Tag: Spirit

  • ಪ್ರಭಾಸ್‌ಗೆ ವಿಲನ್ ಆದ ತ್ರಿಷಾ

    ಪ್ರಭಾಸ್‌ಗೆ ವಿಲನ್ ಆದ ತ್ರಿಷಾ

    ‘ಕಲ್ಕಿ’ (Kalki 2898 AD) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಪ್ರಭಾಸ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಪ್ರಭಾಸ್ (Prabhas) ಮುಂಬರುವ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪ್ರಭಾಸ್‌ಗೆ ವಿಲನ್ ಆಗಿ ನಟಿ ತ್ರಿಷಾ ಕಾಣಿಸಿಕೊಳ್ಳಲಿದ್ದಾರೆ.

    ತ್ರಿಷಾಗೆ (Trisha) ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಸಿನಿಮಾದಿಂದ ಸಿನಿಮಾಗೆ ಬಗೆ ಬಗೆಯ ಪಾತ್ರಗಳನ್ನು ನಟಿ ಆಯ್ಕೆ ಮಾಡಿಕೊಳ್ತಿದ್ದಾರೆ. ‘ಸ್ಪಿರಿಟ್’ (Spirit) ಸಿನಿಮಾದಲ್ಲಿ ಪ್ರಭಾಸ್ ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಹೀರೋ ಮತ್ತು ವಿಲನ್ ಎರಡು ಪಾತ್ರಕ್ಕೆ ಪ್ರಭಾಸ್ ಜೀವ ತುಂಬಲಿದ್ದಾರೆ. ಇದನ್ನೂ ಓದಿ:‘ಸ್ತ್ರೀ 2’ ಚಿತ್ರದಿಂದ ಗೆಲುವಿನ ಟ್ರ್ಯಾಕ್‌ಗೆ ಮರಳಿದ ಶ್ರದ್ಧಾ ಕಪೂರ್

    ವಿಲನ್ ಪ್ರಭಾಸ್ ಪಾತ್ರಕ್ಕೆ ತ್ರಿಷಾ ಜೋಡಿಯಾಗ್ತಿದ್ದಾರಂತೆ. ಅವರು ಕೂಡ ಲೇಡಿ ವಿಲನ್ ಆಗಿ ಮಿಂಚಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಈ ವಿಚಾರ ನಿಜನಾ? ಎಂಬುದನ್ನು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಇದನ್ನೂ ಓದಿ:ಜೀವಂತ ಇದ್ದಾಗಲೇ ಶ್ರೇಯಸ್ ತಲ್ಪಾಡೆ ಸಾವಿನ ಸುದ್ದಿ ವೈರಲ್- ಮೌನ ಮುರಿದ ನಟ

    ಇನ್ನೂ ತ್ರಿಷಾರನ್ನು ಈಗಾಗಲೇ ‘ಅನಿಮಲ್’ (Animal) ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಭೇಟಿಯಾಗಿ ಸಿನಿಮಾದ ಕಥೆ ಹೇಳಿದ್ದಾರೆ. ಸಿನಿಮಾ ಕುರಿತು ಮಾತುಕತೆಯಾಗಿದ್ದು, ಸದ್ಯದಲ್ಲೇ ಚಿತ್ರತಂಡ ಈ ಕುರಿತು ಘೋಷಣೆ ಮಾಡಬೇಕಿದೆ. ಸದ್ಯ ‘ಸ್ಪಿರಿಟ್’ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.

    ಪ್ರಭಾಸ್ ಮತ್ತು ತ್ರಿಷಾ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. `ದಿ ರಾಜಾ ಸಾಬ್’ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ ಜೊತೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಪ್ರಭಾಸ್. ಸದ್ಯ ಈ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಹಾವೇರಿಯಲ್ಲಿ ಸ್ಪಿರಿಟ್ ಲಾರಿಯ ಟೈಯರ್ ಬ್ಲಾಸ್ಟ್ – ತಪ್ಪಿದ ದೊಡ್ಡ ದುರಂತ!

    ಹಾವೇರಿಯಲ್ಲಿ ಸ್ಪಿರಿಟ್ ಲಾರಿಯ ಟೈಯರ್ ಬ್ಲಾಸ್ಟ್ – ತಪ್ಪಿದ ದೊಡ್ಡ ದುರಂತ!

    ಹಾವೇರಿ: ಸ್ಪಿರಿಟ್ ತುಂಬಿದ ಲಾರಿಯ ಟೈಯರ್ ಬ್ಲಾಸ್ಟ್ (Lorry Spirit Tire Blast), ಲಾರಿಗೆ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರ ಕಾರ್ಯಾಚರಣೆಯಿಂದ ದೊಡ್ಡ ದುರಂತವೊಂದು ತಪ್ಪಿರುವ ಘಟನೆ ಹಾವೇರಿಯ ತೋಟದಯಲ್ಲಾಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-48 (National Highway 48) ರಲ್ಲಿ ನಡೆದಿದೆ.

    ಸ್ಪಿರಿಟ್ ತುಂಬಿದ ಲಾರಿ ಬೆಳಗಾವಿಯಿಂದ ಬೆಂಗಳೂರು ಕಡೆ ಹೊರಟ್ಟಿತ್ತು. ಲಾರಿಯಲ್ಲಿ ಸುಮಾರು 24 ಲಕ್ಷ ರೂ. ಮೌಲ್ಯದ ವೈಟ್ ಸ್ಪಿರಿಟ್ ತುಂಬಿತ್ತು. ಇದನ್ನೂ ಓದಿ: ದರ್ಶನ್‌ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!

    ಲಾರಿಯ ಟೈಯರ್ ಹೀಟ್‌ ಆಗಿದ್ದರಿಂದ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಪ್ರಜ್ಞೆಯಿಂದ ಮುಂದಾಗುವ ದುರಂತ ತಪ್ಪಿಸಿದ್ದಾರೆ.

    ಹೆದ್ದಾರಿಯಲ್ಲಿ ಸ್ವಲ್ಪ ದೂರದಲ್ಲೇ ಎಲ್ಲಾ ವಾಹನಗಳನ್ನು ನಿಲ್ಲಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

  • ‘ಸಲಾರ್ 2’ ಚಿತ್ರಕ್ಕೂ ಮುನ್ನ ಖಾಕಿ ಧರಿಸಲಿದ್ದಾರೆ ಪ್ರಭಾಸ್

    ‘ಸಲಾರ್ 2’ ಚಿತ್ರಕ್ಕೂ ಮುನ್ನ ಖಾಕಿ ಧರಿಸಲಿದ್ದಾರೆ ಪ್ರಭಾಸ್

    ಗತ್ತಿನಾದ್ಯಂತ ಸಲಾರ್ (Salaar) ಸಿನಿಮಾ ತನ್ನ ಯಶಸ್ಸಿನ ಯಶೋಗಾಥೆಯನ್ನು ಮುಂದುವರೆಸಿದೆ. ಆರು ದಿನಕ್ಕೆ ಅಂದಾಜು ಐನೂರು ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿ ಪಂಡಿತರ ಲೆಕ್ಕಾಚಾರ. ಒಂದು ಕಡೆದ ದಕ್ಷಿಣದ ಈ ಸಿನಿಮಾ ಜಗತ್ತನ್ನೇ ಗೆಲ್ಲಲು ಹೊರಟಿದ್ದರೆ, ಮತ್ತೊಂದು ಹಿಂದಿ ಸಿನಿಮಾ ಎನಿಮಲ್ ಕೂಡ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದೆ. ಹೀಗಾಗಿ ಪ್ರಭಾಸ್ (Prabhas) ಮೇಲೆ ಒತ್ತಡ ಹೆಚ್ಚಾಗಿದೆ.

    ಸಲಾರ್ ಭಾರೀ ಗೆಲುವಿನ ನಂತರ ಸಲಾರ್ 2 ಬಗ್ಗೆ ಈಗಾಗಲೇ ಅಭಿಮಾನಿಗಳು ಅಪ್ ಡೇಟ್ ಕೇಳುತ್ತಿದ್ದಾರೆ. ಆದರೆ, ಸಲಾರ್ ಮಧ್ಯಯೂ ಪ್ರಭಾಸ್ ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy) ಅವರಿಗೆ ಡೇಟ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಸ್ಪಿರಿಟ್ (Spirit) ಎಂದು ಹೆಸರಿಡಲಾಗಿದೆ. ಒಂದು ಕಡೆ ಯಶಸ್ಸಿನ ಪ್ರಶಾಂತ್ ನೀಲ್ (Prashant Neel). ಮತ್ತೊಂದು ಕಡೆ ಎನಿಮಲ್ ಗೆಲ್ಲಿಸಿದ ಸಂದೀಪ್ ರೆಡ್ಡಿ. ಪ್ರಭಾಸ್ ಡೇಟ್ ಕೊಡೋದು ಯಾರಿಗೆ ಅನ್ನುವ ಚರ್ಚೆ ಕೂಡ ನಡೆದಿದೆ.

    ಈ ನಡುವೆ ಸಂದೀಪ್ ರೆಡ್ಡಿ ತಮ್ಮ ಸ್ಪಿರಿಟ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೊಸ ಅಪ್ ಡೇಟ್ ನೀಡಿದ್ದಾರೆ. ತಮ್ಮ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಪೊಲೀಸ್ ವೇಷದಲ್ಲಿ ತಮ್ಮ ನೆಚ್ಚಿನ ನಟನ ಪಾತ್ರವನ್ನು ನೋಡಲು ಪ್ರಭಾಸ್ ಅಭಿಮಾನಿ ತುದಿಗಾಲಲ್ಲಿ ನಿಂತಿದ್ದಾರೆ.

     

    ಈ ವರ್ಷದ ಗೆಲುವಿನ ಸಿನಿಮಾಗಳಲ್ಲಿ ಅನಿಮಲ್ ಮತ್ತು ಸಲಾರ್ ಸಿನಿಮಾ ಸೇರಿವೆ. ಎರಡೂ ಸಿನಿಮಾಗಳು ಭರ್ಜರಿ ಗೆಲುವನ್ನೇ ಸಾಧಿಸಿವೆ. ಹೀಗಾಗಿ ಪ್ರಭಾಸ್ ಯಾರಿಗೆ ತಮ್ಮ ಮುಂದಿನ ಡೇಟ್ಸ್ ಕೊಡ್ತಾರೆ ಎನ್ನುವ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಈ ಎಲ್ಲದಕ್ಕೂ ಉತ್ತರ ಸಿಗಬಹುದು.

  • ಹುಟ್ಟುಹಬ್ಬಕ್ಕೆ ಮೊದಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಪ್ರಭಾಸ್

    ಹುಟ್ಟುಹಬ್ಬಕ್ಕೆ ಮೊದಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಪ್ರಭಾಸ್

    ಚೆನ್ನೈ: ಟಾಲಿವುಡ್ ನಟ ಪ್ರಭಾಸ್ ತಮ್ಮ 25 ನೇ ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

     

    View this post on Instagram

     

    A post shared by Prabhas (@actorprabhas)

    ಪ್ರಭಾಸ್ ಅ.23 ರಂದು 42 ನೇ ವಸಂತಕ್ಕೆ ಕಾಲಿಡುತ್ತಿದ್ದು, ಇನ್ನೂ ಹುಟ್ಟುಹಬ್ಬ ಹತ್ತಿರ ಇರುವಾಗಲೇ ಅಭಿಮಾನಿಗಳಿಗೆ ತಮ್ಮ 25ನೇ ಸಿನಿಮಾದ ನಿರ್ದೇಶಕರ ಬಗ್ಗೆ ಹೇಳಿದ್ದಾರೆ. ಭೂಷಣ್ ಕುಮಾರ್ ಅವರ ಭದ್ರಕಾಳಿ ಪಿಕ್ಚರ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ‘ಸ್ಪಿರಿಟ್’ ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ಸಂದೀಪ್ ನಿರ್ದೇಶಿಸುತ್ತಿದ್ದಾರೆ. ಇದನ್ನೂ ಓದಿ:  ಕೊನೆ ಕ್ಷಣದಲ್ಲಿ ಅಜಯ್ ದೇವ್‍ಗನ್ ಜೊತೆ ಶೂಟ್ ಬೇಡವೆಂದ ನಟ ಶಾರೂಖ್

    ಈ ಕುರಿತು ಪ್ರಭಾಸ್ ಇನ್‍ಸ್ಟಾಗ್ರಾಮ್ ನಲ್ಲಿ, ‘ಸ್ಪಿರಿಟ್’ ನೊಂದಿಗೆ ನನ್ನ ಪ್ರಯಾಣವನ್ನು ಆರಂಭಿಸಿದ್ದೇನೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮತ್ತು ಭೂಷಣ್ ಕುಮಾರ್ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ #Prabhas25SandeepReddyVanga ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ತಮ್ಮ ಹೊಸ ಚಿತ್ರ ಕುರಿತು ಮಾತನಾಡಿದ ಪ್ರಭಾಸ್, ಸ್ಪಿರಿಟ್ ಕಥೆ ‘ಅದ್ಭುತ’ವಾಗಿದೆ. ಚಿತ್ರದ ಶೂಟಿಂಗ್ ಆರಂಭಿಸಲು ಕಾಯಲು ಸಾಧ್ಯವಿಲ್ಲ. ಭೂಷಣ್ ಕುಮಾರ್ ಜೊತೆ ಕೆಲಸ ಮಾಡುವುದು ಯಾವಾಗಲೂ ಸುಲಭ ಮತ್ತು ಸಂತೋಷ ನೀಡುತ್ತದೆ. ಅವರು ನಮ್ಮಲ್ಲಿರುವ ಅತ್ಯುತ್ತಮ ನಿರ್ಮಾಪಕರಲ್ಲಿ ಒಬ್ಬರು, ನಾನು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಸಂದೀಪ್ ಅವರ ಜೊತೆ ಕೆಲಸ ಮಾಡಬೇಕೆಂದು ಎಲ್ಲರಿಗೂ ಇಷ್ಟವಿರುತ್ತೆ. ಈಗ ಸ್ಪಿರಿಟ್‍ನೊಂದಿಗೆ, ಅಂತಹ ಪ್ರತಿಭೆ ಜೊತೆಗೆ ಅಭಿನಯಿಸುವ ಅವಕಾಶವನ್ನು ಪಡೆದುಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:  ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

    ಪ್ರಭಾಸ್ ಬಹುನಿರೀಕ್ಷಿತ ರಾಧೆ ಶ್ಯಾಮ್, ಆದಿಪುರುಷ ಮತ್ತು ಸಲಾರ್ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸಹ ಸೇರಿಕೊಂಡಿದೆ. ‘ಸ್ಪಿರಿಟ್’ ವಿಶ್ವಾದ್ಯಂತ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಜಪಾನೀಸ್, ಚೈನೀಸ್ ಮತ್ತು ಕೊರಿಯನ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ಇತರ ಪಾತ್ರಗಳ ಬಗ್ಗೆ ಮತ್ತು ನಟರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ.