ಪುಣೆ: ಕ್ವಿಂಟನ್ ಡಿ ಕಾಕ್ (Quinton de Kock) ಮತ್ತು ಡುಸ್ಸೆನ್ (Rassie van der Dussen) ಅವರ ಶತಕದಾಟ ನಂತರ ಬೌಲರ್‌ಗಳ ಮಾರಕ ಬೌಲಿಂಗ್ ಸಹಾಯದಿಂದ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ನ್ಯೂಜಿಲೆಂಡ್ (New Zealand) ವಿರುದ್ಧ ದಕ್ಷಿಣ ಆಫ್ರಿಕಾ (South Africa) 190 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 357 ರನ್ ಹೊಡೆಯಿತು. ಭಾರೀ ಮೊತ್ತವನ್ನು ಚೇಸ್ ಮಾಡಲು ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 35.3 ಓವರ್‌ಗಳಲ್ಲಿ 167 ರನ್‌ಗಳಿಗೆ ಸರ್ವಪತನಗೊಂಡಿತು.
ಕೇಶವ್ ಮಹಾರಾಜ್ ಅವರು 4 ವಿಕೆಟ್ ಕಿತ್ತರೆ, ಮಾಕ್ರೋ ಜನ್ಸೆನ್ 3 ವಿಕೆಟ್ ಪಡೆದರು. ನ್ಯೂಜಿಲೆಂಡ್ ಪರವಾಗಿ ಗ್ಲೇನ್ ಫಿಲಿಪ್ಸ್ 60 ರನ್ (50 ಎಸೆತ, 4 ಬೌಂಡರಿ, 4 ಸಿಕ್ಸರ್) ವಿಲ್ ಯಂಗ್ 33 ರನ್(37 ಎಸೆತ, 5 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.
ಕ್ವಿಂಟನ್ ಡಿ ಕಾಕ್ ಅವರು 114 ರನ್ (116 ಎಸೆತ, 10 ಬೌಂಡರಿ, 3 ಸಿಕ್ಸ್) ಡುಸ್ಸೆನ್ 133 ರನ್ (118 ಎಸೆತ, 9 ಬೌಂಡರಿ, 5 ಸಿಕ್ಸರ್) ಹೊಡೆದು ಔಟಾದರು. ಡೇವಿಡ್ ಮಿಲ್ಲರ್ ಕೊನೆಯಲ್ಲಿ 30 ಎಸೆತ ಎದುರಿಸಿ 53 ರನ್ (2 ಬೌಂಡರಿ, 4 ಸಿಕ್ಸರ್) ಹೊಡೆದ ಪರಿಣಾಮ ದಕ್ಷಿಣ ಆಫ್ರಿಕಾ 350 ರನ್ ಗಳ ಗಡಿಯನ್ನು ದಾಟಿತು.
ಸೆಮಿಫೈನಲ್ ಹೋಗುತ್ತಾ ಪಾಕ್?
ಭಾರತ ಮತ್ತು ದಕ್ಷಿಣ ಆಫ್ರಿಕಾ 12 ಅಂಕ ಪಡೆದರೂ ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಅಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆದರೆ ಭಾರತ (Team India) ಎರಡನೇ ಸ್ಥಾನ ಪಡೆದಿದೆ. ಆದರೆ ಭಾರತ 6 ಪಂದ್ಯದಿಂದ 12 ಅಂಕ ಸಂಪಾದಿಸಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಈ ಎರಡು ತಂಡಗಳು ಸೆಮಿಫೈನಲ್ ಪ್ರವೇಶದ ಬಾಗಿಲಿನ ಹತ್ತಿರ ಬಂದಿದೆ.
ನ್ಯೂಜಿಲೆಂಡ್ ಈ ಪಂದ್ಯವನ್ನು ಸೋತ ಕಾರಣ ಪಾಕಿಸ್ತಾನಕ್ಕೆ (Pakistan) ಸೆಮಿ ಪ್ರವೇಶಿಸುವ ಅವಕಾಶ ಈಗ ಸೃಷ್ಟಿಯಾಗಿದೆ. ಸದ್ಯ ಪಾಕಿಸ್ತಾನ 7 ಪಂದ್ಯವಾಡಿ 3ರಲ್ಲಿ ಜಯ ಸಾಧಿಸುವ ಮೂಲಕ 6 ಅಂಕ ಪಡೆದು 5ನೇ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ 7 ಪಂದ್ಯವಾಡಿ 4 ಜಯ ಸಾಧಿಸುವ ಮೂಲಕ 8 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ ಮಾಡಿದ ಡಿ ಕಾಕ್ – ಸಚಿನ್ ವಿಶ್ವ ದಾಖಲೆ ಮುರಿಯಲು ಬೇಕಿದೆ 129 ರನ್
ಮುಂದಿನ ಎರಡು ಪಂದ್ಯವನ್ನು ನ್ಯೂಜಿಲೆಂಡ್ ಸೋತು ತನ್ನ ಎರಡು ಪಂದ್ಯವನ್ನು ಗೆದ್ದರೆ 10 ಅಂಕ ಸಂಪಾದಿಸುವ ಮೂಲಕ ಪಾಕ್ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ.
ಇನ್ನೊಂದು ಕಡೆಯಲ್ಲಿ ಆಸ್ಟ್ರೇಲಿಯಾ 6 ಪಂದ್ಯಗಳಿಂದ 8 ಅಂಕ ಸಂಪಾದಿಸಿದರೆ ಬಾಂಗ್ಲಾದೇಶ 6 ಪಂದ್ಯಗಳಿಂದ 6 ಅಂಕ ಸಂಪಾದಿಸಿದೆ. ಈ ಎರಡು ತಂಡಗಳು 3 ಪಂದ್ಯ ಗೆದ್ದರೆ ಅಥವಾ 2 ಪಂದ್ಯ ಗೆದ್ದು ಉತ್ತಮ ರನ್ ರೇಟ್ ಹೊಂದಿದ್ದರೆ ಪಾಕಿಸ್ತಾನದ ಸೆಮಿ ಬಾಗಿಲು ಬಂದ್ ಆಗಲಿದೆ. ಹೀಗಾಗಿ ಬೇರೆ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ ನಿಂತಿದೆ.
ಅದೊಂದು ಕಾಲವಿತ್ತು, ಆಗ ಭಾರತದ ಕೆಲ ಕ್ರೀಡಾಪಟುಗಳು ಬರಿಗಾಲಿನಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ದಿನಗಳು ಅದು. ಆದ್ರೆ ಇಂದು ವಿಶ್ವದ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಆತ್ಮವಿಶ್ವಾಸವೇ ಬೇರೆ. ಸದ್ಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯದಿಂದ ಯಶಸ್ಸು ಕಾಣುತ್ತಿರುವ ಭಾರತ, ವಿಶ್ವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ (Olympics) ಕ್ರೀಡಾಕೂಟ ಆಯೋಜಿಸಲು ಸಜ್ಜಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದನ್ನು ಇತ್ತೀಚೆಗೆ ಪ್ರಸ್ತಾಪಿಸಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಭಾರತ ಒಲಿಂಪಿಕ್ಸ್ ಆತಿಥ್ಯ ವಹಿಸಲು ಕಾತರದಿಂದ ಕಾಯುತ್ತಿದೆ. 2036ರ ಒಲಿಂಪಿಕ್ಸ್ (Olympics 2036) ಯಶಸ್ವಿಯಾಗಿ ಸಂಘಟಿಸಲು ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತದೆ. ಇದು 140 ಕೋಟಿ ಭಾರತೀಯರ ಕನಸು ಎಂದು ಹೇಳಿದ್ದರು. ಅಲ್ಲದೇ ಕೇಂದ್ರೀಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಚಿವ ಅನುರಾಗ್ ಠಾಕೂರ್ (Anurag Thakur), ಭಾರತ ಖಂಡಿತವಾಗಿಯೂ ಈ ಅವಕಾಶ ಸದುಪಯೋಗಪಡಿಸಿಕೊಳ್ಳಲಿದೆ. ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕ್ರೀಡೆಗೆ ನೀಡಿದ ಅನುದಾನದಲ್ಲಿ 2.5 ಪಟ್ಟು ಹೆಚ್ಚಾಗಿದೆ. ಕ್ರೀಡೆಗೆ ಉತ್ತೇಜನ ನೀಡಬೇಕು ಅನ್ನೋದು ಇದರಿಂದ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೇ ಕಳೆದ 2 ವರ್ಷಗಳಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಕಿವುಡರ ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಈ ಎಲ್ಲಾ ಚಾಂಪಿಯನ್‌ಶಿಪ್‌ಗಳಲ್ಲೂ ಭಾರತ ಉತ್ತಮ ಸಾಧನೆಯನ್ನೇ ತೋರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲೂ 107 ಪದಕಗಳನ್ನ ಗೆದ್ದು ಭಾರತ ಇತಿಹಾಸ ನಿರ್ಮಿಸಿದೆ. ಅಷ್ಟೇ ಯಾಕೆ ಚೆಸ್ ಒಲಂಪಿಯಾಡ್, ಕ್ರಿಕೆಟ್ ವಿಶ್ವಕಪ್ ಟೂರ್ನಿಗಳ ಆತಿಥ್ಯ ವಹಿಸಿರುವ ಭಾರತ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದು, ಇವೆಲ್ಲವೂ ಭಾರತದ ಆತ್ಮವಿಶ್ವಾಸ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಗುಜರಾತ್‌ನಲ್ಲಿ 2036ರ ಒಲಿಂಪಿಕ್ಸ್ ಜಾಗತಿಕ ಕ್ರೀಡಾ ಹಬ್ಬ ಜರುಗಲಿದೆ.
ಒಲಿಂಪಿಕ್ಸ್ ಆತಿಥ್ಯ ಪಡೆಯುವುದು ಹೇಗೆ?
ವಿಶ್ವದ ಸುಮಾರು ರಾಷ್ಟ್ರಗಳು ಪಾಲ್ಗೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವುದು ಸುಲಭದ ಕೆಲಸವಲ್ಲ. 45 ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಡ್, 56 ದೇಶಗಳು ಅಂಗಳಕ್ಕಿಳಿಯುವ ಕಾಮನ್‌ವೆಲ್ತ್, 10 ರಾಷ್ಟ್ರಗಳು ಆಡುವ ವಿಶ್ವಕಪ್ ಟೂರ್ನಿಗಿಂತ ಒಲಿಂಪಿಕ್ಸ್ ಕೂಟಕ್ಕೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅದಕ್ಕೆ ತಕ್ಕಂತೆ ಲಕ್ಷಕೋಟಿಗಟ್ಟಲೆ ವೆಚ್ಚವನ್ನೂ ಮಾಡಬೇಕಾಗುತ್ತದೆ. ಈ ಜಾಗತಿಕ ಕ್ರೀಡಾ ಹಬ್ಬವು ವಾಸ್ತವವಾಗಿ ಶತಕೋಟಿ ಡಾಲರ್‌ಗಳ ವಿಷಯ. ಸ್ಥಳ, ಮಾನವ ಸಂಪನ್ಮೂಲ, ಮೂಲಸೌಕರ್ಯ ಮತ್ತು ಮನರಂಜನೆ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಅಚ್ಚುಕಟ್ಟಾಗಿದ್ದರಷ್ಟೇ ಯಶಸ್ವಿಯಾಗಿ ಆಯೋಜನೆ ಮಾಡಲು ಸಾಧ್ಯ. ಇದಕ್ಕಾಗಿ ಆತಿಥೇಯ ದೇಶವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಜತೆ ಒಪ್ಪಂದ ಮಾಡಿಕೊಳ್ಳಬೇಕು. ಆಯೋಜನೆಯ ಪೈಪೋಟಿ ವೇಳೆ ಅತಿಹೆಚ್ಚು ಬಿಡ್ ಮಾಡುವ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯದ ಅವಕಾಶ ಲಭಿಸುತ್ತದೆ.
ಒಲಿಂಪಿಕ್ಸ್ ಆತಿಥ್ಯ ಭಾರತಕ್ಕೆ ಏಕೆ ಮುಖ್ಯ?
ಒಲಿಂಪಿಕ್ಸ್ ಕ್ರೀಡಾಕೂಟವು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 2024ರ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ 2028ರ ಒಲಿಂಪಿಕ್ಸ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿವೆ. 2032ರ ಆತಿಥ್ಯ ಆಸ್ಟ್ರೇಲಿಯಾದ ಪಾಲಾಗಿದೆ. ಈಗ 2036, 2040ರ ಸರದಿ ಬಾಕಿಯಿದ್ದು, ಭಾರತ ಈ ವಿಚಾರದಲ್ಲಿ ಪ್ರಬಲ ಆಕಾಂಕ್ಷಿಯಾಗಿದೆ. ಯಾವುದೇ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯ ಲಾಭ ತಂದುಕೊಡುತ್ತದೆ. ಒಲಿಂಪಿಕ್ಸ್ ಕ್ರೀಡಾಕೂಡ ಆಯೋಜನೆಯಿಂದ ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಯಾಗಲಿದೆ. ಜೊತೆಗೆ ಬಹುರಾಷ್ಟ್ರೀಯ ಸಂಸ್ಥೆಗಳ ಹೂಡಿಕೆಯಿಂದ ಭಾರೀ ಲಾಭ ಸಿಗುತ್ತದೆ. ಅನೇಕ ರಾಷ್ಟ್ರಗಳ ರಾಯಭಾರಿಗಳು ಆಗಮಿಸುವುದರಿಂದ ಕ್ರೀಡಾ ರಾಜತಾಂತ್ರಿಕ ಸಂಬಂಧಗಳು ಬಲಗೊಳ್ಳುತ್ತವೆ. ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತದೆ, ಕ್ರೀಡಾ ಉದ್ಯಮಕ್ಕೆ ಬಲ ಸಿಗುತ್ತದೆ, ಮುಖ್ಯವಾಗಿ ಪ್ರವಾಸೋದ್ಯಮಕ್ಕೆ ಒಲಿಂಪಿಕ್ಸ್ ಬಹುದೊಡ್ಡ ಬೂಸ್ಟರ್ ಡೋಸ್ ಆಗಿದ್ದು, ಉದ್ಯೋಗಾವಕಾಶಗಳೂ ಸೃಸ್ಟಿಯಾಗುತ್ತವೆ.
ಮೋದಿ ತವರಲ್ಲಿ ತಯಾರಿ ಶುರು:
ಅಮಿತ್ ಶಾ ಅವರು ಈಗಾಗಲೇ ಒಲಿಂಪಿಕ್ಸ್ ಸಿದ್ಧತೆಗಾಗಿ ಮಹತ್ವದ ಸಭೆಗಳನ್ನ ನಡೆಸಿದ್ದು, ಗುಜರಾತ್‌ನಲ್ಲಿ ತಯಾರಿ ಶುರುವಾಗಿದೆ. ಗುಜರಾತ್ ಸರ್ಕಾರ ಎಕರೆ ಭೂಮಿ ಗುರುತಿಸಿ, ಕಾಮಗಾರಿ ಆರಂಭಿಸಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಬಳಿ ಸಂಭಾವ್ಯ ಒಲಿಂಪಿಕ್ ಗ್ರಾಮ ನಿರ್ಮಾಣವಾಗುತ್ತಿದೆ. ಅಹಮದಾಬಾದ್‌ನ ಸರ್ದಾರ್ ಸ್ಪೋರ್ಟ್ಸ್ ಎನ್‌ಕ್ಲೇವ್ ಒಲಿಂಪಿಕ್ಸ್ ಕೂಟದ ಪ್ರಮುಖ ಕೇಂದ್ರವಾಗಲಿದ್ದು, ಇಲ್ಲಿ 20ಕ್ಕೂ ಹೆಚ್ಚು ಕ್ರೀಡೆಗಳನ್ನು ಆಯೋಜಿಸಲು ಸಿದ್ಧತೆಗಳು ನಡೆಯಲಿವೆ ಎನ್ನಲಾಗುತ್ತಿದೆ. ರಾಜ್ಯದಾದ್ಯಂತ 33 ಕ್ರೀಡಾ ಸ್ಥಳಗಳನ್ನ ಪಟ್ಟಿ ಮಾಡಲಾಗಿದ್ದು, ಶಿವರಾಜಪುರ, ಸೂರತ್‌ನ ಕರಾವಳಿಗಳಲ್ಲಿ ಜಲ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿದೆ. ಸೂರತ್ ನಗರದಲ್ಲಿ ಜಲಕ್ರೀಡೆಗಳಿಗೆ ಅನುಕೂಲಕರ ವಾತಾವರಣ ಇರುವುದರಿಂದ ಗುಜರಾತ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಒಲಿಂಪಿಕ್ಸ್ ಆಯೋಜಿಸಲು ಭಾರತಕ್ಕೆಷ್ಟು ಹಣ ಬೇಕು?
2008ರ ಬೀಜಿಂಗ್ ಒಲಿಂಪಿಕ್ಸ್ ಇದುವರೆಗಿನ ಅತ್ಯುತ್ತಮ ಆಯೋಜನೆ ಎಂದೇ ವಿಶ್ಲೇಷಿಸಲಾಗುತ್ತದೆ. ಚೀನಾ ಬರೋಬ್ಬರಿ 6.81 ಶತಕೋಟಿ ಡಾಲರ್ ವೆಚ್ಚಮಾಡಿತ್ತು. ಚೀನಾದಂತೆ ಸಕಲ ವ್ಯವಸ್ಥೆಗಳನ್ನು ನೀಡಿ ಒಲಿಂಪಿಕ್ಸ್ ಆಯೋಜಿಸಲು 2 ಭಾರತಕ್ಕೆ ಕನಿಷ್ಠ 3-4 ಲಕ್ಷಕೋಟಿ ರೂ. ಮೀಸಲಿಡುವುದು ಅನಿವಾರ್ಯವಾಗಬಹುದು. ಆದರೆ, ಹಲವು ರಾಷ್ಟ್ರಗಳು ಐಒಸಿ ಅಂದಾಜಿಸುವ ವಾಸ್ತವಿಕ ವೆಚ್ಚಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ ನಿದರ್ಶನಗಳೂ ಇವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ವೆಚ್ಚ ಬೀಳುತ್ತದೆ.
ಒಲಿಂಪಿಕ್ಸ್ ಆಯೋಜನೆ ಎಲ್ಲಿ – ವಿನಿಯೋಗಿಸಿದ ವೆಚ್ಚ ಎಷ್ಟು (ಶೇಕಡಾವಾರು)?
ಟೋಕಿಯೊ (ಜಪಾನ್) 2020- (500%)
ರಿಯೋ ಡಿ ಜನೈರೋ (ಬ್ರೆಜಿಲ್)- 2016 – (51%)
ಲಂಡನ್ (ಇಂಗ್ಲೆಂಡ್)- 2012-(76%)
ಬೀಜಿಂಗ್ (ಚೀನಾ)- 2008-(2%)
ಅಥೆನ್ಸ್ (ಗ್ರೀಸ್) – 2004-(49%)
ಸಿಡ್ನಿ (ಆಸ್ಟ್ರೇಲಿಯಾ)- 2000-(90%)
ಅಟ್ಲಾಂಟಾ (ಅಮೆರಿಕ) – 1996-(151%)
ಬಾರ್ಸಿಲೋನಾ (ಸ್ಪೇನ್) – 1993 -(266%)
ಭಾರತದ ಮುಂದಿರುವ ಸವಾಲುಗಳೇನು?
ಮುಂದಿನ ಜಾಗತಿಕ ಕೂಟಗಳಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆದ್ದು ತಾನು ಕ್ರೀಡಾ ಪವರ್ ಹೌಸ್ ಎಂದು ಸಾಬೀತು ಪಡಿಸುವುದು. ಸುಮಾರು ಒಂದೂವರೆ ಶತಕೋಟಿ ಜನಸಂಖ್ಯೆಯ ರಾಷ್ಟ್ರಕ್ಕೆ ಹೆಚ್ಚಿನ ಸಂಖ್ಯೆಯ ಒಲಿಂಪಿಕ್ ಪದಕ ವಿಜೇತರನ್ನು ಹೊಂದುವುದು ಪ್ರತಿಷ್ಠೆಯ ವಿಚಾರವಾಗಬೇಕಿದೆ. ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಕ್ರೀಡಾಕೂಟ ಆಯೋಜಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಭಾರತ ಸಾಬೀತು ಮಾಡಬೇಕು. ಇಂಡೋನೇಷ್ಯಾ, ಕತಾರ್, ಕೊರಿಯಾ, ಜರ್ಮನಿಯಂಥ ಪ್ರಬಲ ಸ್ಪರ್ಧಿಗಳ ನಡುವೆ ಬಿಡ್ ಮಾಡಬೇಕು. ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸ್ವಚ್ಛ ಮತ್ತು ಸುರಕ್ಷಿತ ಸೌಲಭ್ಯಗಳನ್ನು ಒದಗಿಸಬೇಕು. ವಿವಿಧ ಅಕಾಡೆಮಿಗಳು, ಕ್ರೀಡಾ ಸಂಸ್ಥೆಗಳು ಇದಕ್ಕೆ ಕೈಜೋಡಿಸಬೇಕು.
– ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ – ಕೊನೆಯ ಸ್ಥಾನಕ್ಕೆ ಜಿಗಿದ ಇಂಗ್ಲೆಂಡ್
ಚೆನ್ನೈ: ಇಂಗ್ಲೆಂಡ್‌ಗೆ (England) ಶಾಕ್ ನೀಡಿದ್ದ ಅಫ್ಘಾನಿಸ್ತಾನ ಈಗ ಬದ್ಧ ವೈರಿ ಪಾಕಿಸ್ತಾನಕ್ಕೂ (Pakistan) ಶಾಕ್ ನೀಡಿದೆ. ಇದೇ ಮೊದಲ ಬಾರಿಗೆ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಅಫ್ಘಾನಿಸ್ತಾನ (Afghanistan) ಪಾಕಿಸ್ತಾನದ ವಿರುದ್ಧ ಜಯಗಳಿಸಿ ಇತಿಹಾಸ ಸೃಷ್ಟಿಸಿದೆ.
ಪಾಕಿಸ್ತಾನ ಕಳಪೆ ಬೌಲಿಂಗ್ ಮತ್ತು ಕಳಪೆ ಫೀಲ್ಡಿಂಗ್ ಲಾಭ ಪಡೆದ ಅಫ್ಘಾನಿಸ್ತಾನ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಗೆಲ್ಲಲು 282 ರನ್‌ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ ಇನ್ನೂ 6 ಎಸೆತ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 286 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು.
ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ ರೆಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜಾರ್ದನ್ ಮೊದಲ ವಿಕೆಟಿಗೆ 128 ಎಸೆತಗಳಲ್ಲಿ 130 ರನ್ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಪಾಕ್ ಕೈಯಿಂದ ಕಸಿದರು.
ನಂತರ ಎರಡನೇ ವಿಕೆಟಿಗೆ ರೆಹ್ಮಾತ್ ಶಾ ಮತ್ತು ಜದ್ರಾನ್ 74 ಎಸೆತಗಳಲ್ಲಿ 60 ರನ್ ಜೊತೆಯಾಟ, ಮುರಿಯದ ಮೂರನೇ ವಿಕೆಟಿಗೆ ರೆಹ್ಮತ್ ಶಾ ಮತ್ತು ಹಶ್ಮತುಲ್ಲಾ ಶಾಹಿದಿ 93 ಎಸೆತಗಳಲ್ಲಿ 96 ರನ್ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಪಾಕ್ ಮೇಲೆ ಸಿಟ್ಯಾಕೆ?
ಕಳಪೆ ಫೀಲ್ಡಿಂಗ್:
ಇಂದಿನ ಪಾಕ್ ಫೀಲ್ಡಿಂಗ್ ಕಳಪೆಯಾಗಿತ್ತು. ಬೌಂಡರಿ ಹೋಗುವುದನ್ನು ತಡೆಯಲು ಪಾಕ್ ಫೀಲ್ಡರ್‌ಗಳು ವಿಫಲರಾದರು. ಸರಿಯಾಗಿ ಫೀಲ್ಡ್ ಮಾಡಿದರೆ ಹಲವು ಬೌಂಡರಿಗಳನ್ನು ತಡೆಯಬಹುದಿತ್ತು. ಸರಿಯಾಗಿ ಫೀಲ್ಡಿಂಗ್ ಮಾಡದ್ದಕ್ಕೆ ಕೀಪರ್ ರಿಜ್ವಾನ್ ಮೊಹಮ್ಮದ್ ಅವರು ತಲೆಗೆ ಕೈಯನ್ನು ಚಚ್ಚಿ ಸಿಟ್ಟು ಹೊರಹಾಕಿದ್ದರು.
ಅಹಮಾದಾಬಾದ್: ಪಾಕಿಸ್ತಾನ (Pakistan) ವಿರುದ್ಧ ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಡವಟ್ ಮಾಡಿಕೊಂಡಿದ್ದಾರೆ.
ಪಂದ್ಯವಾಡಲು ಮೈದಾನಕ್ಕೆ ಬಂದಾಗ ಬಿಳಿ ಬಣ್ಣದ ಪಟ್ಟಿ ಇರುವ ಜೆರ್ಸಿ (Jersey) ಧರಿಸಿ ಇಳಿದಿದ್ದರು. ನಂತರ ಈ ವಿಚಾರ ತಿಳಿದು ಜೆರ್ಸಿ ಬದಲಾವಣೆ ಮಾಡಿ ಅಂಗಳಕ್ಕೆ ಇಳಿದಿದ್ದರು.
Virat Kohli by mistake comes on the field by wearing the white stripes jersey instead of the tricolour one. pic.twitter.com/sv09MalH3X
ಟೀಂ ಇಂಡಿಯಾದ ಜೆರ್ಸಿ ಕಿಟ್ ಪ್ರಾಯೋಜಕತ್ವವನ್ನು ಅಡಿಡಾಸ್ ಕಂಪನಿ ವಹಿಸಿಕೊಂಡಿದೆ. ವಿಶ್ವಕಪ್‌ಗೆ ಸಿದ್ಧಪಡಿಸಲಾದ ಜೆರ್ಸಿಯಲ್ಲಿ ಭುಜದ ಮೇಲುಗಡೆ ಕೇಸರಿ, ಬಿಳಿ, ಹಸಿರು ಬಣ್ಣದ ಪಟ್ಟಿಯನ್ನು ಹಾಕಲಾಗಿದೆ. ಇದನ್ನೂ ಓದಿ: ಇಂಡಿಯಾ-ಪಾಕಿಸ್ತಾನ ಪಂದ್ಯ: ನಟ ಶಿವರಾಜ್ ಕುಮಾರ್ ಭಾಗಿ
ಈ ವರ್ಷದ ಫೆಬ್ರವರಿಯಲ್ಲಿ ಜರ್ಮನಿ ಮೂಲದ ಅಡಿಡಾಸ್ ಕಂಪನಿ ಬರೋಬ್ಬರಿ 350 ಕೋಟಿ ರೂ. ಬಿಡ್ ಮಾಡಿ ಕಿಟ್ ಪ್ರಾಯೋಜಕತ್ವವನ್ನು ಗೆದ್ದುಕೊಂಡಿತ್ತು. ಅಡಿಡಾಸ್ 2028ರವರೆಗೆ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ. ಪ್ರತಿ ಪಂದ್ಯಕ್ಕೆ ಅಡಿಡಾಸ್ (Adidas) ಕಂಪನಿ ಬಿಸಿಸಿಐಗೆ (BCCI) 65 ಲಕ್ಷ ರೂ. ಪಾವತಿಸಿದರೆ ವಾರ್ಷಿಕ 70 ಕೋಟಿ ರೂ. ನೀಡಲಿದೆ.
ಜೂನ್ ತಿಂಗಳಿನಲ್ಲಿ ಅಡಿಡಾಸ್ ಕಂಪನಿ ಟೆಸ್ಟ್, ಏಕದಿನ, ಟಿ20 ಕ್ರಿಕೆಟಿಗೆ ಧರಿಸುವ ಮೂರು ಜೆರ್ಸಿಯನ್ನು ಬಿಡುಗಡೆ ಮಾಡಿತ್ತು. ಟೆಸ್ಟ್ ಜೆರ್ಸಿಯಲ್ಲಿ ಮೂರು ಬಣ್ಣದ ಪಟ್ಟಿ ನೀಲಿ ಬಣ್ಣದಲ್ಲಿ ಇದೆ.
ಹೈದರಾಬಾದ್: ವಿಶ್ವಕಪ್ ಟೂರ್ನಿಯಲ್ಲಿ (ICC World Cup) ನೆದರ್‌ಲ್ಯಾಂಡ್ (Netherlands) ವಿರುದ್ಧ 99 ರನ್‌ಗಳ ಭರ್ಜರಿ ಜಯ ಸಾಧಿಸಿದ ನ್ಯೂಜಿಲೆಂಡ್ (New Zealand) ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ನೆದರ್‌ಲ್ಯಾಂಡ್ ಹೋರಾಟ ನಡೆಸಿ ಕೊನೆಗೆ 46.3 ಓವರ್‌ಗಳಲ್ಲಿ 223 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಭಾರತ, ಹಿಂದೂ ಧರ್ಮ ಅವಹೇಳನ – ಪಾಕ್ ನಿರೂಪಕಿ ಗಡೀಪಾರು
ನ್ಯೂಜಿಲೆಂಡ್ ಪರವಾಗಿ ವಿಲ್ ಯಂಗ್ 70 ರನ್ (80 ಎಸೆತ, 7 ಬೌಂಡರಿ, 2 ಸಿಕ್ಸರ್), ರಚಿನ್ ರವೀಂದ್ರ 51 ರನ್(51 ಎಸೆತ, 3 ಬೌಂಡರಿ, 1 ಸಿಕ್ಸರ್) ಡ್ಯಾರೆಲ್ ಮಿಷೆಲ್ 48 ರನ್ (47 ಎಸೆತ, 5 ಬೌಂಡರಿ, 2 ಸಿಕ್ಸರ್), ನಾಯಕ ಟಾಮ್ ಲ್ಯಾಥಮ್ 53 ರನ್ (46 ಎಸೆತ, 6 ಬೌಂಡರಿ, 1 ಸಿಕ್ಸರ್) ಕೊನೆಯಲ್ಲಿ ಮಿಚೆಲ್ ಸ್ಯಾಂಟ್ನರ್ ಔಟಾಗದೇ 36 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದ ಪರಿಣಾಮ ನ್ಯೂಜಿಲೆಂಡ್ ಮೊತ್ತ 300 ರನ್‌ಗಳ ಗಡಿ ದಾಟಿತು.
Netherlands players reading paper of plans for each New Zealand batsman.
This team is amazing, and everyone is underrating them but they have some quality players to execute this. Power of data analytics 👏#NZvsNEDpic.twitter.com/nru4CjIb0W
ನೆದರ್‌ಲ್ಯಾಂಡ್ ಪರವಾಗಿ ಕಾಲಿನ್ ಅಕರ್ಮನ್ 69 ರನ್ (73 ಎಸೆತ, 5 ಬೌಂಡರಿ), ಸ್ಕಾಟ್ ಎಡ್ವರ್ಡ್ಸ್ 30 ರನ್ (27 ಎಸೆತ, 2 ಬೌಂಡರಿ, 1 ಸಿಕ್ಸರ್), ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 29 ರನ್(34 ಎಸೆತ, 3 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಚೆಲ್ ಸ್ಯಾಂಟ್ನರ್ 5 ವಿಕೆಟ್, ಮ್ಯಾಟ್ ಹೆನ್ತಿ 3 ವಿಕೆಟ್, ರಚಿನ್ ರವೀಂದ್ರ 1 ವಿಕೆಟ್ ಪಡೆದರು.
ಪೇಪರ್ ತಂದ ಡಚ್ಚರು:
ಈ ಪಂದ್ಯವನ್ನು ಗೆಲ್ಲಬೇಕೆಂದು ನೆದರ್‌ಲ್ಯಾಂಡ್ ಆಟಗಾರರು ಫೀಲ್ಡಿಂಗ್ ವೇಳೆ ಪೇಪರ್ ನೋಡಿಕೊಂಡು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳ ವಿರುದ್ಧ ಗೇಮ್ ಪ್ಲ್ಯಾನ್ ಮಾಡುತ್ತಿದ್ದರು. ಪಂದ್ಯದ ಮೇಲಿನ ಡಚ್ ಆಟಗಾರರ ಈ ಶ್ರದ್ಧೆಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಲಬುರಗಿ (ಅಫಜಲಪುರ): ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್‌ನ ಮನುಡ್ಟಿಡ್ಲೋರ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸ್ಕೇಟಿಂಗ್ (International Skating Competition) ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ಕಲಬುರಗಿ ಜಿಲ್ಲೆಯ ಬಾಲಕ ಚಂದ್ರಕಾಂತ ಬಡದಾಳ ಚಿನ್ನದ ಪದಕ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕಲಬುರಗಿ (Kalabiragi) ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಾಣಹಟ್ಟಿ ಗ್ರಾಮದ ಬಾಲಕ ಇದೀಗ ದೇಶಕ್ಕೆ ಕೀರ್ತಿ ತಂದಿದ್ದಾರೆ. ಬಾಲಕನ ತಂದೆ ರಾಜು ಬಡದಾಳ ಮಹಾರಾಷ್ಟ್ರದ ಪುಣೆ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸವಾಗಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ಮಗನಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಹಂಬಲದಿಂದ ಪೋಷಕರು ಸ್ಥಳೀಯ ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದರು. ಅಲ್ಲಿ ಚಂದ್ರಕಾಂತನ ಕ್ರೀಡಾಪ್ರತಿಭೆ ಗುರುತಿಸಿದ ಶಿಕ್ಷಕರು ಸ್ಕೇಟಿಂಗ್ ತರಬೇತುದಾರ ಅಬ್ದುಲ್ ಶೇಖ್ ಬಳಿ ತರಬೇತಿ ಕೊಡಿಸಿದ್ದಾರೆ.
