Tag: spy balloon

  • ಬೆಳಗಾವಿಯಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು ಪತ್ತೆ – ಆತಂಕದಲ್ಲಿ ಜನ

    ಬೆಳಗಾವಿಯಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು ಪತ್ತೆ – ಆತಂಕದಲ್ಲಿ ಜನ

    ಬೆಳಗಾವಿ: ಹೊಲವೊಂದರಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು (Electronic Balloon) ಪತ್ತೆಯಾಗಿರುವ ಘಟನೆ ಜಿಲ್ಲೆಯ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.

    ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ಬಿಳಿ ಬಣ್ಣದ ಎಲೆಕ್ಟ್ರಾನಿಕ್ ಬಲೂನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಲೂನು ಎಲ್ಲಿಂದ, ಯಾವಾಗ ಹಾರಿ ಬಂದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸ್ಥಳೀಯರಿಗೆ ಲಭ್ಯವಾಗಿಲ್ಲ. ಬಲೂನಿನಲ್ಲಿ ಕೆಲ ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ಚೈನೀಸ್ ಸ್ಪೈ ಬಲೂನು ಸದ್ದು ಮಾಡಿತ್ತು. ಅದೇ ರೀತಿಯಲ್ಲಿ ಇಲ್ಲಿ ಕೂಡಾ ಬಲೂನನ್ನು ಹಾರಿಸಲಾಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

  • ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    ವಾಷಿಂಗ್ಟನ್: ವಾರದ ಹಿಂದೆ ಶಂಕಿತ ಚೀನಾದ ಬೇಹುಗಾರಿಕಾ ಬಲೂನನ್ನು (Spy Balloon) ಅಮೆರಿಕ (America) ಹೊಡೆದುರುಳಿಸಿದ ಬಳಿಕ ಒಂದಾದ ಮೇಲೊಂದರಂತೆ ಆಕಾಶದಲ್ಲಿ ಹಾರಾಡುತ್ತಿದ್ದ ಶಂಕಿತ ವಸ್ತುಗಳನ್ನು (Flying Object) ತನ್ನ ಯುದ್ಧ ವಿಮಾನಗಳನ್ನು ಬಳಸಿ ಹೊಡೆದುರುಳಿಸಿದೆ. ಭಾನುವಾರ ಅಮೆರಿಕ ಮತ್ತೊಂದು ತೇಲುತ್ತಿದ್ದ ವಸ್ತುವನ್ನು ಹೊಡೆದುರುಳಿಸಿದ್ದು, ವಾರದಿಂದ ಇಂತಹ ಒಟ್ಟು 4 ವಸ್ತುಗಳನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.

    ಚೀನಾದೊಂದಿಗಿನ (China) ಉದ್ವಿಗ್ನತೆ ಹಾಗೂ ನಿಗೂಢ ದಾಳಿಯ ಭೀತಿಯ ಹಿನ್ನೆಲೆ ಅಮೆರಿಕ ತನ್ನ ಆಕಾಶದ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ವಾರದ ಹಿಂದೆ ತನ್ನ ಅಣ್ವಸ್ತ್ರ ತಾಣದ ಮೇಲೆ ಹಾರಾಡುತ್ತಿದ್ದ ಬೇಹುಗಾರಿಕಾ ಬಲೂನಿನ ಹಿಂದೆ ಚೀನಾದ ಕುತಂತ್ರವಿದೆ ಎಂದು ಹೇಳಲಾಗಿದೆ.

    ಭಾನುವಾರ ಹೊಡೆದುರುಳಿಸಲಾದ ಹೊಸ ವಸ್ತು ನೇತಾಡುವ ತಂತಿಯೊಂದಿಗೆ ಅಷ್ಟಭುಜಾಕೃತಿಯ ರಚನೆ ಹೊಂದಿತ್ತು ಎಂದು ತಿಳಿಸಲಾಗಿದೆ. ಇದು ಯಾವುದೇ ಮಿಲಿಟರಿ ಬೆದರಿಕೆಯನ್ನು ಉಂಟುಮಾಡುತ್ತದೆ ಎಂದು ಪರಿಗಣಿಸಲಾಗಿಲ್ಲವಾದರೂ ಇದು ನಾಗರಿಕ ವಿಮಾನಯಾನಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿತ್ತು. ಈ ಹಿನ್ನೆಲೆ ಭೂಮಿಯಿಂದ ಸುಮಾರು 20,000 ಅಡಿಗಳಷ್ಟು ಎತ್ತರದಲ್ಲಿ ಹಾರಾಡುತ್ತಿದ್ದ ವಸ್ತುವನ್ನು ಎಫ್-16 ಫೈಟರ್ ಜೆಟ್ ಬಳಸಿ ಹೊಡೆದುರುಳಿಸಲಾಗಿದೆ ಎಂದು ಹಿರಿಯ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಅದ್ಧೂರಿ Aero India 2023 ಏರ್ ಶೋ

