ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟು ತಲೆದೂರಿದೆ. ಆಪರೇಷನ್ ಕಮಲದ ಪರಿಣಾಮ ಉದ್ಧವ್ ಸರ್ಕಾರ ಪತನದ ಅಂಚು ತಲುಪಿದೆ. ಒಂದು ಕಾಲದಲ್ಲಿ ಎಲ್ಲರನ್ನು ನಡುಗಿಸುತ್ತಿದ್ದ ಶಿವಸೇನೆ ಈಗ ಪ್ರಭಾವಿ ಸಚಿವ ಏಕನಾಥ್ ಶಿಂಧೆ ಹಾರಿಸಿದ ಬಂಡಾಯದ ಬಾವುಟಕ್ಕೆ ತತ್ತರಿಸಿ ಇಬ್ಭಾಗವಾಗುವತ್ತಾ ಸಾಗಿದೆ.
ಮುಖ್ಯಮಂತ್ರಿ ಕಾರ್ಯವೈಖರಿ ಮತ್ತು ಪುತ್ರ ಪ್ರೇಮದ ಬಗ್ಗೆ ತೀವ್ರ ಅತೃಪ್ತಿ ಹೊಂದಿರುವ ಶಿಂಧೆ ಮತ್ತು ಶಾಸಕರು ಈಗ ಸೂರತ್‌ನಿಂದ ಬಿಜೆಪಿ ಆಡಳಿತ ಇರುವ ಅಸ್ಸಾಂ ಗುವಹಾಟಿಗೆ ಶಿಫ್ಟ್ ಆಗಿದ್ದಾರೆ. ಅರ್ಧಕ್ಕೂ ಹೆಚ್ಚಿನ ಶಾಸಕರು ಶಿಂಧೆಯ ಜೊತೆ ಇರುವ ಕಾರಣ ಮಹಾರಾಷ್ಟ್ರದಲ್ಲಿರುವ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಿದೆ.
ಸಂಖ್ಯಾ ಬಲ ಹೇಗಿದೆ?
288 ಬಲದ ವಿಧಾನಸಭೆಯಲ್ಲಿ ಒಬ್ಬ ಶಾಸಕ ನಿಧನ ಆಗಿರುವ ಕಾರಣ, ಸದಸ್ಯ ಬಲ 287ಕ್ಕೆ ಕುಸಿದಿದೆ. ಹೀಗಾಗಿ ಬಹುಮತಕ್ಕೆ 144 ಸದಸ್ಯರ ಮತ ಬೇಕು. ಇಲ್ಲಿಯರೆಗೆ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರದ ಸಂಖ್ಯಾಬಲ 152(ಶಿವಸೇನೆ 55+ಎನ್‍ಸಿಪಿ 53+ಕಾಂಗ್ರೆಸ್ 44) ಹಾಗೂ ವಿಪಕ್ಷ ಬಿಜೆಪಿ ಕೊಟ 135 ಸದಸ್ಯ ಬಲ ಹೊಂದಿವೆ. ಇದನ್ನೂ ಓದಿ: ಬಾಳಾ ಠಾಕ್ರೆಯ ಹಿಂದುತ್ವ ಪಾಲಿಸುತ್ತೇವೆ: 40 ಶಾಸಕರ ಜೊತೆ ಸೂರತ್‌ನಿಂದ ಗುವಾಹಟಿಗೆ ಹಾರಿದ ಶಿಂಧೆ
ಸಾಧ್ಯತೆ 1
ಶಿಂಧೆ ನೇತೃತ್ವದ 33 ಶಾಸಕರು ವಿರುದ್ಧ ಮತ ಚಲಾಯಿಸಿದರೆ ಎಂವಿಎ ಸರ್ಕಾರಕ್ಕೆ 119 ಮತ ಮಾತ್ರ ಬಿದ್ದಂತಾಗುತ್ತದೆ. 144ರ ಮ್ಯಾಜಿಕ್ ಸಂಖ್ಯೆ ದಾಟದೇ ಅಲ್ಪ ಮತಕ್ಕೆ ಕುಸಿದು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನ ಹೊಂದುತ್ತದೆ. ಆದರೆ ಶಿಂಧೆ ಈಗಾಗಲೇ ನಮ್ಮ ಜೊತೆ 40 ಶಾಸಕರಿದ್ದಾರೆ ಎಂದು ಹೇಳಿದ್ದಾರೆ.
ಸಾಧ್ಯತೆ 2
ಸರ್ಕಾರದ ವಿರುದ್ಧ ಮತ ಹಾಕಿದರೆ ಶಿಂಧೆ ಬಣದ 33 ಶಾಸಕರಿಗೆ ಅನರ್ಹತೆ ಭೀತಿ ಇರುತ್ತದೆ. ಈ ರೀತಿ ಆಗದೇ ಇರಲು ಅವರು ರಾಜೀನಾಮೆ ನೀಡಬಹುದು. ರಾಜೀನಾಮೆ ನೀಡಿದರೆ ಸದನದ ಬಲ 287ರಿಂದ 254ಕ್ಕೆ ಇಳಿಯುತ್ತದೆ. ಬಹುಮತಕ್ಕೆ 127 ಮತ ಬೇಕಾಗುತ್ತದೆ. ಹೀಗಾದಾಗ ಸರ್ಕಾರದ ಬಲ 119ಕ್ಕೆ ಕುಸಿಯುತ್ತದೆ. ಈ ಸನ್ನಿವೇಶ ಸೃಷ್ಟಿಯಾದಲ್ಲಿ 135 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಅಧಿಕಾರ ಸಿಗಲಿದೆ.
ಸಾಧ್ಯತೆ 3
ಶಿವಸೇನೆ ಶಾಸಕರು ರಾಜೀನಾಮೆ ನೀಡಿದರೆ ಮತ್ತೆ ಚುನಾವಣೆ ನಡೆಯಬೇಕಾಗುತ್ತದೆ. ಆದರೆ ಶಿಂಧೆ ಮತ್ತು ಬಣ ಪಕ್ಷಾಂತರ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ 55 ಶಿವಸೇನೆ ಸದಸ್ಯರ ಪೈಕಿ 37 ಶಾಸಕರ ಬೆಂಬಲ ಬೇಕಾಗುತ್ತದೆ. ಈ ಕಾರಣಕ್ಕೆ ಉಳಿದ ಶಿವಸೇನೆ ಶಾಸಕರ ಜೊತೆ ಮಾತುಕತೆ ನಡೆಯುತ್ತಿದೆ. 37 ಶಾಸಕರು ಪಕ್ಷ ತೊರೆದಲ್ಲಿ ಶಿವಸೇನೆ ಬಲ 18ಕ್ಕೆ ಕುಸಿಯಲಿದೆ. 37 ಶಾಸಕರು ಬೆಂಬಲ ನೀಡಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ರಾಜೀನಾಮೆ ನೀಡುವ ಅಗತ್ಯ ಬರುವುದಿಲ್ಲ. ಈ ಶಾಸಕರು ಸುಲಭವಾಗಿ ಬಿಜೆಪಿ ಸೇರಬಹುದು.
ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ ಪಕ್ಷದ 3ನೇ ಎರಡು ಭಾಗದಷ್ಟು ಶಾಸಕರು ಪಕ್ಷ ತೊರೆದಲ್ಲಿ ಯಾವುದೇ ಕ್ರಮ ಆಗುವುದಿಲ್ಲ. ಪಕ್ಷಾಂತರ ನಿಷೇಧ ಕಾಯ್ಡೆಯಿಂದ ಸುಲಭವಾಗಿ ಪಾರಾಗಬಹುದು.
– ಮದುವೆ ಆಗ್ತಾರಾ, ಎಂಗೇಜ್ಮೆಂಟ್ ಮುರಿದು ಬಿತ್ತಾ ಎಂಬ ವಿಚಾರ ಹೇಳಲೇ ಇಲ್ಲ! – 2 ವರ್ಷದಿಂದ ಎಲ್ಲರಿಗಿಂತ ಚೆನ್ನಾಗಿ ನಾನು ರಶ್ಮಿಕಾಳನ್ನು ಅರಿತಿದ್ದೇನೆ – ಮಾಧ್ಯಮಗಳಲ್ಲಿ ಬರುತ್ತಿರೋ ಸುದ್ದಿಗಳೆಲ್ಲಾ ನಿಜವಲ್ಲ ಅಂದ್ರು ರಕ್ಷಿತ್ ಶೆಟ್ಟಿ
ಬೆಂಗಳೂರು: ರಶ್ಮಿಕಾ ಮಂದಣ್ಣ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಸುದ್ದಿಗೆ ರಕ್ಷಿತ್ ಶೆಟ್ಟಿ ಕೊನೆಗೂ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ಹೊರ ಹೋಗಿದ್ದ ರಕ್ಷಿತ್ ಶೆಟ್ಟಿ ಮಂಗಳವಾರ ಸಂಜೆ ಮತ್ತೆ ವಾಪಸ್ ಬಂದು ಅಭಿಮಾನಿಗಳಿಗೆ ದೀರ್ಘ ಪತ್ರವನ್ನು ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಗೌರವಾನ್ವಿತ ಜನರಿಗೆ ಎಂದು ಆರಂಭಿಸಿರುವ ರಕ್ಷಿತ್ ಶೆಟ್ಟಿ, ಈ ಸ್ಪಷ್ಟನೆಯಲ್ಲಿ ರಶ್ಮಿಕಾ ಪರವಾಗಿ ಬರೆದುಕೊಂಡಿದ್ದು, ಈ ವಿಚಾರದಲ್ಲಿ ನೀವು ಯಾಕೆ ಆಕೆಯನ್ನು ದೂಷಣೆ ಮಾಡುತ್ತೀರಿ. ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳೆಲ್ಲವೂ ಸತ್ಯವಲ್ಲ ಎಂದು ಹೇಳಿಕೊಂಡಿದ್ದಾರೆ. ದೀರ್ಘ ಪತ್ರವನ್ನು ಬರೆದಿದ್ದರೂ ಎಲ್ಲೂ ನಿಶ್ಚಿತಾರ್ಥ ಬ್ರೇಕಪ್ ಆಗಿದ್ಯಾ, ಮದುವೆಯಾಗ್ತಾರಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಜನ ಈ ಪತ್ರವನ್ನು ಓದಿ ಇನ್ನೂ ಸರಿಯಾದ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಕಮೆಂಟ್ ಹಾಕೋಕೆ ಶುರು ಮಾಡಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ರಶ್ಮಿಕಾ ಮಂದಣ್ಣ ಭೇಟಿ
ಫೇಸ್‍ಬುಕ್‍ನಲ್ಲಿ ಶೆಟ್ರು ಬರೆದಿದ್ದೇನು?
ಕೆಲಸದ ವಿಚಾರಗಳಿಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ನಾನು ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಎಂದು ಈ ಹಿಂದೆ ಪ್ರಕಟಿಸಿದ್ದೆ. ಆದರೆ ಕೆಲ ದಿನಗಳಿಂದ ಓರ್ವ ವ್ಯಕ್ತಿಯ ಬಗ್ಗೆ ಹರಿದಾಡುತ್ತಿರುವ ವಿಚಾರಗಳಿಗೆ ಸ್ಪಷ್ಟನೆ ನೀಡಲು ಈಗ ನಾನು ಮತ್ತೆ ಬಂದಿದ್ದೇನೆ. ಇದನ್ನೂ ಓದಿ: ಭಾವಿ ಪತಿಯ ಮಾತನ್ನು ಅಚ್ಚುಕಟ್ಟಾಗಿ ಪಾಲಿಸಿದ ನಟಿ ರಶ್ಮಿಕಾ ಮಂದಣ್ಣ: ವಿಡಿಯೋ
ನೀವು ರಶ್ಮಿಕಾ ಬಗ್ಗೆ ಪೂರ್ವಾಗ್ರಹ ಅಭಿಪ್ರಾಯವನ್ನು ಹೊಂದಿದ್ದೀರಿ. ನಾನು ಯಾವುದೇ ಕಾರಣಕ್ಕೂ ನಿಮ್ಮನ್ನು ದೂಷಿಸುವುದಿಲ್ಲ ಯಾಕೆಂದರೆ ಕೆಲ ವಿಚಾರಗಳಿಂದಾಗಿ ನೀವು ಈ ನಿರ್ಧಾರಕ್ಕೆ ಬಂದಿದ್ದೀರಿ. ನಾನು ರಶ್ಮಿಕಾಳನ್ನು ಎರಡು ವರ್ಷದಿಂದ ನೋಡುತ್ತಿದ್ದು, ಆಕೆ ಏನು ಎನ್ನುವುದು ನಿಮಗೆಲ್ಲರಿಗಿಂತಲೂ ಚೆನ್ನಾಗಿ ನನಗೆ ತಿಳಿದಿದೆ. ದಯವಿಟ್ಟು ಆಕೆಯ ಮೇಲೆ ದೂಷಣೆ ಮಾಡುವುದನ್ನು ನಿಲ್ಲಿಸಿ. ಆಕೆಯನ್ನು ಶಾಂತಿಯಿಂದ ಇರಲು ಬಿಡಿ. ದಯವಿಟ್ಟು ಯಾವುದೇ ಮಾಧ್ಯಮಗಳ ಸುದ್ದಿಯನ್ನು ನಂಬಲು ಹೋಗಬೇಡಿ. ಯಾರೊಬ್ಬರು ನನ್ನಿಂದ ಅಥವಾ ರಶ್ಮಿಕಾಳಿಂದ ಈ ವಿಚಾರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿಲ್ಲ. ಹಲವು ಮಂದಿ ಅವರ ಊಹೆಗೆ ತಕ್ಕಂತೆ ಅವರಿಗೆ ಬೇಕಾದಂತೆ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಊಹೆಗಳು ಯಾವತ್ತೂ ವಾಸ್ತವವಲ್ಲ. ಇದನ್ನೂ ಓದಿ: ರಕ್ಷಿತ್ ಶೆಟ್ಟಿ, ರಶ್ಮಿಕಾ ನಡುವೆ ಲವ್ ಆಗಿದ್ದು ಹೇಗೆ?-ಇಲ್ಲಿದೆ ಪೂರ್ಣ ಲವ್ ಸ್ಟೋರಿ
ನನ್ನ ಈ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶದಿಂದ ಈ ಪೇಜ್ ಇನ್ನೂ ಕೆಲವು ದಿನಗಳ ಕಾಲ ಇರುತ್ತದೆ. ಯಾವಾಗ ನನಗೆ ಸಾಮಾಜಿಕ ಜಾಲತಾಣದ ಅಗತ್ಯ ಇದೆಯೋ ಆ ಸಂದರ್ಭದಲ್ಲಿ ನಾನು ಬರುತ್ತೇನೆ. ಕೆಲಸದಲ್ಲಿ ಜಾಸ್ತಿ ಗಮನಹರಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ. ಇದನ್ನೂ ಓದಿ: ತೆಲುಗು ಕಾರ್ಯಕ್ರಮದಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿದ್ರು ರಶ್ಮಿಕಾ ಮಂದಣ್ಣ
ಬ್ರೇಕಪ್ ಸುದ್ದಿ ಹೊರಬಿದ್ದಿದ್ದು ಯಾಕೆ?
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಒಂದಾಗಿ ನಟಿಸಿ ಸಿನಿ ಅಭಿಮಾನಿಗಳ ಮನಗೆದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರದ ಬಗ್ಗೆ ಇಬ್ಬರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಬ್ರೇಕಪ್ ಆಗಿದ್ದಾರೆ ಎನ್ನುವ ಸುದ್ದಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ರಶ್ಮಿಕಾಗೆ ವಿಶೇಷ ಗಿಫ್ಟ್ ಕೊಟ್ಟ ರಕ್ಷಿತ್ ಶೆಟ್ಟಿ
ಈ ನಡುವೆ ತೆಲುಗಿನ ಗೀತ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರ ಕೆಮೆಸ್ಟ್ರಿ ನೋಡಿ, ವಿಜಯ್ ದೇವರಕೊಂಡ ಅಭಿಮಾನಿಗಳು, ವಿಜಯ್ ಅವರನ್ನೇ ಮದುವೆಯಾಗಿ. ಸ್ಕ್ರೀನ್ ಅಲ್ಲದೇ ನಿಜ ಜೀವನದಲ್ಲೂ ನೀವಿಬ್ಬರು ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಕಮೆಂಟ್ ಮಾಡಿದ್ದರು. ಈ ನಡುವೆಯೇ ಅದು ಹೇಗೋ ಗೀತ ಗೋವಿಂದಂ ಚಿತ್ರದ ಲಿಪ್ ಲಾಕ್ ಸೀನ್ ವೈರಲ್ ಆಗಿತ್ತು. ಈ ದೃಶ್ಯಕ್ಕೆ ಕನ್ನಡದ ಅಭಿಮಾನಿಗಳು ರಶ್ಮಿಕಾ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು. ಖ್ಯಾತ ನಟನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಈ ರೀತಿಯ ತುಟಿಗೆ ತುಟಿ ಬೆಸೆಯೋ ಈ ಸೀನ್ ನಲ್ಲಿ ಅಭಿನಯಿಸಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡತೊಡಗಿದರು. ಪ್ರಶ್ನೆ ಮಾಡುವುದರ ಜೊತೆ ರಕ್ಷಿತ್ ಶೆಟ್ಟಿ ಅವರಿಗೆ ಟ್ಯಾಗ್ ಮಾಡಿ ನೀವು ಸ್ವಲ್ಪ ಹೇಳಬಾರದೇ ಎಂದು ಪ್ರಶ್ನಿಸತೊಡಗಿದರು. ಇದನ್ನೂ ಓದಿ: ರಶ್ಮಿಕಾ, ವಿಜಯ್ ಮದ್ವೆಯಾದ್ರೆ Made For Each Other- ದೇವರಕೊಂಡ ಅಭಿಮಾನಿ
ಅಭಿಮಾನಿಗಳು ತಮ್ಮ ಸಂಬಂಧದ ಬಗ್ಗೆ ವಿಪರೀತವಾಗಿ ಕಮೆಂಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಿಂದ ದೂರ ಸರಿದರು ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ರಶ್ಮಿಕಾ ಜೊತೆ ಶೀಘ್ರವೇ ಮದುವೆಯಾಗೋಣ ಎಂದು ಹೇಳಿದ್ದರಂತೆ. ಈ ಪ್ರಸ್ತಾಪವನ್ನು ರಶ್ಮಿಕಾ ಒಪ್ಪದೇ ಇದ್ದ ಕಾರಣ ಇಬ್ಬರ ನಡುವೆ ಸಂಬಂಧ ಬ್ರೇಕಪ್ ಆಗಿದೆ. ಎರಡು ಕುಟುಂಬಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿಗಳು ಈಗ ಹರಿದಾಡುತ್ತಿದೆ. ಗೀತ ಗೋವಿಂದಂ ಚಿತ್ರ ರಿಲೀಸ್ ಆದ ನಂತರ ರಶ್ಮಿಕಾ ಮಂದಣ್ಣಗೆ ಟಾಲಿವುಡ್ ನಿಂದ ಹೆಚ್ಚು ಆಫರ್ ಗಳು ಬರುತ್ತಿದೆ. ಸದ್ಯಕ್ಕೆ ಆಕೆಗೆ ಮದುವೆಗಿಂತ ವೃತ್ತಿ ಜೀವನವೇ ಪ್ರಮುಖವಾದುದು. ಈ ಹಿನ್ನೆಲೆಯಲ್ಲಿ ಆಕೆ ಸಿನೆಮಾ ಇಂಡಸ್ಟ್ರಿಯಲ್ಲಿ ಇನ್ನೂ ಕೆಲವು ಸಿನೆಮಾಗಳಲ್ಲಿ ನಟಿಸಲು ಮನಸು ಮಾಡಿದ್ದಾರೆ ಎಂಬ ಸುದ್ದಿಯೂ ಇಂಗ್ಲಿಷ್ ವೆಬ್‍ಸೈಟ್‍ಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಗೀತಾ ಗೋವಿಂದಂ ಚಿತ್ರದಲ್ಲಿ ಲಿಪ್‍ಲಾಕ್ ಸೀನ್ ಕಟ್- ಸೀಕ್ರೆಟ್ ರಿವೀಲ್ ಮಾಡಿದ್ರು ರಶ್ಮಿಕಾ