Tag: SR Patil

  • ಗ್ಯಾರಂಟಿಯಿಂದ ದುಡ್ಡು ಇಲ್ಲದೇ ಇದ್ರೆ ಸರ್ಕಾರಿ ಆಸ್ತಿ ಮಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ: ಎಸ್.ಆರ್ ಪಾಟೀಲ್ ಆಕ್ರೋಶ

    ಗ್ಯಾರಂಟಿಯಿಂದ ದುಡ್ಡು ಇಲ್ಲದೇ ಇದ್ರೆ ಸರ್ಕಾರಿ ಆಸ್ತಿ ಮಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ: ಎಸ್.ಆರ್ ಪಾಟೀಲ್ ಆಕ್ರೋಶ

    – 75 ಸಾವಿರ ಕೋಟಿ ಅನುದಾನವನ್ನು ನೀಡುವ ಭರವಸೆ ನೀಡಿದ್ದ ಸಿಎಂ
    – ಎರಡು ಬಜೆಟ್‌ ಮಂಡನೆಯಾದ್ರೂ ಅನುದಾನ ಸಿಕ್ಕಿಲ್ಲ

    ಬಾಗಲಕೋಟೆ: ಪಂಚ ಗ್ಯಾರಂಟಿಗಳಿಂದ (Congress Guarantee) ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಸಬೂಬು ಹೇಳಬೇಡಿ, ಬೆಂಗಳೂರಿನಲ್ಲಿರುವ (Bengaluru) ಒಂದು ಸರ್ಕಾರಿ ಆಸ್ತಿ ತೆಗೆದು ನಮ್ಮ ಕೃಷ್ಣಾ ಮೇಲ್ದಂಡೆ ಯೋಜನೆಗೆ (Upper Krishna Project) ದುಡ್ಡು ಕೊಡಿ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ (SR Patil) ಕಾಂಗ್ರೆಸ್‌ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.

    ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ, ಮುಳುಗಡೆ ಹಿತರಕ್ಷಣಾ ಸಮಿತಿ ವತಿಯಿಂದ ಬಾಗಲಕೋಟೆಯಲ್ಲಿ (Bagalkot) ಮಂಗಳವಾರ ಬೃಹತ್ ಹೋರಾಟದ ಧರಣಿ ಸತ್ಯಾಗ್ರಹದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಹೋರಾಟದಲ್ಲಿ ಸಾವಿರಾರು ರೈತರು ಎಲ್ಲಾ ಪಕ್ಷದ ನಾಯಕರು ಭಾಗವಹಿಸಿದ್ದರು.

    ಹೋರಾಟದಲ್ಲಿ ಭಾಗವಹಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್.ಆರ್ ಪಾಟೀಲ್, 1964 ರಲ್ಲಿ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರಿಂದ ಅಡಿಗಲ್ಲು ಹಾಕಿದ ನಂತರ ಕುಂಟುತ್ತಾ ಸಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಚುನಾವಣೆಗೂ ಮುನ್ನ ವಿಜಯಪುರದಲ್ಲಿ ಭಾಷಣ ಮಾಡುವ ವೇಳೆ ಈಗಿನ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು 75 ಸಾವಿರ ಕೋಟಿ ರೂ. ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದರು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗಾಗಿ ಪ್ರತೀ ವರ್ಷ 40 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ತಿಳಿಸಿದ್ದರು. ಆದರೆ ಈಗ ಸರ್ಕಾರ ಬಂದು ಎರಡು ಬಜೆಟ್ ಆಗಿವೆ. ನೀರಾವರಿ ಯೋಜನೆಗೆ 40 ಸಾವಿರ ಕೋಟಿ ರೂ. ಇಟ್ಟಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಿ ತಿಂಗಳು ಸರಿಯಾಗಿ ನಿಮಗೆ ಸಂಬಳ ಸಿಗುತ್ತಾ – ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಹೆಬ್ಬಾಳ್ಕರ್‌ ಮೊಂಡುವಾದ

    ಯಾವುದೇ ಸರ್ಕಾರ ಬಂದರೂ ಕೃಷ್ಣ ಮೇಲ್ದಂಡೆ ಯೋಜನೆಗೆ ಸರಿಯಾಗಿ ಅನುದಾನವನ್ನು ನೀಡುತ್ತಿಲ್ಲ. ಹೀಗೆ ಆದರೆ ಯೋಜನಾ ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಮನೆ ಮಠ ಜಮಿನುಗಳನ್ನು ಕಳೆದುಕೊಂಡ ಸಂತ್ರಸ್ತರು ಪರಿಹಾರಕ್ಕಾಗಿ ಪರಿತಪಿಸುತ್ತಿದ್ದಾರೆ ಎಂದರು.

    ಯಾವುದೇ ಸರ್ಕಾರ ಬಂದರೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ದುಡ್ಡು ನೀಡುತ್ತಿಲ್ಲ. ಕೃಷ್ಣೆಗೆ ಈ ರೀತಿಯ ತಾತ್ಸಾರ ಯಾಕೆ ಎಂದು ಅಧಿಕಾರ ಅನುಭವಿಸಿದ ಮೂರು ಸರ್ಕಾರಗಳಿಗೂ ಪ್ರಶ್ನೆ ಮಾಡಿದರು.

    ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಈಗಿನ ಸರ್ಕಾರ ಪಂಚ ಗ್ಯಾರಂಟಿ ಇಂದ ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುವ ಸಬೂಬು ಹೇಳುವ ಬದಲು ಬೆಂಗಳೂರಿನಲ್ಲಿರುವ ಒಂದು ಸರ್ಕಾರಿ ಆಸ್ತಿಯನ್ನ ಮಾರಿ ನಮ್ಮ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ. ಟರ್ಫ್ ಕ್ಲಬ್, ರೇಸ್ ಕೋರ್ಸ್ ಮೈದಾನ ಹಾಗೂ ಗಾಲ್ಫ್ ಮೈದಾನ ತೆಗೆದರೆ 50 ಲಕ್ಷ ಕೋಟಿ ರೂ. ಬರುತ್ತದೆ. ಹೀಗೆ ನೂರರಷ್ಟು ಸರ್ಕಾರಿ ಆಸ್ತಿಗಳಿವೆ. ಅದರಲ್ಲಿ ಒಂದನ್ನು ತೆಗೆದು ಉತ್ತರ ಕರ್ನಾಟಕ ಭಾಗದ ಜನರ ಜೀವನ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸರ್ಕಾರಕ್ಕೆ ಕಟುವಾಗಿ ಆಗ್ರಹಿಸಿದರು.

    ನಾನು ಹಿಂದೆ ವಿಪಕ್ಷ ನಾಯಕನಾಗಿದ್ದಾಗ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿಗಾಗಿ ಪಾದಯಾತ್ರೆ, ಟ್ರ್ಯಾಕ್ಟರ್ ರ‍್ಯಾಲಿ ಮಾಡಿ ಸದನದಲ್ಲಿ ಕೃಷ್ಣೆಗಾಗಿ ಅನುದಾನ‌ ನೀಡುವಂತೆ ಆಗ್ರಹಿಸಿದ್ದೆ. ಕೃಷ್ಣೆಗಾಗಿ ಹೋರಾಟ ಮಾಡಿದ್ದಕ್ಕೆ ನಾನು ಸದನದಿಂದ ಹೊರ ಬರಬೇಕಾಯಿತು ಎಂದು ತಮಗೆ ಪರಿಷತ್‌ ಸದಸ್ಯರಾಗಿ ಆಯ್ಕೆ ಮಾಡದ್ದಕ್ಕೆ ಪಕ್ಷದ ನಾಯಕರ ಬಗ್ಗೆ ಪರೋಕ್ಷ ಬೇಸರವನ್ನು ಹೊರಹಾಕಿದರು.

    ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯೋಣ. ಉಪವಾಸ ಸತ್ಯಾಗ್ರಹ ಮಾಡೋಣ, ಅದಕ್ಕೂ ಬಗ್ಗದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿ ಕೃಷ್ಣಾ ಕಾಮಗಾರಿಗೆ ದುಡ್ಡು ನೀಡುವಂತೆ ಸರ್ಕಾರಕ್ಕೆ ಆಗ್ರಹಿಸೋಣ ಎಂದು ರೈತರಿಗೆ ಕರೆ ನೀಡಿದರು.

     

  • ಪ್ರೀತಿ ಮಾಡೋದು ತಪ್ಪಲ್ಲ ಅಂತಿದೆ ‘ಒಲವೇ ಮಂದಾರ 2’

    ಪ್ರೀತಿ ಮಾಡೋದು ತಪ್ಪಲ್ಲ ಅಂತಿದೆ ‘ಒಲವೇ ಮಂದಾರ 2’

    ಎಸ್.ಆರ್.ಪಾಟೀಲ್ ನಿರ್ದೇಶನದಲ್ಲಿ ಸನತ್ ನಾಯಕನಾಗಿ ನಟಿಸಿರುವ ‘ಒಲವೇ ಮಂದಾರ 2’ (Olave Mandara 2) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಕುರಿತು ಹೆಚ್ಚಿನ  ಮಾಹಿತಿಯನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ಒಲವೇ ಮಂದಾರ ೨ ಪರಿಶುದ್ಧ ಪ್ರೇಮಕಥೆ ಎಂದು ಮಾತು ಆರಂಭಿಸಿದ ನಿರ್ದೇಶಕ ಎಸ್.ಆರ್.ಪಾಟೀಲ್ (SR Patil), ಈ ಪ್ರಪಂಚದಲ್ಲಿ  ಪ್ರೀತಿ ಮಾಡುವವರನ್ನು ಅವರ ತಂದೆ ತಾಯಿ ತಮ್ಮ ಮಕ್ಕಳು  ಕ್ರೈಮ್ ಮಾಡಿರುವ  ಹಾಗೆ ನೋಡಲಾಗುತ್ತದೆ. ‌ಅದರಲ್ಲೂ ಹೆಚ್ಚಾಗಿ ಹೆಣ್ಣುಮಕ್ಕಳನ್ನು. ಇದು ತಪ್ಪು. ಒಬ್ಬರನೊಬ್ಬರು ಅರಿತುಕೊಂಡು‌ ಮಾಡುವ ಪ್ರೀತಿ ಯಾವತ್ತು ತಪ್ಪಲ್ಲ, ಹಾಗೆ ಪ್ರೀತಿ ಮಾಡಿದವರು ಕೊನೆಯ ಕ್ಷಣದವರೆಗೂ ತಮ್ಮ ಪ್ರೀತಿಯನ್ನು ಅವರ ತಂದೆ ತಾಯಿಗೆ ಒಪ್ಪಿಸಲು ಪ್ರಯತ್ನಿಸಬೇಕು ಹೊರತು ಬೇರೆ ನಿರ್ಧಾರ ತೆಗೆದುಕೊಳ್ಳಬಾರದು   ಎಂಬ ಸಂದೇಶ ಈ ಚಿತ್ರದಲ್ಲಿದೆ. ನನಗೆ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಒಲವೇ ಮಂದಾರ ಚಿತ್ರ ಇಷ್ಟ. ಹಾಗಾಗಿ ಶೀರ್ಷಿಕೆ ಇಟ್ಟಿದ್ದೇವೆ‌ ಹೊರತು, ಆ ಚಿತ್ರದ ಕಥೆಯೇ ಬೇರೆ. ನಮ್ಮ ಚಿತ್ರದ ಕಥೆಯೆ ಬೇರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಿಟ್ ಆಗಿವೆ. ನಮ್ಮ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹ ನೀಡಿ ಎಂದರು.

    ಕಮರೊಟ್ಟು ಚೆಕ್ ಪೋಸ್ಟ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನನಗೆ ಇದು ಎರಡನೇ ಚಿತ್ರ. ನಾಯ ನಟನಾಗಬೇಕೆಂಬುದು ನನ್ನಂತಹ ಮಧ್ಯಮ ವರ್ಗದ ಹುಡುಗನ ಕನಸು.  ಆ ಕನಸನ್ನು ನನಸ್ಸಾಗಿಸಿದ ಎಲ್ಲರಿಗೂ ಧನ್ಯವಾದ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕ ಸನತ್ ತಿಳಿಸಿದರು.

    ನಿರ್ಮಾಪಕರಾದ ರಮೇಶ್ ಮರಗೋಳ, ಬಿ.ಎಂ.ಸತೀಶ್ ಹಾಗೂ ಸಹ ನಿರ್ಮಾಪಕರಾದ ಯಲ್ಲಾಲಿಂಗ ಮುಗುಟಿ ಹಾಗೂ ರಾಮದೇವ್ ರಾಥೋಡ್ ಚಿತ್ರ ನಿರ್ಮಾಣದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಡಾ ಕಿರಣ್ ತೋಟಂಬೈಲ್ ಹಾಡುಗಳ ಬಗ್ಗೆ ಹಾಗೂ ನಾಯಕಿ ಪ್ರಜ್ಞಾ ಭಟ್ (Pragya Bhatt), ಅನುಪಾ ಸತೀಶ್,  ಹಿರಿಯ ನಟಿ ಭವ್ಯ, ಡಿಂಗ್ರಿ ನಾಗರಾಜ ಕಾಮಿಡಿ ಕಿಲಾಡಿ ಮಡೆನೂರ ಮನು, ಶಿವಾನಂದ ಸಿಂದಗಿ  ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಕ್ಷದ ನಾಯಕರನ್ನ ಬಿಟ್ಟು ಉ.ಕರ್ನಾಟಕ ಸಮಸ್ಯೆ ಬಗ್ಗೆ ಧ್ವನಿ ಎತ್ತಲು ಸಜ್ಜಾದ S.R.ಪಾಟೀಲ್

    ಪಕ್ಷದ ನಾಯಕರನ್ನ ಬಿಟ್ಟು ಉ.ಕರ್ನಾಟಕ ಸಮಸ್ಯೆ ಬಗ್ಗೆ ಧ್ವನಿ ಎತ್ತಲು ಸಜ್ಜಾದ S.R.ಪಾಟೀಲ್

    ಹುಬ್ಬಳ್ಳಿ: ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ತಮ್ಮ ಪಕ್ಷ ಕಾಂಗ್ರೆಸ್‍ಗೆ ಗುಡ್ ಬೈ ಹೇಳಲು ತಯಾರಿ ನಡೆಸಿದ್ದಾರೆಂಬ ಅನುಮಾನ ಮೂಡಿದೆ. ಇತ್ತೀಚೆಗೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಎಸ್.ಆರ್.ಪಾಟೀಲ್ ಅವರು ತಮ್ಮ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಬೆನ್ನಲ್ಲೇ ಎಸ್.ಆರ್.ಪಾಟೀಲ್ ಅಧ್ಯಕ್ಷತೆಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಉಗಮವಾಗಿದೆ.

    ಉತ್ತರ ಕರ್ನಾಟಕ ನೀರಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಕಾಂಗ್ರೆಸ್‍ಗೆ ಟಾಂಗ್ ನೀಡಲು ಭರ್ಜರಿ ತಯಾರಿ ನಡೆದಿದೆ. ಕೃಷ್ಣ-ಮಹಾದಾಯಿ-ನವಲಿ ಸಂಕಲ್ಪಯಾತ್ರೆ ಆರಂಭಗೊಳಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಈ ಹಿಂದೆ ಹುಬ್ಬಳ್ಳಿಗೆ ಭೇಟಿ ನೀಡಿದಾಗ ಮಹದಾಯಿ ಹೋರಾಟ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಇದನ್ನೂ ಓದಿ: ಪತಿ ಹುಟ್ಟುಹಬ್ಬಕ್ಕೆ ಪ್ರಣೀತಾ ಗುಡ್‍ನ್ಯೂಸ್- ಫೋಟೋಶೂಟ್ ಜೊತೆ ಪ್ರೆಗ್ನೆಸಿ ರಿಪೋರ್ಟ್

    ಕಾಂಗ್ರೆಸ್ ಪಕ್ಷ ಬಿಟ್ಟು ಎಸ್.ಆರ್.ಪಾಟೀಲ್ ಅವರು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯಲ್ಲಿ ಅಧ್ಯಕ್ಷತೆವಹಿಸಲು ಹೋರಾಟಕ್ಕೆ ಸಜ್ಜಾಗಿದೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸಂದೇಶ ನೀಡಲು ಮುಂದಾಗಿದ್ದಾರೆ.

    ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಎಸ್.ಆರ್.ಪಾಟೀಲ್, ನೀರಿನ ವಿಚಾರದಲ್ಲಿ ಮತ್ತು ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಎಲ್ಲ ಪಕ್ಷಗಳಿಂದ ಅನ್ಯಾಯವಾಗುತ್ತಿದೆ. ಹೀಗಾಗಿ ಈ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಉಗಮವಾಗಿದ್ದು, ಪಕ್ಷಾತೀತವಾಗಿ ನೀರಿನ ಹೋರಾಟ ಮಾಡುತ್ತೇವೆ. ಕೃಷ್ಣ-ಮಹಾದಾಯಿ-ನವಲಿ ಸಂಕಲ್ಪಯಾತ್ರೆ ಆರಂಭವಾಗಲಿದೆ ಎಂದು ತಿಳಿಸಿದರು.

    ಈ ತಿಂಗಳ 13 ರಿಂದ ಗದಗ ಜಿಲ್ಲೆಯ ನರಗುಂದದಿಂದ ಟ್ರಾಕ್ಟರ್ ರ‍್ಯಾಲಿ ಆರಂಭವಾಗುತ್ತದೆ. ಶಿರಹಟ್ಟಿತ ಫಕೀರ ದಿಂಗಾಲೇಶ್ವರ ಸ್ವಾಮೀಜಿ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. 17ಕ್ಕೆ ರ‍್ಯಾಲಿ ಬಿಳಗಿ ತಾಲೂಕಿನ ಬಾಡಗಂಡಿಯಲ್ಲಿ ಸಮಾರೋಪಗೊಳ್ಳಲಿದೆ. ಬಾಪೂಜಿ ಅಂತರರಾಷ್ಟ್ರೀಯ ಶಾಲೆಯ ಮೈದಾನದಲ್ಲಿ ಬೃಹತ್ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ 25 ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಳಲಿದ್ದಾರೆ ಎಂದರು. ಇದನ್ನೂ ಓದಿ: ಕೆಜಿಎಫ್-2 ರಿಲೀಸ್ ಫಿವರ್: ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಬುಕ್ ಮಾಡಿದ ಯಶ್ ಮಹಿಳಾ ಫ್ಯಾನ್ಸ್

  • Wait and see, ಸಮಯ ಬಂದಾಗ ಎಲ್ಲಾ ಹೇಳುತ್ತೇನೆ: ಎಸ್.ಆರ್.ಪಾಟೀಲ್

    Wait and see, ಸಮಯ ಬಂದಾಗ ಎಲ್ಲಾ ಹೇಳುತ್ತೇನೆ: ಎಸ್.ಆರ್.ಪಾಟೀಲ್

    ಹುಬ್ಬಳ್ಳಿ: ಸಮಯ ಸಂದರ್ಭದಲ್ಲಿ ಎಲ್ಲಾ ಹೇಳುತ್ತೇನೆ. ವೇಟ್ ಆಂಡ್ ಸಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

    ಸಿಎಂ ಇಬ್ರಾಹಿಂ ಅವರನ್ನು ಭೇಟಿಯಾಗಿ ಮಾತನಾಡಿದ ಅವರು, ನನಗೆ ಇಲ್ಲಿಗೆ ಬಂದು ಇಬ್ರಾಹಿಂ ಜೊತೆಗೆ ಯಾರೂ ಮಾತನಾಡಲು ಹೇಳಿಲ್ಲ, ನಾನು ಸ್ವ ಇಚ್ಛೆಯಿಂದ ಪಕ್ಷದ ಹಿತದೃಷ್ಟಿಯಿಂದ ಮತ್ತು ಸ್ನೇಹಿತನ ನೋವನ್ನು ಆಲಿಸಲು ಬಂದಿದ್ದೇನೆ ಎಂದು ತಿಳಿಸಿದರು.

    ಇಬ್ರಾಹಿಂ ಅವರು ವಿಪಕ್ಷ ನಾಯಕನಾಗುವ ಆಸೆಯಿಟ್ಟುಕೊಂಡಿದ್ದರು. ಅವರು ಪಕ್ಷದಲ್ಲಿ ಇರಬೇಕು ಎಂದು ಮನವಿ ಮಾಡಿದ್ದೇನೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನಗೆ ಸದ್ಯ ಯಾವುದೇ ಅಸಮಾಧಾನ ಇಲ್ಲ ಎಂದರು. ಇದನ್ನೂ ಓದಿ: ಲೂಟಿ ಮಾಡಿರುವ ದುಡ್ಡಿದ್ದರೆ ಹೊಸ ಪಕ್ಷ ಮಾಡುತ್ತಿದ್ದೆವು: ಯತ್ನಾಳ್

    ಚುನಾವಣೆ ಸಮಯದಲ್ಲಿ ಒಬ್ಬ ಕಾರ್ಯಕರ್ತ ಪಕ್ಷ ಬಿಟ್ಟು ಹೋಗಬಾರದು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

    ಮುಗಿದ ಅಧ್ಯಾಯ: ಎಸ್‍ಆರ್ ಪಾಟೀಲ್ ಅವರು ನನ್ನನ್ನು ಪಕ್ಷದಲ್ಲಿ ಇರಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಅದು ಮುಗಿದ ಅಧ್ಯಾಯ. ಒಂದು ಸಲ ಡ್ಯಾಂ ಒಡೆದು ನೀರು ಹರಿದು ಹೋದರೆ ಮುಗಿಯಿತು ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿಕೆ ನೀಡಿ ಪಕ್ಷಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ – ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ವಾಗ್ದಾಳಿ

    ನನ್ನ ಜೊತೆಗೆ ಬಹಳಷ್ಟು ದೊಡ್ಡವರ ಬೆಂಬಲವಿದೆ. ಕಾಂಗ್ರೆಸ್‍ನವರು ನನ್ನ ಜೊತೆಗಿದ್ದಾರೆ. ಆದರೆ ಅವರ ಹೆಸರನ್ನು ಹೇಳಲ್ಲ. ಅದಕ್ಕೆ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆನೆ ಎಂದರು.

    ಅಲ್ಪಸಂಖ್ಯಾತ ಲಿಂಗಾಯತ ಚಳುವಳಿ ವಿಜಯಪುರದಿಂದ ಆರಂಭ ಮಾಡುತ್ತೇವೆ. ಚಳುವಳಿಗೆ ಎಸ್‍ಆರ್ ಪಾಟೀಲ್ ಬರುತ್ತಾರೆ ಎಂದು ತಿಳಿಸಿದ್ದಾರೆ. ಎಸ್‍ಆರ್‍ಪಾಟೀಲ್ ಕಾಂಗ್ರೆಸ್ ಬಿಟ್ಟು ಬರುತ್ತಾರಾ ಎಂದು ಕಾದುನೋಡಿ ಎಂದರು. ಇದನ್ನೂ ಓದಿ: ಮಹಾತ್ಮಾ ಗಾಂಧಿ  ಆದರ್ಶಗಳು ಭಾರತದ ಆಧಾರಸ್ಥಂಭಗಳು: ಬಸವರಾಜ ಬೊಮ್ಮಾಯಿ

    ಐದಾರು ದಿನಗಳಲ್ಲಿ ಕೊಪ್ಪಳ, ಕಲಬುರಗಿ, ಬಳ್ಳಾರಿ, ರಾಯಚೂರು ಮತ್ತು ಬೆಳಗಾವಿ ಪ್ರವಾಸ ಮಾಡಲಿದ್ದೇನೆ. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಬೆಂಬಲ ಸಿಗುತ್ತಿದೆ. ನನಗೆ ಸಿದ್ಧರಾಮಯ್ಯರಿಂದ ಯಾವುದೇ ಫೋನ್ ಕಾಲ್ ಬಂದಿಲ್ಲ. ಅದನ್ನು ನಾನು ನಿರೀಕ್ಷೆ ಕೂಡಾ ಮಾಡುವುದಿಲ್ಲ. ನನಗೆ ಜೆಡಿಎಸ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್‍ರ ಮೇಲೆ ಒಲವು ಇದೆ ಎಂದು ಸ್ಪಷ್ಟನೆ ನೀಡಿದರು.

  • ಎರಡು ಉಪಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಖಚಿತ: ಎಸ್‍ಆರ್ ಪಾಟೀಲ್

    ಎರಡು ಉಪಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಖಚಿತ: ಎಸ್‍ಆರ್ ಪಾಟೀಲ್

    ಬಾಗಲಕೋಟೆ: ಸಿಂಧಗಿ, ಹಾನಗಲ್ ಎರಡು ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು, ಬಿಜೆಪಿ ಧೂಳಿಪಟವಾಗಲಿದೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೆ, ಬಿಜೆಪಿ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ ವಿಚಾರವಾಗಿ ಭಿನ್ನಾಭಿಪ್ರಾಯ ಶುರುವಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ನಮ್ಮ ಪಕ್ಷದಲ್ಲಿ ಒಮ್ಮತದಿಂದ ಒಬ್ಬರಿಗೆ ಟಿಕೆಟ್ ಕೊಡ್ತಾರೆ. ಕೊನೆಯಲ್ಲಿ ಪಕ್ಷದ ಅಭ್ಯರ್ಥಿ ಘೋಷಣೆಯಾಗಿ ಟಿಕೆಟ್ ಪೈಪೋಟಿ ಹೋಗುತ್ತೆ. ಟಿಕೆಟ್ ಸಿಗದಿದ್ದವರು ಕೂಡ ಒಟ್ಟಾಗಿ ಒಂದೇ ಕುಟುಂಬದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಇದರಲ್ಲಿ ಅನುಮಾನವಿಲ್ಲ ಎಂದರು. ಇದನ್ನೂ ಓದಿ: ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

    ಟಿಕೆಟ್ ಹಂಚಿಕೆ ವಿಚಾರದಲ್ಲಿ ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯ ವಿಚಾರವಾಗಿ ಪ್ರತಿಕ್ರಿಸಿದ ಅವರು, ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಜನ ಸುಮ್ಮನೆ ಹೇಳ್ತಾರೆ. ಇಬ್ಬರೂ ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡುತ್ತಾರೆ. ಇಬ್ಬರ ಮಧ್ಯದಲ್ಲಿ ಒಮ್ಮತ ಇದೆ, ಐಕ್ಯತೆ ಇದೆ. ಸೌಹಾರ್ದಯುತವಾದ ವಾತಾವರಣವಿದೆ. ಇಬ್ಬರೂ ಪಕ್ಷದ ಸಂಘಟನೆಗೆ ಶತಗತ ಪ್ರಯತ್ನ ಮಾಡುತ್ತಾರೆ. ಇನ್ನುಳಿದ ನಮ್ಮಂತ ಹಿರಿಯ ನಾಯಕರು ಅವರೊಂದಿಗೆ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್ – ಪಕ್ಷ ಕಟ್ಟಲು ಪಣತೊಟ್ಟ ಸಹೋದರರು

    ಆರ್‌ಎಸ್‌ಎಸ್‌ ಇಲ್ಲದಿದ್ದರೆ ಸಿದ್ದರಾಮಯ್ಯ ಪಂಚೆ ಉದುರುತ್ತಿತ್ತು ಎಂಬ ಸಿಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಟಿ ರವಿಯವರ ಇಂತಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ. ಸಿಟಿ ರವಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು. ನಮ್ಮ ನಾಲಿಗೆ ನಮ್ಮ ಸಂಸ್ಕೃತಿ ಹೇಳುತ್ತದೆ. ನಮ್ಮ ನಾಲಿಗೆಯಿಂದ ಒಳ್ಳೆಯ ಶಬ್ಧ ಬರಲಿಲ್ಲ ಅಂದರೆ ನಮಗೆ ಸಂಸ್ಕೃತಿ ಇಲ್ಲ ಅಂತಾ ಅನ್ನಬೇಕಾಗುತ್ತೆ. ಇಂತಹ ಕೆಳಮಟ್ಟದ ಮಾತುಗಳನ್ನು ಆಡಬಾರದು ಎಂದರು. ಪಕ್ಷದ ಸಿದ್ಧಾಂತದ ಮೇಲೆ ಮಾತನಾಡಬೇಕು. ವ್ಯಕ್ತಿಗತವಾಗಿ, ವೇಷಭೂಷಣದ ಬಗ್ಗೆ, ಮಾತಿನ ಬಗ್ಗೆ ಮಾತನಾಡೋದು ಸರಿಯಲ್ಲ. ಸಿಟಿ ರವಿ ಈ ರೀತಿ ಮಾತನಾಡಬಾರದು, ಇನ್ನು ಮುಂದೆ ಸರಿ ಮಾಡಿಕೊಳ್ಳುತ್ತಾರೆ ಅಂತಾ ಭಾವಿಸುತ್ತೇನೆ ಎಂದರು.

    ಆರ್‌ಎಸ್‌ಎಸ್‌ ತಾಲಿಬಾನಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಬಿಜೆಪಿಗರು ವಾಗ್ದಾಳಿ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ಧರಾಮಯ್ಯ ಯಾವ ಕಾರಣಕ್ಕೆ ಆ ರೀತಿ ಆರ್‌ಎಸ್‌ಎಸ್‌ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ. ನೀವೇ ಅವರನ್ನು ಕೇಳಿ ಆ ಬಗ್ಗೆ ಅವರೇ ಹೇಳ್ತಾರೆ ಎಂದು ಹೇಳಿದರು.

  • ಅ.2ರಂದು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ಪಾದಾಯಾತ್ರೆ- ಎಸ್‍ಆರ್ ಪಾಟೀಲ್

    ಅ.2ರಂದು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ಪಾದಾಯಾತ್ರೆ- ಎಸ್‍ಆರ್ ಪಾಟೀಲ್

    ಬಾಗಲಕೋಟೆ: ಯುಕೆಪಿ 3ನೇ ಹಂತದ ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಪಕ್ಷಾತೀತ, ಧರ್ಮಾತೀತ, ಸಾಮೂಹಿಕ ನಾಯಕತ್ವದಲ್ಲಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ನಿರ್ಣಾಯಕ ಪಾದಾಯಾತ್ರೆ ನಡೆಯಲಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್‍ಆರ್ ಪಾಟೀಲ್ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಘಟಪ್ರಭಾ ನದಿಯ ಅನಗವಾಡಿ ಸೇತುವೆಯಿಂದ ಕೃಷ್ಣಾ ನದಿಯ ಕೋರ್ತಿ ಕೋಲ್ಹಾರದ ಸೇತುವೆಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಸ್ವಾಭಿಮಾನ ವೇದಿಕೆ ಅಡಿಯಲ್ಲಿ ನಾಡಿನ ಖ್ಯಾತ ಸ್ವಾಮೀಜಿಗಳು, ರೈತ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಯುಕೆಪಿ ಸಂತ್ರಸ್ತರು ಭಾಗಿಯಾಗಲಿದ್ದಾರೆ ಎಂದರು.

    ವಿಧಾನಸಭೆ ವಿಧಾನಪರಿಷತ್‍ನಲ್ಲಿ ಯುಕೆಪಿ ಯೋಜನೆ ಬಗ್ಗೆ ಧ್ವನಿ ಎತ್ತಲಾಗಿದೆ. ಆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, 2500 ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದಾರೆ. ಆದರೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಧಿವೇಶನದಲ್ಲಿ ಯುಕೆಪಿ 3ನೇ ಹಂತದ ಯೋಜನೆ ಪೂರ್ಣಗೊಳಿಸಲು ಅಂದಾಜು 60ಸಾವಿರ ಕೋಟಿ ಅನುದಾನ ಬೇಕಾಗುತ್ತದೆ ಎಂದಿದ್ದರು. ಆದರೀಗ ಕೇವಲ 2500 ಕೋಟಿ ಕೊಡುವುದಾಗಿ ಹೇಳಿರೋದನ್ನು ನೋಡಿದರೆ ಈ ಯೋಜನೆ ಪೂರ್ಣಗೊಳಿಸಲು ಇನ್ನು 3 ದಶಕ ಬೇಕಾಗುತ್ತದೆ ಏನಿಸುತ್ತಿದೆ ಎಂದರು.

    ತೆಲಂಗಾಣ ಸರ್ಕಾರ ಕಾಲೇಶ್ವರ ಏತನೀರಾವರಿ ಯೋಜನೆಯನ್ನು ಕೇವಲ 3 ವರ್ಷದಲ್ಲಿ 1 ಲಕ್ಷ 20 ಸಾವಿರ ಕೋಟಿಯಲ್ಲಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಿದ್ದಾರೆ, ಬಾಗಲಕೋಟೆ ಜಿಲ್ಲೆಯವರಾದ ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವರಿದ್ದಾರೆ. ಇನ್ನೂ ಒಂದೂವರೆ ವರ್ಷದಲ್ಲಿ ಯುಕೆಪಿ ಯೋಜನೆ ಪೂರ್ಣಗೊಳಿಸಿದರೆ ಬಿಜೆಪಿ ಬಹುದೊಡ್ಡ ಸಾಧನೆ ಮಾಡಿದಂತಾಗುತ್ತದೆ ಎಂದರು. ಇದನ್ನೂ ಓದಿ: ಪಂಜಾಬ್ ವಿಧಾನಸಭೆ ಚುನಾವಣೆ- ಎಎಪಿಯಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಚರ್ಚೆ ಜೋರು

    ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯನ್ನು ಕಾಂಗ್ರೆಸ್ ಪಕ್ಷ ಮಾಡಿದಾಗ, ಸಿದ್ದರಾಮಯ್ಯನವರು ನೀರಾವರಿ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಅದರಂತೆ ಐದು ವರ್ಷದಲ್ಲಿ 53 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡಲಾಗಿದೆ. ಆದರೆ ಯುಕೆಪಿ ಯೋಜನೆಗೆ ಪ್ರತಿವರ್ಷ 10 ಸಾವಿರ ಕೋಟಿ ಕೊಡುವುದಾಗಿ ಹೇಳಿರಲಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್‌ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ

    ಇನ್ನು ಮೊನ್ನೆ ನಡೆದ ಅಧಿವೇಶನದಲ್ಲಿ ಯುಕೆಪಿ 3ನೇ ಹಂತದ ಯೋಜನೆ ಬಗ್ಗೆ ಚರ್ಚಿಸುವ ವೇಳೆ ಹೋರಾಟ ಮಾಡುವುದಾಗಿ ಹೇಳಿದ್ದೆ. ಅದರಂತೆ ಪಕ್ಷಾತೀತವಾಗಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಎಲ್ಲಾ ಪಕ್ಷದರವರು, ಸಂಘಟನೆಯವರು, ಸಂತ್ರಸ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಪಾದಯಾತ್ರೆ ಅನಗವಾಡಿಯಿಂದ ಆರಂಭವಾಗಿ ಕೋರ್ತಿ ಕೋಲ್ಹಾರದ ಸೇತುವೆ ಬಳಿ ಮುಕ್ತಾಯವಾಗಲಿದೆ. ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಸೇರಿದಂತೆ ಅವಳಿ ಜಿಲ್ಲೆಯ ಸಂತ್ರಸ್ತರು ಭಾಗಿಯಾಗಲಿದ್ದಾರೆ ಎಂದರು.

    ಈ ವೇಳೆ ಬೀಳಗಿ ಮಾಜಿ ಶಾಸಕ ಜೆಟಿ ಪಾಟೀಲ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್‍ಜಿ ನಂಜಯ್ಯನಮಠ, ರೈತ ಮುಖಂಡ ಮುತ್ತಪ್ಪ ಕೋಮಾರ, ಮಾಜಿ ಸಚಿವ ಎಚ್‍ವೈ ಮೇಟಿ, ಅಜಯ್ ಕುಮಾರ್ ಸರನಾಯಕ, ಬಸವಪ್ರಭು ಸರನಾಡಗೌಡ, ಸೇರಿದಂತೆ ಇರತ ನಾಯಕರು ಉಪಸ್ಥಿತರಿದ್ದರು.

  • 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಎಸ್.ಆರ್.ಪಾಟೀಲ್

    2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಎಸ್.ಆರ್.ಪಾಟೀಲ್

    – ಬಳಿಕ ಸಿಎಂ ಆಯ್ಕೆ ಬಗ್ಗೆ ಚರ್ಚೆ

    ವಿಜಯಪುರ: 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗುತ್ತೆ. ನಮ್ಮ ಪಕ್ಷ 113ಕ್ಕೂ ಹೆಚ್ಚು ಸ್ಥಾನ ಬಂದಾಗ, ಯಾವ ನಾಯಕ ಇರುತ್ತಾರೆ ಅವರು ಸಿಎಂ ಆಗುತ್ತಾರೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುವುದಕ್ಕೂ ಮೊದಲೇ ಅವರು ಮುಖ್ಯಮಂತ್ರಿ, ಇವರು ಮುಂದಿನ ಸಿಎಂ ಎಂದು ಹೇಳಿಕೆ ಕೊಡುವುದು ತಪ್ಪು. ಸಿದ್ದರಾಮಯ್ಯ ಕೂಡ ಹೀಗೆ ಹೇಳಬೇಡಿ ಎಂದಿದ್ದಾರೆ. ಇನ್ನು ಮುಂದೆ ಯಾರು ಸಿಎಂ, ಇವರೇ ಎನ್ನುವ ಹೇಳಿಕೆಯನ್ನು ಯಾರೂ ನೀಡುವುದಿಲ್ಲ ಎಂದರು.

    ಪಕ್ಷದ ಶಿಸ್ತು, ಕಾಂಗ್ರೆಸ್ ಸಿದ್ಧಾಂತ, ಆದರ್ಶ ಅರ್ಥ ಮಾಡಿಕೊಂಡವರು ಹೀಗೆ ಹೇಳಲ್ಲ. ಈಗ ಸಿಎಂ ವಿಚಾರ ತೆಗೆಯೋದು ಸರಿಯಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಬೆಂಬಲಿಗರಿಗೆ ಟಾಂಗ್ ನೀಡಿದರು.

    ರಾಜ್ಯ ಸರ್ಕಾರಕ್ಕೆ ಆಪರೇಶನ್ ಕಮಲದ ಪಾಪ ತಟ್ಟಿದೆ. ಬಿಜೆಪಿಯವರು 17 ಜನರಿಗೆ ರಾಜೀನಾಮೆ ಕೊಡಿಸಿ ಏನು ಸುಖ ಉಂಡರು? ಪ್ರವಾಹದಿಂದ ರಾಜ್ಯ ತತ್ತರಿಸಿದೆ, ಕೋವಿಡ್ ನಿಂದ ನಲುಗಿದೆ. ಇವರಿಗೆ ಆಪರೇಶನ್ ಕಮಲದ ಪಾಪ ತಟ್ಟಿದೆ, ಸುಖದಿಂದ ಇದ್ದಾರಾ ಎಂದು ಪ್ರಶ್ನಿಸಿದರು.

    ಶಾಸಕ ಸ್ಥಾನಕ್ಕೆ, ಪಕ್ಷಕ್ಕೆ ರಾಜೀನಾಮೆ ಕೊಡಿಸಿದ್ದರು. ಇಂಥದ್ದನ್ನು ಹಿಂದೆಂದೂ ಕಂಡಿಲ್ಲ, ಇದರ ಪಾಪ ತಟ್ಟಿದೆ. ರಾಜ್ಯದ ಜನತೆ ನೋವಿನಲ್ಲಿದ್ದಾರೆ, ಎರಡು ಬಾರಿ ಪ್ರವಾಹ ಬಂತು, ಪರಿಹಾರ ಕೊಡಿಸೋಕೆ ಆಗಿಲ್ಲ ಎಂದು ಕಿಡಿ ಕಾರಿದರು.

    ರಮೇಶ್ ಜಾರಕಿಹೊಳಿಯವರನ್ನು ಪಕ್ಷಕ್ಕೆ ಆಹ್ವಾನಿಸುವ ಪ್ರಶ್ನೆಯೇ ಇಲ್ಲ. ಅವರು ರಾಜೀನಾಮೆ ನೀಡಿ, ನಮ್ಮ ಪಕ್ಷಕ್ಕೆ ಅರ್ಜಿ ಹಾಕಲಿ. ಆಗ ನಮ್ಮ ವರಿಷ್ಠರು ತಿರ್ಮಾನಿಸುತ್ತಾರೆ. ಅವರು ಪಕ್ಷಕ್ಕೆ ಬರ್ತೀನಿ ಎಂದಿಲ್ಲ. ಶಾಸಕ ಸ್ಥಾನಕ್ಕೆ ಅರ್ಜಿ ಹಾಕಿಲ್ಲ, ಈಗ ಮಾತನಾಡೋದು ಸರಿ ಅಲ್ಲ ಎಂದರು.

  • ಎಂಪಿ ಕಾಂಗ್ರೆಸ್ ಶಾಸಕರ ಆಪರೇಷನ್: ಎಸ್.ಆರ್ ಪಾಟೀಲ್ ಕಿಡಿ

    ಎಂಪಿ ಕಾಂಗ್ರೆಸ್ ಶಾಸಕರ ಆಪರೇಷನ್: ಎಸ್.ಆರ್ ಪಾಟೀಲ್ ಕಿಡಿ

    ಬೆಂಗಳೂರು: ವಿಧಾನ ಪರಿಷತ್ ನಲ್ಲಿಂದು ಮಧ್ಯಪ್ರದೇಶದ ಆಪರೇಷನ್ ಕಮಲದ ರಾಜಕೀಯ ವಿಷಯ ಚರ್ಚೆಯ ವಿಷಯವಾಯ್ತು. ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸಂವಿಧಾನದ ಮೇಲಿನ ಚರ್ಚೆ ವೇಳೆ ಬಿಜೆಪಿ ಅವರ ಆಪರೇಷನ್ ಕಮಲದ ವಿರುದ್ಧ ಕಿಡಿಕಾರಿದರು. ಬಿಜೆಪಿ ಆಪರೇಷನ್ ಪ್ರಜಾಪ್ರಭುತ್ವಕ್ಕೆ ಮಾರಕ ಅಂತ ವಾಗ್ದಾಳಿ ನಡೆಸಿದರು.

    ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ. ಸಾವಿರಾರು ಕೋಟಿ ತಂದು ಸ್ಥಿರವಾಗಿರುವ ಸರ್ಕಾರವನ್ನು ಬೀಳಿಸಿ ಮತ್ತೊಂದು ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಇವತ್ತು ತಲುಪಿದ್ದೇವೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ ಅಂತ ಕಿಡಿಕಾರಿದರು. ಪ್ರತಿ ಚುನಾವಣೆಯಿಂದ ಚುನಾವಣೆಗೆ ಹಣವಂತರು, ಕ್ರಿಮಿನಲ್ ಹಿನ್ನೆಲೆಯವರು, ರಿಯಲ್ ಎಸ್ಟೇಟ್ ನಲ್ಲಿ ತೊಡಗಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಹೀಗೆಯೇ ಮುಂದುವರಿದರೆ ಕೋಟ್ಯಧಿಪತಿಗಳೇ ಸದನದಲ್ಲಿ ಇರಲಿದ್ದಾರೆ ಅಂತ ಆತಂಕ ವ್ಯಕ್ತಪಡಿಸಿದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ, ಬಡವನ ಮಗ, ಮರ್ಯಾದಸ್ಥ ರಾಜಕಾರಣಕ್ಕೆ ಬಾರದ ಸ್ಥಿತಿ ಇದೆ. ಒಂದು ರೀತಿಯಲ್ಲಿ ರಾಜಕಾರಣಕ್ಕೆ ವೈರಸ್ ಹಿಡಿದಿದೆ. ಇದು ಹೀಗೆಯೇ ಆದರೆ ದೇಶ ಮತ್ತಷ್ಟು ಹಾಳಾಗಲಿದೆ ಅಂತ ಅಸಮಾಧಾನ ಹೊರ ಹಾಕಿದರು. ಹಿಂದೆ ನಿಜಲಿಂಗಪ್ಪ ಬಳಿ ಸ್ವಂತ ಕಾರು ಇರಲಿಲ್ಲ. ಜಗನ್ನಾಥರಾವ್ ಜೋಷಿ ಬಳಿ ಚಿಕಿತ್ಸೆಗೆ ಹಣ ಇರಲಿಲ್ಲ ಅಂತ ಉದಾಹರಣೆ ಕೊಟ್ಟರು.

    ಮಾತು ಮುಂದುವರಿಸಿದ ಎಸ್.ಆರ್.ಪಾಟೀಲ್, ಇವತ್ತಿನ ರಾಜಕಾರಣದಲ್ಲಿ ಆಯಾ ರಾಮ್ ಗಯಾ ರಾಮ್ ಹೆಚ್ಚಾಗುತ್ತಿದೆ. ಗೆದ್ದ ಮೇಲೆ ಪಕ್ಷ ಬದಲಾವಣೆ ಮಾಡುತ್ತಾರೆ. ನಮ್ಮ ಕಡೆ ಇದನ್ನು ಗೋಸುಂಬೆ ಅಂತ ಕರೆಯುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು. ಆಸೆ, ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುವುದು ಯಾರಿಗೆ ಪ್ರಯೋಜನ ಆಗಲಿದೆ. ಪಕ್ಷ ಬದಲಾವಣೆ ಮಾಡುತ್ತಿರುವುದರಿಂದ ಜನರಿಗೆ ಪ್ರಜಾಪ್ರಭುತ್ವದ ಮೇಲೆ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಅಂತ ಟೀಕಿಸಿದರು.

    ಮಧ್ಯಪ್ರದೇಶದ ಶಾಸಕರು ಇಲ್ಲಿಗೆ ಬಂದಿದ್ದಾರೆ. ನಮ್ಮವರು ಮುಂಬೈಗೆ ಹೋಗಿದ್ದರು ಎನ್ನುತ್ತಿದ್ದಂತೆ ಗುಜರಾತ್ ನಿಂದಲೂ ಬಂದಿದ್ದರು ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಕಾಲೆಳೆದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಸ್.ಆರ್ ಪಾಟೀಲ್ ಹಣ, ಅಧಿಕಾರದ ಆಸೆಗೆ ಶಾಸಕರು ಬಲಿಯಾಗುತ್ತಿದ್ದಾರೆ. ಸ್ಟ್ಯಾಂಡರ್ಡ್ ರೇಟ್ ಫಿಕ್ಸ್ ಮಾಡಿದ್ದಾರಂತೆ. ಹೀಗೆ ಆದರೆ ಪ್ರಜಾಪ್ರಭುತ್ವ ಉಳಿಯೋದಿಲ್ಲ ಅಂತ ಕಿಡಿಕಾರಿದರು. ನನ್ನನ್ನ ಪ್ರಧಾನಿ ಮಾಡ್ತೀನಿ ಎಂದರೂ ನಾನು ಪಕ್ಷ ಬಿಡೊಲ್ಲ. ಇವರು ಯಾಕೆ ಹೀಗೆ ಮಾಡ್ತಾರೆ ಅಂತ ಪ್ರಶ್ನೆ ಮಾಡಿದರು. ಹಣದ ಆಮಿಷಕ್ಕೆ ಬಲಿಯಾಗೋರಿಗೆ ನಾಚಿಕೆ ಆಗಬೇಕು ಅಂತ ಆಪರೇಷನ್ ಕಮಲದ ವಿರುದ್ಧ ವಾಗ್ದಾಳಿ ನಡೆಸಿದರು.

  • ಪರಿಷತ್ ನಲ್ಲಿ ಬಿಗ್ ಝೀರೋ ಸ್ವಾರಸ್ಯಕರ ಚರ್ಚೆ

    ಪರಿಷತ್ ನಲ್ಲಿ ಬಿಗ್ ಝೀರೋ ಸ್ವಾರಸ್ಯಕರ ಚರ್ಚೆ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಬಿಗ್ ಝೀರೋ ವಿಷಯದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು. ಯಡಿಯೂರಪ್ಪ ಇಲ್ಲದ ಬಿಜೆಪಿ ಬಿಗ್ ಝೀರೋ ಎನ್ನುವ ವಿಷಯದ ಮೇಲೆ ಚರ್ಚೆ ನಡೆದರೂ ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ ಎನ್ನುವುದನ್ನು ಒಪ್ಪಿಕೊಳ್ಳಲು ಬಿಜೆಪಿ ಸದಸ್ಯರು ಹಿಂದೇಟು ಹಾಕಿದರು.

    ವಿಧಾನ ಪರಿಷತ್ ಕಲಾಪದಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಯಡಿಯೂರಪ್ಪ ಅವರ ಶಕ್ತಿಯ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ಪ್ರಯತ್ನ ಮತ್ತೆ ನಡೆಯುತ್ತಿದೆ. ಹಿಂದೆ ಆಳುವ ಪಕ್ಷವಾಗಿದ್ದ ಬಿಜೆಪಿ ಯಡಿಯೂರಪ್ಪ ಪಕ್ಷ ಬಿಟ್ಟ ನಂತರ ವಿರೋಧ ಸ್ಥಾನವೂ ಸಿಗದಂತೆ ಆಗಿತ್ತು. ಹೀಗಾಗಿ ಬಿಜೆಪಿ ಮೈನಸ್ ಯಡಿಯೂರಪ್ಪ ಬಿಗ್ ಝೀರೋ ಅಂತ ಪಾಟೀಲ್ ಹೇಳಿದರು.

    ಈ ವೇಳೆ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್, ಸಿದ್ದರಾಮಯ್ಯ ಮೈನಸ್ ಕಾಂಗ್ರೆಸ್ ಜೀರೋ ಅಂತಾ ಒಪ್ಪಿಕೊಳ್ತೀರಾ? ಯಡಿಯೂರಪ್ಪ ದೈತ್ಯ ಶಕ್ತಿ. ಯಡಿಯೂರಪ್ಪ ಬಿಜೆಪಿ ಜೊತೆ ಇದ್ದರೆ ಸಂಖ್ಯೆಯ ಬಲಗಡೆಯ ಝೀರೋ ಇರಲಿದೆ, ಅವರನ್ನು ಇಳಿಸುವಾಗ ಈ ಕಾಳಜಿ ಇರಲಿಲ್ಲವೇ?. ನಾಯಕರು ಮತ್ತು ಪಕ್ಷ ಸೇರಿದಾಗಲೇ ಪಕ್ಷ ಬಲಗೊಳ್ಳುವುದು, ಸೋನಿಯಾಗಾಂಧಿ, ಕುಮಾರಸ್ವಾಮಿ, ಝೀರೋ ಅಂದರೆ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿ ಮಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಜೆಡಿಎಸ್ ನ ಬಸವರಾಜ ಹೊರಟ್ಟಿ, ಅದೆಲ್ಲಾ ಬೇಡ ಯಡಿಯೂರಪ್ಪ ಮೈನಸ್ ಬಿಜೆಪಿ ಝೀರೋ ಹೌದೋ ಅಲ್ಲವೋ ಅನ್ನುವುದನ್ನು ಹೇಳಿ ಎಂದರು.

    ಈ ವೇಳೆ ಎದ್ದ ಬಿಜೆಪಿ ಸದಸ್ಯ ಪ್ರಾಣೇಶ್, ನಮ್ಮಲ್ಲಿ ಎಲ್ಲರೂ ನಾಯಕರೇ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ನಮ್ಮ ಹೀರೋ ಆಗಿದ್ದರು. ಈಗ ನರೇಂದ್ರ ಮೊದಿ ನಮ್ಮ ಹೀರೋ ಆಗಿದ್ದಾರೆ. ಹಾಗೆಯೇ ಇಲ್ಲಿಯೂ ಈಗ ಯಡಿಯೂರಪ್ಪ ನಮ್ಮ ಹೀರೋ ನಂತರದಲ್ಲಿ ಮುಂದೆ ಬರುವವರು ನಮ್ಮ ಹೀರೋ. ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ. ಒಂದು ಕುಟುಂಬದವರೇ ಹೀರೋ ಅಲ್ಲ ಎಂದು ತಿರುಗೇಟು ನೀಡಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ನಾನು ನಮಗೆ ಅನಿಸಿದ್ದು ಹೇಳಿದ್ದೇನೆ ಯಡಿಯೂರಪ್ಪ ಮೈನಸ್ ಬಿಜೆಪಿ ಝೀರೋ ಅಲ್ಲ ಅಂದರೆ ಇಲ್ಲ ಅಂತಾ ಹೇಳಿ ನಮಗೇನು ಅಭ್ಯಂತರ ಇಲ್ಲ ಎಂದು ಬಿಜೆಪಿ ಸದಸ್ಯರ ಕೆರಳಿಸುವ ಪ್ರಯತ್ನ ನಡೆಸಿದರು.

    ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಲೆಹರ್ ಸಿಂಗ್, ಕಾಂಗ್ರೆಸ್ ಪಕ್ಷವೇ ಬಿಗ್ ಝೀರೋ ಆಗಿದೆ. ಹಾಗಾಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ತರಹದ ನಾಯಕರು ಅಲ್ಲಿ ಜೀರೋ ಆಗಿದ್ದಾರೆ ಅವರು ಅಲ್ಲಿಂದ ಹೊರ ಬಂದರೆ ನಾಯಕರಾಗುತ್ತಾರೆ ಎಂದರು ಅಂತ ಕಾಂಗ್ರೆಸ್ ಕಾಲೆಳೆದ್ರು. ಲೆಹರ್ ಸಿಂಗ್ ಆರೋಪವನ್ನು ತಳ್ಳಿಹಾಕಿದ ಎಸ್.ಆರ್.ಪಾಟೀಲ್, ಕಾಂಗ್ರೆಸ್ ಪಕ್ಷವನ್ನು ಶೂನ್ಯ ಅಂತಾರೆ ಆದರೆ ಸ್ವಾತಂತ್ರ್ಯ ತಂದ ಪಕ್ಷ ನಮ್ಮದು ಸಂವಿಧಾನ ಕೊಟ್ಟ ಪಕ್ಷ ನಮ್ಮದು ಹಾಗಾಗಿ ನಮಗೆ ನಮ್ಮ ಪಕ್ಷದ ಬಗ್ಗೆ ಹೆಮ್ಮೆ ಇದೆ ಎಂದು ಬಿಗ್ ಜೀರೋ ಚರ್ಚೆಗೆ ತೆರೆ ಎಳೆದರು.

  • ದೀಪ ಆರುವ ಮುನ್ನ ಪ್ರಖರವಾಗಿ ಉರಿಯುತ್ತೆ, ಶೀಘ್ರ ಬಿಜೆಪಿ ದೀಪ ಆರುತ್ತೆ: ಎಸ್.ಆರ್.ಪಾಟೀಲ್

    ದೀಪ ಆರುವ ಮುನ್ನ ಪ್ರಖರವಾಗಿ ಉರಿಯುತ್ತೆ, ಶೀಘ್ರ ಬಿಜೆಪಿ ದೀಪ ಆರುತ್ತೆ: ಎಸ್.ಆರ್.ಪಾಟೀಲ್

    – ಚಾಣಕ್ಯನ ಸ್ಥಿತಿ ನೋಡಿ ಮರುಕ ಬರ್ತಿದೆ

    ಬಾಗಲಕೋಟೆ: ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತೆ. ಜಾಸ್ತಿ ಉರಿದ ಬಿಜೆಪಿಯ ದೀಪ ಶೀಘ್ರ ಆರುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ದಾಟ್ ಗವರ್ನಮೆಂಟ್ ಡೇಸ್ ಆರ್ ನಂಬರ್’ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ  ವ್ಯಂಗ್ಯವಾಡಿದರು. ಪೌರತ್ವ ತಿದ್ದುಪಡಿ ಮಸೂದೆ ಜಾರಿ ಬಂದ ಮೇಲೆ ಜಾರ್ಖಂಡ್ ಚುನಾವಣೆ ಮೊದಲ ಪರೀಕ್ಷೆ. ಅವರದ್ದೇ ಸರ್ಕಾರ ಇದ್ದರೂ ಬಿಜೆಪಿ ಸೋಲು ಅನುಭವಿಸಿದೆ. ದೇಶದಲ್ಲಿ ಮುಂಬರುವ ಎಲ್ಲಾ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸೋಲು ಖಚಿತ ಎಂದರು.

    ಬಿಜೆಪಿ ಚಾಣಕ್ಯ ಅಮಿತ್ ಶಾ 12 ತಿಂಗಳಲ್ಲಿ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಚಾಣುಕ್ಯನ ಸ್ಥಿತಿ ನೋಡಿ ಮರುಕ ಬರುತ್ತಿದೆ. ಒಬ್ಬ ಮನುಷ್ಯ ಎಲ್ಲ ವ್ಯಕ್ತಿಗಳನ್ನು ಸ್ವಲ್ಪ ಸಮಯದವರೆಗೂ ಮೋಸ ಮಾಡಬಹುದು. ಕೆಲವು ಜನರನ್ನು ಕೊನೆವರೆಗೂ ಮೋಸ ಮಾಡಬಹುದು. ಆದರೆ ಎಲ್ಲ ಜನರನ್ನು ಎಲ್ಲ ಸಮಯದವರೆಗೂ ಮೋಸ ಮಾಡಲು ಆಗಲ್ಲ. ಇದು ಪ್ರಧಾನಿ ಮೋದಿ ಅವರಿಗೆ ಅನ್ವಯಿಸುತ್ತದೆ ಎಂದರು.

    ಪೌರತ್ವ ಕಾಯ್ದೆ ವಿರೋಧದ ವಿಚಾರ ಕಾಂಗ್ರೆಸ್ಸಿಗರು ದೇಶದ್ರೋಹಿಗಳು ಎಂದಿದ್ದ ಡಿಸಿಎಂ ಗೋವಿಂದ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಮಾತು ಕಾರಜೋಳ ವ್ಯಕ್ತಿತ್ವಕ್ಕೆ ಶೋಭೆ ತರುವ ಹೇಳಿಕೆಯಲ್ಲ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಆರುವರೆ ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪಕ್ಷ ಹುಟ್ಟಿದ್ದೆ 1950ರಲ್ಲಿ. ಕಾರಜೋಳ ತಮ್ಮ ಪಕ್ಷದ ಇತಿಹಾಸ ನೋಡಿಕೊಂಡು ಮಾತನಾಡಲಿ. ಅವರು ಕೂಡಲೇ ಕಾಂಗ್ರೆಸ್ ಪಕ್ಷದ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

    ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕುಡಿಯುವ ನೀರಿನ ಯೋಜನೆಗೆ ಗೋವಾದ ಮಾತು ಕೇಳಿ ಕೇಂದ್ರ ತಡೆಯಾಜ್ಞೆ ನೀಡಿದೆ. ಕೇಂದ್ರದ ನೀತಿ ಮತ್ತಷ್ಟು ನಿರಾಸೆ ಮೂಡಿಸಿದ್ದು, ತಮ್ಮದೇ ಕೇಂದ್ರ ಸರ್ಕಾರದ ಎದುರು ಮಾತನಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಗಟ್ಸ್ ಇಲ್ಲ. ಬಿಎಸ್‍ವೈ 24 ಗಂಟೆ ಅನ್ನೋದು ಬಾಯಿಪಾಠ ಮಾಡಿದ್ದಾರೆ. ಅವರನ್ನು ಯಾವುದೇ ವಿಚಾರ ಕೇಳಿದರು, 24 ಗಂಟೆಯಲ್ಲಿ ಮಾಡುತ್ತೇನೆ ಎನ್ನುತ್ತಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ತಂದುಕೊಡುವುದಾಗಿ ಹೇಳಿದ್ದರು. ಆದರೆ ಅವರು ಅದನ್ನು 24 ವರ್ಷ ಅಥವಾ ಶತಮಾನ ಎಂದು ತಿಳಿದುಕೊಂಡಿದ್ದಾರೇನೋ? ಎಂದು ವ್ಯಂಕ್ಯವಾಡಿದರು. ಸಚಿವ ಬೊಮ್ಮಾಯಿ ಅವರು ರಕ್ತದಲ್ಲಿ ಬರೆದು ಕೊಟ್ಟಿದ್ದರು. ರಾಜ್ಯ ಬಿಜೆಪಿ ನಾಯಕರಿಗೆ ಕೊನೆ ಪಕ್ಷ ತಡೆಯಾಜ್ಞೆಯನ್ನು ತೆರವು ಮಾಡಲು ಕೂಡ ಆಗಲಿಲ್ಲ ಎಂದು ಟೀಕಿಸಿದರು.