Tag: sports

  • ಈ ಹಿಂದೆ ಕ್ರೀಡಾಪಟುಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿಲ್ಲ: ಮೋದಿ

    ಈ ಹಿಂದೆ ಕ್ರೀಡಾಪಟುಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿಲ್ಲ: ಮೋದಿ

    ಗಾಂಧಿನಗರ: ಈ ಹಿಂದೆ ಸ್ಪರ್ಧೆಗಳಿಗೆ ಕ್ರೀಡಾಪಟುಗಳ ಆಯ್ಕೆಯಲ್ಲಿ ಪಾರದರ್ಶಕತೆಯ ಕೊರತೆ ಇತ್ತು. ಇದರಿಂದಾಗಿ ಕ್ರೀಡಾಪಟುಗಳ ಪ್ರತಿಭೆ ವ್ಯರ್ಥವಾಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದರು.

    ಗುಜರಾತ್ ಸರ್ಕಾರವು ಅಹಮದಾಬಾದ್‍ನಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾ ಸ್ಪರ್ಧೆ ‘ಖೇಲ್ ಮಹಾಕುಂಭ’ದ 11ನೇ ಆವೃತ್ತಿಯನ್ನು ಮೋದಿ ಅವರು ಉದ್ಘಾಟಿಸಿದರು. ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ, ಸ್ಪರ್ಧೆಗಳಿಗೆ ಕ್ರೀಡಾಪಟುಗಳ ಆಯ್ಕೆಯಲ್ಲಿ ಪಾರದರ್ಶಕತೆಯ ಕೊರತೆ ಇತ್ತು. ಇದರಿಂದಾಗಿ ನಮ್ಮ ಕ್ರೀಡಾಪಟುಗಳ ಪ್ರತಿಭೆ ವ್ಯರ್ಥವಾಯಿತು. ಆದರೆ ಮುಂದೆ ಈ ರೀತಿ ಇರುವುದಿಲ್ಲ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ತಪ್ಪಿಸಿಕೊಂಡು ಹೋದ ಪೆಂಗ್ವಿನ್ – ಕೊನೆಗೂ ಅಧಿಕಾರಿಗಳ ಕೈಗೆ

    ಈ ಹಿಂದೆ ಕ್ರೀಡಾಪಟುಗಳು ಸಾಧನೆ ಮಾಡಬೇಕಾದರೆ ತುಂಬಾ ಕಷ್ಟಪಡಬೇಕಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕ್ರೀಡಾಪಟುಗಳು ಯಶಸ್ಸನ್ನು ಸಾಧಿಸುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಪದಕಗಳ ಹೊಳಪು ನಮ್ಮ ಯುವಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ ಎಂದು ಉತ್ಸುಕರಾಗಿ ಹೇಳಿದರು.

    ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಭಾರತ ಏಳು ಪದಕಗಳನ್ನು ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ 19 ಪದಕಗಳನ್ನು ಗೆದ್ದಿದೆ. ಇದು ಆರಂಭವಾಗಿದೆ. ಭಾರತವನ್ನು ಹಿಮ್ಮೆಟ್ಟಿಸಲು ಯಾರಿಂದಲ್ಲೂ ಆಗುವುದಿಲ್ಲ, ಭಾರತವು ದಣಿದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಬೇಡವೆಂದ ಸಾಂಗ್ ಮತ್ತೆ ಪ್ರೇಕ್ಷಕರ ಮುಂದೆ – ಯಾವುದು ಈ ಸಾಂಗ್?

    ಉಕ್ರೇನ್‍ನಿಂದ ಹಿಂದಿರುಗಿದ ಯುವಕರು ಈಗ ಉದಯೋನ್ಮುಖ ಭಾರತದ ಪ್ರಭಾವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

  • ಶೇನ್ ವಾರ್ನ್ ಸಾವಿನ ಗುಟ್ಟು ಬಿಚ್ಚಿಟ್ಟ ಪೊಲೀಸರು

    ಶೇನ್ ವಾರ್ನ್ ಸಾವಿನ ಗುಟ್ಟು ಬಿಚ್ಚಿಟ್ಟ ಪೊಲೀಸರು

    ಬ್ಯಾಂಕಾಕ್: ಆಸ್ಟ್ರೇಲಿಯಾದ ನಿವೃತ್ತ ಲೆಗ್‍ಸ್ಪಿನ್ನರ್ ಶೇನ್ ವಾರ್ನ್ ಥಾಯ್ಲೆಂಡ್‍ನ ಕೋ ಸೆಮೈನಲ್ಲಿನ ಬಂಗಲೆಯಲ್ಲಿ ಶುಕ್ರವಾರ ನಿಶ್ತೇಜರಾಗಿ ಪತ್ತೆಯಾಗಿದ್ದರು. ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂತು. ಆದರೆ ಇವರ ಸಾವಿನ ನಂತರ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಕುರಿತಾ ಥಾಯ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.

    ವಾರ್ನ್ ಮಾರ್ಚ್ 3 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಥಾಯ್ಲೆಂಡ್‍ನ ವಿಲ್ಲಾದಲ್ಲಿದ್ದ ವಾರ್ನ್‍ಗೆ ಏಕಾಏಕಿ ಹೃದಯಘಾತವಾಗಿದೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದರೂ ಕೂಡ ಬದುಕುಳಿದಿರಲಿಲ್ಲ. ಇದನ್ನೂ ಓದಿ: ಶೇನ್ ವಾರ್ನ್ ಕೋಣೆ, ಟವೆಲ್‍ನಲ್ಲಿ ರಕ್ತದ ಕಣ ಇತ್ತು: ಥಾಯ್ಲೆಂಡ್ ಪೊಲೀಸ್

    ವಾರ್ನ್‌ ಮೃತದೇಹದ ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಸ್ವಾಭಾವಿಕ ಕಾರಣಗಳಿಂದ ಉಂಟಾಗಿರುವ ಸಾವು ಎಂದು ಕುಟುಂಬ ಮತ್ತು ಆಸ್ಟ್ರೇಲಿಯಾದ ರಾಯಭಾರಿಗೆ ವರದಿ ಸಲ್ಲಿಸಿದ್ದಾರೆ. ಥಾಯ್ಲೆಂಡ್‍ನ ವಿಲ್ಲಾಗೆ ರಜಾದಿನಗಳನ್ನು ಕಳೆಯಲು ಗೆಳೆಯರೊಂದಿಗೆ ತೆರಳಿದ್ದ 52 ವರ್ಷದ ವಾರ್ನ್ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಕೂಡ ಒಪ್ಪಿಕೊಂಡಿದೆ. ಇದನ್ನೂ ಓದಿ: ಒಟ್ಟು 65 ದಿನ ಐಪಿಎಲ್ ಕಲರವ – ಆರ್​ಸಿಬಿಗೆ ಪಂಜಾಬ್ ಮೊದಲ ಎದುರಾಳಿ

    ವಾರ್ನ್‍ಗೆ ಆಸ್ತಮಾವಿತ್ತು, ಹೀಗಾಗಿ ಅವರು ಇತ್ತೀಚೆಗೆ ಎದೆನೋವಿಗಾಗಿ ವೈದ್ಯರನ್ನೂ ಸಂಪರ್ಕಿಸಿದ್ದರು ಎಂದು ಥಾಯ್ಲೆಂಡ್ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ಶೇನ್ ವಾರ್ನ್ ಅವರ ಅಂತ್ಯಸಂಸ್ಕಾರ ಸರ್ಕಾರಿ ಗೌರವಗಳೋಂದಿಗೆ ನಡೆಯಲಿದೆ. ಸರಿಸುಮಾರು 1 ಲಕ್ಷ ಜನರು ಸೇರುವ ನೀರಿಕ್ಷೆ ಇದೆ. ಅಂತ್ಯಸಂಸ್ಕಾರಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.

  • ಒಲಿಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

    ಒಲಿಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

    ಬೆಂಗಳೂರು: 2024ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ಗೆ ರಾಜ್ಯದಿಂದ ಕನಿಷ್ಟ 75 ಕ್ರೀಡಾಪಟುಗಳನ್ನು ಸಿದ್ಧಪಡಿಸಲು ‘ಅಮೃತ ಕ್ರೀಡಾ ದತ್ತು ಯೋಜನೆ’ಯಡಿ ತಲಾ 10 ಲಕ್ಷ ರೂ. ಗಳವರೆಗೆ ಪ್ರತಿ ವರ್ಷ ಶ್ರೇಷ್ಠ ಮಟ್ಟದ ತರಬೇತಿ ಪಡೆಯಲು ವಿನಿಯೋಗಿಸಲು ಬಜೆಟ್‍ನಲ್ಲಿ ಸರ್ಕಾರ ಯೋಜನೆ ರೂಪಿಸಿದೆ.

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021ನ್ನು ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಈ ಕ್ರೀಡಾಕೂಟದಲ್ಲಿ 8,000ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ 20 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಸಂಘಟಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಇದನ್ನೂ ಓದಿ: ಜಿಎಸ್‍ಟಿ ಪರಿಹಾರ 3 ವರ್ಷ ವಿಸ್ತರಿಸಿ: ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಸಿಎಂ ಹೇಳಿದ್ದೇನು?

    ಕೇಂದ್ರದ ಪ್ರಾಯೋಜಕತ್ವದ ಎನ್.ಎಸ್.ಡಿ.ಎಫ್. ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಹೊಸದಾಗಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಿದ್ದು, ಇದಕ್ಕಾಗಿ 20 ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಮುಂದಾಗಿದೆ. 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯಲ್ಲಿರುವ ಕುಸ್ತಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಮಾಸಾಶನವನ್ನು 1,000 ರೂ.ನಂತೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಇದನ್ನೂ ಓದಿ: ಎಕರೆಗೆ 250 ರೂ. ಗಳಂತೆ ಡೀಸೆಲ್ ಸಹಾಯಧನ – ರೈತರಿಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

  • ಮೂತ್ರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಬ್ರೇಜಿಲ್‍ನ ಪುಟ್ಬಾಲ್ ಆಟಗಾರ

    ಮೂತ್ರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಬ್ರೇಜಿಲ್‍ನ ಪುಟ್ಬಾಲ್ ಆಟಗಾರ

    ಬ್ರೆಸಿಲಿಯಾ: ಪುಟ್ಬಾಲ್ ಆಟಗಾರ ಬ್ರೇಜಿಲ್‍ನ ಪೀಲೆ(Edson Arantes do Nascimento) ಅವರು (ಯೂರಿನ್ ಇನ್ಫೆಕ್ಷನ್) ಮೂತ್ರದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

    81 ವರ್ಷದ ಪೀಲೆ ಅವರು ಫೆಬ್ರವರಿ 13ರಂದು ಸಾವೋ ಪೌಲೋಸ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಪ್ಟೆಂಬರ್ ನಲ್ಲಿ ಅವರ ಕರುಳಿನಿಂದ ಗೆಡ್ಡೆಯನ್ನು ತೆಗೆದುಹಾಕಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರ ಕೀಮೋಥೆರಪಿಯನ್ನು ಮುಂದುವರಿಸಲು ಅವರ ಕ್ಲಿನಿಕಲ್ ಸ್ಥಿತಿ ಸ್ಥಿರವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತೇವೆ. ಕಿಮೊಥೆರಪಿ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ನಾನು ನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದೇನೆ. ನಾನು ಈಗಾಗಲೇ ದೊಡ್ಡ ಟಿವಿ ಅನ್ನು ಆರ್ಡರ್ ಮಾಡಿದ್ದೇನೆ. ನಾನು ಸೂಪರ್ ಬೌಲ್ ಅನ್ನು ವೀಕ್ಷಿಸುತ್ತೇನೆ. ನನ್ನ ಸ್ನೇಹಿತ  @tombrady ಅವರ ಪಂದ್ಯವನ್ನು ನೋಡುತ್ತೇನೆ. ಎಲ್ಲಾ ಪ್ರೀತಿಯ ಸಂದೇಶಗಳಿಗೆ ಧನ್ಯವಾದಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ  ಪೀಲೆ  ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟ ಸೋನು ಸೂದ್ ವಿರುದ್ಧ FIR ದಾಖಲು

    ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು  ಪರಿಗಣಿಸಲ್ಪಟ್ಟ ಪೀಲೆ ಅವರು 21 ವರ್ಷಗಳ ಕಾಲ 1,363-ಪಂದ್ಯಗಳ ವೃತ್ತಿಪರ ವೃತ್ತಿಜೀವನದಲ್ಲಿ 1,281 ಗೋಲುಗಳ ವಿಶ್ವ ದಾಖಲೆಯ ಮೊತ್ತವನ್ನು ಗಳಿಸಿದ್ದಾರೆ. ಅವರು ಬ್ರೆಜಿಲ್‍ಗಾಗಿ 91 ಬಾರಿ ಕ್ಯಾಪ್ ಪಡೆದರು, 77 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

  • ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

    ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

    ವಾಷಿಂಗ್ಟನ್: ಇಂಡಿಯಾ ಆಟಗಾರ ಶಿಖರ್ ಧವನ್ ಅವರು ಬರೋಬ್ಬರಿ 2 ವರ್ಷಗಳ ನಂತರ ಮಗನನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    2 ವರ್ಷಗಳ ಬಳಿಕ ನನ್ನ ಮಗನನ್ನು ಭೇಟಿ ಆಗುತ್ತಿದ್ದೇನೆ. ಅವನೊಂದಿಗೆ ಆಟವಾಡುವುದು, ತಬ್ಬಿಕೊಳ್ಳುವುದು, ಮಾತನಾಡುವುದು ಸೇರಿದಂತೆ ಸಾಕಷ್ಟು ಭಾವನಾತ್ಮಕ ಕ್ಷಣಗಳಿವೆ. ಇದು ಸದಾ ನೆನಪಿನಲ್ಲಿ ಉಳಿಯುವ ಕ್ಷಣಗಳು ಎಂದು ಬರೆದುಕೊಂಡು ಮಗನ ಜೊತೆಗೆ ಸಮಯ ಕಳೆಯುತ್ತಿರುವ ಸುಂದರ ಕ್ಷಣಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Shikhar Dhawan (@shikhardofficial)

    ಕಳೆದ ವರ್ಷ ಶಿಖರ್ ವೈವಾಹಿಕ ಜೀವನದಲ್ಲಿ ಬಿರುಗಾಳಿ ಬೀಸಿತ್ತು. ಆಯೇಷಾ ಮುಖರ್ಜಿ (ಶಿಖರ್ ಅವರ ಪತ್ನಿ), ಸೆಪ್ಟೆಂಬರ್‌ನಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದರು. ಇದರೊಂದಿಗೆ ಒಂಬತ್ತು ವರ್ಷಗಳ ವೈವಾಹಿಕ ಜೀವನ ಮುರಿದು ಬಿದ್ದಿತ್ತು. ಶಿಖರ್ ಧವನ್ ಅಕ್ಟೋಬರ್ 2012ರಲ್ಲಿ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು. ಎರಡು ವರ್ಷಗಳ ನಂತರ, 2014ರಲ್ಲಿ, ಜೋರಾವರ್ ಜನಿಸಿದರು. ಜೋರಾ ಈಗ ತನ್ನ ತಾಯಿಯೊಂದಿಗೆ ಮೆಲ್ಬೋರ್ನ್‍ನಲ್ಲಿ ವಾಸಿಸುತ್ತಿದ್ದಾರೆ. ಇದೀಗ ತಂದೆ, ಮಗನಿಗೆ ಭೇಟಿಯಾಗವ ಅವಕಾಶ ಸಿಕ್ಕಿದೆ.

    ಧವನ್ ಪುತ್ರ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದು, ಕೊರೊನಾ ನಿರ್ಬಂಧದ ಹಾಗೂ ಬಿಡುವಿಲ್ಲದ  ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿದ್ದ ಕಾರಣ ಧವನ್ ತಮ್ಮ ಪುತ್ರನನ್ನು ಭೇಟಿಯಾಗಿರಲಿಲ್ಲ. ಇದೀಗ ತಮ್ಮ ಮಗನನ್ನು ಭೇಟಿಯಾಗಿ ಸಖತ್ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

  • Australian Open: 21ನೇ ಗ್ರ್ಯಾನ್‌ ಸ್ಲಾಂ ಕಿರೀಟ ಮುಡಿಗೇರಿಸಿಕೊಂಡ ನಡಾಲ್‌

    Australian Open: 21ನೇ ಗ್ರ್ಯಾನ್‌ ಸ್ಲಾಂ ಕಿರೀಟ ಮುಡಿಗೇರಿಸಿಕೊಂಡ ನಡಾಲ್‌

    ಮೆಲ್ಬರ್ನ್‌: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್‌ ಟೆನಿಸ್‌ ಟೂರ್ನಿ ಫೈನಲ್‌ನಲ್ಲಿ ಸ್ಪೇನ್‌ನ ರಫೇಲ್‌ ನಡಾಲ್‌ ರೋಚಕ ಗೆಲುವು ಸಾಧಿಸಿದ್ದು, 21ನೇ ಗ್ರ್ಯಾನ್‌ ಸ್ಲಾಮ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಭಾನುವಾರ ರಾಜಧಾನಿಯಲ್ಲಿ ನಡೆದ ಪಂದ್ಯದಲ್ಲಿ ರಷ್ಯಾದ ಡೇನಿಲ್‌ ಮೆಡ್ವೆಡೇವ್‌ ವಿರುದ್ಧ 2-6, 6-7, 6-4, 6-4, 7-5 ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಇದನ್ನೂ ಓದಿ: Australian Open: 21ನೇ ಗ್ರ್ಯಾನ್‌ ಸ್ಲಾಂಗಾಗಿ ನಡಾಲ್‌, ಮೆಡ್ವೆಡೇವ್‌ ಪೈಪೋಟಿ

    https://twitter.com/AustralianOpen/status/1487791222299242502

    ಆರನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿರುವ 35 ವರ್ಷದ ನಡಾಲ್‌, ಎರಡನೇ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 2009ರಲ್ಲಿ ನಡಾಲ್‌ ಆಸ್ಟ್ರೇಲಿಯನ್‌ ಓಪನ್‌ ಕಿರೀಟ ಮುಡಿಗೇರಿಸಿಕೊಂಡಿದ್ದರು.

    ನಡಾಲ್‌ 13 ಬಾರಿ ಫ್ರೆಂಚ್‌ ಓಪನ್‌, ನಾಲ್ಕು ಸಲ ಅಮೆರಿಕನ್‌ ಓಪನ್‌ ಮತ್ತು ಎರಡು ಬಾರಿ ವಿಂಬಲ್ಡನ್‌ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಇದನ್ನೂ ಓದಿ: 44 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದು ತವರಿನ ಪ್ರಶಸ್ತಿ ಬರ ನೀಗಿಸಿದ ಆಶ್ ಬಾರ್ಟಿ

  • ಮುಂದಿನ ಟೀಂ ಇಂಡಿಯಾ ಟೆಸ್ಟ್‌ ನಾಯಕ ಯಾರು – ಪ್ರತಿಕ್ರಿಯಿಸಿದ ಬಿಸಿಸಿಐ

    ಮುಂದಿನ ಟೀಂ ಇಂಡಿಯಾ ಟೆಸ್ಟ್‌ ನಾಯಕ ಯಾರು – ಪ್ರತಿಕ್ರಿಯಿಸಿದ ಬಿಸಿಸಿಐ

    ಮುಂಬೈ: ವಿರಾಟ್‌ ಕೊಹ್ಲಿ ನಾಯಕ ಸ್ಥಾನದಿಂದ ಇಳಿದ ಬಳಿಕ ಮುಂದಿನ ಟೀಂ ಇಂಡಿಯಾದ ಟೆಸ್ಟ್‌ ನಾಯಕ ಯಾರು ಎಂಬ ಅಭಿಮಾನಿಗಳ ಪ್ರಶ್ನೆಗೆ ಬಿಸಿಸಿಐ ಪ್ರತಿಕ್ರಿಯಿಸಿದೆ.

    ಮಾಧ್ಯಮದ ಜೊತೆ ಮಾತನಾಡಿದ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು, ಮುಂದಿನ ಟೆಸ್ಟ್ ನಾಯಕನ ಹೆಸರನ್ನು ಆಯ್ಕೆ ಸಮಿತಿ ಶಿಫಾರಸು ಮಾಡುತ್ತದೆ ಮತ್ತು  ಇನ್ನೂ ಯಾವುದೇ ಹೆಸರನ್ನು ಚರ್ಚಿಸಲಾಗಿಲ್ಲ ಎಂದು ಹೇಳಿದ್ದಾರೆ.

    ಕೆಎಲ್ ರಾಹುಲ್ ಪ್ರಮುಖ ಆಯ್ಕೆಯಾಗಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿ, ಆಯ್ಕೆದಾರರು ಎಲ್ಲಾ ಆಯ್ಕೆಗಳನ್ನು ಪರಿಶಿಲಿಸಿ ಅಂತಿಮವಾಗಿ ಶಿಫಾರಸು ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ನಾಯಕತ್ವ ತ್ಯಜಿಸಲು ಇದೇ ಕಾರಣ!

    ರೋಹಿತ್ ಶರ್ಮಾ ಅವರು ತಂಡದ ನಿಯೋಜಿತ ಉಪನಾಯಕರಾಗಿದ್ದು, ವಿರಾಟ್ ಕೊಹ್ಲಿ ಬದಲಿಗೆ ಯಾರನ್ನು ಟೆಸ್ಟ್ ನಾಯಕರನ್ನಾಗಿ ಮಾಡಬೇಕೆಂದು ನಿರ್ಧರಿಸಲು ಸಾಕಷ್ಟು ಸಮಯ ಬೇಕು. ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರು ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ವಿರಾಟ್‌ ಕೊಹ್ಲಿ ಒಟ್ಟು 68 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಪೈಕಿ 40 ರಲ್ಲಿ ಜಯ, 11 ಪಂದ್ಯ ಡ್ರಾ, 17 ಪಂದ್ಯವನ್ನು ಭಾರತ ಸೋತಿತ್ತು. ಯಶಸ್ವಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಕಾರಣ ನೂತನ ನಾಯಕನ ಮುಂದೆ ಭಾರೀ ಸವಾಲಿದೆ. ಇದನ್ನೂ ಓದಿ: ಸರಿಯಾಗಿ ನೆನಪಿದೆ.. ನೀವು ಭಾರತದ ನಾಯಕರಾಗ್ತೀರಿ ಎಂದಿದ್ದು: ಅನುಷ್ಕಾ ಶರ್ಮಾ

  • ನಾನು ಫಿಟ್ ಆಗಿದ್ದೇನೆ, ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ: ಕೊಹ್ಲಿ

    ನಾನು ಫಿಟ್ ಆಗಿದ್ದೇನೆ, ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ: ಕೊಹ್ಲಿ

    ನವದೆಹಲಿ: ನಾನು ಸಂಪೂರ್ಣ ಫಿಟ್ ಆಗಿದ್ದೇನೆ, ಸಾಬೀತುಪಡಿಸುವ ಅಗತ್ಯವಿಲ್ಲ. ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಟೆಸ್ಟ್ ಸರಣಿ ಹಾಗೂ ತಮ್ಮ ಬ್ಯಾಟಿಂಗ್ ಫಾರ್ಮ್ ಬಗ್ಗೆ ಸುದ್ದಿಗಾರರೊಂದಿ ಮಾತನಾಡಿದ್ದಾರೆ. ಈ ವೇಳೆ ಅವರು ನಾನು ಫಿಟ್ ಆಗಿದ್ದೇನೆ. ಸಾಬೀತು ಮಾಡುವ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

     

    View this post on Instagram

     

    A post shared by Virat Kohli (@virat.kohli)

    ನನ್ನ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳು ಏಳುತ್ತಿರುವುದು ಇದೇನು ಮೊದಲಲ್ಲ. 2014ರ ಇಂಗ್ಲೆಂಡ್ ಪ್ರವಾಸದ ವೇಳೆಯೂ ಇದು ನಡೆದಿತ್ತು. ಹೊರಗಿನವರು ಏನು ಹೇಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ. ನಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ನಾವು ತುಂಬಾ ಕ್ರಿಕೆಟ್ ಆಡುತ್ತಿದ್ದೇವೆ. ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸಲು ಬಯಸುತ್ತೇವೆ. ಹೀಗಾಗಿ ಆಟಗಾರರು ಗಾಯಗೊಳ್ಳುವುದು ಸಾಮಾನ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್‌

    ಹೊರಗಿನ ಪ್ರಪಂಚವು ನನ್ನನ್ನು ನೋಡುವ ಹಾಗೆ ನಾನು ನನ್ನನ್ನು ನೋಡುವುದಿಲ್ಲ. ನಾನು ತಂಡಕ್ಕಾಗಿ ಅತ್ಯುತ್ತಮವಾದ ಕೆಲಸ ಮಾಡಲು ಬಯಸುತ್ತೇನೆ. ಆಟದಲ್ಲಿ ಕೆಲವೊಮ್ಮೆ ನೀವು ಬಯಸಿದ ರೀತಿಯಲ್ಲಿ ನಡೆಯುವುದಿಲ್ಲ. ಆದರೆ ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ನಾನು ಬ್ಯಾಟರ್ ಆಗಿ ಬಹಳ ಮುಖ್ಯವಾದ ಕ್ಷಣಗಳಲ್ಲಿ ಭಾಗಿಯಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕೊರೊನಾ

  • ಪಿ. ವಿ ಸಿಂಧುಗೆ BWF ಗೌರವ

    ಪಿ. ವಿ ಸಿಂಧುಗೆ BWF ಗೌರವ

    ನವದೆಹಲಿ: 2 ಬಾರಿ ಒಲಿಂಪಿಕ್ಸ್ ಪದಕವನ್ನು ಗೆದ್ದು ಹೆಮ್ಮೆಗೆ ಪಾತ್ರವಾದ ಪಿ.ವಿ ಸಿಂಧು ಅವರಿಗೆ  ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌( ಬಿಡಬ್ಲ್ಯುಎಫ್) ವಿಶೇಷ ಗೌರವ ನೀಡಿದೆ.

    ಬಿಡಬ್ಲ್ಯುಎಫ್ ಅಥ್ಲೀಟ್‌ ಕಮಿಷನ್‍ನ ಸದಸ್ಯೆಯನ್ನಾಗಿ ನೇಮಿಸಿದೆ. ಬಿಡಬ್ಲ್ಯುಎಫ್ ಒಟ್ಟು 6 ಮಂದಿಗೆ ಈ ಗೌರವ ಸಲ್ಲಿಸಿದೆ. ಮಾಜಿ ವಿಶ್ವ ಚಾಂಪಿಯನ್, 26 ವರ್ಷದ ಸಿಂಧು ಸೇರಿ ಆರು ಮಂದಿ ಆಯೋಗಕ್ಕೆ ನೇಮಕವಾಗಿದ್ದು, 2025ರವರೆಗೆ ಇವರ ಅಧಿಕಾರಾವಧಿ ಇರಲಿದೆ. 2021-2025ರ ಅವಧಿಗೆ ಅಥ್ಲೀಟ್‍ಗಳ ಆಯೋಗಕ್ಕೆ ಐರಿಸ್ ವಾಂಗ್ (ಅಮೆರಿಕ), ರಾಬಿನ್ ಟೇಬೆಲಿಂಗ್ (ನೆದಲೆರ್ಂಡ್ಸ್), ಗ್ರೇಸಿಯಾ ಪೋಲಿ (ಇಂಡೊನೇಷ್ಯಾ), ಕಿಮ್ ಸೊಯೊಂಗ್ (ಕೊರಿಯಾ), ಪಿ.ವಿ. ಸಿಂಧು (ಭಾರತ), ಜೆಂಗ್ ಸಿ ವೇ (ಚೀನಾ) ಅವರನ್ನು ನೇಮಿಸಲಾಗಿದೆ ಎಂದು ಬಿಡಬ್ಲ್ಯುಎಫ್ ಹೇಳಿದೆ. ಇದನ್ನೂ ಓದಿ: ಹಿಂದಿಯನ್ನು ವಿರೋಧಿಸುವವರು, ಉರ್ದುವನ್ನು ವಿರೋಧಿಸಲ್ಲ ಯಾಕೆ: ಯತ್ನಾಳ್

    ಈ ಆರು ಸದಸ್ಯರಲ್ಲಿ ಇಬ್ಬರನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಶೀಘ್ರ ಆಯ್ಕೆ ಮಾಡಲಾಗುತ್ತದೆ ಎಂದು ಫೆಡರೇಷನ್ ತಿಳಿಸಿದೆ. 2016ರ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಈ ವರ್ಷದ ಆರಂಭದಲ್ಲಿ ನಡೆದ ಟೋಕಿಯೊ ಕೂಟದಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪಿ. ವಿ ಸಿಂಧು ಅವರು ಇದು ಹೆಮ್ಮೆಯ ಸಂಗತಿಯಾಗಿದೆ. ಬಿಡಬ್ಲ್ಯುಎಫ್ ಕರ್ತವ್ಯವನ್ನು ನಿಭಾಯಿಸಬಲ್ಲೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

  • ಎದೆ ಮೇಲೆ ತಲೈವಾ ಭಾವಚಿತ್ರದ ಟ್ಯಾಟು ಹಾಕಿಸಿಕೊಂಡ ಹರ್ಭಜನ್ ಸಿಂಗ್

    ಎದೆ ಮೇಲೆ ತಲೈವಾ ಭಾವಚಿತ್ರದ ಟ್ಯಾಟು ಹಾಕಿಸಿಕೊಂಡ ಹರ್ಭಜನ್ ಸಿಂಗ್

    ನವದೆಹಲಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ತಲೈವಾ ರಜನಿಕಾಂತ್ ಅವರ ಭಾವಚಿತ್ರದ ಟ್ಯಾಟುವನ್ನು ತಮ್ಮ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ.

    ಹರ್ಭಜನ್ ಸಿಂಗ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ. ಭಾನುವಾರದಂದು ರಜನಿಕಾಂತ್ ಅವರ 71ನೇ ಹುಟ್ಟುಹಬ್ಬದಂದು, ಹರ್ಭಜನ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪೆಷಲ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಇದನ್ನೂ ಓದಿ: ನಾನು ಬಿಜೆಪಿ ಸೇರುವುದು Fake News: ಹರ್ಭಜನ್ ಸಿಂಗ್

    ಹರ್ಭಜನ್ ಸಿಂಗ್ ಅವರು ತಮ್ಮ ಎದೆಯ ಎಡಭಾಗದಲ್ಲಿ ಮಾಡಿದ ರಜನಿಕಾಂತ್ ಅವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿ, ನೀವು ನನ್ನ ಹೃದಯದ ಸೂಪರ್‍ಸ್ಟಾರ್. ನೀವು ಎಂಬತ್ತರ ದಶಕದ ಬಿಲ್ಲಾ. ನೀವು ತೊಂಬತ್ತರ ಬಾಷಾ. ನೀವು 2ಕೆ ಅಣ್ಣಾತ್ತೆ. ಒಬ್ಬನೇ ಸೂಪರ್‍ಸ್ಟಾರ್‍ಗೆ ನನ್ನ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದರು. ಈ ಫೋಸ್ಟ್ ಇದೀಗ ವೈರಲ್ ಆಗುತ್ತಿದೆ. ಒಬ್ಬ ಸೆಲೆಬ್ರಿಟಿ ಮತ್ತೊಬ್ಬ ಸೆಲೆಬ್ರಿಟಿ ಸ್ಟಾರ್ ಕುರಿತಾಗಿ ಅಭಿಮಾನವನ್ನು ಹೊಂದಿರುವುದಕ್ಕಾಗಿ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ರಜನಿಕಾಂತ್ ಅವರಿಗೆ 71 ವರ್ಷ. ನಟ ತನ್ನ ಅಸಾಧಾರಣ ನಟನಾ ಶೈಲಿ ಮತ್ತು ವಿಶಿಷ್ಟವಾದ ಆನ್-ಸ್ಕ್ರೀನ್ ಮ್ಯಾನರಿಸಂಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ಅಭಿಮಾನಿಗಳ ಬಳಗ ಸಾಕಷ್ಟು ದೊಡ್ಡದಾಗಿದೆ. ಇವರ ಅಭಿಮಾನಿಗಳ ಸಾಲಿನಲ್ಲಿ ಹರ್ಭಜನ್ ಸಿಂಗ್ ಮೊದಲನೇಯ ಸ್ಥಾನದಲ್ಲಿದ್ದಾರೆ.