Tag: sports

  • ಸಿಕ್ಸ್‌ ಸಿಡಿಸಿ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್‌ – ಭಾರತಕ್ಕೆ ಸರಣಿ ಜಯ

    ಸಿಕ್ಸ್‌ ಸಿಡಿಸಿ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್‌ – ಭಾರತಕ್ಕೆ ಸರಣಿ ಜಯ

    ಫ್ಲೋರಿಡಾ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಂಡಿಸ್‌ ವಿರುದ್ಧ 59 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ 20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ಗಳಿಸಿತು. 192 ರನ್‌ಗಳ ಗುರಿಯನ್ನು ಪಡೆದ ವಿಂಡೀಸ್‌ 19.1 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟ್‌ ಆಯ್ತು.

    ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿದ ವಿಂಡೀಸ್‌ ಪರ ನಾಯಕ ನಿಕೋಲಸ್‌ ಪೂರನ್‌ 24 ರನ್‌(8 ಎಸೆತ, 1 ಬೌಂಡರಿ, 3 ಸಿಕ್ಸರ್‌), ರೋವ್‌ಮನ್‌ ಪಾವೆಲ್‌ 24 ರನ್‌(16 ಎಸೆತ,1 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಆರ್ಶದೀಪ್‌ ಸಿಂಗ್‌ 3 ವಿಕೆಟ್‌ ಪಡೆದರೆ , ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯಿ ತಲಾ 2 ವಿಕೆಟ್‌ ಪಡೆದರು. ಇದನ್ನೂ ಓದಿ: CWG 2022: ಚಿನ್ನಕ್ಕೆ ಮುತ್ತಿಟ್ಟ ರವಿ ಕುಮಾರ್ ದಹಿಯಾ, ವಿನೇಶ್ ಫೋಗಟ್ – ಪೂಜಾ ಗೆಹ್ಲೋಟ್‍ಗೆ ಕಂಚು

    ಸ್ಪರ್ಧಾತ್ಮಕ ಮೊತ್ತ:
    ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಮತ್ತು ಸೂರ್ಯಕುಮಾರ್‌ ಯಾದವ್‌ ಆರಂಭದಿಂದಲೇ ವಿಂಡೀಸ್‌ ಬೌಲರ್‌ಗಳಿಗೆ ಬಿಸಿ ಮುಟ್ಟಿಸಲು ಆರಂಭಿಸಿದ್ದರು. 4.4 ಓವರ್‌ಗಳಲ್ಲೇ ಮೊದಲ ವಿಕೆಟ್‌ಗೆ 53 ರನ್‌ ಬಂದಿತ್ತು.

    ರೋಹಿತ್‌ ಶರ್ಮಾ 33 ರನ್‌(16 ಎಸೆತ, 2 ಬೌಂಡರಿ, 3 ಸಿಕ್ಸರ್‌), ಸೂರ್ಯಕುಮಾರ್‌ ಯಾದವ್‌ 24 ರನ್(14‌ ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ರಿಷಬ್‌ ಪಂತ್‌ 44 ರನ್‌( 31 ಎಸೆತ, 6 ಬೌಂಡರಿ), ಸಂಜು ಸ್ಯಾಮ್ಸನ್‌ ಔಟಾಗದೇ 30 ರನ್‌( 23 ಎಸೆತ, 2 ಬೌಂಡರಿ, 1 ಸಿಕ್ಸರ್‌), ಕೊನೆಯಲ್ಲಿ ಅಕ್ಷರ್‌ ಪಟೇಲ್‌‌ ಔಟಾಗದೇ 20 ರನ್‌(8 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿದ ಪರಿಣಾಮ ಭಾರತ 190 ರನ್‌ಗಳ ಗಡಿಯನ್ನು ದಾಟಿತ್ತು.

    4 ಓವರ್‌ ಎಸೆದು 17 ರನ್‌ ನೀಡಿ 2 ವಿಕೆಟ್‌ ಕಿತ್ತ ಆವೇಶ್‌ ಖಾನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಅಫ್ರಿದಿ ರೆಕಾರ್ಡ್‌ ಬ್ರೇಕ್‌: ಈ ಪಂದ್ಯದಲ್ಲಿ 3 ಸಿಕ್ಸ್‌ ಸಿಡಿಸುವ ಮೂಲಕ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಪಾಕಿಸ್ತಾನದ ಆಲ್‌ರೌಂಡರ್‌ ಅಫ್ರಿದಿ ಅವರನ್ನು ಹಿಂದಿಕ್ಕಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಎರಡನೇ ಬ್ಯಾಟರ್‌ ಆಗಿ ಹೊರ ಹೊಮ್ಮಿದ್ದಾರೆ.

    ರೋಹಿತ್‌ ಶರ್ಮಾ 477 ಸಿಕ್ಸ್‌ ಸಿಡಿಸಿದರೆ ಅಫ್ರಿದಿ 476 ಸಿಕ್ಸ್‌ ಸಿಡಿಸಿದ್ದರು. ಮೊದಲ ಸ್ಥಾನದಲ್ಲಿ ವಿಂಡೀಸ್‌ನ ಗೇಲ್‌ ಇದ್ದು 533 ಸಿಕ್ಸ್‌ ಸಿಡಿಸಿದ್ದಾರೆ. ರೋಹಿತ್‌ ಶರ್ಮಾ ಟೆಸ್ಟ್‌ನಲ್ಲಿ 64, ಏಕದಿನದಲ್ಲಿ 250, ಟಿ20ಯಲ್ಲಿ 163 ಸಿಕ್ಸ್‌ ಸಿಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • CWG 2022: ಭಾರತಕ್ಕೆ ಕಂಚು – ಮೂರೇ ನಿಮಿಷದಲ್ಲಿ ಪಂದ್ಯ ಗೆದ್ದ ಮೋಹಿತ್

    CWG 2022: ಭಾರತಕ್ಕೆ ಕಂಚು – ಮೂರೇ ನಿಮಿಷದಲ್ಲಿ ಪಂದ್ಯ ಗೆದ್ದ ಮೋಹಿತ್

    ಬರ್ಮಿಗ್‌ಹ್ಯಾಮ್: ಭಾರತೀಯ ಕುಸ್ತಿಪಟು ಮೋಹಿತ್ ಗ್ರೆವಾಲ್ ಪುರುಷರ 125 ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

    ಕೊವೆಂಟ್ರಿ ಅರೆನಾ ವ್ರೆಸ್ಲಿಂಗ್ ಮ್ಯಾಟ್-ಬಿ ನಲ್ಲಿ ಜಮೈಕಾದ ಎದುರಾಳಿ ಆರನ್ ಜಾನ್ಸನ್ ಅವರನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಕಂಚಿನ ಪಕದ ಗೆದ್ದಿದ್ದಾರೆ. ಅಲ್ಲದೇ ಗ್ರೆವಾಲ್ ಕೇವಲ 3:30 ನಿಮಿಷಗಳಲ್ಲೇ ಪಂದ್ಯವನ್ನು ಕೈವಶ ಮಾಡಿಕೊಂಡಿದ್ದು ವಿಶೇಷ. ಇದನ್ನೂ ಓದಿ: CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    ದಿವ್ಯಾ ಕಣ್ಣಲ್ಲಿ ಕಂಚಿನ ಹೊಳಪು: ಅಂತೆಯೇ ಮಹಿಳೆಯರ ವಿಭಾಗದ 68 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ದಿವ್ಯಾ ಕಕ್ರಾನ್‌ಗೆ ಕಂಚಿನ ಪದಕ ಲಭಿಸಿದೆ. ಕೊವೆಂಟ್ರಿ ಅರೆನಾ ವ್ರೆಸ್ಲಿಂಗ್ ಮ್ಯಾಟ್-ಬಿ ನಲ್ಲಿ ನಡೆದ ಪಂದ್ಯಲ್ಲಿ 2-0 ಅಂತರದಲ್ಲಿ ಎದುರಾಳಿಯನ್ನು ಬಗ್ಗು ಬಡಿಯುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಕುಸ್ತಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಿನ್ನ – ಸಾಕ್ಷಿ ಮಲಿಕ್ ಬಂಗಾರದ ಹುಡುಗಿ

    ಇದಕ್ಕೂ ಮುನ್ನ 8ನೇ ದಿನದ ಅಖಾಡದಲ್ಲಿ ಭಾರತ 5 ಪದಕಗಳನ್ನು ಪಡೆದುಕೊಂಡಿದೆ. 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ, 86 ಕೆಜಿ ವಿಭಾಗದಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನ ಬಾಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    CWG-2022: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ದೀಪಕ್ ಪೂನಿಯಾಗೆ ಚಿನ್ನದ ಹಾರ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.

