Tag: Spy camera

  • ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್, ಬೆಡ್‍ರೂಮ್‍ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ ಕಾಮುಕ ಅರೆಸ್ಟ್

    ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್, ಬೆಡ್‍ರೂಮ್‍ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ ಕಾಮುಕ ಅರೆಸ್ಟ್

    ನವದೆಹಲಿ: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್ ಮತ್ತು ಬೆಡ್‍ರೂಮ್‍ನ ಬಲ್ಬ್‍ಗಳಲ್ಲಿ ಹಿಡನ್ ಕ್ಯಾಮೆರಾ (Spy Camera) ಇಟ್ಟಿದ್ದ ಆರೋಪಿಯನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಬಂಧಿತ ಆರೋಪಿ ಕರಣ್ ಮನೆ ಮಾಲೀಕನ ಮಗನಾಗಿದ್ದು, ಕಟ್ಟಡದ ಇನ್ನೊಂದು ಮಹಡಿಯಲ್ಲಿ ವಾಸವಾಗಿದ್ದ. ಸಿವಿಲ್ ಸರ್ವೀಸ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಹಿಳೆ ಶಕರ್‍ಪುರದ ಬಾಡಿಗೆಗೆ ಇದ್ದರು. ಮಹಿಳೆ ಇತ್ತೀಚೆಗೆ ಉತ್ತರ ಪ್ರದೇಶದ ತನ್ನ ಊರಿಗೆ ತೆರಳುವಾಗ ಮನೆಯ ಕೀಯನ್ನು ಅವನ ಬಳಿ ಕೊಟ್ಟು ಹೋಗಿದ್ದಳು. ಈ ವೇಳೆ ಆರೋಪಿ, ಮಹಿಳೆ ವಾಸವಿದ್ದ ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಎಂದು ತಿಳಿದು ಬಂದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಅಪೂರ್ವ ಗುಪ್ತಾ ಅವರು, ಮಹಿಳೆ ಇತ್ತೀಚೆಗೆ ತನ್ನ ವಾಟ್ಸಪ್ ಖಾತೆಯಲ್ಲಿ ಕೆಲವು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ್ದಳು. ಬಳಿಕ ಆಕೆಯ ವಾಟ್ಸಪ್ ಖಾತೆಯನ್ನು ಬೇರೆ ಲ್ಯಾಪ್‍ಟಾಪ್‍ನಲ್ಲಿ ಬಳಕೆ ಮಾಡುತ್ತಿರುವುದು ತಿಳಿದು ಬಂದಿತ್ತು. ಬಳಿಕ ಆಕೆ ತಕ್ಷಣ ಲಾಗ್ ಔಟ್ ಮಾಡಿದ್ದಳು.

    ಬಳಿಕ ತನ್ನನು ಯಾರೋ ಕಣ್ಗಾವಲಿನಲ್ಲಿಟ್ಟಿದ್ದಾರೆ ಎಂದು ಶಂಕಿಸಿ ಮಹಿಳೆ ಮನೆಯನ್ನು ಹುಡುಕಿದಾಗ ಬಾತ್‍ರೂಮ್‍ನಲ್ಲಿ ಅಡಗಿಸಿಟ್ಟಿದ್ದ ಕ್ಯಾಮೆರಾ ಪತ್ತೆಯಾಗಿದೆ. ಬಳಿಕ ಮಹಿಳೆ ಪೊಲಿಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ಮತ್ತೆ ತಪಾಸಣೆ ನಡೆಸಿದಾಗ ಆಕೆಯ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‍ನಲ್ಲಿ ಮತ್ತೊಂದು ಕ್ಯಾಮೆರಾ ಅಳವಡಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿ ಕರಣ್, ಮೂರು ತಿಂಗಳ ಹಿಂದೆ ಮಹಿಳೆ ಊರಿಗೆ ತೆರಳಿದ್ದಾಗ ರೂಮಿನ ಕೀ ನನ್ನ ಬಳಿ ಕೊಟ್ಟು ಹೋಗಿದ್ದಳು. ಈ ವೇಳೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಮೂರು ಸ್ಪೈ ಕ್ಯಾಮೆರಾಗಳನ್ನು ಖರೀದಿಸಿ ಅಳವಡಿಸಿದ್ದಾಗಿ ಹೇಳಿದ್ದಾನೆ.

    ಈ ಕ್ಯಾಮೆರಾಗಳನ್ನು ಆನ್‍ಲೈನ್‍ನಲ್ಲಿ ನಿರ್ವಹಿಸಲಾಗುವುದಿಲ್ಲ. ದೃಶ್ಯಗಳನ್ನು ಮೆಮೊರಿ ಕಾರ್ಡ್‍ಗಳಲ್ಲಿ ಸಂಗ್ರಹಿಸಲಾಗುತ್ತದೆ. ಹೀಗಾಗಿ, ಕರಣ್ ತನ್ನ ಕೋಣೆಯಲ್ಲಿನ ವಿದ್ಯುತ್ ರಿಪೇರಿ ನೆಪದಲ್ಲಿ ಮಹಿಳೆಯ ಕೀಗಳನ್ನು ಪದೇ ಪದೇ ಕೇಳುತ್ತಿದ್ದ. ಇದರಿಂದಾಗಿ ರೆಕಾರ್ಡ್ ಮಾಡಿದ ವೀಡಿಯೊಗಳನ್ನು ತನ್ನ ಲ್ಯಾಪ್‍ಟಾಪ್‍ಗೆ ವರ್ಗಾಯಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಕೃತ್ಯಕ್ಕೆ ಬಳಿಸಿದ ಕ್ಯಾಮೆರಾ ಹಾಗೂ ಲ್ಯಾಪ್‍ಟಾಪ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿಕಲಾಂಗನಾಗಿದ್ದು ಆತನ ವಿರುದ್ಧ ಬಿಎನ್‍ಎಸ್‍ಎಸ್ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

  • 22 ಸ್ಪೈ ಕ್ಯಾಮೆರಾ ಮನೆಯಲಿಟ್ಟ ಟೆಕ್ಕಿ ಪತಿಯ ತಲೆ ಒಡೆದ ಪತ್ನಿ!

    22 ಸ್ಪೈ ಕ್ಯಾಮೆರಾ ಮನೆಯಲಿಟ್ಟ ಟೆಕ್ಕಿ ಪತಿಯ ತಲೆ ಒಡೆದ ಪತ್ನಿ!

    – ಮೊಬೈಲ್ ಮೇಲೂ ಕಣ್ಣು
    – ಪತ್ನಿಯ ಮೇಲೆ ಕಣ್ಣಿಡಲು ಜನ ನೇಮಿಸಿದ್ದ

    ಬೆಂಗಳೂರು: ಪತ್ನಿ ಮೇಲಿದ್ದ ಅನುಮಾನದಿಂದ ಟೆಕ್ಕಿಯೊಬ್ಬನು ಮನೆಯಲ್ಲಿ ಹಾಗೂ ಪತ್ನಿಯ ಮೊಬೈಲ್‍ನಲ್ಲಿ ಸ್ಪೈಕ್ಯಾಮೆರಾವನ್ನು ಅಳವಡಿಸಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಪತಿಗೆ ಬ್ಯಾಟ್‍ನಿಂದ ಭರ್ಜರಿಯಾಗಿ ಗೂಸ ನೀಡಿದ್ದಾಳೆ. ಪರಿಣಾಮ ಪತಿಯ ತಲೆಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ದಂಪತಿಯು ರಾಜಧಾನಿಯ ಜಯನಗರದಲ್ಲಿ ವಾಸವಾಗಿದ್ದರು. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ 44 ವರ್ಷದ ಸುದರ್ಶನ್ ಮೇಲೆ ಪತ್ನಿ ವಿನಯ (ದಂಪತಿಯ ಹೆಸರು ಬದಲಾಯಿಸಲಾಗಿದೆ) ಹಲ್ಲೆ ಮಾಡಿದ್ದಾಳೆ. ಪತ್ನಿಯ ಮೇಲಿದ್ದ ಅನುಮಾನದಿಂದ ಆಕೆಯ ಮೇಲೆ ಸದಾ ಕಣ್ಣಿಡಲು ಮನೆಯಲ್ಲಿ ಬರೋಬ್ಬರಿ 22 ಸ್ಪೈ ಕ್ಯಾಮೆರಾಗಳನ್ನು ಟೆಕ್ಕಿ ಅಳವಡಿಸಿದ್ದನು. ಅಲ್ಲದೆ ಪತ್ನಿಯ ಫೋನ್‍ನಲ್ಲಿ ಸ್ಪೈವೇರ್ ಪ್ರೋಗ್ರಾಮ್‍ನನ್ನು ಹಾಕಿ ಆಕೆಯ ಮೊಬೈಲ್ ಮೇಲೆಯೂ ಕಣ್ಣಿಟ್ಟಿದ್ದನು. ಪತಿಯ ಈ ಅತಿಯಾದ ಅನುಮಾನ ಬುದ್ಧಿಯಿಂದ ಬೇಸತ್ತಿದ್ದ ಪತ್ನಿ ಅತನ ತಲೆಗೆ ಬ್ಯಾಟ್ ನಿಂದು ಹೊಡೆದು ತನ್ನ ಸಿಟ್ಟನ್ನು ತೀರಿಸಿಕೊಂಡಿದ್ದಾಳೆ.

    2007ರಲ್ಲಿ ಸುದರ್ಶನ್ ವಿನಯಾಳನ್ನು ಇಷ್ಟಪಟ್ಟಿದ್ದನು. ಆದರೆ ಆಗಿನ್ನೂ ವಿನಯ ಓದುತ್ತಿದ್ದಳು ಎಂಬ ಕಾರಣಕ್ಕೆ ಅವರ ಮನೆಯವರು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಅವರಿಬ್ಬರ ನಡುವೆ 11 ವರ್ಷಗಳ ವಯಸ್ಸಿನ ಅಂತರವಿದ್ದರೂ, ಮೂರು ವರ್ಷ ಕಾದ ಸುದರ್ಶನ್ 2010ರಲ್ಲಿ ವಿನಯಾಳನ್ನು ಮದುವೆ ಆಗಿದ್ದನು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಅವರ ಜೀವನ ಸರಿಯಾಗಿಯೇ ಸಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಸುದರ್ಶನ್ ಪತ್ನಿ ಮೇಲೆ ಅನುಮಾನ ಪಡಲು ಶುರುಮಾಡಿದ್ದಾನೆ. ಆದ್ದರಿಂದ ಮನೆಯಲ್ಲಿ ಸ್ಪೈ ಕ್ಯಾಮೆರಾಗಳನ್ನು ಅಳವಡಿಸಿದ್ದನು. ಜೊತೆಗೆ ಪತ್ನಿ ಹೊರಗಡೆ ಹೋದಾಗ ಆಕೆಯ ಮೇಲೆ ಕಣ್ಣಿಡಲು ಜನರನ್ನೂ ಕೂಡ ಛೂ ಬಿಡುತ್ತಿದ್ದನು.

    ಈ ಅನುಮಾನದ ಬುದ್ಧಿಯಿಂದಲೇ ದಂಪತಿ ಮಧ್ಯೆ ಹಲವಾರು ಬಾರಿ ಜಗಳ ನಡೆದಿದೆ. ಆದರೂ ಕೂಡ ಟೆಕ್ಕಿ ತನ್ನ ಅನುಮಾನದ ಬುದ್ಧಿಯನ್ನು ಬಿಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ತಾನು ಬದಲಾಗಿದ್ದೇನೆ ಎಂದು ಹೇಳಿ ಪತ್ನಿಗೆ ಪ್ರೀತಿಯಿಂದ ಮೊಬೈಲ್‍ವೊಂದನ್ನು ಪತಿ ಗಿಫ್ಟ್ ಮಾಡಿದ್ದನು. ಆದರೆ ಅದರಲ್ಲೂ ಕೂಡ ಸ್ಪೈವೇರ್ ಪ್ರೋಗ್ರಾಮ್ ಅಳವಡಿಸಿ ಪತ್ನಿಯ ಕರೆ, ಮೆಸೆಜ್‍ಗಳ ಮೇಲೆ ಕಣ್ಣಿಟ್ಟಿದ್ದನು.

    ಏಪ್ರಿಲ್‍ನಲ್ಲಿ ಪತ್ನಿ ಸಂಬಂಧಿ ಎಂದು ತಿಳಿಯದೆ ಅವರಿಬ್ಬರು ಜೊತೆಗಿರುವ ಫೋಟೋವೊಂದನ್ನು ಹಿಡಿದು ಟೆಕ್ಕಿ ಅನುಮಾನ ವ್ಯಕ್ತಪಡಿಸಿದ್ದನು. ಆಗ ಪತಿಯೂ ಸರಿಯಾಗಿದ್ದಾನೆ ಎಂದು ನಂಬಿದ್ದ ಪತ್ನಿಗೆ ನಿಜಾಂಶ ತಿಳಿದಿದೆ. ಇದರಿಂದ ಕೋಪಗೊಂಡ ಪತ್ನಿ ಮನಗ ಕ್ರಿಕೆಟ್ ಬ್ಯಾಟಿಂದ ಪತಿಯ ತಲೆಗೆ ಬಾರಿಸಿದ್ದಾಳೆ.

    ಪತ್ನಿ ಪತಿಗೆ ಹೊಡೆದ ಪರಿಣಾಮ ಆತನ ತಲೆಗೆ ಗಂಭೀರ ಗಾಯಗಳಾಗಿ ಹೊಲಿಗೆ ಹಾಕಲಾಗಿದೆ. ಪತ್ನಿ ತನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪತಿರಾಯ ಆಕೆಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಅಲ್ಲದೆ ತನ್ನ ಮುಖದ ಆಕಾರವನ್ನೇ ಬದಲಿಸಿದ್ದಾಳೆ ಎಂದು ದೂರಿ ಟೆಕ್ಕಿ ವಿಚ್ಛೇದನಕ್ಕೆ ಅರ್ಜಿಯನ್ನೂ ಕೂಡ ಸಲ್ಲಿಸಿದ್ದಾನೆ. ಈ ಸಂಬಂಧ ದಂಪತಿಯನ್ನು ಒಂದು ಮಾಡಲು ವಾರಾನು ಗಟ್ಟಲೆ ಕೌನ್ಸ್​​ಲಿಂಗ್ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ದಂಪತಿ ಮಾತ್ರ ಇಬ್ಬರೂ ಮತ್ತೆ ಒಂದಾಗಲು ಒಪ್ಪುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.