Tag: sports

  • Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

    Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

    ಕೊಲಂಬೋ: ಏಷ್ಯಾ ಕಪ್‌ (Asia Cup) ಕಪ್‌ ವಿವಾದ ಜೀವಂತವಾಗಿರುವ ಬೆನ್ನಲ್ಲೇ ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವೆ ಇಂದು ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ( ICC Women’s World Cup) ಪಂದ್ಯದಲ್ಲಿ ದೊಡ್ಡ ಎಡವಟ್ಟಾಗಿದೆ.

    ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಹಾಕಲು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ಫಾತಿಮಾ ಸನಾ ಆಗಮಿಸಿದರು. ಈ ವೇಳೆ ಇಬ್ಬರು ನಾಯಕಿಯರು ಹ್ಯಾಂಡ್‌ಶೇಕ್‌ ಮಾಡಲಿಲ್ಲ. ನಂತರ ಹರ್ಮನ್‌ಪ್ರೀತ್‌ ಕೌರ್‌  ಟಾಸ್‌ ಹಾಕಿದಾಗ ಫಾತಿಮಾ ಸನಾ ʼಟೇಲ್‌ʼ ಎಂದು ಹೇಳಿದರು. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    ನಾಣ್ಯ ನೆಲಕ್ಕೆ ಬಿದ್ದ ಕೂಡಲೇ ಆಸ್ಟ್ರೇಲಿಯಾದ ನಿರೂಪಕ ಮೆಲ್ ಜೋನ್ಸ್ ʼಹೆಡ್ʼ ಎಂದು ಹೇಳಿದರು. ಆದರೆ ಐಸಿಸಿ ಮ್ಯಾಚ್ ರೆಫರಿ ಶಾಂಡ್ರೆ ಫ್ರಿಟ್ಜ್ ಪಾಕ್‌ ನಾಯಕಿಯನ್ನು ಕರೆದರು. ಫಾತಿಮಾ ಸನಾ ಕೂಡಲೇ ನಾವು ಬೌಲಿಂಗ್‌ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದರಿಂದ ಭಾರತದ ಆಟಗಾರ್ತಿಯರು ಬ್ಯಾಟಿಂಗ್‌ಗೆ ಇಳಿದರು. ಇದನ್ನೂ ಓದಿ:  ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಹರ್ಮನ್‌ಪ್ರೀತ್‌ ಕೌರ್‌ ಸಹ ರೆಫ್ರಿ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಕೌರ್‌ ಅವರಿಗೆ ಟಾಸ್‌ನಲ್ಲಿ ಎಡವಟ್ಟಾಗಿದ್ದು ಗೊತ್ತಿತ್ತಾ? ಒಂದು ವೇಳೆ ಗೊತ್ತಿದ್ದರೂ ರೆಫ್ರಿ ನಿರ್ಧಾರವನ್ನು ವಿರೋಧಿಸಲಿಲ್ವಾ ಎಂಬ ಪ್ರಶ್ನೆಗೆ ಪಂದ್ಯ ಮುಗಿದ ಬಳಿಕ ಉತ್ತರ ಸಿಗಲಿದೆ.

    ರೆಫ್ರಿ ಶಾಂಡ್ರೆ ಫ್ರಿಟ್ಜ್ ಯಾಕೆ ತಪ್ಪು ನಿರ್ಧಾರ ಕೈಗೊಂಡರು? ಟೇಲ್‌ ಎಂದು ಹೇಳಿದರೂ ಫಾತಿಮಾ ಸನಾ ಹೋಗಿದ್ದು ಯಾಕೆ ಎಂದು ನೆಟ್ಟಿಗರು ಈಗ ಪ್ರಶ್ನೆ ಮಾಡುತ್ತಿದ್ದಾರೆ.

    ಒಂದು ವೇಳೆ ಪಾಕಿಸ್ತಾನ ಟಾಸ್‌ ಗೆದ್ದು ರೆಫ್ರಿ ಹರ್ಮನ್‌ ಪ್ರೀತ್‌ ಕೌರ್‌ ಅವರನ್ನು ಕರೆದಿದ್ದರೆ ಇಷ್ಟು ಹೊತ್ತಿಗೆ ಐಸಿಸಿಯನ್ನು ಬಿಸಿಸಿಐ ಖರೀದಿಸಿದೆ ಎಂಬ ಟ್ರೆಂಡ್‌ ಆರಂಭವಾಗುತ್ತಿತ್ತು. ಜಯ್‌ ಶಾ ಅಧ್ಯಕ್ಷರಾಗಿರುವ ಕಾರಣ ಐಸಿಸಿ ಹೇಗೆ ಬೇಕಾದರೂ ಪಂದ್ಯವನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂಬ ಕಮೆಂಟ್‌ ಪಾಕ್‌ ಪರವಾಗಿ ಬರುತ್ತಿದ್ದವು ಎಂದು ಕ್ರಿಕೆಟ್‌ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

  • 579 ಕೋಟಿ ಜೆರ್ಸಿ ಪ್ರಾಯೋಜಕತ್ವ – ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ ಸಿಗಲಿದೆ ಕೋಟಿ ಕೋಟಿ ರೂ.

    579 ಕೋಟಿ ಜೆರ್ಸಿ ಪ್ರಾಯೋಜಕತ್ವ – ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ ಸಿಗಲಿದೆ ಕೋಟಿ ಕೋಟಿ ರೂ.

    ಮುಂಬೈ: ಭಾರತೀಯ ಕ್ರಿಕೆಟ್ (Team India) ತಂಡದ ಜೆರ್ಸಿ ಪ್ರಾಯೋಜಕತ್ವದ ಬಿಡ್‌ ಅನ್ನು ಅಪೊಲೊ ಟಯರ್ಸ್‌ (Apollo Tyres) ಗೆದ್ದುಕೊಂಡಿದೆ.

    ಮುಂದಿನ ಮೂರು ವರ್ಷಗಳ (2025–2028) ಪ್ರಾಯೋಜಕತ್ವಕ್ಕಾಗಿ ಗುರುಗ್ರಾಮ ಮೂಲದ ಅಪೊಲೊ ಟಯರ್ಸ್‌ ಬಿಸಿಸಿಐಗೆ (BCCI) 579 ಕೋಟಿ ರೂ. ನೀಡಲಿದೆ. ಈ ಜೆರ್ಸಿ ಒಪ್ಪಂದ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಪ್ರಾಯೋಜಕತ್ವ ಒಪ್ಪಂದವಾಗಿ ಹೊರಹೊಮ್ಮಿದೆ.

    ಈ ಅವಧಿಯಲ್ಲಿ ಟೀಂ ಇಂಡಿಯಾ 121 ದ್ವಿಪಕ್ಷೀಯ ಪಂದ್ಯಗಳು ಮತ್ತು 21 ಐಸಿಸಿ ಆಯೋಜಸುವ ಟೂರ್ನಿ ಆಡಲಿದೆ.

    ಯಾರೆಲ್ಲ ಭಾಗವಹಿಸಿದ್ದರು?
    ಬಿರ್ಲಾ ಆಪ್ಟಸ್ ಪೇಂಟ್ಸ್ ಬಿಡ್‌ನಲ್ಲಿ ಭಾಗವಹಿಸುವ ಆಸಕ್ತಿ ವ್ಯಕ್ತಪಡಿಸಿತ್ತು. ಆದರೆ ಅಂತಿಮ ಬಿಡ್‌ ವೇಳೆ ಹೊರಗೆ ಉಳಿದಿತ್ತು. ಅಂತಿಮ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆನ್‌ಲೈನ್ ದೃಶ್ಯ ಸಂವಹನ ವೇದಿಕೆ ಕಾನ್ವಾ 544 ಕೋಟಿ ರೂ., ಜೆಕೆ ಸಿಮೆಂಟ್ಸ್ 477 ಕೋಟಿ ರೂ. ಬಿಡ್‌ ಮಾಡಿತ್ತು.  ಇದನ್ನೂ ಓದಿ:  ಮೈದಾನದಲ್ಲೇ ಪಾಕ್‌ನ ಮಾನ ಕಳೆದ ಟೀಮ್‌ ಇಂಡಿಯಾ

     

    ಒಂದು ಪಂದ್ಯಕ್ಕೆ ಎಷ್ಟು ಕೋಟಿ?
    ಅಪೊಲೊ 579 ಕೋಟಿ ರೂ. ಬಿಡ್‌ ಮಾಡಿದ್ದರಿಂದ ಪ್ರತಿ ಪಂದ್ಯಕ್ಕೆ ಸರಾಸರಿ 4.77 ಕೋಟಿ ರೂ. ಹಣವನ್ನು ಪಾವತಿಸಿದಂತಾಗುತ್ತದೆ. ಬಿಸಿಸಿಐ ದ್ವಿಪಕ್ಷೀಯ ಪಂದ್ಯಕ್ಕೆ 3.5 ಕೋಟಿ ರೂ., ಐಸಿಸಿ ಪಂದ್ಯಕ್ಕೆ 1.5 ಕೋಟಿ ರೂ. ಮೂಲ ಬೆಲೆಯನ್ನು ನಿಗದಿ ಪಡಿಸಿತ್ತು. ಆದರೆ ಬಿಸಿಸಿಐ ನಿಗದಿ ಪಡಿಸಿದ ಮೂಲ ಬೆಲೆಗಿಂತಲೂ ಜಾಸ್ತಿ ಹಣವನ್ನು ಅಪೊಲೊ ಪಾವತಿಸಿದಂತಾಗುತ್ತದೆ.

    ಈ ಮೊದಲು Dream11 ಜೆರ್ಸಿ ಪ್ರಾಯೋಜಕತ್ವವನ್ನು ಪಡೆದುಕೊಂಡಿತ್ತು. 2023 ರಿಂದ 2026 ವರೆಗಿನ ಅವಧಿಯ ಪಂದ್ಯಗಳಿಗೆ ಡ್ರೀಮ್11‌ 358 ಕೋಟಿ ರೂ. ನೀಡಿ ಬಿಡ್‌ ಗೆದ್ದುಕೊಂಡಿತ್ತು. Dream11 ಪ್ರಾಯೋಜಕತ್ವದ ಅವಧಿಯಲ್ಲಿ ಪ್ರತಿ ಪಂದ್ಯದಿಂದ ಬಿಸಿಸಿಐಗೆ ಸರಾಸರಿ 4 ಕೋಟಿ ರೂ. ಸಿಗುತ್ತಿತ್ತು.

    ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ ಜಾರಿ ಮಾಡಿದ್ದರಿಂದ ಭವಿಷ್ಯದ ತೊಡಕುಗಳನ್ನು ತಪ್ಪಿಸಲು, ಬೆಟ್ಟಿಂಗ್, ಆನ್‌ಲೈನ್ ಗೇಮಿಂಗ್, ಕ್ರಿಪ್ಟೋ ಅಥವಾ ತಂಬಾಕಿಗೆ ಸಂಬಂಧಿಸಿದ ಕಂಪನಿಗಳು ಹೊಸ ಟೆಂಡರ್‌ನಲ್ಲಿ ಭಾಗವಹಿಸುವುದಕ್ಕೆ ಬಿಸಿಸಿಐ ನಿರ್ಬಂಧ ಹೇರಿತ್ತು.

    ಅಪೊಲೊಗೆ ಏನು ಲಾಭ?
    ಅಪೊಲೊ ಟಯರ್ಸ್‌ 100 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಟಯರ್‌ ಮಾರುಕಟ್ಟೆಯನ್ನು ಹೊಂದಿದೆ. ಈಗ ಟೀಂ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಪಡೆಯುವ ಮೂಲಕ ತನ್ನ ಬ್ರ್ಯಾಂಡ್‌ ಹೆಸರನ್ನು ಮತ್ತಷ್ಟು ದೇಶಗಳಿಗೆ ವಿಸ್ತರಿಸಬಹುದು. ಟಿ20 ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗಳನ್ನು ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ವೀಕ್ಷಿಸುವುದರಿಂದ ಅಪೊಲೊ ಟಯರ್ಸ್‌ಗೆ ಸುಲಭವಾಗಿ ಪ್ರಚಾರ ಸಿಗಲಿದೆ. ಈ ಹಿಂದೆ ಇಂಡಿಯನ್‌ ಸೂಪರ್‌ ಲೀಗ್‌ (ISL) ಮತ್ತು ಇತರ ಜಾಗತಿಕ ಮೋಟಾರ್‌ಸ್ಪೋರ್ಟ್ಸ್ ಜೊತೆ ಅಪೊಲೊ ಟಯರ್ಸ್‌ ಪಾಲುದಾರಿಕೆಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಿತ್ತು.

    ಪ್ರಸ್ತುತ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ ಟೂರ್ನಿ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಮಹಿಳಾ ತಂಡ ಪ್ರಾಯೋಜಕರಿಲ್ಲದ ಜೆರ್ಸಿ ಧರಿಸಿ ಕಣಕ್ಕೆ ಇಳಿಯುತ್ತಿದೆ.

  • ಹಂದಿ ಮಾಂಸ ಸೇವನೆ ಹೆಚ್ಚಳ – ಶಟಲ್‌ ಕಾಕ್‌ಗೆ ಬಂತು ಬರ, ಬೆಲೆ ದಿಢೀರ್‌ ಏರಿಕೆ!

    ಹಂದಿ ಮಾಂಸ ಸೇವನೆ ಹೆಚ್ಚಳ – ಶಟಲ್‌ ಕಾಕ್‌ಗೆ ಬಂತು ಬರ, ಬೆಲೆ ದಿಢೀರ್‌ ಏರಿಕೆ!

    ವಿಶ್ವದಲ್ಲಿ ಅತಿವೇಗವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್‌ ಕೂಡ ಒಂದು. ಭಾರತದಲ್ಲೂ ಬ್ಯಾಡ್ಮಿಂಟನ್‌ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕ್ರಿಕೆಟ್‌ನ ಬಳಿಕ ಭಾರತದಲ್ಲಿ ಬ್ಯಾಡ್ಮಿಂಟನ್ ಆಟ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲೇ ಶಟಲ್‌ ಕಾಕ್‌ನ ಬೆಲೆ ಗಗನಕ್ಕೇರುತ್ತಿದೆ. ಕಳೆದ 1 ವರ್ಷದ ಅವಧಿಯಲ್ಲಿ ಇದರ ಬೆಲೆ ದುಪ್ಪಟ್ಟಾಗಿದೆ. ಹಂದಿ ಮಾಂಸ ಸೇವನೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅರೇ ಇದೇನಪ್ಪಾ? ಹಂದಿ ಮಾಂಸ ಸೇವನೆಗೂ ಶಟಲ್‌ ಕಾಕ್‌ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲಿ ಮೂಡುತ್ತದೆ. ಹಾಗಿದ್ರೆ ಶಟಲ್‌ ಕಾಕ್‌ ಬೆಲೆ ಏರಲು ಕಾರಣವೇನು? ಹಂದಿ ಮಾಂಸ ಸೇವನೆಗೂ ಶಟಲ್‌ ಕಾಕ್‌ ಬೆಲೆ ಏರಿಕೆಗೂ ಇರುವ ನಂಟೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಶಟಲ್ ಕಾಕ್ ಬೆಲೆ ಏಕಾಏಕಿ ಏರಿಕೆ:
    ಬ್ಯಾಡ್ಮಿಂಟನ್ ಆಟದಲ್ಲಿ ಬಳಕೆಯಾಗುವ ಹಕ್ಕಿ ಪುಕ್ಕದ ಶಟಲ್‌ನ ಬೆಲೆ ಕಳೆದ 1 ವರ್ಷದಲ್ಲಿ ದುಪ್ಪಟ್ಟಾಗಿದೆ. ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಬಳಕೆ ಮಾಡುತ್ತಿದ್ದ ಶಟಲ್‌ ಕಾಕ್‌ಗಳು ಸುಮಾರು 150 ರೂ.ಗೆ ಲಭ್ಯವಾಗುತ್ತಿದ್ದವು. ಈಗ ಇವುಗಳ ಬೆಲೆ 300 ರೂ. ದಾಟಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಶಟಲ್‌ ಕಾಕ್‌ಗಳ ಉತ್ಪಾದನೆಯಲ್ಲಾಗಿರುವ ಕೊರತೆ. ಪ್ರಮುಖ ಪಂದ್ಯಾವಳಿಗಳಿಗಾಗಿ ಪ್ರತೀ ವರ್ಷ ಸುಮಾರು 21 ಕೋಟಿ ಶಟಲ್‌ ಕಾಕ್ ಬಳಕೆಯಾಗುತ್ತವೆ. ಆದರೆ ಇಷ್ಟೊಂದು ಶಟಲ್‌ ಕಾಕ್‌ಗ‌ಳನ್ನು ಒದಗಿಸಲು ಉತ್ಪಾದಕಾ ಕಂಪನಿಗಳು ವಿಫಲವಾಗಿರುವುದರಿಂದ ಶಟಲ್‌ ಕಾಕ್ ಬೆಲೆಯು ಚಿನ್ನದಂತೆ ದಿಢೀರ್ ಏರಿಕೆ ಕಂಡಿದೆ.

    ಭಾರತದ ಪ್ರತಿಷ್ಠಿತ ಪುಲ್ಲೇಲಾ ಗೋಪಿಚಂದ್‌ ಅಕಾಡೆಮಿ ಸೇರಿ ವಿಶ್ವದ ಕೆಲ ಪ್ರತಿಷ್ಠಿತ ತರಬೇತಿ ಕೇಂದ್ರಗಳಲ್ಲಿ ಕೇವಲ ಎರಡು ವಾರಕ್ಕೆ ಆಗುವಷ್ಟು ಶಟಲ್‌ ಕಾಕ್ ಮಾತ್ರ ಸ್ಟಾಕ್‌ ಇದೆಯಂತೆ. ಶಟಲ್‌ ಕಾಕ್ ಕೊರತೆ ಆಗಲು ಚೀನಾದಲ್ಲಿ ಜನ ಬಾತುಕೋಳಿ, ಹೆಬ್ಬಾತು ಬಿಟ್ಟು ಹಂದಿ ಮಾಂಸವನ್ನು ಹೆಚ್ಚಾಗಿ ಸೇವಿಸುತ್ತಿರುವುದೇ ಕಾರಣ‌ ಎನ್ನಲಾಗುತ್ತಿದೆ. ಕೇಳಲು ಆಶ್ಚರ್ಯ ಎನಿಸಿದರೂ ಇದು ಸತ್ಯ.‌

    ಶಟಲ್ ಉತ್ಪಾದನೆಯಲ್ಲಿ ಚೀನ ಪ್ರಾಬಲ್ಯ:
    ಶಟಲ್ ಉತ್ಪಾದನೆಯ ಜಾಗತಿಕ ಕೇಂದ್ರ ಎನಿಸಿಕೊಂಡಿರುವ ಚೀನದ ಗೈಝ ಪ್ರಾಂತದಲ್ಲಿ ಉತ್ಪಾದನೆಯ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಇಲ್ಲಿರುವ ಶಟಲ್ ಕಾಕ್ ಉತ್ಪಾದಕ ಕೇಂದ್ರಗಳು ಕಳೆದ ವರ್ಷ ತಿಂಗಳಿಗೆ 30 ಲಕ್ಷ ಶಟಲ್ ಕಾಕ್‌ ಉತ್ಪಾದನೆಯನ್ನು ಮಾಡುತ್ತಿದ್ದವು. ಆದರೆ, ಇದರ ಪ್ರಮಾಣ ಈ ವರ್ಷ 20 ಲಕ್ಷಕ್ಕೆ ಕುಸಿತ ಕಂಡಿದೆ. ಇಲ್ಲಿ ಶಟಲ್‌ ಕಾಕ್ ಉತ್ಪಾದನೆಗೆ ಬಾಡಿಗೆ ರಹಿತ ಭೂಮಿಯನ್ನು ಸರ್ಕಾರ ಒದಗಿಸಿರುವುದರಿಂದ ಕಂಪನಿಗಳು ನಷ್ಟಕ್ಕೀಡಾಗದೇ ಉಳಿದುಕೊಂಡಿವೆ. ಶಟಲ್‌ ಕಾಕ್‌ಗಳನ್ನು ತಯಾರು ಮಾಡಲು ಬೇಕಾದ ಪುಕ್ಕಗಳ ಕೊರತೆ ಉಂಟಾಗಿರುವುದೇ ಕಾಕ್ ಉತ್ಪಾದನೆ ಕುಂಠಿತವಾಗಲು ಕಾರಣ ಎನ್ನಲಾಗಿದೆ.

    ಶಟಲ್‌ ಕಾಕ್‌ ತಯಾರಿಕೆ ಹೇಗೆ?
    ಬ್ಯಾಡ್ಮಿಂಟನ್‌ನಲ್ಲಿ ಬಳಸುವ ಶಟಲ್‌‌ ಕಾಕ್ ತಯಾರಿಸಲು ಹೆಬ್ಬಾತು (ಗೂಸ್‌) ಹಾಗೂ ಬಾತುಕೋಳಿಯ ಪುಕ್ಕಗಳನ್ನು ಬಳಸಲಾಗುತ್ತದೆ. ಚೀನಾದಲ್ಲಿ ಸಂಪ್ರದಾಯಿಕವಾಗಿ ಈ ಎರಡರ ಮಾಂಸಕ್ಕೆ ಭಾರೀ ಬೇಡಿಕೆ ಇರುವ ಕಾರಣ, ಅಲ್ಲಿನ ರೈತರು ಹೆಚ್ಚಾಗಿ ಸಾಕಣಿಕೆ ಮಾಡುತ್ತಾರೆ.

    ಒಂದು ಶಟಲ್‌‌ ಕಾಕ್ ತಯಾರಿಸಲು 16 ಪುಕ್ಕಗಳು ಬೇಕಾಗುತ್ತವೆ. ಸಣ್ಣ ಪುಟ್ಟ ಟೂರ್ನಿಗಳಲ್ಲಿ, ಹವ್ಯಾಸಕ್ಕಾಗಿ ಬ್ಯಾಡ್ಮಿಂಟನ್‌ ಆಡುವವರ ಬಳಕೆಗೆ ಬಾತುಕೋಳಿಯ ಪುಕ್ಕದಿಂದ ತಯಾರಿಸಿದ ಕಾಕ್‌ಗಳು ಸಾಕು. ಆದರೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಹೆಬ್ಬಾತುವಿನ ಪುಕ್ಕದಿಂದ ತಯಾರಿಸಿದ ಕಾಕ್‌ಗಳು ಬಳಕೆಯಾಗುತ್ತದೆ. ಅಂ.ರಾ. ಸಿಂಗಲ್ಸ್‌ ಪಂದ್ಯವೊಂದರಲ್ಲಿ ಸಾಮಾನ್ಯವಾಗಿ 2 ಡಜನ್‌ ಶಟಲ್‌ ಕಾಕ್‌ಗಳು ಬಳಕೆಯಾಗುತ್ತವೆ.

    ಶಟಲ್‌ ಕಾಕ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ (ಬಿಡ್ಲ್ಯುಎಫ್‌), ಶಟಲ್‌‌ ಕಾಕ್ ತಯಾರಿಕ ಸಂಸ್ಥೆಗಳಿಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದೆ. ಆದರೆ, ಪುಕ್ಕಗಳ ಕೊರತೆಯಿಂದಾಗಿ ಅಗತ್ಯಕ್ಕೆ ತಕ್ಕಂತೆ ಶಟಲ್‌ ಕಾಕ್‌ ಪೂರೈಕೆ ಕಷ್ಟ ಎಂದು ತಯಾರಿಕ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ, ಶಟಲ್‌ ಕಾಕ್‌ಗಳ ಬೆಲೆ 30%ರಿಂದ 40%ರಷ್ಟು ಹೆಚ್ಚಳವಾಗಿದೆ.

    ಶಟಲ್‌ ಕಾಕ್‌ ಬೆಲೆ ಏರಿಕೆಗೆ ಕಾರಣವೇನು?
    ಚೀನಿಯರಿಗೆ ಹಂದಿ ಮಾಂಸ ಎಂದರೆ ಎಲ್ಲಿಲ್ಲದ ಪ್ರೀತಿ. ಜಗತ್ತಿನಲ್ಲಿ ಅತಿಹೆಚ್ಚು ಹಂದಿ ಮಾಂಸ ಸೇವಿಸುವ, ರಫ್ತು ಮಾಡುವ ದೇಶ ಚೀನಾ. ಕಳೆದ 6 ತಿಂಗಳಿಂದ ಹಂದಿ ಮಾಂಸದ ಬೆಲೆ ನಿರಂತರವಾಗಿ ಕುಸಿಯುತ್ತಿದ್ದು, ಜನ ಹೆಚ್ಚಾಗಿ ಹಂದಿ ಮಾಂಸವನ್ನೇ ಸೇವಿಸುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ರೈತರು, ಬಾತುಕೋಳಿ ಹಾಗೂ ಹೆಬ್ಬಾತು ಸಾಕುವುದನ್ನು ನಿಲ್ಲಿಸಿ ಹಂದಿ ಸಾಕಣೆ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಶಟಲ್‌ ಕಾಕ್‌ ಕೊರತೆಯಾಗಲು ಇದು ಕಾರಣವಾಗಿದೆ.

    ವಿಶ್ವದ 57.7%ರಷ್ಟು ಹಂದಿ ಮಾಂಸ ಚೀನದಲ್ಲೇ ಸೇವಿಸಲಾಗುತ್ತಿದೆ.ಇದಕ್ಕೂ ಮುನ್ನ ಚೀನದಲ್ಲಿ ಬಾತುಕೋಳಿಯನ್ನು ಹೆಚ್ಚು ಸೇವಿಸಲಾಗುತ್ತಿತ್ತು. 2023ರಲ್ಲಿ 1.1 ಕೋಟಿ ಇದ್ದ ಬಾತುಕೋಳಿ ಸಾಕಾಣಿಕೆ 2024ರಲ್ಲಿ 90 ಲಕ್ಷಕ್ಕೆ ಕುಸಿದಿದೆ. 2025ರಲ್ಲಿ ಇನ್ನೂ ಕುಸಿದಿದ್ದು, ಶಟಲ್ ಕಾಕ್‌ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ.

    ಪುಕ್ಕ ಉತ್ಪಾದನೆಯಲ್ಲಿ 35% ಕುಸಿತ:
    ಚೀನದಲ್ಲಿ ಬಾತುಕೋಳಿ ಪುಕ್ಕದ ಉತ್ಪಾದನೆಯಲ್ಲಿ ಒಂದೇ ವರ್ಷದಲ್ಲಿ 35%ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಹೀಗಾಗಿ ಬೆಲೆ ಗಗನಕ್ಕೇರುತ್ತಿದೆ. 2019ರಲ್ಲಿ ಚೀನದಲ್ಲಿ 400 ಕೋಟಿ ಬಾತುಕೋಳಿಗಳಿವೆ ಎಂದು ಅಂದಾಜಿಸಲಾಗಿತ್ತು. ಇದು ಈಗ 200 ಕೋಟಿಗೆ ಇಳಿಕೆಯಾಗಿದೆ. ಆದರೂ 80%ರಷ್ಟು ಬೇಡಿಕೆಯನ್ನು ಪೂರೈಸಲು ಚೀನ ಸಫಲವಾಗಿದ್ದು, ಪೂರ್ಣ ಬೇಡಿಕೆಯನ್ನು ಪೂರೈಸಲಾಗದ ಕಾರಣ ಬೆಲೆ ಏರಿಕೆಯಾಗುತ್ತಿದೆ.

    ಭಾರತದಲ್ಲೂ ಇವೆ ಉತ್ಪಾದನಾ ಘಟಕಗಳು:
    ಶಟಲ್ ಕಾಕ್‌ ಉತ್ಪಾದನೆಯಲ್ಲಿ ಚೀನದ ಏಕಸ್ವಾಮ್ಯತೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿರುವ ದೇಶವೆಂದರೆ ಅದು ಭಾರತ. ಆದರೂ ವಿಶ್ವದ ಬೇಡಿಕೆಗೆ ಸಾಕಾಗುವಷ್ಟು ಪುಕ್ಕದ ಶಟಲ್‌ ಕಾಕ್‌ಗಳನ್ನು ಉತ್ಪಾದನೆ ಮಾಡಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಳದ ಉಲುಬೇರಿಯಾದ ಸುತ್ತಮುತ್ತ ಸುಮಾರು 150ಕ್ಕೂ ಹೆಚ್ಚು ಸಣ್ಣ ಸಣ್ಣ ಉತ್ಪಾದನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಭಾರತಕ್ಕೆ ಬೇಕಿರುವ 65%ರಷ್ಟು ಕಾಕ್ ಇಲ್ಲಿ ಉತ್ಪಾದನೆಯಾಗುತ್ತದೆ. ಇದಲ್ಲದೆ ಪಂಜಾಬ್‌ನ ಜಲಂಧರ್‌ನಲ್ಲೂ ಉತ್ಪಾದನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಕಾಕ್ ಉತ್ಪಾದನೆ ಮಾಡುವಷ್ಟು ಬಾತುಕೋಳಿಗಳನ್ನು ಭಾರತದಲ್ಲಿ ಸಾಕಾಣಿಕೆ ಮಾಡುತ್ತಿಲ್ಲ.

    ಪರ್ಯಾಯ ಮಾರ್ಗಗಳೇನು?
    -ನೈಲಾನ್‌ನಿಂದ ತಯಾರಿಸಿದ ಶಟಲ್‌ ಕಾಕ್‌ಗಳನ್ನು ಜಾಗತಿಕವಾಗಿ ಒಪ್ಪಿಕೊಳ್ಳುವುದು
    -ಸಿಂಥೆಟಿಕ್ ಶಟಲ್‌ ಕಾಕ್‌ಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಸುವುದು
    -ಆರಂಭದಲ್ಲಿ ಪುಕ್ಕ ಹಾಗೂ ಸಿಂಥೆಟಿಕ್ ಮಿಶ್ರ ಕಾಕ್‌ಗಳನ್ನು ಬಳಸುವುದು
    -ಬಾತುಕೋಳಿಗಳ ಸಾಕಣೆ ಮತ್ತು ಪುಕ್ಕದ ಸಂಗ್ರಹಣೆಯನ್ನು ಹೆಚ್ಚಿಸುವುದು
    -ಚೀನದಿಂದ ಹೊರಗೆ ಉತ್ಪಾದನಾ ಘಟಕಗಳನ್ನು ಹೆಚ್ಚು ಮಾಡುವುದು

    ಪ್ಲಾಸ್ಟಿಕ್ ಕಾಕ್‌ಗೆ ಬ್ಯಾಡ್ಮಿಂಟನ್ ಪಟುಗಳ ವಿರೋಧ:
    2018ರ ವೇಳೆಯಲ್ಲಿ ಚೀನದಲ್ಲಿ ಭಾರೀ ಪ್ರಮಾಣದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ ಶಟಲ್ ಕಾಕ್ ಉತ್ಪಾದನೆ ಕುಂಠಿತಗೊಂಡಿತ್ತು. ಹೀಗಾಗಿ ಪ್ಲಾಸ್ಟಿಕ್ ಶಟಲ್‌‌ ಕಾಕ್‌ಗಳನ್ನು ಪಂದ್ಯಾವಳಿಗಳಲ್ಲಿ ಬಳಕೆ ಮಾಡಲು ಆರಂಭಿಸಲಾಗಿತ್ತು. ಆದರೆ ಇದಕ್ಕೆ ಬಹುತೇಕ ಬ್ಯಾಡ್ಮಿಂಟನ್ ಪಟುಗಳು ವಿರೋಧ ವ್ಯಕ್ತಪಡಿಸಿದ್ದು, ಈ ಶಟಲ್‌ ಕಾಕ್‌ಗೆ ನಿಖರತೆ ಕಡಿಮೆ ಎಂದು ವಾದಿಸಿದ್ದರು. ಆದರೆ ಇದೀಗ ಪುಕ್ಕದ ಶಟಲ್‌ ಕಾಕ್‌ಗಳ ಕೊರತೆ ಉಂಟಾಗಿರುವುದರಿಂದ ಮತ್ತೊಮ್ಮೆ ಪರ್ಯಾಯದ ಕಡೆಗೆ ಜಗತ್ತು ಚಿಂತಿಸಲು ಆರಂಭಿಸಿದೆ.

  • ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ: ಸಿಎಂ ಸಿದ್ದರಾಮಯ್ಯ ಘೋಷಣೆ

    ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ: ಸಿಎಂ ಸಿದ್ದರಾಮಯ್ಯ ಘೋಷಣೆ

    – ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದರೆ 7 ಲಕ್ಷ ರೂ. ಬಹುಮಾನ

    ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ ರೂ. ನೀಡಲಾಗುವುದು. ಬೆಳ್ಳಿ ಗೆದ್ದರೆ 3 ಕೋಟಿ ಹಾಗೂ ಕಂಚು ಗೆದ್ದವರಿಗೆ 2 ಕೋಟಿ ಹಣ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದರು.

    ಉತ್ತರಾಖಂಡದಲ್ಲಿ 38 ರಾಷ್ಟ್ರೀಯ ಕ್ರೀಡಾಕೂಟ ನೆರವೇರಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಐದನೇ ಸ್ಥಾನ ಗಳಿಸಿದೆ. 34 ಚಿನ್ನ, 18 ಬೆಳ್ಳಿ, 28 ಕಂಚಿನ ಪದಕಗಳು ಬಂದಿವೆ. ರಾಜ್ಯದ ವತಿಯಿಂದ ಸಿಎಂ ಆಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಒಂದನೇ ಸ್ಥಾನಕ್ಕೆ ಬರಲಿ ಎಂದು ಆಶಿಸಿದರು. ಇದನ್ನೂ ಓದಿ: ಡಿಕೆಶಿ ಗಾಂಧಿ ಕುಟುಂಬವನ್ನ ಖುಷಿಪಡಿಸಲು ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ: ಬಿವೈವಿ ಟಾಂಗ್

    2015 ರಲ್ಲಿ ಸಿಎಂ ಆಗಿದ್ದಾಗ ಚಿನ್ನ ಪದಕ ವಿಜೇತರಿಗೆ 5 ಲಕ್ಷ, ಬೆಳ್ಳಿ ವಿಜೇತರಿಗೆ 3 ಲಕ್ಷ, ಕಂಚು ಪದಕ ವಿಜೇತರಿಗೆ 2 ಲಕ್ಷ ರೂಪಾಯಿ ಕೊಡಲು ಘೋಷಿಸಿದ್ದೆ. ಮುಂದಿನ ಬಾರಿಯಿಂದ ಚಿನ್ನ ಗೆದ್ದವರಿಗೆ 7 ಲಕ್ಷ ರೂಪಾಯಿ‌ ಕೊಡ್ತೇವೆ. ಬೆಳ್ಳಿ ಗೆದ್ದವರಿಗೆ 5 ಲಕ್ಷ ರೂಪಾಯಿ ಕೊಡ್ತೇವೆ. ಕಂಚು ಗೆದ್ದವರಿಗೆ 3 ಲಕ್ಷ ರೂಪಾಯಿ ಕೊಡ್ತೇವೆ ಎಂದು ತಿಳಿಸಿದರು.

    ಪ್ರತಿ ಮೆಡಲಿಸ್ಟ್‌, ಕೋಚ್, ಮ್ಯಾನೇಜರ್‌ಗೂ ನಗದು ಬಹುಮಾನ ಕೊಡ್ತೇನೆ. ಕ್ರೀಡಾ ಇಲಾಖೆ ಏನು ಕೇಳಿದ್ರೂ ಕೊಟ್ಟಿದ್ದೇನೆ. ಮುಂದೆಯೂ ಕೊಡ್ತೇನೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜೊತೆಗೆ ಓದಲೂ ಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್

    ಒಲಂಪಿಕ್ಸ್‌ನಲ್ಲಿ ಭಾಗವಹಿಸುವವರಿಗೆ ಟ್ರೇನಿಂಗ್ ಕೊಡ್ತೇವೆ. 60 ಕ್ರೀಡಾಪಟುಗಳಿಗೆ ತರಬೇತಿಗಾಗಿ 10 ಲಕ್ಷ ರೂಪಾಯಿ ಕೊಡ್ತೇವೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಐದು ಕೋಟಿ, ಬೆಳ್ಳಿ ಗೆದ್ದರೆ ಮೂರು ಕೋಟಿ, ಕಂಚು ಗೆದ್ದರೆ ಎರಡು ಕೋಟಿ‌ ಕೊಡ್ತೇವೆ. ಕ್ರೀಡಾಪಟುಗಳಿಗೆ ನೇರವಾಗಿ ಅವರ ಅಕೌಂಟ್‌ಗೆ ವರ್ಗಾವಣೆ ಮಾಡ್ತೇವೆ. ಗೆದ್ದ ಖುಷಿ ಮುಂದೆ ಯಾವುದೂ ಇಲ್ಲ. ನಾನು ಇವತ್ತಿನ ವರೆಗೂ ಕ್ರೀಡಾಪಟುಗಳಿಗೆ ಏನು ಕೇಳಿದ್ರೂ ಕೊಟ್ಟಿದ್ದೇನೆ. ಮುಂದೆಯೂ ಕೊಡ್ತೀನಿ ಎಂದು ತಿಳಿಸಿದರು.

  • ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಲೋಕಸಭೆಯಲ್ಲಿ ಐತಿಹಾಸಿಕ ಕ್ರೀಡಾ ಆಡಳಿತ, ಡೋಪಿಂಗ್ ತಡೆ ಮಸೂದೆ ಅಂಗೀಕಾರ

    ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಲೋಕಸಭೆಯಲ್ಲಿ ಐತಿಹಾಸಿಕ ಕ್ರೀಡಾ ಆಡಳಿತ, ಡೋಪಿಂಗ್ ತಡೆ ಮಸೂದೆ ಅಂಗೀಕಾರ

    ನವದೆಹಲಿ: ಬಹುನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, 2025 ಮತ್ತು ರಾಷ್ಟ್ರೀಯ ಡೋಪಿಂಗ್ ತಡೆ (ತಿದ್ದುಪಡಿ) ಮಸೂದೆ (National Sports Governance and Anti-Doping Amendment Bills 2025), 2025ನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

    ಬಿಹಾರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಇಂದು ಲೋಕಸಭೆಯಲ್ಲಿ ಐತಿಹಾಸಿಕ ಕ್ರೀಡಾ ಆಡಳಿತ, ಡೋಪಿಂಗ್ ತಡೆ ಮಸೂದೆ ಅಂಗೀಕರಿಸಲಾಗಿದೆ. ಇದನ್ನು “ಸ್ವಾತಂತ್ರ‍್ಯದ ನಂತರ ಭಾರತೀಯ ಕ್ರೀಡೆಯಲ್ಲಿನ ಏಕೈಕ ಅತಿದೊಡ್ಡ ಸುಧಾರಣೆ” ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ (MansukhMandaviya) ಅವರು ಬಣ್ಣಿಸಿದರು.

    ವಿರೋಧ ಪಕ್ಷದ ಪ್ರತಿಭಟನೆಗಳಿಂದಾಗಿ ಕಲಾಪ ಮುಂದೂಡಲ್ಪಟ್ಟ ನಂತರ ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಮತ್ತೆ ಸಭೆ ಸೇರಿದಾಗ ರಾಷ್ಟ್ರೀಯ ಡೋಪಿಂಗ್ ತಡೆ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು.

    ಇದು ಸ್ವಾತಂತ್ರ‍್ಯದ ನಂತರದ ಕ್ರೀಡೆಯಲ್ಲಿನ ಏಕೈಕ ಅತಿದೊಡ್ಡ ಸುಧಾರಣೆಯಾಗಿದೆ. ಈ ಮಸೂದೆಯು ಹೊಣೆಗಾರಿಕೆ, ನ್ಯಾಯವನ್ನು, ಕ್ರೀಡಾ ಒಕ್ಕೂಟಗಳಲ್ಲಿ ಉತ್ತಮ ಆಡಳಿತವನ್ನು ಖಚಿತಪಡಿಸುತ್ತದೆ ಎಂದು ವಿರೋಧ ಪಕ್ಷಗಳ ಸದಸ್ಯರ ಘೋಷಣೆಗಳ ನಡುವೆ ಮಾಂಡವಿಯಾ ಹೇಳಿದರು.

    ಇದು ಭಾರತದ ಕ್ರೀಡಾ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವವನ್ನು ಹೊಂದುತ್ತದೆ. ಅಂತಹ ಮಹತ್ವದ ಮಸೂದೆ ಮತ್ತು ಸುಧಾರಣೆಗೆ ವಿರೋಧ ಪಕ್ಷದ ಭಾಗವಹಿಸುವಿಕೆ ಇಲ್ಲದಿರುವುದು ದುರದೃಷ್ಟಕರ ಎಂದು ಸಚಿವರು ಟೀಕಿಸಿದರು.

    ಮಸೂದೆಗಳ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದಾಗ ವಿರೋಧ ಪಕ್ಷದ ನಾಯಕರು ಸದನದಲ್ಲಿ ಇರಲಿಲ್ಲ. ಏಕೆಂದರೆ ಅವರಲ್ಲಿ ಹೆಚ್ಚಿನವರು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವಿರುದ್ಧ ಚುನಾವಣಾ ಆಯೋಗದ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಸುವಾಗ ಬಂಧನಕ್ಕೊಳಗಾದರು. ನಂತರ, ವಿರೋಧ ಪಕ್ಷದ ಸದಸ್ಯರು ಸದನಕ್ಕೆ ಹಿಂತಿರುಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಗದ್ದಲದ ನಡುವೆ, ಎರಡೂ ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು, ನಂತರ ಸದನವನ್ನು ಸಂಜೆ 4 ಗಂಟೆಯವರೆಗೆ ಮುಂದೂಡಲಾಯಿತು.

  • ಡಿಕ್ಲೇರ್‌ ವೇಳೆ ಎಡವಟ್ಟು – ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಗಿಲ್‌?

    ಡಿಕ್ಲೇರ್‌ ವೇಳೆ ಎಡವಟ್ಟು – ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಗಿಲ್‌?

    ಮುಂಬೈ: ಇಂಗ್ಲೆಂಡ್‌ (England) ವಿರುದ್ದದ ಎರಡನೇ ಟೆಸ್ಟ್‌ ಕ್ರಿಕೆಟಿನಲ್ಲಿ ದ್ವಿಶತಕ, ಶತಕ ಸಿಡಿಸಿ ಉತ್ತಮ ಲಯದಲ್ಲಿರುವ ನಾಯಕ ಶುಭಮನ್‌ ಗಿಲ್‌ (Shubman Gill) ಡಿಕ್ಲೇರ್‌ ಮಾಡುವ ಸಂದರ್ಭದಲ್ಲಿ ಎಡವಟ್ಟು ಮಾಡಿದ್ದಕ್ಕೆ ಬಿಸಿಸಿಐ (BCCI) ಕ್ಲಾಸ್‌ ಮಾಡುವ ಸಾಧ್ಯತೆಯಿದೆ.

    ಹೌದು. ಎರಡನೇ ಇನಿಂಗ್ಸ್‌ನಲ್ಲಿ ಭಾರತ 6 ವಿಕೆಟ್‌ ನಷ್ಟಕ್ಕೆ 427 ರನ್‌ ಗಳಿಸಿದ್ದಾಗ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಡಿಕ್ಲೇರ್‌ ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸುವಾಗ ಗಿಲ್‌ ಕಪ್ಪು ಬಣ್ಣದ ನೈಕ್‌ (Nike) ಟೀಶರ್ಟ್‌ ಧರಿಸಿದ್ದರು.

    ಅಡೀಡಸ್‌ ಕಂಪನಿ ಟೀಂ ಇಂಡಿಯಾದ ಜೆರ್ಜಿ ಪ್ರಾಯೋಜಕತ್ವವನ್ನು ಪಡೆದುಕೊಂಡಿದ್ದು ಪಂದ್ಯ ನಡೆಯುವಾಗ ಆಟಗಾರರು ಕಡ್ಡಾಯವಾಗಿ ಅಡೀಡಸ್‌ (Adidas) ಕಂಪನಿಯ ಧಿರಿಸುಗಳನ್ನು ಧರಿಸಬೇಕಾಗುತ್ತದೆ. ಆದರೆ ನಾಯಕನಾಗಿರುವ ಗಿಲ್‌ ಈ ನಿಯಮವನ್ನು ಉಲ್ಲಂಘಿಸಿದ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ತೂಫಾನ್‌ ಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್‌ ಸೂರ್ಯವಂಶಿ

    2023 ರಲ್ಲಿ ಬಿಸಿಸಿಐ ಜೊತೆ ಅಡೀಡಸ್‌ 253 ಕೋಟಿ ರೂ. ಡೀಲ್‌ಗೆ ಸಹಿ ಹಾಕಿತ್ತು. ಈ ಒಪ್ಪಂದದ ಅನ್ವಯ 5 ವರ್ಷಗಳ ಕಾಲ ಅಡಿಡಾಸ್‌ ಕಂಪನಿ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಿಸಲಿದೆ. ಭಾರತದ ಪುರುಷರು, ಮಹಿಳೆಯರು ಮತ್ತು U-19 ತಂಡಗಳಿಗೆ ಜೆರ್ಸಿ, ಕಿಟ್‌ಗಳು ಮತ್ತು ಇತರ ಸರಕುಗಳನ್ನು ಅಡೀಡಸ್‌ ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ.

    ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಬಿಸಿಸಿಐ-ಅಡೀಡಸ್ ಪಾಲುದಾರಿಕೆಯು ಪ್ರಾಯೋಜಕತ್ವ ಶುಲ್ಕ, ಸರಕುಗಳ ಮಾರಾಟದಿಂದ ಬರುವ ರಾಯಧನ ಮತ್ತು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಕಿಟ್‌ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ.

    ಒಪ್ಪಂದದ ಪ್ರಕಾರ, ಅಡೀಡಸ್‌ ಪ್ರತಿ ಪಂದ್ಯಕ್ಕೆ 75 ಲಕ್ಷ ರೂ. ಪಾವತಿಸಲಿದೆ. ಸೆಪ್ಟೆಂಬರ್ 2020 ರವರೆಗೆ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದ್ದ ನೈಕ್, ಪ್ರತಿ ಪಂದ್ಯಕ್ಕೆ 88 ಲಕ್ಷ ರೂ. ಬಿಸಿಸಿಐಗೆ ಪಾವತಿಸುತ್ತಿತ್ತು. ಮುಂದಿನ ಐದು ವರ್ಷಗಳ ಅಡೀಡಸ್‌ ಮಾರಾಟ ಮಾಡುವ ಸರಕುಗಳ ಮೇಲೆ ಬಿಸಿಸಿಐ ವರ್ಷಕ್ಕೆ 10 ಕೋಟಿ ರೂ. ರಾಯಧನವನ್ನು ಪಡೆಯಲಿದೆ.

  • ಗಿಲ್‌ ದ್ವಿಶತಕಕ್ಕೆ ದಾಖಲೆಗಳು ಛಿದ್ರ – 510 ರನ್‌ ಹಿನ್ನಡೆಯಲ್ಲಿ ಇಂಗ್ಲೆಂಡ್‌

    ಗಿಲ್‌ ದ್ವಿಶತಕಕ್ಕೆ ದಾಖಲೆಗಳು ಛಿದ್ರ – 510 ರನ್‌ ಹಿನ್ನಡೆಯಲ್ಲಿ ಇಂಗ್ಲೆಂಡ್‌

    ಎಜ್ಬಾಸ್ಟನ್‌: ನಾಯಕ ಶುಭಮನ್‌ ಗಿಲ್‌ (Shubman Gill) ಅವರ ದಾಖಲೆಯ ದ್ವಿಶತಕದ ನೆರವಿನಿಂದ ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯ ಎರಡನೇ ದಿನ ಭಾರತ (Team India) ಮೇಲುಗೈ ಸಾಧಿಸಿದೆ. ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 77 ರನ್‌ ಗಳಿಸಿದ್ದು 510 ರನ್‌ಗಳ ಹಿನ್ನಡೆಯಲ್ಲಿದೆ.

    ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ ಬೆನ್ ಡಕೆಟ್‌ ಮತ್ತು ಓಲಿ ಪೋಪ್ ಶೂನ್ಯಕ್ಕೆ ಔಟಾದರು. ಆಕಾಶ್‌ ದೀಪ್‌ ಅವರು ಸತತ ಎರಡು ಎಸೆತಗಳಲ್ಲಿ ಇಬ್ಬರನ್ನು ಔಟ್‌ ಮಾಡಿದರು.

    19 ರನ್‌ ಗಳಿಸಿದ್ದ ಜ್ಯಾಕ್ ಕ್ರಾಲಿ ಔಟಾದಾಗ ಇಂಗ್ಲೆಂಡ್‌ 3 ವಿಕೆಟ್‌ ನಷ್ಟಕ್ಕೆ 25 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಜೊತೆಯಾದ ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಮುರಿಯದ 4ನೇ ವಿಕೆಟಿಗೆ 81 ಎಸೆತಗಳಲ್ಲಿ 52 ರನ್‌ ಜೊತೆಯಾಟವಾಡಿ ತಂಡವನ್ನು ಮೇಲಕ್ಕೆ ಎತ್ತಿದರು. ಜೋ ರೂಟ್‌ ಔಟಾಗದೇ 18 ರನ್‌, ಹ್ಯಾರಿ ಬ್ರೂಕ್‌ ಔಟಾಗದೇ 30 ರನ್‌ ಹೊಡೆದು ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

    ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಭಾರತ ಇಂದು ನಿನ್ನೆಯ ಮೊತ್ತಕ್ಕೆ 277 ರನ್‌ ಸೇರಿಸಿ ಅಂತಿಮವಾಗಿ 151 ಓವರ್‌ಗಳಲ್ಲಿ  587 ರನ್‌ಗಳಿಗೆ ಸರ್ವಪತನ ಕಂಡಿತು. 114 ರನ್‌ ಗಳಿಸಿದ್ದ ಶುಭಮನ್‌ ಗಿಲ್‌ ಇಂದು 269 ರನ್‌(387 ಎಸೆತ, 30 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದರೆ 41 ರನ್‌ ಗಳಿಸಿದ್ದ ರವೀಂದ್ರ ಜಡೇಜಾ 89 ರನ್‌(137 ಎಸೆತ, 10 ಬೌಂಡರಿ, 1 ಸಿಕ್ಸ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇವರಿಬ್ಬರು 6ನೇ ವಿಕೆಟಿಗೆ 279 ಎಸೆತಗಳಲ್ಲಿ 203 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 400 ರನ್‌ಗಳ ಗಡಿ ದಾಟಿಸಿದರು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ ಗಿಲ್‌ ಚೊಚ್ಚಲ ದ್ವಿಶತಕ ಗವಾಸ್ಕರ್‌, ಕೊಹ್ಲಿ ಸೇರಿ ಹಲವು ದಿಗ್ಗಜರ ದಾಖಲೆ ಪುಡಿ ಪುಡಿ

    ನಂತರ ವಾಷಿಂಗ್ಟನ್‌ ಸುಂದರ್‌ 42 ರನ್‌(103 ಎಸೆತ, 3 ಬೌಂಡರಿ, 1 ಸಿಕ್ಸ್‌) ಬಾರಿಸಿ ವಿಕೆಟ್‌ ಒಪ್ಪಿಸಿದರು. ಗಿಲ್‌ ಮತ್ತು ಸುಂದರ್‌ 189 ಎಸೆತಗಳಲ್ಲಿ 144 ರನ್‌ ಜೊತೆಯಾಟವಾಡಿದರು. ಅಂತಿಮವಾಗಿ ಗಿಲ್‌ ತಂಡದ ಮೊತ್ತ 574 ರನ್‌ ಗಳಿಸಿದ್ದಾಗ 8ನೇಯವರಾಗಿ ವಿಕೆಟ್‌ ಒಪ್ಪಿಸಿದರು. ಇಂಗ್ಲೆಂಡ್‌ ಪರ ಶೋಯೆಬ್‌ ಬಷೀರ್‌ 3 ವಿಕೆಟ್‌ ಕಿತ್ತರೆ ಕ್ರಿಸ್‌ ವೋಕ್ಸ್‌ ಮತ್ತು ಜೋಶ್‌ ಟಂಗ್‌ ತಲಾ 2 ವಿಕೆಟ್‌ ಕಿತ್ತರು.

    ಗಿಲ್‌ ದಾಖಲೆಗಳು
    ಶುಭಮನ್ ಗಿಲ್ ಗಳಿಸಿದ 269 ರನ್‌ ಭಾರತೀಯ ನಾಯಕನೊಬ್ಬ ಟೆಸ್ಟ್‌ನಲ್ಲಿ ಗಳಿಸಿದ ಅತ್ಯಧಿಕ ರನ್‌ ಆಗಿದೆ. 2019 ರಲ್ಲಿ ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿದ ಅಜೇಯ 254 ರನ್‌ ಇಲ್ಲಿಯವರೆಗೆ ನಾಯಕನೊಬ್ಬ ಅತ್ಯದಿಕ ರನ್‌ ಆಗಿತ್ತು.

    ಏಷ್ಯಾದ ಹೊರಗೆ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ರನ್‌ಗಳಾಗಿವೆ. ಈ ಹಿಂದೆ 2004 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್‌ ತೆಂಡೂಲ್ಕರ್‌ ಅಜೇಯ 241 ರನ್‌ ಹೊಡೆದಿದ್ದರು.

    ಇಂಗ್ಲೆಂಡ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಧಿಕ ಟೆಸ್ಟ್ ಸ್ಕೋರ್.

    2004 ರಲ್ಲಿ ಪಾಕಿಸ್ತಾನ ಪ್ರವಾಸದಲ್ಲಿ ವೀರೇಂದ್ರ ಸೆಹ್ವಾಗ್ ಅವರ 309 ಮತ್ತು ರಾವಲ್ಪಿಂಡಿಯಲ್ಲಿ ರಾಹುಲ್ ದ್ರಾವಿಡ್ ಅವರ 270 ರನ್‌ಗಳ ನಂತರ ವಿದೇಶಿ ನೆಲದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ಅತ್ಯಧಿಕ ಸ್ಕೋರ್ ಆಗಿದೆ.

    ಗಿಲ್ ಅವರ 269 ರನ್‌ ಟೆಸ್ಟ್‌ನಲ್ಲಿ ಭಾರತದ ಏಳನೇ ಅತ್ಯಧಿಕ ಸ್ಕೋರ್ ಆಗಿದೆ.

  • Bengaluru | ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ

    Bengaluru | ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ

    ಬೆಂಗಳೂರು: ಸ್ಪೋರ್ಟ್ಸ್ ಪ್ರಾಕ್ಟಿಸ್ (Sports Practice) ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆಯಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಗೊರಗುಂಟೆಪಾಳ್ಯ (Goraguntepalya) ನಿವಾಸಿ ಡಿಮನ್ ರಾಜ್ ನಾಪತ್ತೆಯಾದ ವಿದ್ಯಾರ್ಥಿ. ಏಳನೇ ತರಗತಿ ಓದುತ್ತಿದ್ದ ಡಿಮನ್ ರಾಜ್ ಎಂದಿನಂತೆ ಬೆಳಗ್ಗೆ ಮನೆಯಿಂದ ಟ್ಯೂಷನ್‌ಗೆ ಹೋಗಿದ್ದ. ಆದರೆ ಟ್ಯೂಷನ್‌ಗೆ ಹೋಗದೇ ಕಂಠೀರವ ಸ್ಟೇಡಿಯಂಗೆ (Kanteerava Stadium) ಬಂದಿದ್ದ. ಕಂಠೀರವ ಸ್ಟೇಡಿಯಂನಲ್ಲಿ ಜಾವೆಲಿನ್ ಥ್ರೋ ಪ್ರಾಕ್ಟಿಸ್ ನೋಡಲು ಬಂದಿದ್ದ ಡಿಮನ್ ರಾಜ್ ಸ್ಟೇಡಿಯಂನಲ್ಲಿ ನೀರಜ್ ಚೋಪ್ರಾ ಜೊತೆ ಪೋಟೋ ತೆಗೆಸಿಕೊಂಡಿದ್ದ. ಬಳಿಕ ಅಲ್ಲಿದ್ದ ವ್ಯಕ್ತಿಯೊಬ್ಬರ ಮೂಲಕ ಪೋಟೋವನ್ನ ತನ್ನ ತಾಯಿಗೆ ಕಳುಹಿಸಿದ್ದ. ಅನಂತರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಡ್ಯೂಟಿ ಡಾಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ವಿದ್ಯಾರ್ಥಿ ನಾಪತ್ತೆ ಬಗ್ಗೆ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಪೋಷಕರು ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಕಂಠೀರವ ಸ್ಟೇಡಿಯಂ, ಮಾರ್ಕೆಟ್ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರಿ ಕೊಡಿಸುವುದಾಗಿ 200 ರೂ. ವಂಚನೆ; 30 ವರ್ಷದ ನಂತರ ಬಂಧನ

  • ಶತಕ ಹೊಡೆದು ಹಲವು ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

    ಶತಕ ಹೊಡೆದು ಹಲವು ದಾಖಲೆ ನಿರ್ಮಿಸಿದ ಸ್ಮೃತಿ ಮಂಧನಾ

    ನಾಟಿಂಗ್‌ಹ್ಯಾಮ್‌: ಟೀಂ ಇಂಡಿಯಾ (Team India) ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ (Smriti Mandhana) ಇಂಗ್ಲೆಂಡ್‌ (England) ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಪರ ಹಲವು ದಾಖಲೆ ನಿರ್ಮಿಸಿದ್ದಾರೆ.

    ಟಿ20, ಏಕದಿನ, ಟೆಸ್ಟ್​ನಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಂಧನಾ ಪಾತ್ರರಾಗಿದ್ದಾರೆ. ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಮೂರು ಮಾದರಿಯ ಕ್ರಿಕೆಟಿನಲ್ಲಿ ಸೆಂಚುರಿ ಬಾರಿಸಿದ 5ನೇ ಆಟಗಾರ್ತಿಯಾಗಿದ್ದಾರೆ.

    ಟ್ರೆಂಟ್ ಬ್ರಿಡ್ಜ್‌ ಮೈದಾನದಲ್ಲಿ ಟಿ20ಯಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಮಂಧನಾ ಹೊಡೆದ ಶತಕ ಭಾರತದ ಪರ ದಾಖಲಾದ ಎರಡನೇ ಟಿ20 ಶತಕವಾಗಿದೆ. ಈ ಮೊದಲು ಹರ್ಮನ್​​ಪ್ರೀತ್​ ಕೌರ್ ಅವರು ಶತಕ ಬಾರಿಸಿದ್ದರು. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ವೇಗಿ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ – FIR ದಾಖಲು

    ಇಲ್ಲಿಯವರಗೆ ಸ್ಮೃತಿ ಏಕದಿನದಲ್ಲಿ 11, ಟೆಸ್ಟ್​ನಲ್ಲಿ 2 ಹಾಗೂ ಈಗ ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.

     

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 5 ವಿಕೆಟ್‌ ನಷ್ಟಕ್ಕೆ 210 ರನ್‌ ಹೊಡೆಯಿತು. ಮಂಧನಾ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 51 ಎಸೆತಗಳಲ್ಲಿ ಶತಕ ಹೊಡೆದರು. ಅಂತಿಮವಾಗಿ ಮಂಧನಾ 112 ರನ್‌(62 ಎಸೆತ, 15 ಬೌಂಡರಿ, 3 ಸಿಕ್ಸ್‌ ಸಿಡಿಸಿ) 20ನೇ ಓವರಿನ 2ನೇ ಎಸೆತದಲ್ಲಿ 5ನೇಯವರಾಗಿ ವಿಕೆಟ್‌ ಒಪ್ಪಿಸಿದರು.

    ಕಠಿಣ ಸವಾಲನ್ನು ಬೆನ್ನಟ್ಟಿದ ಇಂಗ್ಲೆಂಡ್‌ 14.5 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಭಾರತ 97 ರನ್‌ಗಳ ಭರ್ಜರಿ ಜಯ ಸಾಧಿಸಿತು.

  • ಪೋಪ್‌ – ಡಕೆಟ್‌ ಶತಕದ ಜೊತೆಯಾಟ – ಬುಮ್ರಾ ಏಕಾಂಗಿ ಹೋರಾಟಕ್ಕೆ ಮೂರು ವಿಕೆಟ್‌

    ಪೋಪ್‌ – ಡಕೆಟ್‌ ಶತಕದ ಜೊತೆಯಾಟ – ಬುಮ್ರಾ ಏಕಾಂಗಿ ಹೋರಾಟಕ್ಕೆ ಮೂರು ವಿಕೆಟ್‌

    ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ (Test Match) 2ನೇ ದಿನ ಯುವ ನಾಯಕ ಶುಭಮನ್‌ ಗಿಲ್‌, ರಿಷಬ್‌ ಪಂತ್‌ (Rishabh Pant) ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಮೊದಲ ಇನ್ನೀಂಗ್ಸ್‌ನಲ್ಲಿ 471 ರನ್‌ ಪೇರಿಸಿತು. ಆದ್ರೆ, ಇದಕ್ಕೆ ಇಂಗ್ಲೆಂಡ್‌ ಕೂಡ ತಿರುಗೇಟು ನೀಡಿದೆ.

    ವೇಗಿ ಜಸ್‌ಪ್ರೀತ್‌ ಬುಮ್ರಾ ಮಾರಕ ದಾಳಿಯ ಹೊರತಾಗಿಯೂ 3 ವಿಕೆಟ್‌ಗೆ 209 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಮೊದಲ ಓವರ್‌ನ 4ನೇ ಎಸೆತದಲ್ಲಿಯೇ ಇಂಗ್ಲೆಂಡ್‌ನ ಆರಂಭಿಕ ಬ್ಯಾಟರ್‌ ಜಾಕ್‌ ಕ್ರಾವ್ಲಿ (Zak Crawley), ಕರುಣ್‌ ನಾಯರ್‌ಗೆ ಸ್ಲಿಪ್‌ ಕ್ಯಾಚಿತ್ತು ನಿರ್ಗಮಿಸಿದರು. ಆದ್ರೆ 2ನೇ ವಿಕೆಟ್‌ಗೆ ಜೊತೆಗೂಡಿದ ಒಲ್ಲಿ ಪೋಪ್‌ ಹಾಗೂ ಬೆನ್‌ ಡಕೆಟ್‌ ಶತಕದ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಡಕೆಟ್‌ ಔಟಾದ ಬಳಿಕ ಕ್ರೀಸ್‌ಗಿಳಿದ ಜೋ ರೂಟ್‌ (Joe Root) ಬೃಹತ್‌ ಮೊತ್ತ ಸಿಡಿಸುವ ನಿರೀಕ್ಷೆ ಹುಟ್ಟಿಸಿದ್ದರು. ಆದ್ರೆ ಇವರ ಆಟಕ್ಕೂ ಬುಮ್ರಾ ಬ್ರೇಕ್‌ ಹಾಕಿದ್ರು. ಇದನ್ನೂ ಓದಿ: 41 ರನ್‌ಗಳಿಗೆ 7 ವಿಕೆಟ್‌ ಪತನ – 500 ರನ್‌ ಗಡಿಯಲ್ಲಿ ಭಾರತಕ್ಕೆ ಬಿಗ್‌ ಶಾಕ್‌!

    ಒಂದೆಡೆ ರನ್‌ ಪೇರಿಸುತ್ತಿದ್ದ ಇಂಗ್ಲೆಂಡ್‌ ತಂಡಕ್ಕೆ ಆಘಾತ ನೀಡಿದ ಬುಮ್ರಾ ಅವರು, ಕ್ರಾವ್ಲಿ, ಡಕೆಟ್‌ ಹಾಗೂ ರೂಟ್‌ ಅವರಿಗೆ ಪೆವಿಲಿಯನ್‌ ರೂಟ್‌ ತೋರಿಸಿದರು. ಆದ್ರೆ ಇತ್ತ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವ ಒಲ್ಲಿ ಪೋಪ್‌ 100 ರನ್‌ (131 ಎಸೆತ, 13 ಬೌಂಡರಿ) ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇನ್ನೂ 12 ಎಸೆತಗಳಲ್ಲಿ ಶೂನ್ಯ ಸುತ್ತಿರುವ ಹ್ಯಾರಿ ಬ್ರೂಕ್‌ ಸಹ ಕ್ರೀಸ್‌ನಲ್ಲಿದ್ದು ಇಂದು 3ನೇ ದಿನದ ಆಟ ಆರಂಭಿಸಲಿದ್ದಾರೆ. ಇದನ್ನೂ ಓದಿ: ಪಲ್ಟಿ ಹೊಡೆದು ಪಂತ್‌ ಶತಕ ಸಂಭ್ರಮ – ಧೋನಿ ರೆಕಾರ್ಡ್‌ ಬ್ರೇಕ್‌

    ಪಂತ್‌-ಗಿಲ್‌ ದ್ವಿಶತಕದ ಜೊತೆಯಾಟ
    ಶುಕ್ರವಾರ ಅರ್ಧಶತಕ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ರಿಷಬ್‌ ಪಂತ್‌ ಶನಿವಾರ ಸ್ಪೋಟಕ ಪ್ರದರ್ಶನಕ್ಕಿಳಿದು ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು. ಆ ಮೂಲಕ ಭಾರತ ತಂಡದ ಒಟ್ಟು ಮೂವರು ಬ್ಯಾಟರ್‌ಗಳು ಶತಕ ಗಳಿಸಿ ಗಮನ ಸೆಳೆದಂತಾಗಿದೆ. ಮೊದಲ ದಿನದಾಟದಂದು ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಮತ್ತು ನಾಯಕ ಶುಭಮನ್‌ ಗಿಲ್‌ ಶತಕ ದಾಖಲಿಸಿದ್ದರು. ಜೈಸ್ವಾಲ್‌ 159 ಎಸೆತಗಳಲ್ಲಿ 101 ರನ್‌ ಗಳಿಸಿದ್ರೆ, ಗಿಲ್‌ 227 ಎಸೆತಗಳಲ್ಲಿ 147 ರನ್‌ ಗಳಿಸಿದರು. ಪಂತ್‌ 178 ಎಸೆತಗಳಿಂದ 134 ರನ್‌ ಸಿಡಿಸಿ ಟೀಕಾಕಾರರಿಗೆ ತಕ್ಕ ಪ್ರತ್ಯುತ್ತರ ನೀಡಿದರು.

    2ನೇ ದಿನ ಕ್ರೀಸ್‌ ಆರಂಭಿಸಿದ ಟೀಂ ಇಂಡಿಯಾ ಗಿಲ್‌-ಪಂತ್‌ ದ್ವಿಶತಕದ ಜೊತೆಯಾಟದೊಂದಿಗೆ ತಂಡಕ್ಕೆ ಚೇತರಿಕೆ ನೀಡಿತ್ತು. ಕೊನೆಯ 41 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಳ್ಳುವ ಮೂಲಕ 471 ರನ್‌ಗಳಿಗೆ ಆಲೌಟ್‌ ಆಯಿತು. ಇದನ್ನೂ ಓದಿ: England vs India, 1st Test: ಇಂಗ್ಲೆಂಡ್‌ ನೆಲದಲ್ಲಿ ಮೊದಲ ಪಂದ್ಯದಲ್ಲೇ ಜೈಸ್ವಾಲ್‌, ಗಿಲ್‌ ಶತಕದ ಸಾಧನೆ

    ಶುಬ್ಮನ್‌ ಗಿಲ್‌ ಮತ್ತು ರಿಷಬ್‌ ಪಂತ್‌ ನಾಲ್ಕನೇ ವಿಕೆಟ್‌ಗೆ 209 ರನ್‌ಗಳ ಪಾಲುದಾರಿಕೆ ನೀಡಿ ತಂಡವನ್ನು ಸುಸ್ಥಿತಿಗೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅವರಿಬ್ಬರ ವಿಕೆಟ್‌ಗಳು ಪತನಗೊಂಡ ಬಳಿಕ ಭಾರತ ತಂಡ ನಾಟಕೀಯವಾಗಿ ಕುಸಿತ ಕಂಡಿತು. 28 ರನ್‌ಗಳ ಅಂತರದಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಭಾರತ ಕಳೆದುಕೊಂಡು ಮೊದಲ ಇನಿಂಗ್ಸ್‌ ಕೊನೆಗೊಳಿಸಿತು.

    ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕರುಣ್‌ ನಾಯರ್‌ ಶೂನ್ಯಕ್ಕೆ ತುತ್ತಾದ್ರೆ, ಜಸ್ಪ್ರೀತ್ ಬುಮ್ರಾ‌ ಕೂಡ ಶೂನ್ಯ ಸುತ್ತಿದರು. ರವೀಂದ್ರ ಜಡೇಜಾ 11 ರನ್‌ ಗಳಿಸಿದ್ರೆ ಉಳಿದವರು ಒಂದಂಕಿ ಮೊತ್ತಕ್ಕೆ ಔಟಾದರು. ಇದನ್ನೂ ಓದಿ: England vs India 1st Test – ಭಾರತಕ್ಕೆ 2 ಬಾರಿ 5 ರನ್‌!

    ಸಂಕ್ಷಿಪ್ತ ಸ್ಕೋರ್‌
    ಭಾರತ: ಮೊದಲ ಇನಿಂಗ್ಸ್‌ 113 ಓವರ್‌ಗಳಲ್ಲಿ 471 ರನ್‌
    ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 49 ಓವರ್‌ಗಳಲ್ಲಿ 3 ವಿಕೆಟ್‌ಗೆ 209 ರನ್‌