Tag: sports

  • ಗ್ರೇಸ್‌ ಹ್ಯಾರಿಸ್‌ ಸ್ಫೋಟಕ ಅರ್ಧಶತಕ – ಯುಪಿಗೆ 6 ವಿಕೆಟ್‌ಗಳ ಭರ್ಜರಿ ಜಯ

    ಗ್ರೇಸ್‌ ಹ್ಯಾರಿಸ್‌ ಸ್ಫೋಟಕ ಅರ್ಧಶತಕ – ಯುಪಿಗೆ 6 ವಿಕೆಟ್‌ಗಳ ಭರ್ಜರಿ ಜಯ

    ಬೆಂಗಳೂರು: ಗ್ರೇಸ್‌ ಹ್ಯಾರಿಸ್‌ (Grace Harris) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಯುಪಿ ವಾರಿಯರ್ಸ್‌ (UP Warriorz), ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡಿದ ಗುಜರಾತ್‌ ಜೈಂಟ್ಸ್‌ 5 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಯುಪಿ ವಾರಿಯರ್ಸ್‌ 15.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 143 ರನ್‌ ಹೊಡೆಯುವ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿತು.

    ಯುಪಿ ಪರ ಗ್ರೇಸ್‌ ಹ್ಯಾರಿಸ್‌ ಔಟಾಗದೇ 60 ರನ್‌ (33 ಎಸೆತ, 9 ಬೌಂಡರಿ, 2 ಸಿಕ್ಸರ್‌) ಹೊಡೆದರೆ ಆರಂಭಿಕ ಆಟಗಾರ್ತಿ, ನಾಯಕಿ ಅಲಿಸ್ಸಾ ಹೀಲಿ 33 ರನ್‌ (21 ಎಸೆತ, 7 ಬೌಂಡರಿ) ಹೊಡೆದರು. ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್‌ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?

    ಗುಜರಾತ್‌ ಜೈಂಟ್ಸ್‌ ಪರ ಆಶ್ಲೀಗ್ ಗಾರ್ಡ್ನರ್ 30 ರನ್‌ (17 ಎಸೆತ, 4 ಬೌಂಡರಿ, 1 ಸಿಕ್ಸರ್)‌, ಫೋಬೆ ಲಿಚ್ಫೀಲ್ಡ್ 35 ರನ್‌ (26 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದರು.

    ಸದ್ಯ ಡಬ್ಲ್ಯೂಪಿಎಲ್‌ (WPL) ಅಂಕ ಪಟ್ಟಿಯಲ್ಲಿ ತಲಾ 4 ಅಂಕಗಳನ್ನು ಪಡೆದಿದ್ದರೂ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಡೆಲ್ಲಿ ಮೊದಲ ಸ್ಥಾನ ಪಡೆದರೆ ಆರ್‌ಸಿಬಿ ಎರಡನೇ ಸ್ಥಾನ ಪಡೆದಿದೆ. ಯುಪಿ, ಮುಂಬೈ ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದೆ. ಆಡಿರುವ ಮೂರು ಪಂದ್ಯಗಳನ್ನು ಸೋತಿರುವ ಗುಜರಾತ್‌ 0 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌ – ಓರ್ವ ವಶಕ್ಕೆ

  • BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌

    BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌

    ಬೆಂಗಳೂರು: ನಗರದ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಹೊಸ ಸೂತ್ರ ಕಂಡು ಹಿಡಿದಿದೆ. ನೀವು ಆಟವಾಡುವ ಬಿಬಿಎಂಪಿ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಬರುವ ಸಾಧ್ಯತೆ ದಟ್ಟವಾಗಿ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಗೋಚರಿಸಿದೆ.

    ವಾಹನ ಸಾಂದ್ರತೆ ಇರುವ ಪ್ರದೇಶದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್‌ (Underground Parking facilities below Play Grounds) ಎಂಬ ವಿನೂತನ ಯೋಜನೆ ಜಾರಿಗೆ ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್‌ ನಿರ್ಮಾಣ

    ಆಟದ ಮೈದಾನಕ್ಕೆ ಏನೂ ಆಗಲ್ಲ!
    ಅಂಡರ್‌ ಗ್ರೌಂಡ್‌ ಪಾರ್ಕಿಂಗ್‌ ಯೋಜನೆಯಿಂದ ಆಟದ ಮೈದಾನದ ಸೌಲಭ್ಯಕ್ಕೆ ಯಾವುದೇ ತೊಂದರೆಯಾಗದಂತೆ ಪಿಪಿಪಿ ಆಧಾರದಲ್ಲಿ ಅನುಷ್ಠಾನಗೊಳಿಸಲು ಈ ವರ್ಷ 5 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದನ್ನೂ ಓದಿ: BBMP Budget 2024: ಬೆಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ 2 ಸುರಂಗ ಮಾರ್ಗ

  • ಕಿರಣ್ ನವಗಿರೆ ಸ್ಫೋಟಕ ಅರ್ಧಶತಕ – ಬಲಿಷ್ಠ ಮುಂಬೈ ವಿರುದ್ಧ ಯಪಿಗೆ 7 ವಿಕೆಟ್‌ಗಳ ಜಯ

    ಕಿರಣ್ ನವಗಿರೆ ಸ್ಫೋಟಕ ಅರ್ಧಶತಕ – ಬಲಿಷ್ಠ ಮುಂಬೈ ವಿರುದ್ಧ ಯಪಿಗೆ 7 ವಿಕೆಟ್‌ಗಳ ಜಯ

    ಬೆಂಗಳೂರು: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಯುಪಿ ವಾರಿಯರ್ಸ್‌ (UP Warriorz Women) ಮುಂಬೈ ಇಂಡಿಯನ್ಸ್‌ (Mumbai Indians Women) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಡಬ್ಲ್ಯೂಪಿಎಲ್‌ (WPL) ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

    ಗೆಲ್ಲಲು 162 ರನ್‌ಗಳ ಗುರಿಯನ್ನು ಪಡೆದ ಯುಪಿ ಇನ್ನೂ 21 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ಕಳೆದುಕೊಂಡು 163 ರನ್‌ ಹೊಡೆಯುವ ಮೂಲಕ ಜಯಗಳಿಸಿತು. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಶಮಿ ಕಾಲಿಗೆ ಶಸ್ತ್ರಚಿಕಿತ್ಸೆ – ಐಪಿಎಲ್‌ನಿಂದ ಹೊರಗೆ?

    ಆರಂಭಿಕ ಆಟಗಾರ್ತಿ ಕಿರಣ್ ನವಗಿರೆ (Kiran Navgire) ಅವರ ಸ್ಫೋಟಕ ಅರ್ಧಶತಕದ ಜೊತೆ ಕೊನೆಯಲ್ಲಿ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಯುಪಿ ತಂಡ ವಿಜಯದ ನಗೆ ಬೀರಿತು.

    ನಾಯಕಿ ಅಲಿಸ್ಸಾ ಹೀಲಿ 33 ರನ್‌ (29 ಎಸೆತ, 5 ಬೌಂಡರಿ), ಕಿರಣ್ ನವಗಿರೆ 57 ರನ್‌ (31 ಎಸೆತ, 6 ಬೌಂಡರಿ, 4 ಸಿಕ್ಸರ್‌), ಗ್ರೇಸ್‌ ಹ್ಯಾರಿಸ್‌ (Grace Harris) ಔಟಾಗದೇ 38 ರನ್‌ (17 ಎಸೆತ, 6 ಬೌಂಡರಿ, 1 ಸಿಕ್ಸರ್‌), ದೀಪ್ತಿ ಶರ್ಮಾ (Deepti Sharma) ಔಟಾಗದೇ 27 ರನ್‌(20 ಎಸೆತ, 4 ಬೌಂಡರಿ) ಹೊಡೆದರು.  ಇದನ್ನೂ ಓದಿ: BCCI ವಾರ್ಷಿಕ ಆಟಗಾರರ ರಿಟೈನರ್‌ಶಿಪ್ ಪಟ್ಟಿ ರಿಲೀಸ್‌ – ಯಶಸ್ವಿ, ರಿಂಕು ಪಡೆಯೋ ಸಂಬಳ ಎಷ್ಟು ಗೊತ್ತಾ?

    ಒಂದು ಹಂತದಲ್ಲಿ ಯುಪಿ ಗೆಲುವಿಗೆ 54 ಎಸೆತದಲ್ಲಿ 64 ರನ್‌ ಬೇಕಿತ್ತು. ಈ ಹಂತದಲ್ಲಿ ಗ್ರೇಸ್‌ ಹ್ಯಾರಿಸ್‌ ಮತ್ತು ದೀಪ್ತಿ ಶರ್ಮಾ ಬೌಂಡರಿಗಳ ಸುರಿಮಳೆ ಸಿಡಿಸಿದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ಪರ ಹೇಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ ಮೊದಲ ವಿಕೆಟಿಗೆ 50 ರನ್‌ ಜೊತೆಯಾಟವಾಡಿದರು.

    ಯಾಸ್ತಿಕಾ ಭಾಟಿಯಾ 26 ರನ್‌ (22 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರೆ ಹೇಲಿ ಮ್ಯಾಥ್ಯೂಸ್ 55 ರನ್‌ (47 ಎಸೆತ, 9 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ನ್ಯಾಟ್ ಸ್ಕಿವರ್-ಬ್ರಂಟ್ 19 ರನ್‌ಗಳಿಸದಾಗ ರನೌಟ್‌ ಆದರೆ ಅಮೆಲಿಯಾ ಕೆರ್ 23 ರನ್‌ ಹೊಡೆದು ಔಟಾದರು.

    ಮೂರು ಪಂದ್ಯವಾಡಿ ಒಂದು ಪಂದ್ಯ ಗೆದ್ದಿರುವ ಯುಪಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ ಮೊದಲ ಸ್ಥಾನದಲ್ಲಿದ್ದರೆ ಮೂರು ಪಂದ್ಯವಾಡಿ ಎರಡು ಗೆದ್ದಿರುವ ಮುಂಬೈ ಎರಡನೇ ಸ್ಥಾನದಲ್ಲಿದೆ.

  • ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ

    ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ

    ಅಬುಧಾಬಿ: ದುಬೈನ ಒಕ್ಕಲಿಗ ಸಂಘದಿಂದ (Vokkaliga Organisation) ಇತ್ತೀಚೆಗೆ ನಡೆದ ಒಕ್ಕಲಿಗರ ವಿಶೇಷ ವಿಹಾರ ಕೂಟವು ಕಣ್ಮನ ಸೆಳೆಯಿತು.

    ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಒಕ್ಕಲಿಗ ಕುಟುಂಬಗಳ ಸಮಾಗಮವಾಯಿತು. ದುಬೈ (Dubai) ಒಕ್ಕಲಿಗ ಸಂಘದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಘದ ಅಧ್ಯಕ್ಷರಾದ ಕಿರಣ್ ಗೌಡ ಆವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದವರು (Vokkaliga Community) ಪಾಲ್ಗೊಂಡಿದ್ದರು.

    ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಮಂದಿ ಒಂದೆಡೆ ಸೇರಿ ವಿವಿಧ ಆಟೋಟ ಸ್ಪರ್ಧೆಗಳಲ್ಲೂ ಪಾಲ್ಗೊಂಡಿದ್ದರು. ಮಕ್ಕಳು ಮತ್ತು ಹಿರಿಯರಿಗೆ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದನ್ನೂ ಓದಿ: ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ನೋ ಎಂಟ್ರಿ – ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್

    ಇದೇ ಸಂದರ್ಭದಲ್ಲಿ ಹೊಸದಾಗಿ ಆಯ್ಕೆಯಾದ ಸಮಿತಿಯ ಸದ್ಯಸರಿಗೆ ಅಭಿನಂದನೆ ಸಲ್ಲಿಸಲಾಯ್ತು. ಇದೇ ವೇಳೆ ಗೌಡರ ಶೈಲಿಯ ಊಟೋಪಚಾರಗಳೊಂದಿಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಕಣ್ಮನ ಸೆಳೆದವು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್‌ ಷರೀಫ್‌ ಪುತ್ರಿ ಆಯ್ಕೆ

  • ದಿಢೀರ್‌ ಮನೆಗೆ ತೆರಳಿದ ಅಶ್ವಿನ್‌ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ

    ದಿಢೀರ್‌ ಮನೆಗೆ ತೆರಳಿದ ಅಶ್ವಿನ್‌ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ

    ರಾಜ್‌ಕೋಟ್‌: ಸ್ಪಿನ್ನರ್‌ ಆರ್‌ ಅಶ್ವಿನ್‌ ( R Ashwin) ಈಗ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಿಂದ (Test Match) ದಿಢೀರ್‌ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಇಂಗ್ಲೆಂಡ್‌ (England) ವಿರುದ್ಧದ ಪಂದ್ಯದಲ್ಲಿ 10 ಆಟಗಾರರೊಂದಿಗೆ ಭಾರತ (Team India) ಪಂದ್ಯ ಆಡುತ್ತಿದೆ.

    ಅಶ್ವಿನ್‌ ಬದಲು ಫೀಲ್ಡಿಂಗ್‌ನಲ್ಲಿ ಬದಲಿ ಆಟಗಾರನನ್ನು ಮಾತ್ರವೇ ಭಾರತ ಆಡಿಸಲು ಅವಕಾಶವಿದೆ. ಇಂಗ್ಲೆಂಡ್‌ ವಿರುದ್ಧ ನಡೆಯತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ಮುಂದಿನ ಭಾಗದಲ್ಲಿ ಅಶ್ವಿನ್‌ ಅವರ ಸೇವೆ ತಂಡಕ್ಕೆ ಸಿಗುವುದಿಲ್ಲ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದ ಕಾರಣಕ್ಕೆ ಅವರು ತಂಡವನ್ನು ತೊರೆದಿದ್ದಾರೆ ಬಿಸಿಸಿಐ (BCCI) ಹೇಳಿಕೆ ನೀಡಿದೆ.  ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ – ಇತಿಹಾಸ ಬರೆದ ಸ್ಪಿನ್‌ ಮಾಂತ್ರಿಕ ಅಶ್ವಿನ್‌

    ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಕಾರಣ ತಿಳಿಸಿದ್ದಾರೆ. ಅಶ್ವಿನ್‌ ಅವರ ತಾಯಿ (Mother) ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರು ರಾಜ್‌ಕೋಟ್‌ ತೊರೆದು ಶೀಘ್ರವೇ ತಾಯಿಯನ್ನು ನೋಡಲು ಚೆನ್ನೈಗೆ ತೆರಳಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ 5 ರನ್‌ ದಂಡ!

    ಚಾಂಪಿಯನ್ ಕ್ರಿಕೆಟಿಗ ಮತ್ತು ಅವರ ಕುಟುಂಬಕ್ಕೆ ಬಿಸಿಸಿಐ ಅಗತ್ಯ ಬೆಂಬಲ ನೀಡುತ್ತದೆ. ಆಟಗಾರರು ಮತ್ತು ಅವರ ಪ್ರೀತಿಪಾತ್ರರ ಆರೋಗ್ಯ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ಅಶ್ವಿನ್ ಮತ್ತು ಅವರ ಕುಟುಂಬದವರು ಈ ಸವಾಲಿನ ಸಮಯದಲ್ಲಿ ಅವರ ಖಾಸಗಿತನವನ್ನು ಮಂಡಳಿ ಗೌರವಿಸುತ್ತದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 445 ರನ್‌ಗಳಿಗೆ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 207 ರನ್‌ ಹೊಡೆದಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ 37 ರನ್ ಹೊಡೆದಿದ್ದರೆ ಬೌಲಿಂಗ್‌ನಲ್ಲಿ 7 ಓವರ್‌ ಎಸೆದು 37 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು.

  • ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಔಟ್‌ – ಟೂರ್ನಿಯಿಂದಲೇ ಹೊರಗುಳಿದ ಕೊಹ್ಲಿ

    ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಔಟ್‌ – ಟೂರ್ನಿಯಿಂದಲೇ ಹೊರಗುಳಿದ ಕೊಹ್ಲಿ

    ಮುಂಬೈ: ಇಂಗ್ಲೆಂಡ್‌ (England) ವಿರುದ್ಧ ಮುಂದೆ ನಡೆಯಲಿರುವ ಮೂರು ಟೆಸ್ಟ್‌ ಕ್ರಿಕೆಟ್‌ಗೆ ಭಾರತ ತಂಡದ (Team India) ಸದಸ್ಯರ ಪಟ್ಟಿ ಬಿಡುಗಡೆಯಾಗಿದ್ದು ವಿರಾಟ್‌ ಕೊಹ್ಲಿ (Virat Kohli) ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.

    ಮೊದಲ ಎರಡು ಪಂದ್ಯಗಳಿಗೆ ವೈಯಕ್ತಿಕ ಕಾರಣ ನೀಡಿದ್ದ ಕೊಹ್ಲಿ ಮುಂದಿನ ಮೂರು ಪಂದ್ಯಗಳನ್ನು ಆಡುವುದು ಅನುಮಾನ ಎಂದು ಹಿಂದೆಯೇ ವರದಿಯಾಗಿತ್ತು. ಈಗ ಈ ಸುದ್ದಿ ಅಧಿಕೃತವಾಗಿದೆ. ಕೊಹ್ಲಿ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಬಿಸಿಸಿಐ (BCCI) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

    ಗಾಯಗೊಂಡು ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ಕೆ.ಎಲ್​ ರಾಹುಲ್ (KL Rahul)​ ಮತ್ತು ರವೀಂದ್ರ ಜಡೇಜಾ (Ravindra Jadeja) ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆದರೆ ಮಾತ್ರ ಆಡುವ 11 ಮಂದಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

