Tag: Spectrum Auction

  • 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    ನವದೆಹಲಿ: ಭಾರತದ ಅತೀ ದೊಡ್ಡ 5ಜಿ ಸ್ಪೆಕ್ಟ್ರಂ ಹರಾಜು ಮಂಗಳವಾರದಿಂದ ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಕ್ಷಣಗಣನೆ ನಡೆಯುತ್ತಿದೆ. ಟೆಲಿಕಾಂ ಕಂಪನಿಗಳು ಈ ಹರಾಜಿನಲ್ಲಿ ಭಾಗವಹಿಸಲು ತಯಾರಾಗಿ ನಿಂತಿವೆ. ಆದರೆ ಈ 5ಜಿ ಯುಗದ ಉಪಯೋಗವೆಷ್ಟು ಎಂಬ ಬಗ್ಗೆ ಪ್ರತಿಯೊಬ್ಬ ಇಂಟರ್‌ನೆಟ್ ಬಳಕೆದಾರ ತಿಳಿದುಕೊಳ್ಳುವುದು ಅತ್ಯಗತ್ಯ.

    ಸರ್ಕಾರ ಹಾಗೂ ವಿವಿಧ ಉದ್ಯಮಗಳ ಪ್ರಕಾರ 5ಜಿ ನೆಟ್‌ವರ್ಕ್ ಕಳೆದ 4ಜಿ ನೆಟ್‌ವರ್ಕ್‌ಗಿಂತಲೂ 10 ಪಟ್ಟು ಹಾಗೂ 3ಜಿ ಗಿಂತಲೂ 30 ಪಟ್ಟು ಹೆಚ್ಚು ವೇಗವಾಗಿರುತ್ತದೆ. ಇದು ಇಲ್ಲಿಯವರೆಗೆ ಯಾವುದೇ ನೆಟ್‌ವರ್ಕ್ ನೀಡದ ಹಾಗೂ ಸಮಯ ವ್ಯರ್ಥವಾಗಿಸದ ಅತ್ಯುತ್ತಮ ಅನುಭವ ನೀಡಲಿದೆ.

    5G

    ಉಳಿದವುಗಳಿಗಿಂತ 5ಜಿ ಎಷ್ಟು ಸ್ಪೀಡ್?
    2ಜಿ ನೆಟ್‌ವರ್ಕ್‌ನಲ್ಲಿ ಒಂದು ವೀಡಿಯೋ ಡೌನ್‌ಲೋಡ್ ಆಗಲು 2.8 ದಿನವನ್ನೇ ತೆಗೆದುಕೊಂಡರೆ ಅದೇ ವೀಡಿಯೋ 3ಜಿಯಲ್ಲಿ ಡೌನ್‌ಲೋಡ್ ಆಗಲು 2 ಗಂಟೆ ಬೇಕಾಗುತ್ತದೆ. ಆ ವೀಡಿಯೋ 4ಜಿಯಲ್ಲಿ 40 ನಿಮಿಷದಲ್ಲಿ ಡೌನ್‌ಲೋಡ್ ಆದರೆ 5ಜಿಯಲ್ಲಿ ಕೇವಲ 35 ಸೆಕೆಂಡ್‌ನಲ್ಲಿ ಡೌನ್‌ಲೋಡ್ ಆಗುತ್ತದೆ. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಿಸಲು ಕ್ರಮ – ಸರ್ಕಾರದಿಂದಲೇ ಯುವಕ, ಯುವತಿಯರಿಗೆ ಆನ್‌ಲೈನ್ ಡೇಟಿಂಗ್ ವ್ಯವಸ್ಥೆ

    ಕೆಲವು ವರ್ಷಗಳಿಂದ ಮೊಬೈಲ್ ಫೋನ್‌ಗಳಲ್ಲಿ ವೀಡಿಯೋ ಕ್ವಾಲಿಟಿಗಳು ಹೆಚ್ಚುತ್ತಿದ್ದು, ಇದರಿಂದ 4ಜಿ ನೆಟ್‌ವರ್ಕ್ ಕೂಡಾ ಬಫರಿಂಗ್ ಆಗುತ್ತಿರುವುದು ಸಾಮಾನ್ಯವಾಗುತ್ತಿದೆ. 5ಜಿ ತಂತ್ರಜ್ಞಾನದಿಂದ ವೀಡಿಯೋ ಸ್ಟ್ರೀಮಿಂಗ್‌ನ ವೇಗ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದರೊಂದಿಗೆ ವರ್ಚುವಲ್ ರಿಯಾಲಿಟಿ ವೀಡಿಯೋಗಳನ್ನೂ ವೀಕ್ಷಿಸಲು ಸಹಾಯವಾಗಲಿದೆ ಎಂದು ಅಧ್ಯಯನಗಳು ತಿಳಿಸಿವೆ.

    ಜುಲೈ 26 ರಂದು 5ಜಿ ಸ್ಪೆಕ್ಟ್ರಂ ಹರಾಜು ಪ್ರಾರಂಭವಾಗಲಿದ್ದು, ಜುಲೈ ಅಂತ್ಯದಲ್ಲಿ ಮುಕ್ತಾಯವಾಗಲಿದೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ ರೋಲ್‌ಔಟ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ಪ್ಯಾಕೇಜ್‌ನ ಅಮೆರಿಕದ ಉದ್ಯೋಗ ಕಳೆದುಕೊಂಡ 15ರ ಬಾಲಕ

    Live Tv
    [brid partner=56869869 player=32851 video=960834 autoplay=true]

  • ಟೆಲಿಕಾಂ ಸ್ಪೆಕ್ಟ್ರಂ ರೇಸ್‌ಗೆ ಇಳಿಯಲು ಮುಂದಾದ ಅದಾನಿ ಗ್ರೂಪ್

    ಟೆಲಿಕಾಂ ಸ್ಪೆಕ್ಟ್ರಂ ರೇಸ್‌ಗೆ ಇಳಿಯಲು ಮುಂದಾದ ಅದಾನಿ ಗ್ರೂಪ್

    ನವದೆಹಲಿ: ಸರ್ಕಾರದ ಮುಂಬರುವ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಶುಕ್ರವಾರ ಆಸಕ್ತಿ ತೋರಿರುವ 4 ಮುಖ್ಯ ಕಂಪನಿಗಳಲ್ಲಿ ಅದಾನಿ ಗ್ರೂಪ್ ಕೂಡಾ ಒಂದು ಎಂದು ಹೇಳಲಾಗುತ್ತಿದೆ.

    ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸಿದ್ದೇ ಆದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ, ಸುನಿಲ್ ಮಿತ್ತಲ್‌ರ ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಲಿಮಿಟೆಡ್‌ನಂತಹ ಮುಖ್ಯ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲಿದೆ.

     

    ಟೆಲಿಕಾಂ ಇಲಾಖೆ ಶೀಘ್ರವೇ ಅತ್ಯಂತ ವೇಗದ ಇಂಟರ್‌ನೆಟ್ ಒದಗಿಸುವ 5ಜಿ ಸ್ಪೆಕ್ಟ್ರಂ ಹರಾಜನ್ನು ನಡೆಸಲಿದ್ದು, ಅದಾನಿ ಗ್ರೂಪ್ ಸ್ಪೆಕ್ಟ್ರಂ ರೇಸ್‌ಗೆ ಪ್ರವೇಶಿಸಲು ಆಸಕ್ತಿ ಹೊಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಬಗ್ಗೆ ಅದಾನಿ ಗ್ರೂಪ್ ವಕ್ತಾರರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದನ್ನೂ ಓದಿ: ಟ್ವಿಟ್ಟರ್‌ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್‌

    ಸ್ಪೆಕ್ಟ್ರಂ ಹರಾಜಿಗೆ 4 ಕಂಪನಿಗಳು ಜುಲೈ 12ರ ಒಳಗಾಗಿ ತಮ್ಮ ಮಾಲೀಕತ್ವದ ವಿವರಗಳನ್ನು ಒದಗಿಸಬೇಕಿದೆ. ಬಳಿಕ ಬಿಡ್ ಕಂಪನಿಗಳ ಪೂರ್ವ ಅರ್ಹತೆಯನ್ನು ನೋಡಲಾಗುತ್ತದೆ. ಜುಲೈ 19ರ ಒಳಗೆ ಕಂಪನಿಗಳು ಅರ್ಜಿಗಳನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನೂ ಹೊಂದಿರುತ್ತದೆ. ಜುಲೈ 20ರಂದು ಬಿಡ್ ಕಂಪನಿಗಳ ಹೆಸರನ್ನು. ಜುಲೈ 27 ರಿಂದ ಹರಾಜು ಪ್ರಾರಂಭವಾಗುವ ನಿರೀಕ್ಷೆಯಿದೆ.

    ಇಲ್ಲಿಯವರೆಗೆ ದೇಶದ ಶ್ರೀಮಂತ ವ್ಯಕ್ತಿಗಳಾದ ಅದಾನಿ ಮತ್ತು ಮುಕೇಶ್ ಅಂಬಾನಿ ನೇರವಾಗಿ ಪೈಪೋಟಿಗೆ ಇಳಿದಿರಲಿಲ್ಲ. ಆದಾನಿ ಪೋರ್ಟ್, ಕಲ್ಲಿದ್ದಲು, ವಿಮಾನ ನಿಲ್ದಾಣ ಇತ್ಯಾದಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದರೆ, ರಿಲಯನ್ಸ್ ಪೆಟ್ರೋಲಿಯಂ, ಟೆಲಿಕಾಂ, ಮಾಧ್ಯಮ ಇತ್ಯಾದಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    Live Tv
    [brid partner=56869869 player=32851 video=960834 autoplay=true]