Tag: speech

  • ನನ್ನನ್ನು ಎದುರು ಹಾಕೊಂಡು ಯಾರೂ ಗೆಲ್ಲೋಕ್ಕಾಗಲ್ಲ- ಕೆ.ಎನ್.ರಾಜಣ್ಣ ದರ್ಪದ ಮಾತು ವೈರಲ್

    ನನ್ನನ್ನು ಎದುರು ಹಾಕೊಂಡು ಯಾರೂ ಗೆಲ್ಲೋಕ್ಕಾಗಲ್ಲ- ಕೆ.ಎನ್.ರಾಜಣ್ಣ ದರ್ಪದ ಮಾತು ವೈರಲ್

    ತುಮಕೂರು: ನನ್ನನ್ನು ಎದುರು ಹಾಕೊಂಡು ಯಾರೂ ಗೆಲ್ಲೋಕಾಗಲ್ಲ ಎಂಬ ಸಹಕಾರಿ ಸಚಿವ ಕೆ.ಎನ್.ರಾಜಣ್ಣ (KN Rajanna) ರ ದರ್ಪದ ಮಾತು ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

    ತುಮಕೂರಿನಲ್ಲಿ ನಡೆದ ವಾಲ್ಮಿಖಿ ಸಮುದಾಯದ ಅಭಿನಂದನಾ ಸಮಾವೇಶದಲ್ಲಿ ಕೆ.ಎನ್. ರಾಜಣ್ಣ ಮಾಡಿದ್ದ ಅಬ್ಬರದ ಭಾಷಣದ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಧಾರವಾಡ-ಬೆಂಗಳೂರು ನಡುವೆ ಸಂಚರಿಸೋ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ

    ರಾಜಣ್ಣ ಹೇಳಿದ್ದೇನು..?: ತುಮಕೂರು (Tumakuru) ಜಿಲ್ಲೆಯಲ್ಲಿ ನನ್ನನ್ನು ಎದುರು ಹಾಕೊಂಡು ಯಾವನಾದ್ರೂ ಗೆದ್ದು ತೋರಿಸಲಿ. ಅವನು ಯಾವ ಪಾರ್ಟಿಯವನು ಬೇಕಾದರೆ ಆಗಲಿ. ಎಲ್ಲ ಪಾರ್ಟಿಯವರು ನನಗೆ ವಿಶ್ವಾಸದಿಂದ ಇರಲೇಬೇಕು. ತುಮಕೂರು ಜಿಲ್ಲೆಯಲ್ಲಿ ಗೆದ್ದ 11 ಕ್ಷೇತ್ರದ ಶಾಸಕರೂ ನನ್ನೊಂದಿಗೆ ವಿಶ್ವಾಸದಿಂದ ಇದ್ದವರೇ. ಜಿಲ್ಲೆಯಲ್ಲಿ ಗೆದ್ದಂತಹ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ (JDS) ಎಲ್ಲಾ ಶಾಸಕರು ನನ್ನೊಂದಿಗೆ ವಿಶ್ವಾಸದಿಂದ ಇದ್ದವರು. ಹಾಗಾಗಿ ಅವರೆಲ್ಲಾ ಈಗ ಗೆದ್ದಿದ್ದಾರೆ ಎಂದಿದ್ದಾರೆ.

    ಕೆ.ಎನ್.ರಾಜಣ್ಣರನ್ನು ಎದರುಹಾಕೊಂಡು 2018 ಚುನಾವಣೆಯಲ್ಲಿ ಕಾಂಗ್ರೆಸ್‍ (Congress) ನ ಮಾಜಿ ಸಚಿವ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ತಿಪಟೂರು ಶಾಸಕ ಕೆ.ಷಡಕ್ಷರಿ ಸೋತಿದ್ದರು. ಇನ್ನು 2013 ರಲ್ಲಿ ಪರಾಭವಗೊಂಡಿದ್ದ ಜಿ.ಪರಮೇಶ್ವರ್ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸಖ್ಯ ಬೆಳೆಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಸೋಲಿಸಿದ್ದರು. ಈ ಹಿನ್ನೆಲೆಯಲ್ಲಿ ನನ್ನ ಉಸಾಬರಿಗೆ ಯಾರೂ ಬರಬೇಡಿ ಎಂದು ವೇದಿಕೆ ಮೂಲಕ ಕೆ.ಎನ್.ರಾಜಣ್ಣ ಎಚ್ಚರಿಕೆ ಕೊಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕೋಮು ದ್ವೇಷದ ಭಾಷಣ ಮಾಡೋರನ್ನು ಗಡಿಪಾರು ಮಾಡಿ: ಖಾದರ್

    ಕೋಮು ದ್ವೇಷದ ಭಾಷಣ ಮಾಡೋರನ್ನು ಗಡಿಪಾರು ಮಾಡಿ: ಖಾದರ್

    ಮಂಗಳೂರು: ಕೊಲೆಗೆ ನಾವೇ ಪ್ರೇರಣೆ ಎಂದು ಹೇಳಿದವರು ಸಮಾಜಕ್ಕೆ ಅಪಾಯಕಾರಿ. ಇವರೇ ನಮ್ಮ ನಡುವಿನ ನಿಜವಾದ ದೇಶದ್ರೋಹಿಗಳು. ಇಂತವರು ಸಮಾಜಕ್ಕೆ ಭಾರ. ಹೀಗಾಗಿ ಇವರನ್ನು ಗಡಿಪಾರು ಮಾಡಬೇಕೆಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ (U.T Khader) ಆಕ್ರೋಶ ವ್ಯಕ್ತಪಡಿಸಿದರು.

    ಮಂಗಳೂರಿನಲ್ಲಿ ಮಾತನಾಡಿದ ಅವರು, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ (Sharan Pumpwell) ದ್ವೇಷದ ಹೇಳಿಕೆ ನೀಡಿದ್ದಾರೆ. ಉಳ್ಳಾಲದಲ್ಲಿ ಜನ ಸೌಹಾರ್ದತೆಯಿಂದ ಇದ್ದಾರೆ. ಕೋಮುವಾದಿ ಶಕ್ತಿಗಳಿಗೆ ಜನ ಅವಕಾಶ ಕೊಡಲ್ಲ. ಹಿಂದೂ ಆಗಲೀ, ಮುಸ್ಲಿಂ ಆಗಲೀ ಯಾಕೆ ಕೊಲೆಯಾಗಬೇಕು ಕೊಲೆಯಾಗಬೇಕೆಂದು ಬಿಜೆಪಿ (BJP) ಯವರು ಕಾಯುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ಜಾಪುರ ಸುಲಿಗೆ ಪ್ರಕರಣದ ಮತ್ತೊಂದು ವೀಡಿಯೋ ಬಹಿರಂಗ – ಡಿಕ್ಕಿ ಹೊಡೆದು ಬಾನೆಟ್ ಏರಿದ ಕಿಡಿಗೇಡಿ

    ಅಲ್ಲದೆ ಪ್ರಾಣ ಕಳಕೊಂಡವರ ಕುಟುಂಬದ ಅಕ್ಕ-ತಂಗಿಯರ ನೋವು ಇವರಿಗೆ ಅರ್ಥ ಆಗುತ್ತದೆಯೇ?. ಚುನಾವಣೆಗೋಸ್ಕರ, ಮಾಧ್ಯಮದಲ್ಲಿ ಬಿಲ್ಡಪ್ ಸಿಗತ್ತೆ ಅಂತ ಹೇಳಿಕೆ ಕೊಡುತ್ತಾರೆ. ಇವರ ಹೇಳಿಕೆಯಿಂದ ಜನರಲ್ಲಿ ಭಯ ಶುರುವಾಗಿದೆ. ಯಾಕೆ ಇಂಥವರನ್ನು ಸಮಾಜ ಹೊತ್ತುಕೊಳ್ಳಬೇಕು ಗಡಿಪಾರು ಮಾಡಿ ಎಂದು ಅವರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು: ಜನಸಂಖ್ಯಾ ನಿಯಂತ್ರಣ ನೀತಿ ಜಾರಿಯಾಗುತ್ತಾ?

    ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು: ಜನಸಂಖ್ಯಾ ನಿಯಂತ್ರಣ ನೀತಿ ಜಾರಿಯಾಗುತ್ತಾ?

    ನವದೆಹಲಿ/ ಬೆಂಗಳೂರು: ದೇಶದಲ್ಲಿ ಕುಟುಂಬಕ್ಕೆ ಎರಡೇ ಮಕ್ಕಳು ಎಂಬ ಜನಸಂಖ್ಯಾ ನಿಯಂತ್ರಣಾ ನೀತಿ(Population Control Policy) ಜಾರಿಗೆ ಬರುತ್ತಾ? ಎಲ್ಲಾ ಸಮುದಾಯಗಳಿಗೂ ಈ ನಿಯಮ ಅನ್ವಯ ಆಗುತ್ತಾ ಎಂಬ ಚರ್ಚೆ ಜೋರಾಗುತ್ತಿದೆ.

    ಆರ್‌ಎಸ್‍ಎಸ್(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat), ವಿಜಯದಶಮಿಯಂದು ನಾಗಪುರದ  ಕಚೇರಿಯಲ್ಲಿ ಬುಧವಾರ ಮಾತನಾಡುತ್ತಾ, ದೇಶದಲ್ಲಿ ಜನಸಂಖ್ಯಾ ನೀತಿ ಅವಶ್ಯಕತೆ ಇದೆ. ಧರ್ಮ(Religion) ಆಧಾರಿತ ಜನಸಂಖ್ಯೆಯ ಅಸಮತೋಲವನ್ನು ಇನ್ನು ನಿರ್ಲಕ್ಷಿಸಲಾಗದು. ಜನಸಂಖ್ಯಾ ಅಸಮತೋಲನ ದೇಶ ವಿಭಜನೆಗೆ ಕಾರಣವಾದೀತು ಅಂತ ಆತಂಕ ವ್ಯಕ್ತಪಡಿಸಿದ್ದರು.

    ಮೋಹನ್‌ ಭಾಗವತ್‌ ಹೇಳಿಕೆಯ ಬೆನ್ನಲ್ಲೇ ಜನಸಂಖ್ಯಾ ನೀತಿ ಜಾರಿ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾಗವತ್ ಹೇಳಿಕೆಯನ್ನು ಎಂಐಎಂನ ಅಸಾದುದ್ದೀನ್ ಓವೈಸಿ(Asaduddin Owaisi) ಟೀಕಿಸಿದ್ದಾರೆ. ಜನಸಂಖ್ಯಾ ನಿಯಂತ್ರಣದ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

    ಈ ಬೆನ್ನಲ್ಲೇ ಬಿಜೆಪಿ ಮುಖಂಡ ಸಂಗೀತ್ ಸೋಮ್ ಕಿಡಿಕಾರಿದ್ದು, ಒಂದು ಸಮುದಾಯದಿಂದ ದೇಶದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದ್ದು, ಇದರಿಂದಾಗಿ ಭಯೋತ್ಪಾದನೆಯೂ ಹೆಚ್ಚಾಗುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಭಾಗವತ್ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ವಾಗತಿಸಿದ್ದಾರೆ. ಕೋಳಿ ಕೇಳಿ ಮಸಾಲೆ ಅರೆಯಲ್ಲ ಅಂತ ಓವೈಸಿಗೂ ತಿರುಗೇಟು ನೀಡಿದ್ದಾರೆ. ದೇಶದ ಹಿತದೃಷ್ಠಿಯಿಂದ ಮೋಹನ್ ಭಾಗವತ್ ಸಲಹೆ ಕೊಟ್ಟಿದ್ದಾರೆ. ಸಂಸತ್, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಬೇಕು ಎಂದು ಸಿಟಿ ರವಿ ಹೇಳಿದ್ದಾರೆ.

    ಟೀಕೆ-ಟಿಪ್ಪಣಿ ಏನೇ ಇರಲಿ, ಮೋಹನ್ ಭಾಗವತ್ ಕೊಟ್ಟ ಸಲಹೆಯನ್ನು ಪ್ರಧಾನಿ ಮೋದಿ(Narendra Modi) ಸ್ವೀಕರಿಸ್ತಾರಾ? ಚೀನಾವನ್ನು ಮೀರಿಸುವಂತೆ ಬೆಳೆಯುತ್ತಿರುವ ಜನಸಂಖ್ಯಾ ಸ್ಫೋಟಕ್ಕೆ ಬ್ರೇಕ್ ಹಾಕ್ತಾರಾ? ಮುಂದಿನ ಎಲೆಕ್ಷನ್‍ಗೆ ಪ್ರಮುಖ ಅಜೆಂಡಾವನ್ನಾಗಿಸಿಕೊಂಡು ಕೇಂದ್ರ ಸರ್ಕಾರವೇ ಸಂಸತ್‍ನಲ್ಲಿ ಮಸೂದೆ ಮಂಡಿಸುತ್ತಾ ಎಂಬೆಲ್ಲ ಪ್ರಶ್ನೆಗಳೊಂದಿಗೆ ಈಗ ಚರ್ಚೆ ಆರಂಭವಾಗಿದೆ.

    ಚೀನಾದ(China) ಜನಸಂಖ್ಯೆ 145 ಕೋಟಿ ದಾಟಿದ್ದು, ಭಾರತ 140 ಕೋಟಿ ಹತ್ತಿರ ತಲುಪಿದೆ. ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಬಗ್ಗೆ ಚರ್ಚೆ ಇದೇ ಮೊದಲೇನಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಒಟ್ಟು 35 ಬಾರಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಖಾಸಗಿ ಬಿಲ್ ಮಂಡನೆಯಾಗಿವೆ. ಇದನ್ನೂ ಓದಿ: ‘ಪೊನ್ನಿಯಿನ್ ಸೆಲ್ವನ್ ‘ ಸಿನಿಮಾ ಎಫೆಕ್ಟ್: ‘ಚೋಳ ರಾಜರು ಹಿಂದೂಗಳಲ್ಲ’ ಕಮಲ್ ವಿವಾದಾತ್ಮಕ ಹೇಳಿಕೆ


    ಜನಸಂಖ್ಯಾ ನೀತಿ ಚರ್ಚೆ
    2019ರಲ್ಲಿ ರಾಜ್ಯಸಭೆಯಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಮಸೂದೆಯನ್ನು ಸಂಸದ ರಾಕೇಶ್ ಸಿನ್ಹಾ ಮಂಡಿಸಿದ್ದರು. ಈ ಮಸೂದೆಗೆ 125 ಸದಸ್ಯರು ಸಹಿ ಹಾಕಿದ್ದರು. 2020ರಲ್ಲೂ ಜನಸಂಖ್ಯೆ ನಿಯಂತ್ರಣ ನೀತಿ ಜಾರಿ ಬಗ್ಗೆ ಚರ್ಚೆ ನಡೆದಿತ್ತು. ರಾಜ್ಯಸಭೆಯಲ್ಲಿ ಶಿವಸೇನೆಯ ಅನಿಲ್ ದೇಸಾಯಿ ಮಸೂದೆ ಮಂಡಿಸಿದ್ದರು. ದಂಪತಿಗೆ ಎರಡೇ ಮಗು ಕಡ್ಡಾಯ ಮಾಡುವ ನಿಯಮವನ್ನು ಹೊಂದಿತ್ತು.

    ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸದ್ದಿಲ್ಲದೆ ಜನಸಂಖ್ಯೆ ನಿಯಂತ್ರಣ ನೀತಿ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನೀತಿ 2021-2030 ಕರಡು ಬಿಡುಗಡೆಯಾಗಿದೆ. ಎರಡಕ್ಕಿಂತ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳ ನಿರಾಕಣೆಯ ಅಂಶ ನೀತಿಯಲ್ಲಿದೆ. ಅಸ್ಸಾಂನಲ್ಲೂ 2 ಮಕ್ಕಳ ನೀತಿ ಜಾರಿಯ ಬಗ್ಗೆ ಸಿಎಂ ಹೀಮಾಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೇದಿಕೆಯಲ್ಲಿ ಮೈಮರೆತ ಬೈಡನ್

    ವೇದಿಕೆಯಲ್ಲಿ ಮೈಮರೆತ ಬೈಡನ್

    ವಾಷಿಂಗ್ಟನ್: ಅಮೆರಿಕದ (America) ಅಧ್ಯಕ್ಷ ಜೋ ಬೈಡನ್ (Joe Biden) ಬುಧವಾರ ಕಾರ್ಯಕ್ರಮವೊಂದರಲ್ಲಿ ಭಾಷಣದ ಬಳಿಕ ವೇದಿಕೆಯಲ್ಲಿ (Stage) ಮೈಮರೆತಂತೆ ವರ್ತಿಸಿದ್ದಾರೆ. ಭಾಷಣದ ಬಳಿಕ ವೇದಿಕೆಯಿಂದ ಆಚೆ ಹೋಗಬೇಕಿದ್ದ ಬೈಡನ್ ಯಾವುದೋ ಯೋಚನೆಯಲ್ಲಿ ಕಳೆದು ಹೋದಂತೆ ಭಾಸವಾಗಿರುವ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಅಮೆರಿಕದ ಅಧ್ಯಕ್ಷ ನಿನ್ನೆ ನ್ಯೂಯಾರ್ಕ್‌ನಲ್ಲಿ ನಡೆದ ಗ್ಲೋಬಲ್ ಫಂಡ್‌ನ 7ನೇ ರಿಪ್ಲೇಸ್‌ಮೆಂಟ್ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಅವರು ವೇದಿಕೆಯಿಂದ ಹೊರಡಲು ಮುಂದಾಗಿದ್ದು, 2 ಹೆಜ್ಜೆ ಮುಂದೆ ಹೋಗಿ ಮತ್ತೆ ಅಲ್ಲಿಯೇ ಯಾವುದೋ ಯೋಚನೆಯಲ್ಲಿ ಮೈಮರೆತಿದ್ದು ವೀಡಿಯೋದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್‍ನ ಲೈಸನ್ಸ್ ರದ್ದುಪಡಿಸಿದ RBI

    ಬೈಡನ್ ಅವರು ವೇದಿಕೆಯಿಂದ ಕೆಳಗೆ ಇಳಿಯಬೇಕೇ ಬೇಡವೇ ಎಂಬ ಯೋಚನೆಯಲ್ಲಿ ನಿಂತಂತೆ ತೋರಿದೆ. ಬಳಿಕ ಓದಲಾದ ಧನ್ಯವಾದ ಟಿಪ್ಪಣಿ ಬೈಡನ್ ಅವರ ಗಮನ ಸೆಳೆದಿದೆ.

    ಕೆಲವು ತಿಂಗಳ ಹಿಂದೆ ಬೈಡನ್ ಅವರು ಭಾಷಣದ ವೇಳೆ ಯಾವುದೋ ಯೋಚನೆಯಲ್ಲಿ ಇದೇ ರೀತಿ ಕಳೆದು ಹೋದಂತೆ ಕಾಣಿಸಿಕೊಂಡಿದ್ದರು. ತಮ್ಮ ಎದುರು ಯಾರೂ ಇಲ್ಲದಾಗಲೂ ಕೈಯನ್ನು ಹಸ್ತಲಾಘವಕ್ಕೆ ಚಾಚಿ ಅಲ್ಲೇ ಮೈಮರೆತಿದ್ದಂತೆ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಮೋದಿ ದೇಶದ ಹೊರಗೆ ಎಷ್ಟು ಆಸ್ತಿ ಮಾಡಿದ್ದಾರೆ?: ಪಾಕ್ ಮಾಜಿ ಪ್ರಧಾನಿ

    Live Tv
    [brid partner=56869869 player=32851 video=960834 autoplay=true]

  • ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ – ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸ್ ಅಧಿಕಾರಿಗಳು

    ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ – ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸ್ ಅಧಿಕಾರಿಗಳು

    ಕೊಪ್ಪಳ: ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ನಗರದ ಗಂಗಾವತಿ ತಾಲೂಕಿನ ಲಕ್ಷ್ಮೀ ಕ್ಯಾಂಪ್ ಏರಿಯಾದಲ್ಲಿ ನಡೆದಿದೆ.

    ಲಕ್ಷ್ಮೀ ಕ್ಯಾಂಪ್‍ನಲ್ಲಿರುವ ಉದ್ಯಾನವನದ ಜಾಗದಲ್ಲಿ ಮಸೀದಿ ನಿರ್ಮಿಸಿಕೊಂಡು ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿ, ಕೋಮುಗಲಭೆಗೆ ಪ್ರಚೋದನೆ ಮಾಡಲಾಗುತ್ತಿದೆ ಎಂದು ಹಿಂದೂ ಪರ ಸಂಘಟನೆಗಳ ಮುಖಂಡರು ಭಾಷಣವನ್ನು ಖಂಡಿಸಿ, ಪ್ರತಿಭಟನೆಗೆ ಮುಂದಾಗಿದ್ದರು. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್ 

    ಘಟನೆ ಕುರಿತು ಸ್ಥಳಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ. ಇದನ್ನೂ ಓದಿ:  ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್ 

  • 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

    100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ

    ನವದೆಹಲಿ: 100 ಕೋಟಿ ಲಸಿಕೆ ಕೇವಲ ಅಂಕಿಯಲ್ಲ. ಇದೊಂದು ಇತಿಹಾಸ ಪುಟದಲ್ಲಿ ದಾಖಲಾದ ಹೊಸ ಅಧ್ಯಾಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    100 ಕೋಟಿ ಲಸಿಕೆ ವಿತರಿಸಿ ಐತಿಹಾಸಿಕಾ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಇಷ್ಟೊಂದು ಲಸಿಕೆ ಖರೀದಿಸಲು ಎಲ್ಲಿಂದ ದುಡ್ಡು ತರುತ್ತೆ ಎಂಬ ಚರ್ಚೆಯಿತ್ತು. ಇಷ್ಟು ಜನಕ್ಕೆ ಭಾರತ ಲಸಿಕೆ ಕೊಡುತ್ತಾ ಎಂಬ ಚರ್ಚೆ ಕೂಡ ಇತ್ತು. ಆದರೆ ಈಗ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದರು. ಇದನ್ನೂ ಓದಿ: ನಮ್ಮ ಜಗತ್ತು.. ನಮ್ಮ ವಿಶ್ವ.. ಐ ಲವ್ ಯೂ ಕಂದ

    ನಾವು ಅಸಾಧಾರಣ ಗುರಿ ತಲುಪಿದ್ದೇವೆ. ಇದು ಭಾರತದ ಪ್ರತಿಯೊಬ್ಬ ನಾಗರಿಕನ ಸಾಧನೆ. ಕೆಲವರು ಭಾರತವನ್ನು ಬೇರೆ ರಾಷ್ಟ್ರದೊಂದಿಗೆ ಹೋಲಿಸುತ್ತಿದ್ದಾರೆ. ನಾವು ಯಾವಾಗ ಲಸಿಕೆ ಆರಂಭಿಸಿದ್ದೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಭಾರತ Vs ಪಾಕಿಸ್ತಾನ ಮ್ಯಾಚ್ – 10 ಸೆಕೆಂಡ್ ಜಾಹೀರಾತಿಗೆ ಲಕ್ಷ ಲಕ್ಷ ರೇಟ್

    ಲಸಿಕೆ ಹಾಕಿಸಿಕೊಳ್ಳಲು ಜನ ಬರುವುದಿಲ್ಲ ಎಂಬ ಮಾತು ಇತ್ತು. ಆದರೆ 100 ಕೋಟಿ ಲಸಿಕೆ ವಿತರಿಸುವ ಮೂಲಕ ಜನ ಉತ್ತರ ನೀಡಿದ್ದಾರೆ. ಜನರ ಸಹಭಾಗಿತ್ವದಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ದೀಪ ಬೆಳಗುವುದರಿಂದ ಘಂಟೆ ಬಾರಿಸುವುದರಿಂದ ಕೊರೊನಾ ಹೋಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಆದರೆ ಇದು ಜನ ಜಾಗೃತಿ ಮೂಡಿಸಿತು. ತಂತ್ರಜ್ಞಾನದ ಅದ್ಭುತ ಬಳಕೆ ಆಗಿದೆ. ದೇಶ 100 ಕೋಟಿ ಲಸಿಕೆ ವಿರಣೆಗೆ ಗರ್ವ ಪಡುತ್ತಿದೆ ಎಂದರು.

    ಈ ದೀಪಾವಳಿಯಲ್ಲಿ 100 ಕೋಟಿ ಲಸಿಕೆ ವಿತರಣೆಯ ಸಂಭ್ರಮ ಇದೆ. ಭಾರತದಲ್ಲಿಯೇ ಉತ್ಪಾದಿಸಿದ ವಸ್ತು ಖರೀದಿಸಿ ಹಬ್ಬವನ್ನು ವಿಶೇಷಗೊಳಿಸಿ. ಈ ಸಫಲತೆ ನಮಗೆ ಹೊಸ ವಿಶ್ವಾಸ ಮೂಡಿಸಿದೆ. ಕೋವಿಡ್ ಲಸಿಕೆಯಿಂದ ದೇಶದ ಸುರಕ್ಷತವಾಗಿದೆ. ನಮ್ಮ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸೋಣ ಎಂದರು. ಇದನ್ನೂ ಓದಿ: ಚಲಿಸುವ ವಾಹನಗಳಿಂದ ಹತ್ತಿ ಕಳ್ಳತನ – ಪ್ರಾಣವನ್ನೇ ಪಣಕ್ಕಿಟ್ಟು ಓಡುತ್ತಿದ್ದಾರೆ ಮಕ್ಕಳು

    ಭಾಷಣದ ಕೊನೆಯಲ್ಲಿ ಯಾರು ಇದುವರೆಗೂ ಲಸಿಕೆ ಪಡೆದಿಲ್ಲ ದಯವಿಟ್ಟು ಲಸಿಕೆಯನ್ನು ಪಡೆದುಕೊಳ್ಳಿ ಎಂದು ವಿನಂತಿ ಮಾಡಿದರು. ಇದನ್ನೂ ಓದಿ: ಉಗ್ರರಿಗೆ ಸಹಕಾರ – ಪಾಕಿಸ್ತಾನದ ಜೊತೆ ಬೂದುಪಟ್ಟಿಗೆ ಸ್ನೇಹಿತ ಟರ್ಕಿಯೂ ಸೇರ್ಪಡೆ

  • ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ

    ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ

    ಕಾಬೂಲ್: ಅಫ್ಘಾನಿಸ್ತಾನದ ಬಾಲಕಿಯೊಬ್ಬಳು ನಾನು ಶಾಲೆಗೆ ಹೋಗಬೇಕೆಂದು ಪ್ರತಿಭಟನೆ ಮಾಡುತ್ತಾ, ಖಡಕ್ ಭಾಷಣ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Afghanistan school

    ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಮಹಿಳೆಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಮತ್ತು ಮಹಿಳೆಯರ ಶಿಕ್ಷಣ ಮತ್ತು ಕೆಲಸದ ಹಕ್ಕುಗಳ ಕುರಿತಂತೆ ಕಠಿಣ ನಿಯಮಗಳನ್ನು ಜಾರಿಗೊಳಿದೆ. ತಾಲಿಬಾನ್ ಮಹಿಳೆಯರಿಗೆ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ನಿಷೇಧಿಸುವುದಾಗಿ ಘೋಷಿಸಿ ಅವರ ಆಸೆಗಳಿಗೆ ತಣ್ಣೀರು ಎರಚಿದೆ. ಸದ್ಯ ಅಫ್ಘಾನ್ ಬಾಲಕಿಯೊಬ್ಬಳು ಶಾಲೆಗೆ ಹೋಗುವ ಹಕ್ಕಿನ ಬಗ್ಗೆ ಚುರುಕಾದ ಭಾಷಣ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ದೇವರಿಗೆ ಕೈ ಮುಗಿದು ಕಾಣಿಕೆ ಹಾಕಿ ಹುಂಡಿ ಮುಂದಿದ್ದ ಹಾಲಿನ ಬಾಟ್ಲಿ ಎಗರಿಸಿದ ಭೂಪ

    Afghanistan Girl

    ವೀಡಿಯೋದಲ್ಲಿ ಬಾಲಕಿ ಇಬ್ಬರು ಹುಡುಗಿಯರು ಮತ್ತು ಹುಡುಗರೊಂದಿಗೆ ಪ್ಲಾಕಾರ್ಡ್ ಹಿಡಿದು ನಿಂತುಕೊಂಡಿರುವುದನ್ನು ಕಾಣಬಹುದಾಗಿದೆ. ನಂತರ ಮಹಿಳೆಯರ ಶಿಕ್ಷಣದ ಹಕ್ಕು ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿಗೆ ಕೊಡುಗೆ ನೀಡುವ ಹಕ್ಕಿನ ಬಗ್ಗೆ ಮಾತನಾಡಿದ್ದಾಳೆ. ಆಕೆಯ ಸುಲಲಿತವಾದ ಇಂಗ್ಲೀಷ್ ಭಾಷಣಕ್ಕೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವೈರಲ್ ಆಗುತ್ತಿರುವ ಈ ವೀಡಿಯೋವನ್ನು 68,200ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಬಾಲಕಿಯ ಕೆಚ್ಚೆದೆಯ ಭಾಷಣವನ್ನು ಮೆಚ್ಚಿ ನೆಟ್ಟಿಗರು ದೇಶಕ್ಕೆ ಇಂತಹ ಧೈರ್ಯಶಾಲಿ ಹುಡುಗಿಯರು ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ತಂದೆಯನ್ನೇ ಹತ್ಯೆಗೈದ ಬಾಲಕಿ

  • ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ಹೋಗುವ ವಿಚಾರದಲ್ಲಿ ಸ್ವಾರಸ್ಯಕರ ಚರ್ಚೆಯೊಂದು ನಡೆಯಿತು.

    ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋಗಬೇಕು. ಅಲ್ಲಿ ಕರ್ನಾಟಕದ ಕಹಳೆ ಮೊಳಗಿಸಬೇಕು ಎಂದು ಸಚಿವ ಮಾಧುಸ್ವಾಮಿ ಚರ್ಚೆ ಆರಂಭಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಆರ್ ಅಶೋಕ್ ಇಲ್ಲ, ಇಲ್ಲ ಸಿದ್ದರಾಮಯ್ಯ ನಮಗೆ ಇಲ್ಲಿಯೇ ಇರಬೇಕು. ನಮಗೆ ಮಾರ್ಗದರ್ಶನ ಕೊಡಬೇಕು. ಹೀಗಾಗಿ ನಾವು ಅವರನ್ನು ದೆಹಲಿಗೆ ಕಳುಹಿಸಲು ಇಷ್ಟಪಡುವುದಿಲ್ಲ ಅಂದರು. ಇದನ್ನು ಕೇಳಿಸಿಕೊಂಡ ಸಿದ್ದರಾಮಯ್ಯ ಆಶೋಕ್ ಮತ್ತು ಮಾಧುಸ್ವಾಮಿ ಇಬ್ಬರೂ ಕೂಡ ನನ್ನ ಉತ್ತಮ ಸ್ನೇಹಿತರು ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ತೆರಳುವ ಬಗ್ಗೆ ಈಶ್ವರಪ್ಪ ಅವರ ಅಭಿಪ್ರಾಯ ಏನು ಎಂದು ಪ್ರಶ್ನಿಸುವ ಮೂಲಕ ಅವರನ್ನು ಚರ್ಚೆಗೆ ಎಳೆದರು. ಇದಕ್ಕೆ ಸಿದ್ದರಾಮಯ್ಯ, ಅವರನ್ನು ಕೇಳಬೇಡಿ. ಇಲ್ಲೂ ಬೇಡ ಅಲ್ಲೂ ಬೇಡ ಎನ್ನುತ್ತಾರೆ ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪ – ಚರ್ಚೆಗೆ ಆಗ್ರಹಿಸಿ ಸಾರಾ ಮಹೇಶ್ ಪ್ರತಿಭಟನೆ

    ಈ ವೇಳೆ ನಿಮ್ಮ ಹೃದಯ ಮುಟ್ಟಿಕೊಂಡು ಹೇಳಿ ನಾನು ಆ ರೀತಿ ಹೇಳ್ತೀನಾ ಎಂದು ಈಶ್ವರಪ್ಪ, ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದರು. ನಾನು ಆಂತರಿಕವಾಗಿಯೂ ಹೇಳಲ್ಲ. ಬಹಿರಂಗವಾಗಿಯೂ ಹೇಳಲ್ಲ ಎಂದು ಸಿದ್ದರಾಮಯ್ಯ ಮತ್ತೆ ಈಶ್ವರಪ್ಪನವರ ಕಾಲೆಳೆದರು. ಇದನ್ನು ಕೇಳಿಸಿಕೊಂಡ ಈಶ್ವರಪ್ಪ ನೋಡಿ ಇದೊಂದು ನಿಜ ಹೇಳಿದ್ದೀರಿ ಎಂದರು. ರಾಜಕಾರಣಿ ಆದ ಮೇಲೆ ಸುಳ್ಳು ಹೇಳುವ ಅನಿವಾರ್ಯತೆ ಬರುತ್ತೆ. ಹೇಳಿರಬಹುದು ಆದರೆ ಸುಳ್ಳು ಹೇಳಿಲ್ಲ ಎನ್ನುವುದು ಆತ್ಮವಂಚನೆ ಆಗುತ್ತದೆ ಎಂದು ಸಿದ್ದರಾಮಯ್ಯ ನುಡಿದರು.

    ನಾನು ಸಂಸತ್ ಗೆ ಹೋಗಲು ಯೋಚನೆ ಮಾಡಿದ್ದೆ. ಎರಡು ಸಲ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆದರೆ ಎರಡು ಸಲ ಕೂಡ ಸೋತು ಹೋದೆ. 1991 ರಲ್ಲಿ ಕೊಪ್ಪಳದಿಂದ ನಿಂತು ಸೋತೆ, ಇನ್ನೊಮ್ಮೆಯೂ ಸ್ಪರ್ಧಿಸಿ ಸೋತೆ. ಆಗಿನಿಂದ ಮತ್ತೆ ಸಂಸತ್‍ಗೆ ಹೋಗಲು ಯೋಚನೆ ಮಾಡಿಲ್ಲ ಎಂದರು. ಇದನ್ನೂ ಓದಿ: 10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ

  • ಬಾಗಿನ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ, ಪುತ್ರಿ ಕಣ್ಣೀರು

    ಬಾಗಿನ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ, ಪುತ್ರಿ ಕಣ್ಣೀರು

    ಮಂಡ್ಯ: ಜಿಲ್ಲೆಯಲ್ಲಿ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡರವರ ಪತ್ನಿ ಹಾಗೂ ಪುತ್ರಿ ಕಣ್ಣೀರು ಹಾಕಿದ್ದಾರೆ.

    Narayana Gowda

    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ನನ್ನ ಸಾಧನೆಗೆ ಪತ್ನಿ, ಪುತ್ರಿಯರ ಶಕ್ತಿಯೇ ಕಾರಣ. ಅವರ ಆಸೆಯಂತೆ ಇಂದು ಸಹೋದರಿಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿದ್ದೇನೆ. ಪತ್ನಿ, ಪುತ್ರಿಯರ ತ್ಯಾಗ, ಶಕ್ತಿಯೇ ನನ್ನ ಈ ಸಾಧನೆಗೆ ಕಾರಣವಾಗಿದೆ. ನನ್ನ ಅಮ್ಮನ ಬಳಿಕ ಪತ್ನಿ, ಪುತ್ರಿಯರ ಕಾಳಜಿಯನ್ನು ನಾನು ಯಾವತ್ತು ಮರೆಯುವುದಿಲ್ಲ ಎಂದು ಭಾವುಕರಾಗಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿದ್ದ ನಾರಾಯಣಗೌಡ ಅವರ ಪತ್ನಿ ದೇವಕಿ, ಪುತ್ರಿ ಲೀನಾ ನಾರಾಯಣಗೌಡ ಅವರ ಮಾತುಗಳನ್ನು ಕೇಳಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:  ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ

    Narayana Gowda

    ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ನೆಲೆಯೂರುವ ಸಲುವಾಗಿ ನಾರಾಯಣಗೌಡ ಪ್ರತಿ ಬಾರಿಯೂ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಜೊತೆಗೆ ಸಂಪ್ರದಾಯ ಪಾಲನೆಗಾಗಿ, ಇಂದು 500ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡಿದ್ದಾರೆ. ಸೀರೆ ಜೊತೆಗೆ ಅರಿಶಿನ ಕುಂಕುಮ, ಹೂ ಮತ್ತು ಬಾಗಿನ ನೀಡಿ ಮಹಿಳೆಯರಿಗೆ ಗೌರಿ-ಗಣೇಶ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ

  • ಮೂರನೇ ದೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ

    ಮೂರನೇ ದೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 88 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದಾರೆ.

    ಇಲ್ಲಿಯವರೆಗಿನ ಸ್ವಾತಂತ್ರ್ಯ ದಿನದ ಭಾಷಣಗಳ ಪೈಕಿ ಇದು ಮೂರನೇ ದೀರ್ಘವಾದ ಭಾಷಣವಾಗಿದೆ. ಬೆಳಗ್ಗೆ 7:30ಕ್ಕೆ ಭಾಷಣ ಆರಂಭಿಸಿದ ಮೋದಿ 9 ಗಂಟೆಯ ಹೊತ್ತಿಗೆ ತಮ್ಮ ಮಾತನ್ನು ಮುಗಿಸಿದರು.  ಇದನ್ನೂ ಓದಿ: 54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ

    2019ರಲ್ಲಿ ಮೋದಿ 92 ನಿಮಿಷ ಮಾತನಾಡಿದ್ದರು. 2016ರ ಭಾಷಣ ದೀರ್ಘ ಭಾಷಣ ಎಂದು ದಾಖಲಾಗಿದ್ದು ಒಟ್ಟು 96 ನಿಮಿಷ ಮಾತನಾಡಿದ್ದರು. 2017ರ ಭಾಷಣ ಅತಿ ಕಡಿಮೆ ಅವಧಿಯ ಭಾಷಣ ಆಗಿದ್ದು 56 ನಿಮಿಷದಲ್ಲೇ ಮೋದಿ ಮಾತನ್ನು ಕೊನೆಗೊಳಿಸಿದ್ದರು.

    ಈ ಹಿಂದೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ದೀರ್ಘ ಭಾಷಣದ ಬಗ್ಗೆ ಪ್ರಸ್ತಾಪಿಸಿ, ಜನರು ಭಾಷಣದ ಅವಧಿಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಜಾರಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದರು.