ಮಂಗಳೂರು: ಖೇಲೋ ಇಂಡಿಯಾ (Khelo India) ರಾಷ್ಟ್ರ ಮಟ್ಟದ ಕಬಡ್ಡಿ (Kabaddi) ಪಂದ್ಯಾಟಕ್ಕೆ ಆಯ್ಕೆಯಾದ ಬೆಳ್ಳಾರೆಯ (Bellare) ಕೆಪಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಮತ್ತು ಕ್ರೀಡಾಧಿಕಾರಿಯನ್ನು ನಾಗರಿಕರು ಮೆರವಣಿಗೆಯ ಮೂಲಕ ಸಂಸ್ಥೆಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ (Karnataka) ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ರಾಜ್ಯದ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ ಆಗಿದ್ದಾರೆ. ಇವರ ಜೊತೆ ಖೇಲೋ ಇಂಡಿಯಾ ಕ್ರೀಡಾಧಿಕಾರಿಯಾಗಿ ಬೆಳ್ಳಾರೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಆಯ್ಕೆಗೊಂಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್
ಸುಳ್ಯ ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆಪಿಎಸ್ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಖೇಲೋ ಇಂಡಿಯಾಗೆ ಆಯ್ಕೆಯಾಗಿ ಬೆಳ್ಳಾರೆಗೆ ಕೀರ್ತಿ ತಂದಿದ್ದಾರೆ. ಈ ವಿಶೇಷ ಸಾಧನೆಗೆ ಊರಿನ ನಾಗರಿಕರು ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಆಗಮಿಸಿದ ಇಬ್ಬರು ಆಟಗಾರರನ್ನು ಮತ್ತು ಕ್ರೀಡಾಧಿಕಾರಿ ಪುಷ್ಪಾವತಿ ಇವರನ್ನು ಬರಮಾಡಿಕೊಂಡು ಸನ್ಮಾನಿಸಿ ಮೆರವಣಿಗೆಯ ಮೂಲಕ ಸಂಸ್ಥೆಗೆ ಬರಮಾಡಿದ್ದಾರೆ.
ಶಮಿ ಸೇರಿದಂತೆ ಇತರ ಕ್ರೀಡಾಪಟುಗಳು ತೋರಿದ್ದ ಅದ್ಭುತ ಪ್ರದರ್ಶನಕ್ಕಾಗಿ 2023ರಲ್ಲಿ ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿತ್ತು. ಹಿಂದಿನ 4 ವರ್ಷಗಳ ಅವಧಿಯಲ್ಲಿ ತೋರಿದ ಪ್ರದರ್ಶನ, ನಾಯಕತ್ವದ ಬೆಳವಣಿಗೆ, ಕ್ರೀಡಾ ಮನೋಭಾವ, ಶಿಸ್ತಿನ ಪ್ರಜ್ಞೆ ಈ ಮಾನದಂಡಗಳ ಆಧಾರದದಲ್ಲಿ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು.
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ (World Cup 2023) ಟೂರ್ನಿಯಲ್ಲಿ ಶಮಿ ಅದ್ಭುತ ಸಾಧನೆ ಮಾಡಿದ್ದರು. 7 ಪಂದ್ಯಗಳನ್ನಾಡಿದರೂ 24 ವಿಕೆಟ್‌ಗಳನ್ನು ಪಡೆಯುವ ಮೂಲಕ 2023ರ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಮೈಲುಗಲ್ಲನ್ನೂ ಸ್ಥಾಪಿಸಿದರು.
ಅರ್ಜುನ್ ಪ್ರಶಸ್ತಿ ಪುರಸ್ಕೃತರ ಪಟ್ಟಿ: ಅಜಯ್ ರೆಡ್ಡಿ (ಅಂಧರ ಕ್ರಿಕೆಟ್), ಓಜಸ್ ಪ್ರವೀಣ್ ಡಿಯೋಟಾಲೆ (ಆರ್ಚರಿ), ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಶೀತಲ್ ದೇವಿ (ಪ್ಯಾರಾ ಆರ್ಚರಿ), ಪಾರುಲ್ ಚೌಧರಿ ಮತ್ತು ಮುರಳಿ ಶ್ರೀಶಂಕರ್ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್), ಆರ್. ವೈಶಾಲಿ (ಚೆಸ್), ದಿವ್ಯಾಕೃತಿ ಸಿಂಗ್ ಮತ್ತು ಅನುಷ್ ಅಗರ್ವಾಲಾ (ಈಕ್ವೆಸ್ಟ್ರಿಯನ್), ದೀಕ್ಷಾ ದಾಗರ್ (ಗಾಲ್ಫ್), ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ), ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್ ಬಾಲ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಅಂತಿಮ್ ಪಂಘಲ್ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್). ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಶಮಿ.!
ಮುಂಬೈ: 15 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ (Aarka Sports and Management Limited) ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ (Criminal Case) ದಾಖಲಿಸಿದ್ದಾರೆ.
ರಾಂಚಿಯಲ್ಲಿ 2017ರ ಕ್ರಿಕೆಟ್ ಅಕಾಡೆಮಿ ಒಪ್ಪಂದಕ್ಕೆ ಸಂಬಂಧಿಸಿ ಆಗಿರುವ ವಂಚನೆ ವಿರುದ್ಧ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಿವಾಕರ್ ಒಪ್ಪಂದದಲ್ಲಿದ್ದ ಷರತ್ತುಗಳನ್ನು ಪಾಲಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪಂದ್ಯದ ವೇಳೆ ರಾಮ್ ಸಿಯಾ ರಾಮ್ ಹಾಡಿಗೆ ರಾಮನಂತೆ ಬಿಲ್ಲು ಹಿಡಿದ ಕೊಹ್ಲಿ ವೀಡಿಯೋ ವೈರಲ್
ಏನಿದು ಷರತ್ತು? – ಉಲ್ಲಂಘನೆಯಾಗಿದ್ದು ಹೇಗೆ?
ದಿವಾಕರ್ ಅವರು ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಯನ್ನು ನಡೆಸಲು 2017ರಲ್ಲಿ ಧೋನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದ್ರೆ ಒಪ್ಪಂದದಲ್ಲಿ ಉಲ್ಲೇಖಿಸಲಾದ ಷರತ್ತುಗಳನ್ನ ಪಾಲಿಸಲಿಲ್ಲ. ಅಲ್ಲದೇ ಆರ್ಕಾ ಸ್ಪೋರ್ಟ್ಸ್ನ ಶುಲ್ಕ ಮತ್ತು ಷೇರುಗಳನ್ನೂ ಧೋನಿ ಅವರಿಗೆ ಪಾವತಿಸಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತವನ್ನು ನಂ.1 ಪಟ್ಟದಿಂದ ಕೆಳಗಿಳಿಸಿದ ಆಸ್ಟ್ರೇಲಿಯಾ – ಪ್ಯಾಟ್ ಕಮ್ಮಿನ್ಸ್ ನಾಯಕತ್ವಕ್ಕೆ ಮೆಚ್ಚುಗೆ!
ಒಪ್ಪಂದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಉಲ್ಲಂಘನೆ ಕಾರಣ ಆಗಸ್ಟ್ 15, 2021ರಂದು ಧೋನಿ ಅರ್ಕಾ ಸ್ಪೋರ್ಟ್ಸ್‌ಗೆ ನೋಟಿಸ್ ಕಳುಹಿಸಿದ್ದರು. ಇಂತಹ ನೋಟಿಸ್ಗಳನ್ನು ಹಲವು ಬಾರಿ ಕಳುಹಿಸಿದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಧೋನಿ ಅವರನ್ನು ಪ್ರತಿನಿಧಿಸುತ್ತಿರುವ ವಿಧಿ ಅಸೋಸಿಯೇಟ್ಸ್ನ ದಯಾನಂದ್ ಸಿಂಗ್ ಮಾಹಿತಿ ನೀಡಿದ್ದಾರೆ. ಮೋಸ ಮಾಡಿರುವ ಮತ್ತು 15 ಕೋಟಿ ರೂ. ವಂಚನೆ ಮಾಡಿರುವ ಕುರಿತು ತಿಳಿಸಿದ್ದಾರೆ. ಇದನ್ನೂ ಓದಿ: ಎರಡೇ ದಿನಗಳಿಗೆ 33 ವಿಕೆಟ್ ಉಡೀಸ್; ಹರಿಣರ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – ಸರಣಿ ಸಮಬಲ
ಮುಂಬೈ: ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡಿ ಸುದ್ದಿಯಾಗಿರುವ ಐಪಿಎಲ್ ಬ್ರ್ಯಾಂಡ್ ಮೌಲ್ಯ (IPL Brand Value) ಭಾರೀ ಏರಿಕೆಯಾಗಿದೆ. 2023ರ ಆವೃತ್ತಿಯ ನಂತರ 23% ಏರಿಕೆಯಾಗಿ ಈಗ 10.7 ಶತಕೋಟಿ ಡಾಲರ್‌ಗೆ (ಅಂದಾಜು 89,232 ಕೋಟಿ ರೂ.) ಏರಿಕೆಯಾಗಿದೆ.
ಬ್ರ್ಯಾಂಡ್ ಕನ್ಸಲ್ಟೆನ್ಸಿ ಕಂಪನಿ ಬ್ರ್ಯಾಂಡ್ ಫೈನಾನ್ಸ್ ವರದಿ ಪ್ರಕಾರ 2008ರಲ್ಲಿ ಐಪಿಎಲ್ ಆರಂಭಗೊಂಡ ಬಳಿಕ ಅದರ ಮೌಲ್ಯ 433% ಏರಿಕೆಯಾಗಿದೆ.
ಸ್ಟೇಡಿಯಂ ಸಾಮರ್ಥ್ಯ, ಇಂಟರ್‌ನೆಟ್‌ನಲ್ಲಿ ಐಪಿಎಲ್ ವೀಕ್ಷಣೆ, ತಂಡಗಳ ಮೀಡಿಯಾ ಪ್ರಾಯೋಜಕತ್ವ ಇತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಿ ಬ್ರ್ಯಾಂಡ್ ಮೌಲ್ಯಮಾಪನ ಮಾಡಲಾಗಿದೆ.
ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ (MI) ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮೌಲ್ಯ 87 ದಶಲಕ್ಷ ಡಾಲರ್ (725 ಕೋಟಿ ರೂ.), ಚೆನ್ನೈ ಸೂಪರ್ ಕಿಂಗ್ಸ್ 81 ದಶಲಕ್ಷ ಡಾಲರ್ (674 ಕೋಟಿ ರೂ.) ಇದೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR) 78.6 ದಶಲಕ್ಷ ಡಾಲರ್ (ಅಂದಾಜು 655 ಕೋಟಿ ರೂ.) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 69.8 ದಶಲಕ್ಷ ಡಾಲರ್ (581 ಕೋಟಿ ರೂ.) ಬ್ರ್ಯಾಂಡ್ ಮೌಲ್ಯವನ್ನು ಹೊಂದಿದೆ.
