Tag: Sports day

  • ಬಿಎಂಟಿಸಿ ರಜತ ಮಹೋತ್ಸವ- ಸಿಬ್ಬಂದಿಗೆ ಕ್ರೀಡಾಕೂಟ

    ಬಿಎಂಟಿಸಿ ರಜತ ಮಹೋತ್ಸವ- ಸಿಬ್ಬಂದಿಗೆ ಕ್ರೀಡಾಕೂಟ

    ಬೆಂಗಳೂರು: ಬಿಎಂಟಿಸಿಯ (BMTC) ರಜತ ಮಹೋತ್ಸವದ ಅಂಗವಾಗಿ ಸಂಸ್ಥೆಯ ಸಮಸ್ತ ಸಿಬ್ಬಂದಿಗೆ ಬಿಜಿಎಸ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಿತು.

    ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಕ್ರೀಡಾಕೂಟ (Sports Day) ನಡೆಯಿತು. 45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಕೆಳಗಿನ ವಯಸ್ಸಿನ ವರ್ಗದಲ್ಲಿ ಕ್ರೀಡಾಕೂಟ ನೆರವೇರಿತು.

    ಮಹಿಳೆಯರಿಗೆ ಖೋ ಖೋ, ಥ್ರೋ ಬಾಲ್ ಹಾಗೂ 75 ಮೀಟರ್ ಓಟದ ಸ್ಪರ್ಧೆ ಮತ್ತು ಪುರುಷ ವಿಭಾಗದಲ್ಲಿ ಕಬಡ್ಡಿ, ಕ್ರಿಕೆಟ್, 100 ಮೀಟರ್ ಓಟ, ಶಾಟ್ಪುಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕ್ರಿಕೆಟ್ ಆಡುವ ಮೂಲಕ ಸಿಬ್ಬಂದಿಯನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದರು. ಜಿ.ಸತ್ಯವತಿ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ಹಾಗೂ ಅಧಿಕಾರಿಗಳು ಕಬಡ್ಡಿ ಹಾಗೂ ಕ್ರಿಕೆಟ್ ಸ್ಪರ್ಧೆಗಳನ್ನು ವೀಕ್ಷಿಸುವ ಮೂಲಕ ಸ್ಪರ್ಧಾಳುಗಳನ್ನು ಪ್ರೆರೇಪಿಸಿದರು.

    ವಿಜೇತರಿಗೆ ಮಾನ್ಯ ಸಚಿವರು ಬಹುಮಾನಗಳನ್ನು ಪ್ರದಾನ ಮಾಡಿದರು. ಬಳಿಕ ಮಾತನಾಡಿ, ನಮ್ಮ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ತಮ್ಮ ಒತ್ತಡ ಕೆಲಸದ ನಡುವೆಯೂ ಈ ರೀತಿಯ ಕ್ರೀಡೆಗಳಲ್ಲಿ ಅತೀ ಉತ್ಹಾಹದಿಂದ ಭಾಗವಹಿಸಿರುವುದು ಹೆಮ್ಮೆಯ ವಿಷಯ. ಸುಮಾರು 800ಕ್ಕೂ ಹೆಚ್ಚು ನೌಕರರು ಭಾಗವಹಿಸಿರುವುದನ್ನು ತಿಳಿದು ಬಹಳ ಸಂತಸವಾಯಿತು. ಕಾರ್ಮಿಕ ಸ್ನೇಹಿ ಕಾರ್ಯಕ್ರಮಗಳು ಸಾರಿಗೆ ಸಂಸ್ಥೆಯಲ್ಲಿ ಮತ್ತಷ್ಟು ಕ್ರಿಯಾತ್ಮಕತೆಯನ್ನು ಬೆಳೆಸಲು ಸಹಕಾರಿಯಾಗುವುದಾಗಿ ತಿಳಿಸಿ, ಬಿಎಂಟಿಸಿಯು ಆಯೋಜಿಸಿರುವ ಈ ಕಾರ್ಯಕ್ರಮ ನಿಜಕ್ಕೂ ಉತ್ತಮ ಎಂದು ತಿಳಿಸಿ ಎಲ್ಲರಿಗೂ ಶುಭ ಕೋರಿದರು. ಇದನ್ನೂ ಓದಿ: ರೈತರಿಗೆ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಲು ಆದ್ಯತೆ ಕೊಡಿ: ಗೆಹ್ಲೋಟ್‌

    ಎರಡು ದಿನಗಳ ನಡೆದ ಕ್ರೀಡಾ ಕೂಟದಲ್ಲಿ ಬಿಎಂಟಿಸಿ ಪೂರ್ವ ವಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಡುಪಿಯ ವಿದ್ಯಾರ್ಥಿಗಳ ವನ್ ಡೇ ಹೋಟೆಲ್ – ಆಟದ ದಿನ ಜೀವನ ಪಾಠದ ಪ್ಲ್ಯಾನ್

    ಉಡುಪಿಯ ವಿದ್ಯಾರ್ಥಿಗಳ ವನ್ ಡೇ ಹೋಟೆಲ್ – ಆಟದ ದಿನ ಜೀವನ ಪಾಠದ ಪ್ಲ್ಯಾನ್

    ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಎಂಜಿಎಂ ಕಾಲೇಜಿನ ಸ್ಟೂಡೆಂಟ್ಸ್ ವೆಲ್ಫೇರ್ ಕೌನ್ಸಿಲ್‍ನ ವಿದ್ಯಾರ್ಥಿಗಳು ನಾಳೆ ಒಂದು ದಿನದ ಮಟ್ಟಿಗೆ ಹೋಟೆಲ್ ಬಿಸಿನೆಸ್ ಮಾಡಲಿದ್ದಾರೆ. ಉಡುಪಿಯ ಹೋಟೆಲ್‍ಗಳಲ್ಲಿ ಸಿಗುವ ಎಲ್ಲಾ ಸ್ಪೆಷಲ್ ತಿಂಡಿಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲಿದ್ದಾರೆ.

    ಉಡುಪಿಯ ಮಹಾತ್ಮಾಗಾಂಧಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಫೆಬ್ರವರಿ 1 ಕ್ಕೆ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಸ್ಪೋರ್ಟ್ ಡೇ ದಿನ ಮಧ್ಯಾಹ್ನ ಊಟ, ಬೆಳಗ್ಗೆ ತಿಂಡಿ, ಸಂಜೆ ಟೀಗೆ ವಿದ್ಯಾರ್ಥಿಗಳು ರಸ್ತೆ ಪಕ್ಕದ ಹೋಟೆಲ್-ಬೇಕರಿಗಳನ್ನು ಅವಲಂಬಿಸುತ್ತಾರೆ. ಆದರೆ ಈ ಬಾರಿ ಡಿಫರೆಂಟ್ ಕಾನ್ಸೆಪ್ಟ್ ಅನ್ನು ಕಾಲೇಜು ವಿದ್ಯಾರ್ಥಿಗಳೇ ಮಾಡಲು ಹೊರಟಿದ್ದಾರೆ.

    13 ವಿದ್ಯಾರ್ಥಿಗಳ ತಂಡ ಮೈದಾನದಲ್ಲಿ ಹೋಟೆಲ್ ತೆರೆಯಲಿದೆ. ಕೂಲ್ ಡ್ರಿಂಕ್ಸ್ ನಿಂದ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಮಾಡಲಿದ್ದಾರೆ. ಉಡುಪಿ ನಗರದ ಹೋಟೆಲ್ ಗಳಲ್ಲಿ ಸಿಗುವ 10 ಡಿಫರೆಂಟ್ ಡಿಫರೆಂಟ್ ತಿಂಡಿ ತಿನಿಸುಗಳನ್ನು ತಂದು ಒಂದು ಕಡೆ ಮಾರಾಟ ಮಾಡಲಿದ್ದಾರೆ. ಬಿಸಿ ಚಕ್ಕುಲಿ ತೋವೆ, ತಂಪು ಎಳನೀರು ಶರಬತ್ತು, ಸಿಪ್ಪೆ ಲೋಟದ ಕಲ್ಲಂಗಡಿ ಜ್ಯೂಸ್, ಫ್ರೈಡ್ ರೈಸ್, ಬೆಲ್ಲ ಕ್ಯಾಂಡಿ, ದೂದ್ ಕ್ಯಾಂಡಿ, ವಡಪಾವ್, ಉಡುಪಿ ಪಾನಿಪುರಿ, ಬೆಂಕಿ ಬೀಡ, ಹೋಳಿಗೆ ತುಪ್ಪ, ಐಸ್ ಕ್ರೀಂ ಹೀಗೆ ತರಹೇವಾರಿ ಐಟಂಗಳು ಹೋಟೆಲ್ ಅಲ್ಲಿ ಸಿಗಲಿದೆ. ಚಹಾ, ಕಾಫಿ, ಮಾಲ್ಟ್, ಹಾರ್ಲಿಕ್ಸ್, ಕೂಲ್ ಡ್ರಿಂಕ್ ಕೂಡಾ ವಿದ್ಯಾರ್ಥಿಗಳ ಹೋಟೆಲಿನಲ್ಲಿ ಲಭ್ಯವಿರುತ್ತದೆ.

    ಸ್ಟೂಡೆಂಟ್ಸ್ ವೆಲ್ಫೇರ್ ಕೌನ್ಸಿಲ್ ಗೆ ಸ್ಪೋರ್ಟ್ಸ್ ಡೇ ದಿನ ಹೋಟೆಲ್ ಓಪನ್ ಮಾಡಿ ಲಾಭ ಮಾಡಬೇಕೆಂಬ ಉದ್ದೇಶ ಇಲ್ಲ. ನಮಗೆ ಸಿಗುವ ಬೆಲೆಯಲ್ಲೇ ನಮ್ಮ ಹೋಟೆಲ್ ನಲ್ಲಿ ನಾವು ವ್ಯಾಪಾರ ಮಾಡುತ್ತೇವೆ. ಸ್ಥಳ ಬಾಡಿಗೆ ಇಲ್ಲ. ಲಾಭ ಮಾಡಿ ಯಾರಿಗೂ ಸಹಾಯ ಮಾಡುವ ಉದ್ದೇಶವೂ ಇಲ್ಲ ಎಂದು ವಿದ್ಯಾರ್ಥಿ ನಾಯಕ ಶ್ರೇಯಸ್ ಕೋಟ್ಯಾನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಕಾಲೇಜಿನ ವಾಟ್ಸಾಪ್ ಗ್ರೂಪ್, ಫೇಸ್ ಬುಕ್ ಪೇಜ್, ವೆಬ್ ಸೈಟ್ ಗಳಲ್ಲಿ ವಿದ್ಯಾರ್ಥಿ ಹೋಟೆಲ್ ನ ಬಗ್ಗೆ ಪ್ರಚಾರ ಶುರುವಾಗಿದೆ. ವಿಭಿನ್ನ ಕಾರ್ಯಕ್ರಮದ ಬಗ್ಗೆ ವಿಭಿನ್ನ ಆಮಂತ್ರಣ ಪತ್ರಿಕೆ ಮಾಡಿ ಶೇರ್ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಸದ್ಯ ಸ್ಟೂಡೆಂಟ್ಸ್ ಹೋಟೆಲ್ ನ ಬಗ್ಗೆ ಚರ್ಚೆ ನಡೆಯುತ್ತಿದೆ.

    ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಜಿ ವಿಜಯ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಈಗಿನ ಮಕ್ಕಳಿಗೆ ಜೀವನ ಪಾಠದ ಅಗತ್ಯವಿದೆ. ಪುಸ್ತಕ ಮತ್ತು ಮೊಬೈಲ್ ನಿಂದ ಮಾತ್ರ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ರಮೇಶ್ ಕಾರ್ಲ ಮತ್ತು ಶಿಕ್ಷಕರ ತಂಡ ವಿದ್ಯಾರ್ಥಿಗಳ ಹೊಸ ತರದ ಆಲೋಚನೆಗೆ ಬೆಂಬಲ ನೀಡಿದೆ.