Tag: sports

  • ಅಕ್ಟೋಬರ್ 8ಕ್ಕೆ ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್

    ಅಕ್ಟೋಬರ್ 8ಕ್ಕೆ ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್

    ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್ (Bengaluru Marathon) 10ನೇ ಅವೃತ್ತಿ ಇದೇ ಅಕ್ಟೋಬರ್ 8 ರಂದು ನಡೆಯಲಿದೆ. ಅಂತಾರಾಷ್ಟ್ರೀಯ ಮ್ಯಾರಥಾನ್ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಮ್ಯಾರಥಾನ್ ನ ಮುಂದಿನ ಮೂರು ಆವೃತ್ತಿಗೆ ಹೆಸರಾಂತ ಸಂಸ್ಥೆ ವಿಪ್ರೋ (Wipro) ಲಿಮಿಟೆಡ್‌ ಶೀರ್ಷೀಕೆ ಪ್ರಾಯೋಜಕತ್ವ ಪಡೆದುಕೊಂಡಿದೆ. ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 10ನೇ ಆವೃತ್ತಿಯ ಹೊಸ ಲೋಗೋ ಕೂಡ ಬಿಡುಗಡೆ ಮಾಡಲಾಯಿತು.

    ಇದೇ ಅಕ್ಟೋಬರ್ 8 ರಿಂದ ನಡೆಯಲಿರುವ ಮ್ಯಾರಥಾನ್ (Marathon) ನಲ್ಲಿ 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗಿಯಾಗಲಿದ್ದಾರೆ. ಕಳೆದ 10 ವರ್ಷಗಳಿಂದ ನಡೆಯುತ್ತಿರುವ ವಾರ್ಷಿಕ ಸಿಟಿ ರನ್ ಮೂರು ವಿಭಾಗಗಳಲ್ಲಿ ನಡೆಯಲಿದೆ. 42 ಕಿಮೀ ಪೂರ್ಣ ಮ್ಯಾರಥಾನ್, 21 ಕಿಮೀ ಹಾಫ್ ಮ್ಯಾರಥಾನ್, 5 ಕಿಮೀ ಹೋಪ್ ರನ್ ಇರಲಿದೆ.

    ಇನ್ನೂ ಕಾರ್ಯಕ್ರಮದಲ್ಲಿ ವಿಪ್ರೋ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಳ್ ಮಾತನಾಡಿ, ಬೆಂಗಳೂರು ಮ್ಯಾರಥಾನ್ ಶೀರ್ಷಿಕೆ ಪ್ರಯೋಜಕರಾಗಿರೋದು ಸಂತಸ ತಂದಿದೆ. ಕಳೆದ 17 ವರ್ಷಗಳಿಂದ ಸ್ಪೀರಿಟ್ ಆಫ್ ವಿಪ್ರೋ ಹೆಸರಿನಲ್ಲಿ ನಮ್ಮ ಉದ್ಯೋಗಿಗಳಿಗೆ ಓಟವನ್ನ ಆಯೋಜಿಸುತ್ತಿದ್ದೇವೆ. ಸಮುದಾಯದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಠಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆ. ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳುವಂತೆ ಜನರನ್ನ ಪ್ರೋತ್ಸಾಹಿಸಲು ಹಾಗೂ ಬೆಂಬಲಿಸಲು ಇದು ಉತ್ತಮ ಅವಕಾಶ ಎಂದು ಸಲಹೆ ನೀಡಿದರು.

    ಇನ್ನೂ ಕಾರ್ಯಕ್ರಮದಲ್ಲಿ ರೇಸ್ ನಿರ್ದೇಶಕ ನಾಗರಾಜ್ ಅಡಿಗ, ಅರ್ಜುನ ಪ್ರಶಸ್ತಿ ವಿಜೇತೆ ರೀತ್ ಅಬ್ರಾಹಂ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  • ಜೈಸ್ವಾಲ್‌ ಅಬ್ಬರಕ್ಕೆ ಕೋಲ್ಕತ್ತಾ ಧೂಳೀಪಟ – ರಾಜಸ್ಥಾನಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

    ಜೈಸ್ವಾಲ್‌ ಅಬ್ಬರಕ್ಕೆ ಕೋಲ್ಕತ್ತಾ ಧೂಳೀಪಟ – ರಾಜಸ್ಥಾನಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

    ಕೋಲ್ಕತ್ತಾ: ಯವ ಆಟಗಾರ ಯಶಸ್ವಿ ಜೈಸ್ವಾಲ್‌ ದಾಖಲೆಯ ವೇಗದ ಅರ್ಧಶತಕ ಮತ್ತು ನಾಯಕ ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಆಟದಿಂದಾಗಿ ರಾಜಯಸ್ಥಾನ ರಾಯಲ್ಸ್‌ (Rajasthan Royals ) ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders ) ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಗೆಲ್ಲಲು 150 ರನ್‌ಗಳ ಗುರಿಯನ್ನು ಪಡೆದ ರಾಜಸ್ಥಾನ 13.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 151 ರನ್‌ ಹೊಡೆಯುವ ಮೂಲಕ ಗೆಲುವಿನ ನಗೆ ಬೀರಿತು.

    21 ವರ್ಷದ ಯುವ ಆಟಗಾರ ಜೈಸ್ವಾಲ್‌ (Yashasvi Jaiswal ) ಕೇವಲ 13 ಎಸೆತಗಳಲ್ಲಿ 50 ರನ್‌ (6 ಬೌಂಡರಿ, 3 ಸಿಕ್ಸ್‌) ಚಚ್ಚುವ ಮೂಲಕ ಕೆಎಲ್‌ ರಾಹುಲ್‌ (KL Rahul) ಅವರ ಹೆಸರಿನಲ್ಲಿದ್ದ ವೇಗದ ಅರ್ಧಶತಕ ದಾಖಲೆಯನ್ನು ಮುರಿದರು. ಈ ಮೊದಲು  2018ರ ಆವೃತ್ತಿಯಲ್ಲಿ ರಾಹುಲ್‌14 ಎಸೆತಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಇದನ್ನೂ ಓದಿ: IPL 2023: ಪ್ಲೇ ಆಫ್ ಲೆಕ್ಕಾಚಾರ ಏನು? – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ RCB ಫ್ಯಾನ್ಸ್

    ಮೊದಲ ವಿಕೆಟಿಗೆ 30 ರನ್‌ ಬಂದರೂ ಬಟ್ಲರ್‌ ಕೊಡುಗೆ ಶೂನ್ಯ. ಮುರಿಯದ ಎರಡನೇ ವಿಕೆಟಿಗೆ ಜೈಸ್ವಾಲ್‌ ಮತ್ತು ಸಂಜು ಸ್ಯಾಮ್ಸನ್‌ (Sanju Samson) 69 ಎಸೆತಗಳಲ್ಲಿ 121 ರನ್‌ ಜೊತೆಯಾಟವಾಡಿದರು.

    ಅಂತಿಮವಾಗಿ ಜೈಸ್ವಾಲ್‌ ಔಟಾಗದೇ 98 ರನ್‌ (47 ಎಸೆತ, 12 ಬೌಂಡರಿ, 5 ಸಿಕ್ಸರ್)‌, ಸಂಜು ಸ್ಯಾಮ್ಸನ್‌ ಔಟಾಗದೇ 48 ರನ್‌ (29 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. 16 ಎಸೆತಗಳಲ್ಲಿ ರಾಜಸ್ಥಾನದ ಮೊದಲ 50 ರನ್‌ ಬಂದಿದ್ದರೆ 49 ಎಸೆತಗಳಲ್ಲಿ 100 ರನ್‌ ಗಡಿ ದಾಟಿತ್ತು. ಪಂದ್ಯವನ್ನು ಗೆಲ್ಲುವ ಮೂಲಕ 5ನೇ ಸ್ಥಾನದಲ್ಲಿದ್ದ ರಾಜಸ್ಥಾನ 3ನೇ ಸ್ಥಾನಕ್ಕೆ ಜಿಗಿದರೆ 6ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ 7ನೇ ಸ್ಥಾನಕ್ಕೆ ಜಾರಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ವೆಂಕಟೇಶ್‌ ಅಯ್ಯರ್‌ 57 ರನ್‌(42 ಎಸೆತ, 2 ಬೌಂಡರಿ, 4 ಸಿಕ್ಸರ್‌) ನಾಯಕ ನಿತೀಶ್‌ ರಾಣಾ 22 ರನ್‌ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

    ಚಹಲ್‌ 25 ರನ್‌ ನೀಡಿ 4 ವಿಕೆಟ್‌ ಕಿತ್ತರೆ ಬೌಲ್ಟ್‌ 2 ವಿಕೆಟ್‌, ಸಂದೀಪ್‌ ಶರ್ಮಾ ಮತ್ತು ಆಸೀಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • ಗುಜರಾತ್‌ಗೆ 55 ರನ್‌ಗಳ ಭರ್ಜರಿ ಜಯ – ಮುಂಬೈಗೆ ಹೀನಾಯ ಸೋಲು

    ಗುಜರಾತ್‌ಗೆ 55 ರನ್‌ಗಳ ಭರ್ಜರಿ ಜಯ – ಮುಂಬೈಗೆ ಹೀನಾಯ ಸೋಲು

    ಅಹಮದಾಬಾದ್‌: ಬ್ಯಾಟರ್‌ಗಳ ಸ್ಫೋಟಕ ಆಟ ಮತ್ತು ಬೌಲರ್‌ಗಳ ಉತ್ತಮ ಬೌಲಿಂಗ್‌ ಪ್ರದರ್ಶದಿಂದ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) 55 ರನ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 6 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಮುಂಬೈ ತಂಡ ಆರಂಭದಲ್ಲೇ ನಾಯಕ ರೋಹಿತ್‌ ಶರ್ಮಾ (Rohith Sharma) ವಿಕೆಟ್‌ ಕಳೆದುಕೊಂಡಿತು. 59 ರನ್‌ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್‌ ಕಳೆದುಕೊಂಡಿತ್ತು. ಕ್ಯಾಮರೂನ್‌ ಗ್ರೀನ್‌ 33 ರನ್(26‌ ಎಸೆತ, 3 ಸಿಕ್ಸರ್‌), ಸೂರ್ಯಕುಮಾರ್‌ ಯಾದವ್‌ 23 ರನ್‌ (12 ಎಸೆತ, 3 ಬೌಂಡರಿ,1 ಸಿಕ್ಸರ್‌), ನೆಹಾಲ್ ವಧೇರಾ 40 ರನ್‌ (21 ಎಸೆತ, 3 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿದರು.

    ನೂರ್‌ ಅಹ್ಮದ್‌ 3 , ರಶೀದ್‌ ಖಾನ್‌ ಮತ್ತು ಮೋಹಿತ್‌ ಶರ್ಮಾ ತಲಾ 2, ಹಾರ್ದಿಕ್‌ ಪಾಂಡ್ಯ 1 ವಿಕೆಟ್‌ ಪಡೆದರು.

    ಸವಾಲಿನ ಮೊತ್ತ:
    ಗುಜರಾತ್‌ 12 ರನ್‌ ಗಳಿಸುವಷ್ಟರಲ್ಲೇ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಶುಭಮನ್‌ ಗಿಲ್‌ ಸ್ಫೋಟಕ 56 ರನ್‌(34 ಎಸೆತ, 7 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು.

    ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ 46 ರನ್‌ (22 ಎಸೆತ, 2 ಬೌಂಡರಿ, 4 ಸಿಕ್ಸರ್)‌, ಅಭಿನವ್‌ ಮನೋಹರ್‌ 42 ರನ್‌(21 ಎಸೆತ, 3 ಬೌಂಡರಿ, 3 ಸಿಕ್ಸರ್)‌ ಸಿಡಿಸಿ ಔಟಾದರು. ರಾಹುಲ್‌ ತೆವಾಟಿಯಾ ಔಟಾಗದೇ 20 ರನ್‌ (5 ಎಸೆತ, 3 ಸಿಕ್ಸರ್)‌ ಸಿಡಿಸಿದ ಪರಿಣಾಮ ತಂಡದ ಮೊತ್ತ 200 ರನ್‌ಗಳ ಗಡಿ ದಾಟಿತ್ತು.

    ರನ್‌ ಏರಿದ್ದು ಹೇಗೆ?
    50 ರನ್‌ – 36 ಎಸೆತ
    100 ರನ್‌ -73 ಎಸೆತ
    150 ರನ್‌ -102 ಎಸೆತ
    200 ರನ್‌ – 116 ಎಸೆತ

  • ಸಿಕ್ಸರ್‌, ಬೌಂಡರಿಗಳಿಂದಲೇ 50 ರನ್‌ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್‌

    ಸಿಕ್ಸರ್‌, ಬೌಂಡರಿಗಳಿಂದಲೇ 50 ರನ್‌ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್‌

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಲಕ್ನೋ ಸೂಪರ್‌ ಜೈಂಟ್ಸ್‌ (LSG)1 ರನ್‌ಗಳ ರೋಚಕ ಗೆಲುವಿಗೆ ಕಾರಣರಾದ ನಿಕೂಲಸ್‌ ಪೂರನ್‌ (Nicholas Pooran) ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ಮತ್ತು ಮಗುವಿಗೆ ಅರ್ಪಿಸಿದ್ದಾರೆ.

    ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂರನ್‌, ಸ್ಟೊಯ್ನಿಸ್‌ ಮತ್ತು ಕೆಎಲ್ ರಾಹುಲ್‌ (KL Rahul) ಉತ್ತಮ ಜೊತೆಯಾಟ ನೀಡಿದರು. ಕೊನೆಯ 4 ಓವರ್‌ಗಳಲ್ಲಿ 50 ರನ್‌ ಚೇಸ್‌ ಮಾಡಬಹುದಿತ್ತು. ಆದರೆ ನಾನು ಆರಂಭದಿಂದಲೂ ಹೊಡೆಯಲು ಯತ್ನಿಸಿದೆ. ಎರಡನೇ ಎಸೆತದಲ್ಲಿ ನಾನು ಸಿಕ್ಸ್‌ (Six) ಹೊಡೆದೆ. ಕೊನೆಯವರೆಗೆ ಇದ್ದು ತಂಡವನ್ನು ಗೆಲ್ಲಿಸಬೇಕು ಎಂದು ಪ್ರಯತ್ನಿಸಿದ್ದೆ. ಆದರೆ ಇದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

    ಐಪಿಎಲ್‌ ದಾಖಲೆ:
    ಬೆಂಗಳೂರು (Bengaluru) ವಿರುದ್ಧದ ಪಂದ್ಯದಲ್ಲಿ ಪೂರನ್‌ 15 ಎಸೆತಗಳಲ್ಲಿ 50 ರನ್‌ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ವರ್ಷದ ಐಪಿಎಲ್‌ ಆವೃತ್ತಿಯಲ್ಲಿ ದಾಖಲಾದ ವೇಗದ ಅರ್ಧಶತಕ ಎಂಬ ಹೆಗ್ಗಳಿಕೆಗೆ ಪೂರನ್‌ ಪಾತ್ರರಾಗಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಎರಡನೇ ವೇಗದ ಅರ್ಧಶತಕ ಹೊಡೆದ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಪೂರನ್‌ ಈಗ ಸೇರ್ಪಡೆಯಾಗಿದ್ದಾರೆ.

    ಈ ಹಿಂದೆ ಕೆಎಲ್‌ ರಾಹುಲ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ 14 ಎಸೆತಗಳಲ್ಲಿ 50 ರನ್‌ ಹೊಡೆದಿದ್ದರು. ಯೂಸೂಫ್‌ ಪಠಾಣ್‌, ಸುನಿಲ್‌ ನರೈನ್‌ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

    ಆರಂಭದಿಂದಲೇ ಸ್ಫೋಟಕ ಆಟ:
    213 ರನ್‌ಗಳ ಗುರಿಯನ್ನು ಪಡೆದ ಲಕ್ನೋ 23 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. 10.4 ಓವರ್‌ಗಳಲ್ಲಿ 99 ರನ್‌ ಆದಾಗ ಸ್ಟೊಯ್ನಿಸ್‌ ಔಟಾದಾಗ ಪಂದ್ಯ ಆರ್‌ಸಿಬಿ ಕಡೆ ವಾಲಿತ್ತು. ಬೆಂಗಳೂರು ಕಡೆ ವಾಲಿದ ಪಂದ್ಯವನ್ನು ಬ್ಯಾಟ್‌ ಮೂಲಕ ಲಕ್ನೋ ಕಡೆಗೆ ಪೂರನ್‌ ವಾಲಿಸಿದರು. ಎರಡನೇ ಎಸೆತದಲ್ಲಿ ಸಿಕ್ಸ್‌ ಹೊಡೆದು ಅಬ್ಬರಿಸಿದ್ದ ಪೂರನ್‌ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಅಂತಿಮವಾಗಿ 62 ರನ್‌ (19 ಎಸೆತ, 4 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರು. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ 115 ಮೀಟರ್‌ ಸಿಕ್ಸ್‌ – ಡುಪ್ಲೆಸಿಸ್‌ ಈಗ ಸಿಕ್ಸರ್‌ ವೀರ ಅಂದ್ರು ಫ್ಯಾನ್ಸ್‌

    19 ಎಸೆತಗಳ ಪೈಕಿ 3 ಎಸೆತಗಳಲ್ಲಿ (0,6,0,0,4,6,6,1,6,1,4,6,4,1,6,4,1,6,W) ಮಾತ್ರ ಪೂರನ್‌ ರನ್‌ ಹೊಡೆದಿರಲಿಲ್ಲ. ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ ಪೂರನ್‌ 58 ರನ್‌ ಚಚ್ಚಿದ್ದರು.

    ಪೂರನ್‌ ಮತ್ತು ಆಯುಷ್ ಬದೋನಿ 6ನೇ ವಿಕೆಟಿಗೆ ಕೇವಲ 35 ಎಸೆತಗಳಲ್ಲಿ 84 ರನ್‌ ಬಾರಿಸಿದ್ದರು. ಈ ಪೈಕಿ ಪೂರನ್‌ 17 ಎಸೆತಗಳಲ್ಲಿ 56 ರನ್‌ ಹೊಡೆದಿದ್ದರು. ಪೂರನ್‌ ಕ್ರೀಸ್‌ಗೆ ಬರುವಾಗ ಲಕ್ನೋ ತಂಡದ ಗೆಲುವಿಗೆ 56 ಎಸೆತಗಳಲ್ಲಿ 114 ರನ್‌ ಬೇಕಿತ್ತು. ಪೂರನ್‌ ಔಟಾದಾಗ ಗೆಲುವಿಗೆ 18 ಎಸೆತಗಳಲ್ಲಿ 24 ರನ್‌ಗಳ ಅಗತ್ಯವಿತ್ತು.

    ಮೊದಲ 6 ಓವರ್‌ ಪವರ್‌ ಪ್ಲೇನಲ್ಲಿ ಲಕ್ನೋ ತಂಡ 3 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಿತ್ತು. ಆದರೆ 8ನೇ ಓವರ್‌ನಿಂದ 16ನೇ ಓವರ್‌ ಅಂದರೆ 9 ಓವರ್‌ಗಳಲ್ಲಿ ಬರೋಬ್ಬರಿ 125 ರನ್‌ ಚಚ್ಚಿದ ಪರಿಣಾಮ ಲಕ್ನೋ ತಂಡ 1 ರನ್‌ಗಳ ರೋಚಕ ಜಯ ಸಾಧಿಸಿದೆ.

  • WTC ಫೈನಲ್‌ – ನ್ಯೂಜಿಲೆಂಡ್‌ ಕೈಯಲ್ಲಿ ಭಾರತದ ಭವಿಷ್ಯ

    WTC ಫೈನಲ್‌ – ನ್ಯೂಜಿಲೆಂಡ್‌ ಕೈಯಲ್ಲಿ ಭಾರತದ ಭವಿಷ್ಯ

    ಅಹಮದಾಬಾದ್‌: ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ (ICC World Test Championship) ಭಾರತ (India) ಪಾಲ್ಗೊಳ್ಳುತ್ತಾ ಇಲ್ಲವೋ ಎನ್ನುವುದು ಈಗ ಶ್ರೀಲಂಕಾ, ನ್ಯೂಜಿಲೆಂಡ್‌ (Sri Lanka New Zealand) ನಡುವೆ ನಡೆಯುತ್ತಿರುವ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗುವ ಸಾಧ್ಯತೆಯಿದೆ.

    ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾದ (Australia) ವಿರುದ್ಧ 4ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಜಯಗಳಿಸಿದ್ದರೆ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಈ ಪಂದ್ಯ ಡ್ರಾ ಆಗುವ ಸಾಧ್ಯತೆಯೇ ಹೆಚ್ಚಿರುವ ಕಾರಣ ಭಾರತದ ಭವಿಷ್ಯ ಈಗ ನ್ಯೂಜಿಲೆಂಡ್‌ ಕೈಯಲ್ಲಿದೆ. ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಬೇಗ ತಲುಪಿ!

    ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಎರಡು ಪಂದ್ಯಗಳನ್ನು ಜಯಿಸಿದರೆ ಶ್ರೀಲಂಕಾ ಫೈನಲ್‌ ಪ್ರವೇಶಿಸಲಿದೆ. ಒಂದು ಪಂದ್ಯ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಭಾರತ ಫೈನಲ್‌ ಪ್ರವೇಶಿಸಲಿದೆ.

    ಪ್ರಸ್ತುತ 68.52 ಪಿಸಿಟಿ (Percentage Of Points Earned) ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ 60.29 ಪಿಸಿಟಿ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 53.33 ಪಿಸಿಟಿ ಹೊಂದಿದ್ದು ಮೂರನೇ ಸ್ಥಾನದಲ್ಲಿದೆ.

    ನ್ಯೂಜಿಲೆಂಡ್‌ ವಿರುದ್ಧ ಶ್ರೀಲಂಕಾ ಮೊದಲ ಟೆಸ್ಟ್‌ ಗೆದ್ದರೆ ಪಿಸಿಟಿ 57.58ಕ್ಕೆ ಏರಿಕೆಯಾಗಲಿದೆ. ಎರಡನೇ ಟೆಸ್ಟ್‌ ಪಂದ್ಯ ಗೆದ್ದರೆ ಪಿಸಿಟಿ 61.1ಕ್ಕೆ ಏರಿಕೆಯಾಗಲಿರುವ ಕಾರಣ ಶ್ರೀಲಂಕಾ ಫೈನಲ್‌ಗೆ ಪ್ರವೇಶ ಪಡೆಯಲಿದೆ.

    ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ಗೆಲುವಿಗೆ 285 ರನ್‌ ಬೇಕಿದೆ. ನಾಲ್ಕನೇಯ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್‌ 1 ವಿಕೆಟ್‌ ಕಳೆದುಕೊಂಡು 28 ರನ್‌ ಗಳಿಸಿದ್ದು ಗೆಲುವಿಗೆ 257 ರನ್‌ ಅಗತ್ಯವಿದೆ.

  • ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    ಇಂದೋರ್‌: ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್‌ನ (Test Cricket) ಮೊದಲ ದಿನವೇ 14 ವಿಕೆಟ್‌ ಉರುಳಿದ್ದು ಪಿಚ್‌ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್‌ ಆಗಿದೆ. ನಂತರ ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 54 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 156 ರನ್‌ಗಳಿಸಿದ್ದು 47 ರನ್‌ ಮುನ್ನಡೆಯಲ್ಲಿದೆ.

    ಭಾರತದ ಪರವಾಗಿ ವಿರಾಟ್‌ ಕೊಹ್ಲಿ 22 ರನ್‌, ಶುಭಮನ್‌ ಗಿಲ್‌ 21 ರನ್‌ ಶ್ರೀಕರ್‌ ಭರತ್‌ ಮತ್ತು ಉಮೇಶ್‌ ಯಾದವ್‌ ತಲಾ 17 ರನ್‌ ಹೊಡೆದು ಔಟಾದರು. ಸ್ಪಿನ್ನರ್‌ ಮ್ಯಾಥ್ಯೂ ಕುಹ್ನೆಮನ್‌ 5 ವಿಕಟ್‌ ಪಡೆದರೆ ನಥನ್‌ ಲಿಯಾನ್‌ 3 ವಿಕೆಟ್‌, ಟಾಡ್ ಮರ್ಫಿ ಒಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಫಾಲೋ ಆನ್‌ಗೆ ತುತ್ತಾದ್ರೂ 1 ರನ್ ರೋಚಕ ಜಯ – 22 ವರ್ಷದ ಬಳಿಕ ನ್ಯೂಜಿಲೆಂಡ್ ಸಾಧನೆ

    ಆಸ್ಟ್ರೇಲಿಯಾ ಪರವಾಗಿ ಉಸ್ಮಾನ್ ಖವಾಜಾ 60 ರನ್‌, ಮಾರ್ನಸ್ ಲಾಬುಶೆನ್‌ 31 ರನ್‌, ಸ್ವೀವ್‌ ಸ್ಮಿತ್‌ 26 ರನ್‌ ಗಳಿಸಿ ಔಟಾಗಿದ್ದಾರೆ. ಪೀಟರ್‌ ಹ್ಯಾಂಡ್ಸ್‌ಕಾಂಬ್‌ 7 ರನ್‌, ಕ್ಯಾಮರೂನ್‌ ಗ್ರೀನ್‌ 6 ರನ್‌ ಗಳಿಸಿದ್ದು ನಾಳೆ ಬ್ಯಾಟಿಂಗ್‌ ಮಾಡಲಿದ್ದಾರೆ. ಭಾರತದ ಪರವಾಗಿ ಎಲ್ಲಾ 4 ವಿಕೆಟ್‌ಗಳನ್ನು ರವೀದ್ರ ಜಡೇಜಾ (Ravindra Jadeja) ಪಡೆದಿರುವುದು ವಿಶೇಷ.

    ದ್ರಾವಿಡ್‌ ಪರಿಶೀಲನೆ:
    ಮಧ್ಯಾಹ್ನ ಭೋಜನ ವಿರಾಮದ ವೇಳೆ ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಕ್ಯುರೇಟರ್‌ ಜೊತೆ ಪಿಚ್‌ ಬಳಿ ಬಂದು ಪರಿಶೀಲಿಸಿದ್ದಾರೆ. ಪಿಚ್‌ ವೀಕ್ಷಣೆ ಮಾಡಿದ ಬಳಿಕ ದ್ರಾವಿಡ್‌ ಅಸಮಾಧಾನಗೊಂಡಂತೆ ಕಾಣುತ್ತಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಟೀಕೆ:
    ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕನೇಯ ದಿನ ಅಥವಾ ಐದನೇ ದಿನ ಪಿಚ್‌ ಸಾಮಾನ್ಯವಾಗಿ ಬೌಲಿಂಗ್, ಸ್ಪಿನ್‌ ಪಿಚ್‌ ಆಗಿ ಬದಲಾಗುತ್ತದೆ. ಆದರೆ ಇಲ್ಲಿ ಮೊದಲ ದಿನವೇ ಸ್ಪಿನ್ನರ್‌ಗಳಿಗೆ ನೆರವು ಸಿಕ್ಕಿದೆ. ಬಾಲ್‌ ವೇಗವಾಗಿ ಟರ್ನ್‌ ಆಗುವುದನ್ನು ನೋಡಿ ಅಭಿಮಾನಿಗಳು ಕ್ಯುರೇಟರ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಮೊದಲ ಟೆಸ್ಟ್‌ ಮತ್ತು ಎರಡನೇ ಟೆಸ್ಟ್‌ ಕೇವಲ ಮೂರು ದಿನಕ್ಕೆ ಅಂತ್ಯ ಕಂಡಿತ್ತು. ಈಗ ಮೊದಲ ದಿನವೇ 14 ವಿಕೆಟ್‌ ಪತನಗೊಂಡಿರುವ ಪರಿಣಾಮ ಈ ಟೆಸ್ಟ್‌ ಪಂದ್ಯವೂ ಬಹಳ ಬೇಗ ಮುಗಿಯುವ ಸಾಧ್ಯತೆಯಿದೆ.

  • WPL ಬಿಡ್‌ನಲ್ಲಿದ್ದಾರೆ 409 ಆಟಗಾರ್ತಿಯರು – ಹರ್ಮನ್‌, ಸ್ಮೃತಿಗೆ 50 ಲಕ್ಷ ಮೂಲ ಬೆಲೆ

    WPL ಬಿಡ್‌ನಲ್ಲಿದ್ದಾರೆ 409 ಆಟಗಾರ್ತಿಯರು – ಹರ್ಮನ್‌, ಸ್ಮೃತಿಗೆ 50 ಲಕ್ಷ ಮೂಲ ಬೆಲೆ

    ಮುಂಬೈ: ಮಹಿಳೆಯರ ಪ್ರೀಮಿಯರ್ ಲೀಗ್‌ (Women’s Premier League) ಹರಾಜಿನಲ್ಲಿ ಪಾಲ್ಗೊಂಡಿರುವ ಆಟಗಾರ್ತಿಯರ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು ಒಟ್ಟು 409 ಆಟಗಾರ್ತಿಯರು ಬಿಡ್‌ಗೆ (Auction) ಅರ್ಹತೆ ಪಡೆದಿದ್ದಾರೆ.

    ಒಟ್ಟು 1,525 ಆಟಗಾರ್ತಿಯರು ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರು. ದಾಖಲೆ ಪರಿಶೀಲನೆ ಮಾಡಿ 409 ಆಟಗಾರ್ತಿಯರ ಹೆಸರನ್ನು ಮಾತ್ರ ಬಿಡ್‌ಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ 246 ಭಾರತೀಯರಾಗಿದ್ದರೆ 163 ವಿದೇಶಿ ಆಟಗಾರ್ತಿಯರು ಇದ್ದಾರೆ.

    ಆಟಗಾರ್ತಿಯರ ಗರಿಷ್ಠ ಮೂಲ ಬೆಲೆ 50 ಲಕ್ಷ ರೂ. ನಿಗದಿ ಮಾಡಲಾಗಿದೆ. ಈ ಪಟ್ಟಿಯಲ್ಲಿ 24 ಆಟಗಾರ್ತಿಯರಿದ್ದು, ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ, ಶೆಫಾಲಿ ವರ್ಮಾ ಮತ್ತಿತರರು ಸ್ಥಾನ ಪಡೆದಿದ್ದಾರೆ. 40 ಲಕ್ಷ ಮೂಲ ಬೆಲೆ ಪಟ್ಟಿಯಲ್ಲಿ 40 ಆಟಗಾರ್ತಿಯರಿದ್ದಾರೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.

    ಪ್ರತಿ ತಂಡಗಳು 12 ಕೋಟಿ ರೂ. ಒಳಗಡೆ ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಬೇಕಾಗುತ್ತದೆ. 409 ಆಟಗಾರ್ತಿಯರ ಪೈಕಿ 90 ಮಂದಿ ಹರಾಜಾಗಲಿದ್ದಾರೆ. 5 ತಂಡಗಳಲ್ಲಿ 60 ಭಾರತೀಯ ಮತ್ತು 30 ವಿದೇಶಿ ಆಟಗಾರ್ತಿಯರು ಇರಲಿದ್ದಾರೆ. ಪ್ರತಿ ತಂಡದಲ್ಲಿ ಗರಿಷ್ಠ 12, ಗರಿಷ್ಠ 6 ವಿದೇಶಿ ಆಟಗಾರ್ತಿಯರು ಇರಲಿದ್ದಾರೆ.

    ಮುಂಬೈಯಲ್ಲಿರುವ ಜಿಯೋ ಸೆಂಟರ್‌ನಲ್ಲಿ ಫೆ. 13ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಮಾರ್ಚ್‌ 4 ರಿಂದ 26 ರವರೆಗೆ ಕ್ರಿಕೆಟ್‌ ಟೂರ್ನಿ ನಡೆಯಲಿದ್ದು, ಎಲ್ಲಾ ಪಂದ್ಯಗಳು ಮುಂಬೈನಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ

    Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ

    ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ ಬಜೆಟ್‍ನಲ್ಲಿ (Union Budget 2023) ಕ್ರೀಡಾ ಕ್ಷೇತ್ರಕ್ಕೆ (Sports) ದಾಖಲೆಯ 3,397.32 ಕೋಟಿ ರೂ. ಮೀಸಲಿಡಲಾಗಿದೆ.

    ಈವರೆಗಿನ ಬಜೆಟ್‍ನಲ್ಲಿ ಇಷ್ಟು ದೊಡ್ಡ ಮೊತ್ತದ ಅನುದಾನ ಕ್ರೀಡಾಗೆ ನೀಡಿರಲಿಲ್ಲ. ಈ ಬಾರಿ ದಾಖಲೆಯ ಮೊತ್ತದ ಅನುದಾನ ನೀಡಲಾಗಿದೆ. 2023ರ ಏಷ್ಯನ್ ಗೇಮ್ಸ್ (Asian Games), ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಸಿದ್ಧತೆಗಾಗಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಖೇಲೋ ಇಂಡಿಯಾಗಾಗಿ (Khelo India) 1,045 ಕೋಟಿ ರೂ. ಅನುದಾನ ನೀಡಲಾಗಿದೆ. ಇದನ್ನೂ ಓದಿ: Union Budget 2023: ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ – ಯಾವುದು ಇಳಿಕೆ? ಯಾವುದು ಏರಿಕೆ?

    ಈ ಬಾರಿಯ ಬಜೆಟ್‍ನಲ್ಲಿ ರಾಷ್ಟ್ರೀಯ ಕ್ರೀಡಾ ಫೆಡರೇಷನ್‍ಗೆ 325 ಕೋಟಿ ರೂ. ನೆರವು ನೀಡಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಈ ಬಾರಿ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಿಗಾಗಿ 785.52 ಕೋಟಿ ರೂ. ಅನುದಾನ ನೀಡಲಾಗಿದೆ. 2022-2023ನೇ ಸಾಲಿನ ಬಜೆಟ್‍ನಲ್ಲಿ ಕ್ರೀಡೆಗೆ ನೀಡಿದ್ದ ಅನುದಾನ ಈ ಬಾರಿ 358.5 ಕೋಟಿ ರೂ.ಗೆ ಏರಿಕೆ ಕಂಡಿದ್ದು, 2022-2023ನೇ ಸಾಲಿನಲ್ಲಿ 2,757 ಕೋಟಿ ರೂ. ಅನುದಾನ ನೀಡಲಾಗಿತ್ತು. ಇದನ್ನೂ ಓದಿ: Union Budget 2023: 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ

    2023-24 ಕ್ರೀಡಾ ಬಜೆಟ್ ಹಂಚಿಕೆ:
    ಖೇಲೋ ಇಂಡಿಯಾ: 1,045 ಕೋಟಿ ರೂ.
    ಸಾಯಿ: 785.52 ಕೋಟಿ ರೂ.
    ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು: 325 ಕೋಟಿ ರೂ.
    ರಾಷ್ಟ್ರೀಯ ಸೇವಾ ಯೋಜನೆ: 325 ಕೋಟಿ ರೂ.
    ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ: 15 ಕೋಟಿ ರೂ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್‌ 19 ವಿಶ್ವಕಪ್‌

    ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್‌ 19 ವಿಶ್ವಕಪ್‌

    ಪಾಚೆಫ್‌ಸ್ಟ್ರೂಮ್‌: ಅಜೇಯ ಇಂಗ್ಲೆಂಡ್‌ (England) ತಂಡದ ವಿರುದ್ಧ 7 ವಿಕೆಟ್‌ಗಳ ಸಾಧಿಸಿದ ಭಾರತದ ಮಹಿಳೆಯರು (India Womens) ಚೊಚ್ಚಲ ಅಂಡರ್-19‌ ಟಿ 20 ವಿಶ್ವಕಪ್‌ (U19 T20) ಜಯಿಸಿ ಇತಿಹಾಸ ಸೃಷ್ಟಿಸಿದ್ದಾರೆ.

    ಗೆಲ್ಲಲು 69 ರನ್‌ಗಳ ಗುರಿಯನ್ನು ಪಡೆದ ಭಾರತ 14 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 69 ರನ್‌ ಹೊಡೆಯುವ ಮೂಲಕ ವಿಶ್ವಕಪ್‌ ಗೆದ್ದುಕೊಂಡಿತು.

    ಭಾರತದ ಪರ ಶಫಾಲಿ ವರ್ಮಾ 15 ರನ್‌, ಸೌಮ್ಯ ತಿವಾರಿ ಔಟಗದೇ 24 ರನ್, ಗೊಂಗಡಿ ತಿಷಾ 24 ರನ್‌ ಹೊಡೆದರು.

    ಅತ್ಯುತ್ತಮ ಬೌಲಿಂಗ್‌ ಮಾಡಿದ ಭಾರತ 17.1 ಓವರ್‌ಗಳಲ್ಲಿ 68 ರನ್‌ಗಳಿಗೆ ಇಂಗ್ಲೆಂಡ್‌  ತಂಡವನ್ನು ಆಲೌಟ್‌ ಮಾಡಿತು. ಭಾರತದ ಪರ ಸಾಧು, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್‌ ಪಡೆದರು.

    ಗುಂಪು ಹಂತದ ಮೂರು ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ ಕೇವಲ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತಿತ್ತು. ಇಂಗ್ಲೆಂಡ್‌ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

    ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

    ಗುವಾಹಟಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವರ್ಷದ ಮೊದಲ ಏಕದಿನ ಪಂದ್ಯದಲ್ಲೇ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ (Sachin Tendulkar) ಎರಡು ದಾಖಲೆಯನ್ನು ಸರಿಗಟ್ಟಿದ್ದಾರೆ.

    ಇಂದಿನ ಪಂದ್ಯದಲ್ಲಿ ಕೊಹ್ಲಿ 80 ಎಸೆತದಲ್ಲಿ ಶತಕ(Century) ಹೊಡೆದರು. ಈ ಮೂಲಕ ಸ್ವದೇಶದಲ್ಲಿ 20 ಶತಕ ಸಿಡಿಸಿದ ಸಚಿನ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಸಚಿನ್‌ ತೆಂಡೂಲ್ಕರ್‌ 164 ಪಂದ್ಯಗಳ 102 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರೆ ಕೊಹ್ಲಿ 102 ಪಂದ್ಯಗಳ 99 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಸಚಿನ್‌ 48.68 ಸರಾಸರಿಯಲ್ಲಿ 6,976 ರನ್‌ ಹೊಡೆದರೆ ಕೊಹ್ಲಿ 59.68 ಸರಾಸರಿಯಲ್ಲಿ 5,133 ರನ್‌ ಹೊಡೆದಿದ್ದಾರೆ.

    ಏಕದಿನದಲ್ಲಿ ಕೊಹ್ಲಿ ಒಟ್ಟು 45 ಶತಕ ಹೊಡೆದಿದ್ದು ಲಂಕಾ ವಿರುದ್ಧವೇ 9 ಶತಕ ಬಾರಿಸಿದ್ದಾರೆ. ಈ ಹಿಂದೆ ಸಚಿನ್‌  ಲಂಕಾ ವಿರುದ್ಧ 9 ಶತಕ ಹೊಡೆದಿದ್ದರು. ಮುಂದಿನ ಪಂದ್ಯದಲ್ಲಿ ಶತಕ ಹೊಡೆದರೆ ಕೊಹ್ಲಿ ಎರಡು ದಾಖಲೆಯನ್ನು ಮುರಿಯಲಿದ್ದಾರೆ.

    19.4 ಓವರ್‌ನಲ್ಲಿ ಕ್ರೀಸ್‌ಗೆ ಬಂದಿದ್ದ ಕೊಹ್ಲಿ ಅಂತಿಮವಾಗಿ 48.2 ಓವರ್‌ ತನಕ ಇದ್ದು 113 ರನ್‌( 87 ಎಸೆತ, 12 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರು.

    ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಭಾರತದ ಪರ ಮೊದಲ ವಿಕೆಟಿಗೆ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ 118 ಎಸೆತಗಳಿಗೆ 143 ರನ್‌ ಜೊತೆಯಾಟ ನೀಡಿದರು. ಶುಭಮನ್‌ ಗಿಲ್‌ 70 ರನ್‌(60 ಎಸೆತ, 11 ಬೌಂಡರಿ) ಹೊಡೆದರೆ ರೋಹಿತ್‌ ಶರ್ಮಾ 83 ರನ್‌( 67 ಎಸೆತ, 9 ಬೌಂಡರಿ, 3 ಸಿಕ್ಸರ್)‌ ಹೊಡೆದು ಔಟಾದರು.

    ಶ್ರೇಯಸ್‌ ಅಯ್ಯರ್‌ 28 ರನ್, ಕೆಎಲ್‌ ರಾಹುಲ್‌ 39 ರನ್‌ ಹೊಡೆದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 373 ರನ್‌ ಗಳಿಸಿತು.

    ರನ್‌ ಏರಿದ್ದು ಹೇಗೆ?
    50 ರನ್‌ 40 ಎಸೆತ
    100 ರನ್‌ 89 ಎಸೆತ
    150 ರನ್‌ 125 ಎಸೆತ
    200 ರನ್‌ 162 ಎಸೆತ
    250 ರನ್‌ 213 ಎಸೆತ
    300 ರನ್‌ 244 ಎಸೆತ
    350 ರನ್‌ 280 ಎಸೆತ
    373 ರನ್‌ 300 ಎಸೆತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k