Tag: SPG

  • ಸಿಟಿ.ರವಿ ಕೇಂದ್ರ ಸರ್ಕಾರಕ್ಕೆ ಹೇಳಿ SPG ಭದ್ರತೆ ಪಡೆಯಲಿ: ಡಿಕೆ ಸುರೇಶ್

    ಸಿಟಿ.ರವಿ ಕೇಂದ್ರ ಸರ್ಕಾರಕ್ಕೆ ಹೇಳಿ SPG ಭದ್ರತೆ ಪಡೆಯಲಿ: ಡಿಕೆ ಸುರೇಶ್

    ಬೆಂಗಳೂರು: ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲದೆ ಹೋದ್ರೆ ಎಸ್‌ಪಿಜಿ (SPG) ಭದ್ರತೆ ಹಾಕಿಸಿಕೊಳ್ಳಲಿ ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಸಿಟಿ ರವಿ (CT Ravi) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ನನ್ನ ಬಂಧನಕ್ಕೆ ಡಿಕೆಶಿ ಕಾರಣ ಎಂಬ ಸಿಟಿ ರವಿ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಸಿಟಿ ರವಿ ಕೆಲ ವಿಷಯದಲ್ಲಿ ಪ್ರಚಲಿತರು. ಅವರ ಒಡನಾಟ ಇರುವುದು ಅಂತಹವರ ಜೊತೆ. ರಾಜ್ಯದ ‌ಪೊಲೀಸ್ ಮೇಲೆ ನಂಬಿಕೆ ಇಲ್ಲ ಅಂದರೆ ಡೆಲ್ಲಿ ಸಪೋರ್ಟ್ ತಗೊಂದು ಎಸ್‌ಪಿಜಿ ಭದ್ರತೆ ನೀಡಲು ಹೇಳಿ. ಇಲ್ಲೇ ಹಿಂದೆ ಮುಂದೆ ಸೆಕ್ಯುರಿಟಿ ವ್ಯಾನ್ ಹಾಕಿಕೊಂಡು ಹೋಗೋಕೆ ಹೇಳಿ. ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂದರೆ ಎಸ್‌ಪಿಜಿ ಭದ್ರತೆಯನ್ನು ಕೇಳಿ‌ ತಗೊಳ್ಳಲಿ ಎಂದು ತಿರುಗೇಟು ಕೊಟ್ಟರು.

    ಸಿಟಿ ರವಿ ಬಂಧನ ಪ್ರಕರಣವನ್ನು ಸಿಬಿಐ (CBI) ಅಥವಾ ನ್ಯಾಯಾಂಗ ತನಿಖೆಗೆ ನೀಡಬೇಕು ಅಂತ ಬಿಜೆಪಿ ನಾಯಕರ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರಿಗೆ ಸಿಬಿಐ ಅನ್ನೋದು ಮನೆ ಒಳಗಿನ ಸರಕು ಆಗಿದೆ. ಮನೆ ಕೆಲಸದವನ್ನು ಉಪಯೋಗ ಮಾಡುವ ರೀತಿ ಸಿಬಿಐ ಉಪಯೋಗ ಮಾಡುತ್ತಿದ್ದಾರೆ. ನಡೆದ ಘಟನೆ ಬಿಜೆಪಿಗೆ ಶೋಭೆ ತರುತ್ತಾ ಅಂತ ಬಿಜೆಪಿ ನಾಯಕರು ಹೇಳಬೇಕು. ಸಿಟಿ ರವಿ ಪದೇ ಪದೇ ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ಮಾತಾಡ್ತಿದ್ದಾರೆ. ಬಿಜೆಪಿ ಸಂಸ್ಕೃತಿ ಎಲ್ಲಿ ಹೋಯ್ತು? ಆರ್‌ಎಸ್‌ಎಸ್‌ ಹೇಳಿಕೊಟ್ಟ ಸಂಸ್ಕೃತಿ ಇದೆನಾ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿ.ಟಿ ರವಿ ಫೇಕ್‌ ಎನ್‌ಕೌಂಟರ್‌ ಮಾಡಬೇಕೆಂಬ ವಿಚಾರ ಅಲ್ಲಿನ ಪೊಲೀಸ್‌ ತಂಡಕ್ಕೆ ಇತ್ತು ಅನಿಸುತ್ತೆ: ಜೋಶಿ ಬಾಂಬ್‌

     

    ಬಿಜೆಪಿ ನಾಯಕರು ಪದೇ ಪದೇ ಹೀಗೆ ಮಾತಾಡೋದನ್ನ ರಾಜ್ಯದ ಜನರು ಗಮನಿಸಬೇಕು. ಹೆಣ್ಣುಮಕ್ಕಳು, ಮಹಿಳೆಯರ ಬಗ್ಗೆ ಮಾತಾಡ್ತಾರೆ. ಅವರ ನಡವಳಿಕೆ ನೋಡಿದ್ರೆ ಅವರ ತಾಯಿ, ಹೆಂಡತಿ, ಮಕ್ಕಳಿಗೂ ಗೌರವ ಕೊಡೊಲ್ಲ ಅನ್ನಿಸುತ್ತೆ. ಆರ್‌ಎಸ್‌ಎಸ್‌ (RSS) ತರಬೇತಿ ಕೇಂದ್ರ ಈಗಲಾದರೂ ಬಿಜೆಪಿ ನಾಯಕರಿಗೆ ಕಡಿವಾಣ ಹಾಕಬೇಕು. ಬಿಜೆಪಿಯ ಒಬ್ಬೇ ಒಬ್ಬ ನಾಯಕರು ಈ ಹೇಳಿಕೆ‌ ಖಂಡಿದೇ. ತಿರುಚುವ ಕೆಲಸ ಮಾಡ್ತಿದ್ದಾರೆ. ಮಾಧ್ಯಮಗಳ ಬಳಿ ದಾಖಲೆ ಇದ್ದರು ಕೂಡಾ ಬೇರೆ ವಿಚಾರಗಳನ್ನು ಪ್ರಚಾರಕ್ಕೆ ಬಿಡುತ್ತಿದ್ದೀರಿ. ಮಾಧ್ಯಮಗಳು ಜನಪ್ರತಿನಿಧಿಗಳು ಹೀಗೆ ಮಹಿಳಾ ಕುಲಕ್ಕೆ ಆದ ಅವಮಾನದ ಬಗ್ಗೆ ಮಾತಾಡುತ್ತಿಲ್ಲ. ಆ ನಾಯಕರು ಕ್ಷಮೆ ಕೋರುತ್ತಿಲ್ಲ. ಮಾಧ್ಯಮಗಳು ಯಾಕೆ ಅವರಿಗೆ ಬೆಂಬಲ ಕೊಡ್ತೀರಾ ಡಿಕೆ ಸುರೇಶ್ ಗರಂ ಆದರು.

    ವಿರೋಧ ಪಕ್ಷದ ನಾಯಕರು ಈ ರೀತಿ ಪ್ರವೃತ್ತಿ ಪದೇ ಪದೇ ತೋರಿಸುತ್ತಿದ್ದಾರೆ. ಕರ್ನಾಟಕದ ಗೌರವ ಕಡಿಮೆ ಮಾಡ್ತಿದ್ದಾರೆ. ಕನ್ನಡಿಗರು ಸುಸಂಸ್ಕೃತರು ಅಂತ ಹೇಳ್ತಾರೆ‌. ಆದರೆ ಬಿಜೆಪಿ ನಾಯಕರ ಆಟ ನೋಡಿದ್ರೆ 10-12 ವರ್ಷಗಳಿಂದ ಇದೇ ರೀತಿ ಬಿಜೆಪಿ ಅವರು ನಡೆಸಿಕೊಂಡು ಬರ್ತಿದ್ದಾರೆ. ಮೌಲ್ಯಗಳು ಕುಸಿಯುತ್ತಿದ್ದು ಓಲೈಕೆ ಹೆಚ್ಚಾಗುತ್ತಿದೆ. ಜನಪ್ರತಿನಿಧಿಗಳ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಎಚ್ಚರಿಕೆ ಇಂದ ನಡೆಯಬೇಕು ಅಂತ ತಿಳಿಸಿದರು.

     

    ಸಿಟಿ ರವಿ ರಾಹುಲ್ ಗಾಂಧಿ (Rahul Gandhi) ಡ್ರಗ್ ಅಂದರು, ಕೆಟ್ಟ ಪದ ಬಳಕೆ ಆಯ್ತು ಮಾಧ್ಯಮಗಳು ಯಾವುದನ್ನು ತೋರಿಸಲಿಲ್ಲ. ಸಿಟಿ ರವಿ ಮಾತು ತಿರುಗಿಸೋದ್ರಲ್ಲಿ ಎಕ್ಸ್‌ಪರ್ಟ್‌ ಆಗಿದ್ದಾರೆ. ಸಿಟಿ ರವಿ ಮಹಿಳೆಯರ ಕ್ಷಮೆ ಕೇಳಬೇಕು. ಅವರ ಮನೆಯಲ್ಲಿ ಮಹಿಳೆಯರು ಇದ್ದಾರೆ. ತಾಯಿ ಜನ್ಮ ಕೊಟ್ರೆ ಇವರು ಆಚೆ ಬರೋಕೆ ಸಾಧ್ಯವಿಲ್ಲ. ತಾಯಿ ಬಿಟ್ಟು ಬೇರೆ ರೀತಿ ಹುಟ್ಟೋದನ್ನ ಬಿಜೆಪಿ ಅವರು ಕಂಡುಕೊಂಡಿರಬೇಕು. ಕರ್ಣ ಹುಟ್ಟಿದ ರೀತಿ ಜನ್ಮ ತಾಳಿದ್ದಾರಾ? ಅವರ ನಾಯಕರೇ ಅದನ್ನ ಹೇಳಿದ್ದಾರೆ. ಮೋದಿ ಅವರೇ ನಾನು ದೈವ ಸಂಭೂತ ಅಂತ ಹೇಳಿದ್ದಾರೆ. ಹಾಗೆ ಏನಾದ್ರು ಬಿಜೆಪಿ ಅವರ ಹುಟ್ಟಿದ್ರಾ? ಬಿಜೆಪಿಯಲ್ಲಿ ಲಂಗು-ಲಗಾಮು ಇಲ್ಲ ಅಂತ ಅನ್ನಿಸುತ್ತೆ. ಅದಕ್ಕೆ ಪದೇ ಪದೇ ಹೀಗೆ ಮಾತಾಡ್ತಿದ್ದಾರೆ .ಬಿಜೆಪಿ ಅವರು ಏನೇನು ಮಾತಾಡಿದರು ಪಟ್ಟಿ ಮಾಡಿ ತೋರಿಸಿ ಅಂತ ಮಾಧ್ಯಮಗಳ ಮೇಲೆ ಆರೋಪ ಮಾಡಿದ್ರು.

    ಸಿಟಿ ರವಿಯನ್ನ ಎನ್‌ಕೌಂಟರ್ ಮಾಡೋ ಪ್ಲ್ಯಾನ್ ಮಾಡಿದ್ರು ಕೇಂದ್ರ ಸಚಿವ ಜೋಷಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಅಂಬೇಡ್ಕರ್ ಮೇಲಿನ ಹೇಳಿಕೆ ಮರೆ ಮಾಚಲಿ ಬಿಜೆಪಿ ಕುತಂತ್ರ ಮಾಡಿದೆ. ಬಿಜೆಪಿ ಅವರು ಮಾಡ್ತಿರೋದನ್ನ ಮಾಧ್ಯಮಗಳು ಚೆನ್ನಾಗಿ ತೋರಿಸ್ತಿದ್ದಾರೆ. ಈ ದೇಶ ಅಂಬೇಡ್ಕರ್ ಸಂವಿಧಾನದಿಂದ ಉಳಿದಿದೆ. ನೀವು ಅಂಬೇಡ್ಕರ್ ಬಗ್ಗೆ ಅಪಮಾನ ಆಗಿದ್ದು ತೋರಿಸದೇ ಸಿಟಿ ರವಿ ತೋರಿಸ್ತಿದ್ದೀರಾ. ಮೌಲ್ಯಗಳು ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಮುಂದೆ ಬರುತ್ತದೆ ಎಂದರು.

  • ಎಸ್‍ಪಿಜಿ ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ನಿಧನ

    ಎಸ್‍ಪಿಜಿ ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ನಿಧನ

    ನವದೆಹಲಿ: ವಿಶೇಷ ಭದ್ರತಾ ಪಡೆ (SPG) ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ (Arun Kumar Sinha) ಅವರು ನಿಧನರಾಗಿದ್ದಾರೆ.

    61 ವರ್ಷದ ಸಿನ್ಹಾ ಅವರು ಕಳೆದ ಕೆಲ ತಿಂಗಳಿನಿಂದ ಕಿಡ್ನಿ (Kidney) ಸಂಬಂಧಿತ ಕಾಯಿಲೆಯಿಂದ ಬಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಹರಿಯಾಣದ ಗುರುಗ್ರಾಮ್‍ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಸಿನ್ಹಾ ಅವರು 1987ರ ಬ್ಯಾಚ್ ಕೇರಳ (Kerala) ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ಆ ಬಳಿಕ 2016 ರಿಂದ ಎಸ್‍ಪಿಜಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ವಹಿಸಿದ್ದರು. ಇತ್ತೀಚೆಗಷ್ಟೇ ಅವರ ಸೇವೆ ವಿಸ್ತರಣೆ ಮಾಡಲಾಗಿತ್ತು. ಇದನ್ನೂ ಓದಿ: ತಾತನ ಹೆಸರು ಗೊತ್ತಿಲ್ಲವೆಂದರೆ ತಾತ ಇಲ್ಲವೆಂದಲ್ಲ- ಜಿ.ಪರಮೇಶ್ವರ್ ಹೇಳಿಕೆಗೆ ಬಿಜೆಪಿ ಕಿಡಿ

    ಸಿನ್ಹಾ ಅವರು ಎಸ್‍ಪಿಜಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ವಿಶೇಷ ಸೇವೆ ಮತ್ತು ಸಂಚಾರ) ಆಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಗಲಕೋಟೆ ಜಿಲ್ಲೆಗೆ ಮತ್ತೊಂದು ಹೆಮ್ಮೆ- ಮೋದಿಯ SPG ಭದ್ರತಾ ತಂಡಕ್ಕೆ ಮುಧೋಳ ಶ್ವಾನ ಸೇರ್ಪಡೆ

    ಬಾಗಲಕೋಟೆ ಜಿಲ್ಲೆಗೆ ಮತ್ತೊಂದು ಹೆಮ್ಮೆ- ಮೋದಿಯ SPG ಭದ್ರತಾ ತಂಡಕ್ಕೆ ಮುಧೋಳ ಶ್ವಾನ ಸೇರ್ಪಡೆ

    ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಭದ್ರತಾ ದಳ (ಎಸ್‍ಪಿಜಿ) ತಂಡಕ್ಕೆ ಬಾಗಲಕೋಟೆಯ ಮುಧೋಳ ಶ್ವಾನ ಸೇರ್ಪಡೆಗೊಂಡಿದೆ. ಇದು ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.

    ಹೌದು. 2 ತಿಂಗಳ ಎರಡು ಗಂಡು ಮುಧೋಳ ಶ್ವಾನಗಳನ್ನ ಎಸ್‍ಪಿಜಿ ಪಡೆಯ ಅಧಿಕಾರಿಗಳು ಕೊಂಡು ಹೋಗಿದ್ದಾರೆ. ಇವುಗಳನ್ನು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ತಿಮ್ಮಾಪುರ ಬಳಿ ಇರುವ ಮುಧೋಳ ಶ್ವಾನ ಸಂಶೋಧನಾ ಕೇಂದ್ರದಿಂದ ಹಸ್ತಾಂತರ ಮಾಡಲಾಗಿದೆ.

    ಏಪ್ರಿಲ್ 25 ರಂದು ಎರಡು ಶ್ವಾನ ಹಸ್ತಾಂತರಿಸಲಾಗಿದೆ. ಪ್ರಧಾನಿ ಎಸ್‍ಪಿಜಿ ಭದ್ರತಾ ಪಡೆಯಿಂದ ವೆಟರ್ನರಿ ವೈದ್ಯ ಡಾ. ಬಿ.ಎಂ ಪಂಚಬುದ್ದೆ ಹಾಗೂ ಇಬ್ಬರು ಶ್ವಾನ ತರಬೇತುದಾರರು ಮುಧೋಳ ಶ್ವಾನ ಸಂವರ್ಧನಾ ಕೇಂದ್ರಕ್ಕೆ ಬಂದಿದ್ದರು. ಧಾರವಾಡ ಹಾಗೂ ಬಾಗಲಕೋಟೆ ಎಸ್‍ಪಿ, ಜಿಲ್ಲಾಡಳಿತ ಸಂಪರ್ಕದ ಮೂಲಕ ಅಧಿಕಾರಿಗಳು ಬಂದಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ- ಶ್ರೀರಾಮುಲು ಒಳ ಒಪ್ಪಂದ ನನಗೆ ಗೊತ್ತಿಲ್ಲ: ಡಿ.ಕೆ ಶಿವಕುಮಾರ್

    ಸಂವರ್ಧನಾ ಕೇಂದ್ರದಲ್ಲಿ ಒಂದು ತಾಸು ಶ್ವಾನಗಳ ಪರೀಕ್ಷೆ ನಡೆಸಿದರು. ಆರೋಗ್ಯ, ಶ್ವಾನಗಳ ಲಕ್ಷಣ, ಓಟ, ಸಮಯಪ್ರಜ್ಞೆ, ಬುದ್ಧಿ ಹಾಗೂ ಚಾಕಚಕ್ಯತೆ ಬಗ್ಗೆ ತಿಳಿದುಕೊಂಡರು. ಬಳಿಕ ಶ್ವಾನಗಳನ್ನು ಕರೆದುಕೊಂಡು ಹೋಗಿದ್ದಾರೆ. ಎಸ್‍ಪಿಜಿ ಭದ್ರತಾ ಪಡೆಯಲ್ಲಿ ತರಬೇತಿ ನೀಡಿ ಬಳಿಕ ಅವುಗಳನ್ನು ಭದ್ರತೆಗೆ ಸೇರಿಸಿಕೊಳ್ಳಲಾಗುತ್ತದೆ.

    ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಗೌಪ್ಯವಾಗಿದ್ದ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಹಿಂದೊಮ್ಮೆ ಮನ್ ಕಿ ಬಾತ್ ನಲ್ಲೂ ಮುಧೋಳ ಶ್ವಾನದ ಬಗ್ಗೆ ಮೋದಿ ಮಾತಾಡಿದ್ದರು. ಈಗಾಗಲೇ ಭಾರತೀಯ ಸೇನೆ, ಸಿಆರ್‍ಪಿಎಫ್, ಐಡಿಬಿಪಿ, ವಾಯುಸೇನೆಯಲ್ಲೂ ಮುಧೋಳ ಶ್ವಾನಗಳಿವೆ ಎಂದು ಶ್ವಾನ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಸುಶಾಂತ್ ಹಂಡಗೆ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 75ನೇ ಅಮೃತ ಮಹೋತ್ಸವ – ದೆಹಲಿಯಲ್ಲಿ ಪ್ರಧಾನಿ ಮೋದಿ ಸುರಕ್ಷತೆಗೆ ಭಾರೀ ಭದ್ರತೆ

    75ನೇ ಅಮೃತ ಮಹೋತ್ಸವ – ದೆಹಲಿಯಲ್ಲಿ ಪ್ರಧಾನಿ ಮೋದಿ ಸುರಕ್ಷತೆಗೆ ಭಾರೀ ಭದ್ರತೆ

    ನವದೆಹಲಿ: ಸ್ವಾತಂತ್ರ‍್ಯ ದಿನಾಚರಣೆ ಸಮೀಪಿಸುತ್ತಿದ್ದು, ಈ ಬಾರಿ 75ನೇ ಅಮೃತ ಮಹೋತ್ಸವ ಅದ್ಧೂರಿಯಾಗಿ ಆಚರಿಸಲು ಭಾರತ ಸಜ್ಜಾಗಿದೆ. ಆದರೆ ಸ್ವಾತಂತ್ರ‍್ಯ ದಿನಾಚರಣೆಗೂ ಮುನ್ನವೇ ದಾಳಿ ನಡೆಸುವುದಾಗಿ ಉಗ್ರ ಸಂಘಟನೆಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

    ದೆಹಲಿಯ ಮಧ್ಯಭಾಗದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯಾದ್ಯಂತ ಅಣುಕು ಪ್ರದರ್ಶನ ಮಾಡಲಾಗಿದ್ದು, ಜನಸಂದಣಿ ಹಾಗೂ ಸೂಕ್ಷ್ಮವಲಯಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ದಯವಿಟ್ಟು ರಜೆ ಕೊಡಬೇಡಿ: ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿ ಮನವಿ

    ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕಾಗಿ ದೆಹಲಿಯ ಕೆಂಪುಕೋಟೆ ಸುತ್ತಲೂ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

    ಈ ಬಾರಿ 75ನೇ ಅಮೃತ ಮಹೋತ್ಸವ ಆಗಿರುವುದರಿಂದ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದೆ. ಕೇಂದ್ರದ ಏಜೆನ್ಸಿ ಹಾಗೂ ಗುಪ್ತಚರ ಇಲಾಖೆಗಳೊಂದಿಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಲಾಗುತ್ತದೆ. ಕೆಂಪುಕೋಟೆ ಹಾಗೂ ಸಮೀಪದ ಪ್ರದೇಶಗಳಲ್ಲಿ ನಿಗಾ ಇಡಲು 400 ಕಿಟ್ ಫ್ಲೈಯರ್ಸ್‌ (ಗಾಳಿಪಟ ಹಾರಾಟಗಾರರು)ಗಳನ್ನು ನಿಯೋಜಿಸಲಾಗಿದೆ. ಗಾಳಿಪಟ, ಡ್ರೋನ್ ಹಾಗೂ ಮೊದಲಾದ ಹಾರುವ ವಸ್ತುಗಳು ಕಾಣಿಸದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಸಾಂದರ್ಭಿಕ ಚಿತ್ರ

    1 ಸಾವಿರಕ್ಕೂ ಹೈ ಸ್ಪೆಸಿಫಿಕ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಕೆಂಪುಕೋಟೆಗೆ ಹೋಗುವ ವಿಐಪಿ ಮಾರ್ಗಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತವೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?

    ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?

    ಪಂಜಾಬ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಫ್ಲೈಓವರ್ ಬಳಿ ಪ್ರಧಾನಿ ಮೋದಿ ಅವರ ಕಾರು ಸಿಲುಕಿದ ವಿಚಾರ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇದು ಬಹುದೊಡ್ಡ ಭದ್ರತಾ ಲೋಪ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ವಿಚಾರವಾಗಿ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಅಷ್ಟಕ್ಕೂ ಪ್ರಧಾನಿಗಳ ಭದ್ರತೆಯ ಪೂರ್ವ ಸಿದ್ಧತೆ ಹೇಗಿರುತ್ತೆ, ಅದರ ಹೊಣೆಗಾರಿಕೆ ಯಾರದು, ಪಂಜಾಬ್‍ನಲ್ಲಿ ನಡೆದದ್ದಾದರೂ ಏನು ಎಂಬ ನಾನಾ ಪ್ರಶ್ನೆಗಳು ಮೂಡುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

    ಪ್ರಧಾನಿಗಳ ಭದ್ರತೆಯ ಪ್ಲಾನ್ ಹೇಗಿರುತ್ತೆ?
    ಬ್ಲೂ ಬುಕ್: ಇದು ಗಣ್ಯರ ಭದ್ರತೆ ಕುರಿತ ಮಾರ್ಗಸೂಚಿಗಳ ಸಂಗ್ರಹವಾಗಿದೆ. ಪ್ರಧಾನಿಗಳ ಭದ್ರತೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ನಿಯಮಗಳನ್ನು ‘ಬ್ಲೂ ಬುಕ್’ನಲ್ಲಿ ನಮೂದಿಸಲಾಗುತ್ತದೆ. ಈ ಯೋಜನೆಯು ಕೇಂದ್ರೀಯ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳನ್ನೂ ಒಳಗೊಂಡಿರುತ್ತದೆ. ಭದ್ರತೆಯ ಒಟ್ಟು ಜವಾಬ್ದಾರಿಯನ್ನು ವಿಶೇಷ ಭದ್ರತಾ ದಳ (ಎಸ್‍ಪಿಜಿ) ಹೊತ್ತಿರುತ್ತದೆ. ಇದನ್ನೂ ಓದಿ: ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್‌

    ಪ್ರಧಾನಿಯು ಸಭೆಯಲ್ಲಿ ಭಾಗವಹಿಸಿದರೆ, ರಸ್ತೆ-ವಿಮಾನದಲ್ಲಿ ಪ್ರಯಾಣಿಸಿದರೆ ಏನೇನು ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ಎಷ್ಟು ಸಿಬ್ಬಂದಿ ನಿಯೋಜಿಸಬೇಕು ಹಾಗೂ ಯಾವ ವಾಹನಗಳನ್ನು ಬಳಸಬೇಕು ಎಂಬುದನ್ನು ಮುಂಚಿತವಾಗಿಯೇ ಪ್ರತ್ಯೇಕ ಮಾರ್ಗಸೂಚಿಗಳನ್ನು ರಚಿಸಿಕೊಳ್ಳಲಾಗುತ್ತದೆ. ಅದರನ್ವಯ ಎಸ್‍ಪಿಜಿ ಹಾಗೂ ರಾಜ್ಯ ಪೊಲೀಸ್ ಪಡೆಗಳು ನಿಯಮಗಳನ್ನು ಪಾಲಿಸಬೇಕಿರುತ್ತದೆ.

    ಭದ್ರತೆಗಾಗಿ ಸಭೆ
    ಪ್ರಧಾನಿಯವರಿಗೆ ಪ್ರಯಾಣ ಸಂದರ್ಭದಲ್ಲಿ ಭದ್ರತೆ ಒದಗಿಸುವ ಸಂಬಂಧ ಸಭೆ ನಡೆಸಿ ಚರ್ಚಿಸಿ ಕ್ರಮವಹಿಸಲಾಗುತ್ತದೆ. ಪ್ರಧಾನಿ ಅವರು ಹೇಗೆ (ವಾಯು, ರಸ್ತೆ) ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡುತ್ತಾರೆ ಕಾರು ಅಥವಾ ಹೆಲಿಕಾಪ್ಟರ್‍ನಿಂದ ಇಳಿದು ಕಾರ್ಯಕ್ರಮ ಸ್ಥಳಕ್ಕೆ ಹೇಗೆ ತಲುಪುತ್ತಾರೆ ಎಂಬುದನ್ನೂ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದನ್ನು ಯೋಜಿಸುವಾಗ ಕೇಂದ್ರೀಯ ಏಜೆನ್ಸಿಗಳು ಮತ್ತು ಸ್ಥಳೀಯ ಗುಪ್ತಚರ ಘಟಕದ ಮಾಹಿತಿಗಳನ್ನೂ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರಧಾನಿ ಪ್ರಯಾಣದ ಮೂರು ದಿನಗಳ ಮುನ್ನವೇ ಈ ಎಲ್ಲಾ ಯೋಜನೆಯನ್ನು ಮಾಡಿಕೊಳ್ಳಲಾಗುತ್ತದೆ.

    ಕಾರ್ಯಕ್ರಮ ಸ್ಥಳದ ಭದ್ರತೆ
    ಕಾರ್ಯಕ್ರಮ ಸ್ಥಳದಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರ ವ್ಯವಸ್ಥೆ ಮಾಡಲಾಗುತ್ತದೆ. ಬರುವವರನ್ನು ಪರೀಕ್ಷಿಸಲಾಗುವುದು. ವೇದಿಕೆಯ ರಚನಾತ್ಮಕ ಸ್ಥಿರತೆಯನ್ನು ಸಹ ಪರಿಶೀಲಿಸಲಾಗುವುದು. ಸ್ಥಳದಲ್ಲಿ ಅಗ್ನಿ ಸುರಕ್ಷತೆ ಬಗ್ಗೆಯೂ ಪರಿಶೋಧನೆ ಮಾಡಲಾಗುವುದು. ಹವಾಮಾನ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮನವಿ, ನಾಳೆ ಮಹತ್ವದ ವಿಚಾರಣೆ

    ಕಾರ್ಯಕ್ರಮ ದಿಢೀರ್ ಬದಲಾವಣೆಯಾದರೆ?
    ಇದಕ್ಕೂ ಸಹ ಮುಂಚಿತವಾಗಿ ಸೂಕ್ತ ತಯಾರಿ ಮಾಡಲಾಗುತ್ತದೆ. ಪ್ರಧಾನಿಗಳು ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ಸ್ಥಳ ತಲುಪಲು ಹವಾಮಾನ ಅಡ್ಡಿಯಾದರೆ, ಮುಂಚಿತವಾಗಿಯೇ ರಸ್ತೆ ಮಾರ್ಗವನ್ನು ಆಯ್ಕೆ ಮಾಡಲಾಗಿರುತ್ತದೆ. ರಸ್ತೆ ಮಾರ್ಗ ಸುರಕ್ಷಿತ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಮಾರ್ಗದಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ.

    ಹೆಲಿಕಾಪ್ಟರ್ ಮಾರ್ಗ ಏಕೆ ಬದಲಾಗುತ್ತೆ?
    ಹೆಲಿಕಾಪ್ಟರ್ ಹಾರಾಡುವಾಗ 1,000 ಮೀಟರ್ ದೂರದ ದಾರಿಯು ಪೈಲಟ್‍ಗೆ ಕಾಣುವಂತಿರಬೇಕು. ಚಳಿಗಾಲದಲ್ಲಿ ಅಥವಾ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಗೊತ್ತುಪಡಿಸಿದ ಮಾರ್ಗಗಳಲ್ಲಿ ತೊಂದರೆ ಇದೆ ಎಂದಾಗ ಪ್ರವಾಸ ರದ್ದುಗೊಳಿಸಿ ಮಾರ್ಗ ಬದಲಿಸಲಾಗುತ್ತದೆ. ತಕ್ಷಣ ಅಗತ್ಯ ಸಿದ್ಧತೆಗಳೊಂದಿಗೆ ಪರ್ಯಾಯವಾಗಿ ರಸ್ತೆ ಮಾರ್ಗದಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಲಾಗುತ್ತದೆ. ಚಳಿಗಾಲ ಅಥವಾ ಮಳೆಗಾದಲ್ಲಿ ಹಲವು ಬಾರಿ ಹೆಲಿಕಾಪ್ಟರ್ ಪ್ರಯಾಣ ರದ್ದಾಗುವುದು ಸಾಮಾನ್ಯ. ಹೀಗಾಗಿ ಮೊದಲೇ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ಆಗಿರುತ್ತದೆ

    ರಸ್ತೆ ಮಾರ್ಗದಲ್ಲಿ ಭದ್ರತೆ ಹೇಗಿರುತ್ತೆ?
    ಇಂತಹ ವೇಳೆ ರಾಜ್ಯ ಪೊಲೀಸರು ಸ್ಥಳೀಯವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಸ್ಥಳೀಯ ಪೊಲೀಸರು ಒಪ್ಪಿಗೆ ನೀಡುವವರೆಗೂ ಪ್ರಧಾನಿ ಸಂಚಾರಕ್ಕೆ ಎಸ್‍ಪಿಜಿ ಅನುಮತಿ ನೀಡುವುದಿಲ್ಲ. ಪ್ರಧಾನಿ ವಾಹನ ಹಾಗೂ ಬೆಂಗಾವಲು ಪಡೆಯನ್ನು ರಾಜ್ಯ ಪೊಲೀಸರ ವಾಹನವು ಮುನ್ನಡೆಸಬೇಕು. ಆಯಾ ಜಿಲ್ಲೆಯ ಎಸ್‍ಪಿ ದರ್ಜೆಯ ಸಮವಸ್ತ್ರ ಇಲ್ಲದ ಅಧಿಕಾರಿ ಜೊತೆಗಿರಬೇಕು. ಪ್ರಧಾನಿಯು ಶಿಷ್ಟಾಚಾರ ಬದಿಗೊತ್ತಿ ಜನರ ಹತ್ತಿರ ಹೋಗಲು ಬಯಸಿದಾಗ, ಭದ್ರತೆಯ ಅಪಾಯವಿದ್ದಲ್ಲಿ ಎಸ್‍ಪಿಜಿ ಪ್ರಧಾನಿ ಅವರನ್ನು ತಡೆಯಬಹುದು. ರ‍್ಯಾಲಿ, ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರಧಾನಿಯನ್ನು ಜನರು ಸುತ್ತುವರಿಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಎಚ್ಚರವಹಿಸಬೇಕು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ

    ಭದ್ರತೆಯಲ್ಲಿ ಯಾರಿರುತ್ತಾರೆ?
    ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಪಡೆಗಳಲ್ಲಿರುವ ಉತ್ಕೃಷ್ಟ ಸಾಮಥ್ರ್ಯದ ಯೋಧರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಕಠಿಣ ತರಬೇತಿ ನೀಡಲಾಗಿರುತ್ತದೆ. ಪ್ರಧಾನಿಗೆ ಭದ್ರತೆ ವೇಳೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತಿರಬೇಕು. ಎಸ್‍ಪಿಜಿ ಅನುಮತಿ ಇಲ್ಲದೇ ಅವರು ಕರ್ತವ್ಯದಿಂದ ಬಿಡುಗಡೆ ಪಡೆಯುವಂತಿಲ್ಲ.

    ಪ್ರಧಾನಿ ಓಡಾಟಕ್ಕೆ ವ್ಯವಸ್ಥಿತ ‘ಕಾರ್‌ಕೇಡ್‌’
    ಇದನ್ನು ಗೃಹ ಸಚಿವಾಲಯ ವ್ಯವಸ್ಥೆ ಮಾಡುತ್ತದೆ. ಪ್ರಧಾನಿ ಒಬ್ಬರೇ ಭೇಟಿ ನೀಡುವಾಗ ವಾಹನಗಳ ಸಂಖ್ಯೆ 8 ಮೀರಬಾರದು. ಪ್ರಧಾನಿ ಜೊತೆಗೆ ಸಂಗಾತಿ, ಗಣ್ಯರಿದ್ದರೆ ವಾಹನಗಳ ಸಂಖ್ಯೆ ಹೆಚ್ಚಿಸಬಹುದು. ಪೈಲಟ್ ಕಾರ್ (ಕಾರ್‍ಕೇಡ್ ಮುಂಭಾಗ ಇರುತ್ತೆ), ಟೆಕ್ನಿಕಲ್ ಕಾರ್ (ನೆಟ್‍ವರ್ಕ್ ಜಾಮರ್ ಮತ್ತಿತರ ತಾಂತ್ರಿಕ ಉಪಕರಣ ಹೊಂದಿರುತ್ತದೆ), ರೈಡರ್ಸ್ (ಪ್ರಧಾನಿ ಕಾರು ಚಲಿಸುವ ನಾಲ್ಕು ದಿಕ್ಕುಗಳಿಗೂ ಒಂದೊಂದು ಕಾರು), ಫ್ಲ್ಯಾಗ್ ಕಾರ್ (ಪ್ರಧಾನಿ ಸಾಗುವ ಕಾರು), ಅಂಬುಲೆನ್ಸ್ (ಪ್ರಧಾನಿಗೆ ಅಗತ್ಯ ಚಿಕಿತ್ಸೆಗೆ), ಟೇಲ್ ಕಾರ್ (ಕಾರ್‍ಕೇಡ್ ವ್ಯವಸ್ಥೆಯ ಕೊನೆಯ ಕಾರು). ಹೀಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಇದು ಪ್ರಧಾನಿ ಅವರ ಎಲ್ಲ ರಾಜ್ಯಗಳ ಪ್ರವಾಸಕ್ಕೂ ಅನ್ವಯಿಸುತ್ತದೆ.

  • ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ಎಸ್‍ಪಿಜಿ ಮಸೂದೆ ಪಾಸ್

    ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ಎಸ್‍ಪಿಜಿ ಮಸೂದೆ ಪಾಸ್

    ನವದೆಹಲಿ: ವಿಶೇಷ ಭದ್ರತಾ ಪಡೆ(ತಿದ್ದುಪಡಿ) ಮಸೂದೆ-2019 ಇಂದು ರಾಜ್ಯಸಭೆಯಲ್ಲಿ ಪಾಸ್ ಆಗಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ.

    ಮಂಗಳವಾರ ಸಂಜೆ ಅಂತಿಮವಾಗಿ ಮಸೂದೆಯನ್ನು ಪಾಸ್ ಮಾಡಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಈ ವೇಳೆ ಕಾಂಗ್ರೆಸ್ ಸದನದಿಂದ ಹೊರ ನಡೆಯಿತು. ನಂತರ ಮಸೂದೆಯನ್ನು ಪಾಸ್ ಮಾಡಲಾಯಿತು.

    ಎಸ್‍ಪಿಜಿ ಮಸೂದೆಯು ಈಗಾಗಲೇ ಲೋಕಸಭೆಯಲ್ಲಿ ಪಾಸ್ ಆಗಿತ್ತು. ಮಂಗಳವಾರ ರಾಜ್ಯಸಭೆಯಲ್ಲಿ ಚರ್ಚಿಸಿ ಅನುಮತಿ ಪಡೆಯಲಾಯಿತು. ಇದೀಗ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ.

    ಮೇಲ್ಮನೆಯಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ಅಮಿತ್ ಶಾ ಅವರು ಕಾಂಗ್ರೆಸ್ ಆರೋಪವನ್ನು ತಿರಸ್ಕರಿಸಿದರು. ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮೊದಲೆ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ. ಇದು ಎಸ್‍ಪಿಜಿ ಕಾಯ್ದೆಗೆ ತಂದಿರುವ 5ನೇ ತಿದ್ದುಪಡಿಯಾಗಿದ್ದು, ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ಈ ತಿದ್ದುಪಡಿ ಮಾಡಿಲ್ಲ. ಆದರೆ ಈ ಹಿಂದಿನ ನಾಲ್ಕು ತಿದ್ದುಪಡಿಯನ್ನು ಒಂದೇ ಕುಟುಂಬವನ್ನು ಆಧರಿಸಿ ಮಾಡಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಏಕೆ ಗಾಂಧಿ ಕುಟುಂಬ ಒಂದಕ್ಕೆ ಎಸ್‍ಪಿಜಿ ಭದ್ರತೆ ನೀಡುವಂತೆ ಒತ್ತಾಯಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಪ್ರತಿಷ್ಠೆಯ ಆಧಾರದ ಮೇಲೆ ಭದ್ರತಾ ವ್ಯವಸ್ಥೆಯನ್ನು ಮಾಡಿಲ್ಲ. ಕೇವಲ ಗಾಂಧಿ ಕುಟುಂಬಕ್ಕೆ ಮಾತ್ರ ಮಾತ್ರ ಏಕೆ ಎಸ್‍ಪಿಜಿ ಭದ್ರತೆ ಬೇಕು? ಎಸ್‍ಪಿಜಿ ಭದ್ರತೆಯನ್ನು ರಾಷ್ಟ್ರದ ಮುಖ್ಯಸ್ಥರಿಗೆ ಮಾತ್ರ ನೀಡಲಾಗುತ್ತಿದೆ. ಇವರ ಹೊರತು ಯಾರಿಗೂ ಈ ಭದ್ರತೆಯನ್ನು ನೀಡುತ್ತಿಲ್ಲ. ನಾವು ಒಂದು ಕುಟುಂಬವನ್ನು ದೂಷಿಸುತ್ತಿಲ್ಲ. ಇದರಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಗಾಂಧಿ ಕುಟುಂಬಕ್ಕೆ ಮಾತ್ರವಲ್ಲ ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಐ.ಕೆ.ಗುಜ್ರಾಲ್, ಚಂದ್ರಶೇಖರ್, ಎಚ್.ಡಿ.ದೇವೇಗೌಡ ಹಾಗೂ ಮನಮೋಹನ್ ಸಿಂಗ್ ಅವರ ಭದ್ರತೆಯನ್ನು ಸಹ ಕಡಿಮೆ ಮಾಡಲಾಗಿದೆ ಎಂದು ಇದೇ ವೇಳೆ ವಿವರಿಸಿದರು.

  • ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದ ಸಾಧ್ವಿ ಪ್ರಜ್ಞಾಸಿಂಗ್

    ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದ ಸಾಧ್ವಿ ಪ್ರಜ್ಞಾಸಿಂಗ್

    ನವದೆಹಲಿ: ನಾಥೂರಾಮ್ ಗೂಡ್ಸೆಯನ್ನು ದೇಶ ಭಕ್ತ ಎಂದು ಹೇಳುವ ಮೂಲಕ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ತೀವ್ರ ಚರ್ಚೆಗೆ ಗುರಿಯಾಗಿದ್ದಾರೆ.

    ಲೋಕಸಭೆಯ ಅಧಿವೇಶನದಲ್ಲಿ ಸಾಧ್ವಿ ಈ ಹೇಳಿಕೆ ನೀಡಿದ್ದು, ಹೀಗೆ ಹೇಳುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಪ್ರತಿಭಟನೆಗೆ ಮುಂದಾಗಿದ್ದಾರೆ.

    ಡಿಎಂಕೆ ಸಂಸದ ಎ.ರಾಜಾ ಅವರು ವಿಶೇಷ ಭದ್ರತಾ ಪಡೆ (ಎಸ್‍ಪಿಜಿ) ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಏಕೆ ಕೊಲೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯೆ ಪ್ರವೇಶಿಸಿ, ದೇಶಭಕ್ತನ ಉದಾಹರಣೆಯನ್ನು ನೀವು ಈ ಸಂದರ್ಭದಲ್ಲಿ ಕೊಡಬೇಡಿ ಎಂದು ಕಿಡಿಕಾರಿದ್ದಾರೆ.

    ಇದನ್ನು ಸ್ವತಃ ಗೋಡ್ಸೆ ಒಪ್ಪಿಕೊಂಡಿದ್ದಾರೆ. 32 ವರ್ಷಗಳಿಂದ ಗಾಂಧಿ ಮೇಲೆ ದ್ವೇಷ ಇತ್ತು ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿಯವರ ವಿಚಾರಧಾರೆಗಳು ಪ್ರತ್ಯೇಕವಾಗಿದ್ದರಿಂದ ಗೋಡ್ಸೆ ಅವರನ್ನು ಹತ್ಯೆ ಮಾಡಿದ ಎಂದು ರಾಜಾ ಅವರು ಲೋಕಸಭೆಯ ಕಲಾಪದಲ್ಲಿ ತಿಳಿಸಿದ್ದಾರೆ.

    ರಾಜಾ ಅವರು ಮಾತನಾಡುತ್ತಿದ್ದ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯ ಪ್ರವೇಶಿಸಿದ್ದಕ್ಕೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆಗ ಬಿಜೆಪಿ ಸಂಸದರು ಸಾಧ್ವಿಯವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದರು.

    ಬೆದರಿಕೆಯನ್ನಾಧಿರಿಸಿ ಭದ್ರತೆ ಇರಬೇಕೆ ಹೊರತು, ರಾಜಕೀಯ ಕಾರಣಗಳಿಂದಲ್ಲ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು. ಇದಕ್ಕೆ ಸಂಸದ ರಾಜಾ ಪ್ರತಿಕ್ರಿಯಿಸಿ ಎಸ್‍ಪಿಜಿ ತಿದ್ದುಪಡಿ ಮಸೂದೆಯನ್ನು ಮರುಪರಿಶೀಲಿಸಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದರು. ಈ ವೇಳೆ ಸದನದಲ್ಲಿ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

  • ನಮ್ಮ ಕುಟುಂಬವನ್ನು 28 ವರ್ಷ ರಕ್ಷಿಸಿದ್ದಕ್ಕೆ ಧನ್ಯವಾದ – ಎಸ್‍ಪಿಜಿಗೆ ಸೋನಿಯಾ ಭಾವನಾತ್ಮಕ ಪತ್ರ

    ನಮ್ಮ ಕುಟುಂಬವನ್ನು 28 ವರ್ಷ ರಕ್ಷಿಸಿದ್ದಕ್ಕೆ ಧನ್ಯವಾದ – ಎಸ್‍ಪಿಜಿಗೆ ಸೋನಿಯಾ ಭಾವನಾತ್ಮಕ ಪತ್ರ

    ನವದೆಹಲಿ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದ ನಂತರ ನಮ್ಮ ಕುಟುಂಬವನ್ನು 28 ವರ್ಷ ರಕ್ಷಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಎಸ್‍ಪಿಜಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

    ಎಸ್‍ಪಿಜಿ ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ಅವರಿಗೆ ಈ ವಿಚಾರವಾಗಿ ಪತ್ರ ಬರೆದಿರುವ ಸೋನಿಯಾ ಗಾಂಧಿ ಅವರು, ಬಹಳ ಕಾಳಜಿ, ವಿವೇಚನೆಯಿಂದ ನಮ್ಮ ಕುಟುಂಬವನ್ನು 28 ವರ್ಷಗಳ ಕಾಲ ರಕ್ಷಿಸಿದ ಅತ್ಯುತ್ತಮ ಶಕ್ತಿ ಎಸ್‍ಪಿಜಿ ನನ್ನ ಮೆಚ್ಚುಗೆ ಮತ್ತು ಕೃತಜ್ಞತೆಗಳು ಎಂದು ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.

    ಕಳೆದ 28 ವರ್ಷಗಳಿಂದ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಹಾಗೂ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ್ದ ವಿಶೇಷ ಭದ್ರತಾ ಪಡೆ ಎಸ್‍ಪಿಜಿಯನ್ನು ಶುಕ್ರವಾರ ಹಿಂಪಡೆದಿದೆ. ಅವರಿಗೆ ಸಿಆರ್‍ಪಿಎಫ್ ಝಡ್ ಪ್ಲಸ್ ಭದ್ರತೆಯನ್ನು ನೀಡಲಾದೆ. ಹೀಗಾಗಿ ಸೋನಿಯಾ ಅವರು ಎಸ್‍ಪಿಜಿ ಮಹೋನ್ನತ ಶಕ್ತಿಯಾಗಿದ್ದು, ಅದರ ಸದಸ್ಯರು ಅವರಿಗೆ ನಿಯೋಜಿಸಲಾದ ಪ್ರತಿಯೊಂದು ಕಾರ್ಯದಲ್ಲೂ ಧೈರ್ಯ ಮತ್ತು ದೇಶಪ್ರೇಮವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

    ಕಳೆದ 28 ವರ್ಷಗಳಿಂದ ಎಸ್‍ಪಿಜಿ ಭದ್ರತೆಯಲ್ಲಿ ನಾನು ಮತ್ತು ನನ್ನ ಕುಟುಂಬ ಉತ್ತಮ ಭದ್ರತೆಯಲ್ಲಿ ಇದ್ದೇವೆ ಎಂದು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಅನುಭವಿಸಿದ್ದೇವೆ. ಎಸ್‍ಪಿಜಿಯ ವೃತ್ತಿಪರತೆ, ಕಾರ್ಯಧಕ್ಷತೆ, ಅವರ ಪ್ರಮಾಣಿಕತೆಯನ್ನು ನಾನು ಶ್ಲಾಘಿಸುತ್ತೇನೆ. ಇಷ್ಟು ದಿನ ನನ್ನ ಇಡೀ ಕುಟುಂಬದ ರಕ್ಷಣೆ ಮತ್ತು ಯೋಗಕ್ಷೇಮವನ್ನು ನೋಡಿಕೊಂಡ ಎಸ್‍ಪಿಜಿಗೆ ನನ್ನ ಧನ್ಯವಾದಗಳು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದಕ್ಕೂ ಮುನ್ನಾ ಈ ವಿಚಾರವಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಎಸ್‍ಪಿಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ಕಡೆಯಿಂದ ಧನ್ಯವಾದಗಳು. ಕಳೆದ 28 ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬವನ್ನು ರಕ್ಷಿಸಲು ದಣಿವರಿಯದೇ ಕೆಲಸ ಮಾಡಿದ್ದೀರಿ. ನಿಮ್ಮ ಈ ನಿಸ್ವಾರ್ಥ ಸೇವೆಗೆ ಚಿರಋಣಿ. ಅಲ್ಲದೆ ನಿಮ್ಮ ನಿರಂತರ ಬೆಂಬಲ ಹಾಗೂ ವಾತ್ಸಲ್ಯದಿಂದ ತುಂಬಿದ್ದ ಪ್ರಯಾಣಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಬರೆದುಕೊಂಡಿದ್ದರು.

    ಗಾಂಧಿ ಕುಟುಂಬಕ್ಕೆ ಭದ್ರತೆಯನ್ನು ವಾಪಸ್ ಪಡೆದಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದ ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನಿಗಳದ್ದೂ ಜೀವವೇ, ಸೋನಿಯಾ ಗಾಂಧಿ ಕುಟುಂಬದವರದ್ದು ಜೀವವೇ. ಕೇಂದ್ರ ಸರ್ಕಾರ ಬೇರೆಯವರಿಗೆ ನೀಡಿದ್ದ ಭದ್ರತೆ ಹಿಂಪಡೆಯಲು ಕಾರಣವೇನು? ಈ ಕೂಡಲೇ ಅವರಿಗೆ ಎಸ್‍ಪಿಜಿ ಭದ್ರತೆ ನೀಡಬೇಕೆಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಲ್ಲಿ ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.

    ಪ್ರಸ್ತುತ ಎಸ್‍ಪಿಜಿಯಲ್ಲಿ 3 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಬೆದರಿಕೆ ಕರೆಗಳನ್ನು ಆಧರಿಸಿ ಪ್ರಧಾನಿ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರಿಗೆ ಈ ಭದ್ರತೆಯನ್ನು ನೀಡಲಾಗುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ ಎಸ್‍ಪಿಜಿಯನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಂತರ 1991ರಲ್ಲಿ ಎಸ್‍ಪಿಜಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಕ್ಕೆ 10 ವರ್ಷಗಳ ಕಾಲ ಭದ್ರತೆ ನೀಡುವಂತೆ ನಿಯಮ ರೂಪಿಸಲಾಗಿದೆ.