Tag: Spiritual Guru

  • ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

    ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

    ತಿರುವನಂತನಪುರಂ: ಆ ಧರ್ಮ ಗುರು (Spiritual Guru) ತನ್ನ ಹೆಂಡತಿಯನ್ನು ಹೇಗೆ ಕೊಂದ? ಎಂದು ಗೂಗಲ್‍ನಲ್ಲಿ (Google) ಸರ್ಚ್ ಮಾಡಿ ಸಂಚು ರೂಪಿಸಿ ಪ್ರೇಯಸಿಯನ್ನು ಕೊಲೆಗೈದ‌ (Murder) ದುಷ್ಕರ್ಮಿಗೆ ಜೀವಾವಧಿ ಶಿಕ್ಷೆ ಹಾಗೂ 2.5 ಲಕ್ಷ ರೂ. ದಂಡ ವಿಧಿಸಿ ಕೊಲ್ಲಂನ (Kollam) ಹೆಚ್ಚುವರಿ ಸೆಷನ್ಸ್ ಕೋರ್ಟ್ (Sessions Court) ತೀರ್ಪು ನೀಡಿದೆ.

    ಅಪರಾಧಿ ಪ್ರಶಾಂತ್ ನಂಬಿಯಾರ್, 2020ರ ಮಾ. 20ರಂದು ಇಂಟರ್‌ನೆಟ್ ಕೊಲೆಯ ಪ್ರಕರಣವೊಂದನ್ನು ಸರ್ಚ್ ಮಾಡಿ, ಅದರಂತೆ ಪ್ರೇಯಸಿ ಸುಚಿತ್ರಾ ಪಿಳ್ಳೈಯನ್ನು (42) ಹತ್ಯೆ ಮಾಡಿದ್ದ. ಅಲ್ಲದೆ ಕೊಲೆಗೈದ ನಂತರ ಚಲನಚಿತ್ರವೊಂದನ್ನು ನೋಡಿ, ಅದರಲ್ಲಿ ದೇಹವನ್ನು ಕತ್ತರಿಸಿದ್ದ ರೀತಿಯಲ್ಲೇ ತುಂಡು ತುಂಡಾಗಿ ಕತ್ತರಿಸಿದ್ದ. ಬಳಿಕ ಮನೆಯ ಹಿಂದಿನ ಹೊಂಡದಲ್ಲಿ ಎಸೆದಿದ್ದ. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆತನ ಗೂಗಲ್ ಸರ್ಚ್ ಹಿಸ್ಟರಿಯಿಂದ ಕೊಲೆ ರಹಸ್ಯ ಬಯಲಿಗೆಳೆದಿದ್ದರು. ಇದನ್ನೂ ಓದಿ:ಹಿಂಡನ್‍ಬರ್ಗ್ ಪ್ರಕರಣ – ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ

    ಖಾಸಗಿ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಪರಾಧಿ, ತನ್ನ ಹೆಂಡತಿಯ ಸಂಬಂಧಿ ಸುಚಿತ್ರಾಳನ್ನು ಕುಟುಂಬದ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಕೊಂಡಿದ್ದ. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು.

    ಎರಡು ಬಾರಿ ವಿಚ್ಛೇದನ ಪಡೆದಿದ್ದ ಸುಚಿತ್ರಾ, ಅಪರಾಧಿಯನ್ನು ಮದುವೆಯಾಗಲು ತಯಾರಿ ನಡೆಸಿದ್ದಳು. ಆತನಿಂದ ಮಗುವನ್ನು ಹೊಂದಿದ್ದಳು. ಆದರೆ ಈಗಾಗಲೇ ಮದುವೆಯಾಗಿ ಪತ್ನಿಯೊಂದಿಗೆ ವಾಸವಾಗಿದ್ದ ಪ್ರಶಾಂತ್ ಮದುವೆಗೆ ನಿರಾಕರಿಸಿದ್ದ. ಆದರೆ ಮದುವೆಯಾಗುವಂತೆ ಪಟ್ಟು ಹಿಡಿದಿದ್ದ ಆಕೆಯನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು

  • ಶೂಟ್ ಮಾಡ್ಕೋಂಡು ಆತ್ಮಹತ್ಯೆಗೆ ಶರಣಾದ ಆಧ್ಯಾತ್ಮಿಕ ಗುರು!

    ಶೂಟ್ ಮಾಡ್ಕೋಂಡು ಆತ್ಮಹತ್ಯೆಗೆ ಶರಣಾದ ಆಧ್ಯಾತ್ಮಿಕ ಗುರು!

    ಭೋಪಾಲ್: ವಿವಾದಾತ್ಮಕ ದೇವಮಾನವ ಹಾಗೂ ಆಧ್ಯಾತ್ಮಿಕ ಗುರು ಬಯ್ಯೂಜಿ ಮಹಾರಾಜ್‍ರವರು ಇಂದು ಮಧ್ಯಾಹ್ನ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

    ಇಂದು ಮಧ್ಯಾಹ್ನ ಬಯ್ಯೂಜಿ ಮಹಾರಾಜ್ ತನ್ನ ನಿವಾಸದಲ್ಲಿ ತಲೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಇಂದೋರ್ ನ ಸ್ಥಳೀಯ ಬಾಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಗಾಯಗೊಂಡ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದು ಅನೇಕ ಗಣ್ಯರಿಗೆ ಆಧ್ಯಾತ್ಮಿಕ ಗುರುಗಳಾಗಿದ್ದರು. ಘಟನೆ ತಿಳಿಯುತ್ತಿದ್ದಂತೆ ಅಪಾರ ಭಕ್ತರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.

    ಇಂದೋರ್ ನಲ್ಲಿ ಆಶ್ರಮ ನಡೆಸುತ್ತಿದ್ದು, ಅನೇಕ ಗಣ್ಯರು ಇವರ ಅನುಯಾಯಿಗಳಾಗಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವಿಸ್ ಹಾಗೂ ಬಾಲಿವುಡ್‍ನ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೂಡ ಇವರ ಅನುಯಾಯಿಗಳಾಗಿದ್ದಾರೆ.

    ಕಳೆದ ವರ್ಷ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರೂಜಿಗೆ ಸಚಿವ ಸ್ಥಾನದ ಬೇಡಿಕೆಯನ್ನು ನೀಡಿದ್ದರು. ಆದರೆ ಬಯ್ಯೂಜಿಯವರು ಅದನ್ನು ತಿರಸ್ಕರಿಸಿದ್ದರು.

    ಬಯ್ಯೂಜಿ ಮಹಾರಾಜರ ಮೂಲ ಹೆಸರು ಉದಯ್ ಸಿಂಗ್ ದೇಶ್‍ಮುಖ್ ಆಗಿದೆ. ಕೌಟುಂಬಿಕ ಕಲಹದಿಂದಾಗಿ ಇವರು ಹೆಚ್ಚಿನ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಇಂದೋರ್ ನ ಪೊಲೀಸ್ ಆಯುಕ್ತರಾದ ಹೆಚ್ ಸಿ ಮಿಶ್ರ ಶಂಕೆ ವ್ಯಕ್ತಪಡಿಸಿದ್ದಾರೆ.

    ಆತ್ಮಹತ್ಯೆಗೂ ಮುಂಚೆ 1.57ರಲ್ಲಿ ಟ್ಟಿಟ್ಟರ್‍ನಲ್ಲಿ ತಮ್ಮ ಅಭಿಮಾನಿಗಳಿಗೆ ಶಿವರಾತ್ರಿಯ ಶುಭಾಶಯವನ್ನು ಕೋರಿದ್ದಾರೆ. ಅಣ್ಣಾ ಅಜಾರೆಯವರು ನಡೆಸಿದ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯಲ್ಲಿ ಬಯ್ಯೂಜಿಯವರು ಸಕ್ರೀಯವಾಗಿ ಪಾಲ್ಗೊಂಡಿದ್ದರು.