Tag: sr vishwanath

  • ಎಡಪಂಥೀಯರನ್ನ ಕೇಳಿ ತನಿಖೆಗೆ ಕೊಟ್ಟಿದ್ದಾರೆ, ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು: ವಿಜಯೇಂದ್ರ ಕಿಡಿ

    ಎಡಪಂಥೀಯರನ್ನ ಕೇಳಿ ತನಿಖೆಗೆ ಕೊಟ್ಟಿದ್ದಾರೆ, ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು: ವಿಜಯೇಂದ್ರ ಕಿಡಿ

    – ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನ ಪಡೆದ ವಿಜಯೇಂದ್ರ & ಟೀಂ

    ಮಂಗಳೂರು: ಧರ್ಮಸ್ಥಳ (Dharmasthala) ಶ್ರೀ ಕ್ಷೇತ್ರಕ್ಕಿಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ನೇತೃತ್ವದ ಶಾಸಕರ ತಂಡ ಭೇಟಿ ನೀಡಿದೆ.

    ಬೆಳ್ಳಂಬೆಳಗ್ಗೆಯೇ ವಿಜಯೇಂದ್ರ, ಸಿ.ಟಿ ರವಿ, ಎಸ್.ಆರ್ ವಿಶ್ವನಾಥ್, ಛಲವಾದಿ ನಾರಾಯಣಸ್ವಾಮಿ, ಬಿವೈ ವಿಜಯೇಂದ್ರ, ಕ್ಯಾಪ್ಟನ್ ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಗುರುರಾಜ್ ಗಂಟಹೊಳೆ, ಪ್ರತಾಪ್ ಸಿಂಹ ನಾಯಕ್, ಹರೀಶ್ ಪೂಂಜಾ, ಕಿರಣ್ ಕುಮಾರ್ ಕೊಡ್ಗಿ, ಯಶ್ ಪಾಲ್ ಸುವರ್ಣ, ಧನಂಜಯ ಸರ್ಜಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಜಯೇಂದ್ರ, ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದಾಗ ಬಿಜೆಪಿ ಸ್ವಾಗತ ಮಾಡಿದೆ. ತನಿಖೆ ಪಾರದರ್ಶಕವಾಗಿ ಆಗಬೇಕು, ಹುಟ್ಟಿರುವ ಅನುಮಾನಗಳು ಇತ್ಯರ್ಥ ಆಗಬೇಕು ಅಂತ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೆವು ಎಂದರು.

    ತನಿಖೆ ನಡೆಯುವ ವೇಳೆ ಅನೇಕ ಗೊಂದಲಗಳು, ಅಪಪ್ರಚಾರ ಸಾಮಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಅಪಪ್ರಚಾರ ಬಗ್ಗೆ ಕಡಿವಾಣ ಹಾಕುವಂತಹ ಕೆಲಸ ಸರ್ಕಾರದಿಂದ ಆಗಬೇಕು. ಆದ್ರೆ ಸರ್ಕಾರ ಕಡಿವಾಣ ಹಾಕದೇ ಅಪಚಾರ ಎಸಗಿದೆ. ಕಡಿವಾಣ ಹಾಕದ ಸಿಎಂ ಈ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು. ಎಡಪಂಥೀಯವರನ್ನ ಕೇಳಿ ತನಿಖೆಗೆ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇದರ ಹಿಂದೆ ಎಡಪಂಥೀಯ ಸಂಘಟನೆಗಳಿವೆ ಅಂತ ಸ್ವತಃ ದಿನೇಶ್ ಗುಂಡುರಾವ್ ಹೇಳಿದ್ದಾರೆ. ಅದು ಸತ್ಯವಾದ್ರೆ ಸಮಗ್ರ ತನಿಖೆ ಆಗ್ಲಿ. ಜೊತೆಗೆ ಡಿಕೆಶಿಯವರೇ ಇದರ ಹಿಂದೆ ಷಡ್ಯಂತ್ರ ನಡೀತಿದೆ, ಸಂದರ್ಭ ಬಂದಾಗ ಷಡ್ಯಂತ ಬಯಲಿಗೆಳೆಯುತ್ತೇವೆ ಅಂತಾ ಹೇಳಿದ್ದಾರೆ. ಯಾಕೆ ಇದಕ್ಕೆ ಇನ್ನೂ ಸಂದರ್ಭ ಬಂದಿಲ್ವಾ ಅಂತಾ ಜನತೆ ಕೇಳ್ತಿದ್ದಾರೆ..? ಷಡ್ಯಂತ್ರ ಯಾರು ಮಾಡ್ತಿದ್ದಾರೆ ಅವರನ್ನ ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡ್ತಿಲ್ಲ. ಸರ್ಕಾರ ಇದರ ಹಿಂದೆ ಇರುವವರನ್ನ ಬಯಲಿಗೆಳೆಯಬೇಕು ಅಷ್ಟೇ. ಬಿಜೆಪಿ ಮದ್ಯಂತರ ವರದಿ ನೀಡಬೇಕೆಂದು ಸದನದಲ್ಲಿ ಆಗ್ರಹಿದೆ. ಇದಕ್ಕೆ ಶೀಘ್ರದಲ್ಲೆ ಇತಿಶ್ರೀ ಹಾಡಬೇಕು ಎಂದು ಆಗ್ರಹಿಸಿದರು.

  • ಧರ್ಮಸ್ಥಳ ಕ್ಷೇತ್ರದ ಪರ ನಿಂತ ರಾಜ್ಯ ಬಿಜೆಪಿ – ಶ್ರೀಕ್ಷೇತ್ರ ದೇವಸ್ಥಾನಕ್ಕೆ ಇಂದು ವಿಜಯೇಂದ್ರ & ಟೀಂ

    ಧರ್ಮಸ್ಥಳ ಕ್ಷೇತ್ರದ ಪರ ನಿಂತ ರಾಜ್ಯ ಬಿಜೆಪಿ – ಶ್ರೀಕ್ಷೇತ್ರ ದೇವಸ್ಥಾನಕ್ಕೆ ಇಂದು ವಿಜಯೇಂದ್ರ & ಟೀಂ

    ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣವನ್ನ (Dharmasthala Case) ಎಸ್‌ಐಟಿ ತನಿಖೆಗೆ ಕೊಟ್ಟ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಪೊಲೀಸರ ವಿಚಾರಣೆ, ಸ್ಥಳ ಪರಿಶೋಧನೆಯಲ್ಲಿ ಅನಾಮಿಕ ಮಾಡಿದ ಆರೋಪ ಸಾಬೀತಾದಂತಿಲ್ಲ. ʻಧರ್ಮಸ್ಥಳ ಕ್ಷೇತ್ರದ ಜೊತೆ ನಾವುʼ ಎಂಬ ಘೋಷವಾಕ್ಯದಡಿ ಈಗಾಗಲೇ ಸಾವಿರಾರು ಜನ ಧರ್ಮಸ್ಥಳ ತಲುಪಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಇಂದು ಶಾಸಕರ ಜೊತೆ ಬಂದು ದೇವಸ್ಥಾನದಲ್ಲಿ ಸಂಕಲ್ಪ ಮಾಡಲಿದ್ದಾರೆ.

    ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ಅನಾಮಿಕನ ಹೇಳಿಕೆ ರಾದ್ಧಾಂತ ಸೃಷ್ಟಿ ಮಾಡಿದೆ. ಧರ್ಮಸ್ಥಳ ಕ್ಷೇತ್ರದ ಭಕ್ತರಿಗೂ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬ ಸಂಶಯ ಕಾಡಿತ್ತು. ಇದಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದ ಮೂಲಕ ವಿಚಾರಣೆ, ಶೋಧನೆ ನಡೆಸಿದೆ. ಆದ್ರೆ ಶೋಧಕಾರ್ಯದಲ್ಲಿ ಯಾವುದೇ ಕುರುಹುಗಳು ಸಿಗದಿರುವ ಹಿನ್ನೆಲೆ ಇದೀಗ ಬಿಜೆಪಿ (BJP) ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಅಸ್ತ್ರ ಪ್ರಯೋಗಿಸಿದೆ. ಇದನ್ನೂ ಓದಿ: ಬುರುಡೆ ಸಿಕ್ಕಿದ್ದೆಲ್ಲಿ? ತಂದಿದ್ದೆಲ್ಲಿ? – ಅನಾಮಿಕ ದೂರುದಾರನ ತೀವ್ರ ವಿಚಾರಣೆ

    ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊರಟು ವಾಹನ ರ‍್ಯಾಲಿ ಧರ್ಮಸ್ಥಳ ದೇವಸ್ಥಾನ ತಲುಪಿದೆ. ನೂರಾರು ವಾಹನಗಳಲ್ಲಿ ಸಾವಿರಾರು ಜನ ಧರ್ಮಸ್ಥಳಕ್ಕೆ ತಲುಪಿದ್ದಾರೆ. ಧರ್ಮಸ್ಥಳ ಜೊತೆ ನಾವು ಎಂಬ ಘೋಷವಾಕ್ಯದಡಿಯಲ್ಲಿ ದೇವರ ದರ್ಶನ ಮಾಡಿ ಧರ್ಮಸ್ಥಳ ಜೊತೆ ನಾವು ಎಂಬ ಸಂದೇಶ ರವಾನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉಡುಪಿ ದಕ್ಷಿಣ ಕನ್ನಡ ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಬಿಜೆಪಿ ಶಾಸಕರ ಜೊತೆ ದೇವರ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ: ಅಣುಬಾಂಬ್‌ ಪರೀಕ್ಷೆಯನ್ನು ವಿಶ್ವವೇ ವಿರೋಧಿಸಿದಾಗ ಇನ್ನೂ 2 ಬಾಂಬ್‌ ಪರೀಕ್ಷೆ ಮಾಡಿ ಅಂದವರು ಅಟಲ್‌ಜೀ: ಬಿಎಲ್‌ ಸಂತೋಷ್‌

    ರಾಜ್ಯದ ಪ್ರತಿ ತಾಲೂಕುಗಳಲ್ಲಿ ಈ ಬಗ್ಗೆ ಪ್ರತಿಭಟನೆ ಸಭೆ ಘೋಷಣೆಯಾಗಿದೆ. ಅಭಿಯಾನದ ಸಮಾರೋಪ ಧರ್ಮಸ್ಥಳದಲ್ಲಿ ನಡೆಯಲಿದೆ. ಒಟ್ಟಿನಲ್ಲಿ ಯಾರೋ ಅನಾಮಿಕ ಬಂದು ದೂರು ನೀಡಿದಾಕ್ಷಣ ಎಸ್‌ಐಟಿ ಮಾಡಿ ತನಿಖೆ ನಡೆಸಿದ ರಾಜ್ಯ ಸರ್ಕಾರಕ್ಕೆ ಇದೀಗ ಬಿಸಿ ತುಪ್ಪವಾಗಿದೆ. ಇದನ್ನೂ ಓದಿ: ಬಾಲಿವುಡ್ ಸಿನಿಮಾ ಉಲ್ಲೇಖಿಸಿ ಮತಗಳವು ಬಗ್ಗೆ ರಾಹುಲ್ ಗಾಂಧಿ ಪಂಚ್

  • ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲ್ಸ ಆಗ್ತಿದೆ: ವಿಶ್ವನಾಥ್‌

    ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲ್ಸ ಆಗ್ತಿದೆ: ವಿಶ್ವನಾಥ್‌

    ಮಂಗಳೂರು: ಧರ್ಮಸ್ಥಳದ (Dharmasthala) ಬಗ್ಗೆ ಅಪಪ್ರಚಾರ ಖಂಡಿಸಿ ಯಲಹಂಕದ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ನೇತೃತ್ವದಲ್ಲಿ ಧರ್ಮಸ್ಥಳ ಚಲೋ (Dharmasthala Chalo) ನಡೆದಿದೆ.

    400ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ವಿಶ್ವನಾಥ್‌ ಅವರಿಗೆ ಧರ್ಮಸ್ಥಳದ ದ್ವಾರಬಾಗಿಲಿನಲ್ಲಿ ಬಿಜೆಪಿ ಕಾರ್ಯಕರ್ತರು ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು. ಸುಳ್ಳಿಗೆ ಸೋಲು,ಧರ್ಮಕ್ಕೆ ಜಯ ಘೋಷಣೆ ಕೂಗುತ್ತಾ ಬಿಜೆಪಿಗರು ಘೋಷಣೆ ಮೊಳಗಿಸಿದರು.

    ವಿಶ್ವನಾಥ್ ಮಾತನಾಡಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅವರಿಗೆ ಶಿಕ್ಷೆಯನ್ನು ಮಂಜುನಾಥ ಕೊಡಲಿ ಎಂದು ಪ್ರಾರ್ಥಿಸಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ ಬಿಜೆಪಿಯ ಸೃಷ್ಟಿ: ಈಶ್ವರ್ಖಂಡ್ರೆ ಬಾಂಬ್

     

    ಸೌಜನ್ಯ ಪ್ರಕರಣದ ಬಗ್ಗೆ ತನಿಖೆ ಮಾಡಲಿ. ಅದಕ್ಕೆ ನಮ್ಮ ಅಡ್ಡಿ ಇಲ್ಲ, ಸ್ವಾಗತ ಮಾಡಿದ್ದೇವೆ, ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲಸ ಮಾಡುತ್ತಿದ್ದಾರೆ, ಮಂಜುನಾಥ ಸ್ವಾಮಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

    ಮಂಜುನಾಥಸ್ವಾಮಿ ಶಕ್ತಿವಂತ ದೇವರು, ಯಾರು ಇಂತಹ ಅಪಪ್ರಚಾರ ಮಾಡಿದ್ದಾರೆ ಅವರಿಗೆ ಶಿಕ್ಷೆಯನ್ನು ಕೊಡಲಿ, ಸರ್ಕಾರ ಕೊಡುವ ಶಿಕ್ಷೆ ಬೇರೆ, ದೇವರು ಕೊಡುವ ಶಿಕ್ಷೆ ಬೇರೆ, ರಾಜ್ಯ, ದೇಶದಲ್ಲಿರುವ ಮಂಜುನಾಥಸ್ವಾಮಿ ಭಕ್ತರಿಗೆ ಘಾಸಿ ಆಗುವ ಕೆಲಸವನ್ನು ವಿಚಾರವಾದಿಗಳು, ಧರ್ಮ ವಿರೋಧಿಗಳು ಮಾಡಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.  ಇದನ್ನೂ ಓದಿಧರ್ಮಸ್ಥಳ ಬುರುಡೆ ರಹಸ್ಯಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ

    ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

  • ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

    ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

    – ನಾಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗ ಧರ್ಮಸ್ಥಳ ಭೇಟಿ

    ಬೆಂಗಳೂರು: ಧರ್ಮಸ್ಥಳದಲ್ಲಿ ಎಸ್‌ಐಟಿ (Dharmasthala SIT) ತನಿಖೆಯಲ್ಲಿ ಕಳೇಬರ ಸಿಗದ ಬೆನ್ನಲ್ಲೆ ದೇಗುಲಕ್ಕೆ ಅಪಪ್ರಚಾರ ಎಸಗಲಾಗುತ್ತಿದೆ ಅಂತಾ ದೇಗುಲದ ಭಕ್ತರ ಆಕ್ರೋಶ ಹೆಚ್ಚಾಗಿದೆ. ಮತ್ತೊಂದು ಕಡೆ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ರೆ ಇನ್ನೊಂದು ಕಡೆ ಹಿಂದೂ ಸಂಘಟನೆಗಳು ಬೆಂಗಳೂರಿನಲ್ಲಿ (Bengaluru) ಹೋರಾಟಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

    ಈ ನಡುವೆ ಶಾಸಕ ಎಸ್.ಆರ್ ವಿಶ್ವನಾಥ್ (S.R Vishwanath) ನೇತೃತ್ವದಲ್ಲಿ ಇಂದು (ಆ.16) ಧರ್ಮಸ್ಥಳಕ್ಕೆ (Dharmasthala) 500 ಕಾರುಗಳಲ್ಲಿ ಬಿಜೆಪಿ (BJP) ಕಾರ್ಯಕರ್ತರು ಹೊರಡಲಿದ್ದಾರೆ. ಈಗಾಗಲೇ ಕಾರುಗಳು ಜಮಾವಣೆಗೊಂಡಿದ್ದು, ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್‌ಗೇಟ್‌ನಿಂದ ಯಾತ್ರೆ ಹೊರಡಲಿವೆ. ಇದನ್ನೂ ಓದಿ: ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಯಲಹಂಕದಿಂದ (Yelahanka) ಕಾರ್ಯಕರ್ತರು ಹೊರಡಲಿದ್ದಾರೆ. ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ, ಧರ್ಮಸ್ಥಳಕ್ಕೆ ಹೊರಡಲಿದ್ದಾರೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಸುಮಾರು 3 ಗಂಟೆಗೆ ವಿಶ್ವನಾಥ್ ತಂಡ ಧರ್ಮಸ್ಥಳ ತಲುಪಲಿದೆ. ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಹೆಸರು ಕೆಡಿಸಲು ಕಮ್ಯುನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್‌ನ ಕೆಲ ಹಿಂದೂ ವಿರೋಧಿಗಳಿಂದ ಷಡ್ಯಂತ್ರ: ಯತ್ನಾಳ್

    ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ (ಆ.17) ಧರ್ಮಸ್ಥಳಕ್ಕೆ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ – ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಜಪಿಸಲು VHP ಕರೆ

  • ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    – ಯಲಹಂಕದಿಂದ ಧರ್ಮಸ್ಥಳಕ್ಕೆ 200ಕ್ಕೂ ಹೆಚ್ಚು ಕಾರುಗಳಿಂದ ರ‍್ಯಾಲಿ
    – ಅನಾಮಿಕನನ್ನ ಗಲ್ಲಿಗೇರಿಸುವಂತೆ ಬಿಜೆಪಿ ಶಾಸಕ ಆಗ್ರಹ

    ಚಿಕ್ಕಬಳ್ಳಾಪುರ: ಧರ್ಮಸ್ಥಳದಲ್ಲಿ (Dharmasthala) ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಬೇಸರ ತರಿಸಿವೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ಶ್ರೇಷ್ಠ ಹಾಗೂ ಪವಿತ್ರವಾದ ಕ್ಷೇತ್ರ, ಹೀಗಾಗಿ ಧರ್ಮಸ್ಥಳದ ಜೊತೆ ನಾವು ಇದ್ದೇವೆ ಎಂದು ಬಿಜೆಪಿ ಶಾಸಕ ಎಸ್‌.ಆರ್‌ ವಿಶ್ವನಾಥ್‌ *(SR Vishwanath) ಹೇಳಿದರು.

    ಚಿಕ್ಕಬಳ್ಳಾಪುರ (Chikkaballapura)ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾತನಾಡಿದ ಶಾಸಕರು, ಧರ್ಮಸ್ಥಳ ಮಂಜುನಾಥಸ್ವಾಮಿ ತುಂಬಾ ಪವರ್‌ಫುಲ್, ಮಂಜುನಾಥಸ್ವಾಮಿ ಮೇಲೆ ಅಣೆ ಮಾಡಲು ಹೆದರುತ್ತಾರೆ. ಅಂತಹ ಮಂಜುನಾಥನ ಸನ್ನಿಧಿ ಧರ್ಮಸ್ಥಳದ ಮೇಲೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ ಆಗಸ್ಟ್ 16 ರಂದು ಯಲಹಂಕದಿಂದ ಧರ್ಮಸ್ಥಳಕ್ಕೆ ಬೃಹತ್‌ ರ‍್ಯಾಲಿ (Dharmasthala Chalo Rally) ಹಮ್ಮಿಕೊಳ್ಳಲಾಗಿದೆ. 200ಕ್ಕೂ ಹೆಚ್ಚು ಕಾರುಗಳ ಮೂಲಕ ʻಧರ್ಮಸ್ಥಳದೊಂದಿಗೆ ನಾವಿದ್ದೇವೆʼ ಎಂಬ ಘೋಷವಾಕ್ಯದೊಂದಿಗೆ ಕಾರುಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಧರ್ಮಸ್ಥಳಕ್ಕೆ ತೆರಳಲಿದ್ದೇವೆ. ಅಲ್ಲಿ ದೇವರ ದರ್ಶನ ಪಡೆದು ವಾಪಾಸ್ ಬರಲಿದ್ದೇವೆ. ನಮ್ಮ ನಂತರ ರಾಜ್ಯದ ಇತರೆ ಕ್ಷೇತ್ರಗಳಿಂದಲೂ ಈ ಆಭಿಯಾನ ಆರಂಭವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು

    ಅನಾಮಿಕನನ್ನ ಗಲ್ಲಿಗೇರಿಸಿ
    ಇನ್ನೂ ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಕೊಲೆ ಯಾದವರನ್ನ ನಾನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ಹೇಳಿಕೆ ನೋಡಿದ್ರೆ, ಅವನನ್ನೇ ಮೊದಲು ಗಲ್ಲಿಗೇರಿಸಬೇಕು. ಅತ್ಯಾಚಾರ ಕೊಲೆ ಆಗಿರೋದು ಗೊತ್ತಿದ್ದೂ ಹೂತು ಹಾಕಿದ್ರೆ ಆತ ಕೂಡ ಆರೋಪಿಯೇ. ಹಾಗಾಗಿ ಮೊದಲು ಆತನನ್ನ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೇಘಸ್ಪೋಟಕ್ಕೆ ನಾಶವಾಯ್ತು ಧರಾಲಿ – ಗ್ರಾಮದ ವಿಶೇಷತೆ ಏನು? ಮೊದಲು ಹೇಗಿತ್ತು?

    ನ್ನೂ ಈತ ಅನಾಥ ಶವಗಳನ್ನ ಊಳುವವನಾಗಿದ್ದು ಅನಾಥ ಶವಗಳ ಮೇಲಿನ ಚಿನ್ನಾಭರಣ ಕದ್ದು ಅಂತ ಕೆಲಸದಿಂದ ತೆಗದು ಹಾಕಿದ್ರು ಅಂತ ಗೊತ್ತಾಗಿದೆ. ಈಗ ಬಂದು ಮಂಜುನಾಥ ಸ್ವಾಮಿಯ ಮೇಲೆಯೇ ಅಪಪ್ರಚಾರ ಮಾಡುತ್ತಿದ್ದಾನೆ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೀವ ತೆಗೆಯಿತು ವೈಟ್ ಶರ್ಟ್ – ಟಾರ್ಗೆಟ್ ಮಾಡಿದವನನ್ನ ಬಿಟ್ಟು ಮತ್ತೊಬ್ಬನ ಹತ್ಯೆ

  • ಹೋಗೋದಾದ್ರೆ ಇವತ್ತೇ ಪಕ್ಷ ಬಿಟ್ಟು ಹೋಗಿ, ಪಾರ್ಟಿ ಶುದ್ಧವಾಗಲಿ – ಸುಧಾಕರ್‌ ವಿರುದ್ಧ ಎಸ್‌.ಆರ್‌ ವಿಶ್ವನಾಥ್‌ ಕೆಂಡ

    ಹೋಗೋದಾದ್ರೆ ಇವತ್ತೇ ಪಕ್ಷ ಬಿಟ್ಟು ಹೋಗಿ, ಪಾರ್ಟಿ ಶುದ್ಧವಾಗಲಿ – ಸುಧಾಕರ್‌ ವಿರುದ್ಧ ಎಸ್‌.ಆರ್‌ ವಿಶ್ವನಾಥ್‌ ಕೆಂಡ

    – ಕಾಂಗ್ರೆಸ್‌ ಪರ ಕೆಲಸ ಮಾಡಿಲ್ಲ ಅಂತ ಪ್ರಮಾಣ ಮಾಡಿ; ಸವಾಲ್‌

    ಬೆಂಗಳೂರು: ರಾಜ್ಯ ಬಿಜೆಪಿಯ (BJP) ಆತಂಕರಿಕ ಕಲಹ ಈಗ ಬೀದಿ ರಂಪವಾಗಿದೆ. ಬಿ.ವೈ ವಿಜಯೇಂದ್ರ ನಾಯಕತ್ವದ ವಿರುದ್ಧ ಆಕ್ರೋಶ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಜಿಲ್ಲಾಧ್ಯಕ್ಷರ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಬಿಜೆಪಿ ಮನೆಯ ಚಿತ್ರಣವೇ ಬದಲಾಗಿದೆ. ಬಿಜೆಪಿ ಬಂಡಾಯದ ಬೆಂಕಿಗೆ ಏಕಪಕ್ಷೀಯವಾಗಿ ಜಿಲ್ಲಾಧ್ಯಕ್ಷರ ನೇಮಕ ಮಾಡಿದ್ದು ತುಪ್ಪ ಸುರಿದಂತಾಗಿದೆ. ಈ ನಡುವೆ ಸಂಸದ ಡಾ.ಕೆ ಸುಧಾಕರ್‌ ಕೂಡ ತಿರುಗಿಬಿದ್ದಿದ್ದಾರೆ. ಈ ಬೆನ್ನಲ್ಲೇ ಶಾಸಕ ಎಸ್‌.ಆರ್‌ ವಿಶ್ವನಾಥ್‌ (SR Vishwanath) ತಿರುಗೇಟು ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಧಾಕರ್ ರಾಜ್ಯಾಧ್ಯಕ್ಷರ ಬಗ್ಗೆ ಹಗುರ ಮಾತಾಡಿರೋದು ನನಗೆ ಹಿಡಿಸಲಿಲ್ಲ. ಈ ಹಿಂದೆಯೂ ನನ್ನ ಬಗ್ಗೆ ಅವರು ಮಾತನಾಡಿದ್ದಾರೆ. ನಾನೇನು ದಡ್ಡ ಅಲ್ಲ, ನನಗೂ ಅರ್ಥ ಆಗುತ್ತೆ. ಅವರಿಂದ ಸರ್ಕಾರ ರಚನೆ ಆಗಿರಬಹುದು, ಆದ್ರೆ 17 ಜನರಲ್ಲಿ ಕೊನೆಯದಾಗಿ ಬಂದವರು ಸುಧಾಕರ್‌. ಅವರ ಮೇಲೆ ವಿಧಾನಸೌಧದಲ್ಲಿ ಹಲ್ಲೆ ನಡೆದಾಗ ನಾನೇ ಹೋಗಿ ಬಚಾವ್‌ ಮಾಡಿದೆ ಎಂದು ಹೇಳಿದ್ದಾರೆ.

    ಸುಧಾಕರ್ (K Sudhakar) ಕೋವಿಡ್ ನಿರ್ವಹಿಸಿದ್ರು, ಸಮರ್ಥ ಸಚಿವ ಆಗಿದ್ದವರು. ಸಮರ್ಥ ಸಚಿವ ಅನಿಸಿಕೊಂಡ ಮೇಲೆ ಚಿಕ್ಕಬಳ್ಳಾಪುರ ಯಾಕೆ ಸೋತ್ರಿ? ಚಿಕ್ಕಬಳ್ಳಾಪುರದಲ್ಲಿ ಒಳ್ಳೇ ಕೆಲಸ ನೀವು ಮಾಡಿದ್ರೆ ಜನ ಯಾಕೆ ನಿಮ್ಮನ್ನ ಸೋಲಿಸ್ತಿದ್ರು? ಎಂಪಿ ಸ್ಥಾನದ ಟಿಕೆಟ್ ಸಿಗಲ್ಲ ಅಂತಾದಾಗ ಏನೇನು ಮಾತಾಡಿದ್ರಿ? ಕಾಂಗ್ರೆಸ್‌ನವರ ಜೊತೆ ಆಗ ನೀವು ಮಾತಾಡಲಿಲ್ಲವಾ? ಆಗ ನಿಮಗೆ ಪಕ್ಷ ನಿಷ್ಠೆ ಇತ್ತಾ? ನೀವು ಕಾಂಗ್ರೆಸ್‌ ಜೊತೆಗೆ ಮಾತಾಡಲಿಲ್ಲ ಅಂದ್ರೆ ಪ್ರಮಾಣ ಮಾಡಿ, ನಾನು ಪ್ರಮಾಣ ಮಾಡ್ತೀನಿ ಅಂತ ಸುಧಾಕರ್‌ಗೆ ಸವಾಲ್‌ ಹಾಕಿದ್ದಾರೆ.

    ಇನ್ನೂ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರ ಕುರಿತು ಮಾತನಾಡಿದ ಶಾಸಕರು, ಜಿಲ್ಲೆಗೆ ತಲಾ ಮೂರು ಹೆಸರು ಕಳಿಸಲಾಗಿತ್ತು. ಈ ಪೈಕಿ ಸಂದೀಪ್ ರೆಡ್ಡಿ ಆಯ್ಕೆ ಆಗಿದ್ದಾರೆ. ಅವರು ನಿನ್ನ ಬಂಧುವೂ ಅಲ್ಲ, ನನ್ನ ಸಂಬಂಧಿಯೂ ಅಲ್ಲ. ಏನ್ ತೀರ್ಮಾನ ತಗೋತೀರಿ, ಪಕ್ಷ ಬಿಡ್ತೀರಾ? ನಿನಗೆ ತಾಕತ್ತಿದ್ದರೆ ಪಕ್ಷ ಬಿಟ್ಟು ಚುನಾವಣೆಗೆ ಬಾ.. ನಮ್ಮ ಬಗ್ಗೆ, ಯಲಹಂಕ ಕಾರ್ಯಕರ್ತರ ಬಗ್ಗೆ ಗೌರವ ಇಟ್ಕೊಂಡು ಮಾತಾಡು… ಅದನ್ನು ಬಿಟ್ಟು ನಮ್ಮ ಕ್ಷೇತ್ರದಲ್ಲಿ ಮುಖಂಡರನ್ನ ಎತ್ತಿ ಕಟ್ಟೋ ಕೆಲಸ ಮಾಡಬೇಡ ಅಂತ ಸುಧಾಕರ್ ವಿರುದ್ಧ ಏಕವಚನದಲ್ಲಿ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ವರಿಷ್ಠರ ಬಳಿ ಮಾತಾಡಬೇಕು. 40 ವರ್ಷದಿಂದ ಪಕ್ಷದಲ್ಲಿದ್ದವರು ನಾವು, ನಾವೇ ಸುಮ್ನಿದೀವಿ. ಬಾಗೇಪಲ್ಲಿ, ಹೊಸಕೋಟೆ, ದೇವನಹಳ್ಳಿಯಲ್ಲಿ ನೀನು ಕಾಂಗ್ರೆಸ್‌ಪರ ಕೆಲಸಮಾಡಿದ್ದೀಯ. ಬಿಜೆಪಿ ಪಕ್ಷ ತಾಯಿ ಇದ್ದ ಹಾಗೆ. ಇದ್ದರೆ ಪಕ್ಷದಲ್ಲಿ ಇರು, ಇಲ್ಲ ಹೋಗು. ಕಾಂಗ್ರೆಸ್‌ಗೆ ಹೋದ್ರೇ ಸ್ಥಾನಮಾನ ಸಿಕ್ಕಿಬಿಡುತ್ತಾ? ನಿಮ್ಮ ದುರಹಂಕಾರದಿಂದ ಪಕ್ಷ ಅಧಿಕಾರಕ್ಕೆ ಬರದಂತೆ ಮಾಡಿದ್ದು ನೀವು ಎಂದು ಲೇವಡಿ ಮಾಡಿದ್ದಾರೆ.

    ಮುಂದುರಿದು… ಬೇಕಿದ್ದರೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಾನು ಗೆಲ್ಲಿಸಿ ತೋರಿಸ್ತೀನಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ನೀನು ಗೆದ್ದಿದ್ದು ಸುಧಾಕರ್ ಹೆಸರಿಂದಲ್ಲ. ಮೋದಿ ಹೆಸರಿಂದ, ಅದಕ್ಕೆ ಜೆಡಿಎಸ್ ಬೆಂಬಲ ಕೊಡ್ತು. ನೀನು ಕಾಂಗ್ರೆಸ್‌ನಲ್ಲಿದ್ದಾಗ ನಾವು ಗೆಲ್ಲಲಿಲ್ವಾ ಅಲ್ಲಿ? ಇನ್ನೊಂದು ಚಕಾರ ಎತ್ತಬಾರದು ನೀನು.. ನನ್ನ ತಂಟೆಗೆ ಬರಬೇಡ. ಹೋಗುವ ಹಾಗಿದ್ರೆ ಇವತ್ತೇ ಪಕ್ಷ ಬಿಟ್ಟು ಹೋಗಿ, ಪಕ್ಷ ಶುದ್ಧವಾಗಲಿ, ಹೋಗೋರೆಲ್ಲ ಹೋಗಲಿ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಇದೇ ವೇಳೆ‌ ಶಾಸಕ ಯತ್ನಾಳ್‌ಗೂ ಟಾಂಗ್‌ ಕೊಟ್ಟರು. ನೀವು ಹಿರಿಯರು, ಯಾಕೆ ಹೀಗೆಲ್ಲ ಮಾತಾಡ್ತೀರಿ? ನಿಮ್ಮ ಹಿಂದೆ ಯಾರಿದ್ದಾರೆ? ಬನ್ನಿಮಾತಾಡೋಣ, ವೈಯಕ್ತಿಕ ಹೇಳಿಕೆ ಎಲ್ಲ ಬೇಡ. ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ಮಾಡ್ಕಳಿ, ಆದ್ರೆ ಬಹಿರಂಗ ಎಲ್ಲ ಯಾಕೆ ಮಾತಾಡ್ತೀರಿ? ಬಿಜೆಪಿಗೆ ಬರೋದು ಬಂದಿದ್ದೀರಿ, ವಾಪಸ್ ಹೋಗೋ ಯೋಚನೆ ಬೇಡ. ಪಕ್ಷ ಬಿಟ್ ಹೋದವರು ಯಾರೂ ಸಕ್ಸಸ್ ಆಗಿಲ್ಲ ಇದು ನಿಮಗೂ ಅನ್ವಯ, ಸುಧಾಕರ್‌ಗೂ ಅನ್ವಯ ಎಂದು ನುಡಿದಿದ್ದಾರೆ.

  • ಯಲಹಂಕದಲ್ಲಿ ಸುಧಾಕರ್‌ಗೆ 1 ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ: ವಿಶ್ವನಾಥ್ ಪ್ರತಿಜ್ಞೆ

    ಯಲಹಂಕದಲ್ಲಿ ಸುಧಾಕರ್‌ಗೆ 1 ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ: ವಿಶ್ವನಾಥ್ ಪ್ರತಿಜ್ಞೆ

    ಚಿಕ್ಕಬಳ್ಳಾಪುರ: ಕಳೆದ ಬಾರಿ 2019ರಲ್ಲಿ ಯಲಹಂಕ (Yalahanka) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ (BJP) 45,000 ಮತಗಳ ಲೀಡ್ ದೊರೆತಿತ್ತು. ಈ ಬಾರಿ ಎನ್‌ಡಿಎಗೆ (NDA) 1 ಲಕ್ಷಕ್ಕೂ ಹೆಚ್ಚು ಮತಗಳ ಲೀಡ್ ಸಿಗಲಿದೆ ಎಂದು ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ವಿಶ್ವಾಸ ವ್ಯಕ್ತಪಡಿಸಿದರು.

    ಯಲಹಂಕ ವಿಧಾನಸಭಾ ಕ್ಷೇತ್ರದ ತೋಟದಗುಡ್ಡಹಳ್ಳಿ, ಅಂಚೆಪಾಳ್ಯ ಮೊದಲಾದ ಕಡೆಗಳಲ್ಲಿ ಶಾಸಕ ಎಸ್‌ಆರ್ ವಿಶ್ವನಾಥ್ ಅವರೊಂದಿಗೆ ಡಾ.ಕೆ ಸುಧಾಕರ್ ಪ್ರಚಾರ ಮತ್ತು ಸಭೆ ನಡೆಸಿದರು. ಬಳಿಕ ಮಾತನಾಡಿದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ (Dr K Sudhakar), ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾದ ಬಳಿಕ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. 80% ರಷ್ಟು ಮತಗಳು ಬಿಜೆಪಿಗೆ ದೊರೆಯಲಿದೆ. ಆದರೆ ಕಾಂಗ್ರೆಸ್‌ಗೆ 20% ರಷ್ಟು ಮತಗಳು ದೊರೆಯುವುದು ಅನುಮಾನ. ಇದಕ್ಕೆ ಶಾಸಕರ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದರು. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಮಳೆ ಅಬ್ಬರ; ಶಿವಮೊಗ್ಗ, ಬೀದರ್‌ನಲ್ಲಿ ವರುಣಾರ್ಭಟಕ್ಕೆ ಇಬ್ಬರು ಬಲಿ – ಇನ್ನೂ 3 ದಿನ ಮಳೆ ಮುನ್ಸೂಚನೆ

    ಯಲಹಂಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಂಘಟನೆ ಶಕ್ತಿಯುತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಸಮಾಗಮದಿಂದ ಇಲ್ಲಿ ಹೆಚ್ಚು ಲಾಭವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ

  • ಯಾರೇ ಹೇಳಲಿ, ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ: ಎಸ್‌ಆರ್‌ ವಿಶ್ವನಾಥ್‌

    ಯಾರೇ ಹೇಳಲಿ, ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ: ಎಸ್‌ಆರ್‌ ವಿಶ್ವನಾಥ್‌

    ಬೆಂಗಳೂರು: ಮಾಜಿ ಸಚಿವ, ಹಾಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಧಾಕರ್‌ (Sudhakar) ಮತ್ತು ಬಿಜೆಪಿಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ (Radha Mohan Das) ಅವರು ಯಲಹಂಕ ಶಾಸಕ ಎಸ್‌ಆರ್‌ ವಿಶ್ವನಾಥ್‌ (SR Vishwanth) ಅವರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ.

    ಗೃಹ ಸಚಿವ ಅಮಿತ್ ಶಾ (Amit Shah) ಸೂಚನೆ ಮೇರೆಗೆ ಬೆಳಗ್ಗೆ ಉಪಹಾರಕ್ಕೆ ಬರುವಂತೆ ಇಬ್ಬರು ನಾಯಕರಿಗೆ ಎಸ್‌ಆರ್‌ ವಿಶ್ವನಾಥ್ ಆಹ್ವಾನ ನೀಡಿದ್ದರು. ಆಹ್ವಾನದ ಹಿನ್ನೆಲೆಯಲ್ಲಿ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ನಿವಾಸಕ್ಕೆ ಇಬ್ಬರು ನಾಯಕರು ಭೇಟಿ ನೀಡಿ ಭಿನ್ನಾಭಿಪ್ರಾಯ ಮರೆತು ಮಾತುಕತೆ ನಡೆಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವನಾಥ್‌, ಅಸಮಾಧಾನ ಪಕ್ಷದ ಮೇಲೆ ಯಾವತ್ತೂ ಮಾಡಿಲ್ಲ. ಸುಧಾಕರ್ ಅವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೆ ಅಷ್ಟೇ. ನರೇಂದ್ರ ಮೋದಿ ಗೆಲ್ಲಿಸಲು ಬಿಜೆಪಿ ಪಕ್ಷವನ್ನ ನೋಡಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಚುನಾವಣಾ ಚಾಣಾಕ್ಷ ಅಮಿತ್ ಶಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ.ನಾನು ಏನು ಹೇಳಬೇಕೋ ಹೇಳಿದ್ದೇನೆ. 8 ವಿಧಾನ ಸಭಾ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ರಾಧಾ ಮೋಹನ್ ದಾಸ್‌ ಅವರು ನಿನ್ನೆ ತಿಂಡಿಗೆ ಬರುತ್ತೇವೆ ಎಂದು ಹೇಳಿದರು. ಇವತ್ತು ಮನೆಗೆ ಬಂದಿದ್ದು ನಮ್ಮ ಕ್ಷೇತ್ರದ ಮುಖಂಡರ ಪರಿಚಯ ಮಾಡಿಸಿದ್ದೇನೆ ಎಂದರು.

    ಯಾರೇ ಹೇಳಲಿ ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ. ಎಲ್ಲಾ ಕಾರ್ಯಕರ್ತರನ್ನು ಕರೆದು ಸಭೆ ಮಾಡಿ ಸೂಚನೆ ಕೊಡಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ನಾಳೆ ಹೋಗುತ್ತೇವೆ. ಮುಂದಿನ ಬಾರಿ ಅಲೋಕ್ ಗೆ ಅವಕಾಶ ಕೊಡುತ್ತೇವೆ ಎಂದು ರಾಧಾ ಮೋಹನ್ ಜಿ ಕೂಡಾ ಹೇಳಿದ್ದಾರೆ ಎಂದು ತಿಳಿಸಿದರು.

  • ಮುಗಿಯದ ಮುನಿಸು – ಮನೆಗೆ ಸುಧಾಕರ್ ಬಂದ್ರೂ ಭೇಟಿ ಮಾಡದ ಎಸ್‌ಆರ್ ವಿಶ್ವನಾಥ್

    ಮುಗಿಯದ ಮುನಿಸು – ಮನೆಗೆ ಸುಧಾಕರ್ ಬಂದ್ರೂ ಭೇಟಿ ಮಾಡದ ಎಸ್‌ಆರ್ ವಿಶ್ವನಾಥ್

    ಬೆಂಗಳೂರು: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ (K Sudhakar) ಹಾಗೂ ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ನಡುವೆ ಮುನಿಸು ಮುಂದುವರಿದಿದೆ. ವಿಶ್ವನಾಥ್ ಅವರನ್ನು ಭೇಟಿ ಮಾಡಲೆಂದು ಅವರ ನಿವಾಸಕ್ಕೆ ಆಗಮಿಸಿದ ಸುಧಾಕರ್ ಅನ್ನು ಭೇಟಿ ಮಾಡದೇ ಯಲಹಂಕ ಶಾಸಕ ರೆಬೆಲ್ ನಡೆ ತೋರಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಶಾಸಕ ಎಸ್‌ಆರ್ ವಿಶ್ವನಾಥ್ ರೆಬೆಲ್ ಆಗಿದ್ದಾರೆ. ಟಿಕೆಟ್ ಘೋಷಣೆಯಾಗಿ ವಾರವಾದರೂ ವಿಶ್ವನಾಥ್ ಮುನಿಸು ಮುಗಿದಿಲ್ಲ. ವಿಶ್ವನಾಥ್ ಪುತ್ರ ಅಲೋಕ್‌ಗೆ ಚಿಕ್ಕಬಳ್ಳಾಪುರ ಟಿಕೆಟ್ ಕೇಳಿದ್ದರು. ಟಿಕೆಟ್ ಕೈತಪ್ಪಿದ ಹಿನ್ನೆಲೆ ವಿಶ್ವನಾಥ್ ಅಸಮಧಾನಗೊಂಡಿದ್ದಾರೆ. ಅಲ್ಲದೇ ಸುಧಾಕರ್‌ಗೆ ಬೆಂಬಲ ಕೊಡದಿರಲು ಎಸ್‌ಆರ್ ವಿಶ್ವನಾಥ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್‌ ಶ್ರೀಲಂಕಾಗೆ ನೀಡಿದೆ – ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ RTI ಉತ್ತರ

    ಈ ಮಧ್ಯೆ ಖುದ್ದು ಸುಧಾಕರ್ ತಮ್ಮ ನಿವಾಸಕ್ಕೆ ಬಂದರೂ ಸಹ ವಿಶ್ವನಾಥ್ ಅವರನ್ನು ಭೇಟಿ ಮಾಡಿಲ್ಲ. ಪಕ್ಷದ ಅಭ್ಯರ್ಥಿ ಮನೆಗೆ ಬಂದರೂ ಎದುರುಗೊಳ್ಳದೇ ಯಲಹಂಕ ಶಾಸಕ ರೆಬೆಲ್ ನಡೆ ತೋರಿದ್ದಾರೆ. ಸುಧಾಕರ್ ಜೊತೆ ಒಡನಾಟವೇ ಬೇಡ ಎಂಬ ತೀರ್ಮಾನಕ್ಕೆ ವಿಶ್ವನಾಥ್ ಬಂದಿದ್ದಾರೆ. ಚಿಕ್ಕಬಳ್ಳಾಪುರ ಭಿನ್ನಮತ ತೀವ್ರ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಲ್ಲಿ ಆತಂಕ ಹೆಚ್ಚಾಗಿದೆ. ಎಸ್‌ಆರ್ ವಿಶ್ವನಾಥ್ ಭೇಟಿ ಮಾಡಲು ಒಪ್ಪದ ಹಿನ್ನೆಲೆ ಸುಧಾಕರ್‌ಗೆ ಮುಜುಗರವುಂಟಾಗಿ ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

    ಈ ಕುರಿತು ಸುಧಾಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ ನಮ್ಮ ಸ್ನೇಹಿತರು. ಹಲವಾರು ಸಲ ನಾನು ಕರೆ ಮಾಡಿದ್ದೆ, ಮೆಸೇಜ್ ಮಾಡಿದ್ದೆ. ಅದಕ್ಕೆ ಯಾವುದೇ ಉತ್ತರ ಇಲ್ಲ. ಯಾವುದಕ್ಕೂ ಸ್ಪಂದಿಸಿರಲಿಲ್ಲ. ನಮ್ಮ ನಾಯಕರು ಯಡಿಯೂರಪ್ಪ ಅವರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಇದೇ ಚುನಾವಣೆ ಕೊನೆಯಲ್ಲ. ನಮ್ಮ ನಾಯಕರು ಸಮಸ್ಯೆ ಬಗೆಹರಿಸುತ್ತಾರೆ. ಇದರ ನಡುವೆ ನಮ್ಮ ಅವರ ಭೇಟಿ ಸಾಧ್ಯವಾಗಿಲ್ಲ. ಕೆಲವು ರಾಜಕಾರಣದಲ್ಲಿ ಎಲ್ಲವು ಸರಾಗವಾಗಿ ನಡೆದರೆ ಅದು ರಾಜಕಾರಣವಲ್ಲ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ನನ್ನ ಮತ್ತು ಅವರ ನಡುವೆ ವೈಯಕ್ತಿಕ ಕಲಹಗಳು ಏನು ಇಲ್ಲ. ನಾನು ಸೇರಿ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರೋದು. ಏ.4ರಂದು ನಾಮಪತ್ರ ಸಲ್ಲಿಸುತ್ತೇನೆ. ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಅಧಿಕೃತ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸುಮಲತಾರನ್ನು ಭೇಟಿಯಾಗಲಿದ್ದಾರೆ ಹೆಚ್‌ಡಿಕೆ

    ಈ ಕುರಿತು ಎಸ್‌ಆರ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ಮಾಧ್ಯಮದವರಿಗೆ ಮಾಹಿತಿ ನೀಡಿದರೆ ಸಾಕೇ? ನಮ್ಮ ಮನೆಗೆ ಬರುವಾಗ ನನಗೆ ಹೇಳೋದು ಬೇಡ್ವಾ? ನಾನ್ಯಾಕೆ ಒಬ್ಬನೇ ಮಾತಾಡಲಿ? ಹೇಳಿದ್ದರೆ ಕಾರ್ಯಕರ್ತರನ್ನು ಸೇರಿಸಿ ಅವರ ಎದುರೇ ಮಾತನಾಡುತ್ತಿದ್ದೆ. ಅಮಿತ್ ಶಾ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಅಮಿತ್ ಶಾ ಕಾರ್ಯಕ್ರಮದ ತಯಾರಿಗಳನ್ನು ನೋಡಿಕೊಳ್ಳಲು ತೆರಳುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ

  • ಚಿಕ್ಕಬಳ್ಳಾಪುರ ಟಿಕೆಟ್ ಫೈಟ್- ಹೊರಗಿನವರಿಗೆ ಟಿಕೆಟ್ ಬೇಡವೆಂದ್ರು ವಿಶ್ವನಾಥ್

    ಚಿಕ್ಕಬಳ್ಳಾಪುರ ಟಿಕೆಟ್ ಫೈಟ್- ಹೊರಗಿನವರಿಗೆ ಟಿಕೆಟ್ ಬೇಡವೆಂದ್ರು ವಿಶ್ವನಾಥ್

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Chikkaballapur Loksabha Constituency) ಮೈತ್ರಿ ಟಿಕೆಟ್ ವಿಚಾರ ಸಂಬಂಧ ಸುಧಾಕರ್ ಗಾದ್ರೂ ಕೊಡಿ ಅಲೋಕ್ ವಿಶ್ವನಾಥ್ ಗಾದ್ರೂ ಕೊಡಿ. ಆದರೆ ಹೊರಗಿನವರಿಗೆ ಮಾತ್ರ ಟಿಕೆಟ್ ಕೊಡೋದು ಬೇಡ ಎಂದು ಶಾಸಕ ಎಸ್.ಆರ್ ವಿಶ್ವನಾಥ್ (S.R Vishwanath) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಘೋಷಣೆ ತಡ ಯಾಕೆ ಅಂತ ನನಗೂ ಗೊತ್ತಾಗುತ್ತಿಲ್ಲ. ಸರ್ವೆ ಅಧಾರದ ಮೇಲೆ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್ ಕೊಡಿ. ಕಾರ್ಯಕರ್ತರಲ್ಲೂ ಆತಂಕ ಗೊಂದಲ ಮನೆ ಮಾಡಿದೆ. ದಿನಕ್ಕೊಂದು ಸುದ್ದಿ ಮೂರನೇ ವ್ಯಕ್ತಿ ಬರುವ ಮಾಹಿತಿ ಇದೆ. ಹಾಗಾಗಿ ವರಿಷ್ಠರಲ್ಲಿ ಹೊರಗಿನವರಿಗೆ ಟಿಕೆಟ್ ಕೊಡಬೇಡಿ ಅಂತ ಮನವಿ ಮಾಡಿದ್ದೇನೆ ಎಂದು ಹೇಳಿದರು.

    ಎರಡು ದಿನದಲ್ಲಿ ಅಭ್ಯರ್ಥಿ ಘೋಷಣೆ ಆಗಲಿದೆ. ಸೋಮವಾರ ಸಭೆ ಇದೆ ಮೂರನೇ ಪಟ್ಟಿಯಲ್ಲಿ ಘೋಷಣೆ ಆಗಲಿದೆ. ಸ್ಥಳೀಯರಿಗೆ ಟಿಕೆಟ್ ಕೊಡಿ ಹೊರಗಿನವರು ಬೇಡವೇ ಬೇಡ. ಕುಮಾರಸ್ವಾಮಿಗೂ ಸಹ ಆಫರ್ ಕೊಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ನಿಲ್ಲುವ ಹಾಗೆ ಇದ್ರೆ ಅವರು ಪಕ್ಷ ಸಂಘಟನೆ ಮಾಡ್ತಿದ್ರು. ಹಾಗಾಗಿ ನಿಲ್ಲೋದು ಅನುಮಾನ ಎಂದರು.

    ಒಂದು ವೇಳೆ ಹೈಕಮಾಂಡ್ ಕುಮಾರಸ್ವಾಮಿಯವರಿಗೆ ಕೊಟ್ರೆ ಸಹ ನಾವು ಸಹಕಾರ ಕೊಡ್ತೇವೆ. ಸುಧಾಕರ್ ಹಾಗೂ ನಾನು ಸಹ ಮಾತನಾಡಿದ್ದೇವೆ. ಇಬ್ಬರು ಸಹ ನಮ್ಮಿಬ್ಬರಲ್ಲಿ ಯಾರಿಗಾದ್ರೂ ಕೊಡಲಿ ಅಂತ ಮಾತನಾಡಿದ್ದೇವೆ. ಹೊರಗಿನವರು ಬರೋದು ಬೇಡ ಅಂತ ತೀರ್ಮಾನ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಟೆಂಪಲ್ ರನ್