ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿ ಎಂಟ್ರಿ ಕೊಡುತ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಓಟಿಟಿ ಮೂಲಕ 16 ಸ್ಪರ್ಧಿಗಳು ಸದ್ದು ಮಾಡ್ತಿದ್ದಾರೆ. ಈಗ ಶೋ ಶುರುವಾಗಿ ಮೂರೇ ದಿನಕ್ಕೆ ಬಿಗ್ ಬಾಸ್ ಮನೆ ರಣರಂಗವಾಗಿದೆ. ಸೋನು ಗೌಡ ಮತ್ತು ಸ್ಪೂರ್ತಿ ಗೌಡ ಮಾತಿನ ಜಟಾಪಟಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.
ಕಿರುತೆರೆಯ ದೊಡ್ಡ ಮನೆಯಲ್ಲಿ ಮೊದಲ ಜಗಳ ಶುರುವಾಗಿದೆ. ಸೋನು ಗೌಡ ಮತ್ತು ಸ್ಪೂರ್ತಿ ಗೌಡ ಮಾತಿನ ಚಕಮಕಿ ಜೋರಾಗಿದ್ದು, ಮನೆಯ ವಾತಾವರಣವೇ ಅಲ್ಲೋಲ್ಲ ಕಲ್ಲೋಲವಾಗಿದೆ. ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?
ಸ್ಪೂರ್ತಿ ಗೌಡ ಮೇಕಪ್ ಮಾಡುತ್ತಿರುವುದನ್ನು ನೋಡಿದ ಸೋನು ಗೌಡ, ಮೇಕಪ್ ಬಗ್ಗೆ ಒಂದಷ್ಟು ಮಾತನಾಡುತ್ತಾರೆ. ಆಗ ನನಗೆ ಮೇಕಪ್ ಗೊತ್ತಿಲ್ಲ ಎಂದ ಸ್ಪೂರ್ತಿ ಗೌಡಗೆ, ಸೋನು ಗೌಡ ಡವ್ ರಾಣಿ ಎಲ್ಲಾ ಗೊತ್ತಿದ್ದು, ಏನು ಗೊತ್ತಿಲ್ಲದ ಹಾಗೆ ಡವ್ ಮಾಡ್ತಿಯಾ ಎನ್ನುತ್ತಾರೆ. ಇದೇ ಮಾತುಗಳು ಇವರ ಜಗಳಕ್ಕೆ ಕಾರಣವಾಗಿವೆ. ಡವ್ ರಾಣಿ ಎನ್ನುವ ಪದ ಬಳಸಿದ್ದಕ್ಕೆ ಸ್ಪೂರ್ತಿ ಗೌಡ ಸಿಟ್ಟಾಗುತ್ತಾರೆ. ಆ ರೀತಿ ಮಾತನಾಡಬೇಡ ಎಂದು ಸಿಟ್ಟಾಗುತ್ತಾರೆ. ಇದೀಗ ಈ ವಿಚಾರವೇ ಜಗಳಕ್ಕೆ ಕಾರಣವಾಗಿದೆ. ಒಬ್ಬರಿಗೊಬ್ಬರು ಮಾತಿನ ಚಾಟಿ ಬೀಸಿದ್ದಾರೆ. ಇದಾದ ಬಳಿಕ ಒಬ್ಬರಿಗೊಬ್ಬರು ಮಾತನಾಡದೇ, ಮುನಿಸಿಕೊಂಡಿದ್ದಾರೆ.


ರಿಯಾಲಿಟಿ ಶೋ, ಜತೆ ಸಾಕಷ್ಟು ಸಿರೀಯಲ್‌ನಲ್ಲಿ ಕಾಣಿಸಿಕೊಂಡಿದ್ದ ಮಲೆನಾಡಿನ ಚೆಲುವೆ ಸ್ಪೂರ್ತಿ ಗೌಡ ಇದೀಗ ಬಿಗ್ ಬಾಸ್ ಒಟಿಟಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಜತೆ ತೆಲುಗಿನ ಸೀರಿಯಲ್‌ನಲ್ಲೂ ಸ್ಪೂರ್ತಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಕೊಡಲಾಗಿದೆ. `ನಾನು ಯಾರು’ ಎಂಬ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ನಟಿ ಸ್ಪೂರ್ತಿ ತನ್ನ ತಾಯಿಯ ಸಾವಿಗೆ ನಾನು ಕಾರಣ ಎಂದು ಸಮಾಜ ದೂಷಿಸಿರುವುದರ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:
ಸ್ಪೂರ್ತಿ ಗೌಡ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದರು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ನನ್ನ ತಾಯಿಗೆ ಥೈರಾಯ್ಡ್ ಕ್ಯಾನ್ಸರ್ ಇತ್ತು. ಜನ ನನ್ನ ತಾಯಿಯ ಸಾವಿಗೆ ನಾನೇ ಕಾರಣ ಎಂದು ಹೇಳುತ್ತಿದ್ದರು. ಜನ ತನ್ನನ್ನು ದೂಷಿಸಿರುವುದರ ಬಗ್ಗೆ ನೆನೆದು ಸ್ಪೂರ್ತಿ ಗೌಡ ಈ ವೇಳೆ ಭಾವುಕರಾಗಿದ್ದಾರೆ.