Tag: spider

  • ಹೊಸದಾಗಿ ಪತ್ತೆಯಾದ ಜೇಡ ಪ್ರಭೇದಕ್ಕೆ ಸಚಿನ್ ಹೆಸರು

    ಹೊಸದಾಗಿ ಪತ್ತೆಯಾದ ಜೇಡ ಪ್ರಭೇದಕ್ಕೆ ಸಚಿನ್ ಹೆಸರು

    ನವದೆಹಲಿ: ಭಾರತೀಯ ಕ್ರಿಕೆಟ್‍ನ ದಂತೆ ಕತೆ ಸಚಿನ್ ತೆಂಡೂಲ್ಕರ್ ಅವರಿಗೆ ಅಭಿಮಾನಿಗಳು ಗೌರವ ಸಲ್ಲಿಸಲು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಾಗೆ ಜೇಡ ಜೀವಿವರ್ಗೀಕರಣ ಶಾಸ್ತ್ರದಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುತ್ತಿರುವ ಸಂಶೋಧನಾ ವಿಜ್ಞಾನಿಗಳು ಮಾಸ್ಟರ್ ಬ್ಲಾಸ್ಟರ್ ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅತ್ಯಂತ ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ.

    ಗುಜರಾತ್ ಪರಿಸರ ಶಿಕ್ಷಣ ಮತ್ತು ಸಂಶೋಧನೆ (ಜಿಇಇಆರ್) ಪ್ರತಿಷ್ಠಾನದ ಕಿರಿಯ ಸಂಶೋಧಕ ಧ್ರುವ್ ಪ್ರಜಾಪತಿ ಅವರು ಎರಡು ಹೊಸ ಪ್ರಭೇದದ ಜೇಡಗಳನ್ನು ಕಂಡುಹಿಡಿದ್ದಾರೆ. ಅವುಗಳಲ್ಲಿ ಒಂದಕ್ಕೆ ಸಚಿನ್ ತೆಂಡೂಲ್ಕರ್ ಮತ್ತು ಇನ್ನೊಂದಕ್ಕೆ ಕೇರಳದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂತ ಕುರಿಯೊಕ್ಕೋಸ್ ಎಲಿಯಾಸ್ ಚವರ ಅವರ ಹೆಸರನ್ನು ಇಡಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಧ್ರುವ್ ಪ್ರಜಾಪತಿ ಅವರು, ಒಂದು ಜೇಡಕ್ಕೆ ಮಾರೆಂಗೊ ಸಚಿನ್ ತೆಂಡೂಲ್ಕರ್ ಎಂದು ಹೆಸರಿಸಿದ್ದೇನೆ. ಏಕೆಂದರೆ ಸಚಿನ್ ನನ್ನ ನೆಚ್ಚಿನ ಕ್ರಿಕೆಟಿಗ. ಕೇರಳದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದ ಸಂತ ಕುರಿಯಾಕೋಸ್ ಎಲಿಯಾಸ್ ಚವಾರ ಅವರಿಂದ ಮತ್ತೊಂದು ಹೆಸರು ಸ್ಫೂರ್ತಿ ಪಡೆದಿದೆ ಎಂದು ಹೇಳಿದ್ದಾರೆ.

    ಎರಡು ಹೊಸ ಪ್ರಭೇದಗಳು ಏಷ್ಯನ್ ಜಂಪಿಂಗ್ ಜೇಡಗಳ ಇಂಡೊಮರೆಂಗೊ ಮತ್ತು ಮಾರೆಂಗೊ ಜಾತಿಯ ಒಂದು ಭಾಗವಾಗಿದೆ ಎಂದು ಧ್ರುವ ಪ್ರಜಾಪತಿ ತಿಳಿಸಿದ್ದಾರೆ.

    ಧ್ರುವ ಅವರ ಅಧ್ಯಯನದ ಆವಿಷ್ಕಾರಗಳು ರಷ್ಯಾದ ಜರ್ನಲ್‍ನ ಸೆಪ್ಟೆಂಬರ್ ತಿಂಗಳ ಸಂಚಿಕೆಯಲ್ಲಿ ‘ಆತ್ರ್ರೋಪೋಡಾ ಸೆಲೆಕ್ಟಾ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿವೆ.

  • ಜೇಡವನ್ನು ಸುಡಲು ಹೋಗಿ ತನ್ನ ಮನೆಯನ್ನೇ ಸುಟ್ಟುಕೊಂಡ!

    ಜೇಡವನ್ನು ಸುಡಲು ಹೋಗಿ ತನ್ನ ಮನೆಯನ್ನೇ ಸುಟ್ಟುಕೊಂಡ!

    ವಾಷಿಂಗ್ಟನ್: ವ್ಯಕ್ತಿಯೊಬ್ಬ ಜೇಡವನ್ನು ಕೊಲ್ಲಲು ಹೋಗಿ ಕೊನೆಗೆ ತನ್ನ ಮನೆಯನ್ನೇ ಸುಟ್ಟುಕೊಂಡು ಎಡವಟ್ಟು ಮಾಡಿಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಭಾನುವಾರ ಅಮೆರಿಕದ ಉತ್ತರ ಕ್ಯಾಲಿಫೋನಿರ್ಯಾದ ರೆಡಿಂಗ್ ನಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಜೇಡಕ್ಕೆ ಬೆಂಕಿ ನೀಡಿ ಕೊಲ್ಲಲು ಯತ್ನಿಸಿದ್ದಾಗ ನನ್ನ ಮನೆ ಕೂಡ ಬೆಂಕಿಗೆ ಆಹುತಿಯಾಗಿದೆ ಎಂದು ನಿವಾಸಿ ಲಿಂಡ್ಸೆ ವಿಸ್ಗರ್ವರ್ ತಿಳಿಸಿದ್ದಾರೆ.

    ದೊಡ್ಡ ಗಾತ್ರದಲ್ಲಿದ್ದ ಜೇಡವನ್ನು ಕೊಲ್ಲಲು ಹೋದಾಗ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗೆ ಕಾರಣವೇನು ಹಾಗೂ ಅದರಿಂದ ಮನೆಗೆ ಹೇಗೆ ವ್ಯಾಪಿಸಿತು ಎನ್ನುವುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಜೇಡದ ಬಗ್ಗೆ ಇರುವ ಮಾಹಿತಿಯೂ ತನಿಖೆಯ ಒಂದು ಭಾಗ ಎಂದು ರೆಡಿಂಗ್ ಅಗ್ನಿಶಾಮಕ ದಳದ ಮುಖ್ಯಸ್ಥ ಹೇಳಿದ್ದಾರೆ.

    ಬೆಂಕಿಯಲ್ಲಿ ಉರಿಯುತ್ತಿದ್ದ ಜೇಡ ತಕ್ಷಣ ಹಾಸಿಗೆಯ ಮೇಲೆ ಬಿತ್ತು. ಹಾಸಿಗೆಗೆ ಬೆಂಕಿ ಬಿದ್ದ ಬಳಿಕ ಕೊಠಡಿಗೆ ವ್ಯಾಪಿಸಿ ನಂತರ ಕೆನ್ನಾಲಿಗೆ ಮನೆಗೆ ವ್ಯಾಪಿಸಿತ್ತು. ಕೂಡಲೇ ಬೆಂಕಿಯನ್ನು ನಂದಿಸಲು ಅಲ್ಲಿದ್ದ ಸ್ಥಳೀಯರು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.

    ಅಗ್ನಿ ಅವಘಡದಿಂದ ಅಂದಾಜು 11 ಸಾವಿರ ಡಾಲರ್(ಅಂದಾಜು 7 ಲಕ್ಷ ರೂ.) ನಷ್ಟವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 20 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

  • ಬಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ ಸೌತ್‍ನ ಸೂಪರ್‍ಸ್ಟಾರ್ ಮಹೇಶ್ ಬಾಬು

    ಬಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ ಸೌತ್‍ನ ಸೂಪರ್‍ಸ್ಟಾರ್ ಮಹೇಶ್ ಬಾಬು

    ಮುಂಬೈ: ಬಾಲಿವುಡ್ ನಟರಂತೆ ಸೌತ್ ಸಿನಿಮಾದ ನಟರು ಸಾಕಷ್ಟು ಜನಪ್ರಿಯಾರಾಗುತ್ತಿದ್ದಾರೆ. ಸೌತ್ ಸಿನಿಮಾದ ಕೆಲ ನಟರು ಬಾಲಿವುಡ್ ಸದ್ಯ ಒಬ್ಬರ ನಂತರ ಒಬ್ಬರು ಎಂಟ್ರಿ ಕೊಡುತ್ತಿದ್ದಾರೆ. ಆದರೆ ಈ ಬಾರಿ ತೆಲುಗಿನ ಮಹೇಶ್ ಬಾಬು ಬಾಲಿವುಡ್ ನಲ್ಲಿ ಎಂಟ್ರಿ ಕೊಡುತ್ತಿರುವುದು ವಿಶೇಷ.

    ಇತ್ತೀಚಿಗೆ ಬಿಡುಗಡೆಯಾದ ಮಹೇಶ್ ಬಾಬು ಅವರ `ಸ್ಪೈಡರ್’ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಇದೇ ಚಿತ್ರ ಹಿಂದಿಯಲ್ಲಿ ರೀಮೆಕ್ ಆಗುತ್ತಿದ್ದು ಮಹೇಶ್ ಬಾಬು ಅವರೇ ನಟಿಸುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕ ಮುರುಗದಾಸ್ ಹೇಳಿದ್ದಾರೆ.

    ಕೆಲವೇ ದಿನಗಳಲ್ಲಿ ಈ ವಿಷಯವನ್ನು ಅಧಿಕೃತವಾಗಿ ತಿಳಿಸುತ್ತೇವೆ ಎಂದು ಮುರುಗದಾಸ್ ತಿಳಿಸಿದ್ದಾರೆ. ಸ್ಪೈಡರ್ ತೆಲಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಗೊಂಡಿದೆ. ಹೀಗಾಗಿ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ. ಹಿಂದಿಯ ಸ್ಪೈಡರ್ ಬರೋಬ್ಬರಿ 125 ಕೋಟಿ. ರೂ. ಬಜೆಟ್ ನಲ್ಲಿ ನಿರ್ಮಾಣವಾಗಲಿದೆ.

  • ತಲೆನೋವೆಂದು ಬೆಂಗಳೂರಿನ ಆಸ್ಪತ್ರೆಗೆ ಹೋದಾಗ ಕಿವಿಯಿಂದ ಹೊರಬಂತು ಜೇಡ!- ವಿಡಿಯೋ ವೈರಲ್

    ತಲೆನೋವೆಂದು ಬೆಂಗಳೂರಿನ ಆಸ್ಪತ್ರೆಗೆ ಹೋದಾಗ ಕಿವಿಯಿಂದ ಹೊರಬಂತು ಜೇಡ!- ವಿಡಿಯೋ ವೈರಲ್

    ಬೆಂಗಳೂರು: ಸಾಮಾನ್ಯವಾಗಿ ಮಹಿಳೆಯರು ಜಿರಳೆ ಕಂಡರೇ ಮಾರುದ್ಧ ಓಡುತ್ತಾರೆ. ಅಂತದ್ರಲ್ಲಿ ಜೇಡವೊಂದು ಕಿವಿಯೊಳಗೆ ಹೊಕ್ಕಿ ಗೂಡು ಕಟ್ಟಿದರೆ ಹೇಗಾಗಬೇಡ. ಹೌದು ಇಂತಹದ್ದೊಂದು ಅಚ್ಚರಿಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೆಂಗಳೂರಿನ ಹೆಬ್ಬಾಳ ನಿವಾಸಿ ಲಕ್ಷ್ಮೀ ಎಂಬವರಿಗೆ ಇತ್ತೀಚೆಗೆ ತೀವ್ರ ತಲೆನೋವು ಹಾಗೂ ಕಿವಿಯೊಳಗೆ ಕಿರಿಕಿರಿ ಆಗುತ್ತಿತ್ತು. ಹೀಗಾಗಿ ಪರೀಕ್ಷೆ ಮಾಡಿಸಲೆಂದು ಹೆಬ್ಬಾಳದಲ್ಲಿರೋ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಹೋಗಿದ್ದಾರೆ. ಅಂತೆಯೇ ವೈದ್ಯರು ಕಿವಿಯನ್ನು ಪರೀಕ್ಷಿಸಿದಾಗ 8 ಕಾಲಿನ ಜೇಡವೊಂದು ಕಿವಿಯೊಳಗಿಂದ ನಿಧಾನವಾಗಿ ಹೊರ ಬರುತ್ತಿರುವುದು ಕಂಡಿದ್ದಾರೆ. ಇದನ್ನು ನೋಡಿ ವೈದ್ಯರೇ ಅಚ್ಚರಿಗೊಳಗಾಗಿದ್ದಾರೆ. ಇದರ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವರದಿಗಳ ಪ್ರಕಾರ, 49 ವರ್ಷದ ಲಕ್ಷ್ಮೀ ಮಧ್ಯಾಹ್ನ ತನ್ನ ಕೆಲಸ ಮಗಿಸಿ ಮನೆಯ ವರಾಂಡದಲ್ಲಿ ಮಲಗಿದ್ದರು. ಕೆಲ ಹೊತ್ತು ಮಲಗಿ ಎದ್ದ ತಕ್ಷಣ ಅವರಿಗೆ ವಿಪರೀತ ತಲೆನೋವು ಹಾಗೂ ಬಲಭಾಗದ ಕಿವಿಯೊಳಗೆ ಕಿರಿಕಿರಿಯ ಅನುಭವವಾಗಿತ್ತು. ಅಂತೆಯೇ ಕಿವಿಯೊಳಗೆ ಏನು ಸೇರಿಕೊಂಡಿರಬೇಕು ಅಂತಾ ಉಜ್ಜಿದ್ದಾರೆ. ಆದ್ರೆ ಯಾವುದೇ ಬದಲಾವಣೆ ಆಗಲಿಲ್ಲ. ಅಲ್ಲದೇ ತಲೆನೋವು ಜೋರಾಗಲು ಆರಂಭವಾಯಿತು. ತಕ್ಷಣ ಲಕ್ಮೀ ನಗರದಲ್ಲಿರೋ ಆಸ್ಪತ್ರೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

    ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ಮಾಡಲೆಂದು ಕಿವಿಯೊಳಗೆ ಲೈಟ್ ಹಾಕುತ್ತಿದ್ದಂತೆಯೇ ಜೇಡ ಹೊರಬಂದಿದ್ದು, ಲಕ್ಷ್ಮೀ ಅಪಾಯದಿಂದ ಪಾರಾಗಿದ್ದಾರೆ. ಇಂತಹ ಘಟನೆಗಳು ಬಹಳ ಅಪರೂಪವಾಗಿ ನಡೆಯುತ್ತವೆ. ಹೀಗಾಗಿ ಜೇಡ ಹೊರಬರುವುದನ್ನು ಕಂಡು ನಾನೇ ಒಂದು ಬಾರಿ ದಂಗಾದೆ ಅಂತಾ ಲಕ್ಷ್ಮೀ ಯನ್ನು ಪರೀಕ್ಷಿಸಿದ ವೈದ್ಯ ಡಾ. ಸಂತೋಷ್ ಶಿವಸ್ವಾಮಿ ಹೇಳಿದ್ದಾರೆ.

    https://www.youtube.com/watch?v=Ri2OrRdlxtY