Tag: Sports Department

  • 6 ತಿಂಗಳಿಂದ ಸಂಬಳ ಇಲ್ಲ – ಸರ್ಕಾರಿ ಕಚೇರಿಯಲ್ಲೇ ಉದ್ಯೋಗಿ ಆತ್ಮಹತ್ಯೆಗೆ ಯತ್ನ

    6 ತಿಂಗಳಿಂದ ಸಂಬಳ ಇಲ್ಲ – ಸರ್ಕಾರಿ ಕಚೇರಿಯಲ್ಲೇ ಉದ್ಯೋಗಿ ಆತ್ಮಹತ್ಯೆಗೆ ಯತ್ನ

    ಮೈಸೂರು: 6 ತಿಂಗಳಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ಉದ್ಯೋಗಿಯೊಬ್ಬ ಸರ್ಕಾರಿ ಕಚೇರಿಯ ಕೊಠಡಿಯಲ್ಲಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನಡೆದಿದೆ.

    ಹೊರ ಗುತ್ತಿಗೆ ನೌಕರ ದೀಪಕ್ ಆತ್ಮಹತ್ಯೆಗೆ ಯತ್ನಿಸಿದ ಉದ್ಯೋಗಿ. ಕಳೆದ 6 ತಿಂಗಳಿಂದ ಸಂಬಳ ನೀಡದ್ದಕ್ಕೆ ಬೇಸರಗೊಂಡಿದ್ದ ಉದ್ಯೋಗಿ ದೀಪಕ್‌ ಕೆಲಸಕ್ಕೆ ಬಂದ ವೇಳೆ ಉಪ ನಿರ್ದೇಶಕರನ್ನು ಪ್ರಶ್ನೆ ಮಾಡಿದ್ದಾನೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಚೇರಿಯಲ್ಲೇ ನೇಣಿಗೆ ಶರಣಾಗಲು ಯತ್ನಿಸಿ ಟವೆಲ್ ನಿಂದ ಫ್ಯಾನ್‌ಗೆ ಬಿಗಿದುಕೊಳ್ಳಲು ಮುಂದಾಗಿದ್ದಾನೆ. ಇದನ್ನೂ ಓದಿ: ಹನಿಮೂನ್ ಮರ್ಡರ್‌ನಂತೆಯೇ ಆಂಧ್ರದಲ್ಲೂ ಮರ್ಡರ್ – ಮೇಘಾಲಯ ಹತ್ಯೆ ವಿಚಾರದ ಬಗ್ಗೆಯೂ ಮಾತಾಡಿದ್ರಂತೆ ಆರೋಪಿಗಳು

    ತಕ್ಷಣ ದೀಪಕ್‌ನನ್ನು ಸಹ ಸಿಬ್ಬಂದಿ ತಡೆದು ವಾಪಸ್ ಕಳುಹಿಸಿದ್ದಾರೆ. ಇದೇ ವಿಚಾರಕ್ಕೆ ನಾಲ್ಕು ತಿಂಗಳ ಹಿಂದೆ ದೀಪಕ್ ಕೈ ಕೊಯ್ದುಕೊಂಡಿದ್ದ. ಘಟನೆ ನಂತರ ಈ ದಿನವೇ ಸಂಬಳ ಹಾಕಲಾಗುತ್ತೆ ಎಂದು ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಹೇಳಿದ್ದಾರೆ. ಇದನ್ನೂ ಓದಿ: 1 ಲಕ್ಷ ಕ್ಯೂಸೆಕ್ ದಾಟಿದ ಕೃಷ್ಣೆಯ ಒಳಹರಿವು – ನದಿ ತೀರದಲ್ಲಿ ಪ್ರವಾಹದ ಆತಂಕ

    ಆತ ಹೊರ ಗುತ್ತಿಗೆ ನೌಕರ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ. ಮನೆಯ ಸಮಸ್ಯೆಯಿಂದ ಈ ರೀತಿ ಮಾಡಿಕೊಂಡಿದ್ದಾರೆ. ಇನ್ನು ಅರ್ಧ ಗಂಟೆಯಲ್ಲಿ ಸಂಬಳ ಹಾಕುತ್ತೇವೆ. ನಮ್ಮಲ್ಲಿ ಒಟ್ಟು 16 ಜನ ಹೊರ ಗುತ್ತಿಗೆ ನೌಕರರಿದ್ದಾರೆ. ಎಲ್ಲರಿಗೂ ಏಜೆನ್ಸಿ ಮೂಲಕವೇ ಸಂಬಳ ಆಗುತ್ತೆ. ಅದಕ್ಕು ನಮಗೂ ಸಂಬಂಧ ಇಲ್ಲ ಎಂದ ಸಹಾಯಕ ನಿರ್ದೇಶಕ ಹೇಳಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | 24 ಗಂಟೆಯಲ್ಲಿ 5 ಕಡೆ ಮೇಘಸ್ಫೋಟ – ಸಾವಿನ ಸಂಖ್ಯೆ ಐದಕ್ಕೆ ಏರಿಕೆ

  • ನಾನು ಸಚಿವ ಸ್ಥಾನಕ್ಕಾಗಿ ಎಲ್ಲೂ ಹೋಗಲ್ಲ: ಅಪ್ಪಚ್ಚು ರಂಜನ್

    ನಾನು ಸಚಿವ ಸ್ಥಾನಕ್ಕಾಗಿ ಎಲ್ಲೂ ಹೋಗಲ್ಲ: ಅಪ್ಪಚ್ಚು ರಂಜನ್

    ಮಡಿಕೇರಿ: ನಾನು ಸಚಿವ ಸ್ಥಾನಕ್ಕಾಗಿ ಎಲ್ಲೂ ಹೋಗಲ್ಲ ಹೈಕಮಾಂಡ್ ಮೇಲೆ ನನಗೆ ವಿಶ್ವಾಸವಿದೆ ಕೇಂದ್ರದ ನಾಯಕರು ಜಿಲ್ಲಾವಾರು ಸಾಮಾಜಿಕ ನ್ಯಾಯವನ್ನು ಈ ಬಾರೀ ಒದಗಿಸಲಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಚಿವ ಸ್ಥಾನಕ್ಕಾಗಿ ರಾಜ್ಯದ ಕೆಲ ನಾಯಕರು ಲಾಬಿ ನಡೆಸುತ್ತಿದ್ದರೆ, ಇತ್ತ ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ಜಿಲ್ಲಾ ಕೇಂದ್ರದಲ್ಲಿಯೇ ಇದ್ದಾರೆ. ಸದ್ಯ ಮಡಿಕೇರಿಯಲ್ಲಿ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕೇಂದ್ರ ನಾಯಕರು ಮೂಲ ಬಿಜೆಪಿಗರನ್ನು ಈ ಬಾರೀ ಗುರುತಿಸಲಿದ್ದಾರೆ. ಜಿಲ್ಲೆಯಲ್ಲಿ ಪ್ರವಾಹದ ಆತಂಕ ಇದೆ. ಜೊತೆಗೆ ಕೋವಿಡ್ ಸೋಂಕು ಹೆಚ್ಚುತ್ತಿದೆ. ಇದನ್ನು ಜಿಲ್ಲೆಯಲ್ಲಿ ನಿಯಂತ್ರಿಸಬೇಕಾಗಿದೆ. ಮೊದಲು ಜನಪ್ರತಿನಿಧಿಗಳಾಗಿ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾನು ಜಿಲ್ಲೆಯಲ್ಲೇ ಇದ್ದೇನೆ ಎಂದು ಹೇಳಿದರು.

    ನಾನು ಹಿಂದೆ ಯುವಜನ ಮತ್ತು ಕ್ರೀಡಾ ಸಚಿವನಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ರೀಡಾ ಇಲಾಖೆಗೆ 49 ಸಾವಿರ ಕೋಟಿ ರೂ. ಆಸ್ತಿ ಉಳಿಸುವ ಕೆಲಸ ಮಾಡಿದ್ದೇನೆ. ಇಂದಿಗೂ ರಾಜ್ಯಕ್ಕೆ ಒಂದು ಕ್ರೀಡಾ ನೀತಿ ಬೇಕಾಗಿದೆ. ಕ್ರೀಡಾ ವಿಶ್ವವಿದ್ಯಾನಿಲಯ ಬೇಕಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು. ಇದನ್ನೂ ಓದಿ: ಮೃತ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಬಿಎಸ್‍ವೈ

  • ಭಾರತದ ಪ್ರಪ್ರಥಮ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ

    ಭಾರತದ ಪ್ರಪ್ರಥಮ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ

    ಬೆಂಗಳೂರು: ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಪಣ ತೊಟ್ಟಿರುವ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜನೆ ಮಾಡಿದೆ.

    ಕೇಲೋ ಇಂಡಿಯಾ ಎನ್ನುವ ಘೋಷವಾಕ್ಯದಡಿಯಲ್ಲಿ ಭಾರತದಾದ್ಯಂತ ಯುವ ಕ್ರೀಡಾಪಟುಗಳಿಗೆ ಉತ್ತೇಜನ ಮತ್ತು ದೇಶವನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಯುವಕರಿಗೆ ಸಾಕಷ್ಟು ಅವಕಾಶವನ್ನು ಕ್ರೀಡಾ ಇಲಾಖೆ ನೀಡುತ್ತಿದೆ.

    ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ಕ್ರೀಡಾ ಪ್ರಾಧಿಕಾರ ಕರ್ನಾಟಕ ಹಾಗೂ ರಾಜ್ಯ ಒಲಿಂಪಿಕ್ ಸಂಸ್ಥೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜನೆ ಮಾಡಿದೆ.

    ರಾಜ್ಯದ ಗ್ರಾಮೀಣ ಭಾಗದ ಜೊತೆ ನಗರದ ಕ್ರೀಡಾಪಟುಗಳಿಗೆ ಇದು ಉತ್ತಮ ವೇದಿಕೆಯಾಗಿದ್ದು, ಯುವಕ- ಯುವತಿಯರು ತಮ್ಮಲ್ಲಿರೋ ಪ್ರತಿಭೆಯನ್ನು ಅನಾವರಣ ಮಾಡಲು ಇದು ವೇದಿಕೆಯಾಗಿದೆ.

  • ಅಂತಾರಾಷ್ಟ್ರೀಯ ಚೆಸ್ ಪ್ರತಿಭೆಗೆ ಬೇಕಿದೆ ನೆರವು

    ಅಂತಾರಾಷ್ಟ್ರೀಯ ಚೆಸ್ ಪ್ರತಿಭೆಗೆ ಬೇಕಿದೆ ನೆರವು

    ಶಿವಮೊಗ್ಗ: ಚೆಸ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ 9 ವರ್ಷದಿಂದ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ಅಂಧ ಚೆಸ್ ಆಟಗಾರನಿಗೆ ಸರಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಕೀರ್ತಿ ಬೆಳಗಿಸಿದ ಈ ಆಟಗಾರನ ಗುರುತಿಸುವ ಪ್ರಯತ್ನ ಸಹ ನಡೆದಿಲ್ಲ.

    ರಾಜ್ಯದ ಕ್ರೀಡಾ ಸಚಿವರ ತವರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ, ಅಂತರರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ ಕಿಶನ್ ಗಂಗೊಳ್ಳಿ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಕೀಡಾಪಟು. ಶಿವಮೊಗ್ಗದ ವಿನೋಬ ನಗರ ನಿವಾಸಿಯಾಗಿರುವ ಕಿಶನ್, ಹುಟ್ಟಿನಿಂದಲೇ ಶೇ.75% ಭಾಗ ದೃಷ್ಟಿ ಸಮಸ್ಯೆ ಹೊಂದಿದ್ದಾರೆ. ಆದರೂ ಛಲ ಬಿಡದೆ ಜೀವನದಲ್ಲಿ ಏನಾದರೂ ಸಾಧಿಸಬೇಕು, ತಾಯ್ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂಬ ಕಾರಣದಿಂದ ಕಿಶನ್ ಚೆಸ್ ಕಲಿತಿದ್ದಾರೆ.

    ಚೆಸ್ ಕಲಿತು ಕೇವಲ ಜಿಲ್ಲೆ ಹಾಗೂ ರಾಜ್ಯಕ್ಕಷ್ಟೇ ಸೀಮಿತವಾಗದೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಹತ್ತು ಹಲವು ಪ್ರಶಸ್ತಿ, ಚಿನ್ನದ ಪದಕ ಗಳಿಸಿದ್ದಾರೆ. ಇಷ್ಟೆಲ್ಲಾ ಪ್ರತಿಭೆ ಇದ್ದರೂ ರಾಜ್ಯ ಸರಕಾರದಿಂದ ಸಿಗಬೇಕಾದ ಮನ್ನಣೆ, ಅವಕಾಶ, ಸಹಾಯ ಮಾತ್ರ ಇದುವರೆಗೂ ಕಿಶನ್ ಅವರಿಗೆ ಲಭಿಸಿಲ್ಲ.

    2018 ರಲ್ಲಿ ಜಕಾರ್ತಾದಲ್ಲಿ ನಡೆದ ಮೂರನೇ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿರುವ ಕಿಶನ್ ಅವರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಸನ್ಮಾನ ಮಾಡಿದ್ದರು. ಆದರೆ ರಾಜ್ಯ ಸರಕಾರ ಮಾತ್ರ ಈ ಪ್ರತಿಭೆಯನ್ನು ಗುರುತಿಸಿಲ್ಲ. ಭವಿಷ್ಯದಲ್ಲಿ ವಿಶ್ವ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಬೇಕು ಎಂಬ ಕನಸು ಹೊತ್ತಿರುವ ಕಿಶನ್ ಕುಟುಂಬ ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

    ಈ ಕುರಿತು ಮಾತನಾಡಿರುವ ಕಿಶನ್ ಅವರ ತಾಯಿ ತನ್ನ ಮಗನಿಗೆ ಚೆಸ್ ತರಬೇತಿ ಕೊಡಿಸಲು ಬಡ್ಡಿ ಸಾಲ ಮಾಡಿ, ಮನೆಯಲ್ಲಿದ್ದ ಅಲ್ಪ ಸ್ವಲ್ಪ ಚಿನ್ನವನ್ನು ಗಿರವಿಯಿಟ್ಟು ತರಬೇತಿ ಕೊಡಿಸುತ್ತಿದ್ದೇವೆ. ಮುಂದೆ ಉನ್ನತ ತರಬೇತಿ ಪಡೆಯಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಸಂಘ ಸಂಸ್ಥೆಗಳು, ಸರಕಾರ ಪ್ರತಿಭೆಯನ್ನು ಗುರುತಿಸಿ ಸಹಾಯ ಮಾಡಬೇಕಿದೆ ಎಂದು ಮನವಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಪತಾಕೆ ಹಾರಿಸಿಸಲು ಸಿದ್ಧವಾಗುತ್ತಿರುವ ಕಿಶನ್ ಅವರನ್ನು ಗುರುತಿಸಿ ಕ್ರೀಡಾ ಸಚಿವ ಈಶ್ವರಪ್ಪ ನೆರವಿಗೆ ಧವಿಸಬೇಕು ಎಂಬುವುದು ನಮ್ಮ ಆಶಯವಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಂಚಕ್ಕೆ ಬಾರೇ ಎಂದಿದ್ದ ವಿಂಗ್ ಕಮಾಂಡರ್ ಮೇಲೆ ತನಿಖೆಗೆ ಆದೇಶ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮಂಚಕ್ಕೆ ಬಾರೇ ಎಂದಿದ್ದ ವಿಂಗ್ ಕಮಾಂಡರ್ ಮೇಲೆ ತನಿಖೆಗೆ ಆದೇಶ

    – ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

    ಬೆಂಗಳೂರು: ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.

    ಮಂಗಳವಾರ ಬೆಳಗ್ಗೆ ಅಮರ್ಜಿತ್ ಸಿಂಗ್ ಕಾಮಕಾಂಡದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬಳಿಕ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಚ್ಚೆತ್ತುಗೊಂಡು ಜಂಟಿ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದೆ.

    ಅಮರ್ಜಿತ್ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿದ್ದು, ಪೈಲೆಟ್ ಆಗುವ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡುತ್ತಿದ್ದಾರೆ ಎಂದ ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದರು. ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ ಎಂದು ಹೇಳಿ ಬೆಡ್ ರೂಂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಅಮರ್ಜಿತ್ ಸಿಂಗ್ ಮೇಲೆ ಕೇಳಿ ಬಂದಿತ್ತು. ಇದನ್ನೂ ಓದಿ: ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ – ವಿದ್ಯಾರ್ಥಿಗಳಿಗೆ ವಿಂಗ್ ಕಮಾಂಡರ್​ನಿಂದ ಪೋಲಿ ಮೆಸೇಜ್

    ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾತನಾಡಿ, “ದೂರುಗಳು ಬಂದಿದೆ. ಆದರೆ ನಮಗೆ ವಿಡಿಯೋ ದಾಖಲೆ ಹಾಗೂ ಮೆಸೇಜ್ ದಾಖಲೆಗಳು ಇರಲಿಲ್ಲ. ಪಬ್ಲಿಕ್ ಟಿವಿ ವರದಿ ಬಳಿಕ ಈ ದಾಖಲೆ ಪರಿಶೀಲಿಸಿ ಕ್ರಮಗೊಳ್ಳುತ್ತೇವೆ. ಈಗಾಗಲೇ ಬೇರೆ ತರಬೇತುದಾರರಿಗೆ ಟೆಂಡರ್ ಕರೆಯಲಿದ್ದೇವೆ. ಏಕಾಏಕಿ ಅಮರ್ಜಿತ್ ನನ್ನು ವಜಾಗೊಳಿಸಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಪರ್ಯಾಯ ಫ್ಲೈಯಿಂಗ್ ಟ್ರೈನರ್ ಸಿಕ್ಕ ತಕ್ಷಣ ಈತನನ್ನು ಅಮಾನತು ಮಾಡಲಿದ್ದೇವೆ. ಈ ವರದಿಯ ಬಗ್ಗೆ ಉಪಮುಖ್ಯಮಂತ್ರಿ, ಇಲಾಖಾ ಸಚಿವ ಪರಮೇಶ್ವರ್ ಅವರ ಗಮನಕ್ಕೂ ತಂದಿದ್ದೇನೆ” ಎಂದು ತಿಳಿಸಿದ್ದಾರೆ.

    ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಮಂಚಕ್ಕೆ ಬಾರೇ ಎಂದು ಕರೆದು ಬೆಡ್ ರೂಂ ಫೋಟೋ ಕಳುಹಿಸಿದ್ದರು. ಅಲ್ಲದೇ ವಿದ್ಯಾರ್ಥಿನಿಗೆ ಐದು ತಿಂಗಳಲ್ಲಿ ಬರೋಬ್ಬರಿ 900 ಮೆಸೇಜ್ ಮಾಡಿದ್ದಾರೆ. ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಕಳುಹಿಸಿರುವ ಪೋಲಿ ವಾಟ್ಸಪ್ ಮಸೇಜ್ ಗಳ ಸ್ಕ್ರೀನ್ ಶಾಟ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ

    ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ

    ಕೊಡಗು: 27ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಓಟವನ್ನು ಕಗ್ಗೋಡ್ಲುವಿನ ದಿವಂಗತ ಸಿ.ಡಿ.ಬೋಪಯ್ಯನವರ ಗದ್ದೆ ಬಯಲಿನಲ್ಲಿ ಅದ್ಧೂರಿಯಾಗಿ ನಡೆಯಿತು.

    ಜಿಲ್ಲಾ ಮತ್ತು ತಾಲ್ಲೂಕು ಯುವ ಒಕ್ಕೂಟ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೆಸರುಗದ್ದೆ ಓಟ, ವಾಲಿಬಾಲ್ ಹಾಗೂ ಇನ್ನೂ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಕ್ರೀಡಾಪ್ರೇಮಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

    ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಆಟಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ, ಇಂತಹ ಹಳ್ಳಿ ಆಟಗಳಿಗೆ ಪ್ರೋತ್ಸಾಹ ನೀಡಲು ಕ್ರೀಡಾ ಇಲಾಖೆಯು ಸ್ಥಳೀಯ ಸಂಘಟನೆ ಸಹಾಯದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ 27 ವರ್ಷಗಳಿಂದ ನಿರಂತರವಾಗಿ ರಾಜ್ಯ ಮಟ್ಟದ ಕೆಸರು ಗದ್ದೆ ಹಾಗೂ ವಾಲಿಬಾಲ್ ಆಯೋಜಿಸುತ್ತಿರುವ ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

    ಈ ಕಾರ್ಯಕ್ರಮದಲ್ಲಿ ಚಿಕ್ಕವರು-ದೊಡ್ಡವರೆನ್ನುವ ಭೇದವಿಲ್ಲದೇ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು. ಮಹಿಳೆಯರ ಹಗ್ಗ-ಜಗ್ಗಾಟ ಸಾಕಷ್ಟು ಕುತೂಹಲ ಮೂಡಿಸಿತ್ತು. ಮಕ್ಕಳಿಗಾಗಿ ನಡೆದ ಕೆಸರುಗದ್ದೆ ಓಟವು ಈ ಬಾರಿ ವಿಶೇಷವಾಗಿತ್ತು.

    ಸ್ಪರ್ಧೆಗೆ ಆಗಮಿಸಿದ್ದ ಕ್ರೀಡಾಪ್ರೇಮಿಗಳು ಕೆಸರು ಗದ್ದೆ ಓಟ ಹಾಗೂ ವಾಲಿಬಾಲ್ ಆಟದಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews