Tag: sr mahesh

  • ಪಕ್ಷದ ಉಳಿವಿಗಾಗಿ ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು: ಸಾ.ರಾ ಮಹೇಶ್

    ಪಕ್ಷದ ಉಳಿವಿಗಾಗಿ ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು: ಸಾ.ರಾ ಮಹೇಶ್

    ಬೆಂಗಳೂರು: ಪಕ್ಷದ ಉಳಿವಿಗಾಗಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಚನ್ನಪಟ್ಟಣದಿಂದ (Channapatna) ಸ್ಪರ್ಧೆ ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ ಮಹೇಶ್ (SR Mahesh) ಮನವಿ ಮಾಡಿದ್ದಾರೆ.

    ಚನ್ನಪಟ್ಟಣ ಅಭ್ಯರ್ಥಿ ಕುರಿತು ಜೆಪಿ ಭವನದಲ್ಲಿ ಮಾತನಾಡಿದ ಅವರು, ಚನ್ನಚನ್ನಪಟ್ಟಣದಿಂದ ನಿಖಿಲ್ ನಿಲ್ಲಬೇಕು ಎಂದು ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡುತ್ತಿದ್ದಾರೆ. ಆದರೆ ನಿಖಿಲ್ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಹೇಳುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರು ನಿಖಿಲ್ ಜೊತೆ ಮಾತನಾಡುತ್ತಿದ್ದಾರೆ. ಎಲ್ಲರು ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ಹೇಳುತ್ತಿದ್ದಾರೆ. ಇವತ್ತು ಕುಮಾರಸ್ವಾಮಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ| ಕಾರ್ಮಿಕನ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ

    ಪಕ್ಷ ಉಳಿಯಬೇಕಾದರೆ ನಿಖಿಲ್ ಸ್ಪರ್ಧೆ ಆಗಬೇಕು ಎಂದು ನಾವು ಹೇಳುತ್ತಿದ್ದೇವೆ. ನಿಖಿಲ್ ನಿಂತರೆ ದೇವೇಗೌಡರ ಕುಟುಂಬ ಮಾತ್ರ ಇರೋದಾ ಎನ್ನುತ್ತಾರೆ. ಅನಿತಾ ಕುಮಾರಸ್ವಾಮಿ ನಿಂತಿದ್ದರೂ ಇದೇ ಹೇಳಿದ್ದರು. ಈಗ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕೊಡಿ ಎಂದರೆ ನಿಖಿಲ್‌ಗೆ ಭಯ ಎನ್ನುತ್ತಾರೆ. ವಯನಾಡ್‌ನಲ್ಲಿ ರಾಜೀನಾಮೆ ಕೊಟ್ಟು ಪ್ರಿಯಾಂಕಾ ನಿಂತರೆ ಅದು ಕುಟುಂಬ ರಾಜಕೀಯ ಅಲ್ಲ. ಇಲ್ಲಿ ಮಾತ್ರ ನಿಖಿಲ್ ನಿಂತರೆ ಕುಟುಂಬ ರಾಜಕೀಯ ಎನ್ನುತ್ತಾರೆ. ಇದು ಹೇಗೆ ಎಂದು ಕಾಂಗ್ರೆಸ್‌ಗೆ ಪ್ರಶ್ನಿಸಿದರು. ಇದನ್ನೂ ಓದಿ: ಸಿಜೆಐ ಸೋಗಿನಲ್ಲಿ ವೃದ್ಧನಿಗೆ 1.26 ಕೋಟಿ ವಂಚನೆ – ನಾಲ್ವರು ಆರೋಪಿಗಳ ಬಂಧನ

    ಜೆಡಿಎಸ್‌ಗೆ ಇದು ಸಂದಿಗ್ಧ ಪರಿಸ್ಥಿತಿ. ನೋಡೋಣ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಾವು ಸೋಲು, ಗೆಲುವು ಎರಡೂ ನೋಡಿದ್ದೇವೆ. ಜೆಡಿಎಸ್ ಮುಗಿದೇ ಹೋಯಿತು ಎಂದಾಗಲೂ ಜೆಡಿಎಸ್ ಗೆದ್ದಿದೆ. ಪಕ್ಷದ ಉಳಿವಿಗಾಗಿ ಇಂದು ಸಭೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪರಿಷತ್‌ ಉಪ ಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್‌ಗೆ ಭರ್ಜರಿ ಜಯ

  • ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡ ಅಂತ ನಿಖಿಲ್ ನನ್ನ ಬಳಿ ಹೇಳಿಕೊಂಡಿದ್ದಾರೆ: ಸಾರಾ ಮಹೇಶ್

    ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡ ಅಂತ ನಿಖಿಲ್ ನನ್ನ ಬಳಿ ಹೇಳಿಕೊಂಡಿದ್ದಾರೆ: ಸಾರಾ ಮಹೇಶ್

    ರಾಮನಗರ: ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡ, ಇನ್ನೂ ಮೂರು ವರ್ಷ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ (SR Mahesh) ಹೇಳಿಕೆ ನೀಡಿದ್ದಾರೆ.

    ಬಿಡದಿಯ (Bidadi) ಹೆಚ್‌ಡಿಕೆ (HD Kumaraswamy) ತೋಟದ ಮನೆಯಲ್ಲಿ ನಡೆದ ಜೆಡಿಎಸ್ (JDS) ಸಭೆಯಲ್ಲಿ ಭಾಗಿಯಾಗಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಚನ್ನಪಟ್ಟಣ (Channapatna) ಹೆಚ್‌ಡಿ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿದೆ. ಈಗ ಎನ್‌ಡಿಎ ಅಭ್ಯರ್ಥಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು. ಇವತ್ತು ಪೂರ್ವಭಾವಿಯಾಗಿ ಚರ್ಚೆ ಮಾಡಿದ್ದೇವೆ. ಅಭ್ಯರ್ಥಿ ಆಯ್ಕೆ ಬಗ್ಗೆ ಎರಡೂ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಬೇಕು ಅಷ್ಟೇ. ಕಾಂಗ್ರೆಸ್ ಸರ್ಕಾರ ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರಿಂದ ಜನ ಬೇಸತ್ತಿದ್ದಾರೆ. ಹಾಗಾಗಿ ಈ ಮೂರು ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ| ಮಳೆ ಅವಾಂತರ- ಕೊಚ್ಚಿ ಹೋಯ್ತು ನಿರ್ಮಾಣ ಹಂತದಲ್ಲಿದ್ದ ರಸ್ತೆ

    ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹೆಚ್ಚಳದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸಾಕಷ್ಟು ಜನ ನನಗೂ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕರ್ತರ ಒತ್ತಡ ಇದ್ದರೂ ಅದನ್ನು ತೀರ್ಮಾನ ಮಾಡೋದು ನಿಖಿಲ್. ನಿಖಿಲ್ ಕುಮಾರಸ್ವಾಮಿ ಕೂಡ ಈ ಬಗ್ಗೆ ನನ್ನ ಜೊತೆ ಅನೇಕ ಬಾರಿ ಮಾತನಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡ, ಸಂಘಟನೆ ಮಾಡಬೇಕು ಎಂದಿದ್ದಾರೆ. ಕುಮಾರಸ್ವಾಮಿ ಕೂಡ ದೆಹಲಿಯಲ್ಲಿ ಇರುತ್ತಾರೆ. ಇರೋ ಮೂರೂವರೆ ವರ್ಷದಲ್ಲಿ ನಿಖಿಲ್ ಪಕ್ಷ ಸಂಘಟನೆ ಮಾಡಬೇಕು. ಹಾಗಾಗಿ ವೈಯಕ್ತಿಕವಾಗಿ ಚುನಾವಣೆಗೆ ಆಸಕ್ತಿ ಇಲ್ಲ ಎಂದಿದ್ದಾರೆ. ಈ ಬಗ್ಗೆ ನಿಖಿಲ್ ಅನೇಕ ಬಾರಿ ಚರ್ಚೆ ಮಾಡಿದ್ದಾರೆ. ಮೈತ್ರಿ ಪಕ್ಷ ಏನು ತೀರ್ಮಾನ ಮಾಡುತ್ತೋ ನೋಡೊಣ ಎಂದು ತಿಳಿಸಿದರು. ಇದನ್ನೂ ಓದಿ: Lokmanya Tilak Express | ಇಂಜಿನ್‌ ಸೇರಿ ಹಳಿತಪ್ಪಿದ 8 ಬೋಗಿಗಳು

  • 30 ವರ್ಷದ ಬಳಿಕ ಪಿಯುಸಿ ಪರೀಕ್ಷೆ ಬರೆದು ಪಾಸಾದ ಸಾ.ರಾ ಮಹೇಶ್ ಪತ್ನಿ

    30 ವರ್ಷದ ಬಳಿಕ ಪಿಯುಸಿ ಪರೀಕ್ಷೆ ಬರೆದು ಪಾಸಾದ ಸಾ.ರಾ ಮಹೇಶ್ ಪತ್ನಿ

    ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.61.88 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮೈಸೂರಿನ ಕೆಆರ್ ನಗರದ ಶಾಸಕ ಸಾ.ರಾ ಮಹೇಶ್ ಅವರ ಪತ್ನಿ 30 ವರ್ಷಗಳ ಬಳಿಕ ಪರೀಕ್ಷೆ ಬರೆದು ಪಾಸಾಗಿದ್ದು, ಇತರರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹಕ್ಕೆ 25 ಜನ ಬಲಿ- ಅಪಾಯದ ಸುಳಿಯಲ್ಲಿ 40 ಲಕ್ಷ ಮಂದಿ

    TET EXAM 2

    ಸಾ.ರಾ ಮಹೇಶ್ ಅವರ ಪತ್ನಿ ಅನಿತಾ 1993ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಬಳಿಕ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ. ಇದೀಗ 30 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಇದನ್ನೂ ಓದಿ: ವೇದಿಕೆಯಲ್ಲೇ ಪರಿಷ್ಕೃತ ಪಠ್ಯಪುಸ್ತಕದ ಪ್ರತಿ ಹರಿದು ಹಾಕಿದ ಡಿಕೆಶಿ

    ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದ ಅನಿತಾ 416 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ಮಾದರಿಯಾಗಿ, ಹುಬ್ಬೇರಿಸುವಂತಾಗಿದ್ದಾರೆ.

    Live Tv

  • ಜೆಡಿಎಸ್ ವರ್ಸಸ್ ಕಾಂಗ್ರೆಸ್ – ಸಾ.ರಾ. ಮಹೇಶ್ ವಿರುದ್ಧ ತಿರುಗಿ ಬಿದ್ದ ಕೈ ಕಾರ್ಯಕರ್ತರು

    ಜೆಡಿಎಸ್ ವರ್ಸಸ್ ಕಾಂಗ್ರೆಸ್ – ಸಾ.ರಾ. ಮಹೇಶ್ ವಿರುದ್ಧ ತಿರುಗಿ ಬಿದ್ದ ಕೈ ಕಾರ್ಯಕರ್ತರು

    ಮೈಸೂರು: ಜಿಲ್ಲೆಯ ಕೆ.ಆರ್.ನಗರದಲ್ಲಿ ಮೈತ್ರಿ ಪಕ್ಷಗಳ ನಡುವಿನ ಕಿತ್ತಾಟ ಮುಂದುವರಿದಿದೆ. ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

    ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಚಾರ ಉಲ್ಲಂಘನೆ ಆಗಿದೆ. ಸ್ಥಳೀಯ ಸಂಸ್ಥೆಗಳಲ್ಲಿನ ಕಾಂಗ್ರೆಸ್ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಕೆ.ಆರ್.ನಗರದ ಪುರಸಭೆ ಕಾಂಗ್ರೆಸ್ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿಭಟಿಸಿದರು.

    ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಪುರಸಭೆ ಸದಸ್ಯರಿಗೆ ಆಹ್ವಾನ ನೀಡಿಲ್ಲ. ಸಚಿವರ ಅಣತಿಯಂತೆ ಸರ್ಕಾರಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದರು. ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ ಎಂದು ಸಚಿವರ ವಿರುದ್ಧ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದರು.

    ಈ ವೇಳೆ ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅರಮನೆ ನಗರಿಯಲ್ಲೊಂದು ಸ್ನೋ ಪಾರ್ಕ್

    ಅರಮನೆ ನಗರಿಯಲ್ಲೊಂದು ಸ್ನೋ ಪಾರ್ಕ್

    ಮೈಸೂರು: ಅರಮನೆ ನಗರಿಯಲ್ಲಿ ಜಿಆರ್‌ಎಸ್‌ ಸ್ನೋ ಪಾರ್ಕ್ ಆರಂಭವಾಗಿದ್ದು, ಇದು ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ನ ಹೊಸ ಆಕರ್ಷಣೆಯಾಗಿದೆ.

