Tag: SpiceJets policy

  • ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಮುಂಬೈ: ಸ್ಪೈಸ್ ಜೆಟ್ (SpiceJet) ಏರ್‌ಲೈನ್ (AirLine) ಇಂದು ಏಕಾ ಏಕಿ ತನ್ನ 80 ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ದೀರ್ಘ ರಜೆಯಲ್ಲಿರುವಂತೆ (Leave Without Pay) ಸೂಚಿಸಿದೆ.

    ಸ್ಪೈಸ್‌ಜೆಟ್ ಹೆಚ್ಚಿನ ಸಂಖ್ಯೆಯ ಪೈಲಟ್‌ಗಳನ್ನು (Pilots) ಹೊಂದಿದ್ದು, ನಿರ್ವಹಣಾ ವೆಚ್ಚ ಸರಿದೂಗಿಸಲು ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿಯ ವಿಮಾನಯಾನ (AirLine) ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ಬೋಯಿಂಗ್-737 ವಿಭಾಗದ 40 ಪೈಲಟ್‌ಗಳು ಹಾಗೂ ಕ್ಯೂ-400 ವಿಭಾಗದ 40 ಪೈಲಟ್‌ಗಳು (Pilots) ಸೇರಿ ಒಟ್ಟು 80 ಪೈಲಟ್‌ಗಳನ್ನು ಧೀರ್ಘ ರಜೆ ಮೇಲೆ ಮನೆಗೆ ತೆರಳುವಂತೆ ಸೂಚಿಸಿದೆ. ಡಿಸೆಂಬರ್‌ನಲ್ಲಿ 7 ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್‌ಲೈನ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್‌ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    2021ರ ಆರಂಭದಲ್ಲಿ ಸ್ಪೈಸ್ ಜೆಟ್ (Spice Jet) 95 ವಿಮಾನಗಳನ್ನು ಹೊಂದಿತ್ತು. ಆದರೆ ಈಗ 50 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ವಿಮಾನಗಳನ್ನು ಲೀಸ್‌ಗೆ ನೀಡಿದೆ. ಇನ್ನೂ ಕೆಲವು ನಿರ್ವಹಣಾ ಸಮಸ್ಯೆಯಿಂದ ಹಾರಾಟ ನಡೆಸುತ್ತಿಲ್ಲ. ಜೊತೆಗೆ ಸಂಸ್ಥೆಯು ಆರ್ಥಿಕತೆಯ (Economy Problem) ಒತ್ತಡದಲ್ಲಿದೆ. ಹೆಚ್ಚಿನ ಪೈಲಟ್‌ಗಳನ್ನು ಇರಿಸಿಕೊಂಡು ಸಂಸ್ಥೆ ನಷ್ಟದಲ್ಲಿ ಮುನ್ನಡೆಸುವುದಲ್ಲಿ ಯಾವುದೇ ಅರ್ಥವಿಲ್ಲ ಎಂದು ಈ ನಿರ್ಧಾರ ಕೈಗೊಂಡಿದೆ. ಹೊಸ ವಿಮಾನಗಳು ಆಗಮಿಸಿದ ನಂತರ ಪೈಲಟ್‌ಗಳನ್ನು ಮತ್ತೆ ಕರೆಸಲಾಗುವುದು ಎಂದು ಸ್ಪೈಸ್ ಜೆಟ್ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]