ಬಿಗ್ ಬಾಸ್ ಮನೆಯಲ್ಲಿ ಯಾರು ಹೇಗೆ ಎನ್ನುವುದು ನೋಡುಗರಿಗಿಂತ ಮನೆಯಲ್ಲಿ ಇರುವವರಿಗೆ ಹೆಚ್ಚು ಗೊತ್ತಿರುತ್ತದೆ. ಹಾಗಾಗಿ ಮನೆಯಿಂದ ಆಚೆ ಬರುವ ಸ್ಪರ್ಧಿಗಳು ಶಾಕಿಂಗ್ ಸ್ಟೇಟ್ ಮೆಂಟ್ ಕೊಡುತ್ತಿದ್ದಾರೆ. ನೋಡುಗರಿಗೆ ಅವರು ತೋರುವುದು ಒಂದು, ಮನೆಯಲ್ಲಿ ಅವರು ಇರುವುದು ಒಂದು ಎನ್ನುವಂತಹ ಮಾತುಗಳನ್ನು ಅವರು ಆಡುತ್ತಿದ್ದಾರೆ. ಹಾಗಾಗಿ ಮನೆಯಲ್ಲಿ ಇರುವವರ ಬಣ್ಣ, ಆಚೆ ಬಂದವರಿಂದ ಬಯಲಾಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೂ ಚೆನ್ನಾಗಿಯೇ ಇರುವ, ಒಂದು ಸಲವೂ ನಾಮಿನೇಟ್ ಆಗದೇ ಇರುವಂತಹ ಸ್ಪರ್ಧಿ ಎಂದರೆ ಚೈತ್ರಾ ಹಳ್ಳಿಕೇರಿ. ಖಾಸಗಿ ಬದುಕಿನಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸಿರುವ ಮತ್ತು ಅದನ್ನು ಬಹಿರಂಗವಾಗಿ ಹೇಳಿಕೊಂಡು ಗಟ್ಟಿಗಿತ್ತಿ ಅನಿಸಿರುವ ಚೈತ್ರಾ, ಬಿಗ್ ಬಾಸ್ ಮನೆಯಲ್ಲಿ ಈವರೆಗೂ ಮುಖವಾಡ ಹಾಕಿಕೊಂಡು ಬದುಕುತ್ತಿದ್ದರಂತೆ. ಹಾಗಂತ ಸ್ಪೂರ್ತಿ ಗೌಡ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

ಚೈತ್ರಾ ಬಿಗ್ ಬಾಸ್ ಮನೆ ಒಳಗೆ ಇರುವವರ ಜೊತೆ ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡಿ ಮಾತನಾಡುತ್ತಿದ್ದರು. ನಾನು ಮನೆಯಿಂದ ಆಚೆ ಬರುವ ಎರಡು ದಿನ ಮುಂಚೆ ನನ್ನ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ಎಷ್ಟು ದಿನ ಅಂತ ಮುಖವಾಡ ಹಾಕಿಕೊಂಡು ಇರುವುದಕ್ಕೆ ಆಗತ್ತೆ? ಈಗೀಗ ಅವರು ಮುಖವಾಡ ತಗೆದು ಬದುಕುತ್ತಿದ್ದಾರೆ ಎಂದು ಸ್ಪೂರ್ತಿ ಗೌಡ ಕಾಮೆಂಟ್ ಮಾಡಿದ್ದಾರೆ.




















ಮನೆಯ ಅಟ್ರಾಕ್ಷನ್ ಆಗಿರುವ ರಾಕೇಶ್‌ಗಾಗಿ ಸ್ಪೂರ್ತಿ ಗೌಡ ಮತ್ತು ಸೋನು ಗೌಡ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಸ್ಪೂರ್ತಿ ಗೌಡ ಮತ್ತು ರಾಕೇಶ್ ಮಧ್ಯೆ ಏನೋ ನಡೆಯುತ್ತಿದೆ ಎಂದು ಹಲವರಿಗೆ ಅನುಮಾನ ಬಂದಿತ್ತು. ಸ್ಪೂರ್ತಿ ಕೂಡ ತಮಗೆ ಇಷ್ಟವೆಂದು ರಾಕೇಶ್ ಹೇಳಿಕೊಂಡಿದ್ದರು. ನಮ್ಮಿಬ್ಬರ ಜಾತಕ ಹೇಗಿದೆ ಹೊಂದಾಣಿಕೆ ಎಂದು ಗುರೂಜಿಗೆ ಕೇಳಿದ್ದರು. ಈಗ ರಾಕೇಶ್ ಮೇಲೆ ಸೋನು ಗೌಡ ಕಣ್ಣು ಬಿದ್ದಿದೆ. ಇದನ್ನೂ ಓದಿ:

ಬಿಗ್ ಬಾಸ್ ಮನೆಯಲ್ಲಿ ಸ್ಪೂರ್ತಿ ಮತ್ತು ಸೋನು ನಡುವೆ ಕಿರಿಕ್ ಜೋರಾಗಿದೆ. ನೀವು ಸುಮ್ಮನೆ ನಗುತ್ತಿರುವುದು ಸರಿಯಿಲ್ಲ. ಹಿಂದಿನಿಂದ ಹೀಯಾಳಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಸೋನು ತಕರಾರು ತೆಗೆದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ಇದೇ ವೇಳೆ ರಾಕೇಶ್ ಅಡಿಗ ಕೂಡ ಆಗಮಿಸಿದ್ದು, ಸೋನು ಗೌಡರ ಮನವೊಲಿಸಲು ಯತ್ನಿಸಿದರು. ಅಷ್ಟೇ ಅಲ್ಲದೆ ನೀವು ಅಪಾರ್ಥ ಮಾಡಿಕೊಂಡಿದ್ದೀರಿ. ನಾವು ಯಾರನ್ನೂ ಹೀಯಾಳಿಸಿರಲಿಲ್ಲ. ನಾವಿಬ್ಬರೇ ತಮಾಷೆ ಮಾಡಿಕೊಂಡು ನಕ್ಕಿದ್ದೆವು. ನೀನು ತಪ್ಪು ತಿಳಿದುಕೊಂಡಿದ್ದೀಯಾ ಎಂದು ತಿಳಿಸಿದರು.
ಇನ್ನು ಯಾರು ಬೆಂಬಲ ನೀಡದ ಕಾರಣ ಬೇಜಾರಿಂದ ಸೋನು ಗೌಡ ಕಣ್ಣೀರು ಹಾಕುತ್ತಾ ಸಾಗಿದರು. ಇದೇ ವೇಳೆ ರಾಕೇಶ್ ಸೋನು ಗೌಡರನ್ನು ಸಮಾಧಾನಪಡಿಸಲು ಯತ್ನಿಸಿದರು. ಅಲ್ಲದೆ ಬೆಳ್ಳಿಗ್ಗೆನೇ ಮೂಡ್ ಆಫ್ ಆಗ್ಬೇಡ ಎಂದರು. ಇದೇ ವೇಳೆ ಕೋಪದಿಂದ ಮರುತ್ತರ ನೀಡಿದ ಸೋನು ಗೌಡ, ನಾನು ಯಾವತ್ತೂ ಮೂಡ್ ಆಫ್ ಆಗಲ್ಲ ಎಂದು ಉತ್ತರಿಸಿದರು. ಈ ವೇಳೆ ಕೋಪ ಮಾಡಿಕೊಂಡಿದ್ದೀಯಾ ಎಂದು ರಾಕೇಶ್ ಮತ್ತೊಮ್ಮೆ ಕಾಲೆಳೆಯುವ ಪ್ರಯತ್ನ ಮಾಡಿದರು. ತಾನು ಒಳ್ಳೆಯ ಮೂಡ್‌ನಲ್ಲಿದ್ದೀನಿ ಎಂದು ತೋರಿಸಲು ಪ್ರಯತ್ನಿಸಿದರು. ಒಟ್ಟಿನಲ್ಲಿ ಮೊದಲ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡರ ಹವಾ ಜೋರಾಗಿದ್ದು, ಕೆಲ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈವೆರೆಗೆ ಸಾಕಷ್ಟು ಪ್ರೇಮ ಕಥೆಗಳು ಹುಟ್ಟಿಕೊಂಡಿವೆ. ಈ ಸೀಸನ್‌ನಲ್ಲಿ ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಹೈಲೈಟ್ ಆಗ್ತಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ರಾಕೇಶ್ ಅವರ ಕೈಹಿಡಿದುಕೊಂಡು ಭವಿಷ್ಯ ಹೇಳುವುದಾಗಿ ಹೇಳಿದರು ಸ್ಫೂರ್ತಿ ಗೌಡ. ದುಡ್ಡು ಎಷ್ಟೇ ಬಂದರೂ ಅರ್ಧಂಬರ್ಧ ಬರುತ್ತದೆ ಎಂದು ಮಾತು ಆರಂಭಿಸಿದರು. ನಂತರ ಅದೂ ಇದು ಎಂದು ಕಥೆ ಹೇಳೋಕೆ ಶುರು ಮಾಡಿದರು. ಇದನ್ನು ರಾಕೇಶ್ ಹಾಗೂ ರೂಪೇಶ್ ಆಡಿಕೊಂಡು ನಕ್ಕರು.