Tag: sports

  • ಹೈದರಾಬಾದ್ ವಿರುದ್ಧ ಡೆಲ್ಲಿಗೆ 8 ವಿಕೆಟ್‍ಗಳ ಭರ್ಜರಿ ಜಯ

    ಹೈದರಾಬಾದ್ ವಿರುದ್ಧ ಡೆಲ್ಲಿಗೆ 8 ವಿಕೆಟ್‍ಗಳ ಭರ್ಜರಿ ಜಯ

    ದುಬೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

    135 ರನ್‍ಗಳ ಗುರಿಯನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 139 ರನ್ ಹೊಡೆದು ಜಯಗಳಿಸಿತು. ಈ ಮೂಲಕ 9 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಸಂಪಾದಿಸಿರುವ ಡೆಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

    ಶಿಖರ್ ಧವನ್ 42 ರನ್(37 ಎಸೆತ, 6 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರೆ ಶ್ರೇಯಸ್ ಅಯ್ಯರ್ ಔಟಾಗದೇ 47 ರನ್(41 ಎಸೆತ, 2 ಬೌಂಡರಿ, 2 ಸಿಕ್ಸರ್) ರಿಷಭ್ ಪಂತ್ ಔಟಾಗದೇ 35 ರನ್(21 ಎಸೆತ, 3 ಬೌಂಡರಿ, 2 ಸಿಕ್ಸರ್) ಚಚ್ಚಿದರು. ಇದನ್ನೂ ಓದಿ: ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಮೊದಲ ಓವರಿನಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್ ಕಳೆದುಕೊಂಡಿತ್ತು.

    ವೃದ್ಧಿಮಾನ್ ಸಹಾ 18 ರನ್ ರನ್, ಅಬ್ದುಲ್ ಸಮಾದ್ 28 ರನ್(21 ಎಸೆತ, 2 ಬೌಂಡರಿ, 1 ಸಿಕ್ಸರ್), ರಶೀದ್ ಖಾನ್ 22 ರನ್(19 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು.

    ಕಗಿಸೋ ರಬಡಾ 3 ವಿಕೆಟ್ ಪಡೆದರೆ ಅನ್ರಿಚ್ ನಾಟ್ರ್ಜೆ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.

  • ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

    ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಎರಡು ಬಾರಿ ಒಲಿಂಪಿಕ್ಸ್ ಪದಕ ತನ್ನದಾಗಿಸಿಕೊಂಡಿರುವ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ.

    ಒಲಂಪಿಕ್ಸ್ ವಿಜೇತೆ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿ ದೀಪಿಕಾ ಗಮನ ಸೆಳೆದಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಲರಿ ಬರ್ನ್ ಆಗಿ ಮುಖದಲ್ಲಿ ಬೆವರಿಳಿದಿದೆ. ಇದರಿಂದ ಮುಖದ ಕಾಂತಿ ಹೆಚ್ಚಿದೆ ಎಂದು ನಟಿ ದೀಪಿಕಾ ಬರೆದುಕೊಂಡಿದ್ದರು. ಪಿವಿ ಸಿಂಧು ಕಾಮೆಂಟ್ ಮಾಡಿ ಎಷ್ಟು ಕ್ಯಾಲರಿ ಬರ್ನ್ ಆಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:  ಅರಣ್ಯಕ್ಕೆ ಬಿಟ್ಟು ಬಂದರೂ ಗೊಬ್ಬರದ ಲಾರಿ ಏರಿ ಮತ್ತೆ ಪೇಟೆಗೆ ಬಂದ ಕೋತಿ

     

    View this post on Instagram

     

    A post shared by Deepika Padukone (@deepikapadukone)

    ಈ ವಿಶೇಷ ಪಂದ್ಯಕ್ಕಾಗಿ ದೀಪಿಕಾ ಕಪ್ಪು ಧಿರಿಸು ಧರಿಸಿದ್ದರು. ಸಿಂಧೂ ಕೂಡ ಅದೇ ರೀತಿಯ ಬಟ್ಟೆ ಧರಿಸಿದ್ದು ವಿಶೇಷವಾಗಿತ್ತು. ಸಿಂಧು ನೇರಳೆ ಮತ್ತು ಗುಲಾಬಿ ಬಣ್ಣಗಳ ಟಾಪ್ ಧರಿಸಿದ್ದರು. ಇಬ್ಬರು ಬೆವರಿಳಿಸುವಂತೆ ಆಟವಾಡಿದ್ದು, ಈ ಆಟದಲ್ಲಿ ಯಾರಿಗೆ ಗೆಲುವು ಆಯಿತು ಎಂಬುದನ್ನು ಮಾತ್ರ ತಿಳಿಸಿಲ್ಲ. ಆದರೆ ನಟಿ ದೀಪಿಕಾ ಈ ಆಟದಿಂದ ತಮ್ಮ ಮುಖದ ಕಾಂತಿ ಹೆಚ್ಚಿತು ಎಂದಿದ್ದಾರೆ.

     

    View this post on Instagram

     

    A post shared by Deepika Padukone (@deepikapadukone)

    ನಟಿ ದೀಪಿಕಾ ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್ಸ್ ವಿಜೇತೆ ಪಿವಿ ಸಿಂಧು ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸಿಂಧುಗಾಗಿ ವಿಶೇಷ ಔತಣ ಕೂಟವನ್ನು ಮುಂಬೈನ ರೆಸ್ಟೋರೆಂಟ್‍ನಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಆಯೋಜಿಸಿದ್ದರು. ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಕೂಡ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು. ನಟಿ ದೀಪಿಕಾ ಕೂಡ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟುವಾಗಿದ್ದರು. ನಟಿ ದೀಪಿಕಾ ಕೂಡ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟುವಾಗಿದ್ದರು. ಇದೀಗ ಪಿವಿ ಸಿಂಧು ಜೊತೆಗೆ ಮೈದಾನಲ್ಲಿ ಕಾಣಿಸಿಕೊಂಡಿರುವುದು ಸಖತ್ ಸುದ್ದಿಯಲ್ಲಿದೆ.

  • ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿದ ಜಾಗ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ನೀಡಿ: ಡಾ.ನಾರಾಯಣಗೌಡ

    ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿದ ಜಾಗ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ನೀಡಿ: ಡಾ.ನಾರಾಯಣಗೌಡ

    -ಸಿಎಂ ಹಾಗೂ ಕಂದಾಯ ಸಚಿವರಿಗೆ ಪತ್ರ

    ಬೆಂಗಳೂರು: ರಾಮನಗರ ಜಿಲ್ಲಾಡಳಿತ ಮಾಡಿದ ಕಾರ್ಯ ಶ್ಲಾಘನೀಯ. ಬಿಡದಿಯಲ್ಲಿರುವ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಾಗವನ್ನು ಕೋರ್ಟ್ ಆದೇಶದಂತೆ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಶಾಲವಾಗಿರುವ ಈ ನಿವೇಶನ ಕ್ರೀಡಾ ಚಟುವಟಿಕೆಗೆ ಯೋಗ್ಯವಾಗಿದೆ. ಆದ್ದರಿಂದ ಈ ಸ್ಥಳವನ್ನು ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ನೀಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಒಲಂಪಿಕ್ಸ್ ಕ್ರೀಡಾಕೂಟ, ಏಷಿಯಾ ಗೇಮ್ಸ್ ಸೇರಿದಂತೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ವಿಶಾಲ ಪ್ರದೇಶದಲ್ಲಿ ಬೃಹತ್ತಾದ ಕ್ರೀಡಾ ಸಮುಚ್ಚಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕ್ರೀಡಾ ಇಲಾಖೆ ಇದಕ್ಕಾಗಿ ವಿಶಾಲ ನಿವೇಶನವನ್ನೂ ಹುಡುಕುತ್ತಿದೆ. ಪ್ರಸ್ತುತ ರಾಮನಗರದ ಬಿಡದಿಯಲ್ಲಿ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಒತ್ತುವರಿ ತೆರವು ಮಾಡಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಗಾಲ್ಫ್ ಕೋರ್ಟ್ ಕೂಡ ಈ ಸ್ಥಳದಲ್ಲಿದೆ. ಸಮತಟ್ಟಾಗಿರುವ ಈ ವಿಶಾಲ ಪ್ರದೇಶ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಯೋಗ್ಯವಾಗಿದೆ. ಬೆಂಗಳೂರಿಗೂ ಈ ಪ್ರದೇಶ ಸಮೀಪದಲ್ಲಿದೆ. ಆದ್ದರಿಂದ 77 ಎಕರೆ 18 ಗುಂಟೆ ಈ ಪ್ರದೇಶವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಎಂದು ನಾರಾಯಣಗೌಡ ಅವರು ಬಸವರಾಜ ಬೊಮ್ಮಾಯಿ ಹಾಗೂ ಆರ್.ಅಶೋಕ್ ಅವರಿಗೆ ಪತ್ರದ ಮೂಲಕ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ಬಾಳೆಎಲೆಯಲ್ಲಿ ಮೂಡಿದ ಮೋದಿ ಚಿತ್ರ

    ಪ್ರಸ್ತುತ ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಆಧುನೀಕರಣ ಮಾಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಕ್ರೀಡಾಂಗಣ ಉನ್ನತೀಕರಿಸಲಾಗುತ್ತಿದೆ. ಆದರೆ ಬೆಂಗಳೂರಿಗೆ ಅತ್ಯಂತ ಸಮೀಪವಿರುವ ಇಷ್ಟೊಂದು ವಿಶಾಲ ಪ್ರದೇಶದಲ್ಲಿ ಬೃಹತ್ತಾದ ಕ್ರೀಡಾ ಸಮುಚ್ಚಯ ನಿರ್ಮಿಸಿದರೆ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗಲಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಸಮೀಪದಲ್ಲೇ ಇದೆ. ಬೆಂಗಳೂರು ಮೈಸೂರು ನಡುವೆ ವಿಶಾಲ ರಸ್ತೆಯೂ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲು ಈ ಸ್ಥಳ ಪ್ರಶಸ್ತವಾಗಲಿದೆ. ಆದ್ದರಿಂದ ರಾಮನಗರದ ಬಿಡದಿಯಲ್ಲಿ ಈಗಲ್‍ಟನ್ ರೆಸಾರ್ಟ್ ನಿಂದ ಒತ್ತುವರಿ ತೆರವು ಮಾಡಿರುವ ಸರ್ಕಾರಿ ಗೋಮಾಳವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಕ್ರೀಡೆಗೆ ಪ್ರೋತ್ಸಾಹಿಸಿ ಎಂದು ನಾರಾಯಣಗೌಡ ಅವರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಬಿಎಸ್‍ವೈ

  • ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ

    ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ

    ಬೆಂಗಳೂರು: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟ ಐಎಎಸ್ ಅಧಿಕಾರಿಯ ಸಾಧನೆಗೆ ಕುಟುಂಬದವರು ಅಭಿನಂದಿಸಿ ಭಾವುಕರಾಗಿದ್ದಾರೆ.

    ಟೋಕಿಯೋದಲ್ಲಿ ನಡೆಯುತ್ತಿರೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮತ್ತೊಂದು ಬೆಳ್ಳಿ ಪದಕ ಸಿಕ್ಕಿದೆ. ಈ ಬೆಳ್ಳಿ ಪದಕವನ್ನು ನಮ್ಮ ಕರ್ನಾಟಕದ ಹಾಸನ ಮೂಲದ ಸುಹಾಸ್ ಯತಿರಾಜ್ ತಂದುಕೊಟ್ಟಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಇದನ್ನೂ ಓದಿ: ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ಐಎಎಸ್ ಅಧಿಕಾರಿ!:ಸುಹಾಸ್ ಯತಿರಾಜ್ ಅವರು ಐಎಎಸ್ ಅಧಿಕಾರಿ ಕೂಡ ಆಗಿದ್ದಾರೆ. ನೋಯ್ಡಾದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಡಳಿತಾಧಿಕಾರಿಯಾಗಿ ಸುಹಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸುಹಾಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್‍ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದು, ಪ್ಯಾರಾಲಿಂಪಿಕ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:ಮಾಜಿ ಸೈನಿಕನಿಗೆ ಅಪಮಾನ – ರಾಷ್ಟ್ರಧ್ವಜ ಹಿಡಿದು ಮಾಜಿ ಸೈನಿಕರಿಂದ ಟೋಲ್ ಗೆ ಮುತ್ತಿಗೆ

    ಪುರುಷರ ಸಿಂಗಲ್ಸ್ ಎಸ್‍ಎಲ್ 4 ನಲ್ಲಿ 21-15, 21-15-21 ರಲ್ಲಿ ಅಗ್ರ ಶ್ರೇಯಾಂಕಿತ ಮತ್ತು ವಿಶ್ವ ಚಾಂಪಿಯನ್ ಫ್ರಾನ್ಸ್‍ನ ಲ್ಯೂಕಾಸ್ ಮಜೂರ್ ವಿರುದ್ಧ ಸೋತು ಬೆಳ್ಳಿ ಪದಕ ಪಡೆದಿದ್ದಾರೆ.

    ಸುಹಾಸ್ ಬೆಳ್ಳಿ ಪದಕ ಪಡೆಯುತ್ತಿದ್ದಂತೆ ಅವರ ಕುಟುಂಬದವರಲ್ಲಿ ಸಂಭ್ರಮ ಮನೆ ಮಾಡಿತ್ತು. ಅಣ್ಣನ ಸಾಧನೆ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ತಮ್ಮ ಶರತ್ ಯತಿರಾಜ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಸುಹಾಸ್ ಯತಿರಾಜ್ ನಾದಿನಿ ಸಂಜನಾ ಕೂಡ ತಮ್ಮ ಭಾವನ ಸಾಧನೆಯನ್ನು ಹೊಗಳಿ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರು. ಇದನ್ನೂ ಓದಿ:ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ರಕ್ಷಿಸಿದ ಯುವಕರು

  • ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್​ನ ಎತ್ತರ ಜಿಗಿತ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಮತ್ತು ಶರದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.

    ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 10 ಕ್ಕೆ ಏರಿದೆ. ಹೈ ಜಂಪ್ ಟಿ 63 ಈವೆಂಟ್‍ನಲ್ಲಿ ತಂಗವೇಲು ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ರಿಯೋ ಪ್ಯಾರಾಲಿಂಪಿಕ್ಸ್ ಬಳಿಕ ಇದು ತಂಗವೇಲು ಅವರ ಎರಡನೇ ಪದಕ ಎಂಬುದು ವಿಶೇಷವಾಗಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಮರಿಯಪ್ಪನ್ ಮತ್ತು ಶರದ್ ಇಬ್ಬರೂ ತಮ್ಮ ಮೊದಲ ಪ್ರಯತ್ನದಲ್ಲಿ 1.73 ಮೀ ಮತ್ತು 1.77 ಮೀ ಯಶಸ್ವಿಯಾಗಿ ಜಿಗಿದಿದ್ದರು. ಈ ವೇಳೆ ಶರದ್ ಕುಮಾರ್ ಮುಂಚೂಣಿಯಲ್ಲಿದ್ದರು. ಆದಾಗ್ಯೂ, 1.86 ಮೀ ನಲ್ಲಿ ಮೂರು ಪ್ರಯತ್ನಗಳ ನಂತರವೂ ಶರದ್‍ಗೆ ಯಶಸ್ವಿಯಾಗಿ ಜಂಪ್ ಮಾಡಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕಂಚಿನ ಪದಕದೊಂದಿಗೆ ಚಿನ್ನದ ರೇಸ್ ನಿಂದ ಹೊರಗುಳಿದರು.

    ನಂತರ, ಅಮೆರಿಕದ ಗ್ರೇವ್ ಸ್ಯಾಮ್ ಮತ್ತು ಮರಿಯಪ್ಪನ್ ಮಾತ್ರ ಸ್ಪರ್ಧೆಯಲ್ಲಿದ್ದರು. ಇಬ್ಬರೂ 1.86 ಅಂಕದಲ್ಲಿ ಯಶಸ್ವಿ ಜಿಗಿತ ಪೂರೈಸಿದ್ದರು. ನಂತರ ನಡೆದ ಮೂರು ಪ್ರಯತ್ನಗಳಲ್ಲಿ ಮರಿಯಪ್ಪನ್ ವಿಫಲರಾದರು. ಮತ್ತೊಂದೆಡೆ, ಗ್ರೇವ್ ಯಶಸ್ವಿ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

    ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಪದಕಗಳ ಭೇಟೆಯನ್ನು ಮುಂದುವರೆಸಿದೆ. ಈ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ 10 ಪದಕ ಪಡೆದುಕೊಂಡಿದ್ದು, 2 ಚಿನ್ನ, 5 ಬೆಳ್ಳಿ, ಮೂರು ಕಂಚನ್ನು ಭಾರತ ತನ್ನದಾಗಿಸಿಕೊಂಡಿದೆ.

  • ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಟೋಕಿಯೊ: ಪ್ಯಾರಾಲಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆದು ಭಾರತಕ್ಕೆ ಮತ್ತೊಂದು ಚಿನ್ನವನ್ನು ಪಡೆಯುವ ಮೂಲಕವಾಗಿ ಸುಮಿತ್ ದಾಖಲೆ ಬರೆದಿದ್ದಾರೆ.

    ಟೋಕಿಯೊ ಪ್ಯಾರಾಲಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 64 ವಿಭಾಗದಲ್ಲಿ ಭಾರತದ ಸುಮಿತ್ ಅಂಟಿಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

    ಸುಮಿತ್ ಆಂಟಿಲ್ 68.55 ಮೀಟರ್ ಜಾವೆಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. ಇದರಿಂದ ಟೋಕಿಯೊ ಪ್ಯಾರಾಲಂಪಿಕ್ ಗೇಮ್ಸ್ ಭಾರತ 2ನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.

    ಸಹ ಆಟಗಾರ ಸಂದೀಪ್ ಚೌಧರಿ 4ನೇ ಸ್ಥಾನ ಪಡೆದು 62.20 ಮೀಟರ್ ಜಾವೆಲಿನ್ ಎಸದಿದ್ದಾರೆ. ಭಾರತ ಶೂಟರ್ ಅವನಿ ಲೇಖಾರ್ 10 ಮೀಟರ್ ಏರ್ ರೈಪಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇಂದು ಬೆಳಗ್ಗೆ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 46 ವಿಭಾಗದಲ್ಲಿ ಭಾರತ ದೇವೆಂದ್ರ ಝಾಝರಿಯಾ ಬೆಳ್ಳಿ ಗೆದೆ, ಸುಂದರ್ ಸಿಂಗ್ ಗುಜ್ಜಾರ್ ಕಂಚು ಗೆದುಕೊಂಡಿದ್ದಾರೆ.

  • ನೋಬಾಲ್ ಎಸೆದು ಕೆಂಗಣ್ಣಿಗೆ ಗುರಿಯಾದ ಟೀಂ ಇಂಡಿಯಾ, ಇಂಗ್ಲೆಂಡ್ ಬೌಲರ್​ಗಳು

    ನೋಬಾಲ್ ಎಸೆದು ಕೆಂಗಣ್ಣಿಗೆ ಗುರಿಯಾದ ಟೀಂ ಇಂಡಿಯಾ, ಇಂಗ್ಲೆಂಡ್ ಬೌಲರ್​ಗಳು

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ಮುಗಿದಿದೆ. ಈ ಸರಣಿಯ ಮೂರು ಪಂದ್ಯಗಳಲ್ಲಿ ಎರಡು ತಂಡದ ಬೌಲರ್​ಗಳು ಬರೋಬ್ಬರಿ 58 ನೋ ಬಾಲ್ ಹಾಕಿದ್ದಾರೆ.

    ಕ್ರಿಕೆಟ್‍ನಲ್ಲಿ ಒಂದೇ ಒಂದು ನೋ ಬಾಲ್‍ನಿಂದ ಹಲವು ಪಂದ್ಯಗಳ ಚಿತ್ರಣವೇ ಬದಲಾಗಿರುವ ನಿದರ್ಶನಗಳಿವೆ. ಹಾಗಾಗಿ ಬೌಲರ್​ಗಳು ಗೆರೆ ದಾಟಿ ಬೌಲ್ ಮಾಡುವುದನ್ನು ಆದಷ್ಟು ನಿಯಂತ್ರಿಸುತ್ತಾರೆ. ಈ ನಡುವೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ನೋ ಬಾಲ್‍ಗಳ ಸಂಖ್ಯೆ ಅರ್ಧಶತಕ ದಾಟಿದೆ.

    ಭಾರತ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ  ಮೂರು ಪಂದ್ಯಗಳಿಂದ ಎರಡು ತಂಡದ ಬೌಲರ್​ಗಳು ಒಟ್ಟು 58 ನೋ ಬಾಲ್ ಮಾಡಿದ್ದು, ಅದರಲ್ಲಿ ಭಾರತೀಯ ಬೌಲರ್​ಗಳು 41 ನೋ ಬಾಲ್ ಮತ್ತು ಇಂಗ್ಲೆಂಡ್ ಬೌಲರ್​ಗಳು 17 ನೋ ಬಾಲ್ ಹಾಕಿದ್ದಾರೆ. ಇದನ್ನೂ ಓದಿ: 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

    ವೈಯಕ್ತಿಕವಾಗಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 25 ನೋ ಬಾಲ್  ಹಾಕಿದರೆ, ಇಂಗ್ಲೆಂಡ್ ತಂಡದ ಸ್ಪಿನ್ನರ್ ರಾಬಿನ್ಸನ್ 9 ನೋ ಬಾಲ್ ಮತ್ತು ರವೀಂದ್ರ ಜಡೇಜಾ 6 ನೋ ಬಾಲ್ ಹಾಕಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ಟಾಪ್ ಬೌಲರ್ ಜೀವನಕ್ಕೆ ಮುಳುವಾಯ್ತು 9 ವರ್ಷ ಹಿಂದಿನ ಟ್ವೀಟ್‍

  • ಯುವ ಕ್ರೀಡಾಪಟುಗಳು ಮೇಜರ್ ಧ್ಯಾನ್ ಚಂದ್ ಅವರ ಕೆಚ್ಚನ್ನು ಬೆಳೆಸಿಕೊಳ್ಳಬೇಕು: ಡಾ. ನಾರಾಯಣಗೌಡ

    ಯುವ ಕ್ರೀಡಾಪಟುಗಳು ಮೇಜರ್ ಧ್ಯಾನ್ ಚಂದ್ ಅವರ ಕೆಚ್ಚನ್ನು ಬೆಳೆಸಿಕೊಳ್ಳಬೇಕು: ಡಾ. ನಾರಾಯಣಗೌಡ

    ಬೆಂಗಳೂರು: ಮೇಜರ್ ಧ್ಯಾನ್ ಚಂದ್ ಅವರು ಕ್ರೀಡಾಪಟುಗಳಿಗೆ ಸ್ಪೂರ್ತಿ. ರಾತ್ರಿ ಚಂದ್ರನ ಬೆಳಕಿನಲ್ಲಿಯೂ ಕ್ರೀಡಾಭ್ಯಾಸ ಮಾಡುತ್ತಿದ್ದ ಕಾರಣ ಧ್ಯಾನ್ ಸಿಂಗ್ ಅವರು ಮುಂದೆ ಧ್ಯಾನ್ ಚಂದ್ ಎಂದೇ ಪ್ರಸಿದ್ಧಿಯಾದರು. ಅವರಂತೆ ಪ್ರತಿಯೊಬ್ಬ ಕ್ರೀಡಾಪಟುಗಳು ಶ್ರದ್ಧೆಯಿಂದ ಕ್ರೀಡಾಭ್ಯಾಸ ಮಾಡಬೇಕು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಭಿಪ್ರಾಯಪಟ್ಟರು.

    ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಸತತ ಮೂರು ಒಲಿಂಪಿಕ್ಸ್ ನಲ್ಲಿ ಪದಕ ಗಳಿಸಿದ ಭಾರತದ ಹಾಕಿ ತಂಡದ ಭಾಗವಾಗಿದ್ದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಖೇಲ್ ರತ್ನ ಪ್ರಶಸ್ತಿಯನ್ನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಕರಣ ಮಾಡಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಿಂದ ಪ್ರಶಸ್ತಿ ನೀಡುವ ಮೂಲಕ ಧ್ಯಾನ್ ಚಂದ್ ಅವರ ಸಾಧನೆಗೆ ಹೆಚ್ಚಿನ ಗೌರವ ನೀಡಿದೆ ಎಂದರು. ಇದನ್ನೂ ಓದಿ: ರಾಜೀವ್ ಗಾಂಧಿ ಖೇಲ್ ರತ್ನ ಅಲ್ಲ ಇನ್ನು ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿ

    ಬೆಂಗಳೂರಿನ ಅಕ್ಕಿತಿಮ್ಮಯ್ಯ ಹಾಕಿ ಕ್ರೀಡಾಂಗಣದಲ್ಲಿ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಚಿವರು, ಕ್ರೀಡೆಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಖೇಲೋ ಇಂಡಿಯಾ ಕೇಂದ್ರ ಸ್ಥಾಪಿಸುತ್ತಿದ್ದೇವೆ. ಪ್ರತಿ ತಾಲೂಕಿನಲ್ಲೂ ಕ್ರೀಡಾಂಗಣ ನಿರ್ಮಿಸುತ್ತಿದ್ದೇವೆ. ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸುತ್ತಿದ್ದೇವೆ. ಆ ಮೂಲಕ ಕ್ರೀಡೆಗೆ, ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡುತ್ತಿದ್ದೇವೆ. ಮುಂದಿನ ಒಲಿಂಪಿಕ್ಸ್‌ಗೆ ರಾಜ್ಯದಿಂದ 75 ಕ್ರೀಡಾಪಟುಗಳನ್ನು ಕಳುಹಿಸುವ ಗುರಿ ಹೊಂದಿದ್ದೇವೆ. ಅದಕ್ಕಾಗಿ ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೆ ತಂದಿದ್ದೇವೆ. ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ದಿನ ಒಂದು ಗಂಟೆ ಕ್ರೀಡೆಗೆ ಮೀಸಲಿಡುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಸಹ ಹಿಂದೆಂದೂ ನೀಡದಂತಹ ಪ್ರೋತ್ಸಾಹವನ್ನು ಕ್ರೀಡೆಗೆ ನೀಡುತ್ತಿದೆ. ಕ್ರೀಡಾಪಟುಗಳು ಸತತ ಅಭ್ಯಾಸ ನಡೆಸಿ, ಪದಕ ಗಳಿಸುವತ್ತ ಗಮನ ಹರಿಸಲಿ. ಎಲ್ಲಾ ರೀತಿಯ ಪ್ರೋತ್ಸಾಹ ಸರ್ಕಾರ ನೀಡುತ್ತದೆ ಎಂದು ಮಾಹಿತಿ ಹಂಚಿಕೊಂಡರು.

    ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ಪ್ರಾಧಿಕಾರ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳು ಆಯೋಜಿಸಿದ ಕ್ರೀಡಾ ದಿನಾಚರಣೆಯಲ್ಲಿ ಸಚಿವರು ಪಾಲ್ಗೊಂಡರು. ವಿವಿಧ ವಯೋಮಾನದವರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸಚಿವರು ಪದಕ ಪ್ರದಾನ ಮಾಡಿದರು. ಕ್ರೀಡಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹಾಕಿ ಪಂದ್ಯಾವಳಿಯನ್ನು ಸಚಿವರು ಉದ್ಘಾಟಿಸಿದರು. ಇದೇ ವೇಳೆ ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾಗಿರುವ ಅಂಕಿತ ಅವರನ್ನು ಸನ್ಮಾನಿಸಲಾಯಿತು. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಧರಿಸಿದ ವಾಚ್ ಬೆಲೆ ಕೇಳಿ ದಂಗಾದ ಅಭಿಮಾನಿಗಳು

    ರಾಜ್ಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು, ಕ್ರೀಡಾ ಪ್ರಾಧಿಕಾರದ ಪ್ರಮುಖರು, ಕ್ರೀಡಾ ಇಲಾಖೆ ಆಯುಕ್ತ ವೆಂಕಟೇಶ್, ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರುಗುಂದೆ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  • ಇತರೇ 16 ರನ್ – 78 ರನ್‍ಗಳಿಗೆ ಭಾರತ ಆಲೌಟ್

    ಇತರೇ 16 ರನ್ – 78 ರನ್‍ಗಳಿಗೆ ಭಾರತ ಆಲೌಟ್

    ಲೀಡ್ಸ್: ಮೂರನೇ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ಹೀನಾಯ ಪ್ರದರ್ಶನ ನೀಡಿದ್ದು ಇಂಗ್ಲೆಂಡ್ ಬೌಲರ್ ಗಳ  ಅಬ್ಬರಕ್ಕೆ ಕೇವಲ 78 ರನ್‍ಗಳಿಗೆ ಆಲೌಟ್ ಆಗಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಓವರಿನ 5ನೇ ಎಸೆತಕ್ಕೆ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು

    ರೋಹಿತ್ ಶರ್ಮಾ 19 ರನ್(105 ಎಸೆತ, 1 ಬೌಂಡರಿ), ಅಜಿಂಕ್ಯಾ ರಹಾನೆ 18 ರನ್(54 ಎಸೆತ, 3 ಬೌಂಡರಿ) ಹೊಡೆದದ್ದು ಬಿಟ್ಟರೆ ಉಳಿದ 8 ಮಂದಿ ಸಿಂಗಲ್ ಡಿಜಿಟ್ ರನ್ ಹೊಡೆದು ಔಟಾದರು. ಇತರ ರೂಪದಲ್ಲಿ 16 ರನ್(11 ಲೆಗ್ ಬೈ, 5 ನೋಬಾಲ್) ಬಂದ ಕಾರಣ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 78 ರನ್ ಗಳಿಸಿತು. ಅದರಲ್ಲೂ ಕೊನೆಯ 6 ವಿಕೆಟ್‍ಗಳು 22 ರನ್‍ಗಳ ಅಂತರದಲ್ಲಿ ಪತನಗೊಂಡಿತ್ತು. ಇದನ್ನೂ ಓದಿ: ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್

    ಕೆಎಲ್ ರಾಹುಲ್ 0, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಮೊಹಮ್ಮದ್ ಶಮಿ 0, ಇಶಾಂತ್ ಶರ್ಮಾ ಔಟಾಗದೇ 8, ಜಸ್‍ಪ್ರೀತ್ ಬುಮ್ರಾ 0, ಮೊಹಮ್ಮದ್ ಸಿರಾಜ್ 3 ರನ್ ಗಳಿಸಿ ಔಟಾದರು.

    ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ತಲಾ ಮೂರು ವಿಕೆಟ್ ಪಡೆದರೆ, ಒಲಿ ರಾಬಿನ್‍ಸನ್ ಮತ್ತು ಸ್ಯಾಮ್ ಕರ್ರನ್ ತಲಾ 2 ವಿಕೆಟ್ ಪಡೆದರು.

  • ಐಪಿಎಲ್‍ಗೆ ವಿಶೇಷ ನಿಯಮ ಜಾರಿ ಮಾಡಿದ ಬಿಸಿಸಿಐ

    ಐಪಿಎಲ್‍ಗೆ ವಿಶೇಷ ನಿಯಮ ಜಾರಿ ಮಾಡಿದ ಬಿಸಿಸಿಐ

    ಮುಂಬೈ: ಯುಎಇಯಲ್ಲಿ ನಡೆಯಲಿರುವ ಐಪಿಎಲ್‍ನಲ್ಲಿ ಆಟಗಾರರ ಸುರಕ್ಷತೆಯ ಸಲುವಾಗಿ ಹೊಸ ನಿಯಮಗಳನ್ನು ಬಿಸಿಸಿಐ ಜಾರಿ ಮಾಡಿದೆ.

    ಚೆಂಡು ಸ್ಟ್ಯಾಂಡ್ ಅಥವಾ ಕ್ರೀಡಾಂಗಣದಿಂದ ಹೊರಗೆ ಹೋದರೆ ನಾಲ್ಕನೇ ಅಂಪೈರ್ ಅವರು ಲೈಬ್ರೆರಿಯಿಂದ ಬದಲಿ ಚೆಂಡು ನೀಡುತ್ತಾರೆ. ಆ ಚೆಂಡು ಮರಳಿದಾಗ ಆಲ್ಕೋಹಾಲ್ ಆಧಾರಿತ ಒರೆಸುವ ಬಟ್ಟೆ ಅಥವಾ ಅಥವಾ ಯುವಿ-ಸಿ(Ultraviolet germicidal irradiation -UVGI)  ಮೂಲಕ ನಾಲ್ಕನೇ ಅಂಪೈರ್ ಬಾಲನ್ನು ಸ್ವಚ್ಛಗೊಳಿಸಿ ಮತ್ತೆ ಲೈಬ್ರರಿಯಲ್ಲಿ ಇಡುತ್ತಾರೆ ಎಂದು ತನ್ನ ಸುತ್ತೋಲೆಯಲ್ಲಿ ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ : ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

    ಕ್ರಿಕೆಟ್ ಚೆಂಡುಗಳ ಮೂಲಕ ಕೊರೊನಾ ಹರಡುವ ಅಪಾಯವು ತುಂಬಾ ಕಡಿಮೆ ಇದೆ. ಆದರೂ ಆಟಗಾರರ ಆರೋಗ್ಯದ ದೃಷ್ಟಿಯಿಂದ ಮೇ ತಿಂಗಳಿನಲ್ಲಿ ಸ್ಥಗಿತಗೊಂಡ ಟೂರ್ನಿಯನ್ನು ಪೂರ್ಣಗೊಳಿಸಲು ಈ ನಿಯಮವನ್ನು ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

    ಈ ವೇಳೆ ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ನೀಡಲಾಗಿದ್ದರೂ ಕ್ರೀಡಾಂಗಣದ ಮೇಲಿನ ಭಾಗದಲ್ಲಿ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.

    ವಾಶ್‍ರೂಂ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಆಟಗಾರರು ಉಗುಳುವುದುನ್ನು ನಿಷೇಧಿಸಲಾಗಿದೆ. ಆಟಗಾರರು ನಿಗದಿ ಪಡಿಸಿದ ಬಯೋ ಬಬಲ್ ಬಿಟ್ಟು ಬೇರೆ ಪ್ರದೇಶಗಳಾದ ರೆಸ್ಟೋರೆಂಟ್, ಕೆಫೆ, ಜಿಮ್‍ಗೆ ಹೋಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

    ಎಲ್ಲ ಆಟಗಾರರು ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಬೇಕು ಮತ್ತು ಅವರಿಗೆ ನೀಡಲಾದ ಬಾಟಲಿ ಹೊರತು ಪಡಿಸಿ ಬೇರೆಯವರು ಬಳಕೆ ಮಾಡುತ್ತಿರುವ ಬಾಟಲಿಯನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.