ಮಹಿಳಾ ಪ್ರೀಮಿಯರ್ ಲೀಗ್ (WPL) ಪರಿಚಯಿಸಿದ ನಂತರ ತಂಡಗಳ ಜೊತೆ ಐಪಿಎಲ್ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು
ಯಾವ ತಂಡ ಮೌಲ್ಯ ಎಷ್ಟು?
1. ಮುಂಬೈ ಇಂಡಿಯನ್ಸ್ – 725 ಕೋಟಿ ರೂ.
2. ಚೆನ್ನೈ ಸೂಪರ್ ಕಿಂಗ್ಸ್ – 674 ಕೋಟಿ ರೂ.
3. ಕೋಲ್ಕತ್ತಾ ನೈಟ್ ರೈಡರ್ಸ್ – 655 ಕೋಟಿ ರೂ.
4. ರಾಯಲ್ ಚಾಲೆಂಜರ್ಸ್ ಬೆಂಗಳೂರು – 581 ಕೋಟಿ ರೂ.
5. ಗುಜರಾತ್ ಟೈಟಾನ್ಸ್ – 545 ಕೋಟಿ ರೂ.
6. ಡೆಲ್ಲಿ ಕ್ಯಾಪಿಟಲ್ಸ್ – 534 ಕೋಟಿ ರೂ.
7. ರಾಜಸ್ಥಾನ ರಾಯಲ್ಸ್ – 520 ಕೋಟಿ ರೂ.
8 ಸನ್‌ರೈಸರ್ಸ್ ಹೈದರಾಬಾದ್- 401 ಕೋಟಿ ರೂ.
9. ಲಕ್ನೋ ಸೂಪರ್ ಜೈಂಟ್ಸ್ – 392 ಕೋಟಿ ರೂ.
10. ಪಂಜಾಬ್ ಕಿಂಗ್ಸ್ – 377 ಕೋಟಿ ರೂ.
ಬೆಂಗಳೂರು: ಕರ್ನಾಟಕ ಕ್ರಿಕೆಟ್‌ನಲ್ಲಿ (Karnataka Cricket) 13 ವರ್ಷದ ಬೆಂಗಳೂರಿನ ಬಾಲಕ 2023-24ರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಪಂದ್ಯಗಳಲ್ಲಿ 1,400ಕ್ಕೂ ಹೆಚ್ಚು ರನ್ ಸಿಡಿಸಿ ಸುದ್ದಿಯಾಗಿದ್ದಾನೆ.
ರಾಜಾಜಿನಗರ ನಿತೀಶ್ ಆರ್ಯ (Nitish Arya) 16 ವರ್ಷದೊಳಗಿನವರ ಟೂರ್ನಿಯಲ್ಲಿ 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 565 ರನ್ ಗಳಿಸಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಹಿರಿಯರ ಕ್ರಿಕೆಟ್‌ನಲ್ಲಿ 13ನೇ ವಯಸ್ಸಿನಲ್ಲೇ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದು ನಿಜಕ್ಕೂ ದೊಡ್ಡ ಸಾಧನೆ. ಇದನ್ನೂ ಓದಿ: ಟಿ20ಯಲ್ಲಿ ರವಿ ಬಿಷ್ಣೋಯ್‌ಗೆ ಅಗ್ರ ಸ್ಥಾನ – ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಕಮಾಲ್
ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ನಿತೀಶ್ ರಾಜಾಜಿನಗರ ಕ್ರಿಕೆಟರ್ಸ್ ಮತ್ತು ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ (ಬಸವೇಶ್ವರನಗರ) ಪರವಾಗಿ ಆಡುತ್ತಾರೆ. 7ನೇ ತರಗತಿ ಓದುತ್ತಿರುವ ನಿತೀಶ್ ಮೂರು ವರ್ಷ ಇರುವಾಗಲೇ ಕ್ರಿಕೆಟ್ ಆಡಲು ಆರಂಭಿಸಿದರು. ಈಗ ಅವರು ವಿಕ್ಟರಿ ಕ್ರಿಕೆಟ್ ಕ್ಲಬ್‌ಗಾಗಿ ಕೆಎಸ್‌ಸಿಎಯ 4ನೇ ಡಿವಿಷನ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕದೊಂದಿಗೆ ಅಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.
ವಿರಾಟ್ ಕೊಹ್ಲಿಯ (Virat Kohli) ದೊಡ್ಡ ಅಭಿಮಾನಿಯಾದ 13 ವರ್ಷದ ನಿತೀಶ್ ಆರ್ಯ ಎಲ್ಲಾ ಮೂರು ಮಾದರಿಯಲ್ಲಿ ಟೀಂ ಇಂಡಿಯಾದ ಕ್ಯಾಪ್ ಧರಿಸುವ ಕನಸು ಕಾಣುತ್ತಿದ್ದಾರೆ. ವಯಸ್ಸು ಕಡಿಮೆ ಇದ್ದರೂ ಹಿರಿಯ ಕ್ರಿಕೆಟ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದನ್ನು ನೋಡಿ ರಾಜಾಜಿನಗರ ಕ್ರಿಕೆಟರ್ಸ್ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ತಂಡದ ಶಿವಮೊಗ್ಗ ಲಯನ್ಸ್ ಮಾಲೀಕ ಆರ್ ಕುಮಾರ್ ನಿತೀಶ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
ರಾಜಾಜಿನಗರ ಕ್ರಿಕೆಟಿಗರ ತರಬೇತುದಾರ ವಿನಯ್ ಕುಮಾರ್ ಎನ್‌ಪಿ ಮಾತನಾಡಿ, ನಿತೀಶ್ ತುಂಬಾ ಡೆಡಿಕೇಟೆಡ್ ಹುಡುಗ. ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ನೆಟ್ಸ್‌ನಲ್ಲಿ ತುಂಬಾ ಶ್ರಮಿಸುತ್ತಾರೆ ಎಂದು ಹೇಳಿದ್ದಾರೆ.
ನಿತೀಶ್ ಕ್ರಿಕೆಟ್ ಮಾತ್ರವಲ್ಲ ಅಧ್ಯಯನದಲ್ಲೂ ಮುಂದಿದ್ದಾರೆ. ಪರೀಕ್ಷೆಗಳಲ್ಲಿ 80% ರಿಂದ 90% ರಷ್ಟು ಅಂಕ ಗಳಿಸುತ್ತಿದ್ದಾರೆ.
ಕ್ಯಾನ್ಬೆರಾ: ಆಸ್ಟ್ರೇಲಿಯಾ (Australia) ಪ್ರವಾಸಕ್ಕೆ ಆಗಮಿಸಿದ ಪಾಕ್ ಕ್ರಿಕೆಟ್ (Pakistan Cricket) ಆಟಗಾರರು ವಿಮಾನ ನಿಲ್ದಾಣದಲ್ಲಿ ಟ್ರಕ್‌ಗೆ ತಮ್ಮ ಲಗೇಜ್ ಲೋಡ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಮೂರು ಟೆಸ್ಟ್ ಪಂದ್ಯವಾಡಲು ಪಾಕಿಸ್ತಾನ ತಂಡ ಆಸ್ಟ್ರೇಲಿಯಾಗೆ ಲ್ಯಾಂಡ್ ಆಗಿದೆ. ಡಿಸೆಂಬರ್ 14 ರಿಂದ ಮೊದಲ ಟೆಸ್ಟ್ ಪರ್ತ್‌ನಲ್ಲಿ ನಡೆಯಲಿದ್ದು ಅದಕ್ಕೂ ಮುನ್ನ ಕ್ಯಾನ್ಬೆರಾದಲ್ಲಿ ಅಭ್ಯಾಸ ಪಂದ್ಯ ಆಡಲಿದೆ.
Pakistan team has reached Australia to play 3 match Test series starting December 14.
Pakistani players loaded their luggage on the truck as no official was present. pic.twitter.com/H65ofZnhlF
ಪಾಕ್ ಆಟಗಾರರು ಲಗೇಜ್ ತುಂಬಿಸುತ್ತಿರುವ ವಿಡಿಯೋ ನೋಡಿ ಕ್ರಿಕೆಟ್ ಅಭಿಮಾನಿಗಳು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಅನ್ನು ದೂಷಿಸುತ್ತಿದ್ದಾರೆ. ಕ್ರಿಕೆಟ್ ಆಯೋಜಿಸುತ್ತಿರುವ ನೀವು ಈ ರೀತಿ ಅವಮಾನ ಮಾಡಿದ್ದು ಸರಿಯೇ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: T20I ಕ್ರಿಕೆಟ್‌ನಲ್ಲಿ ಪಾಕ್ ದಾಖಲೆ ನುಚ್ಚುನೂರು – ಟೀಂ ಇಂಡಿಯಾ ಯುವಪಡೆಗೆ ಮೆಚ್ಚುಗೆ
ಒಂದು ದೇಶದ ಆಟಗಾರರು ಕ್ರಿಕೆಟ್ ಆಡಲು ಬಂದಾಗ ಆಯೋಜಿಸುವ ದೇಶದ ಕ್ರಿಕೆಟ್ ಮಂಡಳಿಯ ವತಿಯಿಂದ ಅವರನ್ನು ಸ್ವಾಗತಿಸುವುದು ಸಾಮಾನ್ಯ. ಲ್ಯಾಂಡ್ ಆದ ಬಳಿಕ ಆಟಗಾರರು ಬಸ್ಸಿನಲ್ಲಿ ತೆರಳಿದರೆ ಲಗೇಜ್‌ಗಳನ್ನು ಬೇರೆ ವಾಹನಕ್ಕೆ ತುಂಬಲಾಗುತ್ತದೆ.
#WATCH | Telangana: Pakistan Cricket team arrives at Hyderabad airport, ahead of the World Cup scheduled to be held between October 5 to November 19, in India. pic.twitter.com/j1kFvqGJM2
ಭಾರತದಲ್ಲಿ ವಿಶ್ವಕಪ್ ಕ್ರಿಕೆಟ್ ಆಯೋಜಿಸಿದ ಸಂದರ್ಭದಲ್ಲಿ ಎಲ್ಲಾ ತಂಡಗಳಿಗೆ ಅತ್ಯುತ್ತಮ ಅತಿಥ್ಯ ನೀಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದ ಬಳಿಕ ಹೋಟೆಲಿಗೆ ಆಗಮಿಸಿದ ಸಂದರ್ಭದಲ್ಲಿ ಶಾಲು, ಹೂವಿನ ಮಳೆ ಸುರಿಸಿ ಆಟಗಾರರನ್ನು ಸ್ವಾಗತಿಸಲಾಗಿತ್ತು.
ಲಕ್ನೋ: ವಿಶ್ವಕಪ್ ಟೂರ್ನಿಯಲ್ಲಿ (World Cup Cricket) ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಗ್ರಾಮದಲ್ಲೇ ಸಣ್ಣ ಕ್ರೀಡಾಂಗಣ (Minis Stadium) ನಿರ್ಮಾಣಕ್ಕೆ ಉತ್ತರ ಪ್ರದೇಶ ಸರ್ಕಾರ (Uttar Pradesh) ಮುಂದಾಗಿದೆ.
ಉತ್ತರ ಪ್ರದೇಶದ ಅಮ್ರೋಹಾ (Amroha) ಜಿಲ್ಲೆಯ ಸಹಾಸ್ಪುರ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಕ್ರೀಡಾಂಗಣದ ಕಾಮಗಾರಿ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ.
VIDEO | “We are proposing the construction of a mini stadium in Mohammed Shami’s village (Sahaspur Alinagar), which will include an open gym alongside the mini stadium,” says DM Amroha Rajesh Tyagi. pic.twitter.com/c69TWMD8Si
ಮೊಹಮ್ಮದ್ ಶಮಿ ಅವರ ಹಳ್ಳಿಯಾದ ಸಹಸ್‌ಪುರ ಅಲಿನಗರದಲ್ಲಿ ಮಿನಿ ಕ್ರೀಡಾಂಗಣವನ್ನು ನಿರ್ಮಿಸಲು ನಾವು ಪ್ರಸ್ತಾಪಿಸುತ್ತಿದ್ದೇವೆ. ಇದರಲ್ಲಿ ಮಿನಿ ಕ್ರೀಡಾಂಗಣದ ಜೊತೆಗೆ ತೆರೆದ ಜಿಮ್ ಸೇರಿದೆ ಎಂದು ಜಿಲ್ಲಾಧಿಕಾರಿ ರಾಜೇಶ್ ತ್ಯಾಗಿ ಹೇಳಿದ್ದಾರೆ.ಇದನ್ನೂ ಓದಿ: ಮತ್ತೆ ಮಾತಿನಲ್ಲೇ ತಿವಿದ ವಿಚ್ಛೇದಿತ ಪತ್ನಿ – ತೆರೆಯ ಹಿಂದೆ ಶಮಿಯ ಬದುಕು ಘೋರ!
ಸರ್ಕಾರದಿಂದ ಘೋಷಣೆ ಹೊರ ಬಿದ್ದ ಬೆನ್ನಲ್ಲೇ ಉತ್ತರ ಪ್ರದೇಶದ ರಾಷ್ಟ್ರೀಯ ಲೋಕದಳ ಪಕ್ಷದ ರಾಜ್ಯಸಭಾ ಸದಸ್ಯ ಜಯಂತ್ ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಶಮಿ ತವರಿನಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣಕ್ಕೆ ಸಹಾಯ ಮಾಡಲು ನನ್ನ ಸಂಸದರ ನಿಧಿಯನ್ನು ನೀಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಶಮಿ ಆಡಿದ್ದು ಕೇವಲ 6 ಪಂದ್ಯವಾಡಿ 23 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 3 ಬಾರಿ ಶಮಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಫೈನಲಿನಲ್ಲಿ (World Cup Cricket Final) ಭಾರತ (India) ಮತ್ತು ಆಸ್ಟ್ರೇಲಿಯಾ (Australia) ಎರಡನೇ ಬಾರಿ ಮುಖಾಮುಖಿಯಾಗುತ್ತಿದ್ದು, 20 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಳ್ಳುತ್ತಾ ಎಂಬ ಪ್ರಶ್ನೆ ಎದ್ದಿದೆ.
2003ರ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡು ಬಾರಿ ಮುಖಾಮುಖಿಯಾಗಿತ್ತು. ಲೀಗ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತು ಫೈನಲಿಗೆ ಏರಿದ್ದರೆ ಆಸ್ಟ್ರೇಲಿಯಾ ಅಜೇಯ ತಂಡವಾಗಿ ಫೈನಲ್ ತಲುಪಿತ್ತು.
ಎರಡು ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಾಢ್ಯವಾಗಿದ್ದವು. ಸಚಿನ್ ತೆಂಡೂಲ್ಕರ್ (Sachin Tendulkar) ಟೂರ್ನಿಯಲ್ಲೇ 600+ ರನ್ ಸಿಡಿಸಿ ಬೌಲರ್‌ಗಳಿಗೆ ಭಯ ಹುಟ್ಟಿಸಿದ್ದರು.
ಎರಡು ಸಮಬಲದ ತಂಡವಾಗಿದ್ದರಿಂದ ನಿರೀಕ್ಷೆಯೂ ಹೆಚ್ಚಿತ್ತು. ಟಾಸ್ ಗೆದ್ದ ಸೌರವ್ ಗಂಗೂಲಿ (Sourav Ganguly) ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಕ್ರೀಸ್‌ಗೆ ಆಗಮಿಸಿದ ಕೀಪರ್ ಗಿಲ್‌ಕ್ರಿಸ್ಟ್ ಮತ್ತು ಮಾಥ್ಯೂ ಹೇಡನ್ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು. ಪರಿಣಾಮ ಮೊದಲ ವಿಕೆಟಿಗೆ 84 ಎಸೆತಗಳಲ್ಲಿ 105 ರನ್ ಜೊತೆಯಾಟ ಬಂದಿತ್ತು.
ಗಿಲ್ ಕ್ರಿಸ್ಟ್ 57 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದ ಬೆನ್ನಲ್ಲೇ ಹೇಡನ್ 37 ರನ್ (54 ಎಸೆತ, 5 ಬೌಂಡರಿ) ಹೊಡೆದು ಔಟಾದರು.
ಆರಂಭಿಕ ಆಟಗಾರರು ಔಟಾದ ನಂತರ ನಾಯಕ ಪಾಂಟಿಂಗ್ (Ricky Ponting) ಮತ್ತು ಮಾರ್ಟಿನ್ (Damien Martyn) ಟೀಂ ಇಂಡಿಯಾದ ಬೌಲರ್‌ಗಳನ್ನು ಅಕ್ಷರಶಃ ಬೆಂಡೆತ್ತಿದ್ದರು. ನಿಧಾನವಾಗಿ ರನ್ ಪೇರಿಸಿದ ಜೋಡಿ ನಂತರ ಆಕ್ರಮಣಕಾರಿಯಾಗಿ ಆಡಲು ಆರಂಭಿಸಿತು.
ಪಾಂಟಿಂಗ್ 74 ಎಸೆತಗಳಲ್ಲಿ ಅರ್ಧಶತಕ ಹೊಡೆದಾಗ ಕೇವಲ 1 ಬೌಂಡರಿ ಮಾತ್ರ ಹೊಡೆದಿದ್ದರು. 103 ಎಸೆತಗಳಲ್ಲಿ ಶತಕ ಹೊಡೆದ ಪಾಂಟಿಂಗ್ ಅಂತಿಮವಾಗಿ ಔಟಾಗದೇ 140 ರನ್(121 ಎಸೆತ, 4 ಬೌಂಡರಿ, 8 ಸಿಕ್ಸರ್) ಚಚ್ಚಿದ್ದರು. ನಾಯಕನಿಗೆ ಉತ್ತಮ ಸಾಥ್ ನೀಡಿದ ಮಾರ್ಟಿನ್ ಔಟಾಗದೇ 88 ರನ್ (84 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದರು. ಇದನ್ನೂ ಓದಿ: ನಾಯಕ ಬವುಮಾ ಎಡವಟ್ಟಿನ ನಿರ್ಧಾರದಿಂದಲೇ ದ.ಆಫ್ರಿಕಾಗೆ ಸೋಲು?
ಭಾರತದ ಪರವಾಗಿ 8 ಮಂದಿ ಬೌಲ್ ಮಾಡಿದರೂ ಈ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲೇ ಇಲ್ಲ. ಬೌಲರ್‌ಗಳ ಸಹ ಸುಸ್ತಾಗಿ ಹೋಗಿ ಇತರ ರೂಪದಲ್ಲೂ ರನ್ ನೀಡತೊಡಗಿದರು. ಅಂತಿಮವಾಗಿ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 359 ರನ್ ಬೃಹತ್ ಮೊತ್ತ ಪೇರಿಸಿದ್ದರೆ ಪಾಟಿಂಗ್ ಮತ್ತು ಮಾರ್ಟಿನ್ ಮುರಿಯದ ಮೂರನೇ ವಿಕೆಟಿಗೆ 181 ಎಸೆತಗಳಿಗೆ 234 ರನ್ ಜೊತೆಯಾಟವಾಡಿದ್ದರು. ಭಾರತ ಇತರೇ ರೂಪದಲ್ಲಿ 37 ರನ್(2 ಬೈ, 12 ಲೆಗ್‌ಬೈ, 7 ನೋಬಾಲ್, 16 ವೈಡ್) ನೀಡಿತ್ತು. ಶ್ರೀನಾಥ್ 87 ರನ್ ನೀಡಿದ್ದರೆ ಜಹೀರ್ ಖಾನ್ 7 ಓವರ್ ಎಸೆದು 67 ರನ್ ನೀಡಿದ್ದರು.
ಆರಂಭದಲ್ಲೇ ಆಘಾತ:
ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸಚಿನ್ ಮೇಲೆ ಇಡೀ ಭಾರತೀಯರ ನಿರೀಕ್ಷೆ ಇತ್ತು. ತೆಂಡೂಲ್ಕರ್ ಗ್ಲೇನ್ ಮೆಗ್ರಾಥ್ ಎಸೆದ ಮೊದಲ ಓವರ್‌ನಲ್ಲೇ ಬೌಂಡರಿ ಹೊಡೆದಿದ್ದರು. ಆದರೆ 5ನೇ ಎಸೆತದಲ್ಲಿ ಬಲವಾಗಿ ಹೊಡೆಯಲು ಹೋಗಿ ಮೆಗ್ರಾಥ್‌ಗೆ ಕ್ಯಾಚ್ ನೀಡಿ ಭಾರವಾದ ಹೆಜ್ಜೆ ಹಾಕುತ್ತಾ ಪೆವಿಲಿಯನ್ ಕಡೆಗೆ ನಡೆದರು.
ವೀರೇಂದ್ರ ಸೆಹ್ವಾಗ್ ಮತ್ತು ಗಂಗೂಲಿ ಸ್ವಲ್ಪ ಪ್ರಯತ್ನ ಮಾಡಿದರೂ ಉತ್ತಮ ಜೊತೆಯಾಟ ಬರಲಿಲ್ಲ. ಗಂಗೂಲಿ 24 ರನ್, ದ್ರಾವಿಡ್ 47 ರನ್, ಯುವರಾಜ್ 24 ರನ್ ಗಳಿಸಿ ಔಟಾದರೆ ಕೈಫ್ ಶೂನ್ಯ ಸುತ್ತಿದರು. 81 ಎಸೆತ ಎದುರಿಸಿ 3 ಸಿಕ್ಸ್, 10 ಬೌಂಡರಿಯೊಂದಿಗೆ 82 ರನ್ ಹೊಡೆದು ಅಬ್ಬರಿಸುತ್ತಿದ್ದ ಸೆಹ್ವಾಗ್ ಅವರನ್ನು ಲೆಹ್ಮನ್ ರನೌಟ್ ಮಾಡಿದರು.
ಆಸೀಸ್ ಬೌಲರ್‌ಗಳ ಎಸೆತಗಳಿಗೆ ಬ್ಯಾಟ್ಸಮನ್‌ಗಳು ರನ್‌ಗಳಿಸಲು ಪರದಾಡಿದ್ದರು. ಮೆಗ್ರಾಥ್ 3 ವಿಕೆಟ್ ಪಡೆದರೆ, ಬ್ರೇಟ್ ಲೀ ಮತ್ತು ಸೈಮಂಡ್ಸ್ 2 ವಿಕೆಟ್ ಕಿತ್ತರು. ಆರಂಭದಿಂದಲೇ ಕುಸಿತ ಕಂಡ ಭಾರತ ಅಂತಿಮವಾಗಿ 39.2 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟ್ ಆಯ್ತು. 125 ರನ್‌ಗಳಿಂದ ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಸೇಡು ತೀರಿಸುತ್ತಾ?
ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯುತ್ತಿರುವ ಕಾರಣ 20 ವರ್ಷದ ಹಿಂದಿನ ಸೇಡು ತೀರಿಸುತ್ತಾ ಎಂಬ ಪ್ರಶ್ನೆ ಅಭಿಮಾನಿಗಳದ್ದು. 2003ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತಿತ್ತು. ಈ ಬಾರಿಯೂ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ ಲೀಗ್ ಪಂದ್ಯದಲ್ಲಿ ಸೋತಿದೆ. ಭಾರತ ಅಜೇಯವಾಗಿ ಫೈನಲ್ ತಲುಪಿದ್ದರೆ ಆಸ್ಟ್ರೇಲಿಯಾ 2 ಪಂದ್ಯ ಸೋತು ನಂತರ ಚೇತರಿಸಿ ಫೈನಲ್ ತಲುಪಿದೆ. ಭಾರತ ಅಜೇಯ ತಂಡ ಆಗಿದ್ದರೂ ಆಸ್ಟ್ರೇಲಿಯಾವನ್ನು ಸುಲಭವಾಗಿ ಪರಿಗಣಿಸುವ ಹಾಗಿಲ್ಲ. ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯುವ ಸಾಧ್ಯತೆಯಿದೆ.
ಮುಂಬೈ: ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿರುವ ರೋಹಿತ್ ಶರ್ಮಾ (Rohit Sharma) ನಾಯಕನಾಗಿ ಭಾರತದ (Team India) ಪರ ದಾಖಲೆ ಬರೆದಿದ್ದಾರೆ.
ನ್ಯೂಜಿಲೆಂಡ್ (New Zealand) ವಿರುದ್ಧದ ಸೆಮಿಫೈನಲ್ (Semi Final) ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಆರಂಭದಿಂದ ಸೆಮಿಫೈನಲ್‌ವರೆಗೆ ಸತತ 10 ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಎಂಎಸ್ ಧೋನಿ (MS Dhoni) ನೇತೃತ್ವದಲ್ಲಿ 2011 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯವನ್ನು ಸೋತಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ 296 ರನ್‌ಗಳಿಗೆ ಆಲೌಟ್ ಆಗಿದ್ದರೆ ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ 300 ರನ್ ಹೊಡೆಯುವ ಮೂಲಕ ಜಯ ಗಳಿಸಿತ್ತು. ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಶಮಿ.!
2015 ಮತ್ತು 2019 ವಿಶ್ವಕಪ್ ಸೆಮಿಫೈನಲಿನಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ಈಗ ಭಾರತ ನಾಲ್ಕನೇಯ ಬಾರಿಗೆ ಫೈನಲ್ ಪ್ರವೇಶಿಸಿದೆ. 2003ರಲ್ಲಿ ಭಾರತ ರನ್ನರ್ ಅಪ್ ಆಗಿದ್ದರೆ 1983 ಮತ್ತು 2011ರಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.
ಮುಂಬೈನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಹೊಡೆಯಿತು. ನ್ಯೂಜಿಲೆಂಡ್ 48.5 ಓವರ್‌ಗಳಲ್ಲಿ 327 ರನ್‌ಗಳಿಗೆ ಆಲೌಟ್ ಆಯ್ತು. ಈ ಮೂಲಕ 2019ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸೋತಿದ್ದ ಭಾರತ ಸೇಡು ತೀರಿಸಿಕೊಂಡಿತು. ಇದನ್ನೂ ಓದಿ: 20 ವರ್ಷಗಳ ಹಿಂದಿನ ಸಚಿನ್ ವಿಶ್ವದಾಖಲೆಯನ್ನು ಮುರಿದ ಕೊಹ್ಲಿ
ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 239 ರನ್ ಹೊಡೆದಿತ್ತು. ಭಾರತ 49.3 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲೌಟ್ ಆಗಿತ್ತು.
ನವದೆಹಲಿ: ನಾನು ಮತ್ತು ಧೋನಿ (MS Dhoni) ಆತ್ಮೀಯ ಸ್ನೇಹಿತರಲ್ಲ. ನಾವು ಕ್ರಿಕೆಟ್‌ನಿಂದ (Cricket) ಸ್ನೇಹಿತರಾಗಿದ್ದೇವೆ ಎಂದು ಟೀಂ ಇಂಡಿಯಾದ (Team India) ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ (Yuvraj Singh) ಹೇಳಿದ್ದಾರೆ.
ಯೂಟ್ಯೂಬ್ ವಾಹಿನಿಯ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವಿಬ್ಬರು ಒಟ್ಟಾಗಿ ಆಡಿದ್ದರೂ ಮಹಿಯ ಜೀವನಶೈಲಿ ನನಗಿಂತ ತುಂಬಾ ಭಿನ್ನವಾಗಿತ್ತು, ಆದ್ದರಿಂದ ನಾವು ಎಂದಿಗೂ ಆತ್ಮೀಯ ಸ್ನೇಹಿತರಾಗಿರಲಿಲ್ಲ ಎಂದರು.
ಧೋನಿ ನಾಯಕನಾಗಿದ್ದಾಗ ನಾನು ಉಪನಾಯಕನಾಗಿದ್ದೆ. ಕೆಲವೊಮ್ಮೆ ನನಗೆ ಇಷ್ಟವಿಲ್ಲದ ನಿರ್ಧಾರಗಳನ್ನು ಅವರು ತೆಗೆದುಕೊಂಡಿದ್ದರು. ಕೆಲವೊಮ್ಮೆ ಅವರು ಇಷ್ಟಪಡದ ನಿರ್ಧಾರಗಳನ್ನು ನಾನು ತೆಗೆದುಕೊಂಡಿದ್ದೇನೆ. ಇದು ಪ್ರತಿ ತಂಡದಲ್ಲಿ ಸಂಭವಿಸುತ್ತದೆ. ನನ್ನ ವೃತ್ತಿಜೀವನದ ಕೊನೆಯಲ್ಲಿದ್ದಾಗ ನಾನು ಅವರ ಬಳಿ ಸಲಹೆ ಕೇಳಿದೆ. ಈ ವೇಳೆ ಆಯ್ಕೆ ಸಮಿತಿಯು ಈಗ ನಿನ್ನನ್ನು ಪರಿಗಣನೆ ಮಾಡುತ್ತಿಲ್ಲ ಎಂದು ಹೇಳಿದ್ದರು. 2019ರ ವಿಶ್ವಕಪ್‌ಗೆ ಮೊದಲೇ ನನಗೆ ಈ ವಿಷಯ ತಿಳಿದಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಕೊಹ್ಲಿಗೂ ಮುನ್ನವೇ ಸಚಿನ್ ಶತಕ ದಾಖಲೆ ಉಡೀಸ್ ಮಾಡಿದ ರಚಿನ್..!
ತಂಡದ ಸಹ ಆಟಗಾರರು ಒಬ್ಬರಿಗೊಬ್ಬರು ಉತ್ತಮ ಸ್ನೇಹಿತರಾಗಿರಬೇಕಾಗಿಲ್ಲ. ಆದರೆ ಮೈದಾನಕ್ಕೆ ಕಾಲಿಟ್ಟಾಗ ದೇಶಕ್ಕಾಗಿ ಅತ್ಯುತ್ತಮವಾದದ್ದನ್ನು ನೀಡಬೇಕು ಎಂದು ಯುವರಾಜ್ ಒತ್ತಿ ಹೇಳಿದರು.
ಪ್ರತಿಯೊಬ್ಬರೂ ವಿಭಿನ್ನ ಜೀವನಶೈಲಿ, ಕೌಶಲ್ಯವನ್ನು ಹೊಂದಿದ್ದಾರೆ. ಕೆಲವು ಜನರು ನಿರ್ದಿಷ್ಟ ಜನರೊಂದಿಗೆ ಹ್ಯಾಂಗ್ ಔಟ್ ಮಾಡುತ್ತಾರೆ. ನೀವು ಯಾವುದೇ ತಂಡವನ್ನು ಸೇರಿದರೆ ಎಲ್ಲಾ ಹನ್ನೊಂದು ಮಂದಿ ಹೊಂದಿಕೆಯಾಗುವುದಿಲ್ಲ. ಮೈದಾನದಲ್ಲಿದ್ದಾಗ ಅಹಂ ಬದಿಗೊತ್ತಿ ತಂಡಕ್ಕೆ ಕೊಡುಗೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಧೋನಿ ಗಾಯಗೊಂಡ ಸಂದರ್ಭದಲ್ಲಿ ನಾನು ಅವರಿಗೆ ರನ್ನರ್ ಆಗಿದ್ದೆ. ಒಂದು ಬಾರಿ ಅವರು 90 ರನ್ ಗಳಿಸಿದ್ದಾಗ ಶತಕ ಪೂರ್ಣಗೊಳಿಸಲು ನಾನು ಸ್ಟ್ರೈಕ್ ಬಿಟ್ಟುಕೊಟ್ಟಿದ್ದೆ. ವಿಶ್ವಕಪ್ ಪಂದ್ಯದಲ್ಲಿ ನಾನು ನೆದರ್ಲ್ಯಾಂಡ್ಸ್ ವಿರುದ್ಧ 48 ರನ್ ಗಳಿಸಿದ್ದೆ. ಆಗ ತಂಡ ಜಯಗಳಿಸಲು 2 ರನ್ ಬೇಕಿತ್ತು. ಈ ವೇಳೆ ಧೋನಿ ಎರಡು ಎಸೆತ ಎದುರಿಸಿಯೂ ರನ್ ಹೊಡೆಯದ ಕಾರಣ ನಾನು 50 ರನ್ ಹೊಡೆದಿದ್ದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.
ಯುವರಾಜ್ ಸಿಂಗ್ ಮತ್ತು ಧೋನಿ ಭಾರತ ಕಂಡ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು. ಶ್ರೀಲಂಕಾ ವಿರುದ್ಧದ 2011 ರ ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರೆ ಯುವರಾಜ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಧೋನಿ ಮತ್ತು ಯುವರಾಜ್ ಮುರಿಯದ 5ನೇ ವಿಕೆಟಿಗೆ 42 ಎಸೆತಗಳಲ್ಲಿ 54 ರನ್ ಹೊಡೆದಿದ್ದರು. ಅಂತಿಮವಾಗಿ ಭಾರತ 48.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 277 ರನ್ ಹೊಡೆಯುವ ಮೂಲಕ ಎರಡನೇ ಬಾರಿಗೆ ವಿಶ್ವಕಪ್ ಜಯಿಸಿತ್ತು.