Tag: Squid Sukka

  • ಬಾಯಲ್ಲಿ ನೀರೂರಿಸುವ ಬೊಂಡಾಸ್ ಸುಕ್ಕ ಸುಲಭವಾಗಿ ಹೀಗೆ ಮಾಡಿ

    ಬಾಯಲ್ಲಿ ನೀರೂರಿಸುವ ಬೊಂಡಾಸ್ ಸುಕ್ಕ ಸುಲಭವಾಗಿ ಹೀಗೆ ಮಾಡಿ

    ಪ್ರತಿ ವೀಕೆಂಡ್‌ನಲ್ಲಿ ನಾನ್‌ವೆಜ್ ತಿನ್ನೋದು ಹಲವರಿಗೆ ರೂಢಿ. ನಾನ್ ವೆಜ್ ಎಂದರೆ ಮೊದಲು ನೆನಪಾಗೋದು ಚಿಕನ್ ಇಲ್ಲವೇ ಮಟನ್. ಅದು ಬಿಟ್ಟರೆ ಒಂದಷ್ಟು ಜನ ಮೀನೂಟ ಪ್ರಿಯರೂ ಸಿಗುತ್ತಾರೆ. ನಾವಿಂದು ಬಲು ಅಪರೂಪದ ಹಾಗೂ ತುಂಬಾ ರುಚಿಕರವಾದ ಮೀನು ಬೊಂಡಾಸ್ ಸುಕ್ಕ (Squid Sukka) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಈ ಮೀನಿನ ರುಚಿ ನೋಡಿದರೆ ಇದರ ಅಭಿಮಾನಿಯಾಗೋದು ಖಂಡಿತಾ.

    ಬೇಕಾಗುವ ಪದಾರ್ಥಗಳು:
    ಬೊಂಡಾಸ್ ಮೀನು (Squid Fish) – ಅರ್ಧ ಕೆಜಿ

    ತುರಿದ ತೆಂಗಿನಕಾಯಿ – 1 ಕಪ್
    ಬಫತ್ ಪುಡಿ – ಒಂದೂವರೆ ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಟೊಮೆಟೊ – 2
    ಉದ್ದವಾಗಿ ಹೆಚ್ಚಿದ ಈರುಳ್ಳಿ – 1
    ಹಸಿರು ಮೆಣಸಿನಕಾಯಿ – 2
    ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 3-4
    ಎಣ್ಣೆ – 3-4 ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 3 ಟೀಸ್ಪೂನ್
    ಕರಿ ಬೇವಿನ ಎಲೆ – 4-5
    ನೀರು – 1 ಕಪ್

    ಮಾಡುವ ವಿಧಾನ:
    * ಮೊದಲಿಗೆ ಬೊಂಡಾಸ್ ಮೀನುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ನೀರನ್ನು ಸಂಪೂರ್ಣವಾಗಿ ಹರಿಸಿ ಪಕ್ಕಕ್ಕಿಡಿ.
    * ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕರಿ ಬೇವಿನ ಎಲೆ, ಈರುಳ್ಳಿ ಸೇರಿಸಿ.
    * ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ, 4 ನಿಮಿಷ ಫ್ರೈ ಮಾಡಿ.
    * ಈಗ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಬೇಯಿಸಿ.
    * ಬಫತ್ ಪೌಡರ್ ಹಾಕಿ, 2 ನಿಮಿಷ ಫ್ರೈ ಮಾಡಿ.
    * ಈಗ ಬೊಂಡಾಸ್ ತುಂಡುಗಳನ್ನು ಹಾಕಿ, ತೆಂಗಿನ ತುರಿ, ಉಪ್ಪು ಮತ್ತು 1 ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ.
    * ಕಡಿಮೆ ಉರಿಯಲ್ಲಿ ಬೊಂಡಾಸ್ ಸುಕ್ಕವನ್ನು 15 ನಿಮಿಷಗಳ ಕಾಲ ಬೇಯಿಸಿ.
    * ನೀರು ಬಹುತೇಕ ಆರಿದ ಬಳಿಕ ಉರಿಯನ್ನು ಆಫ್ ಮಾಡಿ, ಕೊತ್ತಂಬರಿ ಸೊಪ್ಪು ಸೇರಿಸಿ, ಬಡಿಸಿ.

    Live Tv
    [brid partner=56869869 player=32851 video=960834 autoplay=true]