    8ನೇ ದಿನದ ಕುಸ್ತಿ ಅಖಾಡದಲ್ಲಿ ಪದಕಗಳ ಬಂಪರ್ ಬೆಳೆ ಸುರಿದಿದೆ. ಕೇವಲ ಕುಸ್ತಿಯಲ್ಲಿಯೇ ಭಾರತಕ್ಕೆ 5 ಪದಕಗಳನ್ನು ಪಡೆದುಕೊಂಡಿದೆ. 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, 65 ಕೆಜಿ ವಿಭಾಗದಲ್ಲಿ ಭಜರಂಗ್ ಪೂನಿಯಾ, 86 ಕೆಜಿ ವಿಭಾಗದಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಬಂಗಾರದ ಪದಕಗಳನ್ನ ಬಾಚಿಕೊಂಡಿದ್ದಾರೆ.

    https://twitter.com/sbg1936/status/1555626699827847169

    ಕುಸ್ತಿಯ 57 ಕೆಜಿ ವಿಭಾಗದಲ್ಲಿ ಅನ್ಶು ಮಲಿಕ್ ಬೆಳ್ಳಿ, ದಿವ್ಯಾ ಮೋಹಿತ್ ಕಂಚಿನ ಪದಕಗಳನ್ನ ಗೆದ್ದುಕೊಂಡಿದ್ದಾರೆ. ಭಾರತದ ಗ್ರಾಪ್ಲರ್ ದೀಪಕ್ ಪೂನಿಯಾ ಪುರುಷರ 86 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಪಾಕಿಸ್ತಾನದ ಎದುರಾಳಿ ಮೊಹಮ್ಮದ್ ಇನಾಮ್ ಅವರನ್ನು 3-0 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ನಿನ್ನೆ ಕುಸ್ತಿಯಲ್ಲಿ ಗೆದ್ದ 3ನೇ ಚಿನ್ನದ ಪದಕವಾಗಿದೆ. ಇದನ್ನೂ ಓದಿ: CWG 2022: ಭಜರಂಗ್ ಪೂನಿಯಾ ಚಿನ್ನದ ಬೇಟೆ – ಭಾರತಕ್ಕೆ 7ನೇ ಚಿನ್ನ

    2-0 ಹಂತದವರೆಗೂ ಮುನ್ನಡೆ ಸಾಧಿಸಿದ್ದ ಪೂನಿಯಾಗೆ ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಪಂದ್ಯದಲ್ಲಿ ಪುನಿಯಾ ಉತ್ತಮ ಫಾರ್ಮ್ನಲ್ಲಿದ್ದರು. ಹಾಗಾಗಿ ಅಂತಿಮ ಮೂರು ನಿಮಿಷಗಳಲ್ಲಿ ತಮ್ಮದೇ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಪೂನಿಯಾ ವಿರುದ್ಧ ಪಾಯಿಂಟ್ ಕದಿಯಲು ಹೆಣಗಾಡಿದ ಪಾಕಿಸ್ತಾನದ ಕುಸ್ತಿಪಟು ಅಂತಿಮ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿ ಹೊರನಡೆದರು.

    ಇದರಿಂದ ಭಾರತ ಈವರೆಗೆ 9 ಚಿನ್ನ, 8 ಬೆಳ್ಳಿ, 9 ಕಂಚಿನ ಪಕದ ಗೆದ್ದಿದ್ದು, 26 ಪದಕಗಳೊಂದಿಗೆ, ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಪದಕ ಗೆದ್ದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    ಬರ್ಮಿಂಗ್‌ಹ್ಯಾಮ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ 7ನೇ ದಿನವೂ ಉತ್ತಮ ಪ್ರದರ್ಶನದೊಂದಿಗೆ ಹೊರಹೊಮ್ಮಿದ್ದು, ಒಂದು ಚಿನ್ನ ಮತ್ತೊಂದು ಬೆಳ್ಳಿ ಪದಕವನ್ನು ಪಡೆದುಕೊಂಡಿದೆ.

