Tag: Spicy Rice

  • ದಿಢೀರ್ ಮಸಾಲ ರೈಸ್ ಮಾಡುವ ವಿಧಾನ

    ದಿಢೀರ್ ಮಸಾಲ ರೈಸ್ ಮಾಡುವ ವಿಧಾನ

    ದಿನಬೆಳಗಾದರೆ ಎಲ್ಲರಿಗೂ ಯಾವ ತಿಂಡಿ ಮಾಡುವುದು ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರಂತೂ ಯಾವ ಅಡುಗೆ ಬೇಗನೆ ಮಾಡಬಹುದು ಎಂದು ಯೋಚಿಸುತ್ತಿರುತ್ತಾರೆ. ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಬಹುರುಚಿಕರವಾಗಿ ತಯಾರಿಸಬಲ್ಲ ಬೆಳಗ್ಗಿನ ತಿಂಡಿಗಳು ಬಹಳಷ್ಟಿವೆ. ಅವುಗಳಲ್ಲಿ ಮಸಾಲ ರೈಸ್ ಕೂಡ ಒಂದು. ಕೇವಲ ಹತ್ತು ನಿಮಿಷಗಳಲ್ಲಿ ತಯಾರಿಸಬಹುದಾದ ಹಾಗೂ ವಿಭಿನ್ನ ರುಚಿ ನೀಡುವ ಈ ರೆಸಿಪಿ ಮಕ್ಕಳಿಗೆ ಕೂಡ ಇಷ್ಟವಾಗುತ್ತದೆ.

    ಬೇಕಾಗುವ ಸಾಮಾಗ್ರಿಗಳು:
    1. ಬಾಸುಮತಿ ರೈಸ್/ಮಾಮೂಲಿ ಅನ್ನ- ಎರಡು ಕಪ್
    2. ಹಸಿಮೆಣಸಿನಕಾಯಿ- 2
    3. ಈರುಳ್ಳಿ- ಅರ್ಧ ಕಪ್
    4. ಟೊಮಾಟೊ- ಅರ್ಧ ಕಪ್
    5. ಬೀನ್ಸ್ – ಕಾಲು ಕಪ್
    6. ಹಸಿ ಬಟಾಣಿ- ಕಾಲು ಕಪ್
    7. ಕ್ಯಾರೆಟ್- ಕಾಲು ಕಪ್
    8. ದಪ್ಪಮೆಣಸಿಕಾಯಿ- 1 ಕಪ್
    9. ದನಿಯಾ ಪುಡಿ- 1 ಚಮಚ
    10. ಅರಿಶಿನ – ಕಾಲು ಚಮಚ
    11. ಗರಂ ಮಸಾಲ- 1 ಚಮಚ
    12. ಅಡುಗೆ ಎಣ್ಣೆ – 2 ಚಮಚ
    13. ಶುಂಠಿ,ಬೆಳ್ಳುಳ್ಳಿ ಪೇಸ್ಟ್- 1 ಚಮಚ
    14. ಉಪ್ಪು- ರುಚಿಗೆ ತಕ್ಕಷ್ಟು
    15. ಖಾರದ ಪುಡಿ- 1 ಚಮಚ

    ಮಾಡುವ ವಿಧಾನ:
    * ಮೊದಲು ಒಂದು ಪ್ಯಾನ್‍ಗೆ 2 ಚಮಚ ಎಣ್ಣೆ ಹಾಕಿ ಒಲೆಯ ಮೇಲಿಡಿ.
    * ಎಣ್ಣೆ ಕಾದ ನಂತರ ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹಸಿವಾಸನೆ ಹೋಗುವರೆಗೆ ಬಾಡಿಸಿ ಅದಕ್ಕೆ ಹೆಚ್ಚಿದ ಟೊಮಾಟೊವನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
    * ಟೊಮಾಟೊ ಬೆಂದ ನಂತರ ಅದಕ್ಕೆ ಹೆಚ್ಚಿದ ಕ್ಯಾರೆಟ್, ಬೀನಿಸ್, ದಪ್ಪಮೆಣಸಿನಕಾಯಿ ಹಾಗೂ ಬಟಾಣಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ಮಧ್ಯಮ ಉರಿಯಲ್ಲಿ ಪ್ಯಾನ್ ಮೇಲೆ ಒಂದು ಮುಚ್ಚುಳ ಮುಚ್ಚಿ 5 ನಿಮಿಷ ಬೇಯಿಸಿ.
    * ತರಕಾರಿ ಬೆಂದ ನಂತರ ಖಾರದ ಪುಡಿ, ದನಿಯಾ ಪುಡಿ, ಅರಿಶಿಣ, ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ ಬೇಯಿಸಿರಿ.
    * ನಂತರ ಅದಕ್ಕೆ ಬಾಸುಮತಿ ಅಕ್ಕಿಯಲ್ಲಿ ತಯಾರಿಸಿದ ಅನ್ನವನ್ನು ಹಾಕಿ (ಮಾಮೂಲಿ ಅನ್ನವನ್ನೂ ಬಳಸಬಹುದು) ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ.
    * 2 ನಿಮಿಷಗಳ ಕಾಲ ಮುಚ್ಚುಳ ಮುಚ್ಚಿ ಬೇಯಿಸಿ. ಈಗ ಮಸಾಲ ರೈಸ್ ರೆಡಿಯಾಗಿದ್ದು, ಬಿಸಿ ಬಿಸಿ ಮಸಾಲ ರೈಸ್ ಸರ್ವ್ ಮಾಡಿ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]