    ಇದು ಕಣ್ಗಾವಲು ಸಾಮರ್ಥ್ಯ ಹೊಂದಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆದರೆ ಅದನ್ನು ನಾವು ತಳ್ಳಿ ಹಾಕುವಂತಿಲ್ಲ. ಕೆನಡಾದ ಗಡಿಯ ಬಳಿ ಹಾರಾಡುತ್ತಿದ್ದ ಅಪರಿಚಿತ ವಸ್ತುವನ್ನು ನಾವು ಮಿಚಿಗನ್ ಸರೋವರದ ಪ್ರದೇಶದಲ್ಲಿ ಹೊಡೆದುರುಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Spy Balloon Rowː ಚೀನಾದೊಂದಿಗೆ ಸಂಘರ್ಷಕ್ಕಿಳಿಯುವುದಿಲ್ಲ ಎಂದ ಜೋ ಬೈಡನ್

    Spy Balloon Rowː ಚೀನಾದೊಂದಿಗೆ ಸಂಘರ್ಷಕ್ಕಿಳಿಯುವುದಿಲ್ಲ ಎಂದ ಜೋ ಬೈಡನ್

    ವಾಷಿಂಗ್ಟನ್: ಅಮೆರಿಕದ (US) ದಕ್ಷಿಣ ಕೆರೊಲಿನಾ ಪ್ರಾಂತ್ಯದಲ್ಲಿ ತನ್ನ ಫೈಟರ್ ಜೆಟ್ ಮೂಲಕ ಚೀನಾದ ಬೇಹುಗಾರಿಕಾ ಬಲೂನ್ (China Spy Balloon) ಅನ್ನು ಹೊಡೆದುರುಳಿಸಿತ್ತು. ಇದರಿಂದ ಚೀನಾ ಅಸಮಾಧಾನ ಹೊರಹಾಕಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden), ಅಮೆರಿಕವು ಚೀನಾದೊಂದಿಗೆ ಸಂಘರ್ಷಕ್ಕಿಳಿಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

    ಚೀನಾ ಸ್ಪೈ ಬಲೂನ್ ಕೇವಲ ಹವಾಮಾನ ಸಂಶೋಧನೆ ನಡೆಸುತ್ತಿದೆ ಎಂದು ಹೇಳಿಕೊಂಡಿದೆ. ಆದ್ರೆ ಪೆಂಟಗನ್ ಇದನ್ನ ಉನ್ನತ ಬೇಹುಗಾರಿಕಾ ಕಾರ್ಯಾಚರಣೆ ಎಂದು ತಿಳಿಸಿದೆ. ಯುಎಸ್ ನೌಕಾಪಡೆಯು ಈ ಬಗ್ಗೆ ವಿಶ್ಲೇಷಣೆ ನಡೆಸಲು ಅಟ್ಲಾಂಟಿಕ್ ಸಾಗರದಿಂದ ಅವಶೇಷಗಳನ್ನ ತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತವನ್ನೂ ಟಾರ್ಗೆಟ್‌ ಮಾಡಿದೆ ಚೀನಾದ ಬೇಹುಗಾರಿಕಾ ಬಲೂನ್‌

    ಅತ್ಯಂತ ಎತ್ತರದಲ್ಲಿ ಹಾರಾಡುತ್ತಿದ್ದ ಸ್ಪೈ ಬಲೂನ್, ಯುಎಸ್‌ನ ಸೂಕ್ಷ್ಮ ಮಿಲಿಟರಿ ಪಡೆಯಿದ್ದ ಸ್ಥಳವನ್ನ ದಿಟ್ಟಿಸುತ್ತಿತ್ತು ಅದಕ್ಕಾಗಿ ಅನುಮಾನಗೊಂಡು ಪೆಂಟಗನ್ ಬಲೂನ್ ಅನ್ನು ಹೊಡೆದಿದೆ. ನಾವು ಚೀನಾದೊಂದಿಗೆ ಸಂಪೂರ್ಣವಾಗಿ ಸ್ಪರ್ಧಿಸಲಿದ್ದೇವೆ, ಆದ್ರೆ ಸಂಘರ್ಷಕ್ಕಿಳಿಯಲು ಬಯಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: US Fighter Jet Attack: ಚೀನಾ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದ ಅಮೆರಿಕ

    ಈ ಘಟನೆ ಚೀನಾದೊಂದಿಗಿನ ಸಂಬಂಧಕ್ಕೆ ದೊಡ್ಡ ಪೆಟ್ಟು ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೈಡನ್, ಖಂಡಿತವಾಗಿ ಇಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ ಬೇಹುಗಾರಿಕಾ ಬಲೂನು ಹಾರಾಟ

    ಅಮೆರಿಕದ ಅಣ್ವಸ್ತ್ರ ತಾಣದ ಮೇಲೆ ಚೀನಾದ ಬೇಹುಗಾರಿಕಾ ಬಲೂನು ಹಾರಾಟ

    ವಾಷಿಂಗ್ಟನ್: ಶಂಕಿತ ಚೀನಾದ (China) ಬೇಹುಗಾರಿಕಾ ಬಲೂನು (Spy Balloon) ಒಂದು ಅಮೆರಿಕದ (America) ವಾಯುಪ್ರದೇಶದಲ್ಲಿ ಹಾರಾಡುತ್ತಿರುವುದು ಕಂಡುಬಂದಿರುವುದಾಗಿ ವರದಿಯಾಗಿದೆ. ಅಮೆರಿಕದ ಅಣ್ವಸ್ತ್ರ ತಾಣಗಳ ಮೇಲೆ ಈ ಬಲೂನು ಹಾರಾಡಿರುವುದು ಪತ್ತೆಯಗಿದ್ದು, ಚೀನಾ ಅಮೆರಿಕ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ.

    ಮಾಲ್ಮ್‌ಸ್ಟ್ರೋಮ್ ಏರ್ ಫೋರ್ಸ್ ಬೇಸ್‌ನಲ್ಲಿರುವ ರಾಷ್ಟ್ರದ 3 ಪರಮಾಣು ಕ್ಷಿಪಣಿ ಉಡಾವಣಾ ಸೌಲಭ್ಯಗಳಲ್ಲಿ ಒಂದಾದ ಮೊಂಟಾನಾದಲ್ಲಿ ಬಲೂನು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಬಲೂನು ಪತ್ತೆಯಾಗುತ್ತಲೇ ಅದನ್ನು ಹೊಡೆದುರುಳಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಆದರೆ ಈ ಕ್ರಮದಿಂದ ಆ ಪ್ರದೇಶದಲ್ಲಿರುವ ಜನರಿಗೆ ಹಾನಿಯಾಗುವ ಭೀತಿಯೂ ವ್ಯಕ್ತವಾಗಿದೆ.

    ವಾಯುಪ್ರದೇಶದಲ್ಲಿ ಸಂಚರಿಸುತ್ತಿರುವ, ಜನರಿಗೆ ಅಪಾಯವಾಗುವ ಭೀತಿಯನ್ನು ಹುಟ್ಟಿಸುತ್ತಿರುವ ಬಲೂನ್ ಮೇಲೆ ಕಣ್ಣಿಡಲಾಗಿದೆ. ಈ ಹಿಂದೆಯೂ ಇಂತಹ ಬಲೂನುಗಳನ್ನು ಗುರುತಿಸಲಾಗಿದೆ. ರಾಷ್ಟ್ರದ ಭದ್ರತೆಗೆ ಸಂಬಂಧಪಟ್ಟಂತೆ ಸೂಕ್ಷ್ಮ ಮಾಹಿತಿಗಳನ್ನು ಈ ಬೇಹುಗಾರಿಕಾ ತಂತ್ರ ಸಂಗ್ರಹಿಸದಂತೆ ತಡೆಯಲು ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ – ಉಕ್ರೇನ್ ಬೆಂಬಲಕ್ಕೆ ನಿಂತ ಬ್ರಿಟನ್

    ಅಧಿಕಾರಿಗಳು ಶಂಕಿತ ಬೇಹುಗಾರಿಕಾ ಬಲೂನಿನ ಗಾತ್ರವನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ. ಮೂಲಗಳ ಪ್ರಕಾರ ಅದು ದೊಡ್ಡ ಗಾತ್ರದ್ದಾಗಿದ್ದು, ವಾಣಿಜ್ಯ ವಾಯು ಸಂಚಾರ ವ್ಯಾಪ್ತಿಗಿಂತಲೂ ಎತ್ತರದಲ್ಲಿ ಹಾರಾಡುತ್ತಿದೆ ಎನ್ನಲಾಗಿದೆ. ಒಂದು ವೇಳೆ ಬಲೂನ್ ಅನ್ನು ಹೊಡೆಯಲು ಮುಂದಾದರೆ ಅದರಿಂದ ಭೂಪ್ರದೇಶದಲ್ಲಿರುವ ಜನರಿಗೆ ಹಾನಿಯಾಗಬಹುದೇ ಅಥವಾ ಎಷ್ಟರ ಮಟ್ಟಿಗೆ ಹಾನಿಯಾಗಬಹುದು ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ No Fly Zone ಜಾರಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k