ಕಳೆದ 2023ರ ಮೇ 23 ರಿಂದ 31ರ ವರೆಗೆ ಬೆಳಗಾವಿಯ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಂದ್ರಕಾಂತ ಕೇವಲ 11.21 ಸೆಕೆಂಡುಗಳಲ್ಲೇ 100 ಮೀಟರ್ ಕ್ರಮಿಸಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದರು. ಇದರಿಂದ ಬ್ಯಾಂಕಾಕ್‌ನ ಅಂತಾರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಇದನ್ನೂ ಓದಿ: World Cup 2023: 102 ರನ್ ಜಯದೊಂದಿಗೆ ದಕ್ಷಿಣ ಆಫ್ರಿಕಾ ಶುಭಾರಂಭ – ಹೋರಾಡಿ ಸೋತ ಲಂಕಾ
ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯೂ ಇಲ್ಲದ ಪುಟ್ಟ ಗ್ರಾಮದಿಂದ ಬಂದ 5ನೇ ತರಗತಿ ಬಾಲಕ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಅಕ್ಟೋಬರ್ 1ರಂದು ಬ್ಯಾಂಕಾಕ್ ನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾರತ, ಹಾಂಕಾಂಗ್, ಮಲೇಷ್ಯಾ, ಥೈಲ್ಯಾಂಡ್ ಸೇರಿದಂತೆ ಅನೇಕ ದೇಶಗಳಿಂದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದ್ರೆ ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಿದ ಚಂದ್ರಕಾಂತ ಬಡದಾಳ 1,000 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕ, 500 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ, 300 ಮೀಟರ್ ಸ್ಪೀಡ್ ರಿಂಗ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ, ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಕೀರ್ತಿ ತಂದಿದ್ದಾರೆ. ಬಾಲಕನ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಂಗಳೂರು: ಮಾಜಿ ಕ್ರಿಕೆಟಿಗ, ಹಾಲಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಸಮಿತ್ ದ್ರಾವಿಡ್ (Samit Dravid) ಕರ್ನಾಟಕ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿನೂ ಮಂಕಡ್ ಟೂರ್ನಿಗಾಗಿ ಆಯ್ಕೆ ಮಾಡಲಾದ ಕರ್ನಾಟಕದ (Karnataka) 15 ಸದಸ್ಯರ ತಂಡದಲ್ಲಿ 17 ವರ್ಷದ ಸಮಿತ್ ಸ್ಥಾನ ಪಡೆದಿದ್ದಾರೆ.
ದ್ರಾವಿಡ್ ಅವರ ಇಬ್ಬರು ಮಕ್ಕಳು ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಹಿರಿಯ ಮಗ ಸಮಿತ್ ಹಾಗೂ ಕಿರಿಯ ಮಗ ಅನ್ವಯ್ ಕ್ರಿಕೆಟನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಮಿತ್ ಈ ಹಿಂದೆ ಅಂಡರ್-14 ತಂಡದಲ್ಲಿ ಸ್ಥಾನ ಪಡೆದಿದ್ದರು.
ಮೊಹಾಲಿ: ಬ್ಯಾಟರ್‌ಗಳ ಉತ್ತಮ ಆಟದಿಂದಾಗಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (Team India) 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಉತ್ತಮ ಆರಂಭ:
ಋತ್‌ರಾಜ್ ಗಾಯಕ್ವಾಡ್ (Ruturaj Gaikwad ) ಮತ್ತು ಶುಭಮನ್ ಗಿಲ್ (Shubman Gill ) ಮೊದಲ ವಿಕೆಟಿಗೆ 130 ಎಸೆತಗಳಲ್ಲಿ 142 ರನ್ ಹೊಡೆದರು. ಗಾಯಕ್ವಾಡ್ 71 ರನ್ (77 ಎಸೆತ, 10 ಬೌಂಡರಿ) ಹೊಡೆದು ಔಟಾದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ 3 ರನ್‌ಗಳಿಸಿ ರನೌಟ್ ಆದರು. ಬೆನ್ನಲ್ಲೇ ಶುಭಮನ್ ಗಿಲ್ 74 ರನ್(63 ಎಸೆತ, 6 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೇವಲ 9 ರನ್ ಅಂತರದಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಂತರ ಬಂದ ಇಶಾನ್ ಕಿಶನ್ 18 ರನ್ ( 26 ಎಸೆತ, 2 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದರು. ಐದನೇ ವಿಕೆಟಿಗೆ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 85 ಎಸೆತಗಳಲ್ಲಿ 80 ರನ್ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹತ್ತಿರ ತಂದರು.
47 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ (Surya Kumar Yadav) ಸಿಕ್ಸ್ ಹೊಡೆಯಲು ಹೋಗಿ ವಿಕೆಟ್ ಒಪ್ಪಿಸಿದರು. ಹೀಗಿದ್ದರೂ ನಾಯಕನ ಜವಾಬ್ದಾರಿ ನಿಬಾಯಿಸಿದ ರಾಹುಲ್ (KL Rahul) ಕೊನೆಗೆ ಬೌಂಡರಿ, ಸಿಕ್ಸರ್ ಹೊಡೆದು ತಂಡವನ್ನು ಗೆಲ್ಲಿಸಿಕೊಟ್ಟರು. ರಾಹುಲ್ ಔಟಾಗದೇ 58 ರನ್(63 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ತ್ರೇಲಿಯಾ ಆರಂಭದಲ್ಲೇ ಮಿಶೆಲ್ ಮಾರ್ಶ್ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟಿಗೆ ಡೇವಿಡ್ ವಾರ್ನರ್ ಮತ್ತು ಸ್ವೀವನ್ ಸ್ಮಿತ್ 106 ಎಸೆತಗಳಲ್ಲಿ 94 ರನ್ ಜೊತೆಯಾಟವಾಡುವ ಮೂಲಕ ಚೇತರಿಕೆ ನೀಡಿದರು.
ಡೇವಿಡ್ ವಾರ್ನರ್ 52 ರನ್(53 ಎಸೆತ, 6 ಬೌಂಡರಿ, 2 ಸಿಕ್ಸರ್), ಸ್ಮಿತ್ 41 ರನ್(60 ಎಸೆತ, 3 ಬೌಂಡರಿ, 1 ಸಿಕ್ಸರ್), ಜೋಶ್ ಇಂಗ್ಲೀಸ್ 45 ರನ್ (45 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ ನಾಯಕ ಪ್ಯಾಟ್ ಕಮ್ಮಿನ್ಸ್ ಔಟಾಗದೇ 21 ರನ್ (9 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರು. ಅಂತಿಮವಾಗಿ ಆಸ್ಟ್ರೇಲಿಯಾ 276 ರನ್‌ಗಳಿಗೆ ಆಲೌಟ್ ಆಯ್ತು. ಮೊಹಮ್ಮದ್ ಶಮಿ 5 ವಿಕೆಟ್ ಪಡೆದರೆ ಬುಮ್ರಾ ಅಶ್ವಿನ್, ರವೀಂದ್ರ ಜಡೆಜಾ ತಲಾ ಒಂದೊಂದು ವಿಕೆಟ್ ಪಡೆದರು. 5 ವಿಕೆಟ್ ಪಡೆದ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಹ್ಯಾಂಗ್‌ಜೂ: ಚೀನಾದ (China) ಹ್ಯಾಂಗ್‌ಜೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಅರುಣಾಚಲ ಪ್ರದೇಶದ ಮೂವರು ವೂಶೂ ಕ್ರೀಡಾಪಟುಗಳಿಗೆ ಚೀನಾ ಪ್ರವೇಶ ನಿರಾಕರಿಸಿದೆ.
10 ಆಟಗಾರರನ್ನೊಳಗೊಂಡ ತಂಡದಲ್ಲಿ ಮೂವರು ಮಹಿಳಾ ಆಟಗಾರರಿಗೆ ಪ್ರವೇಶ ನಿರಾಕರಿಸಿದ್ದು, ಉಳಿವರು ಹ್ಯಾಂಗ್‌ಜೂಗೆ ತೆರಳಿದ್ದಾರೆ. ವೂಶೂ ಕ್ರೀಡಾಪಟುಗಳಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅವರ ಪ್ರವೇಶ ನಿರಾಕರಿಸಿದೆ. ಚೀನಾ ಅರುಣಾಚಲ ಪ್ರದೇಶದ (Arunachal Pradesh) ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಮಾಹಿತಿ ಮತ್ತು ಪ್ರಸಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ತಮ್ಮ ನಿಗದಿತ ಚೀನಾ ಪ್ರವಾಸವನ್ನ ರದ್ದುಗೊಳಿಸಿದ್ದಾರೆ. ಇದು ಪ್ರತಿಭಟನೆಯ ಸಂಕೇತವೆಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಪ್ರವೇಶ ವೀಸಾವಾಗಿ ಕಾರ್ಯನಿರ್ವಹಿಸುವ ಹ್ಯಾಂಗ್‌ಜೂ ಏಷ್ಯನ್ ಗೇಮ್ಸ್ ಆರ್ಗನೈಸಿಂಗ್ ಕಮಿಟಿಯಿಂದ ತಮ್ಮ ಮಾನ್ಯತೆ ಕಾರ್ಡ್ಗಳನ್ನು ಪಡೆದಿದ್ದರು. ಈ ಮಾನ್ಯತಾ ಪತ್ರವನ್ನ ಪ್ರವೇಶ ವೀಸಾ ಎಂದು ಪರಿಗಣಿಸಲಾಗುತ್ತದೆ. ಅಥ್ಲೀಟ್‌ಗಳು ತಮ್ಮ ಪ್ರಯಾಣ ದಾಖಲೆಯನ್ನ ಡೌನ್‌ಲೋಡ್ ಮಾಡಿಕೊಳ್ಳಬೇಕಿತ್ತು. ಏಕೆಂದರೆ ಇದು ಆಟಗಾರರು ಆಗಮಿಸುವ ವೇಳೆ ದೃಢೀಕರಿಸಲಾಗುತ್ತದೆ. ಆದ್ರೆ ಬುಧವಾರ ಏಷ್ಯನ್ ಗೇಮ್ಸ್‌ಗೆ ತೆರಳಬೇಕಿದ್ದಾಗ ಅರುಣಾಚಲ ಪ್ರದೇಶದ ಮೂವರು ಆಟಗಾರರು ತಮ್ಮ ಪ್ರಯಾಣದ ದಾಖಲೆಗಳನ್ನ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮೂವರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ತಿಳಿದುಬಂದಿದೆ. 10 ಆಟಗಾರರನ್ನೊಳಗೊಂಡ ತಂಡದಲ್ಲಿ ಉಳಿದ ಯಾವುದೇ ಆಟಗಾರರು ಮತ್ತು ಸಿಬ್ಬಂದಿಗೆ ಈ ಸಮಸ್ಯೆ ಎದುರಾಗಿಲ್ಲ.
ಈ ನಡುವೆ 19ನೇ ಏಷ್ಯನ್ ಗೇಮ್ಸ್ಗೆ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನುವ ಬಗ್ಗೆ ಹಿರಿಯ ಭಾರತ ಸರ್ಕಾರದ ಅಧಿಕಾರಿ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.
ಚೀನಾದ ಹಾಂಗ್‌ಜೂನಲ್ಲಿ ನಡೆಯುತ್ತಿರಯುವ 19ನೇ ಏಷ್ಯನ್ ಗೇಮ್ಸ್‌ಗೆ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಭಾರತ ಸರ್ಕಾರ ತಿಳಿದುಕೊಂಡಿದೆ. ವಾಸಸ್ಥಳ, ಜನಾಂಗೀಯತೆಯ ಆಧಾರದ ಮೇಲೆ ನಾಗರಿಕರನ್ನು ಭೇದ-ಭಾವದಿಂದ ನೋಡುವುದನ್ನ ದೃಢವಾಗಿ ತಿರಸ್ಕರಿಸುತ್ತದೆ. ಈ ಕುರಿತು ನವದೆಹಲಿ ಮತ್ತು ಬೀಜಿಂಗ್‌ನಲ್ಲೂ ಪ್ರತಿಭಟನೆ ದಾಖಲಿಸಲಾಗಿದೆ. ಇದನ್ನೂ ಓದಿ: ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ
ಚೀನಾ ನಮ್ಮ ಕ್ರೀಡಾಪಟುಗಳಿಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದೆ. ಚೀನಾದ ಈ ನಡೆಯು ಏಷ್ಯನ್ ಗೇಮ್ಸ್ನ ಉತ್ಸಾಹ ಹಾಗೂ ನಿಯಮವನ್ನೂ ಉಲ್ಲಂಘಿಸುತ್ತದೆ ಎಂದು ಭಾರತ ಅಸಮಾಧಾನ ಹೊರಹಾಕಿದೆ. ಅಲ್ಲದೇ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚೀನಾಕ್ಕೆ ತಮ್ಮ ನಿಗದಿತ ಭೇಟಿಯನ್ನ ರದ್ದುಗೊಳಿಸಿದ್ದಾರೆ. ಜೊತೆಗೆ ನಮ್ಮ ಹಿತಾಸಕ್ತಿಯನ್ನ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವು ಹಕ್ಕನ್ನು ಭಾರತ ಸರ್ಕಾರ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ (Asia Cup Cricket) ಟೂರ್ನಿಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ ಶ್ರೀಲಂಕಾ (Sri Lanka) ರೋಚಕ 2 ವಿಕೆಟ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಶಾದಾಬ್ ಖಾನ್ (Shadab Khan) ವಿರುದ್ಧ ನಾಯಕ ಬಾಬರ್ ಅಜಂ ಮತ್ತು ಬೌಲರ್ ಶಾಹಿನ್ ಅಫ್ರಿದಿ ಸಿಟ್ಟಾಗಿರುವ ವಿಡಿಯೋ ವೈರಲ್ ಆಗಿದೆ.
ನಡೆದಿದ್ದು ಏನು?
36 ಎಸೆತಗಳಲ್ಲಿ 36 ರನ್ ಬೇಕಿದ್ದಾಗ 37ನೇ ಓವರ್ ಎಸೆಯಲು ಶಾಹಿನ್ ಅಫ್ರಿದಿ ಬಂದಿದ್ದರು. ಎರಡನೇ ಎಸೆತವನ್ನು ಅಸಲಂಕಾ ಪಾಯಿಂಟ್ ಕಡೆಗೆ ಹೊಡೆದಿದ್ದರು. ಈ ವೇಳೆ ಅಲ್ಲಿದ್ದ ಶಾದಾಬ್ ಅವರು ಫೀಲ್ಡ್ ಮಾಡಿ ಕೀಪರ್ ಕಡೆಗೆ ಥ್ರೋ ಮಾಡಿದರು. ಇದನ್ನೂ ಓದಿ: ಕೇವಲ 10 ರನ್ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್‌ಮ್ಯಾನ್
ಕೂಡಲೇ ಥ್ರೋ ಮಾಡಿದ ಕಾರಣ ಕೀಪರ್ ವಿಕೆಟ್ ಬಳಿ ಬಂದಿರಲಿಲ್ಲ. ಹೀಗಾಗಿ ಚೆಂಡು ಬೌಂಡರಿ ಬಳಿ ಹೋಯ್ತು. ಅಸಲಂಕಾ ಈ ಎಸೆತಕ್ಕೆ ರನ್ ಗಳಿಸುವ ಉದ್ದೇಶ ಇರಲಿಲ್ಲ. ಆದರೆ ಚೆಂಡನ್ನು ಯಾರು ಹಿಡಿಯದ ಕಾರಣ ಲಂಕಾ ಎರಡು ರನ್ ಗಳಿಸಿತು. ಸುಮ್ಮನೇ ಚೆಂಡನ್ನು ಎಸೆದದ್ದಕ್ಕೆ ಬಾಬರ್ ಅಜಂ ಎರಡು ಕೈಯನ್ನು ಅಗಲಿಸಿ ಸಿಟ್ಟು ಹೊರ ಹಾಕಿದರು. ಶಾಹಿನ್ ಆಫ್ರಿದಿ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.
ಲಂಕಾಗೆ ರೋಚಕ ಜಯ
ಮಳೆಯಿಂದಾಗಿ 2 ಗಂಟೆ 15 ನಿಮಿಷಗಳ ಕಾಲ ತಡವಾಗಿ ಆರಂಭಗೊಂಡ ಪಂದ್ಯವನ್ನು ತಲಾ 45 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮತ್ತೆ ಮಳೆ ಅಡ್ಡಿಪಡಿಸಿದ ಪರಿಣಾಮ ಓವರ್ ಕಡಿತಗೊಳಿಸಲಾಗಿತ್ತು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 42 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಹೊಡೆಯಿತು. ಡಕ್‌ವರ್ತ್ ನಿಯಮದ ಅನ್ವಯ ಲಂಕಾಗೆ 42 ಓವರ್‌ಗಳಲ್ಲಿ 252 ರನ್ ನೀಡಲಾಯಿತು.
ಕೊನೆಯ ಓವರಲ್ಲಿ ಲಂಕಾಕ್ಕೆ ಗೆಲ್ಲಲು 8 ರನ್ ಬೇಕಿತ್ತು. ಜಮಾನ್ ಖಾನ್ ಎಸೆದ ಮೊದಲ ಎಸೆತದಲ್ಲಿ ಲೆಗ್‌ಬೈ ಮೂಲಕ ಪ್ರಮೋದ್ ಮದುಶನ್ 1 ರನ್ ತೆಗೆದರು. 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸಲಿಲ್ಲ. 3ನೇ ಎಸೆತದಲ್ಲಿ ಅಸಲಂಕಾ 1 ರನ್ ಪಡೆದರು. 4ನೇ ಎಸೆತದಲ್ಲಿ ಮಧುಶಾನ್ ರನೌಟ್ ಆದರೂ ಅಸಲಂಕಾ ಸ್ಟ್ರೈಕ್‌ಗೆ ಬಂದರು. ಕೊನೆಯ 2 ಎಸೆತದಲ್ಲಿ 6 ರನ್ ಅಗತ್ಯವಿತ್ತು. 5ನೇ ಎಸೆತವನ್ನು ಅಸಲಂಕಾ ಬೌಂಡರಿಗಟ್ಟಿದರೆ ಕೊನೆಯ ಎಸೆತದಲ್ಲಿ 2 ರನ್ ಓಡುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಶ್ರೀಲಂಕಾ ಪರ ಮೆಂಡಿಸ್ 91 ರನ್(87 ಎಸೆತ, 8 ಬೌಂಡರಿ, 1 ಸಿಕ್ಸರ್), ಸಮರ ವಿಕ್ರಮ 48 ರನ್(51 ಎಸೆತ, 4 ಬೌಂಡರಿ) ಗಳಿಸಿ ಔಟಾದರೆ ಅಸಲಂಕ ಔಟಾಗದೇ 49 ರನ್ ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು.