Tag: Spying For Pakistan

  • ಪಾಕ್ ಪರ ಬೇಹುಗಾರಿಕೆ – ಮತ್ತೊಬ್ಬ ಶಂಕಿತನ ಬಂಧನ

    ಪಾಕ್ ಪರ ಬೇಹುಗಾರಿಕೆ – ಮತ್ತೊಬ್ಬ ಶಂಕಿತನ ಬಂಧನ

    ಜೈಪುರ: ಪಾಕಿಸ್ತಾನ (Pakistan) ಪರ ಬೇಹುಗಾರಿಕೆ ನಡೆಸುತ್ತಿದ್ದ ಮತ್ತೊಬ್ಬ ಶಂಕಿತನನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ.

    ರಾಜಸ್ಥಾನದ (Rajasthan) ಜೈಸಲ್ಮೇರ್‌ನ ಚಂದನ್ ಗ್ರಾಮದ ನಿವಾಸಿ ಮಹೇಂದ್ರ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಜೈಸಲ್ಮೇರ್‌ನ ಡಿಆರ್‌ಡಿಒ ಅತಿಥಿ ಗೃಹದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ. ಮಿಲಿಟರಿ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ವಿಜ್ಞಾನಿಗಳ ವಾಸ್ತವ್ಯಕ್ಕೆ ಈ ಅತಿಥಿ ಗೃಹ ಮುಖ್ಯ ಸ್ಥಳವಾಗಿದೆ. ಇದನ್ನೂ ಓದಿ: ರೇಪ್‌ ಅಪರಾಧಿ ರಾಮ್ ರಹೀಮ್‌ಗೆ 14ನೇ ಪೆರೋಲ್ – 3 ತಿಂಗಳ ಬಳಿಕ ಮತ್ತೆ 40 ದಿನ ರಜೆ!

    ಮಹೇಂದ್ರ ಸಿಂಗ್ ಮೇಲೆ ಗಡಿಯಾಚೆಗಿನ ಪೋಖ್ರಾನ್ ಫೈರಿಂಗ್ ರೇಂಜ್‌ನಂತಹ ಸೂಕ್ಷ್ಮ ಮಿಲಿಟರಿ ಪ್ರದೇಶಗಳ ಬಗ್ಗೆ ಮಾಹಿತಿಯನ್ನು ಪಾಕ್‌ಗೆ ರವಾನಿಸಿದ್ದ ಎಂಬ ಆರೋಪವಿದೆ. ಶಂಕಿತನ ಮೊಬೈಲ್ ಚಾಟ್‌ಗಳಿಂದ ಅನೇಕ ಪ್ರಮುಖ ಮತ್ತು ಗೌಪ್ಯ ಮಾಹಿತಿಯ ಸೋರಿಕೆಯ ಪುರಾವೆಗಳು ಕಂಡುಬಂದಿವೆ. ಇದನ್ನೂ ಓದಿ: ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕ – ಭಾರತ ಕೌಂಟರ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಮಹೇಂದ್ರ ಸಿಂಗ್‌ನನ್ನು ಬಹಳ ಸಮಯದಿಂದ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಆತನನ್ನು ಬಂಧಿಸಿದ ನಂತರ, ಭದ್ರತಾ ಸಂಸ್ಥೆಗಳು ಮತ್ತು ಮಿಲಿಟರಿ ಗುಪ್ತಚರ ಇಲಾಖೆ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿವೆ.

    ಮೂರು ತಿಂಗಳ ಹಿಂದೆ, ಜೈಸಲ್ಮೇರ್‌ನಲ್ಲೇ ಬೇಹುಗಾರಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆ ಸಮಯದಲ್ಲಿ ರಾಜಸ್ಥಾನ ಸರ್ಕಾರದ ಮಾಜಿ ಸಚಿವರ ಪಿಎ ಶಕೂರ್ ಖಾನ್‌ನನ್ನು ಭದ್ರತಾ ಸಂಸ್ಥೆಗಳು ಬಂಧಿಸಿದ್ದವು. ಇದನ್ನೂ ಓದಿ: ಚಿತ್ರದುರ್ಗ | ಬಸ್‍ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಆಟೋ – ಐವರಿಗೆ ಗಂಭೀರ ಗಾಯ

    ಗಡಿ ಪ್ರದೇಶಗಳಲ್ಲಿ ನಡೆಯುವ ಸರ್ಕಾರಿ ಸಭೆಗಳಿಗೆ ಹಾಜರಾಗುವ ನೆಪದಲ್ಲಿ ಶಕೂರ್ ಖಾನ್ ಭಾರತೀಯ ಸೇನೆಯ ಚಟುವಟಿಕೆಗಳು ಮತ್ತು ಕಾರ್ಯತಂತ್ರದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ವಿಚಾರಣೆಯ ಸಮಯದಲ್ಲಿ, ಆತ 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಸಿಂಧ್ ಪ್ರಾಂತ್ಯದ ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಘೋಟ್ಕಿ ಪ್ರದೇಶಗಳಲ್ಲಿ ಆತನಿಗೆ ಸಂಬಂಧಿಕರಿದ್ದಾರೆ ಎಂದು ತಿಳಿದುಬಂದಿದೆ.

    ಪಾಕಿಸ್ತಾನದಿಂದ ಅಪಾರ ಪ್ರಮಾಣದ ಹಣವನ್ನು ಪಡೆದ ಆರೋಪವೂ ಆತನ ಮೇಲಿದೆ. ಹಣವನ್ನು ಆತನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ಸಹ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

  • ಪಾಕಿಸ್ತಾನದ ಪರ ಬೇಹುಗಾರಿಕೆ – ಉತ್ತರ ಪ್ರದೇಶದ ಉದ್ಯಮಿ ಬಂಧನ

    ಪಾಕಿಸ್ತಾನದ ಪರ ಬೇಹುಗಾರಿಕೆ – ಉತ್ತರ ಪ್ರದೇಶದ ಉದ್ಯಮಿ ಬಂಧನ

    ಲಕ್ನೋ: ಪಾಕಿಸ್ತಾನದ(Pakistan) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ(Uttara Pradesh) ರಾಂಪುರದ ಉದ್ಯಮಿಯನ್ನು(Businessman) ಬಂಧಿಸಲಾಗಿದೆ.

    ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್‌ಗಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಆಧಾರದ ಮೇಲೆ ಶಹಜಾದ್‌ನನ್ನು ಉತ್ತರಪ್ರದೇಶದ ಎಸ್‌ಟಿಎಫ್(Special Task Force) ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆ ಕೊಲೆ ಮಾಡಿ ಬೈಕ್ ಅಪಘಾತವೆಂದು ಬಿಂಬಿಸಿದ ಪತಿ, ಮಾವ, ಅತ್ತೆ ಅರೆಸ್ಟ್

    ಶಹಜಾದ್, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ. ಅಲ್ಲದೇ ಒಂದು ವರ್ಷದಲ್ಲೇ ಹಲವು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಗಡಿಯುದ್ದಕ್ಕೂ ಮೇಕಪ್ ವಸ್ತು, ಬಟ್ಟೆ, ಮಸಾಲೆ ಪದಾರ್ಥಗಳು ಮತ್ತು ಇನ್ನಿತರ ವಸ್ತುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಎಂದು ಎಸ್‌ಟಿಎಫ್ ತಿಳಿಸಿದೆ. ಇದನ್ನೂ ಓದಿ: ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್‌ಗೆ ಟ್ವಿಸ್ಟ್ – 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ

    ಶಹಜಾದ್ ಭಾರತದಲ್ಲಿನ ಐಎಸ್‌ಐ ಏಜೆಂಟ್‌ಗಳಿಗೆ ಹಣ ಮತ್ತು ಭಾರತೀಯ ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತಿದ್ದ. ರಾಮ್‌ಪುರ ಜಿಲ್ಲೆ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ಜನರನ್ನು ಐಎಸ್‌ಐಗಾಗಿ ಕೆಲಸ ಮಾಡಲು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ಅಲ್ಲದೇ ಐಎಸ್‌ಐಗೆ ತೆರಳುತ್ತಿದ್ದ ಜನರ ವೀಸಾದ ವ್ಯವಸ್ಥೆಯನ್ನು ಐಎಸ್‌ಐ ಏಜೆಂಟ್‌ಗಳೇ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮಾನ್ಯತಾ ಟೆಕ್‌ ಪಾರ್ಕ್‌ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ

    ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧಿಸಲಾಗಿತ್ತು. `ಟ್ರಾವೆಲ್ ವಿಥ್ ಜೆಒ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ, ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ಸಿಬ್ಬಂದಿಗೆ ಭದ್ರತೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದಳು ಎಂಬ ಆರೋಪದಡಿ ಬಂಧಿಸಲಾಗಿದೆ.