Tag: Spicejet flight

  • ತಿರುಪತಿಗೆ ಹೊರಟಿದ್ದ ವಿಮಾನ ವಾಪಸ್‌ – ಹೈದರಾಬಾದ್‌ನಲ್ಲಿ ಯೂಟರ್ನ್‌ ಹೊಡೆದ ಸ್ಪೈಸ್‌ಜೆಟ್‌ ಫ್ಲೈಟ್‌

    ತಿರುಪತಿಗೆ ಹೊರಟಿದ್ದ ವಿಮಾನ ವಾಪಸ್‌ – ಹೈದರಾಬಾದ್‌ನಲ್ಲಿ ಯೂಟರ್ನ್‌ ಹೊಡೆದ ಸ್ಪೈಸ್‌ಜೆಟ್‌ ಫ್ಲೈಟ್‌

    ಹೈದರಾಬಾದ್: ಹೈದರಾಬಾದ್‌ನಿಂದ (Hyderabad) ತಿರುಪತಿಗೆ (Tirupati) ಹೊರಟಿದ್ದ ಸ್ಪೈಸ್‌ಜೆಟ್‌ ವಿಮಾನವು (SpiceJet flight) ಟೇಕಾಫ್‌ ಆದ ಸ್ವಲ್ಪ ಸಮಯದಲ್ಲೇ ತಾಂತ್ರಿಕ ಸಮಸ್ಯೆಯಿಂದ ವಾಪಸ್‌ ಆಗಿದೆ.

    ವಿಮಾನ ತಾಂತ್ರಿಕ ದೋಷದಿಂದಾಗಿ ನಗರಕ್ಕೆ ಹಿಂತಿರುಗಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಬೆಳಗ್ಗೆ 6:10 ಕ್ಕೆ ಹೊರಡಬೇಕಿದ್ದ ಎಸ್‌ಜಿ 2696 ವಿಮಾನ ಬೆಳಗ್ಗೆ 6:19 ಕ್ಕೆ ಹೊರಟು 7:40 ಕ್ಕೆ ತಿರುಪತಿಯಲ್ಲಿ ಇಳಿಯಬೇಕಿತ್ತು. ಆದರೆ, ವಿಮಾನವು ಟೇಕಾಫ್‌ ಆದ ಸ್ವಲ್ಪ ಸಮಯದ ನಂತರ ಯೂಟರ್ನ್‌ ಹೊಡೆದು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಇದನ್ನೂ ಓದಿ: ಏರ್ ಇಂಡಿಯಾ ದುರಂತದ ಬಳಿಕ ಎಚ್ಚೆತ್ತ DGCA – ಏರ್‌ಪೋರ್ಟ್‌ ಬಳಿಯ ಕಟ್ಟಡಗಳಿಗೆ ಹೊಸ ರೂಲ್ಸ್‌

    ಹೈದರಾಬಾದ್-ತಿರುಪತಿ ವಿಮಾನವನ್ನು ನಿರ್ವಹಿಸುತ್ತಿದ್ದ Q400 ವಿಮಾನವು ಟೇಕಾಫ್‌ ಆದ ನಂತರ AFT ಬ್ಯಾಗೇಜ್ ಬಾಗಿಲಿನಿಂದ ಬೆಳಕು ಹೊಮ್ಮಿತು. ಕ್ಯಾಬಿನ್ ಒತ್ತಡವು ಸಾಮಾನ್ಯವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್‌ಗಳು ಹೈದರಾಬಾದ್‌ಗೆ ಹಿಂತಿರುಗಲು ನಿರ್ಧರಿಸಿದರು. ವಿಮಾನ ಸುರಕ್ಷಿತವಾಗಿ ಇಳಿಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ಸ್ಪೈಸ್‌ಜೆಟ್‌ ತಿಳಿಸಿದೆ.

    ವಿಮಾನವು ತುರ್ತು ಭೂಸ್ಪರ್ಶ ಮಾಡಲಿಲ್ಲ. ತಿರುಪತಿಗೆ ಮುಂದಿನ ಪ್ರಯಾಣಕ್ಕಾಗಿ ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದರ ಕುರಿತು ವಿಮಾನಯಾನ ಸಂಸ್ಥೆ ಮಾಹಿತಿಯನ್ನು ನೀಡಿಲ್ಲ. ಇದನ್ನೂ ಓದಿ: 2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

  • ಸ್ಪೈಸ್‍ಜೆಟ್‌ನಲ್ಲಿ ಹೊಗೆ – ದೆಹಲಿಗೆ ವಿಮಾನ ವಾಪಸ್

    ಸ್ಪೈಸ್‍ಜೆಟ್‌ನಲ್ಲಿ ಹೊಗೆ – ದೆಹಲಿಗೆ ವಿಮಾನ ವಾಪಸ್

    ನವದೆಹಲಿ: ಪ್ರಯಾಣಿಕರನ್ನು ಹೊತ್ತು ಜಬಲ್‍ಪುರಕ್ಕೆ ಹೊರಟ್ಟಿದ್ದ ಸ್ಪೈಸ್‍ಜೆಟ್ ವಿಮಾನದ ಕ್ಯಾಬಿನ್‍ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ವಿಮಾನವು ಮರಳಿದೆ.

    ದೆಹಲಿಯಿಂದ ಜಬಲ್‍ಪುರಕ್ಕೆ ಹೊರಟಿದ್ದ ಸ್ಪೈಸ್‍ಜೆಟ್ ವಿಮಾನವು ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಮರಳಿದೆ. ವಿಮಾನವು 5,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವೇಳೆ ಕ್ಯಾಬಿನ್ ಒಳಗೆ ಹೊಗೆ ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಸದ್ಯ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸ್ಪೈಸ್‍ಜೆಟ್ ವಕ್ತಾರರು ತಿಳಿಸಿದ್ದಾರೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ – ಪ್ರಯಾಣಿಕ ಶಾಕ್

    ಇದೀಗ ಕ್ಯಾಬಿನ್ ಒಳಗೆ ಹೊಗೆ ಆವರಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದೆಹಲಿಗೆ ವಿಮಾನ ಹಿಂದುರುಗಿದ ನಂತರ ಪ್ರಯಾಣಿಕರು ನಿರ್ಗಮಿಸುತ್ತಿರುವುದನ್ನು ಕಾಣಬಹುದಾಗಿದೆ. ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್- ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್

    Live Tv