    ಮೇಟಗಳ್ಳಿಯ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್ ಆವರಣದಲ್ಲಿ ದೇಶದ ಅತಿದೊಡ್ಡ ಹಿಮೋದ್ಯಾನ(ಸ್ನೋ ಪಾರ್ಕ್) ತೆರೆಯಲಾಗಿದೆ. ಬರೋಬ್ಬರಿ 40 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಕಾರಣಕ್ಕಾಗಿ ದೇಶದಲ್ಲೇ ಅತಿದೊಡ್ಡ ಸ್ನೋ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ದುಬೈನಲ್ಲಿರುವ ಸ್ನೋಪಾರ್ಕ್ ಗೆ ಇದು ಹೋಲುವಂತಿದೆ. ಬೃಹತ್ ಸೇತುವೆಗಳು, ಶಿಖರಗಳ ನಡುವೆ ಹಾದುಹೋಗುವ ಸೈಡ್ಲ್, ಕ್ಯಾರ್ ಸೋಲ್, ಹಿಮದ ಗುಹೆಗಳು, ಹಿಮ ಪರ್ವತದ ಪುಟಾಣಿ ರೈಲು ಪ್ರಮುಖ ಆಕರ್ಷಣೆಯಾಗಿದೆ.

    -8ರಿಂದ -10 ಡಿಗ್ರಿ ಸೆಲ್ಸಿಯಸ್‍ನಷ್ಟು ಕಡಿಮೆ ಉಷ್ಣಾಂಶ ಹೊಂದಿರುವ ದೇಶದ ಮೊದಲ ಸ್ನೋ ಪಾರ್ಕ್ ಎಂಬುದು ಮತ್ತೊಂದು ದಾಖಲೆಯಾಗಿದೆ. ಆಟದ ನಡುವೆಯೇ ಬಿಸಿ ಬಿಸಿ ಕಾಫಿ ಸವಿಯುವ ಅವಕಾಶ ಕೂಡ ಇದೆ. ಮಕ್ಕಳಿಂದ ಹಿರಿಯರವರೆಗೂ ಮಂಜಿನ ಪ್ರಪಂಚದಲ್ಲಿ ಮುಳುಗೇಳಬಹುದಾಗಿದೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸ್ನೋ ಪಾರ್ಕ್ ಉದ್ಘಾಟಿಸಿ ಖುಷಿಪಟ್ಟಿದ್ದು, ಸ್ನೋ ಪಾರ್ಕ್ ಒಳಗೆ ತೆರಳಿ ಮಂಜಿನ ಅನುಭವ ಪಡೆದರು. ಜಾಕೆಟ್, ಸ್ನೋ ಬೂಟ್ ಧರಿಸಿ ಜಾಲಿ ಮೂಡ್‍ನಲ್ಲಿ ಸಚಿವ ಸಾ.ರಾ. ಮಹೇಶ್ 10 ನಿಮಿಷ ಸ್ನೋ ಪಾರ್ಕ್ ಆಟವಾಡಿ ಕಾಲಕಳೆದರು. ಸಚಿವರಿಗೆ ಜಿಆರ್‍ಎಸ್ ಎಂಡಿ ಯೋಗೇಶ್ ದಾಂಗೆ ಸಾಥ್ ನೀಡಿದರು.

    ಹಿಮೋದ್ಯಾನದ ಒಳಭಾಗದಲ್ಲಿ 1 ಅಡಿಯಷ್ಟು ಹಿಮ ಇದೆ. ಮೈ ನಡುಗಿಸುವ ಚಳಿಯ ನಡುವೆ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಬಹುದು. ಹಿಮ ಎರಚಾಡಿ ಮಸ್ತಿ ಮಾಡಬಹುದು. ತೂಗು ಸೇತುವೆ, ಜಾರು ಬಂಡೆ, ಸ್ಲೈಡ್, ಕ್ಯಾರಾಸೋಲ್, ಆರ್ಟಿ ನೆಟ್ ಕ್ಲೈಂಬ್, ಎಸ್ಕಿಮೋ ಇಗ್ಲು, ಹಿಮದ ಗುಹೆ, ಟೈರ್ ಮೇಲೆ ಕುಳಿತು ಜಾರುವುದು ಸೇರಿದಂತೆ ವೈವಿಧ್ಯಮಯ ಮನರಂಜನಾ ವ್ಯವಸ್ಥೆ ಮಾಡಲಾಗಿದೆ ಎಂದು ಯೋಗೀಶ್ ದಾಂಗೆ ಹೇಳಿದ್ದಾರೆ.

  • ಕೊಡಗು ನೆರೆ: ನಾಪತ್ತೆಯಾಗಿದ್ದ ವೃದ್ಧೆ ಉಮ್ಮವ್ವ ಶವವಾಗಿ ಪತ್ತೆ

    ಕೊಡಗು ನೆರೆ: ನಾಪತ್ತೆಯಾಗಿದ್ದ ವೃದ್ಧೆ ಉಮ್ಮವ್ವ ಶವವಾಗಿ ಪತ್ತೆ

    ಬೆಂಗಳೂರು: ಕೊಡಗಿನ ಮಹಾಮಳೆಗೆ ಬಲಿಯಾದವರ ಸಂಖ್ಯೆ 22ಕ್ಕೆ ಏರಿದ್ದು, ಆಗಸ್ಟ್ 17 ರಂದು ಕಣ್ಮರೆಯಾಗಿದ್ದ ಹೆಬ್ಬಟ್ಟಗೆರಿಯ ವೃದ್ಧೆ ಉಮ್ಮವ್ವ(75) ಮೃತದೇಹ ಗುರುವಾರ ಪತ್ತೆಯಾಗಿದೆ.

    ಜಲಪ್ರವಾಹದಲ್ಲಿ ನಾಪತ್ತೆಯಾಗಿದ್ದ ಅಜ್ಜಿಯನ್ನು ಹುಡುಕಿಕೊಡುವಂತೆ ಪಬ್ಲಿಕ್ ಟಿವಿ ಮೂಲಕ ಮೊಮ್ಮಗಳು ಸಂಗೀತ ಸಂಗೀತಾ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಸಾರಾ ಮಹೇಶ್ ಅವರಲ್ಲಿ ಮನವಿ ಮಾಡಿದ್ದರು.

    ಈ ಮನವಿಗೆ ಸ್ಪಂದಿಸಿದ್ದ ಸಚಿವರು ಅಂದೇ ಹೆಬ್ಬಟ್ಟಗೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲದೇ ಅಧಿಕಾರಿಗಳಿಗೆ ಉಮ್ಮವ್ವ ಅವರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು.

    ಕೊಡಗಿನಲ್ಲಿ ಪರಿಸ್ಥಿತಿ ನಿಧಾನವಾಗಿ ಸುಧಾರಣೆಯಾಗುತ್ತಿದ್ದು, ದುರ್ಗಮವಾಗಿದ್ದ ಮುಕ್ಕೋಡ್ಲು, ಮಕ್ಕಂದೂರು, ಜೋಡುಪಾಲ, ಮದೆನಾಡು, ಅರೆಕಲ್ಲು, ಹಟ್ಟಿಹೊಳೆ, ಕಾಡನಕೊಲ್ಲಿ ಸೇರಿದಂತೆ ಪ್ರವಾಹ ಬಾಧಿತ ಪ್ರದೇಶಗಳ ಮಾರ್ಗಗಳು ನಿಧಾನವಾಗಿ ಓಡಾಟಕ್ಕೆ ಮುಕ್ತವಾಗುತ್ತಿವೆ. ಗುಡ್ಡ-ಭೂ ಕುಸಿತ, ಜಲಪ್ರವಾಹದಿಂದ ಪ್ರದೇಶಗಳಿಂದ ಸಂತ್ರಸ್ತರಾಗಿದ್ದವರು ಇದೀಗ ನಿಧಾನವಾಗಿ ಮನೆಗಳತ್ತ ತೆರಳ್ತಿದ್ದಾರೆ. ಆದರೆ, ಅವಶೇಷಗಳನ್ನ ನೋಡಿ ಕಣ್ಣೀರು ಹಾಕ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಜ್ಜಿಯನ್ನು ಹುಡುಕಿಕೊಡುವಂತೆ ಮೊಮ್ಮಗಳ ಮನವಿ – ಅಧಿಕಾರಿಗಳ ಜೊತೆ 5 ಕಿ.ಮೀ. ನಡೆದ ಸಾ.ರಾ.ಮಹೇಶ್

    ಅಜ್ಜಿಯನ್ನು ಹುಡುಕಿಕೊಡುವಂತೆ ಮೊಮ್ಮಗಳ ಮನವಿ – ಅಧಿಕಾರಿಗಳ ಜೊತೆ 5 ಕಿ.ಮೀ. ನಡೆದ ಸಾ.ರಾ.ಮಹೇಶ್

    ಬೆಂಗಳೂರು: ಅಜ್ಜಿಯನ್ನು ಪತ್ತೆ ಮಾಡುವಂತೆ ಮೊಮ್ಮಗಳು ಮನವಿ ಸಲ್ಲಿಸುತ್ತಿದ್ದಂತೆ ಸಚಿವ ಸಾ.ರಾ.ಮಹೇಶ್ 5 ಕಿ.ಮೀ. ನಡೆದು  ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಜಲಪ್ರವಾಹದಲ್ಲಿ ಹೆಬ್ಬಟ್ಟಗಿರಿಯ ಉಮ್ಮವ್ವ (75) ನಾಪತ್ತೆಯಾಗಿದ್ದು, ಇವರನ್ನು ಪತ್ತೆ ಮಾಡುವಂತೆ ಪಬ್ಲಿಕ್ ಟಿವಿ ಮೂಲಕ ಮೊಮ್ಮಗಳು ಸಂಗೀತ ಸಚಿವರಿಗೆ ಮನವಿ ಮಾಡಿಕೊಂಡಿದ್ದರು. ತಕ್ಷಣವೇ ಸಂಗೀತಾ ಹೇಳಿದ್ದ ಸ್ಥಳಕ್ಕೆ ಕಾಲ್ನಡಿಗೆ ಮೂಲಕ ಹೋಗಿ ಜಾಗ ಪರಿಶೀಲನೆ ಮಾಡಿದರು. ಜೊತೆಗೆ ಅಲ್ಲಿನ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಅಜ್ಜಿಯನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ.

    ಮಡಿಕೇರಿಯ ಅವರನ್ನು ಹುಡುಕಿಕೊಡಿವಂತೆ ಇಂದು ಮೊಮ್ಮಗಳು ಸಂಗೀತ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಪತ್ತೆ ಹಚ್ಚಲು ಜಿಲ್ಲಾಧಿಕಾರಿಗೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಆಸ್ಪತ್ರೆ, ಬ್ಯಾಂಕು, ಎಟಿಎಂ, ಶಾಲೆ-ಕಾಲೇಜು ಎಲ್ಲಾ ಇರೋ ಊರಲ್ಲೇ ಜೆಡಿಎಸ್ ಸಚಿವರಿಂದ ಗ್ರಾಮವಾಸ್ತವ್ಯ!

    ಆಸ್ಪತ್ರೆ, ಬ್ಯಾಂಕು, ಎಟಿಎಂ, ಶಾಲೆ-ಕಾಲೇಜು ಎಲ್ಲಾ ಇರೋ ಊರಲ್ಲೇ ಜೆಡಿಎಸ್ ಸಚಿವರಿಂದ ಗ್ರಾಮವಾಸ್ತವ್ಯ!

    ಮೈಸೂರು: ಸಕಲ ಸೌಕರ್ಯವೂ ಇರೋ ಹಳ್ಳಿಯಲ್ಲಿ ಜೆಡಿಎಸ್ ಸಚಿವರ ರಾತ್ರಿ ವಾಸ್ತವ್ಯ ಹೂಡಿರುವುದು ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ.

    ಹರದನಹಳ್ಳಿಗ್ರಾಮ ಈಗಾಗಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಶಾಲೆಗಳು ಲಭ್ಯ. ಪದವಿ ಪೂರ್ವ ಕಾಲೇಜು, ಮೆಟ್ರಿಕ್‍ನಂತರ ಹಾಸ್ಟೆಲ್ ಸಹ ಕಾರ್ಯನಿರ್ವಹಿಸುತ್ತಿವೆ. ಸುಸಜ್ಜಿತ ರಸ್ತೆ, ಕೃಷಿ ಸಹಕಾರಿ ಪತ್ತಿನ ಸಂಘ, ಪಶು ಆರೋಗ್ಯ ಕೇಂದ್ರವು ಗ್ರಾಮದಲ್ಲಿದೆ. ಗ್ರಾಮವಾಸ್ತವ್ಯ ಮಾಡುತ್ತಿರುವ ಗ್ರಾಮದಲ್ಲಿ ಎಟಿಎಂ ಸಹ ಲಭ್ಯವಿದೆ.

    ಮೈಸೂರಿನ ಕೆ.ಆರ್.ನಗರದ ಹರದನಹಳ್ಳಿಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರನ್ನು ಗ್ರಾಮದ ಜೆಡಿಎಸ್ ಮುಖಂಡರು ಅದ್ಧೂರಿ ಸ್ವಾಗತ ಮಾಡಿದ್ರು. ಬಳಿಕ ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಸಿದ ಸಚಿವ ಸಾ.ರಾ.ಮಹೇಶ್ ತಮ್ಮ ಮೊಬೈಲ್‍ನಲ್ಲಿ ಪಟ್ಟಿ ಮಾಡಿಕೊಂಡ ಅಧಿಕಾರಿಗಳ ಹೆಸರುಗಳನ್ನು ತಾವೇ ಕೂಗಿ ಹಾಜರಿ ಪಡೆದುಕೊಂಡರು. ಅಧಿಕಾರಿಗಳ ಸಭೆಯ ಮುಕ್ತಾಯದ ಬಳಿಕ ಜೆಡಿಎಸ್ ಮುಖಂಡ ವಿಜಯಕುಮಾರ್ ಮನೆಯಲ್ಲಿ ಭರ್ಜರಿ ಊಟ ಮಾಡಿದರು.

    ಬಳಿಕ ಮಾತನಾಡಿದ ಸಚಿವರು, ನನ್ನ ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿಯವರೇ ಆದರ್ಶವೆಂದು ಹೇಳಿದರು. ಸರ್ಕಾರದ ಬಳಿಗೆ ಜನರು ಬರೋದಕ್ಕಿಂತ ಜನರ ಬಳಿಗೆ ಸರ್ಕಾರ ಬರಬೇಕು ಅನ್ನೋದೆ ನಮ್ಮ ಉದ್ದೇಶವಾಗಿದೆ. ಸಿಎಂ ಕುಮಾರಸ್ವಾಮಿಯವರು ಸಹ ಶಿಘ್ರದಲ್ಲೇ ಗ್ರಾಮವಾಸ್ತವ್ಯವನ್ನ ಮತ್ತೆ ಪ್ರಾರಂಭಿಸುತ್ತಾರೆ ಅಂದ್ರು.

    ಹರದನಹಳ್ಳಿ ಗ್ರಾಮ ಸಚಿವ ಸಾ.ರಾ.ಮಹೇಶ್ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಗ್ರಾಮವಾಗಿದ್ದು, ತನ್ನದೇ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಹೆಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಉದ್ದೇಶ ಹಿಂದುಳಿದ ಗ್ರಾಮಗಳ ಅಭಿವೃದ್ಧಿ ಮಾಡುವುದಾಗಿದೆ. ಆದ್ರೆ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯದ ಉದ್ದೇಶ ಏನು ಅನ್ನೋದೆ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ಎಲ್ಲ ವ್ಯವಸ್ಥೆ ಇರುವ ಗ್ರಾಮದಲ್ಲಿ ವಾಸ್ತವ್ಯ ಯಾಕಾಗಿ ಅಂತ ಅಧಿಕಾರಿಗಳಲ್ಲೂ ಗೊಂದಲದ ಪ್ರಶ್ನೆಯೊಂದು ಮೂಡಿದೆ.

  • ಜಿ.ಟಿ ದೇವೇಗೌಡರಿಗೆ ಯಾವ ಖಾತೆ ಅನ್ನೋದು ಇನ್ನೆರಡು ದಿನಗಳಲ್ಲಿ ನಿರ್ಧಾರ: ಸಚಿವ ಸಾರಾ ಮಹೇಶ್

    ಜಿ.ಟಿ ದೇವೇಗೌಡರಿಗೆ ಯಾವ ಖಾತೆ ಅನ್ನೋದು ಇನ್ನೆರಡು ದಿನಗಳಲ್ಲಿ ನಿರ್ಧಾರ: ಸಚಿವ ಸಾರಾ ಮಹೇಶ್

    ಮೈಸೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಖಾತೆ ಬದಲಾವಣೆಗೆ ಒತ್ತಾಯಿಸುತ್ತಿದು, ಇನ್ನೆರಡು ದಿನಗಳಲ್ಲಿ ತಮ್ಮ ನಿರ್ಧಾರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಲಿದ್ದಾರೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

    ಮೈಸೂರಿನಲ್ಲಿ ಗುರುವಾರ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಯಿಂದಾಗಿ ಇಂದಿನ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರು ಭಾಗವಹಿಸಿಲ್ಲ. ಇನ್ನೆರಡು ದಿನಗಳಲ್ಲಿ ಎಲ್ಲ ಸರ್ಕಾರಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದನ್ನು ಓದಿ: ಜಿಟಿಡಿಗೆ ಖಾತೆ ಬದಲಾವಣೆ?- ಎಚ್‍ಡಿಡಿ ಜೊತೆ ಸಿಎಂ ಮಾತುಕತೆ

    ಉನ್ನತ ಶಿಕ್ಷಣ ಖಾತೆ ನನಗೆ ಬೇಡ, ಸಹಕಾರ ಇಲ್ಲವೇ, ಅಬಕಾರಿ ಖಾತೆ ನೀಡುವಂತೆ ಸಚಿವ ಜಿ.ಟಿ.ದೇವೇಗೌಡ ಅವರು ಪಟ್ಟು ಹಿಡಿದಿದ್ದರು. ಇದಕ್ಕೆ ಕಾರಣ ಉನ್ನತ ಶಿಕ್ಷಣ ಸಲಹೆಗಾರರಾಗಿ ಪ್ರೊ. ಕೆ.ಎಸ್.ರಂಗಪ್ಪ ಅವರನ್ನು ನೇಮಕ ಮಾಡಲಾಗುತ್ತಿದೆ ಎನ್ನಲಾಗುತ್ತಿತ್ತು. ಅಷ್ಟೇ ಅಲ್ಲದೆ ಕೆಲವು ದಿನಗಳಿಂದ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿತ್ತು. ಇದನ್ನು ಓದಿ: ನಾನು ದೇವೇಗೌಡರ ಸಂಬಂಧಿ ಅಂತಾ ಉನ್ನತ ಹುದ್ದೆ ಸಿಗುತ್ತಿಲ್ಲ: ಪ್ರೊ. ರಂಗಪ್ಪ

  • ಮಗನನ್ನು ನೆನೆದು ಕಣ್ಣೀರು ಹಾಕಿದ ಶಾಸಕ ಸಾ.ರಾ ಮಹೇಶ್

    ಮಗನನ್ನು ನೆನೆದು ಕಣ್ಣೀರು ಹಾಕಿದ ಶಾಸಕ ಸಾ.ರಾ ಮಹೇಶ್

    ಮೈಸೂರು: ಜಿಲ್ಲೆಯ ಕೆಆರ್ ನಗರದ ಜೆಡಿಎಸ್ ಶಾಸಕ ಸಾರಾ ಮಹೇಶ್ ಸಭೆಯೊಂದರಲ್ಲಿ ತಮ್ಮ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಮೈಸೂರಿನ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಸರ್ಕಾರಿ ಶಿಕ್ಷಕರ ವಾರ್ಷಿಕೋತ್ಸವ ಸಮಾರಂಭದಲ್ಲಿ ತಮ್ಮ ಪುತ್ರ ಜಯಂತ್ ರನ್ನು ನೆನೆದ ಅವರು ಭಾವುಕರಾದರು. ನನ್ನ ಹೆಸರು ಕೆಡಿಸುವ ಹುನ್ನಾರ ಮಾಡಿ ನನ್ನ ಮಗನ ಹಳೆಯ ವಿಡಿಯೋ ಇಟ್ಟುಕೊಂಡು ಅವಮಾನಿಸಿದ್ದಾರೆ. ಇಂತಹ ರಾಜಕಾರಣ ಬೇಕಾ? ನನಗೆ ಸಾಕಾಗಿದೆ ಎಂದು ಕಣ್ಣೀರು ಹಾಕಿದರು. ಮಗನನ್ನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದು, ಮನೆಯಿಂದ ಹೊರಡುವಾಗಲೂ ಮಾತನಾಡಿಸಲು ಆಗಲಿಲ್ಲ ಎಂದರು.

    ಕಳೆದ ಕೆಲ ತಿಂಗಳ ಸಾರಾ ಮಹೇಶ್ ಅವರ ಪುತ್ರ ಯುವಕನೊಬ್ಬನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ನಡೆದ ಒಂದು ವರ್ಷದ ಬಳಿಕ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

    ಶಾಸಕ ಮಹೇಶ್ ಅವರ ಪುತ್ರನ ಸ್ನೇಹಿತನ ಚಿನ್ನದ ಸರ ಕದ್ದ ಕಳ್ಳ ವಿಡಿಯೋದಲ್ಲಿ ಒದೆತಿಂದ ಯುವಕನಾಗಿದ್ದು, ಕಳ್ಳತನ ಮಾಡಿರುವ ಕುರಿತು ಆರೋಪಿಯನ್ನು ವಿಚಾರಣೆ ನಡೆಸುವ ವೇಳೆ ಆತನ ಮೇಲೆ ಹಲ್ಲೆ ಮಾಡಲಾಗಿತ್ತು. ಇದನ್ನೂ ಓದಿ:  ಜೆಡಿಎಸ್ ಶಾಸಕರ ಪುತ್ರ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್