Tag: Spin

  • ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

    ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

    ನವದೆಹಲಿ: ಆಸ್ಟ್ರೇಲಿಯಾದ ಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಸ್ಪಿನ್ ಪಾಠವನ್ನು ಹೇಳಿಕೊಟ್ಟಿದ್ದಾನೆ.

    ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ ಸ್ಪಿನ್ನರ್ ಆಡಿಸದ ವಿಚಾರವನ್ನು ಶೇನ್ ವಾನ್ ಟ್ವಿಟ್ಟರ್ ನಲ್ಲಿ ಪ್ರಸ್ತಾಪ ಮಾಡಿ ಅಸಮಾಧಾನ ಹೊರ ಹಾಕಿದ್ದರು.

    “ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡ ಒಬ್ಬ ಪರಿಣತ ಸ್ಪಿನ್ನರನ್ನು ಆಡಿಸದೇ ಇರುವುದು ನಿರಾಸೆ ತಂದಿದೆ. ಈ ಪಿಚ್‍ನಲ್ಲಿ ಸ್ಪಿನ್ನರ್ ಗಳು  ದೊಡ್ಡ ತಿರುವು ಪಡೆಯಬಲ್ಲರು. ಈಗಾಗಲೇ ಪಿಚ್‍ನಲ್ಲಿ ಬೌಲರ್ ಗಳ ಪಾತ್ರ ದೊಡ್ಡದಾಗಿ ಕಾಣಿಸುತ್ತದೆ. ಒಂದು ವೇಳೆ ಈ ಪಿಚ್‍ನಲ್ಲಿ ಸ್ಪಿನ್ ಲಭ್ಯವಾದರೆ, ಭಾರತ ತಂಡ 270-300 ರನ್ ಗಳಿಸಿದರೆ ಈ ಪಂದ್ಯ ಕಿವೀಸ್ ಪಾಲಿಗೆ ಮುಗಿದಂತೆ. ಕೇವಲ ಹವಾಮಾನವಷ್ಟೇ ಪಂದ್ಯದ ದಿಕ್ಕನ್ನು ಬದಲಾಯಿಸಬಲ್ಲದು ಎಂದು ವಾರ್ನ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಅಭಿಮಾನಿಯೊಬ್ಬ, “ಶೇನ್ ನಿಮಗೆ ನಿಜಕ್ಕೂ ಸ್ಪಿನ್ ಬೌಲಿಂಗ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿದೆಯೇ? ಪಿಚ್ ಒಣಗಿದರೆ ಮಾತ್ರ ಸ್ಪಿನ್ ಆಗಲು ಸಾಧ್ಯ. ಎಲ್ಲಾ ದಿನ ಮಳೆಯಾಗುವ ಸಾಧ್ಯತೆ ಇರುವ ಕಾರಣ ಸ್ಪಿನ್ ಆಗಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾನೆ.

    ಅಭಿಮಾನಿಯ ಟ್ವೀಟ್‍ಗೆ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿ,ಶೇನ್ ವಾರ್ನ್ ಅವರ ಕಾಲೆಳೆದಿದ್ದಾರೆ. “ಶೇನ್ ವಾರ್ನ್ ನಿಮ್ಮ ಈ ಟ್ವೀಟ್ ಅನ್ನು ಫ್ರೇಮ್ ಹಾಕಿ ಇಟ್ಟುಕೊಳ್ಳಬೇಕು ಮತ್ತು  ಸ್ಪಿನ್ ಹೇಗೆ ಆಗುತ್ತದೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಿ” ಎಂದು ಹೇಳಿ ಗೂಗ್ಲಿ ಎಸೆದಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸಿದರೆ, ನ್ಯೂಜಿಲೆಂಡ್ ತಂಡ ಯಾವುದೇ ಸ್ಪಿನ್ನರ್‍ಗಳನ್ನು ತೆಗೆದುಕೊಳ್ಳದೆ ಐವರು ವೇಗಿಗಳೊಂದಿಗೆ ಕಣಕ್ಕೆ ಇಳಿದಿದೆ.

  • ನೀವು ಎಂದು ನೋಡಿರದ ವಿಚಿತ್ರ ಬೌಲಿಂಗ್- ವೈರಲ್ ವಿಡಿಯೋ ನೋಡಿ

    ನೀವು ಎಂದು ನೋಡಿರದ ವಿಚಿತ್ರ ಬೌಲಿಂಗ್- ವೈರಲ್ ವಿಡಿಯೋ ನೋಡಿ

    ಮುಂಬೈ: ವಿಚಿತ್ರವಾಗಿ ಬೌಲರ್ ಒಬ್ಬ ಬೌಲಿಂಗ್ ಮಾಡಿರುವ ವಿಡಿಯೋವನ್ನು ಟೀಂ ಇಂಡಿಯಾ ಮಾಜಿ ಆಟಗಾರ ಆಶಿಶ್ ನೆಹ್ರಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಶಿಶ್ ನೆಹ್ರಾ ಅಪ್‍ಲೋಡ್ ಮಾಡಿರುವ ವಿಡಿಯೋದಲ್ಲಿ ಸ್ಪಿನ್ ಬೌಲಿಂಗ್ ಮಾಡುತ್ತಿರುವ ಬೌಲರ್ ಶೈಲಿ ವಿಭಿನ್ನವಾಗಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಈ ವಿಡಿಯೋ ಅಪ್‍ಲೋಡ್ ಮಾಡಿರುವ ನೆಹ್ರಾ, ಟೀಂ ಇಂಡಿಯಾ ಬೌಲರ್ ಗಳಾದ ಚಹಲ್ ಹಾಗೂ ಕುಲದೀಪ್ ಯಾದವ್‍ಗೆ ಟ್ಯಾಗ್ ಮಾಡಿ, ನೀವು ಟ್ರೈ ಮಾಡಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ.

    ಅಂದಹಾಗೇ ಈ ವಿಡಿಯೋ ಎಲ್ಲಿಗೆ ಸೇರಿದ್ದು, ಯಾವ ಬೌಲರ್ ಈ ರೀತಿ ಬೌಲ್ ಮಾಡಿದ್ದಾರೆ ಎಂಬ ಬಗ್ಗೆ ನೆಹ್ರಾ ಮಾಹಿತಿ ನೀಡಿಲ್ಲ. ಆದರೆ ಬೌಲರ್ ಶೈಲಿ ಕಂಡು ಕ್ಷಣ ಕಾಲ ಅಚ್ಚರಿಗೆ ಒಳಗಾದ ಅಂಪೈರ್ ಡೆಡ್ ಬಾಲ್ ಎಂದು ತೀರ್ಪು ನೀಡಿದ್ದಾರೆ. ಆದರೆ ಬೌಲರ್ ಹಾಗೂ ತಂಡದ ಆಟಗಾರರು ಮಾತ್ರ ಅಂಪೈರ್ ತೀರ್ಮಾನಕ್ಕೆ ಬೇಸರದೊಂದಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋವನ್ನು ಬಿಸಿಸಿಐ ಅಪ್ಲೋಡ್ ಮಾಡಿದ್ದು, ಬ್ಯಾಟ್ಸ್ ಮನ್ ಗಳು ಇಷ್ಟಬಂದಂತೆ ಬ್ಯಾಟ್ ಮಾಡುತ್ತಾರೆ. ಆದರೆ ಬೌಲರ್ ಗೆ ಯಾಕೆ ಈ ಸ್ವಾತಂತ್ರ್ಯ ಇಲ್ಲ. ಇದು ಸರಿಯೇ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

    https://www.instagram.com/p/Bp6AV6FAYSt/?utm_source=ig_web_copy_link

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews