Tag: Sperm

  • ವಿದೇಶಗಳಲ್ಲಿ ಬ್ರಿಟನ್‌ನ ದಾನಿಗಳ ವೀರ್ಯ ಬಳಕೆ ಏಕೆ ಕಳವಳಕಾರಿ?

    ವಿದೇಶಗಳಲ್ಲಿ ಬ್ರಿಟನ್‌ನ ದಾನಿಗಳ ವೀರ್ಯ ಬಳಕೆ ಏಕೆ ಕಳವಳಕಾರಿ?

    ಳೆದ ಕೆಲವು ವರ್ಷಗಳಿಂದ ವೀರ್ಯದಾನಿಗಳ ಬೇಡಿಕೆ ವಿಶ್ವದೆಲ್ಲೆಡೆ ಗಮನಾರ್ಹವಾಗಿ ಹೆಚ್ಚಾಗಿದೆ. ಕೆಲವು ದೇಶಗಳಲ್ಲಿ ವೀರ್ಯದಾನ (Sperm Donation) ವೃತ್ತಿಯಾಗಿ ಮಾರ್ಪಟ್ಟಿದೆ. ಇಂಗ್ಲೆಂಡ್‌ನಲ್ಲಿ (England)  10 ಕುಟುಂಬಗಳಿಗೆ ಒಬ್ಬ ವೀರ್ಯದಾನಿಯಿಂದ ವೀರ್ಯವನ್ನು ಒದಗಿಸಬಹುದು ಎಂಬ ನಿಯಮವಿದೆ. ಆದರೆ ದಾನಿಗಳ ವೀರ್ಯವನ್ನು ವಿದೇಶಕ್ಕೆ ಕಳುಹಿಸಲು ಯಾವುದೇ ನಿರ್ಬಂಧವಿಲ್ಲ.

    ಯಾರಿಂದ ವೀರ್ಯ ದಾನಿಗಳಿಗೆ ಬೇಡಿಕೆ? 

    ಅನೇಕ ಜನರು ಮದುವೆ ಮತ್ತು ಸಾಂಪ್ರದಾಯಿಕ ಕುಟುಂಬ ಜೀವನವನ್ನು ತೊರೆದು, ವೃತ್ತಿ ಜೀವನದತ್ತ ಗಮನ ಹರಿಸುತ್ತಿದ್ದಾರೆ. ಬಳಿಕ ವಯಸ್ಸಾದ ಮೇಲೆ ಮದುವೆ ಆಗಲು ನಿರ್ಧರಿಸುತ್ತಾರೆ. ಇದರಿಂದ ಗರ್ಭ ಧರಿಸುವ ಸಾಮರ್ಥ್ಯ ಕ್ಷೀಣಿಸಿ, ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಇದರಿಂದ ಜನ ವೀರ್ಯ ಬ್ಯಾಂಕ್‌ಗಳ ಸಹಾಯವನ್ನು ಪಡೆಯುತ್ತಿದ್ದಾರೆ. ಹೆಚ್ಚಾಗಿ ಒಂಟಿ ಮಹಿಳೆಯರು ಮತ್ತು ಲೆಸ್ಬಿಯನ್‌ ದಂಪತಿಯಿಂದ ವೀರ್ಯದಾನಿಗಳಿಗೆ ಭಾರೀ ಬೆಡಿಕೆ ಇದೆ. ಸಲಿಂಗ ಪ್ರೇಮ ವಿವಾಹ ಕಾನೂನು ಬದ್ಧಗೊಳಿಸಿರುವುದು ವೀರ್ಯ ದಾನ ಹೆಚ್ಚಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. 

    ಸಲಿಂಗ ಪ್ರೇಮಿಗಳು ವಿರ್ಯದಾನಿಗಳ ಮೊರೆ ಹೋಗ್ತಿರೋದ್ಯಾಕೆ? 

    ಬ್ರಿಟನ್ ದೇಶದ ಅನೇಕ ಜನರು ವಿಶೇಷವಾಗಿ ಮಹಿಳೆಯರು ಮತ್ತು ಸಲಿಂಗ ಪ್ರೇಮದಲ್ಲಿರುವವರು ಮಕ್ಕಳನ್ನು ಪಡೆಯಲು ವೀರ್ಯ ದಾನಿಗಳ ಮೊರೆಹೋಗುತ್ತಿದ್ದಾರೆ. ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಮತ್ತು ಸಂತಾನೋತ್ಪತ್ತಿ ತಂತ್ರಜ್ಞಾನಗಳ (ART) ಬಳಕೆಯು ಹೆಚ್ಚಿರುವುದರಿಂದ ವೀರ್ಯ ಬ್ಯಾಂಕ್‌ಗಳ ಮೇಲಿನ ಅವಲಂಬನೆಯು ಹೆಚ್ಚಾಗಿದೆ.

    ವೀರ್ಯದಾನಿಗಳಿಗೆ ಹಣ ಕೊಡ್ತಾರಾ? 

    ಇಂಗ್ಲೆಂಡ್‌ನಲ್ಲಿ ಬ್ಲಡ್‌ ಬ್ಯಾಂಕ್‌ಗಳಂತೆ ವೀರ್ಯದ ಬ್ಯಾಂಕ್‌ಗಳು ಭಾರೀ ತಲೆ ಎತ್ತಿವೆ. ಇದರಿಂದಾಗಿ ವೀರ್ಯ ದಾನಕ್ಕೆ ಜನ ಮುಂದಾಗುತ್ತಿದ್ದಾರೆ. ವೀರ್ಯದ ಫಲವತ್ತತೆಗೆ ಅನುಸಾರವಾಗಿ ವೀರ್ಯದಾನಿಗಳಿಗೆ ಹಣವನ್ನು ಸಹ ನೀಡಲಾಗುತ್ತಿದೆ. ಅನೇಕ ಮಂದಿ ಇದನ್ನೇ ವೃತ್ತಿಯಾಗಿಸಿ ಕೊಂಡಿದ್ದಾರೆ. ವೀರ್ಯ ದಾನದಿಂದಲೇ ಕೆಲವರು ಭಾರೀ ಹಣ ಸಂಪಾದಿಸುತ್ತಿದಾರೆ. ಬ್ರಿಟನ್‌ನಲ್ಲಿನ ಕಾನೂನು ಮತ್ತು ಸಾಮಾಜಿಕ ಬದಲಾವಣೆಗಳು ಸಹ ಈ ಬೆಳವಣಿಗೆಗೆ ಕಾರಣವಾಗಿದೆ. 

    ವೀರ್ಯದಾನದಿಂದ ಉಪಯೋಗವೇನು? 

    ದಾನಿಗಳಿಂದ ಪಡೆದ ವೀರ್ಯದಿಂದ ಮಕ್ಕಳಿಲ್ಲದವರು ಮಕ್ಕಳನ್ನು ಪಡೆಯಲು ಅನೂಕೂಲವಾಗಲಿದೆ. ಇನ್ನೂ ಕೆಲವೊಂದು ವಿಶೇಷ ಸಂದರ್ಭದಲ್ಲಿ ಮೃತ ವ್ಯಕ್ತಿ ಅಥವಾ ಅನಾರೋಗ್ಯಕ್ಕೊಳಗಾದ ವ್ಯಕ್ತಿಯ ವೀರ್ಯವನ್ನು ಸಂಗ್ರಹಿಸಿ ಮಗುವನ್ನು ಪಡೆಯಲು ಸಾಧ್ಯತೆ ಇದೆ. ಈ ರೀತಿಯ ಪ್ರಕ್ರಿಯೆಗೆ ಭಾರತದಲ್ಲಿ ನ್ಯಾಯಾಲಯದ ಅನುಮತಿ ಬೇಕು. 

    ವೀರ್ಯದಾನ ಉದ್ಯಮದಿಂದ ಇರುವ ಆತಂಕಗಳೇನು? 

    ಒಮ್ಮೆ ವೀರ್ಯ ಹೆಪ್ಪುಗಟ್ಟಿದ ನಂತರ ಅದನ್ನು ಹಲವಾರು ವರ್ಷಗಳ ಕಾಲ ಬಳಕೆಗೆಗೆ ಅವಕಾಶವಿದೆ. ಅಂದರೆ ದಾನಿ ವೀರ್ಯವನ್ನು ವರ್ಷಗಳ ಅಥವಾ ದಶಕಗಳವರೆಗೆ ಬಳಸಬಹುದು. ಇದರಿಂದ ಯುವ ಜನತೆ ತಮ್ಮ ಪೋಷಕರಿಗಿಂತ ಹಿರಿಯರ ವೀರ್ಯದಿಂದ ಮಕ್ಕಳನ್ನು ಪಡೆಯಬಹುದು. 

    ಬ್ರಿಟನ್‌ನಿಂದ ವಿದೇಶಕ್ಕೆ ಕಳುಹಿಸುವ ವೀರ್ಯದ ಮೇಲೆ ಅಂತಹ ಯಾವುದೇ ಮಿತಿಯಿಲ್ಲ. ಈ ಕಾನೂನು ಲೋಪದೋಷದಿಂದ ಇದು ಉದ್ಯಮವಾಗಿ ಪರಿಣಮಿಸಿದೆ. ಯುರೋಪಿನಾದ್ಯಂತ ಈ ಬೆಳವಣಿಗೆ ಮುಂದೆ ಸಹೋದರ ಸಹೋದರಿಯರ ನಡುವೆ ಸಂಬಂಧಕ್ಕೆ ಕಾರಣವಾಗಲಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ವಿಶೇಷ ವರದಿಯಲ್ಲಿ ತಿಳಿಸಿದೆ. ಈ ರೀತಿಯ ಸಂಬಂಧದಿಂದ ಹುಟ್ಟುವ ಮಕ್ಕಳು ಅಂಗವಿಕಲರು ಹಾಗೂ ಆನಾರೋಗ್ಯ ಪೀಡಿತರು ಆಗುವ ಸಂಭವ ಹೆಚ್ಚಿರುತ್ತದೆ. 

    ವೀರ್ಯದಾನದಿಂದ ಜನಿಸಿದ ಮಕ್ಕಳು ಅಪರಾಧ ಕೃತ್ಯ ಎಸಗಿದಾಗ, ಅಪಘಾತ ಇನ್ನಿತರ ಸಮಯದಲ್ಲಿ ಮೃತಪಟ್ಟರೆ, ಈ ವೇಳೆ ಗುರುತು ಪತ್ತೆಗೆ ಮಾಡುವ ಡಿಎನ್ಎ ಟೆಸ್ಟ್ ವರದಿ ತೀವ್ರ ಗೊಂದಲಕ್ಕೆ ಎಡೆಮಾಡಿಕೊಡಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

    UK ವೀರ್ಯ ದಾನ ನಿಯಮಗಳ ನಿಯಂತ್ರಣ ಯಾರದ್ದು?

    ವೀರ್ಯ ಮತ್ತು ಅಂಡಾಣು ದಾನಕ್ಕೆ ಸಂಬಂಧಿಸಿದಂತೆ ಬ್ರಿಟನ್‌ನಲ್ಲಿನ ನಿಯಮಗಳನ್ನು ಮಾನವ ಫಲೀಕರಣ ಮತ್ತು ಭ್ರೂಣಶಾಸ್ತ್ರ ಪ್ರಾಧಿಕಾರ (HFEA) ನಿಯಂತ್ರಿಸುತ್ತದೆ. ವಿದೇಶಗಳಿಗೆ ಕಳಿಸುವ ವೀರ್ಯದ ಬಗ್ಗೆ ಇದು ಯಾವ ನಿಯಂತ್ರಣ ಹೊಂದಿರುವುದಿಲ್ಲ. ಇದರಿಂದ ದಾನಿಯ ವೀರ್ಯವನ್ನು ಎಷ್ಟು ಬಾರಿ ಬಳಸಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮೇಲ್ವಿಚಾರಣೆ ಇರುವುದಿಲ್ಲ. 

    ಈ ಹಿಂದೆ ವೀರ್ಯ ಆಮದು ಮಾಡಿಕೊಳ್ತಿದ್ದ ಬ್ರಿಟನ್‌!

    ಐದು ವರ್ಷಗಳ ಹಿಂದೆ ಬ್ರಿಟನ್ ಮುಖ್ಯವಾಗಿ  ಅಮೆರಿಕ ಮತ್ತು ಡೆನ್ಮಾರ್ಕ್‌ನಿಂದ ವೀರ್ಯವನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ 2019 ಮತ್ತು 2021 ರ ನಡುವೆ, ಯುಕೆ 7,542 ಸ್ಟ್ರಾಗಳ ವೀರ್ಯವನ್ನು ರಫ್ತು ಮಾಡಿದೆ. ಈ ಏಪ್ರಿಲ್‌ ತಿಂಗಳಲ್ಲಿ ಮ್ಯಾಂಚೆಸ್ಟರ್‌ನಲ್ಲಿ ವಿಶ್ವದ ಅತಿದೊಡ್ಡ ವೀರ್ಯ ಮತ್ತು ಅಂಡಾಣು ಬ್ಯಾಂಕ್‌ ಘಟಕವನ್ನು ಬ್ರಿಟನ್‌ ತೆರೆದಿದೆ. 

  • ಟಾರ್ಗೆಟ್ 150 – 129 ಮಕ್ಕಳ ಜನನಕ್ಕೆ ಕಾರಣನಾದ 66ರ ವೀರ್ಯದಾನಿ

    ಟಾರ್ಗೆಟ್ 150 – 129 ಮಕ್ಕಳ ಜನನಕ್ಕೆ ಕಾರಣನಾದ 66ರ ವೀರ್ಯದಾನಿ

    ಲಂಡನ್: ಯುರೋಪ್‍ನ ನಿವೃತ್ತ ಗಣಿತ ಶಿಕ್ಷಕರೊಬ್ಬರು ವೀರ್ಯ ದಾನ ಮಾಡಿ 129 ಮಕ್ಕಳ ಜನನಕ್ಕೆ ಕಾರಣವಾಗಿ ಸುದ್ದಿಯಾಗಿದ್ದಾರೆ.

    ಹೌದು 66 ವರ್ಷದ ಕ್ಲೈವ್ ಜೋನ್ಸ್ ಅವರು ಸುಮಾರು ಒಂದು ದಶಕದಿಂದ ಫೇಸ್‍ಬುಕ್ ಮೂಲಕ ತಮ್ಮನ್ನು ಸಂಪರ್ಕಿಸುವವರಿಗೆ ವೀರ್ಯ ದಾನ ಮಾಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ 129 ಮಕ್ಕಳ ಜನನಕ್ಕೆ ಕ್ಲೈವ್ ಜೋನ್ಸ್ ಕಾರಣರಾಗಿದ್ದಾರೆ. ಅಲ್ಲದೇ ಇನ್ನೂ ಒಂಬತ್ತು ಮಹಿಳೆಯರು ಗರ್ಭಿಣಿಯಾಗಿದ್ದು, ಮುಂದೆ ಇವರಿಂದ 138 ಮಕ್ಕಳು ಜನಿಸಿದಂತಾಗುತ್ತದೆ.

    ಈ ಕುರಿತಂತೆ ಕ್ಲೈವ್ ಜೋನ್ಸ್ ವೀರ್ಯದಾನದ ಮೂಲಕ 150 ಮಕ್ಕಳ ಜನನಕ್ಕೆ ತಾವು ಕಾರಣವಾಗಬೇಕು ಎನ್ನುವ ಗುರಿಯನ್ನು ಹೊಂದಿದ್ದು, ಜಗತ್ತಿನ ಅತ್ಯಂತ ಸಮೃದ್ಧ ವೀರ್ಯ ದಾನಿ ಎಂದು ತಮ್ಮನ್ನು ಕರೆಸಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಫೇಸ್‍ಬುಕ್ ಮೂಲಕ ಉಚಿತವಾಗಿ ಅನೇಕ ಕುಟುಂಬಗಳಿಗೆ ತಮ್ಮ ವೀರ್ಯ ದಾನ ಮಾಡುವುದರ ಬಗ್ಗೆ ಕ್ಲೈವ್ಸ್ ಜೋನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ನನಗೆ ಹಲವಾರು ಕ್ಲಿನಿಕ್‌ಗಳು ಮತ್ತು ವೀರ್ಯ ಪಡೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುವುದು ತಿಳಿದಿದೆ. ಆದರೆ ಎಲ್ಲರಿಗೂ ದಾನ ಮಾಡುವುದಿಲ್ಲ. ಬದಲಿಗೆ ಅಗತ್ಯವಿರುವವರಿಗೆ ಮಾತ್ರ ವೀರ್ಯ ದಾನ ಮಾಡುತ್ತೇನೆ. ನನಗೆ ಬರುವ ಸಂದೇಶಗಳು ಮತ್ತು ಶಿಶುವಿನೊಂದಿಗೆ ತಾಯಂದಿರು ಸಂತೋಷವಾಗಿರುವ ಫೋಟೋಗಳನ್ನು ನೋಡಿದಾಗ ನನಗೂ ಕೂಡ ಸಂತಸವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

    ವೀರ್ಯ ನೀಡಲು ಹಣ ಪಡೆಯುವುದು ನನ್ನ ಪ್ರಕಾರ ಕಾನೂನು ಬಾಹಿರ. ಹಾಗಾಗಿ ನಾನು ಹಣಪಡೆಯುವುದಿಲ್ಲ ಬದಲಿಗೆ ಗಾಡಿಗೆ ಪೆಟ್ರೋಲ್ ಮಾತ್ರ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವೀರ್ಯವನ್ನು 45 ವರ್ಷದವರೆಗೂ ಪಡೆಯಬಹುದು. ಆದರೆ ಕ್ಲೈವ್ಸ್ ಜೋನ್ಸ್ ಅವರಿಗೆ 66 ವರ್ಷವಾಗಿದ್ದು, ಅವರಿಂದ ವೀರ್ಯ ಪಡೆದು, ಗರ್ಭ ಬೆಳೆಸುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಕ್ಲೈವ್ಸ್ ಜೋನ್ಸ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೇಡಿಕೆ ಇದೆ.