Tag: spoon

  • ವ್ಯಕ್ತಿ ಹೊಟ್ಟೆಯಲ್ಲಿತ್ತು 62 ಚಮಚ – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

    ವ್ಯಕ್ತಿ ಹೊಟ್ಟೆಯಲ್ಲಿತ್ತು 62 ಚಮಚ – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

    ಲಕ್ನೋ: ಹೊಟ್ಟೆ ನೋವೆಂದು ಬಂದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು 62 ಸ್ಟೀಲ್ ಚಮಚಗಳನ್ನು (Steel Spoon) ಹೊರತೆಗೆದಿರುವ ಘಟನೆ ಉತ್ತರಪ್ರದೇಶದ (UttarPradesh) ಮುಜಾಫರ್ ನಗರದಲ್ಲಿ ನಡೆದಿದೆ.

    ಬೋಪಾಡಾ ಗ್ರಾಮದಲ್ಲಿ ವಾಸಿಸುತ್ತಿದ್ದ ವಿಜಯ್ (32) ತೀವ್ರ ಹೊಟ್ಟೆ ನೋವಿನಿಂದ ಮುಜಾಫರ್ ನಗರದ ಆಸ್ಪತ್ರೆಗೆ (Hospital) ದಾಖಲಾಗಿದ್ದರು. ವೈದ್ಯರು ತಪಾಸಣೆ ನಡೆಸಿದ ಬಳಿಕ ಹೊಟ್ಟೆಯಲ್ಲಿ ಚಮಚಗಳಿರುವುದು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ. ನಂತರ ಸುಮಾರು 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ರಾಕೇಶ್ ಖುರಾನ, 62 ಸ್ಟೀಲ್ ಸ್ಪೂನ್‌ಗಳನ್ನ ಹೊರತೆಗೆದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಮತ್ತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ : ಬಿ.ವೈ. ವಿಜಯೇಂದ್ರ

    ಇದೇ ರೀತಿಯ ಘಟನೆಯಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಖಿನ್ನತೆಗೆ ಒಳಗಾಗಿ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿದ್ದಾರೆ. ಇದರಿಂದ ಹೊಟ್ಟೆಯಲ್ಲಿ ಬೃಹತ್ ಗೆಡ್ಡೆಯಂತಾಗಿದ್ದು, ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ಮೂಲಕ ನಾಣ್ಯಗಳನ್ನು ಹೊರತೆಗೆಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 90 ಪೈಸೆಗೆ ಸ್ಪೂನ್ ಖರೀದಿಸಿ ಆನ್‍ಲೈನ್‍ನಲ್ಲಿ 2 ಲಕ್ಷಕ್ಕೆ ಮಾರಿದ

    90 ಪೈಸೆಗೆ ಸ್ಪೂನ್ ಖರೀದಿಸಿ ಆನ್‍ಲೈನ್‍ನಲ್ಲಿ 2 ಲಕ್ಷಕ್ಕೆ ಮಾರಿದ

    ಲಂಡನ್: ವ್ಯಕ್ತಿಯೋರ್ವ ಲಂಡನ್ ಬೀದಿಯಲ್ಲಿ ಕೇವಲ 90 ಪೈಸೆಗೆ ಹಳೆಯ ನಜ್ಜುಗುಜ್ಜಾಗಿದ್ದ ತೆಳು ಹಾಗೂ ಉದ್ದವಾದ ಚಮಚವನ್ನು ಖರೀದಿಸಿ ನಂತರ ಅದನ್ನು ಆನ್‍ಲೈನ್‍ನಲ್ಲಿ 2 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ.

    ಹೌದು. ಲಾರೆನ್ಸ್ ‘ಐಕಿಯಾ ಸ್ಟೈಲ್ ಕಟ್ಲರಿ’ ರೀತಿಯ ಚಮಚವನ್ನು ಬೀದಿಯಲ್ಲಿ ಕಂಡು, ಅದು ಮಧ್ಯಕಾಲೀನ ಚಮಚ ಎಂದು ಭಾವಿಸಿ ನಂತರ 90 ಪೈಸೆ ಕೊಟ್ಟು ಚಮಚವನ್ನು ಖರೀದಿಸಿದ್ದಾರೆ. ನಂತರ ಲಾರೆನ್ಸ್ ಬೆಳ್ಳಿ ತಜ್ಞರ ಬಳಿ 5 ಇಂಚಿನ ಚಮಚವನ್ನು ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಅದು 13ನೇ ಶತಮಾನದ ಅಂತ್ಯದ ಬೆಳ್ಳಿ ಚಮಚವೆಂದು ತಿಳಿದುಬಂದಿದ್ದು, ಅದರ ಬೆಲೆ ಸುಮಾರು 51,712ರೂ ಎಂಬ ವಿಚಾರ ಬಹಿರಂಗವಾಗಿದೆ. ಇದನ್ನೂ ಓದಿ:ಮೀನು, ಮಟನ್‍ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ: ಬಿಜೆಪಿ ಸಚಿವ ಶುಲ್ಲೈ

    ಆ ಚಮಚವನ್ನು ಲಾರೆನ್ಸ್ ಆನ್‍ಲೈನ್‍ನಲ್ಲಿ ಹರಾಜಿಗೆ ಹಾಕಿದ್ದಾರೆ. ಈ ವೇಳೆ ಹಾರಜು ಪ್ರಕ್ರಿಯೆಯಲ್ಲಿ ಚಮಚ 1,97,000 ರೂಪಾಯಿಗೆ ಭಾರೀ ಮೊತ್ತದಲ್ಲಿ ಮಾರಾಟವಾಗಿದೆ. ತೆರಿಗೆ, ಹೆಚ್ಚುವರಿ ಶುಲ್ಕ ಸೇರಿದಂತೆ ಈ ಪುರಾತನ ಚಮಚದ ಒಟ್ಟು ಮೌಲ್ಯ 2 ಲಕ್ಷ ಗಡಿ ದಾಟಿದೆ. ಇದನ್ನೂ ಓದಿ:ಕಂದಹಾರ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ – ವಿಮಾನ ಹಾರಾಟ ರದ್ದು

  • ಚಮಚದಿಂದ ಕಪ್‍ಗೆ ನೀರು ತುಂಬಿಸಿದ ನಿಧಿ ಸುಬ್ಬಯ್ಯ!

    ಚಮಚದಿಂದ ಕಪ್‍ಗೆ ನೀರು ತುಂಬಿಸಿದ ನಿಧಿ ಸುಬ್ಬಯ್ಯ!

    ಕಳೆದ ವಾರ ಬಿಗ್‍ಬಾಸ್ ಮನೆಯ ಸದಸ್ಯರಿಗೆ ಚಂಡೇಶ್ವರ ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದರು. ಅದರಂತೆ ಬಜರ್ ಆದ ತಕ್ಷಣ ಪ್ಲಾಸ್ಮದಲ್ಲಿ ಬರುವ ಹೆಸರಿನ ಒಬ್ಬ ಸದಸ್ಯ ಗಾರ್ಡನ್ ಏರಿಯಾಗೆ ಹೋಗಿ, ಪೈಪ್‍ಲೈನ್‍ನಲ್ಲಿ ಬರುವ ಚೆಂಡನ್ನು ಹಿಡಿಯಬೇಕಿತ್ತು. ಆ ಚೆಂಡಿನಲ್ಲಿ ಒಂದು ಲಕ್ಷುರಿ ಐಟಂ ಹೆಸರಿದ್ದು, ಚೆಂಡನ್ನು ಸದಸ್ಯ ಹಿಡಿದರೆ ಅದರಲ್ಲಿರುವ ಐಟಂ ಮನೆಗೆ ದೊರೆಯುತ್ತದೆ. ಇಲ್ಲದಿದ್ದರೆ ಮನೆಯ ಸದಸ್ಯರು ಆ ಐಟಂನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದರು.

    ಅದರಂತೆ ಒಂದು ವಾರದಿಂದ ಬಜರ್ ಆಗಿದ ತಕ್ಷಣ ಮನೆಯ ಸದಸ್ಯರು ಚೆಂಡನ್ನು ಹಿಡಿಯಲು ಹಲವಾರು ಸರ್ಕಸ್ ನಡೆಸುತ್ತಿದ್ದಾರೆ. ಈ ವಾರ ಕೆಲವು ಸದಸ್ಯರು ಚೆಂಡನ್ನು ಹಿಡಿದಿದ್ದಾರೆ. ಇನ್ನೂ ಕೆಲವರು ಚೆಂಡನ್ನು ಹಿಡಿಯುವಲ್ಲಿ ವಿಫಲರಾಗಿ ಲಕ್ಷುರಿ ಐಟಂ ಕಳೆದುಕೊಂಡಿದ್ದಾರೆ. ಅಂತೆಯೇ ನಿಧಿಸುಬ್ಬಯ್ಯ ಹೆಸರು ಪ್ಲಾಸ್ಮದಲ್ಲಿ ಬರುತ್ತದೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಿಧಿ ವೇಗವಾಗಿ ಗಾರ್ಡನ್ ಏರಿಯಾಗೆ ಓಡಿ ಹೋಗುತ್ತಾರೆ. ಎಷ್ಟೇ ವೇಗವಾಗಿ ಓಡಿದ್ರೂ ನಿಧಿ ಚೆಂಡನ್ನು ಹಿಡಿಯುವಲ್ಲಿ ವಿಫಲರಾಗುತ್ತಾರೆ.

    ಹೀಗಾಗಿ ಬಿಗ್‍ಬಾಸ್ ನಿಧಿಗೆ ವಿಭಿನ್ನವಾದ ಶಿಕ್ಷೆಯನ್ನು ನೀಡಿದ್ದಾರೆ. ಹೌದು ಚೆಂಡನ್ನು ಹಿಡಿಯುವಲ್ಲಿ ವಿಫಲವಾದ ನಿಧಿಗೆ, ಬಿಗ್‍ಬಾಸ್ ಚಮಚವನ್ನು ಬಳಸಿ ಸ್ವೀಮಿಂಗ್ ಪೂಲ್‍ನಲ್ಲಿರುವ ನೀರನ್ನು ಕಪ್ ನಲ್ಲಿರುವ ಕಪ್ಪು ಗುರುತಿನವರೆಗೂ ತುಂಬಿಸುವಂತೆ ಶಿಕ್ಷೆ ನೀಡಿದ್ದರು. ಅದರಂತೆ ಚಮಚ ಹಿಡಿದು ಸ್ವೀಮಿಂಗ್ ಪೂಲ್‍ನಲ್ಲಿರುವ ನೀರನ್ನು ಕಪ್‍ಗೆ ತುಂಬಿಸಲು ನಿಧಿ, ನಿಂತುಕೊಂಡು, ಕುಳಿತುಕೊಂಡು ಹರಸಹಾಸ ಪಡುತ್ತಿರುತ್ತಾರೆ.

    ಈ ವೇಳೆ ಮನೆಯ ಸದಸ್ಯರು ನಿಧಿಗೆ ಪ್ರೋತ್ಸಾಹಿಸುತ್ತಿದ್ದರೆ, ಮಂಜು ಮಾತ್ರ ನೀನು ನೀರು ತುಂಬಿಸಿದ ತಕ್ಷಣ ಮತ್ತೊಮ್ಮೆ ನಿನ್ನ ಹೆಸರು ಬರಬೇಕು. ಮತ್ತೆ ಚೆಂಡು ಹಿಡಿಯಲಾಗದೇ ಅಯ್ಯಯ್ಯೋ ಮತ್ತೆ ನೀರು ತಂಬಿಸಬೇಕಲ್ಲ ಎಂದು ಹೇಳಬೇಕು. ವಾರ ಪೂರ್ತಿ ಇದೇ ಟಾಸ್ಕ್ ನೀಡಬೇಕು. ಹಾಗೇನಾದರೂ ಮಾಡಿದರೆ ನಾನು ಬಹಳ ಖುಷಿ ಪಡುತ್ತೇನೆ ಎಂದು ಹಾಸ್ಯ ಮಾಡುತ್ತಾರೆ.

    ಒಟ್ಟಾರೆಯಾಗಿ ಈ ಟಾಸ್ಕ್ ನೋಡಲು ಸುಲಭವಾಗಿ ಕಂಡರು, ಅದು ಬಹಳ ಕಷ್ಟ ಎಂದು ಹೇಳಬಹುದು.

  • ಮಗು ಜಾಸ್ತಿ ಅತ್ತಿದ್ದಕ್ಕೆ ಚಮಚದಿಂದ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ

    ಮಗು ಜಾಸ್ತಿ ಅತ್ತಿದ್ದಕ್ಕೆ ಚಮಚದಿಂದ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ

    ಬೆಳಗಾವಿ: ಮಗು ಜಾಸ್ತಿ ಅಳುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯೊಬ್ಬಳು ಚಮಚದಿಂದ ಮೂರು ವರ್ಷದ ಮುಗುವಿಗೆ ಬರೆ ಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಗೋಕಾಕ್ ಪಟ್ಟಣದ ಮಲ್ದಾರ್ ಗ್ರಾಮದ ಅಂಗನವಾಡಿಯ ಶಿಕ್ಷಕಿ ರೇಣುಕಾ ಬರೆ ಹಾಕಿದ ಶಿಕ್ಷಕಿ. ಬಾಲಕ ಮೊಹಮ್ಮದ್ ಕಬೀರ್ ಅಂಗನವಾಡಿಯಲ್ಲಿ ಜೋರಾಗಿ ಅಳುತ್ತಿದ್ದ. ಈತನನ್ನು ಹೆದರಿಸುವ ಉದ್ದೇಶದಿಂದ ಚಮಚವನ್ನು ಬಿಸಿ ಮಾಡಿ ಕೈಗೆ ಬರೆ ಹಾಕಿದ್ದಾಳೆ.

    ಮಧ್ಯಾಹ್ನ ಮನೆಗೆ ಬಂದ ಮಗುವಿನ ಕೈ ಗಮನಿಸಿದ ಪೋಷಕರು ಗಾಬರಿಗೊಂಡು ಕೂಡಲೇ ಅಂಗನವಾಡಿಗೆ ಬಂದು ವಿಚಾರಿಸಿದಾಗ ಶಿಕ್ಷಕಿ ರೇಣುಕಾ ಕೃತ್ಯ ಬೆಳಕಿಗೆ ಬಂದಿದೆ. ನಂತರ ಮಗುವಿನ ಕೈಗೆ ತೀವ್ರ ಗಾಯವಾಗಿದ್ದರಿಂದ ಕೂಡಲೇ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಿದ್ದಾರೆ.

    ಶಿಕ್ಷಕಿ ರೇಣುಕಾಳ ಕೃತ್ಯಕ್ಕೆ ಪೋಷಕರು ಆಕ್ರೋಶಗೊಂಡಿದ್ದು ಇತ್ತ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.