Tag: sports

  • ಏಷ್ಯಾ ಕಪ್‌ – ಭಾರತ್‌, ಪಾಕ್‌ ಪಂದ್ಯಕ್ಕೆ ಡೇಟ್‌ ಫಿಕ್ಸ್‌

    ಏಷ್ಯಾ ಕಪ್‌ – ಭಾರತ್‌, ಪಾಕ್‌ ಪಂದ್ಯಕ್ಕೆ ಡೇಟ್‌ ಫಿಕ್ಸ್‌

    ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಕ್ರಿಕೆಟ್‌ ಪಂದ್ಯಕ್ಕೆ ದಿನಾಂಕ ನಿಗದಿಯಾಗಿದೆ. ಏಷ್ಯಾ ಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಆಗಸ್ಟ್‌ 28 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಶಾರ್ಜಾದಲ್ಲಿ ನಡೆಯಲಿದೆ.

    ಈ ಬಾರಿ ಏಷ್ಯಾ ಕಪ್‌ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಆಂತರಿಕ ಬಿಕ್ಕಟ್ಟಿನಿಂದ ಪಂದ್ಯ ಯುಎಇಗೆ ಸ್ಥಳಾಂತರಿಸಲಾಗಿದೆ. ಭಾನುವಾರ ರಾತ್ರಿ 7:30ಕ್ಕೆ ಶಾರ್ಜಾದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ.

    ಕೊರೊನಾ ಕಾರಣದಿಂದ 2 ವರ್ಷಗಳ ಕಾಲ ಕ್ರಿಕೆಟ್‌ ಪಂದ್ಯಗಳು ನಡೆದಿರಲಿಲ್ಲ. ಹೀಗಾಗಿ ಈ ಬಾರಿಯ ಟೂರ್ನಿಯ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಇದನ್ನೂ ಓದಿ: ಲಾನ್‌ ಬಾಲ್ಸ್‌ನಲ್ಲಿ ಇತಿಹಾಸ ಸೃಷ್ಟಿ – ಚಿನ್ನ ಗೆದ್ದ ವನಿತೆಯರು

    ಒಟ್ಟು 6 ತಂಡಗಳು ಕಪ್​ಗಾಗಿ ಸೆಣಸಾಡಲಿದ್ದು, ಈ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಆಗಸ್ಟ್ 27 ರಿಂದ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 11ರಂದು ಫೈನಲ್​ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಆರಂಭವಾಗಲಿದೆ.

    ಇಲ್ಲಿಯವರೆಗೆ ನಡೆದ 14 ಆವೃತ್ತಿಗಳಲ್ಲಿ ಭಾರತ 7 ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 1984, 1988, 1990/91, 1995, 2010, 2016 ಮತ್ತು 2018 ರಲ್ಲಿ ಟ್ರೋಫಿ ಜಯಿಸಿದೆ. ಶ್ರೀಲಂಕಾ 1986, 1997, 2004, 2008 ರಲ್ಲಿ ಜಯಗಳಿಸಿದರೆ 2000, 2012 ರಲ್ಲಿ ಪಾಕಿಸ್ತಾನ ಗೆದ್ದುಕೊಂಡಿದೆ.

    ತಂಡಗಳು
    ಗ್ರೂಪ್ A – ಭಾರತ, ಪಾಕಿಸ್ತಾನ, ಕ್ವಾಲಿಫೈಯರ್ ತಂಡ

    ಗ್ರೂಪ್ B- ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ

    Live Tv
    [brid partner=56869869 player=32851 video=960834 autoplay=true]

  • Commonwealth Games: ಟಾಪ್-10 ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ

    Commonwealth Games: ಟಾಪ್-10 ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ

    ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್ ಗೇಮ್ಸ್ ರೋಚಕತೆಯಿಂದ ಕೂಡಿದೆ. 72 ರಾಷ್ಟ್ರಗಳಿಂದ 5 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಕಣಕ್ಕಿಳಿದು, ಪೈಪೋಟಿ ನೀಡುತ್ತಿದ್ದಾರೆ.

    ಮಹಿಳಾ ಕ್ರಿಕೆಟ್, 3*3 ಬಾಸ್ಕೆಟ್‌ಬಾಲ್, ವ್ಹೀಲ್ ಚೇರ್ ಬಾಸ್ಕೆಟ್‌ಬಾಲ್, ಪ್ಯಾರಾ ಟೇಬಲ್ ಟೆನ್ನಿಸ್ ಕ್ರೀಡೆಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಸಾವಿರಾರು ಕ್ರೀಡಾ ಪ್ರತಿಭೆಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುತ್ತಿದ್ದು, ಇದರ ಟಾಪ್-10 ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ಮೆಕಾಯ್ ಮ್ಯಾಜಿಕ್, 2ನೇ T20ಯಲ್ಲಿ ವಿಂಡೀಸ್‌ಗೆ ರೋಚಕ ಜಯ – ಹೋರಾಡಿ ಸೋತ ಭಾರತ

    ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕಳೆದ ಮೂರು ದಿನಗಳಿಂದಲೂ ಭಾರತ ಪದಕಗಳ ಭರ್ಜರಿ ಬೇಟೆಯಾಡುತ್ತಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಅವರು ಬೆಳ್ಳಿ ಪದಕ ಪಡೆಯುವ ಮೂಲಕ ಖಾತೆ ತೆರೆದ ಭಾರತ ಕಳೆದ ಮೂರು ದಿನಗಳಲ್ಲಿ 3 ಚಿನ್ನ ಸೇರಿ ಒಟ್ಟು 9 ಪದಕಗಳನ್ನು ಪಡೆಯುವ ಮೂಲಕ 6ನೇ ಸ್ಥಾನಕ್ಕೆ ಜಿಗಿದಿದೆ.

    ಆಸ್ಟ್ರೇಲಿಯಾ 31 ಚಿನ್ನ, 20 ಬೆಳ್ಳಿ ಹಾಗೂ 20 ಕಂಚು ಸೇರಿ 71 ಪದಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದೆ. 21 ಚಿನ್ನ, 22 ಬೆಳ್ಳಿ ಹಾಗೂ 11 ಕಂಚಿನ ಪದಕ ಪಡೆದ ಇಂಗ್ಲೆಂಡ್ 2ನೇ ಸ್ಥಾನದಲ್ಲಿದೆ 24 ಪದಗಳನ್ನು ಪಡೆದ ನ್ಯೂಜಿಲೆಂಡ್ 3ನೇ ಸ್ಥಾನ, 33 ಪದಕ ಪಡೆದ ಕೆನಡಾ 4ನೇ ಸ್ಥಾನ, 12 ಪದಕ ಪಡೆದ ಸೌತ್ ಆಫ್ರಿಕಾ 5ನೇ ಸ್ಥಾನದಲ್ಲಿದ್ದು, 9 ಪದಕಗಳನ್ನು ಪಡೆದ ಭಾರತ 6ನೇ ಸ್ಥಾನ ಉಳಿಸಿಕೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಭಾರತ 12-16ನೇ ಸ್ಥಾನದಲ್ಲಿತ್ತು. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಪಡೆದರು. ನಂತರದಲ್ಲಿ ಜೆರೆಮಿ ಲಾಲ್ರಿನ್ನುಂಗಾ, ಅಚಿಂತ್ ಶೆಯುಲಿ ತಲಾ ಒಂದೊಂದು ಚಿನ್ನದ ಪದಕ ಗಿಟ್ಟಿಸಿಕೊಂಡರು. ಸಂಕೇತ್ ಸರ್ಗರ್, ಬಿಂದ್ಯಾರಾಣಿ ದೇವಿ ಹಾಗೂ ಸುಶೀಲಾ ದೇವ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಕನ್ನಡಿಗ ಗುರುರಾಜ್ ಪೂಜಾರಿ, ವಿಜಯ್‌ಕುಮಾರ್ ಯಾದವ್ ಹಾಗೂ ಹರ್ಜಿಂದರ್ ಕೌರ್ ಕಂಚಿನ ಪದಕಗಳನ್ನು ಗೆದ್ದು ಬೀಗಿದ್ದಾರೆ.

    ದೇಶ-ವಿದೇಶಗಳಿಂದ ಸಾವಿರಾರು ಕ್ರೀಡಾಪ್ರತಿಭೆಗಳು ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದಾರೆ. ಈ ನೆಡುವೆ ಭಾರತದ ಯುವ ಸಮೂಹ ಹೊಸ ದಾಖಲೆ ಬರೆಯುವತ್ತ ದಾಪುಗಾಲು ಹಾಕುತ್ತಿದೆ. ಇದನ್ನೂ ಓದಿ: ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡು – ಚಿನ್ನದ ಹುಡುಗ ಅಚಿಂತ್‌ಗೆ ಮೋದಿ ಸಂದೇಶ

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಮಾನ್ಯರು ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಮುವಾಯ್‌ಥೈ’ ಕ್ರೀಡೆಯಲ್ಲಿ ಅಪರೂಪದ ಸಾಧನೆ ಮಾಡಿದ ಅರುಣ್ ಸಾಗರ್ ಪುತ್ರ

    `ಮುವಾಯ್‌ಥೈ’ ಕ್ರೀಡೆಯಲ್ಲಿ ಅಪರೂಪದ ಸಾಧನೆ ಮಾಡಿದ ಅರುಣ್ ಸಾಗರ್ ಪುತ್ರ

    ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾ ಮತ್ತು ನಿರೂಪಣೆಯ ಮೂಲಕ ಗಮನ ಸೆಳೆದಿರುವ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿಶೇಷ ಸಾಧನೆಯೊಂದನ್ನ ಮಾಡಿದ್ದಾರೆ. ಮಗನ ಅಪರೂಪದ ಸಾಧನೆಯ ಕುರಿತು ನಟ ಅರುಣ್ ಸಾಗರ್ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Arun Sagar (@arunsagar_official)

    ಸಾಕಷ್ಟು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಕ್ರೀಡಾ ಜಗತ್ತಿನಲ್ಲಿ ವಿಶೇಷ ಸಾಧನೆಯನ್ನ ಮಾಡಿ, ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈಗಾಗಲೇ ಸೂರ್ಯ, ದೇಶ ವಿದೇಶಗಳಲ್ಲಿ `ಮುವಾಯ್‌ಥೈ’ ಕ್ರೀಡೆ ಆಡಿ ಗೆದ್ದಿದ್ದಾರೆ. ಈಗ ಥಾಯ್ಲೆಂಡ್‌ನ ರಾಜಡಮ್ನೆರ್ನ್ ಕ್ರೀಡಾಂಗಣದಲ್ಲಿ ಆಡಿ ಗೆದ್ದ ಮೊದಲ ಮುವಾಯ್‌ಥೈ ಪಟು ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಪತ್ನಿಯ, ದುಬಾರಿ ಮಿನಿ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ

     

    View this post on Instagram

     

    A post shared by surya sagar (@surya_sagar14)

    ರಾಜಡಮ್ನೆರ್ನ್ ಪ್ರಪಂಚದ ಮೊದಲ ಮುವಾಯ್‌ಥೈ ಸ್ಟೇಡಿಯಂ ಆಗಿದ್ದು, ಹಾಗಾಗಿ ಇಲ್ಲಿ ಪಂದ್ಯ ಆಡಿ, ಗೆಲ್ಲವುದು ಅದೆಷ್ಟೋ ಪಟುಗಳ ಕನಸುಸಾಗಿದೆ. ಇದೀಗ ಸೂರ್ಯ ಸಾಗರ್‌ನ ಅಪರೂಪದ ಸಾಧನೆ ನೋಡಿ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಸೂರ್ಯಗೆ ಶುಭಹಾರೈಸಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

    ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

    ಜೋಹಾನ್ಸ್‌ಬರ್ಗ್‌: ಕ್ರಿಕೆಟ್ ದಕ್ಷಿಣ ಆಫ್ರಿಕಾದ ಚೊಚ್ಚಲ ಟಿ20 ಲೀಗ್‌ನಲ್ಲಿ ಎಲ್ಲಾ ಆರು ತಂಡಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳು ಖರೀದಿಸಿವೆ.

    ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮಾಲೀಕರು ಹರಾಜಿನ ಸಮಯದಲ್ಲಿ ಫ್ರಾಂಚೈಸಿಗಳನ್ನು ಯಶಸ್ವಿಯಾಗಿ ಬಿಡ್ ಮಾಡಿದ್ದಾರೆ.

    ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಮುಂಬೈ ಇಂಡಿಯನ್ಸ್ ಕೇಪ್ ಟೌನ್ ಫ್ರಾಂಚೈಸಿಯನ್ನು ಖರೀದಿಸಿದರೆ, ಸನ್ ರೈಸರ್ಸ್ ಮಾಲೀಕತ್ವದ ಸನ್ ಟಿವಿ ಗ್ರೂಪ್ ಪೋರ್ಟ್ ಎಲಿಜಬೆತ್ ಫ್ರಾಂಚೈಸಿಯನ್ನು ಖರೀದಿ ಮಾಡಿದೆ.

    ಕಳೆದ ವರ್ಷಾಂತ್ಯದಲ್ಲಿ ಲಕ್ನೋ ಐಪಿಎಲ್ ಫ್ರಾಂಚೈಸಿಯನ್ನು 7090 ಕೋಟಿ ರೂ. ನೀಡಿ ಖರೀದಿಸಿದ್ದ ಆರ್‌ಪಿ ಸಂಜೀವ್ ಗೋಯೆಂಕಾ ಡರ್ಬನ್ ತಂಡವನ್ನು ಖರೀದಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪಾರ್ಲ್ ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ಮಾಲೀಕರಾಗಿರುವ ಜಿಂದಾಲ್ ಸೌತ್ ವೆಸ್ಟ್ ಸ್ಪೋರ್ಟ್ಸ್ ಪ್ರಿಟೋರಿಯಾವನ್ನು ಖರೀದಿಸಿದೆ.  ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ಬೆನ್‌ ಸ್ಟೋಕ್ಸ್‌ ನಿವೃತ್ತಿ ಘೋಷಣೆ 

    ಐಪಿಎಲ್‌ನ ಕೋಲ್ಕತಾ ಸೇರಿದಂತೆ 4 ವಿವಿಧ ಟಿ20 ಲೀಗ್‌ನ ತಂಡದ ಒಡೆತನ ಹೊಂದಿರುವ ನೈಟ್ ರೈಡರ್ಸ್‌ ಸಂಸ್ಥೆ ಹಾಗೂ ರಾಯಲ್ ಚಾಲೆ೦ಜರ್ಸ್‌ ಬೆಂಗಳೂರು ಫ್ರಾಂಚೈಸಿ ಈ ಲೀಗ್‌ನಲ್ಲಿ ಯಾವುದೇ ತಂಡವನ್ನು ಖರೀದಿಸಿಲ್ಲ. ದ.ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್‌ ಲೀಗ್‌ ಆಯುಕ್ತರಾಗಿ ನೇಮಕಗೊಂಡಿದ್ದು, ಲೀಗ್‌ನ ವೇಳಾಪಟ್ಟಿ, ಮಾದರಿ ಪ್ರಕಟವಾಗಬೇಕಿದೆ.

    ಈ ಮೊದಲು 2 ಬಾರಿ ದಕ್ಷಿಣ ಆಫ್ರಿಕಾ ಟಿ20 ಲೀಗ್ ಆರಂಭಿಸಿತ್ತು. ಈ ಮೊದಲು 2017ರಲ್ಲಿ ಗ್ಲೋಬಲ್ 20 ಲೀಗ್‌ ಆರಂಭಿಸಿತ್ತು. ಬಳಿಕ ಮಾಡಿ ಸೂಪರ್ ಲೀಗ್ ಶುರು ಮಾಡಿದ್ದರೂ ಪ್ರಸಾರ ಹಕ್ಕು ಪಡೆಯಲು ಯಾವುದೇ ಸಂಸ್ಥೆಗಳು ಬರದ ಕಾರಣ ಆ ಲೀಗ್ ಕೂಡಾ ನಡೆದಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಸಿಂಧು ಮಡಿಲಿಗೆ ಸಿಂಗಾಪುರ ಓಪನ್ ಕಪ್‌

    ಸಿಂಧು ಮಡಿಲಿಗೆ ಸಿಂಗಾಪುರ ಓಪನ್ ಕಪ್‌

    ಸಿಂಗಾಪುರ: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್-2022 ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಭರ್ಜರಿ ಜಯ ಸಾಧಿಸಿದ್ದು, ಮೊದಲ ಸೂಪರ್-500 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಚೀನಾದ ವಾಂಗ್ ಝಿ ಯಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಂಧು, ಸೂಪರ್-500 ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಆರಂಭದಲ್ಲೇ ವಾಂಗ್ ವಿರುದ್ಧ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್ 21-9 ಅಂತರದಿAದ ಗೆದ್ದುಕೊಂಡರು. 2ನೇ ಸೆಟ್‌ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. 2ನೇ ಸುತ್ತಿನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್‌ ಮೂಲಕ 6 ಪಾಯಿಂಟ್ ಗಳಿಸಿ ಸಿಂಧು ಅವರನ್ನ ಇಕ್ಕಟ್ಟಿಗೆ ಸಿಲುಕಿಸಿದ್ದರು. ಪರಿಣಾಮ 2ನೇ ಸುತ್ತಿನಲ್ಲಿ ಸಿಂಧು 11-21 ಅಂತರದಲ್ಲಿ ಸೋತರು. ಇದನ್ನೂ ಓದಿ: ಇಂದು ಏಕದಿನ ಸರಣಿ ಕೊನೆಯ ಪಂದ್ಯ, ಸರಣಿ ಗೆಲ್ಲುವ ತವಕದಲ್ಲಿ ಭಾರತ

    ಮೊದಲೆರಡು ಸುತ್ತಿನಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದರಿಂದ ಅಂತಿಮ ಸುತ್ತಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಅದರಂತೆ ಮೊದಲ 5 ಪಾಯಿಂಟ್‌ವರೆಗೂ ಜಿದ್ದಾ-ಜಿದ್ದಿನ ಹೋರಾಟ ಕಂಡು ಬಂದಿತು. ಈ ಹಂತದಲ್ಲಿ ಸಿಂಧು ಭರ್ಜರಿ ಸ್ಮ್ಯಾಶ್‌ಗಳ ಮೂಲಕ ವಾಂಗ್ ಅವರನ್ನು ಹಿಂದಿಕ್ಕಿದ್ದರು. ಇದರಿಂದ ವಾಂಗ್ ಝಿ ಯಿ ಅವರ ಪಾಯಿಂಟ್ 6 ಇದ್ದಾಗಲೇ ಸಿಂಧು ಅವರ ಪಾಯಿಂಟ್ 11ಕ್ಕೆ ಏರಿತ್ತು.

    ಮಧ್ಯಂತರದಲ್ಲಿ ಮತ್ತೊಮ್ಮೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಚೀನಿ ಆಟಗಾರ್ತಿ ತೀವ್ರ ಪೈಪೋಟಿ ನೀಡಿದರು. ಸಿಂಧು 12 ಪಾಯಿಂಟ್ ಕಲೆಹಾಕುವಷ್ಟರಲ್ಲಿ ವಾಂಗ್ ಝಿ 11ಕ್ಕೆ ಬಂದು ನಿಂತರು. ಇದಾಗ್ಯೂ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ಅವರು ಮತ್ತೊಮ್ಮೆ ಅಬ್ಬರಿಸಿ ಮೇಲುಗೈ ಸಾಧಿಸಿದರು. ಅಂತಿಮವಾಗಿ 21-15ರ ಅಂತರದಲ್ಲಿ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.

    ನಿನ್ನೆ 32 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಜಪಾನಿನ ಸೈನಾ ಕವಾಕಮಿ ಅವರನ್ನು 21-15 21-7 ಅಂತರದಲ್ಲಿ ಸೋಲಿಸುವ ಮೂಲಕ ಸಿಂಧು ಮೇಲುಗೈ ಸಾಧಿಸಿದ್ದರು. ಈ ಮೂಲಕ ವಿಶ್ವದ 38ನೇ ಶ್ರೇಯಾಂಕದ ಸೈನಾ ಕವಾಕಮಿ ವಿರುದ್ಧ ಸಂಪೂರ್ಣ ಹಿಡಿತ ತೋರಿ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ: Singapore Open 2022: ಫೈನಲ್‍ಗೆ ಲಗ್ಗೆ ಇಟ್ಟ ಪಿ.ವಿ ಸಿಂಧು

    ಎರಡು ಬಾರಿ ಒಲಿಂಪಿಕ್ಸ್ ಪ್ರಶಸ್ತಿ ವಿಜೇತರಾಗಿರುವ ಪಿ.ವಿ.ಸಿಂಧು 2022ನೇ ಋತುವಿನಲ್ಲಿ ಸಿಂಗಾಪುರ್ ಓಪನ್ 2022 ಸೈಯದ್ ಮೋದಿ ಇಂಟರ್‌ನ್ಯಾಷನಲ್ ಹಾಗೂ ಸ್ವಿಸ್ ಓಪನ್ ಬಿಡಬ್ಲ್ಯೂಎಫ್ ಸೂಪರ್ -300 ಪ್ರಶಸ್ತಿಗಳನ್ನು ಗೆದ್ದ ನಂತರ ಸೂಪರ್ 500 ಪ್ರಶಸ್ತಿ ಸಿಂಧು ಅವರ 3ನೇ ಪ್ರಶಸ್ತಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ದೋಹಾ: ನವೆಂಬರ್, ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

    ಆಯೋಜಕರು ಈಗಾಗಲೇ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಯಾವುದೇ ಆಟಗಾರ ಅಥವಾ ಅಭಿಮಾನಿಗಳು ವಿವಾಹೇತರ ಲೈಂಗಿಕ ಸಂಪರ್ಕ ಹೊಂದುವುದನ್ನು ನಿಷೇಧಿಸಲಾಗಿದೆ.

    ದಂಪತಿ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಸಲಿಂಗಕಾಮವನ್ನು ಕೂಡಾ ನಿಷೇಧಿಸಿದೆ. ಫಿಫಾ ವೇಳೆ ಸೆಕ್ಸ್ ಕ್ರಿಯೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಇದೇ ಮೊದಲ ಬಾರಿ ಸೆಕ್ಸ್‌ಗೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ

    ಕೊಕೇನ್ ಮತ್ತು ಇತರ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದು ಸಾಬೀತಾದರೆ ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. ವಿಶ್ವಕಪ್‌ ಸಮಯದಲ್ಲಿ ಮದ್ಯಕ್ಕೆ ಅನುಮತಿ ನೀಡಲಾಗಿದೆ. ಮದ್ಯ ಸೇವನೆಗೆಗೆ ಪ್ರತ್ಯೇಕ ವಲಯವನ್ನು ತೆರೆಯಲಾಗುತ್ತದೆ.

    ಫುಟ್‌ಬಾಲ್‌ ಟೂರ್ನಿ ನವೆಂಬರ್ 21 ರಿಂದ ಆರಂಭವಾಗಲಿದೆ. ವಿಶೇಷವಾಗಿ 32 ತಂಡಗಳು ಆಡುತ್ತಿರುವ ಕೊನೆಯ ವಿಶ್ವಕಪ್‌ ಪಂದ್ಯ ಇದಾಗಿದೆ. ಇನ್ನು ಮುಂದೆ 48 ತಂಡಗಳು ಆಡಲಿದ್ದು 2026ರ ವಿಶ್ವಕಪ್‌ ಆತಿಥ್ಯವನ್ನು ಅಮೆರಿಕ, ಮೆಕ್ಸಿಕೋ, ಕೆನಡಾ ವಹಿಸಲಿದೆ.

    Live Tv

  • ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

    ಸ್ಪೇನ್: ಖ್ಯಾತ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮಾಲೀಕತ್ವದ 13.3 ಕೋಟಿ ಮೌಲ್ಯದ ಬುಗಾಟಿ ವೆರಾನ್ ಕಾರು ಅಪಘಾತಕ್ಕೀಡಾಗಿದೆ.

    ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಮನೆಯೊಂದರ ಪ್ರವೇಶದ್ವಾರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ರೊನಾಲ್ಡೊ ಅವರ ಸಿಬ್ಬಂದಿಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರುಗಳನ್ನು ಹೊಂದಿರುವ ಆಟಗಾರರ ಪೈಕಿ ರೊನಾಲ್ಡೊ ಸಹ ಒಬ್ಬರಾಗಿದ್ದಾರೆ. ಪ್ರಸ್ತುತ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್‌ಬಾಲ್ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಫೋಕ್ಸ್ ವ್ಯಾಗನ್ ಕಂಪನಿಯ ಬುಗಾಟಿ ವೆರಾನ್ ಕಾರು ಪ್ರಪಂಚದಲ್ಲಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ.

    Live Tv

  • ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    ಮುಂಬೈ: ಲೆಕ್ಕಾಚಾರ ಯಶಸ್ವಿಯಾಗಿದ್ದು ಐಪಿಎಲ್‌ ಪ್ರಸಾರದ ಪ್ರತಿ ಪಂದ್ಯದ ಮೌಲ್ಯ 105.5 ಕೋಟಿ ರೂ.ಗಳಿಗೆ (13.5 ಮಿಲಿಯನ್‌ ಡಾಲರ್‌) ಬಿಕರಿಯಾಗಿದ್ದು, ವಿಶ್ವದ 2ನೇ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದೆ.

