Tag: Sports Authority of India

  • ಮಹಿಳಾ ಆಟಗಾರ್ತಿಯ ಸ್ನಾನದ ವಿಡಿಯೋ ಸೆರೆ ಹಿಡಿದ ಮತ್ತೋರ್ವ ಆಟಗಾರ್ತಿ

    ಮಹಿಳಾ ಆಟಗಾರ್ತಿಯ ಸ್ನಾನದ ವಿಡಿಯೋ ಸೆರೆ ಹಿಡಿದ ಮತ್ತೋರ್ವ ಆಟಗಾರ್ತಿ

    ಬೆಂಗಳೂರು: ನಗರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ  (Sports Authority of India) ವಿಲಕ್ಷಣ ಘಟನೆಯೊಂದು ನಡೆದಿದೆ. ಆಟಗಾರ್ತಿಯೊಬ್ಬರು ಸ್ನಾನ ಮಾಡುವಾಗ ಇನ್ನೋರ್ವ ಆಟಗಾರ್ತಿ ವಿಡಿಯೋವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾಳೆ.

    ಟೇಕ್ವಾಂಡೋ (Tekwando) ಪ್ಲೇಯರ್ ಒಬ್ಬರು ಸ್ನಾನಕ್ಕೆ ತೆರಳಿದ್ದಾಗ ಇನ್ನೋರ್ವ ವಾಲಿಬಾಲ್ (Volleyball) ಆಟಗಾರ್ತಿ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾಳೆ. ಮೊಬೈಲ್ ನೋಡಿ ಗಾಬರಿಗೊಂಡ ಆಟಗಾರ್ತಿ ಪ್ರಶ್ನೆ ಮಾಡಿದ್ದಾಳೆ. ಬಳಿಕ ರೆಕಾರ್ಡ್ ಮಾಡಿದ್ದ ಮೊಬೈಲ್‍ನ್ನು ಒಡೆದು ಹಾಕಿದ್ದಾಳೆ. ಈ ಬಗ್ಗೆ ನೊಂದ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ನಾನೇ ಮೋದಿ ನಾನೇ ದೇವ್ರು, ಮೋದಿ ಪಾದಿ ಯಾವ್ದೂ ಇಲ್ಲ – ಶಿವರಾಜ್ ಪಾಟೀಲ್ ಆಡಿಯೊ ವೈರಲ್

    ಮೊಬೈಲ್‍ನಲ್ಲಿ ಚಿತ್ರೀಕರಿಸಿದ ಆರೋಪಿಯ ವಿರುದ್ಧ ಸೆಕ್ಷನ್ 354, 201, 66ಸಿ ಐಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಪೊಲೀಸರು ರೆಕಾರ್ಡ್ ಮಾಡಿದ ಮೊಬೈಲ್‍ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ- 8 ಮಂದಿ ಆರೋಪಿಗಳ ಬಂಧನ

  • ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

    ತರಬೇತಿ ವೇಳೆ 14ರ ಬಾಲಕಿಯ ಕುತ್ತಿಗೆಗೆ ಚುಚ್ಚಿಕೊಳ್ತು ಬಾಣ!

    ಕೋಲ್ಕತ್ತಾ: ತರಬೇತಿ ವೇಳೆ 14 ವರ್ಷ ವಯಸ್ಸಿನ ಬಾಲಕಿಯ ಕುತ್ತಿಗೆಯ ಬಲಭಾಗದಲ್ಲಿ ಬಾಣವೊಂದು ಚುಚ್ಚಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಈ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿರೋ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದಿದೆ. ಬಾಲಕಿ ಫಝಿಲಾ ಖತುನ್‍ಗೆ ಬಾಣ ಚುಚ್ಚಿಕೊಂಡಿತ್ತು. ಸದ್ಯ ಶಸ್ತ್ರ ಚಿಕಿತ್ಸೆಯ ಮೂಲಕ ಬಾಲಕಿಯ ಕುತ್ತಿಗೆಯಲ್ಲಿ ಚುಚ್ಚಿಕೊಂಡಿದ್ದ ಬಾಣವನ್ನು ಹೊರತೆಗೆಯಲಾಗಿದೆ ಅಂತ ಬೊಲ್ಪುರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಏನಿದು ಘಟನೆ?: ನಾವು ನಾಲ್ಕು ಮಂದಿ ತರಬೇತಿ ಪಡೆಯುತ್ತಿದ್ದೆವು. ಇಬ್ಬರು ಅಭ್ಯಾಸ ಮುಗಿಸಿದ್ದರು. ನಾನು ಮತ್ತು ಫಝಿಲಾ ಅಭ್ಯಾಸ ಮಾಡುತ್ತಿದ್ದೆವು. ನಾನು ಬಾಣ ಬಿಟ್ಟ ವೇಳೆ ಫಝಿಲಾ ಅಚಾನಕ್ ಆಗಿ ಎದುರು ಬಂದಳು. ಪರಿಣಾಮ ಚೂಪಾದ ಬಾಣ ಆಕೆಯ ಕುತ್ತಿಗೆ ಹೊಕ್ಕಿತು ಅಂತ ಜ್ಯುವೆಲ್ ಶೇಕ್ ಮಾಧ್ಯಮಕ್ಕೆ ತಿಳಿಸಿದ್ದಾಳೆ.

    ಶಸ್ತ್ರ ಚಿಕಿತ್ಸೆ ಬಳಿಕ ಬಾಲಕಿ ಫಝಿಲಾ ಮಾತನಾಡಿದ್ದು, ಜ್ಯುವೆಲ್ ಅಭ್ಯಾಸ ಮಾಡುತ್ತಿದ್ದುದನ್ನು ನಾನು ಗಮನಿಸಲಿಲ್ಲ. ನಾನು ತುಂಬಾ ಹತ್ತಿರ ಹೋದ ಕಾರಣ ಬಾಣ ಚುಚ್ಚಿಕೊಳ್ತು. ಈ ವೇಳೆ ಸ್ಥಳದಲ್ಲಿ ಯಾವ ತರಬೇತುದಾರರೂ ಇರಲಿಲ್ಲ ಅಂತ ಹೇಳಿದ್ದಾಳೆ.

    ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.