    7ನೇ ದಿನದ ಆಟದ ಪುರುಷರ ವಿವಿಭಾಗದ ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿಪದಕ ಗೆದ್ದ ಮೊದಲ ಪುರುಷ ಎಂಬ ಖ್ಯಾತಿಯೂ ಇವರದ್ದಾಗಿದೆ. ಇದನ್ನೂ ಓದಿ: ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    ಮುರಳಿ ಶ್ರೀಶಂಕರ್ 8.08ಮೀ ಉದ್ದ ಜಿಗಿತದ ಮೂಲಕ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಗೆದ್ದುಕೊಂಡಿದ್ದಾರೆ. ಈ ಹಿಂದೆ ಹಿರಿಯ ಕ್ರೀಡಾಪಟು ಸುರೇಶ್‌ಬಾಬು 1978ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದರು. ಇದಾದ 44 ವರ್ಷಗಳ ಬಳಿಕ ಬೆಳ್ಳಿ ಪಡೆದಿದ್ದಾರೆ. ನಿನ್ನೆ ಎತ್ತರ ಜಿಗಿತದಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    ಕಾಮನ್‌ವೆಲ್ತ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ ಸಾಧನೆ – ಭಾರತಕ್ಕೆ ಚಿನ್ನದ ಹೊಳಪು

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್‌ನಲ್ಲಿ ಭಾರತದ ಸುಧೀರ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

    ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರ ಎತ್ತಿದರು. ಇದರಿಂದ 134.5 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸುಧೀರ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಚಿನ್ನದ ಪದಕ ಗೆಲ್ಲಲು ಭಾರತದ ಮೀರಾಬಾಯಿ ಚಾನು ನನಗೆ ಸ್ಫೂರ್ತಿ ಎಂದ ಪಾಕ್ ವೇಟ್ ಲಿಫ್ಟರ್

    ಇದೇ ಗೇಮ್‌ನಲ್ಲಿ ಪ್ರತಿಸ್ಪರ್ಧಿಗಳಾಗಿದ್ದ ನೈಜೀರಿಯಾದ ಇಕೆಚುಕ್ವು ಕ್ರಿಶ್ಚಿಯನ್ ಉಬಿಚುಕ್ವು 133.6 ರೊಂದಿಗೆ ಬೆಳ್ಳಿ ಮತ್ತು ಸ್ಕಾಟ್ಲೆಂಡ್‌ನ ಮಿಕ್ಕಿ ಯೂಲ್ 130.9 ಕಂಚಿನ ಪದಕ ಗೆದಿದ್ದಾರೆ. ಕ್ರಿಸ್ಟಿಯನ್ 197 ಕೆಜಿ ಎತ್ತಿದರೆ ಯೂಲ್ 192 ಕೆಜಿ ಎತ್ತಿದರು.

    ಸುಧೀರ್ 2013ರಲ್ಲಿ ಪವರ್ ಲಿಫ್ಟಿಂಗ್ ಆರಂಭಿಸಿದರು. ಈ ಹಿಂದೆ ಸೌತ್ ಕೊರಿಯಾದಲ್ಲಿ ನಡೆದ ಪ್ಯಾರಾ ಪವರ್ ಲಿಫ್ಟಿಂಗ್ ಏಷ್ಯಾ ಒಕೆಶನ್ ಓಪನ್ ಚಾಂಪಿಯನ್ ಶಿಪ್‌ನಲ್ಲಿ 88 ಕೆಜಿ ವಿಭಾಗದ ಪುರುಷರ ವಿಭಾಗದಲ್ಲಿ 214 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದರು. 2022ರ ಏಷ್ಯಾ ಪ್ಯಾರಾ ಗೇಮ್ಸ್‌ಗೂ ಅವರು ಅರ್ಹತೆ ಪಡೆದಿದ್ದಾರೆ. ಈ ನಡುವೆ ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೈಜಂಪ್‌ನಲ್ಲಿ ತೇಜಸ್ವಿನ್ ತೇಜಸ್ಸು, ವೇಟ್‌ಲಿಫ್ಟಿಂಗ್‌ನಲ್ಲಿ ಗುರ್‌ದೀಪ್ ಪರಾಕ್ರಮ- ಭಾರತಕ್ಕೆ ಮತ್ತೆರಡು ಕಂಚು

    ಹೈಜಂಪ್‌ನಲ್ಲಿ ತೇಜಸ್ವಿನ್ ತೇಜಸ್ಸು, ವೇಟ್‌ಲಿಫ್ಟಿಂಗ್‌ನಲ್ಲಿ ಗುರ್‌ದೀಪ್ ಪರಾಕ್ರಮ- ಭಾರತಕ್ಕೆ ಮತ್ತೆರಡು ಕಂಚು

    ಬರ್ಮಿಂಗ್‌ಹ್ಯಾಮ್: 6ನೇ ದಿನದ ಕಾಮನ್‌ವೆಲ್ತ್‌ನಲ್ಲಿ ಒಟ್ಟು 5 ಪದಕಗಳು ಭಾರತದ ಪಾಲಾಗಿವೆ. ಈ ಮೂಲಕ ಭಾರತ ಒಟ್ಟು 18 ಪದಕಗಳನ್ನು ಗೆಲ್ಲುವ ಮೂಲಕ ಟಾಪ್-10 ಪಟ್ಟಿಯಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದೆ.

    https://twitter.com/sbg1936/status/1554919985273008128?ref_src=twsrc%5Etfw%7Ctwcamp%5Etweetembed%7Ctwterm%5E1554919985273008128%7Ctwgr%5E2b19147abf6ca3cf642463a445fec7f52d6ec806%7Ctwcon%5Es1_&ref_url=https%3A%2F%2Fsports.ndtv.com%2Fcommonwealth-games-2022%2Fhow-tejaswin-shankar-won-bronze-medal-for-india-in-high-jump-at-cwg-2022-watch-3223093

    ಭಾರತದ ತೇಜಸ್ವಿನ್ ಶಂಕರ್ ಅಥ್ಲೆಟಿಕ್‌ನಲ್ಲಿ ಪುರುಷರ ಹೈಜಂಪ್ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಪುರುಷ ವಿಭಾಗದ ಹೈಜಂಪ್ (ಎತ್ತರ ಜಿಗಿತ) ಫೈನಲ್ಸ್‌ನಲ್ಲಿ 2.22 ಮೀಟರ್ ಎತ್ತರ ಜಿಗಿಯುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ. ಫೈನಲ್ಸ್‌ನಲ್ಲಿ ಕಾಮನ್‌ವೆಲ್ತ್ ಮಾಜಿ ಚಾಂಪಿಯನ್ ಡೊನಾಲ್ಡ್ ಥಾಮಸ್‌ ಅವರೊಂದಿಗೆ ಟೈ ಆಗಿದ್ದು ಕಂಚಿನ ಪದಕವನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಮೂಲಕ ಅಥ್ಲೆಟಿಕ್ಸ್ ಹೈಜಂಪ್‌ನಲ್ಲಿ ಮೊದಲ ಬಾರಿಗೆ ಪದಕ ಗೆದ್ದ ಕೀರ್ತಿ ತೇಜಸ್ವಿನ್ ಅವರದ್ದಾಗಿದೆ.

    ಗುರ್‌ದೀಪ್‌ಸಿಂಗ್ ಮಿಂಚು: ಪುರುಷರ ವಿಭಾಗದ 109 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 390 ಕೆಜಿ ಭಾರ ಎತ್ತುವ ಮೂಲಕ ಗುರ್‌ದೀಪ್‌ಸಿಂಗ್ ಕಂಚಿನ ಹಾರಕ್ಕೆ ಕೊರಳೊಡ್ಡಿದ್ದಾರೆ. ಸ್ನ್ಯಾಚ್‌ ವಿಭಾಗದಲ್ಲಿ 167 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್‌ನಲ್ಲಿ  223 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಗೆಲುವು ಸಾಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಮನ್‌ವೆಲ್ತ್‌ನಲ್ಲಿ ಭಾರತದ ಕಮಾಲ್- ಸ್ಕ್ವಾಷ್‌ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್

    ಕಾಮನ್‌ವೆಲ್ತ್‌ನಲ್ಲಿ ಭಾರತದ ಕಮಾಲ್- ಸ್ಕ್ವಾಷ್‌ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ 6ನೇ ದಿನದ ಆಟದಲ್ಲಿ ಭಾರತೀಯ ಕ್ರೀಡಾಪಟುಗಳು ಕಮಾಲ್ ಮಾಡಿದ್ದು, ಹಲವು ಪದಕಗಳನ್ನ ಬಾಚಿಕೊಂಡಿದ್ದಾರೆ.

    ಭಾರತದ ಸೌರವ್ ಘೋಷಾಲ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅವರು ಇತಿಹಾಸದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಸಿಂಗಲ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್

    ಇಂದು ನಡೆದ ಸ್ಕ್ವಾಷ್‌ ಪಂದ್ಯದಲ್ಲಿ 35 ವರ್ಷದ ಸೌರವ್ ಘೋಷಾಲ್ ಅವರು ಆತಿಥೇಯ ಇಂಗ್ಲೆಂಡ್ ಆಟಗಾರ ಜೇಮ್ಸ್ ವಿ‌ಲ್‌ಸ್ಟ್ರೋವ್‌ ಅವರನ್ನು 3-0 (11-6, 11-1, 11-4) ಅಂತರದಿಂದ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

    1998 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಸ್ಕ್ವಾಷ್ ಅನ್ನು ಸೇರಿಸಲಾಯಿತು. ಆಗ ಆಗ ಭಾರತ 4 ಪದಕಗಳನ್ನು ಮಾತ್ರವೇ ಪಡೆದುಕೊಂಡಿತ್ತು. ಇದರಲ್ಲಿ ಕೊನೆಯ 3 ಪದಕಗಳು ಬಂದಿದ್ದು ಡಬಲ್ಸ್‌ನಲ್ಲಿ ಮಾತ್ರ. ಇದೇ ಮೊದಲಬಾರಿಗೆ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಪದಕ ಬಂದಿದ್ದು, ದಾಖಲೆ ನಿರ್ಮಾಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್

    CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್

    ಬರ್ಮಿಂಗ್‌ಹ್ಯಾಮ್: ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುರಿದಿದ್ದು, 6ನೇ ದಿನ ಮಹಿಳೆಯರ 78 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್ ಅವರು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

    ತುಲಿಕಾ ಮಾನ್ ಅವರು ಇಂದು ನಡೆದ ಮಹಿಳೆಯರ 78 ಕೆಜಿ ವಿಭಾಗದ ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಪರಾಭವಗೊಳ್ಳುವ ಮೂಲಕ ಬೆಳ್ಳಿಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜೂಡೋದಲ್ಲಿ ಭಾರತಕ್ಕೆ ಇದು 3ನೇ ಪದಕವಾಗಿದೆ. ಇದನ್ನೂ ಓದಿ: CWG 2022: ಲಾನ್ ಬಾಲ್ಸ್‌ನಲ್ಲಿ ಚಿನ್ನ – ವರ್ಕೌಟ್ ಆಯ್ತು ಧೋನಿ ಟಿಪ್ಸ್!

    ತುಲಿಕಾ ಮಾನ್ ಅವರ ಈ ಸಾಧನೆಯೊಂದಿಗೆ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 5 ಚಿನ್ನ, 6 ಬೆಳ್ಳಿ ಹಾಗೂ 7 ಕಂಚು ಸಹಿತ 18 ಪದಕಗಳನ್ನು ಪಡೆದುಕೊಂಡಿದ್ದು, ಟಾಪ್-10 ಪಟ್ಟಿಯಲ್ಲೇ ಸ್ಥಾನ ಉಳಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಈ ಒಂದು ಸಣ್ಣ ತಪ್ಪಿನಿಂದ ಚಿನ್ನದ ಪದಕ ಕೈತಪ್ಪಿತು – ಪಿ.ವಿ.ಸಿಂಧು ವಿಷಾದ

    ಈ ಒಂದು ಸಣ್ಣ ತಪ್ಪಿನಿಂದ ಚಿನ್ನದ ಪದಕ ಕೈತಪ್ಪಿತು – ಪಿ.ವಿ.ಸಿಂಧು ವಿಷಾದ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ನ ಗುಂಪು ಹಂತದ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಕೈಚೆಲ್ಲಿದ್ದ ಭಾರತ ಫೈನಲ್ಸ್‌ನಲ್ಲಿ ಮಲೇಷ್ಯಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

    ಬೆಳ್ಳಿಪದಕಕ್ಕೆ ಕೊರಳೊಡ್ಡಿದ್ದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಮಲೇಷ್ಯಾ ಸೋಲಿಸೋದು ಅಷ್ಟು ಸುಲಭವಾಗಿರಲಿಲ್ಲ. ನಾವು ಫೈನಲ್‌ನಲ್ಲಿ ಆಡುತ್ತಿದ್ದರಿಂದ ಪ್ರತಿ ಪಂದ್ಯವೂ ನಮಗೆ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: CWG2022: ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತ, ಸಿಂಗಲ್ಸ್‌ನಲ್ಲಿ ಸಿಂಧು ಪರಾಕ್ರಮ

    ಎಲ್ಲರೊಂದಿಗೆ ನಾನೂ ಒಂದು ತಂಡವಾಗಿ ಚೆನ್ನಾಗಿ ಆಡಿದ್ದೇನೆ. ದುರದೃಷ್ಟವಶಾತ್ ತಂಡದಲ್ಲಿ ನಡೆದ ಸಣ್ಣಪುಟ್ಟ ಬದಲಾವಣೆಯಿಂದಾಗಿ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿತ್ತು. ನಾವು ಬೆಳ್ಳಿ ಪದಕ ಪಡೆದಿದ್ದು, ನನ್ನ ತಂಡ ಸಂತೋಷವಾಗಿದೆ. ಇದು ಕೇವಲ ದಿನದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಈ ದಿನ ನಮ್ಮದಲ್ಲ ಎಂದು ನಾನು ಭಾವಿಸುತ್ತೇನೆ. ಮತ್ತೊಮ್ಮೆ ಬಲವಾದ ತಂಡವಾಗಿ ಹೊರ ಹೊಮ್ಮುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗ ವೈಯಕ್ತಿಕ ಆಟದ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯ. ಅದರಲ್ಲಿ ನಾನು ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ 8ನೇ ಪದಕ – ವಿಕಾಸ್ ಠಾಕೂರ್‌ಗೆ ಬೆಳ್ಳಿ

    ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಮಲೇಷ್ಯಾದ ಕೆಳಕ್ರಮಾಂಕದ ಆಟಗಾರ ತ್ಸೆಯಾಂಗ್ ಜಿ-ವಿರುದ್ಧ ಸೋಲು ಅನುಭವಿಸಿದ್ದು, ತಂಡದ ಸೋಲಿಗೆ ಕಾರಣವಾಯಿತು. ಅಲ್ಲದೇ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಸೋಲನುಭವಿಸಿದರು. ಇದರಿಂದ ತಂಡ 2-0 ಯಿಂದ ಹಿನ್ನಡೆ ಕಾಯ್ದುಕೊಂಡಿತು.

    Live Tv
    [brid partner=56869869 player=32851 video=960834 autoplay=true]

  • CWG2022: ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತ, ಸಿಂಗಲ್ಸ್‌ನಲ್ಲಿ ಸಿಂಧು ಪರಾಕ್ರಮ

    CWG2022: ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತ, ಸಿಂಗಲ್ಸ್‌ನಲ್ಲಿ ಸಿಂಧು ಪರಾಕ್ರಮ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನ ಗುಂಪು ಹಂತದ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಕೈಚೆಲ್ಲಿದ್ದ ಭಾರತ ಫೈನಲ್ಸ್‌ನಲ್ಲಿ ಮಲೇಷ್ಯಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

    ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಮಲೇಷ್ಯಾದ ಕೆಳಕ್ರಮಾಂಕದ ಆಟಗಾರ ತ್ಸೆಯಾಂಗ್ ಜಿ-ವಿರುದ್ಧ ಸೋಲು ಅನುಭವಿಸಿದ್ದು, ತಂಡದ ಸೋಲಿಗೆ ಕಾರಣವಾಯಿತು. ಅಲ್ಲದೇ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಸೋಲನುಭವಿಸಿದರು. ಇದರಿಂದ ತಂಡ 2-0 ಯಿಂದ ಹಿನ್ನಡೆ ಕಾಯ್ದುಕೊಂಡಿತು. ಇದನ್ನೂ ಓದಿ: ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ 8ನೇ ಪದಕ – ವಿಕಾಸ್ ಠಾಕೂರ್‌ಗೆ ಬೆಳ್ಳಿ

    ಮಹಿಳಾ ಸಿಂಗಲ್ಸ್‌ನಲ್ಲಿ ಮಲೇಷ್ಯಾದ ಗೋಹ್ ಜಿನ್ ವೀ ಅವರು, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧುಗೆ ಸುಲಭ ತುತ್ತಾದರು. ಮೊದಲು ನಡೆದ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಒಲಿಂಪಿಕ್ ಕಂಚಿನ ಪದಕ ವಿಜೇತ ಜೋಡಿಯಾದ ಮಲೇಷ್ಯಾದ ಟೆಂಗ್ ಫಾಂಗ್ ಆರನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಎದುರಿಸಿತು. ಕಠಿಣ ಸವಾಲು ಒಡ್ಡಿದ ಚಿಯಾ ಸೋಹ್ ಜೋಡಿ ಭಾರತದ ಎದುರು 21-18, 21-15 ನೇರ ಸೆಟ್‌ಗಳಿಂದ ಪಂದ್ಯ ಜಯಿಸಿತು. ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

    ಸಿಂಗಲ್ಸ್‌ನಲ್ಲಿ ಸಿಂಧುಗೆ ಜಯ: ನಂತರ ನಡೆದ ಮಹಿಳೆಯರ ಸಿಂಗಲ್ಸ್ನಲ್ಲಿ ಪಿವಿ ಸಿಂಧು, ಗೋಹ್ ಜಿನ್ ವೀ ಸವಾಲು ಎದುರಿಸಿದರು. 22-20, 21-17 ನೇರ ಸೆಟ್‌ಗಳಿಂದ ಸಿಂಧು ಜಯಿಸುವ ಮೂಲಕ 1-1 ರಲ್ಲಿ ಸಮಬಲ ಸಾಧಿಸಿದರು. ವಿಶ್ವ ಕ್ರಮಾಂಕದಲ್ಲಿ 40ನೇ ಸ್ಥಾನದಲ್ಲಿದ್ದ ಮಲೇಷ್ಯಾದ ಗೋಹ್, 7ನೇ ಕ್ರಮಾಂಕದಲ್ಲಿರುವ ಸಿಂಧುಗೆ ಕಠಿಣ ಸವಾಲು ಒಡ್ಡಿದರು. ಇದನ್ನೂ ಓದಿ: ಇಂದು ಸುವರ್ಣ ದಿನ- ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾರತ

    ಶ್ರೀಕಾಂತ್‌ಗೆ ಸೋಲು: ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 14 ನೇ ಶ್ರೇಯಾಂಕಿತ, ಭಾರತದ ಅಗ್ರ ಶೆಟ್ಲರ್ ಕಿಡಂಬಿ ಶ್ರೀಕಾಂತ್ ತ್ಸೆಯಾಂಗ್ ಜಿ ವಿರುದ್ಧ ಸೋತು ಶಾಕ್ ನೀಡಿದರು. 21-19, 6-21, 21-16 ಮೂರು ಸೆಟ್‌ಗಳಲ್ಲಿ ನಡೆದ ಆಟದಲ್ಲಿ ತ್ಸೆಯಾಂಗ್ ಜಿ ಗೆಲುವು ಸಾಧಿಸಿದರು.

    ನಿರ್ಣಾಯಕ ಪಂದ್ಯವಾದ ಮಹಿಳೆಯರ ಮಿಶ್ರ ಡಬಲ್ಸ್‌ನಲ್ಲಿ ವಿಶ್ವದ 11ನೇ ಶ್ರೇಯಾಂಕದ ಮಲೇಷ್ಯಾ ಜೋಡಿಯಾದ ಥಿನಾ ಮುರಳೀಧರನ್ ಮತ್ತು ಕೂಂಗ್‌ಲೆ ಪರ್ಲಿ ತಾನ್ ಭಾರತದ ಜೋಡಿಯಾದ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ವಿರುದ್ಧ 21-18, 21-17ರ ನೇರ ಸೆಟ್‌ಗಳಿಂದ ಸುಲಭ ಜಯ ಸಾಧಿಸಿದರು. ಈ ಮೂಲಕ ತಂಡ 1-3ರ ಅಂತರದಲ್ಲಿ ಚಿನ್ನಕ್ಕೆ ಕೊರಳೊಡ್ಡಿತು. ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

    Live Tv
    [brid partner=56869869 player=32851 video=960834 autoplay=true]