    ಬೆನ್ನು ಮತ್ತು ತೊಡೆ ಸಂದು ಗಾಯದಿಂದ ಬಳಲುತ್ತಿರುವ ಶ್ರೇಯಸ್​ ಅಯ್ಯರ್​ (Shreyas Iyer) ಹೊರಬಿದ್ದಿದ್ದಾರೆ.  ಫೆ.15 ರಿಂದ ರಾಜ್‌ಕೋಟ್‌ನಲ್ಲಿ ಮೂರನೇ ಟೆಸ್ಟ್‌ ನಡೆದರೆ ಫೆ.23 ರಿಂದ ರಾಂಚಿಯಲ್ಲಿ 4ನೇ ಟೆಸ್ಟ್‌ ಪಂದ್ಯ ನಡೆಯಲಿದೆ. ಐದನೇ ಮತ್ತು ಕೊನೆಯ ಟೆಸ್ಟ್‌ ಹಿಮಾಚಲದ ಧರ್ಮಶಾಲಾದಲ್ಲಿ ಮಾರ್ಚ್‌ 7 ರಂದು ನಡೆಯಲಿದೆ.

    ಟೀಂ ಇಂಡಿಯಾ ಸದಸ್ಯರ ವಿವರ:
    ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌) , ಕೆಎಸ್ ಭರತ್ ( ವಿಕೆಟ್‌ ಕೀಪರ್‌), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

  • 110 ಕೋಟಿ ರೂ. ಡೀಲ್‌ಗೆ ಗುಡ್‌ಬೈ ಹೇಳಲಿದ್ದಾರೆ ಕಿಂಗ್‌ ಕೊಹ್ಲಿ?

    110 ಕೋಟಿ ರೂ. ಡೀಲ್‌ಗೆ ಗುಡ್‌ಬೈ ಹೇಳಲಿದ್ದಾರೆ ಕಿಂಗ್‌ ಕೊಹ್ಲಿ?

    ಬೆಂಗಳೂರು: ವೈಯಕ್ತಿಕ ಕಾರಣಗಳಿಂದಾಗಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯಗಳಿಂದ ದೂರ ಉಳಿದಿರುವ ಟೀಂ ಇಂಡಿಯಾದ (Team India) ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli) ಮತ್ತೆ ಸುದ್ದಿಯಲ್ಲಿದ್ದಾರೆ.

    ವಿರಾಟ್ ಕೊಹ್ಲಿ, ಜನಪ್ರಿಯ ಕ್ರೀಡಾ ಆಕ್ಸೆಸರೀಸ್ ಬ್ರಾಂಡ್​ ಪೂಮಾ ಇಂಡಿಯಾದೊಂದಿಗಿನ (Puma India) 8 ವರ್ಷಗಳ ಪಾಲುದಾರಿಕೆ ಕೊನೆಗೊಳಿಸುವ ಸಾಧ್ಯತೆಯಿದೆ. ಬ್ರಾಂಡ್‌ನೊಂದಿಗೆ ಎಂಟು ವರ್ಷಗಳ ಒಡನಾಟದ ನಂತರ ಅವರು ನಿರ್ಗಮಿಸುವುದು ಅನೇಕರಿಗೆ ಅಚ್ಚರಿಯುಂಟುಮಾಡಿದೆ. ಇದನ್ನೂ ಓದಿ: ಶ್ರೀಕೃಷ್ಣ ಪಾಂಡವರಿಗಾಗಿ 5 ಗ್ರಾಮಗಳನ್ನ ಕೇಳಿದ, ನಾವು 3 ಸ್ಥಳ ಕೇಳುತ್ತಿದ್ದೇವೆ – ʻಮಹಾಭಾರತʼದ ಪಾಠ ಹೇಳಿದ ಯೋಗಿ

    2017ರಲ್ಲಿ 110 ಕೋಟಿ ರೂ.ಗಳ ಒಪ್ಪಂದದೊಂದಿಗೆ ವಿರಾಟ್ ಕೊಹ್ಲಿಯ ಬ್ರಾಂಡ್‌ನೊಂದಿಗಿನ ಸಂಬಂಧ ಪ್ರಾರಂಭವಾಗಿತ್ತು. ಇದು ಭಾರತೀಯ ಕ್ರೀಡೆಗಳಲ್ಲಿ ಹೆಚ್ಚು ಚರ್ಚೆಗೆ ಒಳಗಾದ ದೊಡ್ಡ ಮೊತ್ತದ ಒಪ್ಪಂದವಾಗಿತ್ತು. ಸದ್ಯ ಕೊಹ್ಲಿ ಈ ಒಪ್ಪಂದವನ್ನು ಕೊನೆಗೊಳಿಸುವ ಸನಿಹದಲ್ಲಿದ್ದಾರೆ. ಇದರಿಂದ 110 ಕೋಟಿ ರೂ. ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಬಿಜೆಪಿ ನಾಯಕರ ಹೈಡ್ರಾಮಾ- ಸಿಎಂ, ಸಚಿವರ ಕಚೇರಿಗೆ ಬೀಗ ಹಾಕಲು ಯತ್ನ

    ಕ್ರೀಡಾ ಪಾದರಕ್ಷೆಗಳ ತಯಾರಿಕೆಯ ಬ್ರ್ಯಾಂಡ್‌ ಆಗಿರುವ ಅಗಿಲಿಟಾಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್​​ನ ಅಂಬಾಸಿಡರ್ ಆಗಿ ವಿರಾಟ್ ಕೊಹ್ಲಿ ಹೊಸ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅಧಿಕೃತ ಹೇಳಿಕೆಗಳನ್ನು ಪೂಮಾ ಮತ್ತು ಅಗಿಲಿಟಾಸ್ ಸ್ಪೋರ್ಟ್ಸ್ ಎರಡೂ ಪ್ರಕಟಿಸಿಲ್ಲ ಎಂದು ವರದಿ ಹೇಳಿದೆ. ಇದನ್ನೂ ಓದಿ: ವಿದ್ಯುದ್ದೀಕರಣ ಮುಗಿದ ತಕ್ಷಣ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು: ಈರಣ್ಣ ಕಡಾಡಿ

  • ಭಾರತಕ್ಕೆ 106 ರನ್‌ಗಳ ಭರ್ಜರಿ ಜಯ – WTC ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿತ

    ಭಾರತಕ್ಕೆ 106 ರನ್‌ಗಳ ಭರ್ಜರಿ ಜಯ – WTC ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿತ

    ವಿಶಾಖಪಟ್ಟಣಂ: ಇಂಗ್ಲೆಂಡ್‌ (England) ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯವನ್ನು ಟೀಂ ಇಂಡಿಯಾ (Team India) 106 ರನ್‌ಗಳಿಂದ ಭರ್ಜರಿ ಗೆದ್ದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌  (World Test Championship) ಅಂಕ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ.

    ಗೆಲ್ಲಲು 399 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ 69.2 ಓವರ್‌ಗಳಲ್ಲಿ 292 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ 5 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ.

    ಮೂರನೇ ದಿನ 1 ವಿಕೆಟ್‌ ನಷ್ಟಕ್ಕೆ 67 ರನ್‌ಗಳಿಸಿದ್ದ ಇಂಗ್ಲೆಂಡ್‌ ಉಳಿದ 9 ವಿಕೆಟ್‌ಗಳಿಂದ 188 ರನ್‌ಗಳಿಸಿ ಸರ್ವಪತನಗೊಂಡಿತು. ಆರಭಿಕ ಆಟಗಾರ ಝಾಕ್ ಕ್ರಾಲಿ 73 ರನ್‌ (132 ಎಸೆತ, 8 ಬೌಂಡರಿ, 1 ಸಿಕ್ಸರ್)‌ ಹೊಡೆದರೆ ಕೊನೆಯಲ್ಲಿ ಬೆನ್‌ ಫೋಕ್ಸ್‌ 36 ರನ್‌, ಟಾಮ್‌ ಹಾರ್ಟ್ಲಿ 36 ರನ್‌ ಹೊಡೆಯುವ ಮೂಲಕ ಸ್ವಲ್ಪ ಪ್ರತಿರೋಧ ತೋರಿದರು. ಇದನ್ನೂ ಓದಿ: Ranji Trophy: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ಒಂದು ವಿಕೆಟ್ ರೋಚಕ ಜಯ

    ಬುಮ್ರಾ 46 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ರವಿಚಂದ್ರನ್‌ ಅಶ್ವಿನ್‌ 75 ರನ್‌ ನೀಡಿ 3 ವಿಕೆಟ್‌ ಕಿತ್ತರು. ಮುಕೇಶ್‌ ಕುಮಾರ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಮೂರನೇ ಟೆಸ್ಟ್‌ ಪಂದ್ಯ ರಾಜ್‌ಕೋಟ್‌ನಲ್ಲಿ ಫೆ.15 ರಿಂದ ಆರಂಭವಾಗಲಿದೆ.

    ಎರಡನೇ ಸ್ಥಾನಕ್ಕೆ ಜಿಗಿತ
    ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಂಕ ಪಟ್ಟಿಯಲ್ಲಿ ಭಾರತ ಈಗ ಎರಡನೇ ಸ್ಥಾನಕ್ಕೆ ಜಿಗಿದೆ. 6 ಪಂದ್ಯಗಳಿಂದ ಭಾರತ 38 ಅಂಕ ಕಲೆ ಹಾಕಿದ್ದರೆ ಆಸ್ಟ್ರೇಲಿಯಾ 10 ಪಂದ್ಯಗಳಿಂದ 66 ಅಂಕ ಕಲೆ ಹಾಕಿ ಮೊದಲ ಸ್ಥಾನ ಪಡೆದಿದೆ.

    ಸಂಕ್ಷಿಪ್ತ ಸ್ಕೋರ್‌
    ಭಾರತ ಮೊದಲ ಇನ್ನಿಂಗ್ಸ್‌ 396/10
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 253/10
    ಭಾರತ ಎರಡನೇ ಇನ್ನಿಂಗ್ಸ್‌ 255/10
    ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 292/10

  • ಜ.18ರಂದು ಚಿಕ್ಕಬಳ್ಳಾಪುರದಲ್ಲಿ T20I ಲೀಗ್ – ಕಣದಲ್ಲಿ ಅಬ್ಬರಿಸಲಿದ್ದಾರೆ ಸಚಿನ್, ಯುವಿ, ಜಯಸೂರ್ಯ

    ಜ.18ರಂದು ಚಿಕ್ಕಬಳ್ಳಾಪುರದಲ್ಲಿ T20I ಲೀಗ್ – ಕಣದಲ್ಲಿ ಅಬ್ಬರಿಸಲಿದ್ದಾರೆ ಸಚಿನ್, ಯುವಿ, ಜಯಸೂರ್ಯ

    – 8 ದೇಶಗಳ 24 ಆಟಗಾರರು ಭಾಗಿ

    ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ (Muddenahalli) ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್  ದಿಗ್ಗಜರ ಸಮಾಗಮ ಆಗಲಿದೆ.

    ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಅಂತರಾಷ್ಟ್ರೀಯ ಮಟ್ಟದ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Saikrishnan Cricket Stadium) ಗುರುವಾರ (ಜ.18) ಟಿ20 ಕ್ರಿಕೆಟ್ (T20 Cricket) ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ. ಈ ಸೌಹಾರ್ದಯುತ ಪಂದ್ಯಾವಳಿಯಲ್ಲಿ 8 ದೇಶಗಳ 24 ದಿಗ್ಗಜ ಆಟಗಾರರು ಎರಡು ತಂಡಗಳಾಗಿ ಪಂದ್ಯವಾಡಲಿದ್ದಾರೆ. ಭಾರತದ ಮೂಲ ಧ್ಯೇಯ ವ್ಯಾಕ್ಯ ವಸುಧೈವ ಕುಟುಂಬಕಂ ಎಂಬ ಮಾತಿಗೆ ಪ್ರತಿರೂಪವೆಂಬಂತೆ ಒಂದು ಪ್ರಪಂಚ ಒಂದು ಕುಟುಂಬ ಕಪ್ ಎಂಬ ಹೆಸರಿನಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಕ್ಲೀನ್‌ ಸ್ವೀಪ್‌ ಉತ್ಸಾಹದಲ್ಲಿ ಭಾರತ – ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಪಂದ್ಯ ವೀಕ್ಷಿಸುವ ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್

    ನೂತನ ಹೊಸ ಸಾಯಿಕೃಷ್ಣನ್ ಸ್ಟೇಡಿಯಂ ಉದ್ಘಾಟನಾ ಅಂಗವಾಗಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ಪಂದ್ಯಾವಳಿಗೆ ಬೇಕಾದ ಎಲ್ಲಾ ತಯಾರಿಗಳು ನಡೆದಿವೆ. ಇನ್ನೂ ಈ ಒಂದು ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಚಮಿಂಡಾ ವಾಸ್ ಸೇರಿದಂತೆ 24 ಮಂದಿ ಮಾಜಿ ಕ್ರಿಕೆಟ್ ಆಟಗಾರರು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ vs ಅಫ್ಘಾನಿಸ್ತಾನ ಮೂರನೇ ಟಿ20 – ಧೋನಿ ದಾಖಲೆ ಮುರಿತಾರಾ ರೋಹಿತ್?

    ಗುರುವಾರ ಬೆಳಗ್ಗೆ 09:00 ಗಂಟೆಗೆ ಸ್ಟೇಡಿಯಂನ ಉದ್ಘಾಟನೆಯಾಗಲಿದ್ದು, 10 ಗಂಟೆಗೆ ಟಾಸ್ ನಡೆಯಲಿದೆ. 10:30ರಿಂದ 12:30ರ ವರೆಗೆ ಮೊದಲ ಇನ್ನಿಂಗ್ಸ್ ಹಾಗೂ 1 ಗಂಟೆಯಿಂದ 3 ಗಂಟೆಯವೆರಗೆ ಸೆಕೆಂಡ್ ಇನ್ನಿಂಗ್ಸ್ ನಡೆಯಲಿದೆ. ತದನಂತರ 4 ಗಂಟೆಗೆ ಸಾಯಿ ಸಿಂಪೋನಿ ಆರ್ಕೆಸ್ಟ್ರಾ ತಂಡದಿಂದ ವಾದ್ಯಗೋಷ್ಠಿ ನಡೆಯಲಿದ್ದು, ಕಪ್ ಬಹುಮಾನ ವಿತರಣೆ ನಂತರ ಕಾರ್ಯಕ್ರಮ ಮುಕ್ತಾಯವಾಗಲಿದೆ. ಇದನ್ನೂ ಓದಿ: ಕೂಚ್ ಬೆಹಾರ್ ಟ್ರೋಫಿ ಫೈನಲ್‍ನಲ್ಲಿ ಯುವಿ ದಾಖಲೆ ಮುರಿದ ಕರ್ನಾಟಕದ ಓಪನರ್ ಪ್ರಖರ್ ಚತುರ್ವೇದಿ

    ಇನ್ನೂ ಈ ಪಂದ್ಯಾವಳಿಗೆ ಕೇವಲ ಆಮಂತ್ರಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, 10 ಸಾವಿರ ಮಂದಿಗೆ ಅಮಂತ್ರಣ ನೀಡಲಾಗಿದೆ ಎನ್ನಲಾಗಿದೆ. ಉಳಿದಂತೆ ಸತ್ಯಸಾಯಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗಿಗಳು, ಭಕ್ತರು ಭಾಗಿಯಾಗಲಿದ್ದಾರೆ. ಇನ್ನೂ ಪಂದ್ಯಾವಳಿಯ ನೇರಪ್ರಸಾರವನ್ನು ಟಿವಿ ಮೂಲಕ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್‌ ಕೊಟ್ಟ ಶಿವಂ ದುಬೆ

  • ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ – ಭಾರತ ಪ್ರತಿನಿಧಿಸಲಿದ್ದಾರೆ ಕರ್ನಾಟಕದ ಬೆಳ್ಳಿಯಪ್ಪ

    ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ – ಭಾರತ ಪ್ರತಿನಿಧಿಸಲಿದ್ದಾರೆ ಕರ್ನಾಟಕದ ಬೆಳ್ಳಿಯಪ್ಪ

    ಮಡಿಕೇರಿ: ಹಾಂಗ್‌ಕಾಂಗ್‌ನಲ್ಲಿ ಇದೇ ಜನವರಿ 21ರಂದು ನಡೆಯಲಿರುವ 19ನೇ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ (Asian Marathon Championships) ಭಾರತವನ್ನು ಕೊಡಗಿನ‌ ಟಿ. ಶೆಟ್ಟಿಗೇರಿಯ ಬಿ.ಬೆಳ್ಳಿಯಪ್ಪ ಅವರು ಪ್ರತಿನಿಧಿಸಲಿದ್ದಾರೆ.

    ಪುರುಷರ ವಿಭಾಗದಲ್ಲಿ ಇಬ್ಬರು ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಕರ್ನಾಟಕದ ಬೆಳ್ಳಿಯಪ್ಪ ಅವರೊಂದಿಗೆ ಉತ್ತರಾಖಂಡದವರು ಸೇರಿದ್ದಾರೆ. ಇದನ್ನೂ ಓದಿ: ಜಾಗದಿಂದ ಒಕ್ಕಲೆಬ್ಬಿಸಲು ಗ್ರಾಮಸ್ಥರಿಂದ ಕಿರುಕುಳ ಆರೋಪ- ದಯಾಮರಣ ಕೋರಿ ಬಡಕುಟುಂಬ ಅರ್ಜಿ

    ಕಳೆದ ವರ್ಷ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮ್ಯಾರಥಾನ್‌ನಲ್ಲಿ (National Marathon) ಬೆಳ್ಳಿಯಪ್ಪ ಬೆಳ್ಳಿ ಪದಕ ಪಡೆದು ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ ಷಿಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದರು.‌ ಭಾರತೀಯ ಸೇನೆಯಲ್ಲಿರುವ ಈವರು ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿದ್ದು ಊಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

    ಬೆಳ್ಳಿಯಪ್ಪ ಮೂಲತಃ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಬೋಪಯ್ಯ ಹಾಗೂ ರೋಜಾ ದಂಪತಿ ಪುತ್ರರಾಗಿದ್ದಾರೆ. ಇದನ್ನೂ ಓದಿ: ಆಹ್ವಾನ ಬಂದಿದ್ದು, ಜ.22 ರ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಅಖಿಲೇಶ್‌ ಯಾದವ್‌