    ಹೌದು 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕಿಗಾಗಿ ನಡೆದ ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯದ ಮೌಲ್ಯ 105.5 ಕೋಟಿ ರೂ.ಗೆ ಬಿಕರಿಯಾಗಿದ್ದು, ಈ ಮೂಲಕ ಐಪಿಎಲ್‌ ವಿಶ್ವದ ದುಬಾರಿ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ನಟಿಸಿದ್ರಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ?: ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮಾಜಿ ಕ್ರಿಕೆಟ್ ನಾಯಕ

    2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿತ್ತು. ಆದರೆ ಈಗ ವಾಹಿನಿಯೊಂದು 43,000 ಕೋಟಿ ರೂ.ಗೆ ಬಿಡ್‌ ಮಾಡಿ ಖರೀದಿಸಿದೆ ಎಂದು ವರದಿಯಾಗಿದೆ. ಟಿವಿ ಪ್ರಸಾರಕ್ಕೆ 57.5 ಕೋಟಿ ಹಾಗೂ ಡಿಜಿಟಲ್‌ ಪ್ರಸಾರಕ್ಕೆ 48 ಸಾವಿರ ಕೋಟಿ ರೂ.ಗಳಿಗೆ ಬಿಡ್‌ ಮಾಡಲಾಗಿದೆ. ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ

    IPL

    ಪ್ರಸ್ತುತ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂ. ಇದೆ. 2ನೇ ಸ್ಥಾನದಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯದ ಮೌಲ್ಯ 81 ಕೋಟಿ ರೂ. ಆಗಿತ್ತು. ಇದೀಗ ಬಿಸಿಸಿಐ ಲೆಕ್ಕಾಚಾರದಂತೆ ಐಪಿಎಲ್‌ ಪ್ರಸಾರ 100 ಕೋಟಿ ಕೋಗಳನ್ನು ದಾಟಿದ್ದು, 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಿದೆ.

  • ಲಂಕಾ T20, ಏಕದಿನ ಕ್ರಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ನಾಯಕಿ

    ಲಂಕಾ T20, ಏಕದಿನ ಕ್ರಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ನಾಯಕಿ

    ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮುಂದೆ ಶ್ರೀಲಂಕಾದೊಂದಿಗೆ ನಡೆಯಲಿರುವ ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಹರ್ಮನ್ ಪ್ರೀತ್ ಕೌರ್ ಅವರನ್ನು ನಾಯಕಿಯಾಗಿ ಬಿಸಿಸಿಐ ಘೋಷಿಸಿದೆ.

    ಮುಂದೆ ಶ್ರೀಲಂಕಾದೊಂದಿಗೆ ನಡೆಯಲಿರುವ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ತಂಡದ ನಾಯಕಿಯಾಗಿ ಹರ್ಮನ್ ಪ್ರೀತ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಭಾರತ ಕ್ರಿಕೆಟ್ ತಂಡದ ನಾಯಕಿಗೆ ನೆಟ್ಟಿಗರ ಪ್ರತಿಕ್ರಿಯೆ

    ಭಾರತದ ಕೈಗೊಂಡಿರುವ ಶ್ರೀಲಂಕಾ ಪ್ರವಾಸಕ್ಕಾಗಿ ತಂಡವನ್ನು ಆಯ್ಕೆ ಮಾಡಲು ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಇಂದು ಸಭೆ ನಡೆಸಿತು. ಮುಂದಿನ ಪ್ರವಾಸದಲ್ಲಿ ಶ್ರೀಲಂಕಾದ ದಂಬುಲಾ ಹಾಗೂ ಕ್ಯಾಂಡಿಯಲ್ಲಿ 3 ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿವೆ ಎಂದು ಸಮಿತಿ ತಿಳಿಸಿದೆ.

    ಟಿ20 ಟೀಂ: ಶ್ರೀಲಂಕಾದೊಂದಿಗೆ ನಡೆಯಲಿರುವ ಟಿ20 ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ (ವಿಕೆಟ್ ಕೀಪರ್), ಎಸ್.ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರನ್ ಬಹದ್ದೂರ್, ರಿಚಾ ಗೋಶ್(ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್, ರಾಧಾ ಯಾದವ್ ಹಾಗೂ ಜೆಮಿಮಾ ರಾಡ್ರಿಗಸ್.

    ಏಕದಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ರಿಚಾ ಗೋಶ್ ಮತ್ತು ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಎಸ್.ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರನ್ ಬಹದ್ದೂರ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಹಾಗೂ ಹರ್ಲೀನ್ ಡಿಯೋಲ್ ಏಕದಿನ ಪಂದ್ಯದಲ್ಲಿ ಶ್ರೀಲಂಕಾದೊಂದಿಗೆ ಸೆಣಸಲಿದ್ದಾರೆ.

  • ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

    ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

    ನವದೆಹಲಿ: ಬಿಸಿಸಿಐ ಲೆಕ್ಕಾಚಾರ ಯಶಸ್ವಿಯಾದರೆ ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ.

    ಹೌದು. 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿಗೆ ಕೆಲವೇ ದಿನಗಳು ಬಾಕಿಯಿದೆ. ಸದ್ಯದ ಲೆಕ್ಕಾಚಾರ ನೋಡಿದರೆ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರೂ. ದಾಟುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಪಂಡಿತರು ಅಂದಾಜಿಸಿದ್ದಾರೆ. ಒಂದು ವೇಳೆ ಭಾರೀ ಮೊತ್ತಕ್ಕೆ ಹಕ್ಕು ಮಾರಾಟವಾದರೆ ಐಪಿಎಲ್‌ ವಿಶ್ವದ ಎರಡನೇ ದುಬಾರಿ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದೆ. ಈ ಪ್ರಕಾರ ಪ್ರತಿ ಪಂದ್ಯದ ಟಿವಿ ಹಕ್ಕು 49 ಕೋಟಿ ರೂ. ಮತ್ತು ಪ್ರತಿ ಪಂದ್ಯದ ಡಿಜಿಟಲ್‌ ಹಕ್ಕು 33 ಕೋಟಿ ರೂ. ಇದನ್ನೂ ಓದಿ: ಐಪಿಎಲ್‍ನಲ್ಲಿ ಕಳ್ಳಾಟ ನಡೆದಿದೆ, ಪಿಐಎಲ್‍ನ ಅಗತ್ಯ ಬರಬಹುದು: ಸುಬ್ರಮಣಿಯನ್ ಸ್ವಾಮಿ

    ಸಾಧಾರಣವಾಗಿ ಟೀವಿ ಹಕ್ಕು ಮೂಲ ಬೆಲೆಗಿಂತ ಕನಿಷ್ಠ ಶೇ.20ರಿಂದ 25ರಷ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದ್ದು, ಡಿಜಿಟಲ್‌ ಹಕ್ಕು ಇನ್ನೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಎರಡನ್ನೂ ಸೇರಿಸಿದರೆ ಕನಿಷ್ಠ ಒಂದು ಪಂದ್ಯಕ್ಕೆ 115 ರಿಂದ 120 ಕೋಟಿ ರೂ. ಆಗುವ ಸಾಧ್ಯತೆಯಿದೆ.

    ಪ್ರಸ್ತುತ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂ. ಇದೆ. ಎರಡನೇ ಸ್ಥಾನದಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯದ ಮೌಲ್ಯ 81 ಕೋಟಿ ರೂ. ಈಗ ಬಿಸಿಸಿಐ ನಿಗದಿಪಡಿಸಿರುವ ಮೂಲಬೆಲೆಯೇ ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಲಿದೆ. ಇದನ್ನೂ ಓದಿ: ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್‌ ಪ್ರತಿಕ್ರಿಯಿಸಿ, ಐಪಿಎಲ್ ಮಾಧ್ಯಮ ಹಕ್ಕುಗಳು ಕ್ರೀಡಾ ಉದ್ಯಮಕ್ಕೆ ಹೊಸ ಬೆಂಚ್-ಮಾರ್ಕ್‌ ಆಗಲಿದೆ. ಯಾವುದೇ ಸಂಖ್ಯೆಯನ್ನು ಊಹಿಸಲು ಬಯಸುವುದಿಲ್ಲ. ಆದರೆ ಇದು ದಾಖಲೆ ಮುರಿಯುವ ಸಂಖ್ಯೆಯಾಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

    ಈ ಬಾರಿ ದುಬೈಯಲ್ಲಿ ನಡೆದ ಬಿಡ್ಡಿಂಗ್‌ನಲ್ಲಿ ಸಿವಿಸಿ ಕ್ಯಾಪಿಟಲ್‌ 5,600 ಕೋಟಿ ರೂ. ನೀಡಿ ಅಹಮದಾಬಾದ್‌ ತಂಡವನ್ನು ಖರೀದಿಸಿದರೆ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿದೆ. ಬಿಸಿಸಿಐ ಎರಡು ಫ್ರಾಂಚೈಸಿಗಳ ಮಾರಾಟದಿಂದ ಒಟ್ಟು 10 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ ಬಿಸಿಸಿಐ ನಿರೀಕ್ಷೆಗೂ ಮೀರಿ 2,690 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಗಳಿಸಿದೆ.