Tag: Special Ward

  • ಬ್ರಿಟನ್ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ

    ಬ್ರಿಟನ್ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ

    ಬೆಂಗಳೂರು: ರೂಪಾಂತರಿ ಕೊರೊನಾ ವೈರಸ್ ಸೋಂಕಿತರಿಗೆ ವಿಕ್ಟೋರಿಯ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ಗಳಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

    ಬ್ರಿಟನ್‍ನಿಂದ ಬೆಂಗಳೂರಿಗೆ ಹಿಂತಿರುಗಿ ಬಂದ 3 ಜನರಲ್ಲಿ ರೂಪಾಂತರಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಹಳೆಯ ವೈರಸ್ ರೋಗಿಗಳ ಜೊತೆಗೆ ಹೊಸ ವೈರಸ್ ರೋಗಿಗಳನ್ನು ಸೇರಿಸಿ ಒಂದೇ ವಾರ್ಡ್‍ನಲ್ಲಿ ಚಿಕಿತ್ಸೆ ನೀಡುವುದು ಬೇಡ. ಬದಲಾಗಿ ಹೊಸ ತಳಿಯ ವೈರಸ್ ಹೊಂದಿರುವ ರೋಗಿಗಳಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಚಿಕಿತ್ಸೆ ನೀಡಿ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಗೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.

    ಬ್ರಿಟನ್‍ನಿಂದ ಬಂದವರಿಗೆ ಆರಂಭದಲ್ಲೇ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿ 10 ಬೆಡ್‍ಗಳ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ.

    ವಸಂತನಗರ ಅಪಾರ್ಟ್‍ಮೆಂಟ್‍ನಲ್ಲಿ ಇಬ್ಬರಿಗೆ ಮತ್ತು ಜೆಪಿ ನಗರದ ನಿವಾಸಿಯೊಬ್ಬರಿಗೆ ಬ್ರಿಟನ್ ಸೋಂಕು ಇರುವುದು ದೃಢಪಟ್ಟಿದೆ.

  • ಚೀನಾದಲ್ಲಿ 10 ದಿನದಲ್ಲಿ ಆಸ್ಪತ್ರೆ ಕಟ್ಟಿದ್ರು – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗೆ ಪ್ರತ್ಯೇಕ ವಾರ್ಡ್ ಇಲ್ಲ

    ಚೀನಾದಲ್ಲಿ 10 ದಿನದಲ್ಲಿ ಆಸ್ಪತ್ರೆ ಕಟ್ಟಿದ್ರು – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗೆ ಪ್ರತ್ಯೇಕ ವಾರ್ಡ್ ಇಲ್ಲ

    ಬೆಂಗಳೂರು: ಚೀನಾದಲ್ಲಿ ಹತ್ತು ದಿನದಲ್ಲಿ ಕೊರೊನಾಗೆ ವಿಶೇಷ ಆಸ್ಪತ್ರೆಯನ್ನೇ ಕಟ್ಟಿದ್ದರು. ಆದರೆ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಕಳೆದ ಒಂದು ತಿಂಗಳಿನಿಂದ ಕೊರೊನಾಗೆ ಸ್ಪೆಷಲ್ ವಾರ್ಡ್ ಮಾಡುವುದಕ್ಕೆ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

    ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಇದ್ದರೂ ನಮಗೆ ವಾರ್ಡ್ ಮಾಡುವುದಕ್ಕೆ ಕಷ್ಟವಾಗುತ್ತೆ. ಇಲ್ಲಿ ಬರುವ ಬೇರೆ ರೋಗಿಗಳಿಗೆ ತೊಂದರೆ ಆಗಲ್ವೇ, ಕೊರೊನಾಗೆ ಸ್ಪೆಷಲ್ ವಾರ್ಡ್ ಎಂದರೆ ಅದಕ್ಕೆ ಪ್ರೊಸಿಜರ್ ಇರುತ್ತೆ. ವಿಂಡೋ ಬದಲಾಯಿಸಬೇಕು, ಎಸಿ ಹಾಕುವ ಹಾಗಿಲ್ಲ. ಅಲ್ಲದೆ ಆಕ್ಸಿಜನ್ ವ್ಯವಸ್ಥೆ ಆಗಬೇಕು. ಇದೆಲ್ಲ ನಮಗೆ ತುಂಬಾ ಕಷ್ಟವಾಗುತ್ತೆ ಎಂದು ಪ್ರತಿಷ್ಟಿತ ವಿಕ್ಟೋರಿಯಾ ಆಸ್ಪತ್ರೆ ಡೀನ್ ಜಯಂತಿ ಹೇಳಿದ್ದಾರೆ. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೊನಾ?

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಕಷ್ಟ ಇದ್ದರೂ ಆರೋಗ್ಯ ಸಚಿವ ಶ್ರೀರಾಮುಲು ಅವರು ‘ಎಲ್ಲಾ ರೆಡಿ ಇದ್ದೇವೆ. ಕೊರೊನಾ ಬಂದರೆ ಓಡಿಸಿ ಬಿಡೋದೆ’ ಎಂದು ಡೈಲಾಗ್ ಹೇಳಿದ್ದರು. ಆದರೆ ವಾಸ್ತವ ಇಲ್ಲಿ ಭೀಕರವಾಗಿದೆ. ವಿಕ್ಟೋರಿಯಾದಲ್ಲಿ ಕೊರೊನಾ ಪತ್ತೆಗೆ ಲ್ಯಾಬ್ ಇದೆ. ಆದರೆ ಪ್ರತ್ಯೇಕ ವಾರ್ಡ್ ಮಾತ್ರ ಇಲ್ಲ. ಇದನ್ನೂ ಓದಿ: ಆಂಧ್ರದ ಟೆಕ್ಕಿಗೆ ಕೊರೊನಾ : ಬೆಂಗ್ಳೂರಲ್ಲಿ ಲ್ಯಾಂಡ್ ಆಗಿದ್ರೂ ಪತ್ತೆ ಆಗಲಿಲ್ಲ ಯಾಕೆ?-ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?

    ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಆಂಧ್ರ, ತೆಲಂಗಾಣ, ಕೇರಳ ಗಡಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಬಳ್ಳಾರಿ, ಕಲಬುರುಗಿ, ಬೆಳಗಾವಿ, ಚಾಮರಾಜನಗರ, ರಾಯಚೂರು ಭಾಗಗಳಲ್ಲಿ ಕೂಡ ಎಚ್ಚರಿಕೆ ವಹಿಸಲಾಗುತ್ತಿದೆ.

  • ನಡೆದಾಡುವ ಶ್ರೀಗಳು ಐಸಿಯೂನಿಂದ ಸ್ಪೆಷಲ್  ವಾರ್ಡ್ ಗೆ ಶಿಫ್ಟ್

    ನಡೆದಾಡುವ ಶ್ರೀಗಳು ಐಸಿಯೂನಿಂದ ಸ್ಪೆಷಲ್ ವಾರ್ಡ್ ಗೆ ಶಿಫ್ಟ್

    – ಆಸ್ಪತ್ರೆಗೆ ಯಾರೂ ಬರಬೇಡಿ ಕಿರಿಯ ಶ್ರೀ ಮನವಿ

    ಚೆನ್ನೈ: ಇಲ್ಲಿನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದ್ದು, ಇಂದು ಸ್ಪೆಷಲ್ ವಾರ್ಡ್‍ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

    ವೈದ್ಯ ಡಾ.ಪರಮೇಶ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ. ಬುಧವಾರ ರಾತ್ರಿಯಿಂದ ಇಡ್ಲಿ ಹಾಗೂ ಬೇಯಿಸಿದ ಬೆಳೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಕಿರಿಯ ಶ್ರೀಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಶ್ರೀಗಳನ್ನ ಭೇಟಿ ಮಾಡಲು 4 ದಿನಗಳು ಅವಕಾಶವಿಲ್ಲ. ಏಕೆಂದರೆ ಶ್ರೀಗಳನ್ನು ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದ್ದು, ಐಸಿಯೂನಲ್ಲಿ ಇದ್ದಂತೆ ವಾರ್ಡ್ ನಲ್ಲಿಯೂ ಎಚ್ಚರಿಕೆ ನೀಡಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ದರಿಂದ ಶ್ರೀಗಳನ್ನು ನೋಡಲು ಯಾರೂ ಬರಬೇಡಿ. ಮತ್ತೊಮ್ಮೆ ಶ್ರೀಗಳಿಗೆ ಸೋಂಕಾದರೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ವಾರದಿಂದ ಭಕ್ತರು ಶ್ರೀಗಳನ್ನು ಮಠದಲ್ಲೇ ನೋಡಬಹುದು. ಶ್ರೀಗಳನ್ನು ನೋಡಲು ಬರೋರ ಸಂಖ್ಯೆ ಹೆಚ್ಚಾದರೆ ಅಕ್ಕಪಕ್ಕದ ರೋಗಿಗಳಿಗೂ ತೊಂದರೆಯಾಗುತ್ತೆ. ಹೀಗಾಗಿ ಯಾರೂ ಬರಬೇಡಿ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮನವಿ ಮಾಡಿದ್ದಾರೆ.

    ವೈದ್ಯರೊಂದಿಗೆ ಚರ್ಚೆ ನಡೆಸಿ ಶ್ರೀಗಳನ್ನು ಯಾವಾಗ ಡಿಸ್ಚಾರ್ಜ್ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಶ್ರೀಗಳ ಆರೋಗ್ಯ ಚೇತರಿಕೆ ಬಗ್ಗೆ ಭಕ್ತರು ದೇವರಲ್ಲಿ ಮನವಿ ಮಾಡಿಕೊಳ್ಳಿ. ಶೀಘ್ರವೇ ದರ್ಶನಕ್ಕೆ ಅವಕಾಶ ಲಭಿಸುತ್ತದೆ ಎಂದು ಸ್ಪಷ್ಟಪಡಿಸಿದರು.

    ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಡಿ.08 ರಂದು ಪಿತ್ತಕೋಶ ಸೋಂಕಿನ ಆಪರೇಷನ್‍ಗೆ ಸಿದ್ದಗಂಗಾ ಶ್ರೀಗಳು ಒಳಗಾಗಿದ್ದರು. ಬಳಿಕ ಅವರಿಗೆ ಐಸಿಯೂನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಮಂಗಳವಾರದಿಂದ ಶ್ರೀಗಳಿಗೆ ದ್ರವರೂಪದ ಆಹಾರ ನೀಡಲಾಗಿತ್ತು. ಸದ್ಯ ಶ್ರೀಗಳು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಆದರೆ ವಾಕಿಂಗ್ ಮಾಡುವ ಸಾಧ್ಯತೆಗಳು ಇದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv