Tag: Special Marriage

  • ಹಾವೇರಿಯಲ್ಲೊಂದು ವಿಶೇಷ ಮದುವೆ

    ಹಾವೇರಿಯಲ್ಲೊಂದು ವಿಶೇಷ ಮದುವೆ

    ಹಾವೇರಿ: ಮದುವೆ ಅಂದರೆ ಅಲ್ಲಿ ಅದ್ಧೂರಿ ಸಂಭ್ರಮ ಸಾಮಾನ್ಯ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಂಗವಿಕಲ, ಕಣ್ಣುಗಳಿಲ್ಲದ ಯುವತಿಗೆ ಬಾಳು ನೀಡಿದ ಯುವಕ, ಇಂತಹ ಅಪರೂಪದ ಮದುವೆಗಳನ್ನ ನೋಡಿದ್ದೇವೆ. ಅಂತಹದ್ದೇ ವಿವಾಹವೊಂದು ಹಾವೇರಿ ನಗರದಲ್ಲಿ ನಡೆದಿದೆ.

    ಹೌದು, ಹಾವೇರಿ ನಗರದ ರೇಣುಕಾ ಮಂದಿರ ಇಂದು ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದೆ. ಯುವಕ ಮತ್ತು ಯುವತಿಗೆ ಇಬ್ಬರಿಗೂ ಮಾತು (ಮೂಗರು) ಬರುವುದಿಲ್ಲ. ಈ ಇಬ್ಬರು ಇಂದು ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ.

    ಮೂಲತಃ ಹಾವೇರಿ ನಗರದ ನಿವಾಸಿ ಶಿವಪುತ್ರಪ್ಪ ನಾರಪ್ಪನವರ್ ಮಗ ಗಂಗಾಧರರಿಗೆ ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ. ಅದರೂ ಪಿಯುಸಿವರಗೇ ಶಿಕ್ಷಣವನ್ನು ಮುಗಿಸಿದ್ದಾರೆ. ಪ್ರಸ್ತುತ ಸೋದರ ಮಾವನ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿ ಶಿಗ್ಗಾಂವಿ ತಾಲೂಕಿನ ಬಂಕಾಪುರದ ನಿವಾಸಿ, ಗುರುಸಿದ್ದಪ್ಪ ನಾರಾಯಣಪುರ ಪುತ್ರಿ ಪವಿತ್ರ. ಇಬ್ಬರ ವಿವಾಹ ಗುರುಹಿರಿಯರ ನಿಶ್ಚಯದಂತೆ ನಡೆದಿದೆ.

    ಮಂತ್ರಘೋಷ, ಗಟ್ಟಿಮೇಳದೊಂದಿಗೆ ಮಾತು ಬಾರದ ಗಂಗಾಧರ ಮತ್ತು ಪವಿತ್ರರ ಮದುವೆ ಅದ್ಧೂರಿಯಾಗಿ ಜರುಗಿತು. ನವದಂಪತಿಗಳಿಗೆ ಸಂಬಂಧಿಕರು ಹಾಗೂ ಸ್ನೇಹಿತರು ನೂರುಕಾಲ ಚೆನ್ನಾಗಿ ಬಾಳಿಬದುಕಿ ಎಂದು ಆರ್ಶೀವಾದ ಮಾಡಿದ್ದಾರೆ. ಪರಸ್ಪರ ಇಬ್ಬರಿಗೂ ಮಾತು ಬಾರದೇ ಇರುವುದು ಅವರಿಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ಮಾಡುತ್ತಾರೆ ಎನ್ನುವುದು ಹಿರಿಯರ ನಂಬಿಕೆ.

  • ಬೆಂಗ್ಳೂರಿನಲ್ಲಿ ನಡೆಯಿತು ಭೂಲೋಕದ ಶಿವ-ಪಾರ್ವತಿ ಮದುವೆ!

    ಬೆಂಗ್ಳೂರಿನಲ್ಲಿ ನಡೆಯಿತು ಭೂಲೋಕದ ಶಿವ-ಪಾರ್ವತಿ ಮದುವೆ!

    ಬೆಂಗಳೂರು: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯಲ್ಲಿ ಜರಗುತ್ತದೆ ಎನ್ನುವ ನುಡಿಯನ್ನು ನೀವು ಕೇಳಿರಬಹುದು. ಆದರೆ ಸ್ವರ್ಗದಲ್ಲಿರುವ ದೇವತೆಗಳಂತೆ ಭೂಲೋಕದಲ್ಲಿ ಶಿವ-ಪಾರ್ವತಿಯಂತೆ ವೇಷಧರಿಸಿ ನಗರದಲ್ಲಿ ನವ ಜೋಡಿಯ ಮದುವೆ ವೈಭವದಿಂದ ನಡೆದಿದೆ.

    ಬೆಂಗಳೂರಿನಲ್ಲಿ ಬನ್ನೇರುಘಟ್ಟದಲ್ಲಿ ಈ ರೀತಿಯ ವಿಶೇಷ ಮದುವೆ ನಡೆದಿದ್ದು, ಪಾರ್ವತಿ ಅವತಾರದಲ್ಲಿದ್ದ ಕುಸಮಾರನ್ನು ಶಿವ ವೇಷಧಾರಿಯಾಗಿದ್ದ ಲಕ್ಷ್ಮೀಶ ವರಿಸಿದ್ದಾರೆ. ವಧು ಕುಸುಮಾ ಪಾರ್ವತಿ, ವಧು ಲಕ್ಷ್ಮೀಶ ಶಿವನ ವೇಷ ಧರಿಸಿದದ್ದರು. ಮಂತ್ರ ಹೇಳುವ ಪೂಜಾರಿಗಳು ಋಷಿ ಮುನಿಗಳ ವೇಷ ಧರಿಸಿದ್ದು, ಹತ್ತಿರದ ಸಂಬಂಧಿಕರು ದೇವತೆಗಳ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದರು.

     

    ಲಕ್ಷ್ಮೀಶ ಮೂಲತಃ ಅರ್ಚಕರ ಕುಟುಂದವರಾಗಿದ್ದು, ಕಾಲಬೈರೇವಶ್ವರ ಆರಾಧಕರು. ಲಕ್ಷ್ಮೀಶ ತಂದೆ ತನ್ನ ಮಗನ ಮದುವೆಯನ್ನು ಇದೇ ರೀತಿ ಶಿವ ಪಾರ್ವತಿ ಕಲ್ಯಾಣದಂತೆ ನಡೆಸಬೇಕು ಎಂದು ಸಂಕಲ್ಪ ಮಾಡಿದ್ದರು. ಆದ್ದರಿಂದ ಮಗನ ಮದುವೆಯನ್ನು ಅದೇ ರೀತಿಯಲ್ಲಿ ಮಾಡಿದ್ದಾರೆ.

    ಮಧು ಮಕ್ಕಳು ಮಾತ್ರವಲ್ಲದೇ ಅವರ ಹತ್ತಿರ ಸಂಬಂಧಿಕರು ಬ್ರಹ್ಮ, ವಿಷ್ಣು, ಗಣೇಶ, ನಾರದ, ಷಣ್ಮುಖ ವೇಷಧರಿಸಿದ್ದರು. ಇದನ್ನು ಓದಿ: ದೇವತೆಗಳ ಸಮ್ಮುಖದಲ್ಲಿ ನಡೆಯಿತು ಮದುವೆ! ಫೋಟೋ ಗಳಲ್ಲಿ ನೋಡಿ

    https://www.youtube.com/watch?v=sSub2PwQShk