟ್ಟಾಗಿ ಉಳಿದಿಲ್ಲ. ಆದರೆ ಇದೆಲ್ಲಾ ಬಾಲಿವುಡ್‌ನಲ್ಲಿ ಸೀರಿಯಸ್ ಕಥೆ ಅಲ್ಲವೇ ಅಲ್ಲ. ಲವ್ವು, ಬ್ರೇಕಪ್ಪು ಎಲ್ಲವೂ ಸಾಮಾನ್ಯ ಎನ್ನುವ ಹೊತ್ತಲ್ಲಿ ಅನೇಕ ತಿಂಗಳುಗಳ ಬಳಿಕ ಮತ್ತೆ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ಕದ್ದು-ಮುಚ್ಚಿ ಸುತ್ತಾಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಡೆವಿಲ್ ಸಿನಿಮಾದಲ್ಲಿ ನಟಿಸಿಲ್ಲ ದರ್ಶನ್ ಪುತ್ರ
ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಸಮಯದ ಹೊರತಾಗಿಯೂ ಇಬ್ಬರಲ್ಲಿ ಬಹಳ ಆತ್ಮೀಯತೆ ಇದ್ದ ವಿಚಾರ ಆಗಾಗ ಬಾಲಿವುಡ್ ಪಡಸಾಲೆಯಲ್ಲಿ ಚರ್ಚೆಯಾಗುತ್ತೆ. ಅದಕ್ಕೆ ಸಾಕ್ಷಿ ಎನ್ನುವಂತೆ ಕಾರ್ತಿಕ್ ತಾಯಿ ಶ್ರೀಲೀಲಾ ಕುರಿತು ಒಳ್ಳೆಯ ಮಾತನ್ನಾಡಿದ್ದರು. ಅದಕ್ಕೂ ಮೀರಿ ಇಬ್ಬರೂ ಇನ್‌ಸ್ಟಾದಲ್ಲಿ ಒಂದು ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡಿದ್ದರು. ಇದೀಗ ಇಬ್ಬರ ನಡುವೆ ಗ್ಯಾಪ್ ಆಗಿರಬಹುದು ಎಂದು ಊಹಿಸುವಷ್ಟರಲ್ಲೇ ರೆಸ್ಟೋರೆಂಟ್‌ನಲ್ಲಿ ಊಟ ಸವಿಯುವಾಗ ಸಿಕ್ಕಿಬಿದ್ದಿದೆ ಜೋಡಿ.
ಬಾಲಿವುಡ್‌ನ ಮೊದಲ ಚಿತ್ರ ಆಶಿಕಿ ಶೀರ್ಷಿಕೆಯಂತೆ ಕಾರ್ತಿಕ್‌ಗೆ ನಿಜಜೀವನದಲ್ಲೂ ಶ್ರೀಲೀಲಾ ಆಶಿಕಿಯಾದರಾ ಅನ್ನೋ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.







ಇತ್ತೀಚೆಗೆ ಅವಾರ್ಡ್ ಫಂಕ್ಷನ್‌ವೊಂದರಲ್ಲಿ ಕಾರ್ತಿಕ್ ಆರ್ಯನ್ ತಾಯಿಗೆ ಯಾವ ಥರದ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ಡಾಕ್ಟರ್ ಆಗಿರುವ ಸೊಸೆ ಬೇಕು ಎಂದಿದ್ದರು. ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿಕೊಂಡಿದ್ದಾರೆ. ಅಲ್ಲಿ ಕಾರ್ತಿಕ್ ತಾಯಿ ಡಾಕ್ಟರ್ ಸೊಸೆ ಬೇಕು ಎಂದ ಕೂಡಲೇ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿತ್ತು.
ಹೀಗಾಗಿ ಇದೀಗ ನಟಿಯ ಅರಿಶಿಣ ಶಾಸ್ತ್ರದ ಫೋಟೋ ನೋಡಿ ಕಾರ್ತಿಕ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪುಷ್ಠಿ ಸಿಕ್ಕಂತಾಗಿದೆ. ಸದ್ದಿಲ್ಲದೇ ಹಸೆಮಣೆ ಏರಲು ರೆಡಿಯಾದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಶ್ರೀಲೀಲಾ, ಕಿರೀಟಿ ಜೊತೆ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್‌ಮುಖ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಜೂನಿಯರ್’ ಸಿನಿಮಾದ ತಾಂತ್ರಿಕ ಬಳಗ ಶ್ರೀಮಂತಿಕೆಯಿಂದ ಕೂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಾಕ್‌ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ‘ಬಾಹುಬಲಿ’ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.
ಶ್ರೀಲೀಲಾ ನಟನೆಯ ಸಿನಿಮಾಗಳು ಹಿಟ್ ಆಗಿಲ್ಲದಿದ್ರೂ ಅವರಿಗಿರುವ ಕ್ರೇಜ್ ಕಮ್ಮಿಯಾಗುತ್ತಿಲ್ಲ. ಅದರಲ್ಲೂ ‘ಪುಷ್ಪ 2’ ಬಳಿಕ (Pushpa 2) ಕಿಸ್ಸಿಕ್ ಬೆಡಗಿಗೆ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಿಲ್ಲ. ಇದರ ನಡುವೆ ಬಾಲಿವುಡ್ ಚಿತ್ರಕ್ಕಾಗಿ ನಟಿ ಒಂದು ಕೋಟಿ ಸಂಭಾವನೆ ಕಮ್ಮಿ ಪಡೆದಿದ್ದಾರೆ ಎನ್ನಲಾದ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ತೆಲುಗಿನ ಒಂದು ಸಿನಿಮಾಗೆನೇ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದ್ದು, ಈಗ ಬಾಲಿವುಡ್ ‘ಆಶಿಕಿ 3’ಗೆ 2 ಕೋಟಿ ರೂ. ಸಂಭಾವನೆಗೆ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:
ತಮಗೆ ಬೇಡಿಕೆ ಇದ್ರೂ ಬಾಲಿವುಡ್ ಸಿನಿಮಾಗಳ ಆಸೆಗೆ 1 ಕೋಟಿ ರೂ. ಸಂಭಾವನೆ ಇಳಿಸಿಕೊಂಡ್ರಾ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇಷ್ಟಕ್ಕೂ ಈ ವಿಚಾರನಾ? ಶ್ರೀಲೀಲಾ ಅವರೇ ಸ್ಪಷ್ಟನೆ ನೀಡಬೇಕಿದೆ.

ಶ್ರೀಲೀಲಾ ಮತ್ತು ಕಿರೀಟಿ ನಟನೆಯ ‘ಜೂನಿಯರ್’ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ‘ಜೂನಿಯರ್’ ಸಿನಿಮಾ ಜುಲೈ 18ಕ್ಕೆ ರಿಲೀಸ್ ಆಗಲಿದೆ. ಅದಷ್ಟೇ ಅಲ್ಲ, ಇದೇ ತಿಂಗಳ 19ಕ್ಕೆ ಜೂನಿಯರ್ ಸಿನಿಮಾ ಮೊದಲ ಸಾಂಗ್ ಬಿಡುಗಡೆಯಾಗಲಿದೆ. ಈ ಸಿನಿಮಾ ಕಿಸ್ಸಿಕ್ ಬೆಡಗಿ ಶ್ರೀಲೀಲಾ ಕನ್ನಡಕ್ಕೆ ಬರುತ್ತಿದ್ದಾರೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:
ಕಿರೀಟಿ ಜೊತೆ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್‌ಮುಖ್, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಜೂನಿಯರ್’ ಸಿನಿಮಾದ ತಾಂತ್ರಿಕ ಬಳಗ ಶ್ರೀಮಂತಿಕೆಯಿಂದ ಕೂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ‘ಬಾಹುಬಲಿ’ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.



