Tag: Spirent

  • 5ಜಿ ನೆಟ್‌ವರ್ಕ್ ಪರೀಕ್ಷೆಗೆ ʼಸ್ಪೈರೆಂಟ್ʼ ಆಯ್ಕೆ ಮಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್

    5ಜಿ ನೆಟ್‌ವರ್ಕ್ ಪರೀಕ್ಷೆಗೆ ʼಸ್ಪೈರೆಂಟ್ʼ ಆಯ್ಕೆ ಮಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್

    ನವದೆಹಲಿ: ನೈಜ ಜಗತ್ತಿನ ಕೆಲಸದ ಹೊರೆ ಹಾಗೂ ಮಾಹಿತಿ ರವಾನೆಯ ಪರಿಸ್ಥಿತಿಗಳಿಗಾಗಿ ಕ್ಲೌಡ್-ಆಧಾರಿತ 5ಜಿ ಸ್ಟಾಂಡ್ ಅಲೋನ್ ಕೋರ್ ನೆಟ್‌ವರ್ಕ್  ಪರೀಕ್ಷಿಸಲು ಜಿಯೋ ಪ್ಲಾಟ್‌ಫಾರ್ಮ್ಸ್‌ನೊಂದಿಗೆ ಕೈಜೋಡಿಸಿರುವುದಾಗಿ ಐಟಿ ಸಂಸ್ಥೆ ಸ್ಪೈರೆಂಟ್ ಕಮ್ಯುನಿಕೇಷನ್ಸ್  ತಿಳಿಸಿದೆ.

    ಕೋರ್ ನೆಟ್‌ವರ್ಕ್ ಸಾಮರ್ಥ್ಯ ಪರೀಕ್ಷೆಗಳನ್ನು ನಿರ್ವಹಿಸಲು, ಡಿವೈಸ್ ಡೇಟಾ ಥ್ರೂಪುಟ್ ಅಳೆಯಲು ಹಾಗೂ ವಿವಿಧ ರೀತಿಯ ಸಂಕೀರ್ಣ ಅಂತಿಮ-ಬಳಕೆದಾರ ಕರೆ ಮಾದರಿಗಳು ಮತ್ತು ಮೊಬಿಲಿಟಿ ಸನ್ನಿವೇಶಗಳನ್ನು ರೂಪಿಸಲು ಜಿಯೋ ತನ್ನ ಲ್ಯಾಂಡ್‌ಸ್ಲೈಡ್ ವೇದಿಕೆಯನ್ನು ಬಳಸಿದೆಯೆಂದು ಸ್ಪೈರೆಂಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

     

    “ಸ್ಪೈರೆಂಟ್‌ ಜೊತೆಗಿನ ನಮ್ಮ ಸಹಯೋಗವು ಈ ಉದ್ದೇಶವನ್ನು ಸಾಧಿಸುವಲ್ಲಿ ಒಂದು ಪ್ರಮುಖ ಭಾಗವಾಗಿದೆ. ಕಾರ್ಯಸಾಮರ್ಥ್ಯ ಮತ್ತು ಕ್ಷಮತೆಗಾಗಿ 5ಜಿ ಕೋರ್ ನೆಟ್‌ವರ್ಕ್‌ಗಳನ್ನು ವ್ಯಾಲಿಡೇಟ್ ಮಾಡಲು ಲ್ಯಾಂಡ್‌ಸ್ಲೈಡ್ ಜಾಗತಿಕವಾಗಿ ಒಂದು ಗೋಲ್ಡನ್ ರೆಫರೆನ್ಸ್ ಆಗಿದ್ದು, ಇದು 5ಜಿ ಸ್ಟಾಂಡ್ ಅಲೋನ್ ಕೋರ್ ನೆಟ್‌ವರ್ಕ್‌ನ ಪ್ರತಿಯೊಂದು ಅಂಶವನ್ನೂ ಯಶಸ್ವಿಯಾಗಿ ವ್ಯಾಲಿಡೇಟ್ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಜಿಯೋ 5ಜಿ ಪರಿಹಾರಗಳೊಂದಿಗೆ 5ಜಿ ಬಳಕೆಯ ವೈವಿಧ್ಯಮಯ ಪ್ರಕರಣಗಳನ್ನು ವ್ಯಾಲಿಡೇಟ್ ಮಾಡುವುದಕ್ಕಾಗಿ ಲ್ಯಾಂಡ್‌ಸ್ಲೈಡ್‌ನ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಜಿಯೋ ಪ್ಲಾಟ್‌ಫಾರ್ಮ್ಸ್ ಹಿರಿಯ ಉಪಾಧ್ಯಕ್ಷ ಆಯುಷ್ ಭಟ್ನಾಗರ್ ಹೇಳಿದ್ದಾರೆ. ಇದನ್ನೂ ಓದಿ : ಜಿಯೋದಿಂದ ಬರುತ್ತೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ – ಬೆಲೆ ಎಷ್ಟು? ವಿಶೇಷತೆ ಏನು? ಕಡಿಮೆ ಬೆಲೆಗೆ ಹೇಗೆ ಸಿಗುತ್ತೆ?

    ಎಲ್ಲ ಅಂತರಜಾಲ-ಆಧಾರಿತ ಸೇವೆಗಳನ್ನು ನೀಡಲು ಬಳಕೆಯಾಗುವ ಎಲ್‌ಟಿಇ 4ಜಿ ಮತ್ತು ಐಪಿ ಮಲ್ಟಿಮೀಡಿಯಾ ಉಪವ್ಯವಸ್ಥೆಯ ಸಂಪರ್ಕಸಾಧನಗಳನ್ನು ಬೆಂಬಲಿಸುತ್ತಲೇ ಜಿಯೋ ತನ್ನ ಆಂತರಿಕ 5ಜಿ ಕೋರ್ ನೆಟ್‌ವರ್ಕ್ ಕಾರ್ಯಗಳಲ್ಲಿ ಕ್ಷಮತೆಯನ್ನು ವ್ಯಾಲಿಡೇಟ್ ಮಾಡಬೇಕಾದ ಅಗತ್ಯವಿತ್ತು ಎಂದು ಸ್ಪೈರೆಂಟ್‌ನ ಉಪಾಧ್ಯಕ್ಷ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶದ ಜನರಲ್ ಮ್ಯಾನೇಜರ್ ಪೀಟರ್ ಟಾನ್ ಹೇಳಿದ್ದಾರೆ.

    “5ಜಿ ಕೋರ್‌ನಾದ್ಯಂತ ಇಂಟರ್‌ಫೇಸ್‌ಗಳನ್ನು ಬೆಂಬಲಿಸುವ ಮೂಲಕ ಲ್ಯಾಂಡ್‌ಸ್ಲೈಡ್‌ ಇದಕ್ಕೆ ಆದರ್ಶ ಪರಿಹಾರವನ್ನು ಒದಗಿಸಿತು,” ಎಂದೂ ಅವರು ತಿಳಿಸಿದ್ದಾರೆ.

     

    ದೆಹಲಿ, ಮುಂಬೈ, ಗುಜರಾತ್ ಮತ್ತು ಹೈದರಾಬಾದ್‌ನಲ್ಲಿ 5ಜಿ ಪರೀಕ್ಷೆಗಳಿಗೆ ಜಿಯೋ ಪರವಾನಗಿ ಪಡೆದಿದೆ. ಮುಖೇಶ್ ಅಂಬಾನಿ ನೇತೃತ್ವದ ದೂರಸಂಪರ್ಕ ಸಂಸ್ಥೆ ಪರೀಕ್ಷೆಯ ಸಮಯದಲ್ಲಿ ಸೆಕೆಂಡಿಗೆ 1 ಗಿಗಾಬಿಟ್‌ಗಿಂತ ಹೆಚ್ಚಿನ ಡೇಟಾ ವೇಗವನ್ನು ಸಾಧಿಸಿದೆ ಎಂದು ಜಿಯೋ ಪಾಲುದಾರ ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ ಹೇಳಿದೆ.